< ויקרא 23 >
೧ಯೆಹೋವನು ಮೋಶೆಯೊಂದಿಗೆ ಮಾತನಾಡಿ,
דבר אל בני ישראל ואמרת אלהם מועדי יהוה אשר תקראו אתם מקראי קדש--אלה הם מועדי | 2 |
೨“ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸಬೇಕು, ‘ಯೆಹೋವನಿಂದ ನೇಮಕವಾದ ಹಬ್ಬಗಳ ದಿನಗಳು ಇವೇ; ಈ ದಿನಗಳಲ್ಲಿ ದೇವಾರಾಧನೆಗಾಗಿ ಜನರು ಸಭೆಸೇರಿಬರಬೇಕೆಂದು ಸಾರಬೇಕು. ನಾನು ನೇಮಿಸಿರುವ ಹಬ್ಬದ ದಿನಗಳು ಇವೇ.
ששת ימים תעשה מלאכה וביום השביעי שבת שבתון מקרא קדש כל מלאכה לא תעשו שבת הוא ליהוה בכל מושבתיכם | 3 |
೩“‘ಆರು ದಿನಗಳಲ್ಲಿ ನೀವು ಕೆಲಸವನ್ನು ಮಾಡಬೇಕು; ಏಳನೆಯ ದಿನ ಯಾವ ಕೆಲಸವನ್ನು ಮಾಡಬಾರದು, ಅದು ಸಬ್ಬತ್ ದಿನವಾಗಿದೆ. ಅದರಲ್ಲಿ ದೇವಾರಾಧನೆಗಾಗಿ ಸಭೆಸೇರಬೇಕು. ಆ ದಿನದಲ್ಲಿ ಯಾವ ವಿಧವಾದ ಕೆಲಸವನ್ನು ಮಾಡಬಾರದು. ನಿಮ್ಮ ಎಲ್ಲಾ ವಾಸಮಾಡುವ ಸ್ಥಳಗಳಲ್ಲಿ ಅದು ಯೆಹೋವನಿಗೆ ಮೀಸಲಾದ ವಿಶ್ರಾಂತಿ ದಿನವಾಗಿದೆ.
אלה מועדי יהוה מקראי קדש אשר תקראו אתם במועדם | 4 |
೪“‘ಯೆಹೋವನಿಂದ ನೇಮಕವಾದ ಹಬ್ಬದ ಕಾಲಗಳು ಇವೇ; ಈ ಕಾಲಗಳಲ್ಲಿ ದೇವಾರಾಧನೆಗಾಗಿ ಸಭೆಸೇರಬೇಕು. ನೇಮಕವಾದ ದಿನಗಳಲ್ಲಿ ಇವುಗಳನ್ನು ಪ್ರಕಟಪಡಿಸಬೇಕು.
בחדש הראשון בארבעה עשר לחדש--בין הערבים פסח ליהוה | 5 |
೫“‘ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಂಜೆಯ ವೇಳೆಯಲ್ಲಿ ಯೆಹೋವನು ನೇಮಿಸಿದ ಪಸ್ಕ ಹಬ್ಬವನ್ನು ಆಚರಿಸಬೇಕು.
ובחמשה עשר יום לחדש הזה חג המצות ליהוה שבעת ימים מצות תאכלו | 6 |
೬ಅದೇ ತಿಂಗಳಿನ ಹದಿನೈದನೆಯ ದಿನದಲ್ಲಿ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕಾದ ಜಾತ್ರೆಯನ್ನು ಯೆಹೋವನಿಗೋಸ್ಕರ ಆಚರಿಸಬೇಕು. ಅದು ಮೊದಲುಗೊಂಡು ಏಳು ದಿನಗಳಲ್ಲಿಯೂ ಹುಳಿಯಿಲ್ಲದ ರೊಟ್ಟಿಗಳನ್ನು ಊಟಮಾಡಬೇಕು.
