< II Oihanaalii 25 >
1 O AMAZIA, he iwakaluakumamalima makahiki ona i kona wa i alii ai, a noho alii iho la ia i na makahiki he iwakaluakumamaiwa ma Ierusalema; a o ka inoa o kona makuwahine o Iehoadama no Ierusalema.
೧ಅಮಚ್ಯನು ಪಟ್ಟಕ್ಕೆ ಬಂದಾಗ ಇಪ್ಪತ್ತೈದು ವರ್ಷದವನಾಗಿದ್ದನು. ಅವನು ಯೆರೂಸಲೇಮಿನಲ್ಲಿ ಇಪ್ಪತ್ತೊಂಭತ್ತು ವರ್ಷ ಆಳ್ವಿಕೆ ಮಾಡಿದನು. ಯೆರೂಸಲೇಮಿನವಳಾದ ಯೆಹೋವದ್ದಾನ್ ಎಂಬಾಕೆಯು ಅವನ ತಾಯಿ.
2 Hana iho la ia i ka mea maikai i na maka o Iehova, aole nae me ka naau maikai.
೨ಅವನು ಯೆಹೋವನ ಚಿತ್ತಾನುಸಾರವಾಗಿ ನಡೆದನು; ಆದರೆ ಯಥಾರ್ಥಚಿತ್ತನಾಗಿರಲಿಲ್ಲ.
3 A paa ia ma kona aupuni, pepehi iho la ia i kana poe kauwa nana i pepehi i kona makuakane, i ke alii.
೩ಅವನು ರಾಜ್ಯವನ್ನು ಭದ್ರಪಡಿಸಿಕೊಂಡ ಕೂಡಲೆ ತನ್ನ ತಂದೆಯನ್ನು ಕೊಂದ ಸೇವಕರನ್ನು ಕೊಲ್ಲಿಸಿದನು.
4 Aole oia i pepehi i ka lakou poe keiki, aka, hana oia e like me ka mea i kakauia iloko o ke kanawai, ma ka buke a Mose, kahi a Iehova i kauoha mai ai, i mai la, Aole e make na makua no na keiki, aole hoi e make na keiki no na makua, aka, e make no kela kanaka keia kanaka no kona hewa iho.
೪ಆದರೆ, “ಮಕ್ಕಳ ಪಾಪದ ದೆಸೆಯಿಂದ ತಂದೆಗೂ ತಂದೆಯ ಪಾಪದ ದೆಸೆಯಿಂದ ಮಕ್ಕಳಿಗೂ ಮರಣ ಶಿಕ್ಷೆಯಾಗಬಾರದು; ಪ್ರತಿಯೊಬ್ಬನೂ ತನ್ನ ಪಾಪದ ಫಲವನ್ನು ತಾನೇ ಅನುಭವಿಸಬೇಕು” ಎಂಬುದಾಗಿ ಮೋಶೆಯ ಧರ್ಮಶಾಸ್ತ್ರದಲ್ಲಿರುವ ಯೆಹೋವನ ಅಪ್ಪಣೆಯನ್ನು ನೆನಪು ಮಾಡಿಕೊಂಡು ಅವರ ಮಕ್ಕಳನ್ನು ಕೊಲ್ಲಿಸಲಿಲ್ಲ.
5 A hoakoakoa Amazia i ka Iuda, a hoonoho ia lakou ma ko ka hale o na makua, i poe luna no na tausani, a i poe luna no ua haneri, no ka Iuda a pau a me ka Beniamina: a helu oia ia lakou mai ka makahiki iwakalua aku, a loaa ia ia ekolu haneri tausani kanaka i waeia, ka poe hiki ke hele i ke kaua, ka poe i makaukau i ka ihe a me ka palekaua.
