< Ezekiyel 14 >

1 Waɗansu dattawan Isra’ila suka zo wurina suka zauna a ƙasa a gabana.
ಇಸ್ರಾಯೇಲಿನ ಹಿರಿಯರಲ್ಲಿ ಕೆಲವರು ಬಂದು,
2 Sai maganar Ubangiji ta zo mini cewa,
ನನ್ನ ಮುಂದೆ ಕುಳಿತುಕೊಂಡಿರುವಾಗ ಯೆಹೋವನು ಈ ವಾಕ್ಯವನ್ನು ನನಗೆ ಅನುಗ್ರಹಿಸಿದನು,
3 “Ɗan mutum, waɗannan mutane sun kafa gumaka a cikin zukatansu suka sa mugayen abubuwan sa tuntuɓe a gabansu. Zan bar su, su taɓa nemi ni?
“ನರಪುತ್ರನೇ, ಇವರು ತಮ್ಮ ವಿಗ್ರಹಗಳನ್ನು, ಮನಸ್ಸಿನಲ್ಲಿ ನೆಲೆಗೊಳಿಸಿ, ಪಾಪಕಾರಿಯಾದ ಈ ವಿಘ್ನವನ್ನು ತಮ್ಮ ಮುಂದೆ ಇಟ್ಟುಕೊಂಡಿದ್ದಾರೆ; ಇಂಥವರಿಗೆ ನಾನು ದೈವೋತ್ತರವನ್ನು ದಯಪಾಲಿಸುವುದು ಸರಿಯೆ? ಎಂದಿಗೂ ಇಲ್ಲ.”
4 Saboda haka ka yi musu magana ka faɗa musu cewa, ‘Ga abin da Ubangiji Mai Iko Duka yana cewa sa’ad da wani mutumin Isra’ila ya kafa gumaka a cikin zuciyarsa ya kuma sa mugun abin tuntuɓe a gabansa sa’an nan ya tafi wurin annabi, Ni Ubangiji zan amsa masa da kaina game da babban bautar gumakarsa.
ಆದಕಾರಣ ನೀನು ಅವರನ್ನು ಸಂಬೋಧಿಸಿ ಹೀಗೆ ಹೇಳು, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಇಸ್ರಾಯೇಲ್ ವಂಶದವರಲ್ಲಿ ಯಾರು ತನ್ನ ವಿಗ್ರಹಗಳನ್ನು ಮನಸ್ಸಿನಲ್ಲಿ ನೆಲೆಗೊಳಿಸಿ, ತನಗೆ ಪಾಪಕಾರಿಯಾದ ವಿಘ್ನವನ್ನು ತನ್ನ ಮುಂದೆಯೇ ಇಟ್ಟುಕೊಂಡು, ಪ್ರವಾದಿಯನ್ನು ಪ್ರಶ್ನೆ ಕೇಳುವುದಕ್ಕೆ ಬರುವ ಅವನಿಗೆ ಯೆಹೋವನಾದ ನಾನು ಅವನ ಲೆಕ್ಕವಿಲ್ಲದ ವಿಗ್ರಹಗಳಿಗೆ ತಕ್ಕ ಹಾಗೆ ಉತ್ತರವನ್ನು ಕೊಡುವೆನು.
5 Zan yi haka don in sāke ƙame zukatan mutanen Isra’ila, waɗanda duk suka yashe ni don gumakansu.’
ಇಸ್ರಾಯೇಲ್ ವಂಶದವರೆಲ್ಲರೂ ತಮ್ಮ ವಿಗ್ರಹಗಳ ನಿಮಿತ್ತ ನನ್ನನ್ನು ತೊರೆದುದರಿಂದ ನಾನು ಅವರನ್ನೆಲ್ಲಾ ಅವರ ಆಶಾಪಾಶದಲ್ಲೇ ಸಿಕ್ಕಿಸಿ ಹಿಡಿಯುವೆನು.”
6 “Saboda haka ka faɗa wa gidan Isra’ila cewa, ‘Ga abin da Ubangiji Mai Iko Duka yana cewa ku tuba! Ku juyo daga gumakanku ku kuma furta dukan ayyukanku masu banƙyama!
