< Nehemiya 4 >

1 Da Sanballat ya ji cewa muna sāke ginin katangar, sai ya husata, ya haukace ƙwarai. Ya yi wa Yahudawa dariya,
ನಾವು ಪೌಳಿಗೋಡೆಯನ್ನು ಕಟ್ಟುತ್ತಿದ್ದ ಸುದ್ದಿಯು ಸನ್ಬಲ್ಲಟನಿಗೆ ಗೊತ್ತಾದಾಗ ಅವನು ಬಹಳ ಹೊಟ್ಟೆಕಿಚ್ಚಿನಿಂದ ಕೋಪಗೊಂಡು ಯೆಹೂದ್ಯರನ್ನು ಗೇಲಿ ಮಾಡಿದನು.
2 a gaban abokansa da kuma sojojin Samariya ya ce, “Me waɗancan Yahudawan nan marasa ƙarfi suke yi? Za su maido da katangarsu ne? Za su miƙa hadayu ne? Za su gama a rana ɗaya? Za su iya samun duwatsun gini daga tsibin matattun duwatsu?”
ತನ್ನ ಸಹೋದರರ ಮತ್ತು ಸಮಾರ್ಯದ ಸೈನ್ಯದವರ ಮುಂದೆಯೂ, “ಬಲಹೀನರಾದ ಈ ಯೆಹೂದ್ಯರು ಮಾಡುವುದೇನು? ಇವರು ತಮ್ಮನ್ನು ಬಲಪಡಿಸಿಕೊಳ್ಳಬೇಕೆಂದಿರುವರೋ? ಯಜ್ಞವನ್ನರ್ಪಿಸುವರೋ? ಈ ದಿನವೇ ಈ ಕೆಲಸವನ್ನು ಮುಗಿಸುವರೇನು? ಸುಟ್ಟುಹೋದ ಪಟ್ಟಣದ ಧೂಳಿನ ರಾಶಿಯೊಳಗೆ ಹುಗಿದುಹೋದ ಕಲ್ಲುಗಳನ್ನು ಬದುಕಿಸಲೂ ಸಾಧ್ಯವೇ?” ಎಂದು ಹೇಳಿದನು.
3 Tobiya wakilin mutanen Ammon wanda yake a gefensa ya ce, “Abin nan da suke gini, ko dila ma ya hau, zai rushe shi!”
ಅವನ ಬಳಿಯಲ್ಲಿ ನಿಂತಿದ್ದ ಅಮ್ಮೋನಿಯಾದ ಟೋಬೀಯನು, “ಅವರು ಹೇಗೆ ಕಟ್ಟಿದ್ದರೂ ಅವರು ಕಟ್ಟುವ ಕಲ್ಲುಗೋಡೆಯ ಮೇಲೆ ನರಿ ಹಾರಿದರೆ ಅದು ಉರುಳಿ ಬಿದ್ದು ಹೋಗುವುದು” ಎಂದನು.
4 Ka ji mu, ya Allahnmu, gama an rena mu. Bari zagin da suke yi mana yă koma kansu. Ka sa a kwashe su a kai su bauta a wata ƙasa.
ನಮ್ಮ ದೇವರೇ ಕೇಳು, ಅವರು ನಮ್ಮನ್ನು ಎಷ್ಟು ಹೀಯಾಳಿಸುತ್ತಿದ್ದಾರೆ! ಈ ನಿಂದೆಯನ್ನು ಅವರ ತಲೆಯ ಮೇಲೆಯೇ ಬರಮಾಡು. ಅವರು ದೇಶಭ್ರಷ್ಟರಾಗಿ ಸೂರೆಹೋಗುವಂತೆ ಮಾಡು.
