< איוב 34 >
ಎಲೀಹು ಮುಂದುವರೆಸಿ ಹೇಳಿದ್ದೇನೆಂದರೆ:
שמעו חכמים מלי וידעים האזינו לי | 2 |
ಜ್ಞಾನಿಗಳೇ, ನನ್ನ ನುಡಿಗಳನ್ನು ಕೇಳಿರಿ; ಪಂಡಿತರೇ, ನನಗೆ ಕಿವಿಗೊಡಿರಿ.
כי-אזן מלין תבחן וחך יטעם לאכל | 3 |
ಏಕೆಂದರೆ ಆಹಾರವನ್ನು ನಾಲಿಗೆ ರುಚಿ ನೋಡುವಂತೆ, ಕಿವಿಯು ನುಡಿಗಳನ್ನು ಪರಿಶೋಧಿಸುತ್ತದೆ.
משפט נבחרה-לנו נדעה בינינו מה-טוב | 4 |
ನಾವು ಸರಿಯಾದುದನ್ನೇ ಆಯ್ದುಕೊಳ್ಳೋಣ; ಒಳ್ಳೆಯದು ಏನೆಂದು ನಮ್ಮೊಳಗೆ ನಾವೇ ತಿಳಿದುಕೊಳ್ಳೋಣ.
כי-אמר איוב צדקתי ואל הסיר משפטי | 5 |
“ಏಕೆಂದರೆ ಯೋಬನು, ‘ನಾನು ನಿರ್ದೋಷಿಯಾಗಿದ್ದೇನೆ. ಆದರೆ ದೇವರು ನನಗೆ ನ್ಯಾಯವನ್ನು ನಿರಾಕರಿಸಿದ್ದಾರೆ.
על-משפטי אכזב אנוש חצי בלי-פשע | 6 |
ನನ್ನಲ್ಲಿ ನ್ಯಾಯವಿದ್ದರೂ ನನ್ನನ್ನು ಸುಳ್ಳುಗಾರನೆಂದು ಪರಿಗಣಿಸಲಾಗಿದೆ; ನಾನು ನಿರ್ದೋಷಿಯಾಗಿದ್ದರೂ ದೇವರ ಬಾಣವು ಗುಣಪಡಿಸಲಾಗದ ಗಾಯವನ್ನು ನನಗೆ ಉಂಟುಮಾಡಿದೆ,’ ಎಂದು ಹೇಳುತ್ತಿದ್ದಾನೆ.”
מי-גבר כאיוב ישתה-לעג כמים | 7 |
ಯೋಬನಿಗೆ ಸಮಾನನು ಯಾರು? ಅವನು ನೀರು ಕುಡಿಯುವಂತೆ ಅಪಹಾಸ್ಯ ಮಾಡುತ್ತಿದ್ದಾನೆ.
וארח לחברה עם-פעלי און וללכת עם-אנשי-רשע | 8 |
ಯೋಬನು ದುಷ್ಕರ್ಮಿಗಳೊಂದಿಗೆ ಸಹವಾಸ ಇಟ್ಟುಕೊಳ್ಳುತ್ತಾ ದುಷ್ಟಜನರ ಸಂಗಡ ನಡೆದಾಡುತ್ತಾನೆ.
כי-אמר לא יסכן-גבר-- ברצתו עם-אלהים | 9 |
“ಏಕೆಂದರೆ ಅವನು, ‘ದೇವರನ್ನು ಮೆಚ್ಚಿಸಲು ಪ್ರಯತ್ನಿಸುವುದರಿಂದ ಮನುಷ್ಯನಿಗೆ ಯಾವುದೇ ಲಾಭವಿಲ್ಲ,’ ಎಂದು ಹೇಳುತ್ತಾನೆ.”
לכן אנשי לבב-- שמעו-לי חללה לאל מרשע ושדי מעול | 10 |
“ಆದ್ದರಿಂದ ಬುದ್ಧಿವಂತರೇ, ನಾನು ಹೇಳುವುದನ್ನು ಕೇಳಿರಿ, ದೇವರು ಕೆಟ್ಟದ್ದನ್ನು ಮಾಡುತ್ತಾರೆಂಬ ಯೋಚನೆ ದೂರವಿರಲಿ. ಸರ್ವಶಕ್ತರು ಅನ್ಯಾಯವನ್ನು ಎಸಗುತ್ತಾರೆಂಬ ಭಾವನೆ ದೂರವಾಗಿರಲಿ.