ಆದಕಾರಣ ನೀನು ಇಸ್ರಾಯೇಲ್ ವಂಶದವರಿಗೆ ಹೀಗೆ ನುಡಿ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನೀವು ನಿಮ್ಮ ವಿಗ್ರಹಗಳನ್ನು ತೊರೆದುಬಿಟ್ಟು ಹಿಂದಿರುಗಿ, ನಿಮ್ಮ ಎಲ್ಲಾ ಅಸಹ್ಯ ವಸ್ತುಗಳ ಕಡೆಗೆ ಬೆನ್ನುಮಾಡಿರಿ.
7 “‘Duk sa’ad da mutumin Isra’ila ko baƙo mai zama a Isra’ila ya rabu da ni ya kuma kafa gumaka a cikin zuciyarsa ya kuna sa mugun abin tuntuɓe a gabansa sa’an nan ya tafi wurin annabi don yă neme ni, Ni Ubangiji zan amsa masa da kaina.
“ಏಕೆಂದರೆ ಇಸ್ರಾಯೇಲ್ ವಂಶದವರಲ್ಲಾಗಲಿ ಮತ್ತು ಇಸ್ರಾಯೇಲಿನೊಳಗೆ ವಾಸವಾಗಿರುವ ವಿದೇಶಿಗಳಲ್ಲಾಗಲಿ ಯಾವನು ನನ್ನಿಂದ ದೂರವಾಗಿ, ತನ್ನ ವಿಗ್ರಹಗಳನ್ನು ಮನಸ್ಸಿನಲ್ಲಿ ನೆಲೆಗೊಳಿಸಿ, ತನಗೆ ಪಾಪಕಾರಿಯಾದ ವಿಘ್ನವನ್ನು ತನ್ನ ಮುಂದೆ ಇಟ್ಟುಕೊಂಡು ಪ್ರವಾದಿಯ ಬಳಿಗೆ ಬಂದು ಅವನ ಮೂಲಕ ದೈವೋತ್ತರವನ್ನು ಕೇಳಿಕೊಳ್ಳುವನೋ ಅವನಿಗೆ ಯೆಹೋವನಾದ ನಾನೇ ಉತ್ತರಕೊಡುವೆನು.
8 Zan yi gāba da mutumin in kuma sa ya zama misali da kuma abin karin magana. Zan ware shi daga mutanena. Sa’an nan za ku san cewa ni ne Ubangiji.
ಅವನ ಮೇಲೆ ಉಗ್ರಕೋಪಗೊಂಡು, ಅವನನ್ನು ಎಚ್ಚರಿಕೆಗೆ ಗುರುತಾಗಿಯೂ, ಕಟ್ಟು ಗಾದೆಗಳಿಗೂ ವಸ್ತುವಾಗಿ ಮಾಡಿ, ನನ್ನ ಜನರೊಳಗಿಂದ ಕಿತ್ತುಹಾಕುವೆನು; ಹೀಗೆ ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವುದು.
9 “‘In kuma aka ruɗi annabin har ya yi annabci, Ni Ubangiji na rinjayi wannan annabi, zan kuma miƙa hannuna gāba da shi in hallaka shi daga cikin mutanena Isra’ila.
“ಒಬ್ಬ ಪ್ರವಾದಿಯು ಮರುಳುಗೊಂಡು ದೈವೋಕ್ತಿಯನ್ನು ನುಡಿದರೆ, ಆ ಪ್ರವಾದಿಯನ್ನು ಮರುಳುಗೊಳಿಸಿದವನು ಯೆಹೋವನಾದ ನಾನೇ; ನಾನು ಅವನ ಮೇಲೆ ಕೈಯೆತ್ತಿ ಇಸ್ರಾಯೇಲರಾದ ನನ್ನ ಜನರೊಳಗಿಂದ ಅವನನ್ನು ಕಿತ್ತು ನಿರ್ನಾಮಮಾಡುವೆನು.