5 Kada ka rufe laifinsu, kada kuwa ka gafarta musu, gama sun ci mutuncinmu, mu da muke gini.
ಅವರ ಅಪರಾಧವನ್ನು ಕ್ಷಮಿಸಬೇಡ; ನಿನ್ನೆದುರಿಗಿರುವ ಅವರ ಅಪರಾಧವನ್ನು ಅಳಿಸಿಬಿಡಬೇಡ. ಕಟ್ಟುವವರ ಮುಂದೆಯೇ ಅವರು ನಿನ್ನನ್ನು ಕೆಣಕಿ ಕೋಪಗೊಳಿಸಿದ್ದಾರಲ್ಲಾ.
6 Sai muka sāke ginin katangar sai da duka ta kai rabin tsayinta, gama mutane sun yi aiki da dukan ƙarfinsu.
ಆದರೂ ನಾವು ಕಟ್ಟುವ ಕೆಲಸವನ್ನು ಮುಂದುವರಿಸಿದೆವು. ಜನರು ಅದಕ್ಕೆ ಮನಸ್ಸು ಕೊಟ್ಟಿದ್ದರಿಂದ ಗೋಡೆಯೆಲ್ಲಾ ಅರ್ಧ ಎತ್ತರದವರೆಗೂ ಸಮನಾಗಿ ಕಟ್ಟಲಾಯಿತು.
7 Amma da Sanballat, da Tobiya, da Larabawa, da Ammonawa, da kuma mutanen Ashdod suka ji cewa gyare-gyaren katangar Urushalima yana cin gaba, ana kuma tattoshe wuraren da suka tsattsaga, sai suka husata ƙwarai.
ಸನ್ಬಲ್ಲಟನೂ, ಟೋಬೀಯನೂ, ಅರಬಿಯರೂ, ಅಮ್ಮೋನಿಯರೂ, ಅಷ್ಡೋದಿನವರೂ ಯೆರೂಸಲೇಮಿನ ಗೋಡೆಯ ಜೀರ್ಣೋದ್ಧಾರ ಕಾರ್ಯವು ಮುಂದುವರಿದು, ಅದರ ಸಂದುಗಳು ತಿರುಗಿ ಸರಿಯಾಗುತ್ತಾ ಬರುವುದನ್ನು ಕೇಳಿ ಬಹುಕೋಪಗೊಂಡರು.
8 Dukansu suka ƙulla su zo, su yi yaƙi da Urushalima, su tā da hankali a cikinta.
ನಾವು ಒಟ್ಟಾಗಿ ಯೆರೂಸಲೇಮಿನವರಿಗೆ ವಿರುದ್ಧವಾಗಿ ಯುದ್ಧಕ್ಕೆ ಹೋಗಿ ಅವರನ್ನು ಗಲಿಬಿಲಿಗೊಳಿಸೋಣ ಎಂದು ಒಳಸಂಚು ಮಾಡಿಕೊಂಡರು.
9 Amma muka yi addu’a ga Allahnmu muka kuma sa masu tsaro da rana da kuma dare don mu magance wannan barazana.
ನಾವಾದರೋ ನಮ್ಮ ದೇವರಿಗೆ ಮೊರೆಯಿಟ್ಟು ಅವರಿಗೆ ವಿರುದ್ಧವಾಗಿ ಅವರು ಬರುವ ದಾರಿಯಲ್ಲಿ ಹಗಲಿರುಳು ಕಾವಲುಗಾರರನ್ನಿರಿಸಿದೆವು.
10 Ana cikin haka, mutane a Yahuda suka ce, “Ƙarfin ma’aikata yana kāsawa, akwai kuma sauran tarkace da yawa da ba za mu iya sāke gina katangar ba.”
೧೦ಇತ್ತ ಯೆಹೂದ್ಯರು, “ಹೊರೆ ಹೊರುವವರ ಬಲವು ಕುಂದಿಹೋಯಿತು, ಧೂಳಿನ ರಾಶಿಯು ವಿಪರೀತವಾಗಿದೆ; ಈ ಗೋಡೆಯನ್ನು ಕಟ್ಟುವುದು ನಮ್ಮಿಂದ ಆಗುವುದಿಲ್ಲ” ಎಂದರು.