ביום הראשון מקרא קדש יהיה לכם כל מלאכת עבדה לא תעשו | 7 |
೭ಮೊದಲನೆಯ ದಿನದಲ್ಲಿ ದೇವಾರಾಧನೆಗಾಗಿ ಸಭೆಸೇರಬೇಕು; ಆ ದಿನದಲ್ಲಿ ಯಾವ ಉದ್ಯೋಗವನ್ನು ನಡೆಸಬಾರದು.
והקרבתם אשה ליהוה שבעת ימים ביום השביעי מקרא קדש כל מלאכת עבדה לא תעשו | 8 |
೮ಏಳು ದಿನಗಳಲ್ಲಿಯೂ ನೀವು ಯೆಹೋವನಿಗೆ ಹೋಮವನ್ನು ಸಮರ್ಪಿಸಬೇಕು. ಏಳನೆಯ ದಿನದಲ್ಲಿ ದೇವಾರಾಧನೆಗಾಗಿ ಸಭೆಸೇರಬೇಕು. ಆ ದಿನದಲ್ಲಿ ಯಾವ ಉದ್ಯೋಗವನ್ನು ಮಾಡಬಾರದು’” ಅಂದನು.
೯ಯೆಹೋವನು ಮೋಶೆಯೊಂದಿಗೆ ಮಾತನಾಡಿ,
דבר אל בני ישראל ואמרת אלהם כי תבאו אל הארץ אשר אני נתן לכם וקצרתם את קצירה--והבאתם את עמר ראשית קצירכם אל הכהן | 10 |
೧೦“ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸಬೇಕು, ‘ನಾನು ನಿಮಗೆ ಕೊಡುವ ದೇಶದಲ್ಲಿ ನೀವು ಸೇರಿದ ನಂತರ ಅಲ್ಲಿನ ಜವೆಗೋದಿಯ ಪೈರನ್ನು ಕೊಯ್ಯುವಾಗ, ಪ್ರಥಮಫಲದ ಸಿವುಡನ್ನು ಯಾಜಕನ ಬಳಿಗೆ ತಂದು ಒಪ್ಪಿಸಬೇಕು.
והניף את העמר לפני יהוה לרצנכם ממחרת השבת יניפנו הכהן | 11 |
೧೧ನೀವು ದೇವರಿಗೆ ಅಂಗೀಕಾರವಾಗುವಂತೆ ಯಾಜಕನು ಅದನ್ನು ಯೆಹೋವನ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಿ ಸಮರ್ಪಿಸುವನು. ಸಬ್ಬತ್ ದಿನದ ಮರು ದಿನದಲ್ಲಿಯೇ ಅದನ್ನು ನಿವಾಳಿಸಬೇಕು.
ועשיתם ביום הניפכם את העמר כבש תמים בן שנתו לעלה ליהוה | 12 |
೧೨ಆ ಸಿವುಡನ್ನು ನೈವೇದ್ಯವಾಗಿ ನಿವಾಳಿಸುವ ದಿನದಲ್ಲಿ ನೀವು ಒಂದು ವರ್ಷದ ಪೂರ್ಣಾಂಗವಾದ ಟಗರನ್ನು ಸರ್ವಾಂಗಹೋಮವಾಗಿ ಯೆಹೋವನಿಗೆ ಸಮರ್ಪಿಸಬೇಕು.
ומנחתו שני עשרנים סלת בלולה בשמן אשה ליהוה--ריח ניחח ונסכה יין רביעת ההין | 13 |
೧೩ಅದರೊಂದಿಗೆ ಮಾಡಬೇಕಾದ ಧಾನ್ಯನೈವೇದ್ಯವು ಯಾವುದೆಂದರೆ ಎಣ್ಣೆ ಬೆರೆತ ಆರು ಸೇರು ಗೋದಿಯ ಹಿಟ್ಟು. ಯೆಹೋವನಿಗೆ ಪರಿಮಳವನ್ನು ಉಂಟುಮಾಡುವುದಕ್ಕೆ ಇದನ್ನು ಬೆಂಕಿಯಲ್ಲಿ ಹೋಮಮಾಡಬೇಕು. ಅದರೊಂದಿಗೆ ಸಮರ್ಪಿಸಬೇಕಾದ ಪಾನದ್ರವ್ಯವು ಒಂದುವರೆ ಸೇರು ದ್ರಾಕ್ಷಾರಸ.
