< Ἱερεμίας 15 >
1 Και είπε Κύριος προς εμέ, Και αν ο Μωϋσής και ο Σαμουήλ ίσταντο ενώπιόν μου, η ψυχή μου δεν ήθελεν είσθαι υπέρ του λαού τούτου· αποδίωξον αυτούς απ' έμπροσθέν μου και ας εξέλθωσι.
೧ಯೆಹೋವನು ನನಗೆ ಹೀಗೆ ಹೇಳಿದನು, “ಮೋಶೆಯು ಮತ್ತು ಸಮುವೇಲನು ನನಗೆ ವಿಜ್ಞಾಪಿಸಿದರೂ ನನ್ನ ಮನಸ್ಸು ಈ ಜನರ ಕಡೆಗೆ ತಿರುಗುವುದಿಲ್ಲ. ನನ್ನ ಕಣ್ಣೆದುರಿನಿಂದ ಇವರನ್ನು ನೂಕಿಬಿಡು, ತೊಲಗಿ ಹೋಗಲಿ!
2 Και εάν είπωσι προς σε, Που θέλομεν εξέλθει; τότε θέλεις ειπεί προς αυτούς, Ούτω λέγει Κύριος· Όσοι είναι διά τον θάνατον, εις θάνατον· και όσοι διά την μάχαιραν, εις μάχαιραν· και όσοι διά την πείναν, εις πείναν· και όσοι διά την αιχμαλωσίαν, εις αιχμαλωσίαν.
೨ಅವರು, ‘ನಾವು ಎಲ್ಲಿಗೆ ಹೋಗೋಣ?’ ಎಂದು ನಿನ್ನನ್ನು ಕೇಳಲು ನೀನು ಅವರಿಗೆ, ‘ಮರಣ ವ್ಯಾಧಿಗೆ ನೇಮಿತರಾದವರು ಮರಣವ್ಯಾಧಿಗೆ, ಖಡ್ಗಕ್ಕೆ ನೇಮಿತರಾದವರು ಖಡ್ಗಕ್ಕೆ ಬಲಿಯಾಗಲಿ. ಕ್ಷಾಮಕ್ಕೆ ನೇಮಿತರಾದವರು ಕ್ಷಾಮಕ್ಕೆ, ಸೆರೆಗೆ ನೇಮಿತರಾದವರು ಸೆರೆಗೆ ಗುರಿಯಾಗಿ ಹೋಗಲಿ; ಇದೇ ಯೆಹೋವನ ನುಡಿ’” ಎಂದು ಹೇಳು.
3 Και θέλω επιφέρει επ' αυτούς τέσσαρα είδη, λέγει Κύριος· την μάχαιραν διά σφαγήν, και τους κύνας διά σπαραγμόν, και τα πετεινά του ουρανού, και τα θηρία της γης, διά να καταφάγωσι και να αφανίσωσι.
೩“ನಾನು ಅವರಿಗೆ ನಾಲ್ಕು ವಿಧವಾದ ಬಾಧಕರನ್ನು, ಅಂದರೆ ಕಡಿಯುವುದಕ್ಕೆ ಖಡ್ಗವನ್ನು, ಸೀಳುವುದಕ್ಕೆ ನಾಯಿಗಳನ್ನು, ನುಂಗಿ ಹಾಳುಮಾಡುವುದಕ್ಕೆ ಆಕಾಶದ ಪಕ್ಷಿಗಳನ್ನೂ ಮತ್ತು ಭೂಜಂತುಗಳನ್ನೂ ನೇಮಿಸುವೆನು” ಎಂಬುದು ಯೆಹೋವನಾದ ನನ್ನ ಮಾತು.
4 Και θέλω παραδώσει αυτούς εις διασποράν εν πάσι τοις βασιλείοις της γής· εξ αιτίας του Μανασσή, υιού Εζεκίου βασιλέως του Ιούδα, δι' όσα έπραξεν εν Ιερουσαλήμ.
