< Βασιλειῶν Γʹ 21 >
1 Μετά δε ταύτα τα πράγματα Ναβουθαί ο Ιεζραηλίτης είχεν αμπελώνα εν Ιεζραέλ, πλησίον του παλατίου του Αχαάβ βασιλέως της Σαμαρείας.
ಕೆಲವು ಕಾಲದ ನಂತರ, ಇಜ್ರೆಯೇಲ್ ಪಟ್ಟಣದಲ್ಲಿ ಸಮಾರ್ಯದ ಅರಸನಾದ ಅಹಾಬನ ಅರಮನೆಯ ಬಳಿಯಲ್ಲಿ ಇಜ್ರೆಯೇಲಿನವನಾದ ನಾಬೋತನಿಗೆ ಒಂದು ದ್ರಾಕ್ಷಿ ತೋಟವಿತ್ತು.
2 Και ελάλησεν ο Αχαάβ προς τον Ναβουθαί, λέγων, Δος μοι τον αμπελώνά σου, διά να έχω αυτόν κήπον λαχάνων, επειδή είναι πλησίον του οίκου μου· και θέλω σοι δώσει αντ' αυτού αμπελώνα καλήτερον παρ' αυτού· ή, αν ήναι αρεστόν εις σε, θέλω σοι δώσει το αντίτιμον αυτού εις αργύριον.
ಅಹಾಬನು ನಾಬೋತನಿಗೆ, “ತೋಟವು ನನ್ನ ಮನೆಯ ಬಳಿಯಲ್ಲಿ ಇರುವುದರಿಂದ ಅದು ನನಗೆ ಕಾಯಿಪಲ್ಯದ ತೋಟವಾಗುವ ಹಾಗೆ ಅದನ್ನು ನನಗೆ ಕೊಡು. ನಾನು ಅದಕ್ಕೆ ಬದಲಾಗಿ ಅದಕ್ಕಿಂತ ಒಳ್ಳೆಯ ದ್ರಾಕ್ಷಿತೋಟವನ್ನು ನಿನಗೆ ಕೊಡುವೆನು. ಇಲ್ಲವೆ ನಿನ್ನ ದೃಷ್ಟಿಗೆ ಒಳ್ಳೆಯದಾಗಿದ್ದರೆ, ಹಣದಲ್ಲಿ ಅದರ ಬೆಲೆಯನ್ನು ಕೊಡುವೆನು,” ಎಂದನು.
3 Ο δε Ναβουθαί είπε προς τον Αχαάβ, Μη γένοιτο εις εμέ παρά Θεού, να δώσω την κληρονομίαν των πατέρων μου εις σε.
ಆದರೆ ನಾಬೋತನು ಅಹಾಬನಿಗೆ, “ನಾನು ನನ್ನ ಪಿತೃಗಳ ಬಾಧ್ಯತೆಯನ್ನು ನಿನಗೆ ಕೊಡದಂತೆ ಯೆಹೋವ ದೇವರು ನನ್ನನ್ನು ತಡೆಯಲಿ,” ಎಂದನು.
4 Και ήλθεν ο Αχαάβ εις τον οίκον αυτού σκυθρωπός και δυσηρεστημένος διά τον λόγον, τον οποίον ελάλησε προς αυτόν Ναβουβαί ο Ιεζραηλίτης, ειπών, Δεν θέλω σοι δώσει την κληρονομίαν των πατέρων μου. Και επλαγίασεν επί της κλίνης αυτού και απέστρεψε το πρόσωπον αυτού και δεν έφαγεν άρτον.
“ನಾನು ನನ್ನ ಪಿತೃಗಳ ಬಾಧ್ಯತೆಯನ್ನು ನಿನಗೆ ಕೊಡುವುದಿಲ್ಲ,” ಎಂದು ಇಜ್ರೆಯೇಲಿನವನಾದ ನಾಬೋತನು ಹೇಳಿದ ಮಾತಿಗೋಸ್ಕರ, ಅಹಾಬನು ವ್ಯಸನದಿಂದಲೂ ಕೋಪದಿಂದಲೂ ತನ್ನ ಮನೆಗೆ ಬಂದು, ತನ್ನ ಮಂಚದ ಮೇಲೆ ಮಲಗಿ, ತನ್ನ ಮುಖವನ್ನು ತಿರುಗಿಸಿಕೊಂಡು ಊಟಮಾಡದೆ ಇದ್ದನು.
