< מִשְׁלֵי 29 >
איש תוכחות מקשה-ערף-- פתע ישבר ואין מרפא | 1 |
೧ಬಹಳವಾಗಿ ಗದರಿಸಿದರೂ ತಗ್ಗದವನು, ಏಳದ ಹಾಗೆ ಫಕ್ಕನೆ ಮುರಿದು ಬೀಳುವನು.
ברבות צדיקים ישמח העם ובמשל רשע יאנח עם | 2 |
೨ಶಿಷ್ಟರ ವೃದ್ಧಿ ಜನರಿಗೆ ಉಲ್ಲಾಸ, ದುಷ್ಟನ ಆಳ್ವಿಕೆ ಜನರಿಗೆ ನರಳಾಟ.
איש-אהב חכמה ישמח אביו ורעה זונות יאבד-הון | 3 |
೩ಜ್ಞಾನವನ್ನು ಪ್ರೀತಿಸುವವನು ತಂದೆಯನ್ನು ಹರ್ಷಗೊಳಿಸುವನು, ವೇಶ್ಯೆಯ ಸಂಗಡಿಗನು ಆಸ್ತಿಯನ್ನು ಹಾಳುಮಾಡಿಕೊಳ್ಳುವನು.
מלך--במשפט יעמיד ארץ ואיש תרומות יהרסנה | 4 |
೪ನ್ಯಾಯಪಾಲಕನಾದ ರಾಜನು ದೇಶವನ್ನು ವೃದ್ಧಿಗೆ ತರುವನು, ಅನ್ಯಾಯವಾಗಿ ತೆರಿಗೆಯನ್ನು ಕಸಕೊಳ್ಳುವವನು ದೇಶವನ್ನು ನಾಶಮಾಡುವನು.
גבר מחליק על-רעהו רשת פורש על-פעמיו | 5 |
೫ನೆರೆಯವನೊಂದಿಗೆ ವಂಚನೆಯ ಸವಿನುಡಿಗಳನ್ನು ಆಡುವವನು, ಅವನ ಹೆಜ್ಜೆಗೆ ಬಲೆಯನ್ನೊಡ್ಡುವನು.
בפשע איש רע מוקש וצדיק ירון ושמח | 6 |
೬ಕೆಟ್ಟವನ ದುರ್ಮಾರ್ಗದಲ್ಲಿ ಉರುಲುಂಟು, ಒಳ್ಳೆಯವನು ಉಲ್ಲಾಸಗೊಂಡು ಹರ್ಷಧ್ವನಿಗೈಯುವನು.
ידע צדיק דין דלים רשע לא-יבין דעת | 7 |
೭ಶಿಷ್ಟನು ಬಡವರ ನ್ಯಾಯವನ್ನು ತಿಳಿದಿರುವನು, ದುಷ್ಟನಿಗೆ ಅದನ್ನು ಗ್ರಹಿಸುವಷ್ಟು ವಿವೇಕವಿಲ್ಲ.
אנשי לצון יפיחו קריה וחכמים ישיבו אף | 8 |
೮ಧರ್ಮನಿಂದಕರು ಪಟ್ಟಣಕ್ಕೆ ಬೆಂಕಿಯನ್ನು ಹತ್ತಿಸುವರು, ಜ್ಞಾನಿಗಳೋ ರೋಷಾಗ್ನಿಯನ್ನು ಆರಿಸುವರು.
איש-חכם--נשפט את-איש אויל ורגז ושחק ואין נחת | 9 |
೯ಮೂರ್ಖನ ಸಂಗಡ ಜ್ಞಾನಿಯು ವ್ಯಾಜ್ಯವಾಡುವಾಗ, ರೇಗಿದರೂ, ನಕ್ಕರೂ ಜಗಳವು ತೀರುವುದಿಲ್ಲ.
אנשי דמים ישנאו-תם וישרים יבקשו נפשו | 10 |
೧೦ಕೊಲೆಪಾತಕರು ನಿರ್ದೋಷಿಯನ್ನು ದ್ವೇಷಿಸುವರು, ಯಥಾರ್ಥವಂತನ ಪ್ರಾಣಕ್ಕೂ ಹೊಂಚುಹಾಕುವರು.
כל-רוחו יוציא כסיל וחכם באחור ישבחנה | 11 |
೧೧ಮೂಢನು ತನ್ನ ಕೋಪವನ್ನೆಲ್ಲಾ ತೋರಿಸುವನು, ಜ್ಞಾನಿಯು ತನ್ನ ಕೋಪವನ್ನು ತಡೆದು ಶಮನಪಡಿಸಿಕೊಳ್ಳುವನು.
משל מקשיב על-דבר-שקר-- כל-משרתיו רשעים | 12 |
೧೨ಸುಳ್ಳಿಗೆ ಕಿವಿಗೊಡುವ ಅಧಿಪತಿಯ ಸೇವಕರೆಲ್ಲಾ ದುಷ್ಟರೇ.
רש ואיש תככים נפגשו-- מאיר עיני שניהם יהוה | 13 |
೧೩ತಗ್ಗುವವನು, ತಗ್ಗಿಸುವವನು ಸ್ಥಿತಿಯಲ್ಲಿ ಎದುರುಬದುರಾಗಿದ್ದಾರೆ, ಯೆಹೋವನೇ ಅವರಿಬ್ಬರ ಕಣ್ಣುಗಳಿಗೆ ಕಳೆಕೊಟ್ಟವನು.