כי פעל אדם ישלם-לו וכארח איש ימצאנו | 11 |
ದೇವರು ಮನುಷ್ಯನಿಗೆ ಅವನ ಕೃತ್ಯಗಳಿಗೆ ತಕ್ಕ ಫಲವನ್ನು ಕೊಡುತ್ತಾರೆ; ಹೌದು, ದೇವರು ಪ್ರತಿಯೊಬ್ಬರನ್ನು ಅವರವರ ನಡತೆಗೆ ತಕ್ಕಂತೆ ಅನುಭವಿಸಮಾಡುತ್ತಾರೆ.
אף-אמנם אל לא-ירשיע ושדי לא-יעות משפט | 12 |
ನಿಶ್ಚಯವಾಗಿ ದೇವರು ಕೆಟ್ಟದ್ದನ್ನು ಮಾಡುವುದಿಲ್ಲ, ಸರ್ವಶಕ್ತರು ನ್ಯಾಯವನ್ನು ಡೊಂಕು ಮಾಡುವುದಿಲ್ಲ.
מי-פקד עליו ארצה ומי שם תבל כלה | 13 |
ಭೂಮಿಯ ಮೇಲೆ ದೇವರನ್ನು ನೇಮಿಸಿದವರು ಯಾರು? ಸರ್ವಲೋಕವನ್ನು ದೇವರ ವಶಕ್ಕೆ ಒಪ್ಪಿಸಿಕೊಟ್ಟವರು ಯಾರು?
אם-ישים אליו לבו רוחו ונשמתו אליו יאסף | 14 |
ಒಂದು ವೇಳೆ, ದೇವರು ತಮ್ಮ ಆತ್ಮವನ್ನೂ, ಶ್ವಾಸವನ್ನೂ, ನಮ್ಮಿಂದ ಹಿಂದಕ್ಕೆ ತೆಗೆದುಕೊಳ್ಳಲು ಮನಸ್ಸುಮಾಡುವುದಾದರೆ,
יגוע כל-בשר יחד ואדם על-עפר ישוב | 15 |
ಎಲ್ಲಾ ಮನುಷ್ಯರೂ ಒಟ್ಟಿಗೆ ಅಳಿದುಹೋಗುವರು; ಇಡೀ ಮಾನವಕುಲವು ಧೂಳಿಗೆ ಹಿಂದಿರುಗುವುದು.”
ואם-בינה שמעה-זאת האזינה לקול מלי | 16 |
“ಯೋಬನೇ, ಅರ್ಥಮಾಡಿಕೊಂಡು, ಇದನ್ನು ಕೇಳಿಸಿಕೋ; ನನ್ನ ಮಾತಿಗೆ ಕಿವಿಗೊಡು.
האף שונא משפט יחבוש ואם-צדיק כביר תרשיע | 17 |
ನ್ಯಾಯವನ್ನು ದ್ವೇಷಿಸುವ ದೇವರು, ಆಳ್ವಿಕೆಮಾಡಲು ಸಾಧ್ಯವೇ? ನೀತಿವಂತರೂ, ಸರ್ವಶಕ್ತರೂ ಆಗಿರುವ ದೇವರ ಮೇಲೆ ನೀನು ತಪ್ಪುಹೊರಿಸುವಿಯೋ?
האמר למלך בליעל-- רשע אל-נדיבים | 18 |
ದೇವರು ಅರಸನಿಗೆ, ‘ನೀನು ಮೂರ್ಖ,’ ಎಂದು ಹೇಳಬಲ್ಲರು. ದೇವರು ಪ್ರಧಾನರಿಗೆ, ‘ನೀವು ದುಷ್ಟರು’ ಎಂದು ಕರೆಯಬಲ್ಲರು ಅಲ್ಲವೇ?
אשר לא-נשא פני שרים ולא נכר-שוע לפני-דל כי-מעשה ידיו כלם | 19 |
ದೇವರು ಅಧಿಪತಿಗಳಿಗೆ ಮುಖದಾಕ್ಷಿಣ್ಯ ತೋರಿಸುವರೋ? ಧನಿಕನನ್ನು ಬಡವನಿಗಿಂತ ಹೆಚ್ಚೆಂದು ದೇವರು ಲಕ್ಷಿಸುವರೋ? ಏಕೆಂದರೆ ಅವರೆಲ್ಲರೂ ದೇವರ ಸೃಷ್ಟಿಯಾಗಿದ್ದಾರೆ.