೫ಆಮೇಲೆ ಅಮಚ್ಯನು ಯೆಹೂದ್ಯರನ್ನು ಒಟ್ಟಾಗಿ ಸೇರಿಸಿ ಸಹಸ್ರಾಧಿಪತಿ, ಶತಾಧಿಪತಿಗಳ ಕೈಕೆಳಗೆ ಯೆಹೂದ ಮತ್ತು ಬೆನ್ಯಾಮೀನ್ ಕುಲಗಳಲ್ಲಿ ಆಯಾ ಗೋತ್ರಗಳ ಪ್ರಕಾರ ಅವರನ್ನು ನಿಲ್ಲಿಸಿ, ಇಪ್ಪತ್ತು ವರ್ಷಕ್ಕೆ ಮೇಲ್ಪಟ್ಟವರನ್ನು ಲೆಕ್ಕ ಮಾಡಿಸಿದನು. ಅವರಲ್ಲಿ ಬರ್ಜಿ ಗುರಾಣಿಗಳನ್ನು ಹಿಡಿದುಕೊಂಡು ಯುದ್ಧಕ್ಕೆ ಹೊರಡತಕ್ಕ ಶೂರರು ಮೂರು ಲಕ್ಷ ಮಂದಿ ಸಿಕ್ಕಿದರು.
6 A hoolimalima no hoi oia noloko mai o ka Iseraela i hookahi haneri tausani koa ikaika no na talena kala hookahi haneri.
೬ಇದಲ್ಲದೆ ಅವನು ನೂರು ತಲಾಂತು ಬೆಳ್ಳಿಯನ್ನು ಕೊಟ್ಟು, ಇಸ್ರಾಯೇಲರಿಂದಲೂ ಲಕ್ಷ ಮಂದಿ ಭಟರನ್ನು ತರಿಸಿದನು.
7 A hele mai io na la ke kanaka o ke Akua, i mai la, E ke alii, aole pono e hele pu me oe ka poe koa o ka Iseraela; no ka mea, aole o Iehova pu me ka Iseraela, me na mamo a pau a Eperaima.
೭ಆಗ ದೇವರ ಮನುಷ್ಯನೊಬ್ಬನು ಅವನ ಬಳಿಗೆ ಬಂದು ಅವನಿಗೆ, “ಅರಸನೇ, ಇಸ್ರಾಯೇಲ್ ಸೈನ್ಯದವರು ನಿನ್ನ ಜೊತೆಯಲ್ಲಿ ಯುದ್ಧಕ್ಕೆ ಹೋಗಬಾರದು. ಯೆಹೋವನು ಎಫ್ರಾಯೀಮ್ಯರಾದ ಇಸ್ರಾಯೇಲರನ್ನೆಲ್ಲಾ ಕೈಬಿಟ್ಟಿದ್ದಾನೆ.
8 Aka, ina e hele no oe, e hana no pela, e ikaika hoi i ke kaua; aka, e oupe mai ke Akua ia oe imua o ka enemi; no ka mea, aia i ke Akua ka mana e kokua mai ai, a e hoohina mai ai no hoi.
೮ನೀನೇ ಹೋಗಿ ಆ ಕಾರ್ಯವನ್ನು ನಿರ್ವಹಿಸು; ಧೈರ್ಯದಿಂದ ಯುದ್ಧಮಾಡು. ಹಾಗೆ ಮಾಡದಿದ್ದರೆ ದೇವರು ಶತ್ರುಗಳಿಂದ ನೀನು ಅಪಜಯಹೊಂದುವಂತೆ ಮಾಡುವನು, ಜಯಾ, ಅಪಜಯಗಳನ್ನು ಉಂಟುಮಾಡುವುದಕ್ಕೆ ಆತನು ಶಕ್ತನಾಗಿರುತ್ತಾನಲ್ಲವೆ?” ಎಂದನು.
9 Olelo aku la o Amazia i ke kanaka o ke Akua, Heaha ka makou e hana'i no kela mau talena hookahi haneri a'u i haawi aku ai na ka poe koa o ka Iseraela? I mai la ke kanaka o ke Akua, E hiki no ia Iehova ke haawi mai ia oe a nui e aku i keia.