ולחם וקלי וכרמל לא תאכלו עד עצם היום הזה--עד הביאכם את קרבן אלהיכם חקת עולם לדרתיכם בכל משבתיכם | 14 |
೧೪ನೀವು ನಿಮ್ಮ ದೇವರಿಗೆ ಸಲ್ಲಿಸಬೇಕಾದದ್ದನ್ನು ತಂದು ಕೊಡುವವರೆಗೂ ಆ ವರ್ಷದ ಬೆಳೆಯ ರೊಟ್ಟಿಯನ್ನಾಗಲಿ, ಸುಟ್ಟ ತೆನೆಗಳನ್ನಾಗಲಿ ಅಥವಾ ಹಸಿತೆನೆಗಳನ್ನಾಗಲಿ ತಿನ್ನಲೇಬಾರದು. ನಿಮಗೂ, ನಿಮ್ಮ ಸಂತತಿಯವರಿಗೂ ಮತ್ತು ನಿಮ್ಮ ಎಲ್ಲಾ ವಾಸಸ್ಥಾನಗಳಲ್ಲಿಯೂ ಇದು ಶಾಶ್ವತನಿಯಮ.
וספרתם לכם ממחרת השבת מיום הביאכם את עמר התנופה שבע שבתות תמימת תהיינה | 15 |
೧೫“‘ಸಬ್ಬತ್ ದಿನದ ಮರುದಿನದಿಂದ ಆ ಪ್ರಥಮ ಸಿವುಡನ್ನು ನೈವೇದ್ಯವಾಗಿ ನಿವಾಳಿಸಿದ ದಿನ ಮೊದಲುಗೊಂಡು ಪೂರ್ಣವಾಗಿ ಏಳು ವಾರಗಳು ಮುಗಿಯುವಂತೆ ಐವತ್ತು ದಿನಗಳನ್ನು ಲೆಕ್ಕಿಸಬೇಕು.
עד ממחרת השבת השביעת תספרו חמשים יום והקרבתם מנחה חדשה ליהוה | 16 |
೧೬ಏಳನೆಯ ಸಬ್ಬತ್ ದಿನದ ಮರುದಿನದಲ್ಲಿ ಯೆಹೋವನಿಗೆ ಹೊಸಬೆಳೆಯ ಧಾನ್ಯನೈವೇದ್ಯವನ್ನು ಸಮರ್ಪಿಸಬೇಕು.
ממושבתיכם תביאו לחם תנופה שתים שני עשרנים--סלת תהיינה חמץ תאפינה בכורים ליהוה | 17 |
೧೭ನಿಮ್ಮ ನಿವಾಸಗಳಿಂದ ತಂದ ಹಿಟ್ಟಿನಲ್ಲಿ ಆರು ಸೇರು ಹಿಟ್ಟಿನಿಂದ ಎರಡು ನೈವೇದ್ಯದ ರೊಟ್ಟಿಗಳನ್ನು ಮಾಡಬೇಕು. ಇವುಗಳನ್ನು ಹುಳಿಹಾಕಿದ ಗೋದಿಯ ಹಿಟ್ಟಿನಿಂದ ಮಾಡಿ ಪ್ರಥಮಫಲವಾಗಿ ಯೆಹೋವನಿಗೆ ಸಮರ್ಪಿಸಬೇಕು.