רגע ימתו-- וחצות לילה יגעשו עם ויעברו ויסירו אביר לא ביד | 20 |
ಜನರು ಮಧ್ಯರಾತ್ರಿಯಲ್ಲಿ ಕ್ಷಣಮಾತ್ರದಲ್ಲಿ ಸಾಯುತ್ತಾರೆ; ಅವರು ತಲ್ಲಣಗೊಂಡು ಇಲ್ಲದೆ ಹೋಗುತ್ತಾರೆ; ಪರಾಕ್ರಮಿಗಳು ಸಹ ಮಾನವರ ಕೈ ಒಳಪಡದೆ ಗತಿಸಿಹೋಗುತ್ತಾರೆ.”
כי-עיניו על-דרכי-איש וכל-צעדיו יראה | 21 |
“ಏಕೆಂದರೆ ದೇವರ ಕಣ್ಣು ಮನುಷ್ಯನ ಮಾರ್ಗಗಳ ಮೇಲೆ ಇರುತ್ತದೆ; ದೇವರು ಮನುಷ್ಯನ ಪ್ರತಿಯೊಂದು ಹೆಜ್ಜೆಯನ್ನೂ ನೋಡುತ್ತಾರೆ.
אין-חשך ואין צלמות-- להסתר שם פעלי און | 22 |
ಆದ್ದರಿಂದ ದೇವರ ದೃಷ್ಟಿಯಿಂದ ದುಷ್ಟರು ಅಡಗಿಕೊಳ್ಳಲು, ಗಾಢಾಂಧಕಾರವೂ ಇಲ್ಲ, ನೆರಳೂ ಇರುವುದಿಲ್ಲ.
כי לא על-איש ישים עוד-- להלך אל-אל במשפט | 23 |
ದೇವರು ಮನುಷ್ಯನ ಮೇಲೆ ಹೆಚ್ಚು ಗಮನ ಇಡಬೇಕಾಗಿಲ್ಲ. ಮನುಷ್ಯನು ನ್ಯಾಯವಿಚಾರಣೆಗೆ ಬರಬೇಕೆಂದು ದೇವರು ಕರೆಯುವ ಅವಶ್ಯಕತೆಯೂ ಇಲ್ಲ.
ירע כבירים לא-חקר ויעמד אחרים תחתם | 24 |
ಯಾವ ವಿಚಾರಣೆ ಇಲ್ಲದೆಯೇ ದೇವರು ಪರಾಕ್ರಮಿಗಳನ್ನು ದಂಡಿಸಬಹುದು. ದೇವರು ಮತ್ತೊಬ್ಬರನ್ನು ಅವರ ಸ್ಥಾನದಲ್ಲಿ ನಿಲ್ಲಿಸಲು ಸಾಧ್ಯ.
לכן--יכיר מעבדיהם והפך לילה וידכאו | 25 |
ಏಕೆಂದರೆ, ದೇವರು ಅಂಥವರ ದುಷ್ಕಾರ್ಯಗಳನ್ನು ತಿಳಿದಿದ್ದಾರೆ. ರಾತ್ರಿಯಲ್ಲಿ ಅವರನ್ನು ಕೆಡವಿ ದಂಡನೆಗೆ ಗುರಿಮಾಡುವರು.
תחת-רשעים ספקם-- במקום ראים | 26 |
ಅವರ ದುಷ್ಟತನಕ್ಕಾಗಿ ದೇವರು ಎಲ್ಲರು ನೋಡುವಂತೆ ಅವರನ್ನು ಶಿಕ್ಷಿಸುವರು.
אשר על-כן סרו מאחריו וכל-דרכיו לא השכילו | 27 |
ಅವರು ದೇವರನ್ನು ಹಿಂಬಾಲಿಸದೆ, ದೇವರ ಮಾರ್ಗಗಳನ್ನೆಲ್ಲಾ ಅಲಕ್ಷ್ಯ ಮಾಡಿದ್ದರಷ್ಟೆ.
להביא עליו צעקת-דל וצעקת עניים ישמע | 28 |
ಹೀಗೆ ದುಷ್ಟರು ಬಡವರ ಕೂಗನ್ನು ದೇವರ ಬಳಿಗೆ ಬರುವಂತೆ ಮಾಡಿದ್ದರು ದೇವರು ದಿಕ್ಕಿಲ್ಲದವರ ಕೂಗನ್ನು ಆಲೈಸಿದ್ದರು.
והוא ישקט ומי ירשע-- ויסתר פנים ומי ישורנו ועל-גוי ועל-אדם יחד | 29 |
ಆದರೆ ದೇವರು ಸುಮ್ಮನಿದ್ದರೆ ಅವರ ಮೇಲೆ, ತಪ್ಪುಹೊರಿಸುವವರು ಯಾರು? ದೇವರು ತಮ್ಮ ಮುಖವನ್ನು ವ್ಯಕ್ತಿಗಾಗಲಿ, ದೇಶಕ್ಕಾಗಲಿ ಮರೆಮಾಡಿದರೆ, ದೇವದರ್ಶನ ಪಡೆಯಬಲ್ಲವರು ಯಾರು?
