< 1 Istwa 24 >
1 Alò, men divizyon a desandan a Aaron yo: fis a Aaron yo te Nadab, Abihu, Éléazar avèk Ithamar.
೧ಆರೋನನ ಸಂತಾನದವರೂ ವರ್ಗಗಳಾಗಿ ವಿಭಾಗಿಸಲ್ಪಟ್ಟರು. ಆರೋನನ ಮಕ್ಕಳು ನಾದಾಬ್, ಅಬೀಹೂ, ಎಲ್ಲಾಜಾರ್ ಮತ್ತು ಈತಾಮಾರ್ ಎಂಬುವರು.
2 Nadab avèk Abihu te mouri avan papa yo, san yo pa t genyen fis. Pou sa, Éléazar avèk Ithamar te sèvi kon prèt.
೨ನಾದಾಬ್ ಮತ್ತು ಅಬೀಹೂ ಎಂಬುವರು ಮಕ್ಕಳಿಲ್ಲದೆ ತಮ್ಮ ತಂದೆಗಿಂತ ಮೊದಲೇ ಸತ್ತು ಹೋದುದರಿಂದ ಎಲ್ಲಾಜಾರನೂ, ಈತಾಮಾರನೂ ಯಾಜಕ ಉದ್ಯೋಗವನ್ನು ನಡೆಸುತ್ತಿದ್ದರು.
3 David, avèk Tsadok, fis a Éléazar yo ak Achimélec a desandan a Ithamar yo, te divize yo selon fonksyon yo nan sèvis pa yo.
೩ದಾವೀದನು ಎಲ್ಲಾಜಾರನ ಸಂತಾನದವನಾದ ಚಾದೋಕನೂ, ಈತಾಮಾರನ ಸಂತಾನದವನಾದ ಅಹೀಮೆಲೆಕನು ಯಾಜಕರನ್ನು ಸರದಿಯ ಮೇಲೆ ಸೇವೆಮಾಡತಕ್ಕ ವರ್ಗಗಳನ್ನಾಗಿ ವಿಭಾಗಿಸಿದರು.
4 Akoz ke te gen plis chèf nan desandan a Éléazar yo pase nan desandan a Ithamar yo, yo te divize yo konsa: sèz chèf zansèt a desandan a Éléazar yo ak uit nan desandan Ithamar yo, selon lakay zansèt pa yo.
೪ಎಲ್ಲಾಜಾರನ ಸಂತಾನದ ಕುಟುಂಬ ಪ್ರಧಾನರು ಈತಾಮಾರ್ಯರಿಗಿಂತ ಹೆಚ್ಚೆಂದು ಕಂಡು ಬಂದುದರಿಂದ ಎಲ್ಲಾಜಾರರ ಕುಟುಂಬಗಳನ್ನು ಪ್ರಧಾನರ ಲೆಕ್ಕದ ಪ್ರಕಾರ ಹದಿನಾರು ವರ್ಗಗಳನ್ನಾಗಿಯೂ, ಈತಾಮಾರ್ಯರ ಕುಟುಂಬಗಳನ್ನು ಎಂಟು ವರ್ಗಗಳನ್ನಾಗಿಯೂ ಮಾಡಿ,
5 Konsa yo te divize pa tiraj osò, youn tankou lòt la; paske yo te sèvi kon ofisye nan sanktiyè a e ofisye a Bondye, e nan desandan a Éléazar yo ak desandan a Ithamar yo.
೫ಈ ವರ್ಗಗಳ ವಿಷಯವಾಗಿ ಚೀಟು ಹಾಕಿದರು. ಎಲ್ಲಾಜಾರನ ಸಂತಾನದವರಲ್ಲಿ ಹೇಗೋ ಹಾಗೆಯೇ ಈತಾಮಾರನ ಸಂತಾನದವರಲ್ಲಿಯೂ ಪವಿತ್ರಾಲಯದ ಅಧಿಪತಿಗಳು, ದೈವಿಕ ಕಾರ್ಯಗಳ ಅಧ್ಯಕ್ಷರೂ ಇರುವುದರಿಂದ ಉಭಯ ಸಂತಾನದವರು ಸಮಾನ ಸ್ಥಾನದವರಾಗಿದ್ದರು.