೪“ಹಿಜ್ಕೀಯನ ಮಗನೂ ಯೆಹೂದದ ಅರಸನೂ ಆದ ಮನಸ್ಸೆಯು ಯೆರೂಸಲೇಮಿನಲ್ಲಿ ನಡೆಸಿದ್ದಕ್ಕೆ ಪ್ರತಿಯಾಗಿ, ನಾನು ಅವರನ್ನು ಲೋಕದ ಸಮಸ್ತ ರಾಜ್ಯಗಳಿಗೆ ಭಯಾಸ್ಪದವಾಗುವಂತೆ ಮಾಡುವೆನು.
5 Διότι τις θέλει σε οικτείρει, Ιερουσαλήμ; ή τις θέλει σε συλλυπηθή; ή τις θέλει στραφή διά να ερωτήση, Πως έχεις;
೫ಯೆರೂಸಲೇಮೇ, ಯಾರು ನಿನ್ನನ್ನು ಕರುಣಿಸುವರು? ನಿನಗಾಗಿ ಯಾರು ಪ್ರಲಾಪಿಸುವರು? ನಿನ್ನ ಕ್ಷೇಮವನ್ನು ವಿಚಾರಿಸಲು ಯಾರು ನಿನ್ನ ಕಡೆಗೆ ತಿರುಗುವರು?
6 Συ με εγκατέλιπες, λέγει Κύριος, υπήγες εις τα οπίσω· διά τούτο θέλω εκτείνει την χείρα μου επί σε και θέλω σε αφανίσει· απέκαμον ελεών.
೬ಯೆಹೋವನ ಈ ಮಾತನ್ನು ಕೇಳು, ‘ನೀನು ನನ್ನನ್ನು ಅಲ್ಲಗಳೆದು ಹಿಂದಿರುಗಿದ್ದಿ. ಆದಕಾರಣ ನಾನು ನಿನ್ನ ಮೇಲೆ ಕೈಯೆತ್ತಿ ನಿನ್ನನ್ನು ನಾಶಮಾಡುವೆನು; ನಿನ್ನನ್ನು ಕ್ಷಮಿಸಿ ಕ್ಷಮಿಸಿ ಸಾಕಾಯಿತು.
7 Και θέλω εκλικμήσει αυτούς με το λικμητήριον εν ταις πύλαις της γής· θέλω ατεκνώσει αυτούς, θέλω αφανίσει τον λαόν μου, διότι δεν επιστρέφουσιν από των οδών αυτών.
೭ನನ್ನ ಜನರನ್ನು ದೇಶದ ಬಾಗಿಲುಗಳಲ್ಲಿ ಕವೆಗೋಲಿನಿಂದ ಹಾರಿಸಿ ತೂರುವೆನು. ಅವರನ್ನು ಪುತ್ರಶೋಕಕ್ಕೆ ಈಡುಮಾಡಿ ನಾಶಪಡಿಸುವೆನು; ಅವರು ಹೋದ ದಾರಿಯಿಂದ ಹಿಂದಿರುಗರು.
8 Αι χήραι αυτών επληθύνθησαν ενώπιόν μου υπέρ την άμμον της θαλάσσης· έφερα επ' αυτούς, επί τας μητέρας των νέων, λεηλάτην εν μεσημβρία· επέφερα επ' αυτάς εξαίφνης ταραχάς και τρόμους.
೮ಅವರ ವಿಧವೆಯರು ನನ್ನ ಭಾಗಕ್ಕೆ ಸಮುದ್ರದ ಉಸುಬಿಗಿಂತ ಹೆಚ್ಚಾಗಿರುವರು. ಯುವಕರ ಮತ್ತು ತಾಯಂದಿರ ಮೇಲೆ ಕೊಳ್ಳೆ ಹೊಡೆಯುವವನನ್ನು ಮಧ್ಯಾಹ್ನದಲ್ಲೇ ಬರಮಾಡುವೆನು. ಅವರ ಮೇಲೆ ಕಳವಳವನ್ನು ಮತ್ತು ದಿಗಿಲನ್ನು ತಟ್ಟನೆ ಬೀಳಿಸುವೆನು.
9 Εκείνη, ήτις εγέννησεν επτά, απέκαμε, παρέδωκε το πνεύμα· ο ήλιος αυτής έδυσεν, ενώ, ήτο έτι ημέρα· κατησχύνθη και εταράχθη· το δε υπόλοιπον αυτών θέλω παραδώσει εις την μάχαιραν έμπροσθεν των εχθρών αυτών, λέγει Κύριος.
