< יואל 1 >
דבר יהוה אשר היה אל יואל בן פתואל | 1 |
೧ಪೆತೂವೇಲನ ಮಗನಾದ ಯೋವೇಲನಿಗೆ ಯೆಹೋವನು ದಯಪಾಲಿಸಿದ ವಾಕ್ಯವು.
שמעו זאת הזקנים והאזינו כל יושבי הארץ ההיתה זאת בימיכם ואם בימי אבתיכם | 2 |
೨ವೃದ್ಧರೇ, ಇದನ್ನು ಕೇಳಿರಿ, ದೇಶದ ನಿವಾಸಿಗಳೇ, ನೀವೆಲ್ಲರೂ ಕಿವಿಗೊಡಿರಿ. ಇಂಥ ಬಾಧೆಯು ನಿಮ್ಮ ಕಾಲದಲ್ಲಾಗಲಿ ನಿಮ್ಮ ಪೂರ್ವಿಕರ ಕಾಲದಲ್ಲಿಯಾಗಲಿ ಸಂಭವಿಸಿತ್ತೋ?
עליה לבניכם ספרו ובניכם לבניהם ובניהם לדור אחר | 3 |
೩ಇದನ್ನು ನಿಮ್ಮ ಮಕ್ಕಳಿಗೆ ತಿಳಿಸಿರಿ, ಅವರು ತಮ್ಮ ಮಕ್ಕಳಿಗೆ ತಿಳಿಸಲಿ ಮತ್ತು ಅವರು ಮುಂದಿನ ತಲೆಮಾರಿನವರಿಗೆ ತಿಳಿಸಲಿ.
יתר הגזם אכל הארבה ויתר הארבה אכל הילק ויתר הילק אכל החסיל | 4 |
೪ಚೂರಿಮಿಡತೆ ತಿಂದು ಉಳಿದಿದ್ದ ಬೆಳೆಯನ್ನು ಗುಂಪು ಮಿಡತೆ ತಿಂದು ಬಿಟ್ಟಿತು; ಗುಂಪು ಮಿಡತೆ ತಿಂದು ಉಳಿದದ್ದನ್ನು ಕುದರೆ ಮಿಡತೆ ತಿಂದು ಬಿಟ್ಟಿತು; ಕುದರೆ ಮಿಡತೆ ತಿಂದು ಉಳಿದದ್ದನ್ನು ಕಂಬಳಿ ಮಿಡತೆ ತಿಂದುಬಿಟ್ಟಿತು.
הקיצו שכורים ובכו והיללו כל שתי יין על עסיס כי נכרת מפיכם | 5 |
೫ಅಮಲೇರಿದವರೇ, ಎಚ್ಚರಗೊಳ್ಳಿರಿ ಮತ್ತು ಅಳಿರಿ! ದ್ರಾಕ್ಷಾರಸ ಕುಡಿಯುವವರೇ, ಗೋಳಾಡಿರಿ, ಏಕೆಂದರೆ ದ್ರಾಕ್ಷಾರಸದ ಸಿಹಿಯು ನಿಮ್ಮ ಬಾಯಿಗೆ ಸಿಕ್ಕುವುದಿಲ್ಲ.
כי גוי עלה על ארצי עצום ואין מספר שניו שני אריה ומתלעות לביא לו | 6 |
೬ನನ್ನ ದೇಶದ ಮೇಲೆ ಬಲಿಷ್ಠವಾದ ಹಾಗೂ ಅಸಂಖ್ಯಾತವಾದ ಒಂದು ಜನಾಂಗವು ಏರಿ ಬಂದಿದೆ; ಅದರ ಹಲ್ಲುಗಳು ಸಿಂಹದ ಹಲ್ಲುಗಳೇ; ಅದರ ಕೋರೆ ಹಲ್ಲುಗಳು ಮೃಗರಾಜನ ಕೋರೆಗಳೇ.
שם גפני לשמה ותאנתי לקצפה חשף חשפה והשליך הלבינו שריגיה | 7 |
೭ಅದು ನನ್ನ ದ್ರಾಕ್ಷಾತೋಟವನ್ನು ಹಾಳುಮಾಡಿ, ನನ್ನ ಅಂಜೂರದ ಗಿಡವನ್ನು ಮುರಿದುಹಾಕಿದೆ. ಅವುಗಳನ್ನು ಹಾಳುಮಾಡಿ ದೂರ ಬಿಸಾಡಿಬಿಟ್ಟಿದೆ; ಅದರ ಕೊಂಬೆಗಳು ಬಿಳುಪಾದವು.
