< מִשְׁלֵי 22 >

נבחר שם מעשר רב מכסף ומזהב חן טוב 1
ಬಹು ಐಶ್ವರ್ಯಕ್ಕಿಂತಲೂ ಒಳ್ಳೆಯ ಹೆಸರು ಉತ್ತಮ; ಬೆಳ್ಳಿಬಂಗಾರಕ್ಕಿಂತಲೂ ಗೌರವದಿಂದಿರುವುದು ಉತ್ತಮ.
עשיר ורש נפגשו עשה כלם יהוה 2
ಧನಿಕರು, ಬಡವರು ಇದನ್ನು ಸಾಮಾನ್ಯವಾಗಿ ಹೊಂದಿರುವರು: ಇವರೆಲ್ಲರನ್ನು ಸೃಷ್ಟಿಸಿದಾತ ಯೆಹೋವ ದೇವರೇ.
ערום ראה רעה ויסתר (ונסתר) ופתיים עברו ונענשו 3
ಜಾಣನು ಕೇಡನ್ನು ಮುಂದಾಗಿ ಕಂಡು ತಾನು ಅಡಗಿಕೊಳ್ಳುತ್ತಾನೆ; ಆದರೆ ಮುಗ್ಧನು ಮುಂದೆ ಹೋಗಿ ಶಿಕ್ಷೆಯನ್ನು ಹೊಂದುತ್ತಾನೆ.
עקב ענוה יראת יהוה עשר וכבוד וחיים 4
ಯೆಹೋವ ದೇವರ ಭಯವೂ ದೀನತೆಯೂ ಕೊಡುವ ಪ್ರತಿಫಲ, ಐಶ್ವರ್ಯವೂ ಮಾನವೂ ಜೀವವೂ ಆಗಿದೆ.
צנים פחים בדרך עקש שומר נפשו ירחק מהם 5
ದುಷ್ಟರ ದಾರಿಯಲ್ಲಿ ಮುಳ್ಳುಗಳೂ, ಉರುಲುಗಳೂ ಇವೆ; ತನ್ನ ಜೀವವನ್ನು ಕಾಪಾಡಿಕೊಳ್ಳುವವನು ಅವುಗಳಿಂದ ದೂರವಾಗಿರುವನು.
חנך לנער על-פי דרכו-- גם כי-יזקין לא-יסור ממנה 6
ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಮಕ್ಕಳಿಗೆ ಶಿಕ್ಷಣವನ್ನು ಕೊಡು; ಆಗ ಮುಪ್ಪಿನಲ್ಲಿಯೂ ಅವನು ಅದರಿಂದ ದೂರ ಹೋಗುವುದಿಲ್ಲ.
עשיר ברשים ימשול ועבד לוה לאיש מלוה 7
ಐಶ್ವರ್ಯವಂತನು ಬಡವನ ಮೇಲೆ ಆಳುತ್ತಾನೆ; ಸಾಲಗಾರನು ಸಾಲಕೊಟ್ಟವನಿಗೆ ಗುಲಾಮನು.
זורע עולה יקצור- (יקצר-) און ושבט עברתו יכלה 8
ಕೆಟ್ಟತನವನ್ನು ಬಿತ್ತುವವನು ಕೇಡನ್ನು ಕೊಯ್ಯುವನು; ಅವನ ಕೋಪದ ಬೆತ್ತವು ಮುರಿದು ಹೋಗುವುದು.
טוב-עין הוא יברך כי-נתן מלחמו לדל 9
ಉದಾರವಾಗಿ ಕೊಡುವವನು ಆಶೀರ್ವಾದವನ್ನು ಹೊಂದುವನು, ಏಕೆಂದರೆ ತನಗಿದ್ದ ಆಹಾರದಲ್ಲಿ ಬಡವರಿಗೆ ಕೊಡುತ್ತಾನೆ.
גרש לץ ויצא מדון וישבת דין וקלון 10
ಪರಿಹಾಸ್ಯ ಮಾಡುವವನನ್ನು ಹೊರಗೆ ತಳ್ಳಿಬಿಟ್ಟರೆ ಕಲಹವು ನಿಲ್ಲುವುದು; ವಿವಾದವೂ ನಿಂದೆಯೂ ನಿಂತುಹೋಗುವುವು.