5 Και ήλθε προς αυτόν Ιεζάβελ η γυνή αυτού και είπε προς αυτόν, Διά τι το πνεύμά σου είναι περίλυπον, ώστε δεν τρώγεις άρτον;
ಆಗ ಅವನ ಹೆಂಡತಿ ಈಜೆಬೆಲಳು ಅವನ ಬಳಿಗೆ ಬಂದು ಅವನಿಗೆ, “ನೀನು ವ್ಯಸನವಾಗಿರುವುದೇಕೆ? ಯಾಕೆ ಊಟಮಾಡುವುದಿಲ್ಲ?” ಎಂದಳು.
6 Ο δε είπε προς αυτήν, Επειδή ελάλησα προς Ναβουθαί τον Ιεζραηλίτην, και είπα προς αυτόν, Δος μοι τον αμπελώνά σου δι' αργυρίου· ή, αν αγαπάς, θέλω σοι δώσει άλλον αμπελώνα αντ' αυτού. και εκείνος απεκρίθη, Δεν θέλω σοι δώσει τον αμπελώνά μου.
ಅವನು ಅವಳಿಗೆ, “ಏಕೆಂದರೆ ನಾನು ಇಜ್ರೆಯೇಲಿನವನಾದ ನಾಬೋತನ ಸಂಗಡ ಮಾತನಾಡಿ, ‘ನಿನ್ನ ದ್ರಾಕ್ಷಿತೋಟವನ್ನು ನನಗೆ ಕ್ರಯಕ್ಕೆ ಕೊಡು. ಇಲ್ಲವೆ ನಿನಗೆ ಮನಸ್ಸಿದ್ದರೆ ಅದಕ್ಕೆ ಬದಲಾಗಿ ಬೇರೆ ದ್ರಾಕ್ಷಿತೋಟವನ್ನು ಕೊಡುವೆನು,’ ಎಂದು ಅವನಿಗೆ ಹೇಳಿದೆನು. ಅದಕ್ಕವನು, ‘ನನ್ನ ದ್ರಾಕ್ಷಿತೋಟವನ್ನು ಕೊಡುವುದಿಲ್ಲ,’” ಎಂದು ಹೇಳಿದನು.
7 Και είπε προς αυτόν Ιεζάβελ η γυνή αυτού, Συ τώρα βασιλεύεις επί τον Ισραήλ; σηκώθητι, φάγε άρτον, και ας ήναι εύθυμος η καρδία σου· εγώ θέλω σοι δώσει τον αμπελώνα Ναβουθαί του Ιεζραηλίτου.
ಆಗ ಅವನ ಹೆಂಡತಿ ಈಜೆಬೆಲಳು ಅವನಿಗೆ, “ನೀನು ಈಗ ಇಸ್ರಾಯೇಲಿನ ರಾಜ್ಯವನ್ನು ಆಳುತ್ತಾ ಇದ್ದೀಯೋ? ಎದ್ದು ಊಟಮಾಡು. ನಿನ್ನ ಹೃದಯ ಸಂತೋಷವಾಗಿರಲಿ. ನಾನೇ ಇಜ್ರೆಯೇಲಿನವನಾದ ನಾಬೋತನ ದ್ರಾಕ್ಷಿತೋಟವನ್ನು ನಿನಗೆ ಕೊಡಿಸುತ್ತೇನೆ,” ಎಂದಳು.
8 Τότε έγραψεν επιστολάς εν ονόματι του Αχαάβ και εσφράγισε διά της σφραγίδος αυτού, και απέστειλε τας επιστολάς προς τους πρεσβυτέρους και προς τους άρχοντας, τους όντας εν τη πόλει αυτού, τους κατοικούντας μετά του Ναβουβαί.
ಹೀಗೆ ಅವಳು ಅಹಾಬನ ಹೆಸರಿನಲ್ಲಿ ಪತ್ರಗಳನ್ನು ಬರೆದು, ಅವುಗಳಿಗೆ ಅವನ ಮುದ್ರೆಹಾಕಿ, ಆ ಪತ್ರಗಳನ್ನು ನಾಬೋತನ ಸಂಗಡ ಅವನ ಪಟ್ಟಣದಲ್ಲಿ ವಾಸವಾಗಿರುವ ಹಿರಿಯರಿಗೂ, ಗೌರವಸ್ಥರಿಗೂ ಕಳುಹಿಸಿದಳು.