והקרבתם על הלחם שבעת כבשים תמימם בני שנה ופר בן בקר אחד ואילם שנים יהיו עלה ליהוה ומנחתם ונסכיהם אשה ריח ניחח ליהוה | 18 |
೧೮ಆ ರೊಟ್ಟಿಗಳೊಡನೆ ಒಂದು ವರ್ಷದ ಪೂರ್ಣಾಂಗವಾದ ಏಳು ಕುರಿಗಳನ್ನು, ಒಂದು ಹೋರಿಯನ್ನು ಮತ್ತು ಎರಡು ಟಗರುಗಳನ್ನು ಸಮರ್ಪಿಸಬೇಕು. ಇವು ಧಾನ್ಯದ್ರವ್ಯದೊಡನೆ ಮತ್ತು ಪಾನದ್ರವ್ಯದೊಡನೆ ಅಗ್ನಿಯ ಮೂಲಕ ಯೆಹೋವನಿಗೆ ಪರಿಮಳವನ್ನು ಉಂಟುಮಾಡುವ ಸರ್ವಾಂಗಹೋಮವಾಗುವವು.
ועשיתם שעיר עזים אחד לחטאת ושני כבשים בני שנה לזבח שלמים | 19 |
೧೯ಅದಲ್ಲದೆ ದೋಷಪರಿಹಾರಕ ಯಜ್ಞವಾಗಿ ಒಂದು ಹೋತವನ್ನು ಮತ್ತು ಸಮಾಧಾನ ಯಜ್ಞಕ್ಕಾಗಿ ಒಂದು ವರ್ಷದ ಎರಡು ಟಗರುಗಳನ್ನು ಸಮರ್ಪಿಸಬೇಕು.
והניף הכהן אתם על לחם הבכרים תנופה לפני יהוה על שני כבשים קדש יהיו ליהוה לכהן | 20 |
೨೦ಯಾಜಕನು ಇವುಗಳನ್ನು, ಪ್ರಥಮಫಲದ ರೊಟ್ಟಿಗಳನ್ನು ಮತ್ತು ಎರಡು ಕುರಿಗಳನ್ನು ಯೆಹೋವನ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಬೇಕು. ಅವು ಯೆಹೋವನಿಗೆ ಮೀಸಲಾಗಿ ಯಾಜಕನಿಗೆ ಸಲ್ಲಬೇಕು.
וקראתם בעצם היום הזה מקרא קדש יהיה לכם--כל מלאכת עבדה לא תעשו חקת עולם בכל מושבתיכם לדרתיכם | 21 |
೨೧ಆ ದಿನದಲ್ಲಿ ದೇವಾರಾಧನೆಗಾಗಿ ಸಭೆಸೇರಬೇಕೆಂಬುದಾಗಿ ಪ್ರಕಟಪಡಿಸಬೇಕು. ಆ ದಿನದಲ್ಲಿ ಯಾವ ಉದ್ಯೋಗವನ್ನು ನಡೆಸಬಾರದು. ಇದು ನಿಮಗೂ, ನಿಮ್ಮ ಸಂತತಿಯವರಿಗೂ ಮತ್ತು ನಿಮ್ಮ ಎಲ್ಲಾ ನಿವಾಸಗಳಲ್ಲಿ ಶಾಶ್ವತನಿಯಮ.
ובקצרכם את קציר ארצכם לא תכלה פאת שדך בקצרך ולקט קצירך לא תלקט לעני ולגר תעזב אתם אני יהוה אלהיכם | 22 |
೨೨“‘ನಿಮ್ಮ ದೇಶದ ಪೈರನ್ನು ಕೊಯ್ಯುವಾಗ ಹೊಲಗಳ ಮೂಲೆಗಳಲ್ಲಿರುವುದನ್ನೆಲ್ಲಾ ಕೊಯ್ಯಬಾರದು ಮತ್ತು ಹಕ್ಕಲಾಯಬಾರದು. ಇವುಗಳನ್ನು ಬಡವರಿಗೋಸ್ಕರವು ಹಾಗು ಪರದೇಶದವರಿಗೋಸ್ಕರವು ಬಿಟ್ಟುಬಿಡಬೇಕು. ನಾನು ನಿಮ್ಮ ದೇವರಾಗಿರುವ ಯೆಹೋವನು’” ಎಂದು ಹೇಳಿದನು.
