< תהילים 42 >

למנצח משכיל לבני-קרח ב כאיל תערג על-אפיקי-מים-- כן נפשי תערג אליך אלהים 1
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಕೋರಹೀಯರ ಮಕ್ಕಳ ಮಾಸ್ಕಿಲ ಪದ್ಯ. ದೇವರೇ, ಜಿಂಕೆಯು ನೀರಿನ ತೊರೆಗಳನ್ನು ಹೇಗೆ ಬಯಸುವುದೋ, ಹಾಗೆಯೇ ನನ್ನ ಪ್ರಾಣವು ನಿಮ್ಮನ್ನು ಬಯಸುತ್ತದೆ.
צמאה נפשי לאלהים-- לאל חי מתי אבוא ואראה פני אלהים 2
ದೇವರಿಗೋಸ್ಕರ ಹೌದು ಜೀವವುಳ್ಳ ದೇವರಿಗೋಸ್ಕರ ನನ್ನ ಪ್ರಾಣವು ದಾಹಗೊಳ್ಳುತ್ತದೆ. ನಾನು ಯಾವಾಗ ಹೋಗಿ ದೇವರ ಮುಂದೆ ಕಾಣಿಸಿಕೊಳ್ಳಲಿ?
היתה-לי דמעתי לחם יומם ולילה באמר אלי כל-היום איה אלהיך 3
“ನಿನ್ನ ದೇವರು ಎಲ್ಲಿ?” ಎಂದು ಜನರು, ದಿನವೆಲ್ಲಾ ನನ್ನನ್ನು ಕೇಳುವುದರಿಂದ ಹಗಲುರಾತ್ರಿ ನನ್ನ ಕಣ್ಣೀರೇ ನನಗೆ ಆಹಾರವಾಗಿದೆ.
אלה אזכרה ואשפכה עלי נפשי-- כי אעבר בסך אדדם עד-בית אלהים בקול-רנה ותודה המון חוגג 4
ಜನಸಮೂಹದೊಂದಿಗೆ ನಾನು ಉತ್ಸಾಹದಿಂದಲೂ ಸ್ತೋತ್ರದಿಂದಲೂ ಹಬ್ಬವನ್ನಾಚರಿಸಲು ದೇವರ ಆಲಯಕ್ಕೆ ಹೋಗಿದ್ದನ್ನು ನೆನಪಿಸಿಕೊಳ್ಳುತ್ತಾ ನನ್ನೊಳಗೆ ನಾನೇ ಹಂಬಲಿಸುತ್ತಿರುವೆನು.
מה-תשתוחחי נפשי-- ותהמי עלי הוחלי לאלהים כי-עוד אודנו-- ישועות פניו 5
ನನ್ನ ಪ್ರಾಣವೇ, ನೀನು ಏಕೆ ಕುಗ್ಗಿ ಹೋಗಿದ್ದೀ? ನನ್ನಲ್ಲಿ ನೀನು ಏಕೆ ವ್ಯಥೆಪಡುತ್ತೀ? ದೇವರನ್ನು ನಿರೀಕ್ಷಿಸು; ಅವರೇ ನನ್ನ ರಕ್ಷಕರೂ ದೇವರೂ ಆಗಿದ್ದಾರೆ. ಹೌದು, ನಾನು ದೇವರನ್ನೇ ಕೊಂಡಾಡುತ್ತಿರುವೆನು.
אלהי-- עלי נפשי תשתוחח על-כן--אזכרך מארץ ירדן וחרמונים מהר מצער 6
ನನ್ನ ದೇವರೇ, ನನ್ನ ಪ್ರಾಣವು ನನ್ನಲ್ಲಿ ಕುಗ್ಗಿಹೋಗಿದೆ; ಆದ್ದರಿಂದ ಯೊರ್ದನ್ ನಾಡಿನಿಂದಲೂ ಹೆರ್ಮೋನ್ ಬೆಟ್ಟಗಳಿಂದಲೂ ಮಿಸಾರ್ ಬೆಟ್ಟದಿಂದಲೂ ನಿಮ್ಮನ್ನು ಜ್ಞಾಪಕಮಾಡಿಕೊಳ್ಳುತ್ತೇನೆ.
תהום-אל-תהום קורא לקול צנוריך כל-משבריך וגליך עלי עברו 7
ನಿಮ್ಮ ಜಲಪಾತಗಳ ಶಬ್ದವು ಒಂದು ಪ್ರವಾಹವು ಮತ್ತೊಂದು ಪ್ರವಾಹಕ್ಕೆ ಕರೆಯುವಂತಿದೆ. ಅದರಂತೆಯೇ ನಿಮ್ಮ ಎಲ್ಲಾ ಅಲೆಗಳೂ ತೆರೆಗಳೂ ನನ್ನ ಮೇಲೆ ಹಾದು ಹೋದಂತಿವೆ.
יומם יצוה יהוה חסדו ובלילה שירה עמי-- תפלה לאל חיי 8
ಆದರೂ ಹಗಲಿನಲ್ಲಿ ಯೆಹೋವ ದೇವರು ತಮ್ಮ ಪ್ರೀತಿಯನ್ನು ಆಜ್ಞಾಪಿಸುವರು. ರಾತ್ರಿಯಲ್ಲಿ ದೇವರ ಹಾಡನ್ನು ಹಾಡುವೆನು. ನನ್ನ ಜೀವವಾಗಿರುವ ದೇವರಿಗೆ ನಾನು ಪ್ರಾರ್ಥನೆ ಮಾಡುವೆನು.
אומרה לאל סלעי-- למה שכחתני למה-קדר אלך-- בלחץ אויב 9
“ದೇವರೇ, ಏಕೆ ನನ್ನನ್ನು ಮರೆತುಬಿಟ್ಟಿದ್ದೀರಿ? ಏಕೆ ನಾನು ಶತ್ರುವಿನ ಬಾಧೆಪೀಡಿತನಾಗಿ ದುಃಖದಲ್ಲಿ ಸಾಗಬೇಕು?” ಎಂದು ನನ್ನ ಶರಣನಾದ ದೇವರಿಗೆ ಮೊರೆಯಿಡುವೆನು.
ברצח בעצמותי-- חרפוני צוררי באמרם אלי כל-היום איה אלהיך 10
“ನಿನ್ನ ದೇವರು ಎಲ್ಲಿ?” ಎಂದು ದಿನವೆಲ್ಲಾ ನನಗೆ ಹೇಳಿ ನನ್ನ ವೈರಿಗಳು ಅಪಹಾಸ್ಯ ಮಾಡುವುದರಿಂದ ನನ್ನ ಎಲಬುಗಳೆಲ್ಲಾ ಮುರಿದುಹೊದಂತೆ ಇವೆ.
מה-תשתוחחי נפשי-- ומה-תהמי עלי הוחילי לאלהים כי-עוד אודנו-- ישועת פני ואלהי 11
ನನ್ನ ಪ್ರಾಣವೇ, ನೀನು ಏಕೆ ಕುಗ್ಗಿ ಹೋಗಿದ್ದೀ? ನನ್ನಲ್ಲಿ ನೀನು ಏಕೆ ವ್ಯಥೆಪಡುತ್ತೀ? ದೇವರನ್ನು ನಿರೀಕ್ಷಿಸು; ಅವರೇ ನನ್ನ ರಕ್ಷಕರೂ ದೇವರೂ ಆಗಿದ್ದಾರೆ. ಹೌದು, ನಾನು ದೇವರನ್ನೇ ಕೊಂಡಾಡುತ್ತಿರುವೆನು.

< תהילים 42 >