9 Και έγραφεν εν ταις επιστολαίς, λέγουσα, Κηρύξατε νηστείαν και καθίσατε τον Ναβουθαί επί κεφαλής του λαού·
ಅವಳು ಪತ್ರಗಳಲ್ಲಿ, “ನೀವು ಉಪವಾಸವನ್ನು ಪ್ರಕಟಮಾಡಿ ನಾಬೋತನನ್ನು ಜನರೊಳಗೆ ಎತ್ತರದ ಸ್ಥಳದಲ್ಲಿ ಕೂರಿಸಿ,
10 και παρακαθίσατε δύο άνδρας κακούς αντικρύ αυτού, και ας μαρτυρήσωσι κατ' αυτού, λέγοντες, Συ εβλασφήμησας τον Θεόν και τον βασιλέα· και εκβάλετε αυτόν και λιθοβολήσατε αυτόν, και ας αποθάνη.
‘ನೀನು ದೇವರನ್ನೂ, ಅರಸನನ್ನೂ ದೂಷಿಸಿದಿ,’ ಎಂದು ಅವನಿಗೆ ವಿರೋಧವಾಗಿ ಸಾಕ್ಷಿ ಹೇಳಲು ಅವನ ಮುಂದೆ ದುಷ್ಟರಾದ ಇಬ್ಬರು ಮನುಷ್ಯರನ್ನು ಕೂರಿಸಿರಿ. ತರುವಾಯ ಅವನನ್ನು ಹೊರಗೆ ತೆಗೆದುಕೊಂಡುಹೋಗಿ ಅವನು ಸಾಯುವ ಹಾಗೆ ಕಲ್ಲೆಸೆಯಿರಿ,” ಎಂದು ಬರೆದಿತ್ತು.
11 Και έκαμον οι άνδρες της πόλεως αυτού, οι πρεσβύτεροι και οι άρχοντες οι κατοικούντες εν τη πόλει αυτού, καθώς εμήνυσε προς αυτούς η Ιεζάβελ, κατά το γεγραμμένον εν ταις επιστολαίς τας οποίας έστειλε προς αυτούς.
ಆಗ ಅವನ ಪಟ್ಟಣದ ಮನುಷ್ಯರೂ, ಅವನ ಪಟ್ಟಣದ ನಿವಾಸಿಗಳೂ ಆದ ಹಿರಿಯರೂ, ಗೌರವಸ್ಥರೂ, ಈಜೆಬೆಲಳು ಅವರಿಗೆ ಕಳುಹಿಸಿದ ಪ್ರಕಾರವೂ, ಅವಳು ಅವರ ಬಳಿಗೆ ಕಳುಹಿಸಿದ ಪತ್ರಗಳಲ್ಲಿ ಬರೆದ ಪ್ರಕಾರವೂ ಮಾಡಿದರು.
12 Εκήρυξαν νηστείαν και εκάθησαν τον Ναβουθαί επί κεφαλής του λαού·
ಅವರು ಉಪವಾಸವನ್ನು ಪ್ರಕಟಮಾಡಿ, ನಾಬೋತನನ್ನು ಜನರೊಳಗೆ ಎತ್ತರ ಸ್ಥಳದಲ್ಲಿ ಕೂರಿಸಿದರು.
13 και εισήλθον δύο άνδρες κακοί και εκάθισαν αντικρύ αυτού· και εμαρτύρησαν οι άνδρες οι κακοί κατ' αυτού, κατά του Ναβουθαί, ενώπιον του λαού, λέγοντες, Ο Ναβουθαί εβλασφήμησε τον Θεόν και τον βασιλέα. Τότε εξέβαλον αυτόν έξω της πόλεως και ελιθοβόλησαν αυτόν με λίθους, και απέθανε.
ಆಗ ದುಷ್ಟರಾದ ಇಬ್ಬರು ಮನುಷ್ಯರು ಬಂದು ಅವನಿಗೆದುರಾಗಿ ಕುಳಿತುಕೊಂಡರು. ಈ ದುಷ್ಟಜನರ ಸಮ್ಮುಖದಲ್ಲಿ ನಾಬೋತನಿಗೆ ವಿರೋಧವಾಗಿ, “ಈ ನಾಬೋತನು ದೇವರನ್ನೂ, ಅರಸನನ್ನೂ ದೂಷಿಸಿದನು,” ಎಂದು ಸಾಕ್ಷಿ ಹೇಳಿದರು. ಆಗ ನಾಬೋತನನ್ನು ಪಟ್ಟಣದ ಹೊರಗೆ ಕರೆದುಕೊಂಡು ಹೋಗಿ, ಅವನು ಸಾಯುವ ಹಾಗೆ ಅವರು ಅವನಿಗೆ ಕಲ್ಲೆಸೆದರು.