11 Abokan gābanmu sun ce, “Ba za su sani ba, ba kuwa za su gan mu ba, sai dai kawai su gan mu a cikinsu, za mu karkashe su, mu tsai da aikin.”
೧೧ಮತ್ತು ನಮ್ಮ ವಿರೋಧಿಗಳು, “ಅವರಿಗೆ ತಿಳಿಯದಂತೆ, ಗೋಚರವಾಗದಂತೆ ಫಕ್ಕನೆ ಅವರೊಳಗೆ ನುಗ್ಗಿ ಅವರನ್ನು ಕೊಂದು ಕೆಲಸವನ್ನು ನಿಲ್ಲಿಸಿಬಿಡೋಣ” ಎಂದುಕೊಳ್ಳುತ್ತಿದ್ದರು.
12 Sau da yawa Yahudawan da suke da zama kusa da abokan gābanmu sun yi ta zuwa suna yin mana magana, suna cewa “Ko’ina muka juya, za su fāɗa mana.”
೧೨ಅವರ ನೆರೆಯೂರುಗಳಲ್ಲಿ ವಾಸಿಸುತ್ತಿದ್ದ ಯೆಹೂದ್ಯರು ಬಂದು ಬಂದು ನಮಗೆ, ನೀವು ಯಾವ ಕಡೆಗೆ ತಿರುಗಿಕೊಂಡರೂ ಎಲ್ಲಾ ಕಡೆಗಳಿಂದಲೂ ಅವರು ನಮ್ಮ ವಿರುದ್ಧವಾಗಿ ಯುದ್ಧಕ್ಕೆ ಬರುತ್ತಾರೆ ಎಂದು ಪದೇ ಪದೇ ಬಂದು ತಿಳಿಸುತ್ತಿದ್ದರು.
13 Saboda haka na sa jama’a su ja ɗamara bisa ga iyalinsu a bayan katanga, a wuraren da ba a gina ba. Suna riƙe da takuba, da māsu, da bakkuna.
೧೩ಆಗ ನಾನು ಜನರಿಗೆ ಕತ್ತಿ, ಬಿಲ್ಲು, ಬರ್ಜಿಗಳನ್ನು ಹಿಡಿದುಕೊಂಡು ಗೋಡೆಯ ಹಿಂದಣ ತಗ್ಗಾದ ಬಯಲುಗಳಲ್ಲಿ ಗೋತ್ರಗೋತ್ರಗಳಾಗಿ ನಿಲ್ಲಬೇಕೆಂದು ಆಜ್ಞಾಪಿಸಿದೆನು.
14 Bayan na dudduba abubuwa, sai na miƙe tsaye na ce wa manyan gari da shugabanni da kuma sauran jama’a, “Kada ku ji tsoronsu. Ku tuna da Ubangiji, wanda yake mai girma da banrazana, ku yi yaƙi don’yan’uwanku, da’ya’yanku maza da mata, da matanku da kuma gidajenku.”
೧೪ಆಗ ನಾನು ಅವರನ್ನು ಸಂದರ್ಶಿಸಿ ಅವರ ಮುಂದೆ ನಿಂತು ಶ್ರೀಮಂತರನ್ನೂ, ಅಧಿಕಾರಿಗಳನ್ನೂ, ಉಳಿದ ಜನರನ್ನೂ ಉದ್ದೇಶಿಸಿ, “ನಿಮ್ಮ ಹಗೆಗಳಿಗೆ ಹೆದರಬೇಡಿರಿ; ಮಹೋನ್ನತನೂ, ಭಯಂಕರನೂ ಆಗಿರುವ ಕರ್ತನನ್ನು ನೆನಪುಮಾಡಿಕೊಂಡು ನಿಮ್ಮ ಸಹೋದರರಿಗಾಗಿಯೂ, ಗಂಡು ಹೆಣ್ಣು ಮಕ್ಕಳಿಗಾಗಿಯೂ, ಹೆಂಡತಿಯರಿಗಾಗಿಯೂ, ನಿಮ್ಮ ಮನೆಗಳಿಗೋಸ್ಕರವೂ ಹೋರಾಡಿರಿ” ಎಂದು ಹೇಳಿದೆನು.
