< תהילים 104 >
ברכי נפשי את-יהוה יהוה אלהי גדלת מאד הוד והדר לבשת | 1 |
ನನ್ನ ಮನವೇ, ಯೆಹೋವ ದೇವರನ್ನು ಸ್ತುತಿಸು. ನನ್ನ ದೇವರಾದ ಯೆಹೋವ ದೇವರೇ, ನೀವು ಬಹಳ ದೊಡ್ಡವರಾಗಿದ್ದೀರಿ; ಘನತೆಯಿಂದಲೂ, ಪ್ರಭಾವದಿಂದಲೂ ಭೂಷಿತನಾಗಿರುವೆ.
עטה-אור כשלמה נוטה שמים כיריעה | 2 |
ದೇವರು ವಸ್ತ್ರದ ಹಾಗೆ ಬೆಳಕನ್ನು ಧರಿಸಿಕೊಳ್ಳುತ್ತಾರೆ, ಆಕಾಶವನ್ನು ಗುಡಾರದ ಹಾಗೆ ಹರಡಿಸಿದ್ದಾರೆ.
המקרה במים עליותיו השם-עבים רכובו המהלך על-כנפי-רוח | 3 |
ದೇವರು ನೀರಿನ ಮೇಲೆ ತನ್ನ ಉಪ್ಪರಿಗೆಗಳ ತೊಲೆಗಳನ್ನು ಇರಿಸುತ್ತಾರೆ. ಮೋಡಗಳನ್ನು ತಮ್ಮ ರಥವಾಗಿ ಮಾಡುತ್ತಾರೆ. ಗಾಳಿಯ ರೆಕ್ಕೆಗಳ ಮೇಲೆ ಸವಾರಿ ಮಾಡುತ್ತಾರೆ.
עשה מלאכיו רוחות משרתיו אש להט | 4 |
ಅವರು ಗಾಳಿಗಳನ್ನು ತಮ್ಮ ದೂತರಾಗಿ ಮಾಡಿದ್ದಾರೆ, ಅಗ್ನಿ ಜ್ವಾಲೆಯನ್ನು ತಮ್ಮ ಸೇವಕರಾಗಿಯೂ ಮಾಡಿಕೊಂಡಿದ್ದಾರೆ.
יסד-ארץ על-מכוניה בל-תמוט עולם ועד | 5 |
ಯುಗಯುಗಾಂತರಗಳಿಗೂ ಅದು ಕದಲದ ಹಾಗೆ, ದೇವರು ಭೂಮಿಯನ್ನು ಅದರ ಅಸ್ತಿವಾರಗಳ ಮೇಲೆ ಸ್ಥಾಪಿಸಿದ್ದಾರೆ.
תהום כלבוש כסיתו על-הרים יעמדו מים | 6 |
ಜಲಗಾಧವು ವಸ್ತ್ರದ ಹಾಗೆ ಅದನ್ನು ಮುಚ್ಚಿದೆ; ಬೆಟ್ಟಗಳ ಮೇಲೆ ಜಲರಾಶಿಗಳು ನಿಂತವು.
מן-גערתך ינוסון מן-קול רעמך יחפזון | 7 |
ನಿಮ್ಮ ಗದರಿಕೆಯಿಂದ ಜಲರಾಶಿ ಓಡಿ ಹೋದವು; ನಿಮ್ಮ ಗುಡುಗಿನ ಶಬ್ದದಿಂದ ಅವು ಓಡಿ ಹೋದವು.
יעלו הרים ירדו בקעות-- אל-מקום זה יסדת להם | 8 |
ಜಲರಾಶಿಗಳು ಬೆಟ್ಟಗಳಿಗೆ ಏರಿ, ತಗ್ಗುಗಳಿಗೆ ಇಳಿದು, ನೀವು ಅವುಗಳಿಗೆ ಸ್ಥಾಪಿಸಿದ ಸ್ಥಳಕ್ಕೆ ಹೋದವು.
גבול-שמת בל-יעברון בל-ישבון לכסות הארץ | 9 |
ಅವು ದಾಟದ ಹಾಗೆಯೂ, ಭೂಮಿಯನ್ನು ಮುಚ್ಚುವುದಕ್ಕೆ ತಿರುಗಿ ಬಾರದ ಹಾಗೆಯೂ ನೀವು ಮೇರೆಯನ್ನು ಇಟ್ಟಿದ್ದೀರಿ.
