< Yowel 2 >

1 Ku busa ƙaho a cikin Sihiyona; ku yi karar amo a tsaunina mai tsarki. Bari dukan mazaunan ƙasar su yi rawan jiki, gama ranar Ubangiji tana zuwa. Tana gab da faruwa
ಚೀಯೋನಿನಲ್ಲಿ ಕೊಂಬೂದಿರಿ, ನನ್ನ ಪರಿಶುದ್ಧ ಪರ್ವತದಲ್ಲಿ ಎಚ್ಚರಿಕೆಯ ದಿನ ಮೊಳಗಲಿ. ಸಮಸ್ತ ದೇಶದ ನಿವಾಸಿಗಳು ನಡುಗಲಿ, ಏಕೆಂದರೆ ಯೆಹೋವನ ದಿನವು ಬರುತ್ತದೆ; ಅದು ಸಮೀಪವಾಗಿದೆ.
2 rana ce ta baƙin duhu ƙirin, ranar gizagizai ce baƙi ƙirin. Babbar rundunar mayaƙa mai ƙarfi tana zuwa kamar ketowar alfijir a kan duwatsu yadda ba a taɓa ganin irinta ba, ba kuwa za a ƙara ganin irinta ba har tsararraki masu zuwa.
ಅದು ಕತ್ತಲೆಯ ಮತ್ತು ಮೊಬ್ಬಿನ ದಿನವೂ, ಕಾರ್ಮುಗಿಲಿನ ಕಗ್ಗತ್ತಲ ದಿನವೂ ಆಗಿದೆ. ಉದಯವು ಬೆಟ್ಟಗಳ ಮೇಲೆ ಹರಡಿಕೊಳ್ಳುವ ಹಾಗೆ, ಪ್ರಬಲವಾದ ದೊಡ್ಡ ಸೈನ್ಯವು ಬರುತ್ತದೆ. ಅದರ ಹಾಗೆ ಹಿಂದೆಂದೂ ಬಂದಿಲ್ಲ, ಇನ್ನು ಮುಂದೆಯೂ ಬರುವುದಿಲ್ಲ, ತಲತಲಾಂತರಗಳ ವರ್ಷಗಳವರೆಗೂ ಬರುವುದಿಲ್ಲ.
3 A gabansu wuta tana ci, a bayansu ga harshen wuta yana ci, A gabansu ƙasa ta yi kamar gonar Eden, a bayansu kuma jeji ne wofi, babu abin da ya kuɓuce musu.
ಅವುಗಳ ಮುಂದೆ ಬೆಂಕಿಯು ದಹಿಸುತ್ತದೆ, ಹಿಂದೆ ಜ್ವಾಲೆಯು ಧಗಧಗಿಸುತ್ತದೆ. ಅವು ಬರುವುದಕ್ಕೆ ಮೊದಲು ದೇಶವು ಏದೆನ್ ಉದ್ಯಾನದಂತೆ ಇತ್ತು, ಅವು ದಾಟಿಹೋದ ಮೇಲೆ ಬೆಗ್ಗಾಡಾಯಿತು. ಹೌದು, ಅವುಗಳಿಂದ ಯಾವುದೂ ತಪ್ಪಿಸಿಕೊಳ್ಳಲಾರದು.
4 Suna da kamannin dawakai; suna gudu kamar dokin yaƙi.
ಆ ಸೈನ್ಯಗಳ ಆಕಾರವು ಕುದುರೆಗಳ ಆಕಾರದ ಹಾಗೆ ಕಾಣಿಸುತ್ತದೆ; ಅವು ಸವಾರರಂತೆ ಓಡುತ್ತವೆ.
5 Da motsi kamar na kekunan yaƙi sun tsallake ƙwanƙolin duwatsu, kamar ƙarar harshen wuta mai cin tattaka, kamar runduna mai ƙarfi wadda ta ja dāgār yaƙi.