15 Da abokan gābanmu suka ji muna sane da shirinsu, Allah kuma ya wargaje shirin nan, sai duk muka dawo ga katangar, kowa ya kama aikinsa.
೧೫ನಮ್ಮ ಶತ್ರುಗಳು ತಮ್ಮ ಉದ್ದೇಶ ನಮಗೆ ಗೊತ್ತಾಯಿತೆಂದೂ ದೇವರು ಅದನ್ನು ವ್ಯರ್ಥಮಾಡಿದನೆಂದೂ ತಿಳಿದುಕೊಂಡಾಗ ಅವರು ನಮ್ಮನ್ನು ಬಿಟ್ಟು ಹೋದರು. ನಾವೆಲ್ಲರೂ ನಮ್ಮ ನಮ್ಮ ಪೌಳಿಗೋಡೆಯ ಕೆಲಸವನ್ನು ಪುನಃ ಪ್ರಾರಂಭಿಸಲು ತೊಡಗಿದೆವು.
16 Daga wannan rana zuwa gaba, rabin mutane suka yi aiki, yayinda sauran rabin suka kintsa da māsu, da garkuwa, da bakkuna da makamai. Shugabanni suka goyi bayan dukan mutanen Yahuda
೧೬ಅಂದಿನಿಂದ ನನ್ನ ಸ್ವಂತ ಆಳುಗಳಲ್ಲಿ ಅರ್ಧ ಮಂದಿ ಕೆಲಸದಲ್ಲಿ ಸಹಾಯಮಾಡಿದರು, ಅರ್ಧ ಮಂದಿ ಕವಚವನ್ನು ಧರಿಸಿಕೊಂಡು ಬರ್ಜಿ, ಗುರಾಣಿ, ಬಿಲ್ಲುಗಳನ್ನು ಹಿಡಿದುಕೊಂಡು ನಿಂತರು. ಅದೇ ಪ್ರಕಾರ ಈ ಕಾರ್ಯಕ್ಕಾಗಿ ನೇಮಿಸಲ್ಪಟ್ಟ ಅಧಿಕಾರಿಗಳು ಗೋಡೆಕಟ್ಟುವ ಯೆಹೂದ್ಯರ ಹಿಂದೆ ನಿಂತರು.
17 waɗanda suke ginin katanga. Waɗanda suke ɗaukan kaya suka yi aikinsu da hannu ɗaya, suna kuma riƙe da makami a ɗaya hannun,
೧೭ಹೊರೆ ಹೊರುವವರು ಒಂದು ಕೈಯಿಂದ ಹೊರೆಹೊತ್ತುಕೊಳ್ಳುತ್ತಾ ಇನ್ನೊಂದು ಕೈಯಿಂದ ಈಟಿ ಹಿಡಿದುಕೊಳ್ಳುತ್ತಿದ್ದರು.
18 kuma kowane mai gini ya ɗaura takobinsa a gefe yayinda yake aiki. Amma mutum mai busa ƙaho ya kasance tare da ni.
೧೮ಪೌಳಿಗೋಡೆಯನ್ನು ಕಟ್ಟುವವರಲ್ಲಿ ಪ್ರತಿಯೊಬ್ಬನು ತನ್ನ ತನ್ನ ಕತ್ತಿಯನ್ನು ಸೊಂಟಕ್ಕೆ ಬಿಗಿದುಕೊಂಡು ಕಟ್ಟುತ್ತಿದ್ದನು. ನಾನಂತೂ ಕೊಂಬೂದುವವನೊಬ್ಬನನ್ನು ನನ್ನ ಬಳಿಯಲ್ಲಿರಿಸಿಕೊಂಡಿದ್ದೆ.
19 Sai na ce wa manyan gari, da shugabanni, da sauran jama’a, “Aikin nan babba ne kuma mai yawa, ga shi muna a rarrabe nesa da juna a katangar.