14 Και απέστειλαν προς την Ιεζάβελ, λέγοντες, Ο Ναβουβαί ελιθοβολήθη και απέθανε.
ಅವನು ಸತ್ತನು. ಅವರು ಈಜೆಬೆಲಳಿಗೆ, “ನಾಬೋತನು ಕಲ್ಲೆಸೆತದಿಂದ ಸತ್ತನು,” ಎಂದು ಹೇಳಿ ಕಳುಹಿಸಿದರು.
15 Και ως ήκουσεν η Ιεζάβελ ότι ο Ναβουβαί ελιθοβολήθη και απέθανεν, είπεν η Ιεζάβελ προς τον Αχαάβ, Σηκώθητι, κληρονόμησον τον αμπελώνα Ναβουθαί του Ιεζραηλίτου, τον οποίον δεν ήθελε να σοι δώση δι' αργυρίου· διότι ο Ναβουθαί δεν ζη αλλ' απέθανε.
ನಾಬೋತನು ಕಲ್ಲೆಸೆತದಿಂದ ಸತ್ತಿದ್ದಾನೆಂದು ಈಜೆಬೆಲಳು ಕೇಳಿದಾಗ, ಅವಳು ಅಹಾಬನಿಗೆ, “ನೀನೆದ್ದು ಇಜ್ರೆಯೇಲಿನವನಾದ ನಾಬೋತನು ಕ್ರಯಕ್ಕೆ ಕೊಡಲು ಸಮ್ಮತಿಸದಿದ್ದ ದ್ರಾಕ್ಷಿತೋಟವನ್ನು ಸ್ವಾಧೀನ ಮಾಡಿಕೋ. ಏಕೆಂದರೆ ನಾಬೋತನು ಜೀವದಿಂದಿಲ್ಲ, ಸತ್ತಿದ್ದಾನೆ,” ಎಂದಳು.
16 Και ως ήκουσεν ο Αχαάβ ότι ο Ναβουθαί απέθανεν, εσηκώθη ο Αχαάβ να καταβή εις τον αμπελώνα του Ναβουθαί του Ιεζραηλίτου, διά να κληρονομήση αυτόν.
ನಾಬೋತನು ಸತ್ತನೆಂದು ಅಹಾಬನು ಕೇಳಿದಾಗ, ಅವನೆದ್ದು ಇಜ್ರೆಯೇಲಿನವನಾದ ನಾಬೋತನ ದ್ರಾಕ್ಷಿತೋಟವನ್ನು ಸ್ವಾಧೀನಮಾಡಿಕೊಳ್ಳಲು ಹೋದನು.
17 Και ήλθεν ο λόγος του Κυρίου προς Ηλίαν τον Θεσβίτην, λέγων,
ಆಗ ಯೆಹೋವ ದೇವರ ವಾಕ್ಯವು ತಿಷ್ಬೀಯನಾದ ಎಲೀಯನಿಗೆ ಉಂಟಾಗಿ,
18 Σηκώθητι, κατάβα εις συνάντησιν του Αχαάβ, βασιλέως του Ισραήλ, όστις κατοικεί εν Σαμαρεία· ιδού, εν τω αμπελώνι του Ναβουθαί είναι, όπου κατέβη διά να κληρονομήση αυτόν·
“ನೀನೆದ್ದು ಸಮಾರ್ಯದಲ್ಲಿರುವ ಇಸ್ರಾಯೇಲಿನ ಅರಸನಾದ ಅಹಾಬನಿಗೆ ಎದುರಾಗಿ ಹೋಗು. ಅವನು ನಾಬೋತನ ದ್ರಾಕ್ಷಿ ತೋಟದಲ್ಲಿದ್ದಾನೆ. ಅದನ್ನು ಸ್ವಾಧೀನಮಾಡಿಕೊಳ್ಳಲು ಅಲ್ಲಿಗೆ ಹೋಗಿದ್ದಾನೆ.
19 και θέλεις λαλήσει προς αυτόν, λέγων, Ούτω λέγει Κύριος· Εφόνευσας και έτι εκληρονόμησας; Και θέλεις λαλήσει προς αυτόν, λέγων, ούτω λέγει Κύριος· Εν τω τόπω, όπου οι κύνες έγλειψαν το αίμα του Ναβουθαί, θέλουσι γλείψει οι κύνες το αίμα σου, ναι, σου.