ಬೆಟ್ಟಗಳ ತುದಿಯಲ್ಲಿ ಅವು ಹಾರಾಡುತ್ತ ರಥಗಳಂತೆ ಚೀತ್ಕಾರ ಮಾಡುತ್ತವೆ; ಕೂಳೆಯನ್ನು ದಹಿಸುವ ಬೆಂಕಿಯ ಜ್ವಾಲೆಯ ಶಬ್ದದ ಹಾಗೆಯೂ, ಯುದ್ಧಕ್ಕೆ ಸಿದ್ಧವಾದ ಬಲವುಳ್ಳ ಸೈನ್ಯದ ಹಾಗೆಯೂ ಇವೆ.
6 Da ganinsu, al’ummai sun kamu da azaba; kowace fuska ta yanƙwane.
ಅವುಗಳ ದೆಸೆಯಿಂದ ರಾಷ್ಟ್ರಗಳಿಗೆ ಪ್ರಾಣ ಸಂಕಟ; ಎಲ್ಲರ ಮುಖಗಳು ಕಳೆಗುಂದುತ್ತವೆ.
7 Sukan auka kamar jarumawa; sukan hau katanga kamar sojoji. Kowa yana takawa bisa ga tsari, ba mai kaucewa.
ಅವು ಶೂರರಂತೆ ಓಡಾಡುತ್ತವೆ; ಯೋಧರ ಹಾಗೆ ಗೋಡೆ ಏರುತ್ತವೆ;
8 Ba sa turin juna, kowane yakan miƙe gaba. Sukan kutsa cikin abokan gāba ba mai tsai da su.
ನೂಕುನುಗ್ಗಲ್ಲಿಲ್ಲದೆ ತಮ್ಮ ತಮ್ಮ ಸಾಲುಗಳಲ್ಲಿಯೇ ನಡೆಯುತ್ತವೆ; ಆಯುಧಗಳ ನಡುವೆ ನುಗ್ಗುತ್ತವೆ.
9 Sukan ruga cikin birni, suna gudu a kan katanga. Sukan hau gidaje, sukan shiga ta tagogi kamar ɓarayi.
ಪಟ್ಟಣದಲ್ಲೆಲ್ಲಾ ತ್ವರೆಪಡುತ್ತವೆ, ಗೋಡೆಯ ಮೇಲೆ ಓಡಾಡುತ್ತವೆ, ಮನೆಗಳನ್ನು ಹತ್ತುತ್ತವೆ, ಕಿಟಕಿಗಳಿಂದ ಕಳ್ಳರಂತೆ ಪ್ರವೇಶಿಸುತ್ತವೆ.
10 A gabansu duniya takan girgiza, sararin sama kuma yakan jijjigu, rana da wata su yi duhu, taurari kuma ba sa ba da haske.
೧೦ಅವುಗಳ ಆಗಮನದಿಂದ ಭೂಮಿಯು ಕಂಪಿಸುತ್ತದೆ, ಆಕಾಶಮಂಡಲವು ನಡಗುತ್ತದೆ, ಸೂರ್ಯ ಮತ್ತು ಚಂದ್ರರು ಮಂಕಾಗುತ್ತಾರೆ, ಮತ್ತು ನಕ್ಷತ್ರಗಳು ಕಾಂತಿಗುಂದುತ್ತವೆ.
11 Ubangiji ya yi tsawa wa shugaban mayaƙansa; sojojinsa sun fi a ƙirge masu ƙarfi ne kuma su waɗanda suke biyayya da umarninsa. Ranar Ubangiji da girma take; mai banrazana. Wa zai iya jure mata?
೧೧ಯೆಹೋವನು ತನ್ನ ಸೈನ್ಯದ ಮುಂದೆ ಗುಡುಗಿನಂತೆ ಧ್ವನಿಗೈಯುತ್ತಾನೆ, ಆತನ ಸೈನ್ಯ ಬಹಳ ದೊಡ್ಡದಾಗಿದೆ; ಆತನ ಆಜ್ಞೆಯನ್ನು ಪಾಲಿಸುವವನು ಬಲಿಷ್ಠನಾಗಿದ್ದಾನೆ. ಯೆಹೋವನ ದಿನವು ಮಹತ್ತರವೂ ಮತ್ತು ಅತಿಭಯಂಕರವೂ ಆಗಿದೆ. ಅದನ್ನು ಸಹಿಸಿಕೊಳ್ಳುವವರು ಯಾರು?
12 “Ko yanzu”, in ji Ubangiji, “Ku juyo gare ni da dukan zuciyarku, da azumi da kuka da makoki.”