೯ಏಳು ಮಂದಿ ಮಕ್ಕಳನ್ನು ಹೆತ್ತ ಭಾಗ್ಯವಂತಳೂ ಬಳಲಿ ಪ್ರಾಣಬಿಟ್ಟಂತಿದ್ದಾಳೆ, ಹಗಲಿನಲ್ಲಿಯೇ ಆಕೆಯ ಪಾಲಿಗೆ ಸೂರ್ಯನು ಮುಳುಗಿದ್ದಾನೆ, ಆಶಾಭಂಗಪಟ್ಟು ಅವಮಾನಕ್ಕೆ ಈಡಾಗಿದ್ದಾಳೆ. ಆಕೆಯ ಉಳಿದ ಸಂತಾನವನ್ನು ಶತ್ರುಗಳ ಕಣ್ಣೆದುರಿನಲ್ಲಿ ನಾನು ಖಡ್ಗಕ್ಕೆ ಗುರಿಮಾಡುವೆನು’” ಇದು ಯೆಹೋವನ ನುಡಿ.
10 Ουαί εις εμέ, μήτέρ μου, διότι εγέννησας εμέ άνδρα έριδος και άνδρα φιλονεικίας μεθ' όλης της γης. Ούτε ετόκισα ούτε με ετόκισαν· και όμως πας τις εξ αυτών με καταράται.
೧೦ನನ್ನ ತಾಯೀ, ನನ್ನ ಗತಿಯನ್ನು ಏನು ಹೇಳಲಿ! ನಿನ್ನ ಗರ್ಭದಿಂದ ಬಂದ ನಾನು ಲೋಕದವರೆಲ್ಲರಿಗೆ ಜಗಳಗಂಟಿಗನೂ, ವ್ಯಾಜ್ಯಗಾರನೂ ಆಗಿದ್ದೇನಲ್ಲಾ. ನಾನು ಹಣವನ್ನು ಬಡ್ಡಿಗೆ ಕೊಟ್ಟವನಲ್ಲ, ತೆಗೆದುಕೊಂಡವನಲ್ಲ, ಆದರೂ ನನ್ನನ್ನು ಎಲ್ಲರೂ ನಿಂದಿಸುತ್ತಾರೆ.
11 Ο Κύριος λέγει, Βεβαίως το υπόλοιπόν σου θέλει είσθαι καλόν· βεβαίως θέλω μεσιτεύσει υπέρ σου προς τον εχθρόν εν καιρώ συμφοράς και εν καιρώ θλίψεως.
೧೧ಇದಕ್ಕೆ ಯೆಹೋವನು, “ನಿನಗೆ ಮೇಲಾಗುವಂತೆ ನಿಶ್ಚಯವಾಗಿ ನಿನ್ನನ್ನು ಬಿಡುಗಡೆಮಾಡುವೆನು. ನಿಜನಿಜವಾಗಿ ನಿನ್ನ ಕೇಡಿನಲ್ಲಿಯೂ, ಇಕ್ಕಟ್ಟಿನಲ್ಲಿಯೂ ಶತ್ರುವನ್ನು ನಿನಗೆ ಶರಣಾಗತನನ್ನಾಗಿ ಮಾಡುವೆನು.
12 Ο σίδηρος θέλει συντρίψει τον σίδηρον του βορρά και τον χαλκόν;
೧೨ಕಬ್ಬಿಣವನ್ನು, ಬಡಗಣ ಕಬ್ಬಿಣವನ್ನು ಯಾರು ಮುರಿದಾರು? ತಾಮ್ರವನ್ನು ಮುರಿಯುವುದು ಯಾರಿಂದಾದೀತು?” ಎಂದು ಹೇಳಿದನು.
13 Τα υπάρχοντά σου και τους θησαυρούς σου θέλω παραδώσει εις λεηλασίαν άνευ ανταλλάγματος, και τούτο διά πάσας τας αμαρτίας σου και κατά πάντα τα όριά σου.