אלי כבתולה חגרת שק על בעל נעוריה | 8 |
೮ಯೌವನದ ಪತಿಗಾಗಿ ದುಃಖದಿಂದ ಗೋಣಿತಟ್ಟನ್ನು ಧರಿಸಿಕೊಂಡು ಗೋಳಾಡುವ ಕನ್ಯೆಯಂತೆ ಗೋಳಾಡಿರಿ.
הכרת מנחה ונסך מבית יהוה אבלו הכהנים משרתי יהוה | 9 |
೯ಧಾನ್ಯನೈವೇದ್ಯಗಳು ಮತ್ತು ಪಾನದ್ರವ್ಯಗಳು ಯೆಹೋವನ ಆಲಯದಿಂದ ತೆಗೆಯಲ್ಪಟ್ಟಿದೆ. ಯೆಹೋವನ ಸೇವಕರಾದ ಯಾಜಕರು ಗೋಳಾಡುತ್ತಾರೆ.
שדד שדה אבלה אדמה כי שדד דגן הוביש תירוש אמלל יצהר | 10 |
೧೦ಬೆಳೆ ಬೆಳೆಯುವ ಹೊಲವು ಹಾಳಾಗಿದೆ, ನೆಲವು ದುಃಖದಲ್ಲಿ ಮುಳುಗಿದೆ. ಏಕೆಂದರೆ ಧಾನ್ಯವು ನಾಶವಾಗಿದೆ, ಹೊಸ ದ್ರಾಕ್ಷಾರಸವು ಒಣಗಿದೆ, ಎಣ್ಣೆಯು ಕೆಟ್ಟುಹೋಗಿದೆ.
הבישו אכרים הילילו כרמים על חטה ועל שערה כי אבד קציר שדה | 11 |
೧೧ರೈತರೇ, ರೋದಿಸಿರಿ, ತೋಟಗಾರರೇ ಗೋಳಾಡಿರಿ, ಗೋದಿಯೂ ಮತ್ತು ಜವೆಗೋದಿಯೂ ಹಾಳಾಗಿವೆ. ಹೊಲದ ಬೆಳೆಯು ನಾಶವಾಗಿದೆ.
הגפן הובישה והתאנה אמללה רמון גם תמר ותפוח כל עצי השדה יבשו--כי הביש ששון מן בני אדם | 12 |
೧೨ದ್ರಾಕ್ಷಾಲತೆಯು ಒಣಗಿದೆ ಮತ್ತು ಅಂಜೂರದ ಗಿಡವು ಬಾಡಿಹೋಗಿದೆ; ದಾಳಿಂಬೆ, ಖರ್ಜೂರ ಮತ್ತು ಸೇಬು ಮರಗಳು ಹಾಗು ಹೊಲದ ಸಕಲ ವನವೃಕ್ಷಗಳು ಒಣಗಿ ಹೋಗಿವೆ. ಮನುಷ್ಯರು ಸೊರಗಿ ಸಂತೋಷವಿಲ್ಲದೆ ಕಳೆಗುಂದಿದ್ದಾರೆ.
חגרו וספדו הכהנים הילילו משרתי מזבח--באו לינו בשקים משרתי אלהי כי נמנע מבית אלהיכם מנחה ונסך | 13 |
೧೩ಯಾಜಕರೇ, ಗೋಣಿತಟ್ಟನ್ನು ಉಟ್ಟುಕೊಂಡು ಗೋಳಾಡಿರಿ! ಯಜ್ಞವೇದಿಯ ಸೇವಕರೇ, ಗೋಳಾಡಿರಿ. ನನ್ನ ದೇವರ ಸೇವಕರೇ, ಬಂದು ಗೋಣಿತಟ್ಟನ್ನು ಸುತ್ತಿಕೊಂಡು ರಾತ್ರಿಯೆಲ್ಲಾ ಬಿದ್ದುಕೊಂಡಿರಿ. ಏಕೆಂದರೆ ಧಾನ್ಯನೈವೇದ್ಯಗಳು ಮತ್ತು ಪಾನದ್ರವ್ಯಗಳು ನಿಮ್ಮ ದೇವರ ಆಲಯಕ್ಕೆ ಬಾರದೆ ನಿಂತುಹೋಗಿದೆ.