೧೨ಯೆಹೋವನು ಹೀಗೆ ಹೇಳುತ್ತಾನೆ, “ಈಗಲಾದರೂ, ನೀವು ಪೂರ್ಣಹೃದಯದಿಂದ ನನ್ನ ಕಡೆಗೆ ತಿರುಗಿಕೊಳ್ಳಿರಿ. ಉಪವಾಸಮಾಡಿರಿ, ಅಳಿರಿ, ಗೋಳಾಡಿರಿ.”
13 Ku kyakkece zuciyarku ba rigunanku ba. Ku juyo ga Ubangiji Allahnku, gama shi mai alheri ne mai tausayi kuma mai jinkirin fushi da yawan ƙauna, yakan kuma janye daga aika da bala’i.
೧೩ನಿಮ್ಮ ಉಡುಪುಗಳನ್ನಲ್ಲ, ನಿಮ್ಮ ಹೃದಯಗಳನ್ನು ಹರಿದುಕೊಳ್ಳಿರಿ. ನಿಮ್ಮ ದೇವರಾದ ಯೆಹೋವನ ಕಡೆಗೆ ತಿರುಗಿಕೊಳ್ಳಿರಿ. ಆತನು ದಯೆಯೂ, ಕನಿಕರವೂ, ದೀರ್ಘಶಾಂತಿಯೂ, ಮಹಾಪ್ರೀತಿಯೂ ಉಳ್ಳವನಾಗಿ ತಾನು ವಿಧಿಸುವ ಕೇಡಿಗೆ ಮನಮರುಗುವಂಥವನು.
14 Wa ya sani? Ko zai juya yă kuma ji tausayi yă sa mana albarka ta wurin hadaya ta gari da hadaya ta sha wa Ubangiji Allahnku.
೧೪ಆತನು ಒಂದು ವೇಳೆ ಮನಸ್ಸನ್ನು ಬದಲಾಯಿಸಿ, ನಿಮ್ಮ ಕಡೆಗೆ ತಿರುಗಿಕೊಂಡು ನಿಮ್ಮನ್ನು ಆಶೀರ್ವದಿಸಬಹುದು; ನಿಮ್ಮ ದೇವರಾದ ಯೆಹೋವನಿಗೆ ನೀವು ಅರ್ಪಿಸುವ ನೈವೇದ್ಯವನ್ನು ಸ್ವೀಕರಿಸಿ ಸುವರಗಳನ್ನು ದಯಪಾಲಿಸಬಹುದು.
15 A busa ƙaho a Sihiyona, a yi shelar azumi mai tsarki, a kira tsarkakan taro.
೧೫ಚೀಯೋನ್ ಪರ್ವತದ ಮೇಲೆ ನಿಂತು ಕೊಂಬೂದಿರಿ, ಉಪವಾಸ ದಿನವನ್ನು ಗೊತ್ತುಮಾಡಿರಿ, ಪವಿತ್ರ ಸಭೆಯನ್ನು ಕರೆಯಿರಿ.
16 A tattara mutane; ku tsarkake taron; ku kawo dattawa wuri ɗaya; ku kuma tara yara, da waɗanda suke shan mama. Bari ango yă bar ɗakinsa amarya kuma lolokinta.
೧೬ಜನರನ್ನು ಒಟ್ಟುಗೂಡಿಸಿರಿ, ಪವಿತ್ರ ಸಭೆಯನ್ನು ಏರ್ಪಡಿಸಿರಿ. ಹಿರಿಯರನ್ನು ಕೂಡಿಸಿರಿ, ಮಕ್ಕಳನ್ನು ಸೇರಿಸಿರಿ, ಮೊಲೆಕೂಸುಗಳನ್ನು ಸೇರಿಸಿರಿ. ಮದುಮಗನು ತನ್ನ ಕೊಠಡಿಯಿಂದ ಹೊರಟುಬರಲಿ, ವಧುವು ತನ್ನ ಕಲ್ಯಾಣಗೃಹದಿಂದ ಹೊರಟುಬರಲಿ.