6 Schemaeja, fis a Nethaneel la, grefye pou trib Lévi a, te enskri yo nan prezans a wa a, chèf lakay zansèt yo, Tsadok, prèt la, Achimélec, fis a Abiathar a ak chèf a lakay zansèt a prèt avèk Levit yo; youn lakay zansèt ki te pran pou Éléazar yo e youn pou Ithamar yo.
೬ನೆತನೇಲನ ಮಗನಾದ ಶೆಮಾಯನೆಂಬ ಲೇವಿಯ ಲೇಖಕನು ಅರಸನ ಮುಂದೆಯೂ, ಅಧಿಪತಿಗಳು, ಯಾಜಕನಾದ ಚಾದೋಕ್, ಎಬ್ಯಾತಾರನ ಮಗನಾದ ಅಹೀಮೆಲೆಕ್, ಯಾಜಕರ ಮತ್ತು ಲೇವಿಯರ ಕುಟುಂಬ ಪ್ರಧಾನರು ಇವರ ಮುಂದೆಯೂ ಆ ವರ್ಗಗಳ ಪಟ್ಟಿಯನ್ನು ಬರೆದನು. ಎಲ್ಲಾಜಾರನ ಒಂದು ವರ್ಗದವರಾದ ನಂತರ ಈತಾಮಾರ್ಯರ ಒಂದು ವರ್ಗದವರು ಸೇವಿಸಬೇಕೆಂದು ನೇಮಿಸಿ ಎಲ್ಲಾ ವರ್ಗಗಳ ಸರದಿಯನ್ನು ಚೀಟಿನಿಂದಲೇ ಗೊತ್ತುಮಾಡಿದರು.
7 Alò, premye tiraj osò a te tonbe pou Jehojarib; dezyèm nan pou Jedaeja;
೭ಮೊದಲನೆಯ ಚೀಟು ಯೆಹೋಯಾರೀಬನಿಗೆ, ಎರಡನೆಯದು ಯೆದಾಯನಿಗೆ,
8 twazyèm nan a Harim; katriyèm nan a Seorim;
೮ಮೂರನೆಯದು ಹಾರೀಮನಿಗೆ, ನಾಲ್ಕನೆಯದು ಸೆಯೋರೀಮನಿಗೆ,
9 senkyèm nan a Malkija; sizyèm nan a Mijamin;
೯ಐದನೆಯದು ಮಲ್ಕೀಯನಿಗೆ, ಆರನೆಯದು ಮಿಯ್ಯಾಮೀನನಿಗೆ,
10 setyèm nan a Hakkots; uityèm nan a Abija;
೧೦ಏಳನೆಯದು ಹಕ್ಕೋಚನಿಗೆ, ಎಂಟನೆಯದು ಅಬೀಯನಿಗೆ,
11 nevyèm nan a Josué; dizyèm nan a Schecania;
೧೧ಒಂಬತ್ತನೆಯದು ಯೆಷೂವನಿಗೆ, ಹತ್ತನೆಯದು ಶೆಕನ್ಯನಿಗೆ,
12 onzyèm nan a Éliaschib; douzyèm nan a Jakim;
೧೨ಹನ್ನೊಂದನೆಯದು ಎಲ್ಯಾಷೀಬನಿಗೆ, ಹನ್ನೆರಡನೆಯದು ಯಾಕೀಮನಿಗೆ,
13 trèzyèm nan a Huppa; katòzyèm nan a Jeschébeab;
೧೩ಹದಿಮೂರನೆಯದು ಹುಪ್ಪನಿಗೆ, ಹದಿನಾಲ್ಕನೆಯದು ಎಷೆಬಾಬನಿಗೆ,