וידבר יהוה אל משה לאמר | 23 |
೨೩ಯೆಹೋವನು ಮೋಶೆಯೊಂದಿಗೆ ಮಾತನಾಡಿ,
דבר אל בני ישראל לאמר בחדש השביעי באחד לחדש יהיה לכם שבתון--זכרון תרועה מקרא קדש | 24 |
೨೪“ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸಬೇಕು, ‘ಏಳನೆಯ ತಿಂಗಳಿನ ಮೊದಲನೆಯ ದಿನದಲ್ಲಿ ನಿಮಗೆ ಸಂಪೂರ್ಣ ವಿರಾಮವಿರಬೇಕು. ಅದನ್ನು ತುತ್ತೂರಿಗಳ ಧ್ವನಿಯಿಂದ ಪ್ರಕಟಪಡಿಸಬೇಕು. ದೇವಾರಾಧನೆಗಾಗಿ ಸಭೆಸೇರಬೇಕು.
כל מלאכת עבדה לא תעשו והקרבתם אשה ליהוה | 25 |
೨೫ಆ ದಿನದಲ್ಲಿ ಯಾವ ಉದ್ಯೋಗವನ್ನು ನಡೆಸಬಾರದು; ಯೆಹೋವನಿಗೆ ಹೋಮವನ್ನು ಮಾಡಬೇಕು’” ಅಂದನು.
וידבר יהוה אל משה לאמר | 26 |
೨೬ಯೆಹೋವನು ಮೋಶೆಯೊಂದಿಗೆ ಮಾತನಾಡಿ,
אך בעשור לחדש השביעי הזה יום הכפרים הוא מקרא קדש יהיה לכם ועניתם את נפשתיכם והקרבתם אשה ליהוה | 27 |
೨೭“ಅದೇ ಏಳನೆಯ ತಿಂಗಳಿನ ಹತ್ತನೆಯ ದಿನ ದೋಷಪರಿಹಾರಕ ದಿನ. ಅದರಲ್ಲಿ ದೇವಾರಾಧನೆಗಾಗಿ ಸಭೆಸೇರಬೇಕು; ನೀವು ಪೂರ್ಣವಾಗಿ ಉಪವಾಸಮಾಡಬೇಕು ಮತ್ತು ಯೆಹೋವನ ಸನ್ನಿಧಿಯಲ್ಲಿ ಹೋಮವನ್ನು ಮಾಡಬೇಕು.
וכל מלאכה לא תעשו בעצם היום הזה כי יום כפרים הוא לכפר עליכם לפני יהוה אלהיכם | 28 |
೨೮ಆ ದಿನದಲ್ಲಿ ಯಾವ ಉದ್ಯೋಗವನ್ನೂ ನಡೆಸಬಾರದು. ಅದು ದೋಷಪರಿಹಾರಕ ದಿನವಾಗಿದೆ, ಅದರಲ್ಲಿ ನಿಮಗೋಸ್ಕರ ಯೆಹೋವನ ಸನ್ನಿಧಿಯಲ್ಲಿ ದೋಷಪರಿಹಾರಕ ಆಚರಣೆ ನಡೆಯುವುದು.
כי כל הנפש אשר לא תענה בעצם היום הזה--ונכרתה מעמיה | 29 |
೨೯ಯಾವನಾದರೂ ಆ ದಿನದಲ್ಲಿ ಉಪವಾಸ ಮಾಡದೆಹೋದರೆ ಅವನನ್ನು ಕುಲದಿಂದ ಹೊರಗೆ ಹಾಕಬೇಕು.
