< Ioba 16 >
1 A LAILA olelo mai la o Ioba, i mai la,
೧ಆಗ ಯೋಬನು ಹೀಗೆ ಉತ್ತರಕೊಟ್ಟನು,
2 He nui na mea like a'u i lohe ai: He poe hooluolu hoopilikia oukou a pau.
೨“ಇಂಥಾ ಮಾತುಗಳನ್ನು ಬಹಳವಾಗಿ ಕೇಳಿದ್ದೇನೆ, ನೀವೆಲ್ಲರೂ ಬೇಸರಿಕೆಯನ್ನು ಹುಟ್ಟಿಸುವ ಮಾತನಾಡುವಿರಿ. ಆದರಣೆಗೆ ಬದಲಾಗಿ ಬಾಧಿಸುವವರು ನೀವು.
3 He hope anei no na huaolelo makani? Heaha ka mea hoala mai nei ia oe, i olelo mai ai oe?
೩ನೀವಾಡುವ ಒಣಮಾತುಗಳಿಗೆ ಇತಿಮಿತಿ ಇಲ್ಲವೇ? ಇಂತಹ ಮಾತನಾಡಲು ಒತ್ತಾಯಪಡಿಸಿದ್ದೇನೆಯೇ?
4 E hiki no ia'u ke olelo aku e like me ka oukou; Ina paha ua noho oukou ma ko'u wahi. E hiki no ia'u ke hookui i ka olelo ku e ia oukou; A e hooluliluli aku i ko'u poo ia oukou.
೪ನಾನೂ ನಿಮ್ಮ ಹಾಗೆ ಮಾತನಾಡಬಲ್ಲೆನು; ನಾನು ನಿಮ್ಮಂತೆ ಇದ್ದಿದ್ದರೆ, ನಾನು ನಿಮ್ಮ ವಿರುದ್ಧವಾಗಿ ಮಾತುಗಳನ್ನು ಹೆಣೆದು ನಿಮ್ಮ ವಿಷಯದಲ್ಲಿ ತಲೆಯಾಡಿಸಬಹುದಾಗಿತ್ತು.
5 Aka, e hookupaa no au ia oukou me kuu waha, A o ka hooluolu ana o kuu lehelehe, e hoopaa aku no ia.
೫ನಾನೂ ಬಾಯಿಮಾತಿಗಾಗಿ ನಿಮ್ಮನ್ನು ಧೈರ್ಯಗೊಳಿಸಿ, ತುಟಿಗಳ ಆದರಣೆಯಿಂದ ನಿಮ್ಮ ದುಃಖವನ್ನು ಶಮನಪಡಿಸಬಹುದಾಗಿತ್ತು.
6 Ina e olelo aku au, aole e oluolu kuu eha; Ina e noho malie hoi au, pehea ia e haalele ai ia'u?
೬ನಾನು ಮಾತನಾಡಿದರೂ, ನನ್ನ ಮನೋವ್ಯಥೆಯು ಶಾಂತವಾಗುವುದಿಲ್ಲ. ಸುಮ್ಮನಾದರೂ, ಕಷ್ಟ ನಿವಾರಣೆಯಾಗುವುದಿಲ್ಲ.
7 Aka, ano ua hooluhi mai ia ia'u; Ua luku mai oe i ko'u ohana a pau.
೭ಆದರೆ ಈಗ ಆತನು ನನ್ನನ್ನು ಕುಂದಿಸಿದ್ದಾನೆ; (ದೇವಾ) ನೀನು ನನ್ನ ಬಳಗದವರನ್ನೆಲ್ಲಾ ಹಾಳು ಮಾಡಿದ್ದಿ.
8 Ua hoopaa mai oe ia'u, i mea hoike; O kuu wiwi, ke ku mai no ia ia'u, A e hoike mai imua o kuu maka.
೮ನೀನು ನನ್ನನ್ನು ಹಿಡಿದಿರುವುದು ನನಗೆ ಪ್ರತಿಸಾಕ್ಷಿಯಾಗಿದೆ, ನನ್ನ ಬಲಹೀನವು ನನ್ನ ವಿರುದ್ಧವಾಗಿ ನನ್ನ ಮುಖದ ಮುಂದೆ ಸಾಕ್ಷಿಕೊಡುತ್ತದೆ.