אהב טהור- (טהר-) לב-- חן שפתיו רעהו מלך 11
ಶುದ್ಧ ಹೃದಯವನ್ನು ಪ್ರೀತಿಸಿ, ಕೃಪೆಯಿಂದ ಮಾತನಾಡುವವನಿಗೆ ಅರಸನು ಸ್ನೇಹಿತನಾಗಿರುವನು.
עיני יהוה נצרו דעת ויסלף דברי בגד 12
ಯೆಹೋವ ದೇವರ ಕಣ್ಣುಗಳು ತಿಳುವಳಿಕೆಯನ್ನು ಕಾಯುತ್ತವೆ; ಅವರು ದ್ರೋಹಿಯ ಮಾತುಗಳನ್ನು ಕೆಡವಿ ಹಾಕುತ್ತಾರೆ.
אמר עצל ארי בחוץ בתוך רחבות ארצח 13
ಸೋಮಾರಿಯು, “ಹೊರಗೆ ಸಿಂಹವಿದೆ! ಅದು ನನ್ನನ್ನು ಬೀದಿಗಳಲ್ಲಿ ಕೊಂದುಹಾಕುತ್ತದೆ,” ಎಂದು ಹೇಳುತ್ತಾನೆ.
שוחה עמקה פי זרות זעום יהוה יפול- (יפל-) שם 14
ವ್ಯಭಿಚಾರಿಣಿಯ ಬಾಯಿ ಆಳವಾದ ಬಾವಿ; ಯೆಹೋವ ದೇವರಿಗೆ ಸಿಟ್ಟನ್ನು ಎಬ್ಬಿಸುವವನು ಅದರಲ್ಲಿ ಬೀಳುವನು.
אולת קשורה בלב-נער שבט מוסר ירחיקנה ממנו 15
ಮೂರ್ಖತನ ಯುವಕನ ಹೃದಯದಲ್ಲಿ ಬಂಧಿಸಲಾಗಿದೆ; ಆದರೆ ಶಿಕ್ಷೆಯ ಬೆತ್ತವು ಅದನ್ನು ಅವನಿಂದ ದೂರವಾಗಿ ಓಡಿಸಿಬಿಡುವುದು.
עשק דל להרבות לו-- נתן לעשיר אך-למחסור 16
ತನ್ನ ಸಂಪತ್ತನ್ನು ವೃದ್ಧಿಗೊಳಿಸುವುದಕ್ಕೆ ಬಡವರನ್ನು ಹಿಂಸಿಸುವವನೂ ಐಶ್ವರ್ಯವಂತರಿಗೆ ದಾನ ಕೊಡುವವನೂ ನಿಶ್ಚಯವಾಗಿ ಕೊರತೆಪಡುವನು.
הט אזנך--ושמע דברי חכמים ולבך תשית לדעתי 17
ಜ್ಞಾನಿಗಳ ಮಾತುಗಳನ್ನು ಕಿವಿಗೊಟ್ಟು ಕೇಳು; ನನ್ನ ಬೋಧನೆಯನ್ನು ನಿನ್ನ ಹೃದಯವು ಅನ್ವಯಿಸಲಿ.
כי-נעים כי-תשמרם בבטנך יכנו יחדו על-שפתיך 18
ಏಕೆಂದರೆ ಅವುಗಳನ್ನು ನಿನ್ನ ಹೃದಯದಲ್ಲಿ ಇಟ್ಟು ಕಾಪಾಡು, ಅವು ನಿನ್ನ ತುಟಿಗಳ ಮೇಲೆ ಸಿದ್ಧವಿದ್ದರೆ ಮೆಚ್ಚುಗೆಯಾಗಿವೆ.
להיות ביהוה מבטחך-- הודעתיך היום אף-אתה 19
ನಿನ್ನ ಭರವಸೆಯು ಯೆಹೋವ ದೇವರಲ್ಲಿ ಇರುವಂತೆ ಈ ದಿವಸ ನಿನಗೇ ತಿಳಿಯಪಡಿಸಿದ್ದೇನೆ.