וכל הנפש אשר תעשה כל מלאכה בעצם היום הזה--והאבדתי את הנפש ההוא מקרב עמה | 30 |
೩೦ಯಾವನಾದರೂ ಆ ದಿನದಲ್ಲಿ ಕೆಲಸವನ್ನು ಮಾಡಿದರೆ ಅವನನ್ನು ಇಸ್ರಾಯೇಲರಲ್ಲಿ ಇರದಂತೆ ನಾಶಮಾಡುವೆನು.
כל מלאכה לא תעשו חקת עולם לדרתיכם בכל משבתיכם | 31 |
೩೧ಆ ದಿನದಲ್ಲಿ ಯಾವ ಕೆಲಸವನ್ನು ಮಾಡಬಾರದು. ಇದು ನಿಮಗೂ, ನಿಮ್ಮ ಸಂತತಿಯವರಿಗೂ ಮತ್ತು ನಿಮ್ಮ ಎಲ್ಲಾ ನಿವಾಸಗಳಲ್ಲಿ ಶಾಶ್ವತನಿಯಮ.
שבת שבתון הוא לכם ועניתם את נפשתיכם בתשעה לחדש בערב--מערב עד ערב תשבתו שבתכם | 32 |
೩೨ಆ ಸಬ್ಬತ್ ದಿನವು ಸಂಪೂರ್ಣವಿರಾಮವುಳ್ಳ ದಿನವಾಗಿರಬೇಕು. ಆ ದಿನದಲ್ಲಿ ಉಪವಾಸದಿಂದಿರಬೇಕು. ಆ ತಿಂಗಳಿನ ಒಂಭತ್ತನೆಯ ದಿನದ ಸಾಯಂಕಾಲದಲ್ಲಿ ಪ್ರಾರಂಭಿಸಿ ಮರುದಿನದ ಸಾಯಂಕಾಲದ ವರೆಗೆ ನೀವು ಆ ವಿರಾಮದಿನವನ್ನು ಆಚರಿಸಬೇಕು” ಎಂದು ಹೇಳಿದನು.
וידבר יהוה אל משה לאמר | 33 |
೩೩ಯೆಹೋವನು ಮೋಶೆಯೊಂದಿಗೆ ಮಾತನಾಡಿ,
דבר אל בני ישראל לאמר בחמשה עשר יום לחדש השביעי הזה חג הסכות שבעת ימים ליהוה | 34 |
೩೪“ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸು, ‘ಏಳನೆಯ ತಿಂಗಳಿನ ಹದಿನೈದನೆಯ ದಿನ ಮೊದಲುಗೊಂಡು ಏಳು ದಿನಗಳ ವರೆಗೆ ಪರ್ಣಶಾಲೆಗಳ ಜಾತ್ರೆಯನ್ನು ಯೆಹೋವನಿಗೋಸ್ಕರ ಆಚರಿಸಬೇಕು.
ביום הראשון מקרא קדש כל מלאכת עבדה לא תעשו | 35 |
೩೫ಮೊದಲನೆಯ ದಿನದಲ್ಲಿ ದೇವಾರಾಧನೆಗಾಗಿ ಸಭೆಸೇರಬೇಕು; ಯಾವ ಉದ್ಯೋಗವನ್ನು ನಡೆಸಬಾರದು.