೯ಅಮಚ್ಯನು ದೇವರ ಮನುಷ್ಯನನ್ನು, “ಹಾಗಾದರೆ ನಾನು ಇಸ್ರಾಯೇಲ್ ಸೈನ್ಯಕ್ಕೋಸ್ಕರ ನೂರು ತಲಾಂತುಗಳನ್ನು ಕೊಟ್ಟ ವಿಷಯದಲ್ಲಿ ನಾನೇನು ಮಾಡಬೇಕು?” ಎಂದು ಕೇಳಲು ಅವನು, “ಯೆಹೋವನು ಅದಕ್ಕಿಂತ ಎಷ್ಟೋ ಹೆಚ್ಚಾಗಿ ನಿನಗೆ ಕೊಡಬಲ್ಲನು” ಎಂದನು.
10 Alaila, hookaawale ae la o Amazia i ka poe koa i hele mai io na la, mailoko mai o Eperaima e hele i ko lakou wahi; a ua nui loa mai la ko lakou huhu i ka Iuda, a hoi lakou i ko lakou wahi me ka huhu wela.
೧೦ಆಗ ಅಮಚ್ಯನು ಎಫ್ರಾಯೀಮ್ಯ ರಿಂದ ಬಂದ ಸೈನಿಕರನ್ನು ಬೇರೆ ಮಾಡಿ, ಅವರನ್ನು ಅವರ ದೇಶಕ್ಕೆ ಕಳುಹಿಸಿದನು. ಅವರು ಯೆಹೂದ್ಯರ ಮೇಲೆ ಬಹಳ ಕೋಪಗೊಂಡು ತಮ್ಮ ದೇಶಕ್ಕೆ ಹೊರಟು ಹೋದರು.
11 A hooikaika iho la o Amazia, a alakai i kona poe kanaka, a hele aku la i ke awawa paakai, a luku iho la i ko Seira he ami tausani.
೧೧ಅಮಚ್ಯನಾದರೋ ಧೈರ್ಯದಿಂದ ತನ್ನ ಸೈನ್ಯವನ್ನು ಕರೆದುಕೊಂಡು, ಉಪ್ಪಿನ ತಗ್ಗಿಗೆ ಹೋಗಿ ಸೇಯೀರ್ಯರಲ್ಲಿ ಹತ್ತು ಸಾವಿರ ಮಂದಿಯನ್ನು ಕೊಂದುಹಾಕಿದನು.
12 A lawe pio na mamo a Iuda i na kanaka he umi tausani e ola ana, a laweia lakou ma kahi pali, a hoolei aku ia lakou ilalo mai luna aku o ka pali, a pau lakou i ka weluwelu.
೧೨ಯೆಹೂದ್ಯರು ಬೇರೆ ಹತ್ತು ಸಾವಿರ ಮಂದಿಯನ್ನು ಜೀವಸಹಿತವಾಗಿ ಹಿಡಿದು, ಕಡಿದಾದ ಬಂಡೆಯ ತುದಿಗೆ ಒಯ್ದು, ಅವರೆಲ್ಲರೂ ಚೂರು ಚೂರಾಗುವ ಹಾಗೆ ಅವರನ್ನು ಕೆಳಕ್ಕೆ ದೊಬ್ಬಿದರು.
13 A o ka poe koa a Amazia i hoihoi aku ai, i hele ole lakou me ia i ke kaua, hana ino lakou ma na kulanakauhale o Iuda mai Samaria a hiki i Betehorona, a luku iho la lakou i ekolu tausani kanaka, a lawe aku i ka waiwai pio he nui loa.