೧೩“ನಿನ್ನ ಸಕಲ ಪ್ರಾಂತ್ಯಗಳಲ್ಲಿ ನೀನು ಮಾಡಿದ ಎಲ್ಲಾ ಪಾಪಗಳ ನಿಮಿತ್ತ ನಾನು ನಿನ್ನ ಸೊತ್ತು ಮತ್ತು ಸಂಪತ್ತುಗಳನ್ನು ಲಾಭವಿಲ್ಲದೆ ಸೂರೆಗೆ ಈಡುಮಾಡಿ,
14 Και θέλω σε περάσει μετά των εχθρών σου εις τόπον τον οποίον δεν γνωρίζεις· διότι πυρ εξήφθη εν τω θυμώ μου, το οποίον θέλει εκκαυθή καθ' υμών.
೧೪ಅವುಗಳನ್ನು ನಿನ್ನ ಶತ್ರುಗಳ ಕೈಗೆ ಕೊಟ್ಟು, ನೀನು ನೋಡದ ದೇಶಕ್ಕೆ ಸಾಗಿಸಿಬಿಡುವೆನು. ನನ್ನ ರೋಷದಿಂದ ಉರಿಯು ಹತ್ತಿಕೊಂಡಿದೆ, ಅದು ನಿಮ್ಮನ್ನು ಸುಟ್ಟುಬಿಡುವುದು.”
15 Συ, Κύριε, γνωρίζεις· ενθυμήθητί με και επίσκεψαί με και εκδίκησόν με από των καταδιωκόντων με· μη με αρπάσης εν τη μακροθυμία σου· γνώρισον ότι διά σε υπέφερα ονειδισμόν.
೧೫ಅದಕ್ಕೆ ನಾನು, “ಯೆಹೋವನೇ, ನೀನೇ ಬಲ್ಲೆ, ನನ್ನನ್ನು ಜ್ಞಾಪಕಕ್ಕೆ ತಂದು ಕಟಾಕ್ಷಿಸು; ನನಗಾಗಿ ನನ್ನ ಹಿಂಸಕರಿಗೆ ಮುಯ್ಯಿತೀರಿಸು. ಅವರಿಗೆ ಹೆಚ್ಚು ತಾಳ್ಮೆಯನ್ನು ತೋರಿಸಬೇಡ, ನನ್ನನ್ನು ನಿರ್ಮೂಲ ಮಾಡಬೇಡ. ನಿನ್ನ ನಿಮಿತ್ತವೇ ನಾನು ನಿಂದೆಗೆ ಗುರಿಯಾದೆನೆಂದು ಜ್ಞಾಪಕಕ್ಕೆ ತಂದುಕೋ.
16 Καθώς ευρέθησαν οι λόγοι σου, κατέφαγον αυτούς· και ο λόγος σου ήτο εν εμοί χαρά και αγαλλίασις της καρδίας μου· διότι το όνομά σου εκλήθη επ' εμέ, Κύριε Θεέ των δυνάμεων.
೧೬ನನಗೆ ದೊರೆತ ನಿನ್ನ ಮಾತುಗಳನ್ನು ಆಹಾರಮಾಡಿಕೊಂಡೆನು, ನಿನ್ನ ನುಡಿಗಳು ನನಗೆ ಹರ್ಷವೂ, ಹೃದಯಾನಂದವೂ ಆದವು. ಸೇನಾಧೀಶ್ವರನಾದ ದೇವರೇ, ಯೆಹೋವನೇ, ನಾನು ನಿನ್ನ ಹೆಸರಿನವನಲ್ಲವೇ!
17 Δεν εκάθησα εν συνεδρίω χλευαστών και συνευφράνθην· εκάθησα μόνος εξ αιτίας της χειρός σου· διότι συ με ενέπλησας αδημονίας.
೧೭ನಾನು ವಿನೋದಗಾರರ ಕೂಟದಲ್ಲಿ ಕುಳಿತುಕೊಳ್ಳಲಿಲ್ಲ, ಉಲ್ಲಾಸಪಡಲೂ ಇಲ್ಲ. ನೀನು ನನ್ನ ಮೇಲೆ ಕೈಯಿಟ್ಟಿದ್ದರಿಂದ ಒಂಟಿಗನಾಗಿ ಕುಳಿತೆನು; ನನ್ನನ್ನು ರೋಷದಿಂದ ತುಂಬಿಸಿದ್ದಿಯಷ್ಟೆ.