המשלח מעינים בנחלים בין הרים יהלכון | 10 |
ಬುಗ್ಗೆಗಳನ್ನು ಹಳ್ಳಗಳಿಗೆ ಕಳುಹಿಸುತ್ತೀರಿ. ಅವು ಬೆಟ್ಟಗಳ ನಡುವೆ ಹರಿಯುತ್ತವೆ.
ישקו כל-חיתו שדי ישברו פראים צמאם | 11 |
ಅವು ಕಾಡಿನ ಮೃಗಗಳಿಗೆಲ್ಲಾ ನೀರು ಕುಡಿಸುತ್ತವೆ; ಕಾಡುಕತ್ತೆಗಳು ತಮ್ಮ ದಾಹವನ್ನು ತೀರಿಸಿಕೊಳ್ಳುತ್ತವೆ.
עליהם עוף-השמים ישכון מבין עפאים יתנו-קול | 12 |
ಆಕಾಶದ ಪಕ್ಷಿಗಳು, ಅವುಗಳ ಹತ್ತಿರ ವಾಸವಾಗಿದ್ದು, ಕೊಂಬೆಗಳ ಮಧ್ಯದಲ್ಲಿಂದ ಹಾಡುತ್ತವೆ.
משקה הרים מעליותיו מפרי מעשיך תשבע הארץ | 13 |
ದೇವರು ಬೆಟ್ಟಗಳಿಗೆ ತಮ್ಮ ಉಪ್ಪರಿಗೆಗಳೊಳಗಿಂದ ನೀರು ಹಾಕುತ್ತಾರೆ. ಅವರ ಕೆಲಸಗಳ ಫಲದಿಂದ ಭೂಮಿಯು ತೃಪ್ತಿಯಾಗುತ್ತದೆ.
מצמיח חציר לבהמה ועשב לעבדת האדם להוציא לחם מן-הארץ | 14 |
ದೇವರು ಪಶುಗಳಿಗೋಸ್ಕರ ಹುಲ್ಲನ್ನೂ, ಮನುಷ್ಯನ ವ್ಯವಸಾಯಕ್ಕೋಸ್ಕರ ಪಲ್ಯಗಳನ್ನೂ ಮೊಳೆಸುತ್ತಾರೆ. ಹೀಗೆ ಭೂಮಿಯೊಳಗಿಂದ ಆಹಾರವನ್ನು ಬರಮಾಡುತ್ತಾರೆ.
ויין ישמח לבב-אנוש-- להצהיל פנים משמן ולחם לבב-אנוש יסעד | 15 |
ದ್ರಾಕ್ಷಾರಸವು ಮನುಷ್ಯ ಹೃದಯವನ್ನು ಸಂತೋಷಪಡಿಸುತ್ತದೆ; ಎಣ್ಣೆಯು ಮಾನವನ ಮುಖವನ್ನು ಪ್ರಕಾಶಿಸುವಂತೆ ಮಾಡುತ್ತದೆ; ರೊಟ್ಟಿಯು ಮನುಷ್ಯನ ಪ್ರಾಣಕ್ಕೆ ಆಧಾರವಾಗುತ್ತದೆ.
ישבעו עצי יהוה-- ארזי לבנון אשר נטע | 16 |
ಯೆಹೋವ ದೇವರು ನೆಟ್ಟ ಮರಗಳಾದ ಲೆಬನೋನಿನ ದೇವದಾರು ವೃಕ್ಷಗಳಿಗೆ ಬೇಕಾದಷ್ಟು ಜಲವಿರುತ್ತದೆ.
אשר-שם צפרים יקננו חסידה ברושים ביתה | 17 |
ಅಲ್ಲಿ ಹಕ್ಕಿಗಳು ಗೂಡು ಕಟ್ಟುತ್ತವೆ; ತುರಾಯಿ ಗಿಡಗಳಲ್ಲಿ ಬಕಪಕ್ಷಿಗಳು ವಾಸಿಸುತ್ತವೆ.