೧೩ಅಷ್ಟರಲ್ಲಿ ಅಮಚ್ಯನು ತನ್ನ ಜೊತೆಯಲ್ಲಿ ಯುದ್ಧಕ್ಕೆ ಬರಬಾರದೆಂದು ಹಿಂದಕ್ಕೆ ಕಳುಹಿಸಿದ ಗುಂಪಿನವರು ಸಮಾರ್ಯಕ್ಕೂ ಬೇತ್ಹೋರೋನಿಗೂ ಮಧ್ಯದಲ್ಲಿರುವ ಯೆಹೂದ ಪಟ್ಟಣಗಳ ಮೇಲೆ ದಾಳಿಮಾಡಿ ಮೂರು ಸಾವಿರ ಜನರನ್ನು ಕೊಂದು, ದೊಡ್ಡ ಕೊಳ್ಳೆಯನ್ನು ತೆಗೆದುಕೊಂಡು ಹೋದರು
14 A hoi mai o Amazia mai ka luku ana i ka Edoma, hali mai oia i na akua o ko Seira, a kukulu ae la ia mau mea iluna i akua nona, a kulou ia imua o lakou, a kuni i ka mea ala ia lakou.
೧೪ಅಮಚ್ಯನು ಎದೋಮ್ಯರನ್ನು ಸೋಲಿಸಿ ಮನೆಗೆ ಬಂದ ಮೇಲೆ, ತಾನು ತೆಗೆದುಕೊಂಡು ಬಂದಿದ್ದ ಸೇಯೀರಿನವರ ದೇವತಾಪ್ರತಿಮೆಗಳನ್ನು ತನ್ನ ದೇವರುಗಳೆಂದು ಪ್ರತಿಷ್ಠಿಸಿ ಅವುಗಳಿಗೆ ಅಡ್ಡಬಿದ್ದು ಧೂಪ ಹಾಕುತ್ತಿದ್ದನು.
15 A ua hoaa mai la ka huhu o Iehova ia Amazia, a hoouna mai oia io na la i ke kaula, e olelo mai ia ia, No ke aha la oe i imi ai i na akua o na kanaka, na mea i hiki ole ke hoopakele i ko lakou poe kanaka, mai kou lima aku.
೧೫ಆಗ ಯೆಹೋವನು ಅಮಚ್ಯನ ಮೇಲೆ ಬಹಳವಾಗಿ ಕೋಪಗೊಂಡು, ಅವನ ಬಳಿಗೆ ಪ್ರವಾದಿಯನ್ನು ಕಳುಹಿಸಿ ಅವನಿಗೆ, “ನಿನ್ನ ಕೈಯಿಂದ ನಿನ್ನ ಜನರನ್ನು ರಕ್ಷಿಸಲಾರದೆ ಹೋದ ಅನ್ಯದೇವತೆಗಳಲ್ಲಿ ಏಕೆ ಇಷ್ಟು ಭಕ್ತಿ?” ಎಂದು ಕೇಳಿದನು.
16 A i kana olelo ana i ke alii, i mai kela ia ia, Ua hooliloia anei oe i kakaolelo no ke alii? Ua oki; no ke aha la oe e pepehiia iho ai? Alaila, hooki iho la ua kaula la me ka olelo ana mai, Ua ike au, ua paa ko ke Akua manao e pepehi mai ia oe, no ka mea, ua hana oe i keia, aole i hoolohe mai oe i ka'u olelo.
೧೬ಆ ಮಾತನ್ನು ಹೇಳಿದ ಪ್ರವಾದಿಗೆ ಅರಸನು, “ನಿನ್ನನ್ನು ನನಗೆ ಆಲೋಚನಾಮಂತ್ರಿಯನ್ನಾಗಿ ನೇಮಿಸಿದವರು ಯಾರು?; ಸುಮ್ಮನಿರು, ನಿನಗೆ ಪೆಟ್ಟು ಬೇಕೋ?” ಎಂದನು. ಅವನು, “ನೀನು ನನ್ನ ಬುದ್ಧಿವಾದವನ್ನು ಆಲಿಸದೆ ಹೀಗೆ ಮಾಡುತ್ತಿರುವುದರಿಂದ ದೇವರು ನಿನ್ನನ್ನು ನಾಶ ಮಾಡಬೇಕೆಂದು ನಿಶ್ಚಯಿಸಿಕೊಂಡಿದ್ದಾನೆ ಎಂಬುದನ್ನು ನಾನು ಬಲ್ಲೆ” ಎಂದು ಹೇಳಿ ಸುಮ್ಮನಾದನು.