18 Διά τι ο πόνος μου είναι παντοτεινός και η πληγή μου ανίατος, μη θέλουσα να ιατρευθή; θέλεις είσθαι διόλου εις εμέ ως ψεύστης και ως ύδατα απατηλά;
೧೮ಏಕೆ ನನ್ನ ವ್ಯಥೆಯು ನಿರಂತರವಾಗಿದೆ? ನನ್ನ ಗಾಯವು ಗಡುಸಾಗಿ ಗುಣಹೊಂದದೆ ಇರುವುದು ಏಕೆ? ನೀನು ನನಗೆ ನೀರು ಬತ್ತುವ ಕಳ್ಳತೊರೆಯಂತಿರಬೇಕೋ?” ಎಂದು ಅರಿಕೆಮಾಡಿಕೊಂಡೆನು.
19 Διά τούτο ούτω λέγει Κύριος· Εάν επιστρέψης, τότε θέλω σε αποκαταστήσει πάλιν, και θέλεις ίστασθαι ενώπιόν μου· και εάν αποχωρίσης το τίμιον από του αχρείου, θέλεις είσθαι ως το στόμα μου· αυτοί ας επιστρέψωσι προς σε, αλλά συ με επιστρέψης προς αυτούς.
೧೯ಇದರಿಂದ ಯೆಹೋವನು, “ನೀನು ನನ್ನ ಕಡೆಗೆ ಹಿಂದಿರುಗಿದರೆ ನನ್ನ ಸಮ್ಮುಖದಲ್ಲಿ ನಿಲ್ಲುವಂತೆ ನಾನು ನಿನ್ನನ್ನು ತಿರುಗಿ ಸೇರಿಸಿಕೊಳ್ಳುವೆನು. ನೀನು ತುಚ್ಛವಾದದ್ದನ್ನು ನಿರಾಕರಿಸಿ, ಅಮೂಲ್ಯವಾದದ್ದನ್ನು ಪ್ರಕಾಶಪಡಿಸಿದರೆ ನೀನು ನನ್ನ ಬಾಯಂತಿರುವಿ. ಜನರು ನಿನ್ನ ಕಡೆಗೆ ತಿರುಗಿಕೊಳ್ಳುವರು, ನೀನು ಅವರ ಕಡೆಗೆ ತಿರುಗದಿರುವಿ.
20 Και θέλω σε κάμει προς τούτον τον λαόν οχυρόν χαλκούν τείχος· και θέλουσι σε πολεμήσει, αλλά δεν θέλουσιν υπερισχύσει εναντίον σου, διότι εγώ είμαι μετά σου διά να σε σώζω και να σε ελευθερόνω, λέγει Κύριος.
೨೦ನಾನು ನಿನ್ನನ್ನು ಈ ಜನರಿಗೆ ದುರ್ಗಮವಾದ ತಾಮ್ರದ ಪೌಳಿಗೋಡೆಯನ್ನಾಗಿ ಮಾಡುವೆನು. ಅವರು ನಿನ್ನ ವಿರುದ್ಧವಾಗಿ ಯುದ್ಧಮಾಡುವರು. ಆದರೆ ನಿನ್ನನ್ನು ಸೋಲಿಸಲಾಗುವುದಿಲ್ಲ. ನಿನ್ನನ್ನು ಉದ್ಧರಿಸಿ ರಕ್ಷಿಸಲು ನಾನೇ ನಿನ್ನೊಂದಿಗಿರುವೆನು. ಇದು ಯೆಹೋವನಾದ ನನ್ನ ಮಾತು.
21 Και θέλω σε ελευθερώσει εκ της χειρός των πονηρών και θέλω σε λυτρώσει εκ της χειρός των καταδυναστευόντων.
೨೧ನಾನು ನಿನ್ನನ್ನು ದುಷ್ಟರ ಕೈಯಿಂದ ಉದ್ಧರಿಸುವೆನು, ಹೌದು, ಕ್ರೂರರ ಕೈಯಿಂದ ರಕ್ಷಿಸುವೆನು” ಎಂದಿದ್ದಾನೆ.