10 Za su ɗauki hakkin laifinsu annabin zai zama mai laifi daidai da wanda ya zo neman shawararsa.
೧೦ಪ್ರವಾದಿಯ ದೋಷವು ಎಷ್ಟೋ, ಅವನನ್ನು ಪ್ರಶ್ನೆಕೇಳುವವನ ದೋಷವೂ ಅಷ್ಟೇ; ಇಬ್ಬರೂ ತಮ್ಮ ತಮ್ಮ ದೋಷ ಫಲವನ್ನು ಅನುಭವಿಸುವರು.
11 Sa’an nan mutanen Isra’ila ba za su ƙara kauce daga gare ni ba, ba kuwa za su ƙara ƙazantar da kansu da dukan zunubansu ba. Za su zama mutanena, ni kuma zan zama Allahnsu, in ji Ubangiji Mai Iko Duka.’”
೧೧ಹೀಗಾದರೆ ಇಸ್ರಾಯೇಲ್ ವಂಶದವರು ಇನ್ನು ನನ್ನನ್ನು ತೊರೆಯುವುದಿಲ್ಲ, ತಮ್ಮ ಲೆಕ್ಕವಿಲ್ಲದ ದ್ರೋಹಗಳಿಂದ ತಮ್ಮನ್ನು ಹೊಲೆ ಮಾಡಿಕೊಳ್ಳುವುದಿಲ್ಲ; ಅವರು ನನಗೆ ಪ್ರಜೆಯಾಗಿರುವರು, ನಾನು ಅವರಿಗೆ ದೇವರಾಗಿರುವೆನು” ಇದು ಕರ್ತನಾದ ಯೆಹೋವನ ನುಡಿ.
12 Maganar Ubangiji ta zo mini cewa,
೧೨ಆಮೇಲೆ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
13 “Ɗan mutum, in wata ƙasa ta yi mini zunubi ta wurin rashin aminci na kuma miƙa hannuna gāba da ita don in toshe hanyar samun abincinta na kuma aika da yunwa a kanta na kashe mutanenta da dabbobinta,
೧೩“ನರಪುತ್ರನೇ, ಅಪರಾಧವನ್ನು ನಡೆಸಿ ನನ್ನ ವಿರುದ್ಧವಾಗಿ ಪಾಪಮಾಡಿದ ದೇಶದ ಮೇಲೆ ನಾನು ಕೈಯೆತ್ತಿ, ಅದರ ಆಹಾರ ಸರಬರಾಜನ್ನು ತೆಗೆದುಬಿಟ್ಟು, ಕ್ಷಾಮವನ್ನು ಬರಮಾಡಿ, ಜನರನ್ನು, ಪಶುಗಳನ್ನು ಅದರೊಳಗಿಂದ ನಿರ್ಮೂಲ ಮಾಡುತ್ತೇನೆ.
14 ko da waɗannan mutum uku Nuhu, Daniyel da kuma Ayuba suna a cikinta, za su iya ceton kansu ne kawai ta wurin adalcinsu, in ji Ubangiji Mai Iko Duka.
೧೪ನೋಹ, ದಾನಿಯೇಲ, ಯೋಬ ಎಂಬ ಮೂವರು ಪುರುಷರು ಆ ದೇಶದಲ್ಲಿದ್ದರೂ ತಮ್ಮ ಸದಾಚಾರದಿಂದ ಸ್ವಂತ ಪ್ರಾಣಗಳನ್ನು ಮಾತ್ರ ಉಳಿಸಿಕೊಳ್ಳುತ್ತಿದ್ದರು” ಇದು ಕರ್ತನಾದ ಯೆಹೋವನ ನುಡಿ.
15 “Ko kuwa in na aika da namun jeji su ratsa cikin wannan ƙasa suka kuma bar ta babu yaro, ta kuma zama kufai har babu wanda zai ratsa cikinta saboda namun jeji,
೧೫“ನನ್ನ ಅಪ್ಪಣೆಯ ಮೇರೆಗೆ ದುಷ್ಟ ಮೃಗಗಳು ದೇಶದಲ್ಲಿ ತಿರುಗುತ್ತಾ ಅದನ್ನು ನಿರ್ಜನಗೊಳ್ಳಿಸಿ, ಹಾಳುಮಾಡಿ, ಯಾರೂ ಹಾದು ಹೋಗದಂತೆ ಹೆದರಿಸುವ ಪಕ್ಷದಲ್ಲಿ,
16 muddin ina raye, in ji Ubangiji Mai Iko Duka, ko da ma waɗannan mutum uku suna a cikinta, ba za su iya ceton’ya’yansu maza ko mata ba. Su kaɗai za a iya ceto, amma ƙasar za tă zama kufai.