הרים הגבהים ליעלים סלעים מחסה לשפנים | 18 |
ಎತ್ತರವಾದ ಬೆಟ್ಟಗಳು ಕಾಡುಮೇಕೆಗಳಿಗೆ, ಬೆಟ್ಟದ ಮೊಲಗಳಿಗೆ ಬಂಡೆಗಳು ಆಶ್ರಯವಾಗಿವೆ.
עשה ירח למועדים שמש ידע מבואו | 19 |
ದೇವರೇ, ಕಾಲಗಳ ಸೂಚನೆಗಾಗಿ ಚಂದ್ರನನ್ನು ಸೃಷ್ಟಿಸಿದ್ದೀರಿ, ಸೂರ್ಯನು ತನ್ನ ಅಸ್ತಮಾನವನ್ನು ತಿಳಿದಿದ್ದಾನೆ.
תשת-חשך ויהי לילה-- בו-תרמש כל-חיתו-יער | 20 |
ನೀವು ಕತ್ತಲನ್ನು ಬರಮಾಡುತ್ತೀರಿ, ಆಗ ರಾತ್ರಿಯಾಗುತ್ತದೆ; ಅದರಲ್ಲಿ ಅಡವಿಯ ಮೃಗಗಳೆಲ್ಲಾ ಸಂಚರಿಸುತ್ತವೆ.
הכפירים שאגים לטרף ולבקש מאל אכלם | 21 |
ಸಿಂಹದ ಮರಿಗಳು ಬೇಟೆಗೋಸ್ಕರವೂ, ದೇವರಿಂದ ತಮ್ಮ ಆಹಾರವನ್ನು ಹುಡುಕುವುದಕ್ಕೋಸ್ಕರವೂ ಗರ್ಜಿಸುತ್ತವೆ.
תזרח השמש יאספון ואל-מעונתם ירבצון | 22 |
ಸೂರ್ಯೋದಯವಾಗಲು ಅವು ಕೂಡಿಬಂದು ತಮ್ಮ ಗವಿಗಳಲ್ಲಿ ಮಲಗಿಕೊಳ್ಳುತ್ತವೆ.
יצא אדם לפעלו ולעבדתו עדי-ערב | 23 |
ಮನುಷ್ಯನು ತನ್ನ ಕೆಲಸಕ್ಕೆ ಹೊರಟುಹೋಗಿ ಸಾಯಂಕಾಲದವರೆಗೆ ದುಡಿಯುತ್ತಾನೆ.
מה-רבו מעשיך יהוה-- כלם בחכמה עשית מלאה הארץ קנינך | 24 |
ಯೆಹೋವ ದೇವರೇ, ನಿಮ್ಮ ಕೆಲಸಗಳು ಎಷ್ಟೋ ಇವೆ! ಅವುಗಳನ್ನೆಲ್ಲಾ ಜ್ಞಾನದಿಂದ ಉಂಟುಮಾಡಿದ್ದೀರಿ, ಭೂಮಿಯು ನಿಮ್ಮ ಸಂಪತ್ತಿನಿಂದ ತುಂಬಿದೆ.
זה הים גדול-- ורחב ידים שם-רמש ואין מספר חיות קטנות עם-גדלות | 25 |
ದೊಡ್ಡದೂ, ವಿಶಾಲವಾದದ್ದೂ ಆದ ಸಮುದ್ರವಿದೆ; ಅದರಲ್ಲಿ ಲೆಕ್ಕವಿಲ್ಲದಷ್ಟು ಜೀವಜಂತುಗಳೂ, ಸಣ್ಣ ದೊಡ್ಡ ಜಲಚರಗಳೂ ಇವೆ.
שם אניות יהלכון לויתן זה-יצרת לשחק-בו | 26 |
ಅದರಲ್ಲಿ ಹಡಗುಗಳು ಹೋಗುತ್ತವೆ; ಅದರಲ್ಲಿ ಆಡುವುದಕ್ಕೆ ನೀವು ರೂಪಿಸಿದ ಲಿವ್ಯಾತಾನ ತಿಮಿಂಗಲವು ಇದೆ.