מלך שופט באמת דלים-- כסאו לעד יכון | 14 |
೧೪ಬಡವರನ್ನು ನ್ಯಾಯವಾಗಿ ಆಳ್ವಿಕೆ ಮಾಡುವ ರಾಜನ ಸಿಂಹಾಸನವು ಶಾಶ್ವತವು.
שבט ותוכחת יתן חכמה ונער משלח מביש אמו | 15 |
೧೫ಬೆತ್ತ ಮತ್ತು ಬೆದರಿಕೆಗಳಿಂದ ಜ್ಞಾನವುಂಟಾಗುವುದು, ಶಿಕ್ಷಿಸದೆ ಬಿಟ್ಟ ಹುಡುಗನು ತಾಯಿಯ ಮಾನವನ್ನು ಕಳೆಯುವನು.
ברבות רשעים ירבה-פשע וצדיקים במפלתם יראו | 16 |
೧೬ದುಷ್ಟರ ವೃದ್ಧಿ ಪಾಪವೃದ್ಧಿ, ಶಿಷ್ಟರೋ ಅವರ ಬೀಳುವಿಕೆಯನ್ನು ಕಣ್ಣಾರೆ ನೋಡುವರು.
יסר בנך ויניחך ויתן מעדנים לנפשך | 17 |
೧೭ಮಗನನ್ನು ಶಿಕ್ಷಿಸು, ಅವನು ನಿನ್ನನ್ನು ಸಂತೋಷಪಡಿಸುವನು, ಅವನೇ ನಿನ್ನ ಆತ್ಮಕ್ಕೆ ಮೃಷ್ಟಾನ್ನವಾಗುವನು.
באין חזון יפרע עם ושמר תורה אשרהו | 18 |
೧೮ದೇವದರ್ಶನ ಇಲ್ಲದಿರುವಲ್ಲಿ ಜನರು ನಾಶವಾಗುವರು, ಧರ್ಮೋಪದೇಶವನ್ನು ಕೈಕೊಳ್ಳುವವನೋ ಧನ್ಯನಾಗುವನು.
בדברים לא-יוסר עבד כי-יבין ואין מענה | 19 |
೧೯ಆಳು ಮಾತಿನಿಂದ ಮಾತ್ರ ಶಿಕ್ಷಿತನಾಗಲಾರನು, ಅವನು ತಿಳಿದುಕೊಂಡರೂ ಗಮನಿಸನು.
חזית--איש אץ בדבריו תקוה לכסיל ממנו | 20 |
೨೦ದುಡುಕಿ ಮಾತನಾಡುವವನನ್ನು ನೋಡು, ಅಂಥವನಿಗಿಂತಲೂ ಮೂಢನ ವಿಷಯದಲ್ಲಿ ಹೆಚ್ಚು ನಿರೀಕ್ಷೆಯನ್ನು ಇಡಬಹುದು.
מפנק מנער עבדו ואחריתו יהיה מנון | 21 |
೨೧ಆಳನ್ನು ಬಾಲ್ಯದಿಂದ ಕೋಮಲವಾಗಿ ಸಾಕಿದರೆ, ತರುವಾಯ ಅವನು ಎದುರುಬೀಳುವನು.
איש-אף יגרה מדון ובעל חמה רב-פשע | 22 |
೨೨ಕೋಪಿಷ್ಠನು ಜಗಳವನ್ನೆಬ್ಬಿಸುವನು, ಕ್ರೋಧಶೀಲನು ದೋಷಭರಿತನು.
גאות אדם תשפילנו ושפל-רוח יתמך כבוד | 23 |
೨೩ಗರ್ವವು ಮನುಷ್ಯನನ್ನು ದೀನಸ್ಥಿತಿಗೆ ತರುವುದು, ದೀನಮನಸ್ಸುಳ್ಳವನು ಮಾನವನ್ನು ಪಡೆಯುವನು.
חולק עם-גנב שונא נפשו אלה ישמע ולא יגיד | 24 |
೨೪ಕಳ್ಳನೊಂದಿಗೆ ಪಾಲುಗಾರನಾದವನು ತನಗೆ ತಾನೇ ಶತ್ರು, ಆಣೆಯಿಡುವುದನ್ನು ಕೇಳಿದರೂ ಸುಮ್ಮನಿರುವನು.
חרדת אדם יתן מוקש ובוטח ביהוה ישגב | 25 |
೨೫ಮನುಷ್ಯನ ಭಯ ಉರುಲು, ಯೆಹೋವನ ಭರವಸ ಉದ್ಧಾರ.
רבים מבקשים פני-מושל ומיהוה משפט-איש | 26 |
೨೬ಅನೇಕರು ನ್ಯಾಯಾಧಿಪತಿಯ ಕಟಾಕ್ಷವನ್ನು ಕೋರುವರು, ನ್ಯಾಯತೀರ್ಪು ಯೆಹೋವನಿಂದಲೇ ಆಗುವುದು.
תועבת צדיקים איש עול ותועבת רשע ישר-דרך | 27 |
೨೭ಶಿಷ್ಟರಿಗೆ ದುರ್ಮಾರ್ಗಿಯು ಅಸಹ್ಯನು, ದುಷ್ಟರಿಗೆ ಸರಳಮಾರ್ಗಿಯು ಅಸಹ್ಯನು.