שבעת ימים תקריבו אשה ליהוה ביום השמיני מקרא קדש יהיה לכם והקרבתם אשה ליהוה עצרת הוא--כל מלאכת עבדה לא תעשו | 36 |
೩೬ಆ ಏಳು ದಿನಗಳಲ್ಲಿಯೂ ನೀವು ಯೆಹೋವನ ಸನ್ನಿಧಿಯಲ್ಲಿ ಹೋಮಮಾಡಬೇಕು. ಎಂಟನೆಯ ದಿನದಲ್ಲಿಯೂ ದೇವಾರಾಧನೆಗಾಗಿ ಸಭೆಸೇರಬೇಕು, ಯೆಹೋವನ ಸನ್ನಿಧಿಯಲ್ಲಿ ಹೋಮಮಾಡಬೇಕು. ಅದು ಸಭೆಸೇರುವ ದಿನವಾದುದರಿಂದ ಆ ದಿನದಲ್ಲಿ ಯಾವ ಉದ್ಯೋಗವನ್ನು ಮಾಡಬಾರದು.
אלה מועדי יהוה אשר תקראו אתם מקראי קדש להקריב אשה ליהוה עלה ומנחה זבח ונסכים--דבר יום ביומו | 37 |
೩೭“‘ಯೆಹೋವನು ನೇಮಿಸಿರುವ ಸಬ್ಬತ್ ದಿನಗಳ ಹೊರತಾಗಿ ಮೇಲೆ ಹೇಳಿದ ದಿನಗಳೇ ಯೆಹೋವನ ಹಬ್ಬದ ದಿನಗಳು. ಆ ದಿನಗಳಲ್ಲಿ ದೇವಾರಾಧನೆಗಾಗಿ ಸಭೆಸೇರುವಂತೆ ನೀವು ಪ್ರಕಟಿಸಬೇಕು. ಆಯಾ ದಿನಕ್ಕೆ ನೇಮಿಸಿರುವ ಪ್ರಕಾರ ಸರ್ವಾಂಗಹೋಮ, ಧಾನ್ಯನೈವೇದ್ಯ, ಸಮಾಧಾನಯಜ್ಞ, ಪಾನದ್ರವ್ಯ ಇವುಗಳನ್ನು ತಂದು ಯೆಹೋವನ ಸನ್ನಿಧಿಯಲ್ಲಿ ಹೋಮಮಾಡಬೇಕು.
מלבד שבתת יהוה ומלבד מתנותיכם ומלבד כל נדריכם ומלבד כל נדבתיכם אשר תתנו ליהוה | 38 |
೩೮ಯೆಹೋವನಿಗೆ ಒಪ್ಪಿಸಬೇಕಾದ ಕಪ್ಪ, ಕಾಣಿಕೆ, ಹರಕೆ ಇವುಗಳನ್ನು ನೀವು ಯೆಹೋವನು ನೇಮಿಸಿರುವ ಸಬ್ಬತ್ ದಿನದಲ್ಲಿ ಮಾತ್ರವಲ್ಲದೆ ಮೇಲೆ ಸೂಚಿಸಿರುವ ಹಬ್ಬದ ದಿನಗಳಲ್ಲಿಯೂ ಸಮರ್ಪಿಸಬೇಕು.
אך בחמשה עשר יום לחדש השביעי באספכם את תבואת הארץ תחגו את חג יהוה שבעת ימים ביום הראשון שבתון וביום השמיני שבתון | 39 |
೩೯“‘ಏಳನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ನೀವು ತೋಟ ಮತ್ತು ತೋಪುಗಳ ಬೆಳೆಯನ್ನು ಕೂಡಿಸಿದ ನಂತರ ಯೆಹೋವನು ನೇಮಿಸಿದ ಪರ್ಣಶಾಲೆಗಳ ಜಾತ್ರೆಯನ್ನು ಏಳು ದಿನಗಳ ವರೆಗೂ ಆಚರಿಸಬೇಕು. ಮೊದಲನೆಯ ದಿನದಲ್ಲಿಯೂ ಮತ್ತು ಎಂಟನೆಯ ದಿನದಲ್ಲಿಯೂ ಯಾವ ಕೆಲಸವನ್ನು ಮಾಡದೆ ಸಂಪೂರ್ಣ ವಿರಾಮದಿಂದಿರಬೇಕು.