17 A kukakuka iho la o Amazia ke alii o Iuda, a hoouna aku oia io Ioasa la ke keiki a Iehoahaza, ke keiki a Iehu, ke alii o ka Iseraela, i aku la, Ina kaua, e nana kaua he inaka no he maka.
೧೭ಅನಂತರ ಯೆಹೂದದ ಅರಸನಾದ ಅಮಚ್ಯನು ಸಮಾಲೋಚನೆ ನಡೆಸಿ, ಯೇಹುವಿನ ಮೊಮ್ಮಗನೂ, ಯೆಹೋವಾಹಾಜನ ಮಗನೂ, ಇಸ್ರಾಯೇಲರ ಅರಸನೂ ಆದ ಯೋವಾಷನಿಗೆ, “ನಾವು ಒಬ್ಬರನ್ನೊಬ್ಬರು ಎದುರುಗೊಳ್ಳೋಣ” ಎಂದು ದೂತರ ಮುಖಾಂತರವಾಗಿ ಹೇಳಿ ಕಳುಹಿಸಿದನು.
18 Hoouna mai la o Ioasa ke alii o ka Iseraela io Amazia la, ke alii o ka Iuda, i mai la, Hoouna ke kakalaioa ma Lebanona i ka laau kedera ma Lebanona, i aku la, E haawi mai oe i kau kaikamahine na ka'u keiki i wahine nana; a hele ae la kekahi holoholona o ke kula ma Lebanona, a hehi iho la maluna o ke kakalaioa.
೧೮ಆಗ ಇಸ್ರಾಯೇಲರ ಅರಸನಾದ ಯೋವಾಷನು ಯೆಹೂದ್ಯರ ಅರಸನಾದ ಅಮಚ್ಯನಿಗೆ, “ಲೆಬನೋನಿನ ಒಂದು ಮುಳ್ಳುಗಿಡವು, ಅಲ್ಲಿನ ದೇವದಾರು ಮರಕ್ಕೆ, ‘ನನ್ನ ಮಗನಿಗೆ ನಿನ್ನ ಮಗಳನ್ನು ಕೊಡು’ ಎಂದು ಹೇಳಿ ಕಳುಹಿಸಿತು. ತುಸು ಹೊತ್ತಾದ ಮೇಲೆ ಲೆಬನೋನಿನ ಒಂದು ಕಾಡುಮೃಗವು ಆ ಮಾರ್ಗವಾಗಿ ಹಾದು ಹೋಗುತ್ತಿರುವಾಗ, ಆ ಮುಳ್ಳುಗಿಡವನ್ನು ತುಳಿದು ಬಿಟ್ಟಿತು.
19 Olelo mai oe, Aia hoi ua luku au i ka Edoma, a ua kiekie kou naau me ke kaena ana. E noho malie oe ma ka hale; no ke aha la oe e hakaka mai ai, i pono ole ai oe, a haule oe, o oe, a me ka Iuda a pau pu me oe?
೧೯ಅಹಹ! ಎದೋಮ್ಯರನ್ನು ಸೋಲಿಸಿ ಬಹಳ ಕೀರ್ತಿಯನ್ನು ಪಡಕೊಂಡೆ, ಎಂದು ನೀನು ಹೆಮ್ಮೆಪಡುತಿರುವೆ; ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳಬಾರದೇ? ನನ್ನನ್ನು ಕೆಣಕಿ ನಿನಗೂ ನಿನ್ನ ಯೆಹೂದ ರಾಜ್ಯಕ್ಕೂ ಏಕೆ ಕೇಡನ್ನು ತಂದುಕೊಳ್ಳುವೆ” ಎಂದು ಉತ್ತರಕೊಟ್ಟನು.