೧೬ಈ ಮೂವರು ಪುರುಷರು ಆ ದೇಶದಲ್ಲಿದ್ದರೂ ನನ್ನ ಜೀವದಾಣೆ, ತಾವು ಉಳಿದುಕೊಳ್ಳುತ್ತಿದ್ದರೇ ಹೊರತು ತಮ್ಮ ಗಂಡು ಮಕ್ಕಳನ್ನಾಗಲಿ, ಹೆಣ್ಣು ಮಕ್ಕಳನ್ನಾಗಲಿ ಉಳಿಸಿಕೊಳ್ಳುತ್ತಿರಲಿಲ್ಲ; ದೇಶವು ಹಾಳಾಗಿ ಹೋಗುವುದು” ಇದು ಕರ್ತನಾದ ಯೆಹೋವನ ನುಡಿ.
17 “Ko kuma in na kawo takobi a kan wannan ƙasa na kuma ce, ‘Bari takobin ya ratsa cikin dukan ƙasar,’ na kuma kashe mutanenta da dabbobinsu,
೧೭“ಖಡ್ಗವೇ, ದೇಶವನ್ನು ಹೊಕ್ಕು ಹೋಗು ಎಂದು ಆಜ್ಞಾಪಿಸಿ, ನಾನು ಅದನ್ನು ಆ ದೇಶಕ್ಕೆ ತಂದು, ಜನ ಪಶುಗಳನ್ನು ಅದರೊಳಗಿಂದ ನಿರ್ಮೂಲಮಾಡುವ ಪಕ್ಷದಲ್ಲಿ,
18 muddin ina raye, in ji Ubangiji Mai Iko Duka, ko da waɗannan mutum uku suna cikinta, ba za su iya ceton’ya’yansu maza ko mata ba. Su kaɗai za a iya ceto.
೧೮ಈ ಮೂವರು ಪುರುಷರು ಆ ದೇಶದಲ್ಲಿದ್ದರೂ ನನ್ನ ಜೀವದಾಣೆ, ತಾವು ಉಳಿದುಕೊಳ್ಳುತ್ತಿದ್ದರೇ ಹೊರತು ತಮ್ಮ ಗಂಡು ಮಕ್ಕಳನ್ನಾಗಲಿ, ಹೆಣ್ಣು ಮಕ್ಕಳನ್ನಾಗಲಿ ಉಳಿಸಿಕೊಳ್ಳುತ್ತಿರಲಿಲ್ಲ” ಇದು ಕರ್ತನಾದ ಯೆಹೋವನ ನುಡಿ.
19 “Ko kuma in na aika da annoba a cikin wannan ƙasa na kuma yi fushi a kanta ta wurin kisa, ina kisan mutanenta da dabbobinsu,
೧೯“ನಾನು ಆ ದೇಶದ ಮೇಲೆ ನನ್ನ ಕೋಪವನ್ನು ಹೊಯ್ದು, ರಕ್ತವನ್ನು ಸುರಿಸಿ, ವ್ಯಾಧಿಯನ್ನು ಕಳುಹಿಸಿ, ಜನರನ್ನು, ಪಶುಗಳನ್ನು ನಿರ್ಮೂಲಮಾಡುವ ಪಕ್ಷದಲ್ಲಿ,
20 muddin ina raye, in ji Ubangiji Mai Iko Duka, ko da Nuhu, Daniyel da Ayuba suna a cikinta, ba za su iya ceton ɗansu ko’yarsu ba. Za su iya ceton kansu ne kaɗai ta wurin adalcinsu.