14 kenzyèm nan a Bilga; sizyèm nan a Immer;
೧೪ಹದಿನೈದನೆಯದು ಬಿಲ್ಗನಿಗೆ, ಹದಿನಾರನೆಯದು ಇಮ್ಮೇರನಿಗೆ,
15 di-setyèm nan a Hézir; di-zuityèm nan a Happitsets;
೧೫ಹದಿನೇಳನೆಯದು ಹೇಜೀರನಿಗೆ, ಹದಿನೆಂಟನೆಯದು ಹಪ್ಪಿಚ್ಚೇಚನಿಗೆ,
16 diz-nevyèm nan a Pethachja; ventyèm nan a Ézéchiel;
೧೬ಹತ್ತೊಂಬತ್ತನೆಯದು ಪೆತಹ್ಯನಿಗೆ, ಇಪ್ಪತ್ತನೆಯದು ಯೆಹೆಜ್ಕೇಲನಿಗೆ,
17 ven-te-inyèm nan a Jakin; venn-dezyèm nan a Gamul;
೧೭ಇಪ್ಪತ್ತೊಂದನೆಯದು ಯಾಕೀನನಿಗೆ, ಇಪ್ಪತ್ತೆರಡನೆಯದು ಗಾಮೂಲನಿಗೆ,
18 venn-twazyèm nan a Delaja; venn-katriyèm nan a Maazia.
೧೮ಇಪ್ಪತ್ತ ಮೂರನೆಯದು ದೆಲಾಯನಿಗೆ, ಇಪ್ಪತ್ತ ನಾಲ್ಕನೆಯದು ಮಾಜ್ಯನಿಗೆ ಬಿದ್ದಿತು.
19 Sa yo te pozisyon sèvis yo te fè lè yo te antre lakay SENYÈ a selon règleman ki te bay a yo menm pa Aaron, zansèt pa yo, jis jan ke SENYÈ a, Bondye Israël la, te kòmande li a.
೧೯ಆರೋನ್ಯರು ಈ ವರ್ಗ ಕ್ರಮದಿಂದ ಯೆಹೋವನ ಆಲಯಕ್ಕೆ ಬಂದು ಇಸ್ರಾಯೇಲಿನ ದೇವರಾದ ಯೆಹೋವನಿಗೆ ಲೇವಿಯರ ಮೂಲಪುರುಷನಾದ ಆರೋನನ ಮುಖಾಂತರವಾಗಿ ನೇಮಿಸಿದ ಸೇವೆಯನ್ನು ನಡೆಸತಕ್ಕದ್ದು.
20 Alò, pou lòt fis a Lévi yo: nan fis Amram yo: Schubaël; nan fis a Schubaël yo: Jechdia;
೨೦ಉಳಿದ ಲೇವಿಯರ ಪಟ್ಟಿ. ಅಮ್ರಾಮನ ಸಂತಾನದವರಾದ ಶೂಬಾಯೇಲನ ಕುಟುಂಬದವರಲ್ಲಿ ಯೆಹ್ದೆಯಾಹನು.
21 a Rechabia: selon fis a Rechabia yo: chèf Jischija.
೨೧ರೆಹಬ್ಯನ ಸಂತಾನದವರಲ್ಲಿ ಇಷ್ಷೀಯನೂ,
22 Selon Jitsearit yo: Schelomoth; nan fis a Schelomoth yo: Jachath.
೨೨ಇಚ್ಹಾರನ ಸಂತಾನದ ಶೆಲೋಮೋತನ ಕುಟುಂಬದವರಲ್ಲಿ ಯಹತನೂ ಪ್ರಧಾನರು.