ולקחתם לכם ביום הראשון פרי עץ הדר כפת תמרים וענף עץ עבת וערבי נחל ושמחתם לפני יהוה אלהיכם--שבעת ימים | 40 |
೪೦ಮೊದಲನೆಯ ದಿನದಲ್ಲಿ ಶ್ರೇಷ್ಠವೃಕ್ಷದ ಹಣ್ಣುಗಳನ್ನು, ಖರ್ಜೂರ ಮರದ ಗರಿಗಳನ್ನು, ಎಲೆಗಳು ದಟ್ಟವಾಗಿರುವ ಮರಗಳ ಕೊಂಬೆಗಳನ್ನು ಮತ್ತು ನೀರಿನ ಕಾಲುವೆಗಳ ಬಳಿಯಲ್ಲಿ ಬೆಳೆಯುವ ನೀರವಂಜಿ ಚಿಗುರುಗಳನ್ನು ತೆಗೆದುಕೊಂಡು ಯೆಹೋವನ ಸನ್ನಿಧಿಯಲ್ಲಿ ಏಳು ದಿನಗಳ ವರೆಗೆ ಸಂಭ್ರಮವಾಗಿರಬೇಕು.
וחגתם אתו חג ליהוה שבעת ימים בשנה חקת עולם לדרתיכם בחדש השביעי תחגו אתו | 41 |
೪೧ಹೀಗೆ ಪ್ರತಿ ವರ್ಷದಲ್ಲಿಯೂ ಏಳು ದಿನಗಳ ವರೆಗೆ ಈ ಹಬ್ಬವನ್ನು ಆಚರಿಸಬೇಕು; ನಿಮಗೂ ಮತ್ತು ನಿಮ್ಮ ಸಂತತಿಯವರಿಗೂ ಇದು ಶಾಶ್ವತನಿಯಮ; ಏಳನೆಯ ತಿಂಗಳಿನಲ್ಲಿ ಇದನ್ನು ಆಚರಿಸಬೇಕು.
בסכת תשבו שבעת ימים כל האזרח בישראל ישבו בסכת | 42 |
೪೨ಏಳು ದಿನಗಳು ನೀವು ಪರ್ಣಶಾಲೆಗಳಲ್ಲಿ ವಾಸವಾಗಿರಬೇಕು, ಸ್ವದೇಶಸ್ಥರಾದ ಇಸ್ರಾಯೇಲರೆಲ್ಲರೂ ಪರ್ಣಶಾಲೆಗಳಲ್ಲಿಯೇ ವಾಸವಾಗಿರಬೇಕು.
למען ידעו דרתיכם כי בסכות הושבתי את בני ישראל בהוציאי אותם מארץ מצרים אני יהוה אלהיכם | 43 |
೪೩ನಾನು ನಿಮ್ಮನ್ನು ಐಗುಪ್ತ ದೇಶದಿಂದ ಬರಮಾಡಿದಾಗ ಇಸ್ರಾಯೇಲರು ಪರ್ಣಶಾಲೆಗಳಲ್ಲಿ ವಾಸವಾಗಿರುವಂತೆ ಮಾಡಿದೆನೆಂಬುದಾಗಿ ಇದರಿಂದ ನಿಮ್ಮ ಸಂತತಿಯವರಿಗೆ ತಿಳಿಯುವುದು. ನಾನು ನಿಮ್ಮ ದೇವರಾದ ಯೆಹೋವನು’” ಅಂದನು.
וידבר משה את מעדי יהוה אל בני ישראל | 44 |
೪೪ಯೆಹೋವನಿಂದ ನೇಮಕವಾದ ಹಬ್ಬಗಳ ದಿನಗಳ ವಿಷಯವಾಗಿ ಮೋಶೆಯು ಅದೇ ಮೇರೆಗೆ ಇಸ್ರಾಯೇಲರಿಗೆ ತಿಳಿಸಿದನು.