೨೦ನೋಹ, ದಾನಿಯೇಲ, ಯೋಬ ಎಂಬುವರು ಆ ದೇಶದಲ್ಲಿದ್ದರೂ ನನ್ನ ಜೀವದಾಣೆ, ತಮ್ಮ ಸದಾಚಾರದಿಂದ ಸ್ವಂತಪ್ರಾಣಗಳನ್ನು ಉಳಿಸಿಕೊಳ್ಳುತ್ತಿದ್ದರೇ ಹೊರತು ತಮ್ಮ ಗಂಡು ಮಗನನ್ನಾಗಲಿ, ಹೆಣ್ಣು ಮಗಳನ್ನಾಗಲಿ ಉಳಿಸಿಕೊಳ್ಳುತ್ತಿರಲಿಲ್ಲ” ಇದು ಕರ್ತನಾದ ಯೆಹೋವನ ನುಡಿ.
21 “Gama ga abin da Ubangiji Mai Iko Duka yana cewa balle fa sa’ad da na aika wa Urushalima da hukuntaina guda huɗu masu zafi takobi da yunwa da namun jeji da annoba don su kashe mutanenta da dabbobinsu!
೨೧ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ಖಡ್ಗ, ಕ್ಷಾಮ, ದುಷ್ಟಮೃಗ ಮತ್ತು ವ್ಯಾಧಿ ಎಂಬ ನಾಲ್ಕು ಬಾಧೆಗಳನ್ನು ಯೆರೂಸಲೇಮಿನ ಮೇಲೆ ಒಟ್ಟಿಗೆ ತಂದು, ಜನರನ್ನು, ಪಶುಗಳನ್ನು ನಿರ್ಮೂಲ ಮಾಡುವಾಗ ಹೇಳತಕ್ಕದ್ದೇನು!
22 Duk da haka za a sami mutanen da za su ragu’ya’ya maza da matan da za a fitar daga cikinta. Za su zo wurinka, kuma sa’ad da ka gan halinsu da ayyukansu, za ka ta’azantu game da bala’in da na kawo a kan Urushalima kowane bala’in da na kawo a kanta.
೨೨ಆದರೂ ಸ್ತ್ರೀಪುರುಷರಲ್ಲಿ ಕೆಲವರು ಹೇಗೋ ತಪ್ಪಿಸಿಕೊಂಡು ಉಳಿದು ಅಲ್ಲಿಂದ ಒಯ್ಯಲ್ಪಡುವರು; ಆಹಾ, ಅವರು ನಿಮ್ಮ ಬಳಿಗೆ ಸೇರಿದಾಗ ನೀವು ಅವರ ದುರ್ಮಾರ್ಗ, ದುಷ್ಕೃತ್ಯಗಳನ್ನು ಕಂಡು ನಾನು ಯೆರೂಸಲೇಮಿನ ಮೇಲೆ ಬರಮಾಡಿದ ಕೇಡಿನ ವಿಷಯವಾಗಿ, ಅದಕ್ಕೆ ಉಂಟುಮಾಡಿದ ಎಲ್ಲಾ ಕೇಡುಗಳ ವಿಷಯವಾಗಿ ಸಮಾಧಾನ ಹೊಂದುವಿರಿ.
23 Za ka ta’azantu sa’ad da ka ga halinsu da kuma ayyukansu, gama za ka san cewa ban aikata wani abu a cikinta ba dalili ba, in ji Ubangiji Mai Iko Duka.”
೨೩ನೀವು ಅವರ ದುರ್ಮಾರ್ಗ, ದುಷ್ಕೃತ್ಯಗಳನ್ನು ನೋಡುವಾಗ ಅವರಿಂದಲೇ ನಿಮಗೆ ಸಮಾಧಾನವಾಗುವುದು; ನಾನು ಯೆರೂಸಲೇಮಿಗೆ ಮಾಡಿದ್ದೆಲ್ಲಾ ಕಾರಣವಿಲ್ಲದೆ ಮಾಡಿದ್ದಲ್ಲವೆಂದು ನಿಮಗೆ ತಿಳಿದು ಬರುವುದು” ಇದು ಕರ್ತನಾದ ಯೆಹೋವನ ನುಡಿ.

< Ezekiyel 14 >