17 Bari firistocin da suke yin hidima a gaban Ubangiji, su yi kuka tsakanin filin haikali da bagade. Bari su ce, “Ka cece mutanenka, ya Ubangiji. Kada ka bar gādonka yă zama abin dariya, da abin ba’a a cikin al’ummai. Me zai sa a ce a cikin mutane, ‘Ina Allahnsu yake?’”
೧೭ಯೆಹೋವನ ಸೇವಕರಾದ ಯಾಜಕರು, ದ್ವಾರಮಂಟಪಕ್ಕೂ, ಯಜ್ಞವೇದಿಯ ನಡುವೆ ಅಳುತ್ತಾ ಹೀಗೆ ಹೇಳಲಿ, “ಯೆಹೋವನೇ, ನಿನ್ನ ಜನರನ್ನು ಕರುಣಿಸು, ಅನ್ಯಜನಾಂಗಗಳು ನಿಂದಿಸುವುದಕ್ಕೆ ನಿನ್ನ ಬಾಧ್ಯತೆಯನ್ನು ದೂಷಣೆಗೆ ಗುರಿಮಾಡಬೇಡ. ‘ಅವರ ದೇವರು ಎಲ್ಲಿ?’ ಎಂದು ಅವರು ಏಕೆ ನಿಂದಿಸಬೇಕು.”
18 Ta haka Ubangiji zai yi kishin ƙasarsa yă kuma ji tausayin mutanensa.
೧೮ಆಗ ಯೆಹೋವನು ತನ್ನ ದೇಶಕ್ಕೆ ಅಪಕೀರ್ತಿ ಬರಬಾರದೆಂದು ತನ್ನ ಜನರನ್ನು ಕರುಣಿಸಿ,
19 Ubangiji zai amsa musu ya ce, “Ina aika da hatsi, sabon ruwan inabi, da mai, isashe da zai ƙosar da ku sosai; ba kuma zan ƙara maishe ku abin dariya ga al’ummai ba.
೧೯ಅವರ ಬಿನ್ನಹವನ್ನು ಯೆಹೋವನು ಲಾಲಿಸಿ ಅವರಿಗೆ ಹೀಗೆ ಹೇಳಿದನು: “ಇಗೋ, ನಾನು ಧಾನ್ಯ, ದ್ರಾಕ್ಷಾರಸ, ತೈಲಗಳನ್ನು ನಿಮಗೆ ಕಳುಹಿಸುತ್ತಿದ್ದೇನೆ. ಅವುಗಳಿಂದ ನಿಮಗೆ ತೃಪ್ತಿಯಾಗುವುದು. ನಿಮ್ಮನ್ನು ಅನ್ಯಜನಾಂಗಗಳ ನಿಂದೆಗೆ ಇನ್ನು ಗುರಿಮಾಡುವುದಿಲ್ಲ.
20 “Zan kori sojojin arewa nesa da ku, in tura su cikin busasshiyar ƙasa marar amfani kuma, kuma da sawunsu na gaba zan tura su zuwa gabashin teku da kuma sawunsu na baya tura su zuwa yammanci a Bahar Rum. Warinsu kuma zai bazu; ɗoyinsu zai tashi.” Tabbatacce ya yi al’amura masu girma.
೨೦ನಾನು ಉತ್ತರ ದಿಕ್ಕಿನ ಸೈನ್ಯವನ್ನು ನಿಮ್ಮ ಕಡೆಯಿಂದ ದೂರಮಾಡುವೆನು, ಅದನ್ನು ಹಾಳುಬಿದ್ದ ಬಂಜರು ಭೂಮಿಗೂ ಓಡಿಸುವೆನು. ಅದರ ಮುಂಭಾಗವನ್ನು ಪೂರ್ವದ ಸಮುದ್ರಕ್ಕೂ, ಅದರ ಹಿಂಭಾಗವನ್ನು ಪಶ್ಚಿಮ ಸಮುದ್ರಕ್ಕೂ ತಳ್ಳಿಬಿಡುವೆನು. ಅದರ ದುರ್ವಾಸನೆಯು ಏರುವುದು. ಏಕೆಂದರೆ ಆತನು ಮಹತ್ಕಾರ್ಯಗಳನ್ನು ಮಾಡುತ್ತಾನೆ.