23 Fis a Hébron yo: Jerija, premye a, Amaria, dezyèm nan, Jachaziel, twazyèm nan, Jekameam, katriyèm nan.
೨೩ಹೆಬ್ರೋನನ ಸಂತಾನದವರಲ್ಲಿ ಯೆರೀಯನು ಪ್ರಧಾನನು, ಅಮರ್ಯನು ಎರಡನೆಯವನು, ಯಹಜೀಯೇಲನು, ಮೂರನೆಯವನು ಮತ್ತು ಯೆಕಮ್ಮಾಮನು ನಾಲ್ಕನೆಯವನು,
24 Selon fis a Uziel yo: Michée; epi fis a Michée yo, Shamir.
೨೪ಉಜ್ಜೀಯೇಲನ ಮಗನಾದ ಮೀಕನ ಸಂತಾನದವರಲ್ಲಿ ಶಾಮೀರನೂ,
25 Frè a Michée a, Jischija; nan fis a Jischija yo: Zacharie.
೨೫ಮೀಕನ ತಮ್ಮನಾದ ಇಷ್ಷೀಯನ ಸಂತಾನದವರಲ್ಲಿ ಜೆಕರ್ಯನು ಪ್ರಧಾನರು.
26 Fis a Merari yo: Machli avèk Muschi; fis a Jaazija yo, Beno.
೨೬ಮೆರಾರೀಯ ಮಕ್ಕಳು ಮಹ್ಲೀ ಮತ್ತು ಮೂಷೀ ಎಂಬುವವರು. ಅವನ ಮತ್ತೊಬ್ಬ ಮಗನಾದ ಯಾಜ್ಯನ ವಂಶದವನು ಬೆನೋ.
27 Fis a Merari yo: pa Jaazia, Beno, Schoham, Zaccur ak Ibri.
೨೭ಮೆರಾರೀಯ ಸಂತಾನದವರಲ್ಲಿ ಯಾಜ್ಯ, ಬೆನೋ, ಶೋಹಮ್, ಜಕ್ಕೂರ್ ಮತ್ತು ಇಬ್ರೀ ಇವರೇ.
28 Pa Mahli: Éléazar ki pa t gen fis.
೨೮ಮಹ್ಲೀಯನ ಮಗನಾದ ಎಲ್ಲಾಜಾರನೂ ಮಕ್ಕಳಿಲ್ಲದೆ ಸತ್ತನು.
29 Pa Kis: nan fis a Kis yo, Jerachmeel.
೨೯ಕೀಷನಿಂದ ಯೆರಹ್ಮೇಲನು ಹುಟ್ಟಿದನು.
30 Fis a Muschi yo: Machli, Éder ak Jerimoth.
೩೦ಮೂಷೀಯನ ಮಕ್ಕಳು ಮಹ್ಲೀ, ಏದೆರ್ ಮತ್ತು ಯೆರೀಮೋತ್ ಎಂಬುವವರು.
31 Sila yo osi te voye kon tiraj osò tankou manm fanmi pa yo, fis a Aaron yo nan prezans a David, wa a, Tsadok avèk Achimélec, chèf lakay zansèt pa yo pami prèt ak Levit yo, chèf lakay papa pa yo jis jan sa ye pou nan pi piti frè li yo.
೩೧ಇವರೆಲ್ಲಾ ಲೇವಿ ಸಂತಾನದವರು. ಇವರ ಕುಟುಂಬಗಳಲ್ಲಿ ಎಲ್ಲಾ ಹಿರಿಯರೂ, ಕಿರಿಯರೂ ತಮ್ಮ ಕುಲ ಬಂಧುಗಳಾದ ಆರೋನ್ಯರಂತೆ ಅರಸನಾದ ದಾವೀದ ಚಾದೋಕ್ ಅಹೀಮೆಲೆಕ್ ಇವರ ಮುಂದೆಯೂ, ಯಾಜಕರ ಮತ್ತು ಲೇವಿಯರ ಕುಟುಂಬ ಪ್ರಧಾನರ ಮುಂದೆಯೂ, ಚೀಟಿನಿಂದ ತಮ್ಮಲ್ಲಿ ಸರದಿಗಳನ್ನು ನೇಮಿಸಿಕೊಂಡರು.