הלא כתבתי לך שלשום (שלשים)-- במעצות ודעת 20
ನಾನು ನಿಮಗಾಗಿ ಮೂವತ್ತು ಹೇಳಿಕೆಗಳನ್ನು ಬರೆದಿಲ್ಲವೋ? ಸಲಹೆ ಮತ್ತು ಪರಿಜ್ಞಾನದ ಹೇಳಿಕೆಗಳು,
להודיעך--קשט אמרי אמת להשיב אמרים אמת לשלחיך 21
ಪ್ರಾಮಾಣಿಕವಾಗಿರಲು ಮತ್ತು ಸತ್ಯವನ್ನು ಮಾತನಾಡಲು ನಿಮಗೆ ಕಲಿಸುವುದು, ಆದ್ದರಿಂದ ನೀವು ಸೇವೆ ಸಲ್ಲಿಸುವವರಿಗೆ ಸತ್ಯವಾದ ವರದಿಗಳನ್ನು ಹಿಂತಿರುಗಿಸುವಂತೆ ನಾನು ನಿಮಗೆ ಬರೆದಿದ್ದೇನೆ.
אל-תגזל-דל כי דל-הוא ואל-תדכא עני בשער 22
ಬಡವರಿಗೆ ದಿಕ್ಕಿಲ್ಲವೆಂದು ತಿಳಿದು ಅವರನ್ನು ಸೂರೆಮಾಡಬೇಡ; ನ್ಯಾಯಾಲಯದಲ್ಲಿ ದರಿದ್ರರನ್ನು ತುಳಿಯಬೇಡ.
כי-יהוה יריב ריבם וקבע את-קבעיהם נפש 23
ಏಕೆಂದರೆ ಯೆಹೋವ ದೇವರು ಅವರ ವ್ಯಾಜ್ಯವನ್ನು ನಡೆಸಿ, ಸೂರೆ ಮಾಡಿದವರ ಪ್ರಾಣವನ್ನು ಸೂರೆ ಮಾಡುವರು.
אל-תתרע את-בעל אף ואת-איש חמות לא תבוא 24
ಮುಂಗೊಪಿಯೊಂದಿಗೆ ಸ್ನೇಹ ಬೆಳೆಸಬೇಡ; ಸುಲಭವಾಗಿ ಕೋಪಗೊಳ್ಳುವವರೊಂದಿಗೆ ಸಹವಾಸ ಮಾಡಬೇಡ;
פן-תאלף ארחתו ולקחת מוקש לנפשך 25
ಹಾಗೆ ಮಾಡಿದರೆ ನೀನು ಅವನ ನಡತೆಗಳನ್ನು ಕಲಿತು, ನಿನ್ನನ್ನೇ ಉರುಲಿಗೆ ಸಿಕ್ಕಿಸಿಕೊಳ್ಳುವೆ.
אל-תהי בתקעי-כף בערבים משאות 26
ಬೇರೆಯವರ ಸಾಲವನ್ನು ಖಾತರಿಪಡಿಸಲೂ ಬೇರೊಬ್ಬರಿಗೆ ಭದ್ರತೆಯನ್ನು ನೀಡಲು ಒಪ್ಪಬೇಡ.
אם-אין-לך לשלם-- למה יקח משכבך מתחתיך 27
ಸಾಲ ತೀರಿಸಲು ನಿನಗೆ ಏನೂ ಇಲ್ಲದೆ ಹೋದರೆ ನಿನ್ನ ಕೆಳಗಿನ ಹಾಸಿಗೆಯನ್ನು ಅವನು ತೆಗೆದುಕೊಂಡು ಹೋಗುವನಲ್ಲವೇ?
אל-תסג גבול עולם-- אשר עשו אבותיך 28
ನಿನ್ನ ಪಿತೃಗಳು ಹಾಕಿದ ಪೂರ್ವಕಾಲದ ಮೇರೆಯನ್ನು ತೆಗೆಯಬೇಡ.
חזית איש מהיר במלאכתו-- לפני-מלכים יתיצב בל-יתיצב לפני חשכים 29
ತನ್ನ ಕೆಲಸದಲ್ಲಿ ಶ್ರದ್ಧೆಯುಳ್ಳವನನ್ನು ನೀನು ನೋಡಿದ್ದೀಯಾ? ಅವನು ನೀಚರ ಮುಂದೆ ಅಲ್ಲ, ಅರಸರ ಮುಂದೆಯೇ ಸೇವೆ ಸಲ್ಲಿಸುವನು.

< מִשְׁלֵי 22 >