9 Ke haehae mai nei kona huhu, a ua inaina mai ia ia'u; Ke nau mai nei ia ia'u me kona mau niho; O kuu enemi, ke hookala nei ia i kona mau maka maluna o'u.
೯ಆತನ ಸಿಟ್ಟು ನನ್ನನ್ನು ಸೀಳಿ ಹಿಂಸಿಸುತ್ತಿದೆ; ಆತನು ನನ್ನ ಮೇಲೆ ಹಲ್ಲು ಕಡಿದಿದ್ದಾನೆ, ಆತನು ನನ್ನ ಮೇಲೆ ದೃಷ್ಟಿಯನ್ನು ತೀಕ್ಷ್ಣ ಮಾಡಿದ್ದಾನೆ.
10 Ua hamama lakou maluna o'u me ko lakou waha; Ua papai lakou ia'u ma ka papalina me ka hoino: Ua hoakoakoaia lakou ma kahi hookahi e ku e ia'u.
೧೦ನನಗೆ ವಿರುದ್ಧವಾಗಿ ಹಲವರು ಗುಂಪುಕೂಡಿ ನನ್ನನ್ನು ಅಣಕಿಸಿ ಛೀಮಾರಿ ಹಾಕಿ, ನನ್ನ ದವಡೆಯ ಮೇಲೆ ಬಡಿದಿದ್ದಾರೆ.
11 Ua hoolilo ke Akua ia'u i ka poe hewa, A ua haawi ia'u iloko o ka lima o ka poe aia.
೧೧ದೇವರು ನನ್ನನ್ನು ಅಪರಿಶುದ್ಧರಿಗೆ ಒಪ್ಪಿಸಿ, ದುಷ್ಟರ ಕೈಗೆ ಒಪ್ಪಿಸಿಬಿಟ್ಟಿದ್ದಾನೆ.
12 I noho maluhia la no wan, aka, ua ulupa mai nei ia ia'u; Ua lalau mai ia ma kuu a-i, a ulupa mai no ia ia'u, Ua hooku mai ia'u i hoailona nona.
೧೨ನಾನು ನೆಮ್ಮದಿಯಿಂದಿದ್ದಾಗ ಆತನು ನನ್ನನ್ನು ಒಡೆದು ಹಾಕಿದನು; ಕತ್ತುಹಿಡಿದು ನನ್ನನ್ನು ಚೂರು ಚೂರು ಮಾಡಿದನು. ಬಾಣ ಪ್ರಯೋಗಿಸಲು ನನ್ನನ್ನು ಗುರಿಮಾಡಿಕೊಂಡಿದ್ದಾನೆ.
13 Ua hoopuni kona poe panapua ia'u, Ua wahi mai ia i na puupaa o'u, aole e hookuu ae; Ua ninini iho ia i kuu au ma ka honua.
೧೩ಆತನ ಬಾಣಗಳು ನನ್ನನ್ನು ಮುತ್ತಿಕೊಂಡಿವೆ. ಆತನು ಕರುಣೆಯಿಲ್ಲದೆ ನನ್ನ ಅಂತರಂಗವನ್ನು ಇರಿದು, ಭೂಮಿಯ ಮೇಲೆ ನನ್ನ ಪಿತ್ತವನ್ನು ಸುರಿಸುತ್ತಾನೆ.
14 Ua wawahi roai ia ia'u, me ka wahi ana mahope o ka wahi ana, Ua lele mai ia maluna o'u me he mea ikaika la.
೧೪ಮೇಲಿಂದ ಮೇಲೆ ನನಗೆ ಪೆಟ್ಟುಕೊಟ್ಟು ನನ್ನನ್ನು ಶಕ್ತಿಹೀನನಾಗಿ ಮಾಡಿದ್ದಾನೆ ಶೂರನ ಹಾಗೆ ನನ್ನ ಮೇಲೆ ಎರಗುತ್ತಾನೆ.