כלם אליך ישברון-- לתת אכלם בעתו | 27 |
ದೇವರೇ, ನೀವು ಅವುಗಳ ಆಹಾರವನ್ನು ತಕ್ಕ ಕಾಲದಲ್ಲಿ ಕೊಡುವ ಹಾಗೆ, ಅವುಗಳೆಲ್ಲಾ ನಿಮ್ಮನ್ನು ಕಾದುಕೊಂಡಿರುತ್ತವೆ.
תתן להם ילקטון תפתח ידך ישבעון טוב | 28 |
ನೀವು ಅವುಗಳಿಗೆ ಕೊಡಲು ಅವು ಕೂಡಿ ಬರುತ್ತವೆ; ನೀವು ನಿಮ್ಮ ಕೈ ತೆರೆಯಲು, ಒಳ್ಳೆಯವುಗಳಿಂದ ತೃಪ್ತಿ ಹೊಂದುತ್ತವೆ.
תסתיר פניך יבהלון תסף רוחם יגועון ואל-עפרם ישובון | 29 |
ನೀವು ನಿಮ್ಮ ಮುಖವನ್ನು ಮರೆಮಾಡಲು, ಅವು ಹೆದರುತ್ತವೆ. ನೀವು ಅವುಗಳ ಶ್ವಾಸವನ್ನು ತೆಗೆದುಬಿಡಲು, ಸತ್ತು ಹೋಗಿ, ಮಣ್ಣುಪಾಲಾಗುತ್ತವೆ.
תשלח רוחך יבראון ותחדש פני אדמה | 30 |
ನೀವು ನಿಮ್ಮ ಶ್ವಾಸವನ್ನು ಕಳುಹಿಸಲು, ಜೀವಜಂತುಗಳು ಹುಟ್ಟುತ್ತವೆ; ಹೀಗೆ ನೀವು ಭೂಮಿಯನ್ನು ನೂತನಗೊಳಿಸುತ್ತೀರಿ.
יהי כבוד יהוה לעולם ישמח יהוה במעשיו | 31 |
ಯೆಹೋವ ದೇವರ ಮಹಿಮೆಯು ಯುಗಯುಗಕ್ಕೂ ಇರಲಿ; ಯೆಹೋವ ದೇವರು ತಮ್ಮ ಕೆಲಸಗಳಲ್ಲಿ ಸಂತೋಷಪಡಲಿ.
המביט לארץ ותרעד יגע בהרים ויעשנו | 32 |
ಅವರು ಭೂಮಿಯನ್ನು ದೃಷ್ಟಿಸಲು, ಅದು ನಡುಗುತ್ತದೆ; ಬೆಟ್ಟಗಳನ್ನು ಮುಟ್ಟಲು, ಅವು ಹೊಗೆ ಹಾಯುತ್ತವೆ.
אשירה ליהוה בחיי אזמרה לאלהי בעודי | 33 |
ನಾನು ಜೀವಿತ ಕಾಲವೆಲ್ಲಾ ಯೆಹೋವ ದೇವರಿಗೆ ಹಾಡುತ್ತಿರುವೆನು. ನಾನು ಬದುಕಿರುವವರೆಗೆ ದೇವರನ್ನು ಸ್ತುತಿಸುತ್ತಿರುವೆನು.
יערב עליו שיחי אנכי אשמח ביהוה | 34 |
ದೇವರ ವಿಷಯವಾದ ನನ್ನ ಧ್ಯಾನವು ಮಧುರವಾಗಿರುವುದು; ನಾನು ಯೆಹೋವ ದೇವರಲ್ಲಿ ಸಂತೋಷ ಪಡುವೆನು.
יתמו חטאים מן-הארץ ורשעים עוד אינם-- ברכי נפשי את-יהוה הללו-יה | 35 |
ಪಾಪಿಗಳು ಭೂಮಿಯೊಳಗಿಂದ ಮುಗಿದು ಹೋಗಲಿ; ದುಷ್ಟರು ಇಲ್ಲದೆ ಹೋಗಲಿ. ನನ್ನ ಮನವೇ, ಯೆಹೋವ ದೇವರನ್ನು ಸ್ತುತಿಸು. ಯೆಹೋವ ದೇವರಿಗೆ ಸ್ತೋತ್ರವಾಗಲಿ.