21 Kada ki ji tsoro, ya ƙasa; ki yi murna ki kuma yi farin ciki. Tabbatacce Ubangiji ya yi abubuwa masu girma.
೨೧ಭೂಮಿಯೇ, ಹೆದರಬೇಡ, ಹರ್ಷಿಸು, ಉಲ್ಲಾಸಿಸು, ಯೆಹೋವನು ಮಹತ್ಕಾರ್ಯಗಳನ್ನು ಮಾಡಿದ್ದಾನೆ.
22 Kada ku ji tsoro, ya ku namun jeji, gama wuraren kiwo sun yi kore shar. Itatuwa suna ba da’ya’yansu; itacen ɓaure da na inabi suna ba da amfaninsu.
೨೨ಕಾಡುಮೃಗಗಳೇ ಅಂಜಬೇಡಿರಿ, ಕಾಡುಗಾವಲಲ್ಲಿ ಹುಲ್ಲು ಮೊಳೆಯುವುದು, ಮರವು ಹಣ್ಣು ಬಿಡುವುದು. ಅಂಜೂರದ ಗಿಡವೂ ದ್ರಾಕ್ಷಾಲತೆಯೂ ಸಾರವತ್ತಾಗಿ ಫಲಿಸುವವು.
23 Ku yi murna, ya ku mutanen Sihiyona, ku yi farin ciki cikin Ubangiji Allahnku, gama ya ba ku ruwan bazara cikin adalci. Yakan aika muku yayyafi a yalwace, na bazara da na kaka, kamar dā.
೨೩ಚೀಯೋನಿನ ಜನರೇ ಹರ್ಷಿಸಿರಿ, ನಿಮ್ಮ ದೇವರಾದ ಯೆಹೋವನಲ್ಲಿ ಉಲ್ಲಾಸಿಸಿರಿ. ಆತನು ತನ್ನ ನೀತಿಯಿಂದ ಮುಂಗಾರು ಮಳೆಯನ್ನು ನಿಮಗೆ ಕೊಡುವನು. ಮುಂಗಾರು, ಹಿಂಗಾರು ಮಳೆಗಳನ್ನು ಮೊದಲಿನಂತೆ ನಿಮಗಾಗಿ ಸುರಿಸುವನು.
24 Masussukai za su cika da hatsi; randuna za su cika da sabon ruwan inabi da mai suna zuba.
೨೪ಕಣಜಗಳಲ್ಲಿ ಗೋದಿಯು ರಾಶಿರಾಶಿಯಾಗಿರುವುದು, ತೊಟ್ಟಿಗಳಲ್ಲಿ ದ್ರಾಕ್ಷಾರಸವೂ ಎಣ್ಣೆಯೂ ತುಂಬಿತುಳುಕುವವು.
25 “Zan mayar muku da abin da fāra suka ci a waɗannan shekaru waɗanda ɗango da fāra masu gaigayewa, da kuma sauran fāra da tarin fāra babban mayaƙan da na aika don su fāɗa muku.
೨೫ಗುಂಪು ಮಿಡತೆಗಳು, ಸಣ್ಣ ಮಿಡತೆಗಳು, ದೊಡ್ಡ ಮಿಡತೆಗಳು, ಚೂರಿ ಮಿಡತೆಗಳು, ನಾನು ಕಳುಹಿಸಿದ ಈ ಮಿಡತೆಗಳ ಸೈನ್ಯಗಳು ತಿಂದು ನಷ್ಟಮಾಡಿದ ವರ್ಷಗಳನ್ನು ನಾನು ನಿಮಗೆ ತಿರುಗಿಕೊಡುವೆನು.
26 Za ku sami a wadace ku ci, har sai kun ƙoshi, za ku kuma yabi sunan Ubangiji Allahnku, wanda ya yi muku ayyukan banmamaki; mutanena ba za su ƙara shan kunya ba.
೨೬ನೀವು ಹೊಟ್ಟೆ ತುಂಬಾ ಊಟಮಾಡಿ ತೃಪ್ತಿಗೊಂಡು, ನಿಮಗಾಗಿ ಅದ್ಭುತಕಾರ್ಯಗಳನ್ನು ಮಾಡಿದ ನಿಮ್ಮ ದೇವರಾದ ಯೆಹೋವನ ನಾಮವನ್ನು ಕೊಂಡಾಡುವಿರಿ. ನನ್ನ ಜನರಿಗೆ ಎಂದಿಗೂ ಆಶಾಭಂಗವಾಗದು.