20 Aole i hoolohe o Amazia; no ka mea, na ke Akua mai ia, i haawi uia ia lakou iloko o ka lima o ka lakou poe enemi, no ka mea, ua imi lakou i na akua o ka Edoma.
೨೦ಅಮಚ್ಯನು ಆ ಮಾತನ್ನು ಲಕ್ಷಿಸಲಿಲ್ಲ; ಅದು ದೇವರ ಸಂಕಲ್ಪದಿಂದಲೇ ಆಯಿತು. ಯೆಹೂದ್ಯರು ಎದೋಮ್ಯರ ದೇವತೆಗಳಲ್ಲಿ ಭಕ್ತಿಯನ್ನಿಟ್ಟದ್ದರಿಂದ ಅವರನ್ನು ಅಪಜಯ ಮಾಡಬೇಕೆಂದು ಯೆಹೋವನು ನಿರ್ಣಯಿಸಿದ್ದನು.
21 Pela i pii aku ai o Ioasa ke alii o ka Iseraela, a nana laua he maka no he maka, oia a me Amazia ke alii o ka Iuda ma Betesemesa, aia uo ma Iuda.
೨೧ಇಸ್ರಾಯೇಲರ ಅರಸನಾದ ಯೋವಾಷನು ಯುದ್ಧಕ್ಕೆ ಹೊರಟನು; ಅವನೂ ಯೆಹೂದದ ಅರಸನಾದ ಅಮಚ್ಯನೂ ಯೆಹೂದ ಪ್ರಾಂತ್ಯದ ಬೇತ್ಷೆಮೆಷಿನಲ್ಲಿ ಒಬ್ಬರನ್ನೊಬ್ಬರು ಎದುರುಗೊಂಡರು.
22 A ua lukuia ka Iuda imua o ka Iseraela, a auhee aku la kela kanaka, keia kanaka i kona halelewa.
೨೨ಯೆಹೂದ್ಯರು ಇಸ್ರಾಯೇಲ್ಯರಿಗೆ ಸೋತು ತಮ್ಮ ತಮ್ಮ ನಿವಾಸಗಳಿಗೆ ಓಡಿಹೋದರು.
23 A lawe pio o Ioasa ke alii o ka Iseraela ia Amazia ke alii o ka Iuda, ke keiki a Ioasa, ke keiki a Iehoahaza ma Betesemesa, a lawe ia ia i Ierusalema; a wawahi ia i ka pa o Ierusalema mai ka puka o Eperaima a i ka puka o ke kihi, eha haneri kubita.
೨೩ಇಸ್ರಾಯೇಲರ ಅರಸನಾದ ಯೋವಾಷನು, ಯೆಹೋವಾಹಾಜನ ಮೊಮ್ಮಗನೂ, ಯೆಹೋವಾಷನ ಮಗನೂ, ಯೆಹೂದದ ಅರಸನೂ, ಆದ ಅಮಚ್ಯನನ್ನು ಬೇತ್ಷೆಮೆಷಿನಲ್ಲಿ ಸೆರೆ ಹಿಡಿದನು. ಅವನನ್ನು ಯೆರೂಸಲೇಮಿಗೆ ಕರೆದುಕೊಂಡು ಬಂದು, ಎಫ್ರಾಯೀಮಿನ ಮುಂಬಾಗಿಲಿಗೂ, ಮೂಲೆಯ ಬಾಗಿಲಿಗೂ ಮಧ್ಯದಲ್ಲಿದ್ದ ಯೆರೂಸಲೇಮಿನ ಗೋಡೆಯನ್ನು ನಾನೂರು ಮೊಳದಷ್ಟು ಕೆಡವಿಹಾಕಿದ್ದಲ್ಲದೆ,
24 A lawe aku ia i ke gula a pau, a me ke kala, a me na kiaha a pau i loaa ia ia iloko o ka hale o ke Akua me Obededoma, a me ka waiwai o ka hale o ke alii, a me na mea e paa ana me he poe panai la, a hoi aku la i Samaria.