ನೀನು ಅವನಿಗೆ, ‘ನೀನು ಕೊಂದುಹಾಕಿ ಸ್ವಾಧೀನ ಮಾಡಿಕೊಂಡಿಯಲ್ಲಾ. ಆದ್ದರಿಂದ ನಾಯಿಗಳು ನಾಬೋತನ ರಕ್ತವನ್ನು ನೆಕ್ಕಿದ ಸ್ಥಳದಲ್ಲಿಯೇ ನಿನ್ನ ರಕ್ತವನ್ನು ನಿಶ್ಚಯವಾಗಿ ನೆಕ್ಕುವುವು,’ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದನು.
20 Και είπεν ο Αχαάβ προς τον Ηλίαν, Με εύρηκας, εχθρέ μου; Και απεκρίθη, Σε εύρηκα· διότι επώλησας σεαυτόν εις το να πράττης το πονηρόν ενώπιον του Κυρίου.
ಆಗ ಅಹಾಬನು ಎಲೀಯನಿಗೆ, “ನನ್ನ ಶತ್ರುವೇ, ನೀನು ನನ್ನನ್ನು ಕಂಡುಹಿಡಿದೆಯಾ,” ಎಂದನು. ಅದಕ್ಕೆ ಎಲೀಯನು, “ಕಂಡುಕೊಂಡೆನು, ನೀನು ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡುವಂತೆ ನಿನ್ನನ್ನು ಮಾರಿಕೊಂಡದ್ದರಿಂದ,
21 Ιδού, λέγει Κύριος, Εγώ θέλω φέρει κακόν επί σε, και θέλω σαρώσει κατόπιν σου και εξολοθρεύσει του Αχαάβ τον ουρούντα προς τον τοίχον και τον πεφυλαγμένον και τον αφειμένον μεταξύ του Ισραήλ·
‘ನಾನು ನಿನ್ನ ಮೇಲೆ ಕೇಡನ್ನು ಬರಮಾಡಿ, ನಿನ್ನ ಸಂತತಿಯನ್ನು ತೆಗೆದುಹಾಕಿ, ಅಹಾಬನಿಗೆ ಒಬ್ಬ ಗಂಡು ಮಗುವನ್ನಾದರೂ ಉಳಿಸದೆ ಇಸ್ರಾಯೇಲಿನಲ್ಲಿ ಎಲ್ಲರನ್ನು ತೆಗೆದುಹಾಕಿಬಿಡುವೆನು.
22 και θέλω καταστήσει τον οίκόν σου ως τον οίκον του Ιεροβοάμ υιού του Ναβάτ, και ως τον οίκον του Βαασά υιού του Αχιά, διά τον παροργισμόν τον οποίον με παρώργιαας, και έκαμες τον Ισραήλ να αμαρτήση.
ನೀನು ನನಗೆ ಎಬ್ಬಿಸಿದ ಕೋಪದ ನಿಮಿತ್ತವೂ, ಇಸ್ರಾಯೇಲನ್ನು ಪಾಪ ಮಾಡುವಂತೆ ಮಾಡಿದ್ದರ ನಿಮಿತ್ತವೂ, ನಾನು ನಿನ್ನ ಮನೆಯನ್ನು ನೆಬಾಟನ ಮಗನಾದ ಯಾರೊಬ್ಬಾಮನ ಮನೆಯ ಹಾಗೆಯೂ, ಅಹೀಯನ ಮಗ ಬಾಷನ ಮನೆಯ ಹಾಗೆಯೂ ಮಾಡುವೆನು, ಎಂದನು.’
23 Και περί της Ιεζάβελ έτι ελάλησεν ο Κύριος, λέγων, Οι κύνες θέλουσι καταφάγει την Ιεζάβελ πλησίον του προτειχίσματος της Ιεζραέλ·
“ಈಜೆಬೆಲಳನ್ನು ಕುರಿತು ಯೆಹೋವ ದೇವರು, ‘ನಾಯಿಗಳು ಈಜೆಬೆಲಳನ್ನು ಇಜ್ರೆಯೇಲ್ ಗೋಡೆಯ ಬಳಿಯಲ್ಲಿ ತಿನ್ನುವುವು.’
24 όστις εκ του Αχαάβ αποθάνη εν τη πόλει, οι κύνες θέλουσι καταφάγει αυτόν· και όστις αποθάνη εν τω αγρώ, τα πετεινά του ουρανού θέλουσι καταφάγει αυτόν.