27 Sa’an nan za ku sani ina cikin Isra’ila, cewa ni ne Ubangiji Allahnku, babu wani kuma; mutanena ba za su ƙara shan kunya ba.
೨೭ನಾನು ಇಸ್ರಾಯೇಲಿನ ಮಧ್ಯದಲ್ಲಿ ನೆಲೆಯಾಗಿ ಇರುವವನು, ನಾನೇ ನಿಮ್ಮ ದೇವರಾದ ಯೆಹೋವನು, ನಾನಲ್ಲದೆ ಬೇರೆ ದೇವರು ನಿಮಗಿಲ್ಲ. ನನ್ನ ಜನರಿಗೆ ಎಂದಿಗೂ ಆಶಾಭಂಗವಾಗದು.
28 “Daga baya kuma, zan zuba Ruhuna a bisan dukan mutane.’Ya’yanku maza da mata za su yi annabci, tsofaffinku za su yi mafarkai, matasanku za su ga wahayoyi.
೨೮ತರುವಾಯ ನಾನು ಎಲ್ಲಾ ಮನುಷ್ಯರ ಮೇಲೆ ನನ್ನ ಆತ್ಮವನ್ನು ಸುರಿಸುವೆನು. ನಿಮ್ಮ ಪುತ್ರಪುತ್ರಿಯರು ಪ್ರವಾದಿಸುವರು. ನಿಮ್ಮ ಹಿರಿಯರಿಗೆ ಕನಸುಗಳು ಬೀಳುವವು. ನಿಮ್ಮ ಯೌವನಸ್ಥರಿಗೆ ದಿವ್ಯದರ್ಶನಗಳಾಗುವವು.
29 Har ma a bisan bayina, maza da mata, zan zuba Ruhuna a kwanakin nan.
೨೯ಇದಲ್ಲದೆ ಆ ದಿನಗಳಲ್ಲಿ ದಾಸದಾಸಿಯರ ಮೇಲೆಯೂ ನನ್ನ ಆತ್ಮವನ್ನು ಸುರಿಸುವೆನು.
30 Zan nuna abubuwan banmamaki a cikin sammai da kuma a kan duniya, za a ga jini da wuta da murtukewar hayaƙi.
೩೦ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಅದ್ಭುತಗಳನ್ನು ಮಾಡುವೆನು. ರಕ್ತ, ಬೆಂಕಿ, ಧೂಮಸ್ತಂಭ ಈ ಉತ್ಪಾತಗಳನ್ನು ಉಂಟುಮಾಡುವೆನು.
31 Rana za tă duhunta wata kuma yă zama jini kafin isowar babbar ranan nan mai banrazana ta Ubangiji.
೩೧ಯೆಹೋವನ ಮಹಾ ಭಯಂಕರವಾದ ದಿನವು ಬರುವುದಕ್ಕಿಂತ ಮೊದಲು, ಸೂರ್ಯನು ಕತ್ತಲಾಗುವನು, ಚಂದ್ರನು ರಕ್ತವಾಗುವನು.
32 Amma dukan waɗanda suka nemi Ubangiji za su tsira. Kamar yadda Ubangiji ya ce, gama a Dutsen Sihiyona da Urushalima akwai ceto, a cikin waɗannan da Ubangiji ya kira.
೩೨ಆದರೂ ಯೆಹೋವನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವುದು. ಯೆಹೋವನು ತಿಳಿಸಿದಂತೆ ಚೀಯೋನಿನ ಪರ್ವತದಲ್ಲಿಯೂ, ಯೆರೂಸಲೇಮಿನಲ್ಲಿಯೂ ಅನೇಕರು ಉಳಿಯುವರು. ಯೆಹೋವನು ಹೇಳಿದಂತೆಯೇ, ಉಳಿದವರಲ್ಲಿ ಯೆಹೋವನಿಂದ ಕರೆಯಲ್ಪಟ್ಟವರು ಬದುಕುವರು.”

< Yowel 2 >