ממלך אדם חנף-- ממקשי עם | 30 |
ಭಕ್ತಿಹೀನನು ಆಳಬಾರದು, ಯಾರೂ ಜನರಿಗೆ ಉರುಲಾಗಬಾರದು, ಎಂಬುದೇ ಇದರಲ್ಲಿ ದೇವರ ಉದ್ದೇಶ.”
כי-אל-אל האמר נשאתי-- לא אחבל | 31 |
“ಒಂದು ವೇಳೆ, ಯಾರಾದರೂ ದೇವರಿಗೆ, ‘ನಾನು ಪಾಪಮಾಡಿದ್ದೇನೆ, ಆದರೆ ಇನ್ನು ಮುಂದೆ ಪಾಪಮಾಡುವುದಿಲ್ಲ.
בלעדי אחזה אתה הרני אם-עול פעלתי לא אסיף | 32 |
ದೇವರೇ, ನಾನು ಕಾಣದಿರುವುದನ್ನು ನನಗೆ ಬೋಧಿಸಿರಿ. ನಾನು ತಪ್ಪುಮಾಡಿದ್ದರೂ, ಇನ್ನು ಮೇಲೆ ಅದನ್ನು ಮಾಡುವುದಿಲ್ಲ,’ ಎಂದು ಹೇಳಿದ್ದರೆ ಸರಿ.
המעמך ישלמנה כי-מאסת--כי-אתה תבחר ולא-אני ומה-ידעת דבר | 33 |
ಆದರೆ ನೀನು ಪಶ್ಚಾತ್ತಾಪಪಡಲು ನಿರಾಕರಿಸಿದಾಗ, ದೇವರು ನಿನಗೆ ತಕ್ಕ ದಂಡನೆಯನ್ನು ಕೊಡಬಾರದೆ? ಇದನ್ನು ನೀನೇ ತೀರ್ಮಾನಿಸು, ನಾನು ತೀರ್ಮಾನಿಸುವುದಿಲ್ಲ; ಆದ್ದರಿಂದ ನಿನಗೆ ತಿಳಿದದ್ದನ್ನು ನನಗೆ ತಿಳಿಸು.”
אנשי לבב יאמרו לי וגבר חכם שמע לי | 34 |
“ತಿಳುವಳಿಕೆಯುಳ್ಳವರೂ, ನನ್ನನ್ನು ಆಲಿಸಿದ ಜ್ಞಾನಿಗಳೂ ನಿನ್ನ ವಿಷಯವಾಗಿ:
איוב לא-בדעת ידבר ודבריו לא בהשכיל | 35 |
‘ಯೋಬನು ತಿಳುವಳಿಕೆಯಿಲ್ಲದೆ ಮಾತಾಡಿದ್ದಾನೆ; ಅವನ ಮಾತುಗಳು ಬುದ್ಧಿಯಿಲ್ಲದ ಮಾತುಗಳು.
אבי--יבחן איוב עד-נצח על-תשבת באנשי-און | 36 |
ಯೋಬನನ್ನು ಕಡೆಯವರೆಗೆ ಪರೀಕ್ಷಿಸಬೇಕೆಂದು ಬಯಸುತ್ತೇವೆ. ಏಕೆಂದರೆ ಅವನು ದುಷ್ಟರ ಹಾಗೆ ಉತ್ತರ ಕೊಡುತ್ತಾನೆ.
כי יסיף על-חטאתו פשע בינינו יספוק וירב אמריו לאל | 37 |
ಯೋಬನು ತನ್ನ ಪಾಪಕ್ಕೆ ದೇವರಿಗೆ ಎದುರಾಗಿ ಪ್ರತಿಭಟನೆಯನ್ನು ಸಹ ಕೂಡಿಸುತ್ತಿದ್ದಾನೆ; ಅಪಹಾಸ್ಯದಿಂದ ನಮ್ಮ ಮಧ್ಯದಲ್ಲಿ ಚಪ್ಪಾಳೆ ತಟ್ಟುತ್ತಾನೆ; ದೇವರಿಗೆ ವಿರುದ್ಧ ಹೆಚ್ಚು ಮಾತುಗಳನ್ನಾಡುತ್ತಾನೆ,’ ಎಂದು ನನಗೆ ಹೇಳುತ್ತಿದ್ದಾರೆ.”