“ಅಹಾಬನ ಕುಟುಂಬದವರಲ್ಲಿ ಪಟ್ಟಣದೊಳಗೆ ಯಾವನು ಸಾಯುವನೋ, ಅವನನ್ನು ನಾಯಿಗಳು ತಿನ್ನುವುವು. ಹೊಲದಲ್ಲಿ ಸಾಯುವವನನ್ನು ಆಕಾಶದ ಪಕ್ಷಿಗಳು ತಿನ್ನುವುವು, ಎಂದು ಹೇಳುತ್ತಾರೆ,” ಎಂದನು.
25 Ουδείς τωόντι δεν εστάθη όμοιος του Αχαάβ, όστις επώλησεν εαυτόν εις το να πράττη πονηρά ενώπιον του Κυρίου, όπως εκίνει αυτόν Ιεζάβελ η γυνή αυτού.
ತನ್ನ ಹೆಂಡತಿ ಈಜೆಬೆಲಳಿಂದ ಪ್ರೇರೇಪಿತನಾಗಿ, ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟತನವನ್ನು ಮಾಡಲು ತನ್ನನ್ನು ಮಾರಿ ಬಿಟ್ಟ ಅಹಾಬನ ಹಾಗೆ ದುಷ್ಟನು ಇನ್ನೊಬ್ಬನು ಇರಲಿಲ್ಲ.
26 Και έπραξε βδελυρά σφόδρα ακολουθών τα είδωλα, κατά πάντα όσα έπραττον οι Αμορραίοι, τους οποίους ο Κύριος εξεδίωξεν απ' έμπροσθεν των υιών Ισραήλ.
ಇದಲ್ಲದೆ ಯೆಹೋವ ದೇವರು ಇಸ್ರಾಯೇಲರ ಮುಂದೆ ಹೊರಡಿಸಿಬಿಟ್ಟ ಅಮೋರಿಯರು ಮಾಡಿದ ಎಲ್ಲಾ ವಿಗ್ರಹಗಳನ್ನು ಹಿಂಬಾಲಿಸಿ ಅಸಹ್ಯವಾಗಿ ನಡೆದನು.
27 Ως δε ήκουσεν ο Αχαάβ τους λόγους τούτους, διέρρηξε τα ιμάτια αυτού και έβαλε σάκκον επί την σάρκα αυτού και ενήστευσε, και εκοίτετο περιτετυλιγμένος σάκκον και εβάδιζε κεκυφώς.
ಆದರೆ ಅಹಾಬನು ಆ ಮಾತುಗಳನ್ನು ಕೇಳಿದಾಗ, ಅವನು ತನ್ನ ವಸ್ತ್ರಗಳನ್ನು ಹರಿದು, ತನ್ನ ಶರೀರದ ಮೇಲೆ ಗೋಣಿಯನ್ನು ಹಾಕಿಕೊಂಡು, ಉಪವಾಸಮಾಡುತ್ತಾ ದೀನತೆಯಿಂದ ನಡೆದನು.
28 Ήλθε δε ο λόγος του Κυρίου προς Ηλίαν τον Θεσβίτην, λέγων,
ಆಗ ಯೆಹೋವ ದೇವರ ವಾಕ್ಯವು ತಿಷ್ಬೀಯನಾದ ಎಲೀಯನಿಗೆ ಉಂಟಾಗಿ,
29 Είδες πως εταπεινώθη ο Αχαάβ ενώπιόν μου; επειδή εταπεινώθη ενώπιόν μου, δεν θέλω φέρει το κακόν εν ταις ημέραις αυτού· εν ταις ημέραις του υιού αυτού θέλω φέρει το κακόν επί τον οίκον αυτού.
“ಅಹಾಬನು ನನ್ನ ಮುಂದೆ ತನ್ನನ್ನು ತಗ್ಗಿಸಿಕೊಂಡದ್ದನ್ನು ನೋಡಿದಿಯಲ್ಲವೇ? ಅವನು ನನ್ನ ಮುಂದೆ ತನ್ನನ್ನು ತಗ್ಗಿಸಿಕೊಂಡದ್ದರಿಂದ ನಾನು ಅವನ ಜೀವಮಾನದಲ್ಲಿ ಆ ಕೇಡನ್ನು ಬರಮಾಡದೆ, ಅವನ ಮಗನ ಕಾಲದಲ್ಲಿ ಅವನ ಮನೆಯ ಮೇಲೆ ಬರಮಾಡುವೆನು,” ಎಂದನು.