15 Ua humuhumu au i ke kapa ino maluna o kuu ili, Ua hoohaumia au i kuu pepeiaohao iloko o ka lepo.
೧೫ಗೋಣಿಯನ್ನು ಹೊಲೆದು ಮೈಮೇಲೆ ಹಾಕಿಕೊಂಡಿದ್ದೇನೆ; ನನ್ನ ಕೊಂಬನ್ನು ಧೂಳಿನಲ್ಲಿ ತಗ್ಗಿಸಿಕೊಂಡಿದ್ದೇನೆ.
16 Ua ulaula kuu maka i ka uwe ana, A maluna o ko'u mau lihilihi maka ke aka o ka make.
೧೬ಕಣ್ಣೀರು ಸುರಿಯುವುದರಿಂದ ನನ್ನ ಮುಖವು ಕೆಂಪಾಗಿ ಹೋಗಿದೆ. ರೆಪ್ಪೆಯ ಮೇಲೆ ಮರಣಾಂಧಕಾರವು ಕವಿದಿದೆ.
17 Aole no ka mea pono ole iloko o ko'u lima; A o ka'u pule, ua maemae hoi ia.
೧೭ಆದರೆ ನನ್ನ ಕೈ ಯಾವ ಬಲಾತ್ಕಾರವನ್ನೂ ಮಾಡಿಲ್ಲವಲ್ಲಾ, ನನ್ನ ವಿಜ್ಞಾಪನೆಯು ನಿರ್ಮಲವಾದದ್ದು.
18 E ka honua, mai uhi oe i ko'u koko, Aole hoi e haawi i wahi no kuu uwe ana.
೧೮ಭೂಮಿಯೇ, ನನ್ನ ರಕ್ತವನ್ನು ಮುಚ್ಚಬೇಡ! ನನ್ನ ಮೊರೆಗೆ ಬಿಡುವು ಸಿಕ್ಕದಿರಲಿ!
19 Ano hoi, aia ma ka lani kuu mea ike maka, A o kuu mea hoike ma na wahi kiekie.
೧೯ಆಹಾ, ಈಗಲೂ ನನ್ನ ಕಡೆಯ ಸಾಕ್ಷಿಯು ಆಕಾಶದಲ್ಲಿ ಉಂಟು, ನನ್ನ ಪಕ್ಷದ ಹೊಣೆಗಾರನು ಮೇಲಣ ಲೋಕದಲ್ಲಿದ್ದಾನೆ.
20 O kuu poe hoino, o ko'u mau makamaka no ia: Ke hu aku nei kuu maka i ke Akua.
೨೦ಗೆಳೆಯರೋ ನನ್ನನ್ನು ಹೀನೈಸುವವರಾಗಿದ್ದಾರೆ, ನಾನಾದರೋ ದೇವರ ಮುಂದೆ ಕಣ್ಣೀರು ಸುರಿಸುತ್ತಿರುವೆನು.
21 Ina he mea e uwao me ke Akua no ke kanaka, E like me ke kanaka no kona hoalauna!
೨೧ನನ್ನ ನ್ಯಾಯವನ್ನು ದೇವರ ಮುಂದೆಯೂ, ಮಾನವನ ನ್ಯಾಯವನ್ನು ಅವನ ಮಿತ್ರನ ಮುಂದೆಯೂ ಸ್ಥಾಪಿಸಲಿ ಎಂದು ದೇವರಿಗೆ ಕಣ್ಣೀರು ಸುರಿಸುತ್ತೇನೆ.
22 A hala he hapa na makahiki, Alaila e hele aku au i ke ala aole au e hoi hou mai.
೨೨ನಾನು ಹಿಂದಿರುಗದ ದಾರಿಯನ್ನು, ಕೆಲವು ವರ್ಷಗಳೊಳಗೆ ಹಿಡಿಯುವೆನು.”