< תהילים 13 >

למנצח מזמור לדוד 1
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನು ರಚಿಸಿದ ಕೀರ್ತನೆ. ಯೆಹೋವನೇ, ನೀನು ಇನ್ನೆಷ್ಟರವರೆಗೆ ನನ್ನನ್ನು ಸಂಪೂರ್ಣವಾಗಿ ಮರೆತಿರುವಿ? ಇನ್ನೆಲ್ಲಿಯ ತನಕ ನನಗೆ ವಿಮುಖನಾಗಿರುವಿ?
עד-אנה יהוה תשכחני נצח עד-אנה תסתיר את-פניך ממני 2
ನಾನು ಇನ್ನೆಷ್ಟರವರೆಗೆ ಹಗಲೆಲ್ಲಾ ದುಃಖಾಕ್ರಾಂತನಾಗಿದ್ದು, ಆಲೋಚಿಸಿಕೊಳ್ಳುತ್ತಾ ಇರಬೇಕು? ಇನ್ನೆಲ್ಲಿಯ ತನಕ ವಿರೋಧಿಯು ನನಗೆ ದೊರೆಯಾಗಿರಬೇಕು?
עד-אנה אשית עצות בנפשי-- יגון בלבבי יומם עד-אנה ירום איבי עלי 3
ಯೆಹೋವನೇ, ನನ್ನ ದೇವರೇ, ನನ್ನಲ್ಲಿ ದೃಷ್ಟಿಯಿಟ್ಟು ನನಗೆ ಸದುತ್ತರವನ್ನು ದಯಪಾಲಿಸು; ನನಗೆ ಮರಣನಿದ್ರೆಯು ಉಂಟಾಗದಂತೆ ನನ್ನ ಕಣ್ಣುಗಳನ್ನು ಕಳೆಗೊಳಿಸು.
הביטה ענני יהוה אלהי האירה עיני פן-אישן המות 4
ನನ್ನ ಶತ್ರುವು, “ನಾನು ಅವನನ್ನು ಜಯಿಸಿದೆನು” ಎಂದು ಹೇಳಿಕೊಳ್ಳಬಾರದು; ವೈರಿಗಳು, “ನನ್ನ ಎದುರಾಳಿಯು ಜಾರಿಬಿದ್ದನು” ಎಂದು ಹಿಗ್ಗಬಾರದು.
פן-יאמר איבי יכלתיו צרי יגילו כי אמוט 5
ನಾನಂತೂ ನಿನ್ನ ಕೃಪೆಯಲ್ಲಿ ಭರವಸವಿಟ್ಟಿದ್ದೇನೆ; ನೀನು ನನ್ನನ್ನು ರಕ್ಷಿಸಿದ್ದರಿಂದ ನನ್ನ ಹೃದಯವು ಹರ್ಷಗೊಳ್ಳುವುದು.
ואני בחסדך בטחתי-- יגל לבי בישועתך אשירה ליהוה כי גמל עלי 6
ಯೆಹೋವನ ಮಹೋಪಕಾರಕ್ಕಾಗಿ ಆತನಿಗೆ ಹಾಡುವೆನು.

< תהילים 13 >