೨೪ಅವನು ಓಬೇದೆದೋಮನ ವಶದಲ್ಲಿದ್ದ ದೇವಾಲಯದ ಎಲ್ಲ ಬೆಳ್ಳಿಬಂಗಾರವನ್ನು, ಪಾತ್ರೆಗಳನ್ನು, ಅರಸನ ಅರಮನೆಯ ಭಂಡಾರಗಳಲ್ಲಿದ್ದುದೆಲ್ಲವನ್ನು ತೆಗೆದುಕೊಂಡು, ಹೊಣೆಗಾರರಾದ ಕೆಲವರನ್ನು ಸೆರೆ ಹಿಡಿದು ಸಮಾರ್ಯಕ್ಕೆ ಹಿಂದಿರುಗಿದನು.
25 A ola o Amazia ke keiki a Ioasa, ke alii o ka Iuda, mahope o ka make ana o Ioasa, ke keiki a Iehoahaza ke alii o ka Iseraela, he umi a me kumamalima makahiki.
೨೫ಇಸ್ರಾಯೇಲರ ಅರಸನೂ ಯೆಹೋವಾಹಾಜನ ಮಗನೂ ಆದ ಯೋವಾಷನು ಸತ್ತ ನಂತರ, ಯೆಹೂದದ ಅರಸನಾದ ಯೆಹೋವಾಷನ ಮಗ ಅಮಚ್ಯನು ಇನ್ನೂ ಹದಿನೈದು ವರ್ಷ ಬದುಕಿದ್ದನು.
26 A o ke koena o na hana a Amazia, ka mua a me ka hope, aole anei i kakauia'i ia mau mea ma ka buke no na'lii o ka Iuda, a me ka Iseraela?
೨೬ಅಮಚ್ಯನ ಉಳಿದ ಪೂರ್ವೋತ್ತರ ಚರಿತ್ರೆಯು ಯೆಹೂದ್ಯರ ಮತ್ತು ಇಸ್ರಾಯೇಲರ ರಾಜರ ಗ್ರಂಥಗಳಲ್ಲಿ ಬರೆಯಲ್ಪಟ್ಟಿವೆ.
27 A mai ka wa mai o ko Amazia huli ana ae mai Iehova aku, ohumu ku e ka poe ma Ierusalema ia ia, a mahuka aku la ia i Lakisa; a hoouna lakou i Lakisa, a pepehi lakou ia ia malaila.
೨೭ಅಮಚ್ಯನು ಯೆಹೋವನನ್ನು ತ್ಯಜಿಸಿದ್ದರಿಂದ ಯೆರೂಸಲೇಮಿನವರು ಅವನಿಗೆ ವಿರುದ್ಧವಾಗಿ ಒಳಸಂಚು ಮಾಡುತ್ತಿದ್ದರು. ಆದ್ದರಿಂದ ಅವನು ಲಾಕೀಷಿಗೆ ಓಡಿಹೋದನು; ಆದರೆ ಅವರು ಆಳುಗಳನ್ನು ಕಳುಹಿಸಿ ಅವನನ್ನು ಅಲ್ಲಿಯೇ ಕೊಲ್ಲಿಸಿದರು.
28 A hali mai lakou ia ia maluna o na lio, a kanu lakou ia ia me kona poe kupuna ma ke kulanakauhale o Iuda.
೨೮ಅವನ ಜನರು ಆ ಶವವನ್ನು ಕುದುರೆಯ ಮೇಲೆ ಯೆರೂಸಲೇಮ್ ಪಟ್ಟಣಕ್ಕೆ ತಂದು ಯೆಹೂದದ ರಾಜಧಾನಿಯೊಳಗೆ ಅವನ ಪೂರ್ವಿಕರ ಸ್ಮಶಾನದಲ್ಲಿ ಸಮಾಧಿಮಾಡಿದರು.