קדשו צום קראו עצרה--אספו זקנים כל ישבי הארץ בית יהוה אלהיכם וזעקו אל יהוה | 14 |
೧೪ಉಪವಾಸ ಪ್ರಾರ್ಥನೆಯ ದಿನವನ್ನು ಏರ್ಪಡಿಸಿರಿ, ಪವಿತ್ರ ಸಭೆಯನ್ನು ಸೇರಿಸಿರಿ. ಹಿರಿಯರನ್ನೂ ಮತ್ತು ಸಮಸ್ತ ದೇಶದ ನಿವಾಸಿಗಳನ್ನೂ ನಿಮ್ಮ ದೇವರಾದ ಯೆಹೋವನ ಆಲಯಕ್ಕೆ ಬರಮಾಡಿ, ಯೆಹೋವನಿಗೆ ಮೊರೆಯಿಡಿರಿ.
אהה ליום כי קרוב יום יהוה וכשד משדי יבוא | 15 |
೧೫ಯೆಹೋವನು ಬರುವ ದಿನವು ಸಮೀಪಿಸಿತು. ಅದು ಸರ್ವಶಕ್ತನಾದ ಯೆಹೋವನಿಂದ ನಾಶವಾಗುವ ದಿನ.
הלוא נגד עינינו אכל נכרת מבית אלהינו שמחה וגיל | 16 |
೧೬ನಮ್ಮ ಆಹಾರವು ನಮ್ಮ ಕಣ್ಣೆದುರಿಗೆ ಹಾಳಾಯಿತಲ್ಲಾ, ಸಂತೋಷವೂ ಹಾಗೂ ಉಲ್ಲಾಸವೂ ನಮ್ಮ ದೇವರ ಆಲಯವನ್ನು ಬಿಟ್ಟುಹೋಯಿತ್ತಲ್ಲಾ!
עבשו פרדות תחת מגרפתיהם--נשמו אצרות נהרסו ממגרות כי הביש דגן | 17 |
೧೭ಬೀಜಗಳು, ಹೆಂಟೆಗಳ ಕೆಳಗೆ ಕೆಟ್ಟುಹೋಗಿವೆ. ಉಗ್ರಾಣಗಳು ಬರಿದಾಗಿವೆ. ಕಣಜಗಳು ಕೆಡವಲ್ಪಟ್ಟಿವೆ, ಏಕೆಂದರೆ ಧಾನ್ಯವು ಒಣಗಿದೆ.
מה נאנחה בהמה נבכו עדרי בקר--כי אין מרעה להם גם עדרי הצאן נאשמו | 18 |
೧೮ಅಯ್ಯೋ, ಪಶುಗಳು ಎಷ್ಟೋ ನರಳುತ್ತವೆ! ಮೇವಿಲ್ಲದ ಕಾರಣ ದನದ ಮಂದೆಗಳು ಕಳವಳಗೊಂಡಿವೆ. ಏಕೆಂದರೆ ಅವುಗಳಿಗೆ ಮೇವು ಇಲ್ಲ. ಕುರಿಹಿಂಡುಗಳು ಕಷ್ಟಪಡುತ್ತವೆ.
אליך יהוה אקרא כי אש אכלה נאות מדבר ולהבה להטה כל עצי השדה | 19 |
೧೯ಯೆಹೋವನೇ, ನಿನಗೆ ಮೊರೆಯಿಡುತ್ತೇನೆ; ಕಾಡಿನ ಹುಲ್ಲುಗಾವಲನ್ನು ಬೆಂಕಿಯು ನುಂಗಿಬಿಟ್ಟಿದೆ, ವನವೃಕ್ಷಗಳನ್ನೆಲ್ಲಾ ಜ್ವಾಲೆಯು ಸುಟ್ಟುಬಿಟ್ಟಿದೆ.
גם בהמות שדה תערוג אליך כי יבשו אפיקי מים ואש אכלה נאות המדבר | 20 |
೨೦ಅಡವಿಯ ಮೃಗಗಳು ಸಹ ನಿನ್ನ ಕಡೆಗೆ ತಲೆಯೆತ್ತಿವೆ. ನೀರಿನ ಹೊಳೆಗಳು ಬತ್ತಿಹೋಗಿವೆ. ಕಾಡಿನ ಹುಲ್ಲುಗಾವಲನ್ನು ಬೆಂಕಿಯು ದಹಿಸಿಬಿಟ್ಟಿದೆ.