೧೯ನಾನು ಶ್ರೀಮಂತರಿಗೂ, ಅಧಿಕಾರಿಗಳಿಗೂ ಉಳಿದ ಜನರಿಗೂ, “ನಾವು ಮಾಡುವ ಕೆಲಸವು ಬಹಳ ದೊಡ್ಡದೂ, ಅನೇಕ ಸ್ಥಳಗಳಲ್ಲಿ ನಡೆಯುವಂಥದ್ದೂ ಆಗಿದೆ; ನಾವು ಗೋಡೆಯ ಮೇಲೆ ಚದರಿ ಒಬ್ಬರಿಗೊಬ್ಬರು ದೂರವಾಗಿರುತ್ತೇವೆ.
20 Duk inda kuka ji an busa ƙaho, sai ku taru a wurin. Allahnmu zai yi yaƙi dominmu!”
೨೦ನಿಮಗೆ ಕೊಂಬಿನ ಧ್ವನಿಯು ಯಾವ ಸ್ಥಳದಿಂದ ಕೇಳಿಬರುವುದೋ ಆ ಸ್ಥಳಕ್ಕೆ ನಮ್ಮ ಹತ್ತಿರ ಕೂಡಿಬನ್ನಿರಿ. ನಮ್ಮ ದೇವರು ನಮಗೋಸ್ಕರ ಯುದ್ಧ ಮಾಡುವನು” ಎಂದು ಹೇಳಿದೆನು.
21 Saboda haka muka ci gaba da aiki, rabin mutane suna riƙe da māsu, daga wayewar gari har zuwa fitowar taurari.
೨೧ಹೀಗೆ ನಾವು ಅರುಣೋದಯದಿಂದ ನಕ್ಷತ್ರಗಳು ಮೂಡುವವರೆಗೂ ಕೆಲಸ ಮಾಡುತ್ತಿದ್ದೆವು. ನನ್ನ ಸೇವಕರಲ್ಲಿ ಅರ್ಧ ಮಂದಿ ಬರ್ಜಿಯನ್ನು ಹಿಡಿದುಕೊಂಡಿದ್ದರು.
22 A wannan lokaci na kuma ce wa mutane, “A sa kowane mutum da mataimakinsa su zauna a Urushalima da dare, domin a yi tsaro da dare, da safe kuma a kama aiki.”
೨೨ಇದಲ್ಲದೆ, ನಾನು ಆ ಸಮಯದಲ್ಲಿ ಜನರಿಗೆ, “ನಿಮ್ಮ ಆಳುಗಳು ರಾತ್ರಿಯಲ್ಲಿ ನಮಗೆ ಕಾವಲಾಗಿರುವಂತೆಯು ಹಾಗೂ ಹಗಲಿನಲ್ಲಿ ಕೆಲಸ ನಡಿಸುವಂತೆಯು ನೀವು ನಿಮ್ಮ ನಿಮ್ಮ ಆಳುಗಳೊಡನೆ ಯೆರೂಸಲೇಮಿನಲ್ಲಿಯೇ ವಾಸಮಾಡಬೇಕು” ಎಂದು ಅಪ್ಪಣೆ ಮಾಡಿದೆನು.
23 Saboda haka ni, da’yan’uwana, da bayina, da matsaran da suke tare da ni, ba wanda ya tuɓe tufafinsa; kowa ya rataye makaminsa, ko ya je shan ruwa ma.
೨೩ನಾನೂ ನನ್ನ ಸಹೋದರರೂ, ಸೇವಕರೂ, ಮೈಗಾವಲಿನವರೂ ನಮ್ಮ ಬಟ್ಟೆಗಳನ್ನು ಬದಲಾಯಿಸಿರಲಿಲ್ಲ. ಪ್ರತಿಯೊಬ್ಬನು ನೀರನ್ನು ಮತ್ತು ಆಯುಧಗಳನ್ನು ಹಿಡಿದುಕೊಂಡಿದ್ದೆವು.

< Nehemiya 4 >