< Προς Κορινθιους Α΄ 12 >
1 περι δε των πνευματικων αδελφοι ου θελω υμασ αγνοειν
೧ಸಹೋದರರೇ ಪವಿತ್ರಾತ್ಮನಿಂದುಂಟಾಗುವ ವರಗಳನ್ನು ಕುರಿತು ನಿಮಗೆ ತಿಳಿವಳಿಕೆಯಿರಬೇಕೆಂದು ನಾನು ಅಪೇಕ್ಷಿಸುತ್ತೇನೆ.
2 οιδατε οτι οτε εθνη ητε προσ τα ειδωλα τα αφωνα ωσ αν ηγεσθε απαγομενοι
೨ನೀವು ಅನ್ಯಜನರಾಗಿದ್ದಾಗ ಮೂಕ ವಿಗ್ರಹಗಳು ನಿಮ್ಮನ್ನು ನಡೆಸಿದ ಹಾಗೆ ನೀವು ಅವುಗಳ ಬಳಿಗೆ ಹೋಗುತ್ತಿದ್ದಿರೆಂದು ಬಲ್ಲಿರಿ.
3 διο γνωριζω υμιν οτι ουδεισ εν πνευματι θεου λαλων λεγει αναθεμα ιησουν και ουδεισ δυναται ειπειν κυριον ιησουν ει μη εν πνευματι αγιω
೩ಹೀಗಿರುವುದರಿಂದ ನಾನು ನಿಮಗೆ ತಿಳಿಸುವುದನ್ನು ಕೇಳಿರಿ. ದೇವರಾತ್ಮನ ಪ್ರೇರಣೆಯಿಂದ ಮಾತನಾಡುವ ಯಾವ ಮನುಷ್ಯನಾದರೂ “ಯೇಸುವನ್ನು ಶಾಪಗ್ರಸ್ತನೆಂದು” ಹೇಳುವುದಿಲ್ಲ. ಮತ್ತು ಪವಿತ್ರಾತ್ಮನ ಪ್ರೇರಣೆಯಿಂದಲೇ ಹೊರತು ಯಾವ ಮನುಷ್ಯನಾದರೂ “ಯೇಸುವನ್ನು ಕರ್ತನೆಂದು” ಹೇಳಲಾರನು.
4 διαιρεσεισ δε χαρισματων εισιν το δε αυτο πνευμα
೪ವರಗಳಲ್ಲಿ ಬೇರೆ ಬೇರೆ ವಿಧಗಳುಂಟು. ಆದರೆ ದೇವರಾತ್ಮನು ಒಬ್ಬನೇ.
5 και διαιρεσεισ διακονιων εισιν και ο αυτοσ κυριοσ
೫ಸೇವೆಗಳಲ್ಲಿ ಬೇರೆ ಬೇರೆ ವಿಧಗಳುಂಟು ಆದರೆ ಕರ್ತನು ಒಬ್ಬನೇ.
6 και διαιρεσεισ ενεργηματων εισιν ο δε αυτοσ εστιν θεοσ ο ενεργων τα παντα εν πασιν
೬ಕಾರ್ಯಗಳಲ್ಲಿ ಬೇರೆ ಬೇರೆ ವಿಧಗಳುಂಟು ಆದರೆ ಸರ್ವರಲ್ಲಿಯೂ ಸರ್ವ ಕಾರ್ಯಗಳನ್ನು ಸಾಧಿಸುವ ದೇವರು ಒಬ್ಬನೇ.
7 εκαστω δε διδοται η φανερωσισ του πνευματοσ προσ το συμφερον
೭ಆದರೆ ಪ್ರತಿಯೊಬ್ಬನಲ್ಲಿ ತೋರಿಬರುವ ದೇವರಾತ್ಮನ ವರಗಳು ಸರ್ವರ ಪ್ರಯೋಜನಕ್ಕಾಗಿ ಕೊಡಲ್ಪಟ್ಟಿವೆ.
8 ω μεν γαρ δια του πνευματοσ διδοται λογοσ σοφιασ αλλω δε λογοσ γνωσεωσ κατα το αυτο πνευμα
೮ಒಬ್ಬನಿಗೆ ದೇವರಾತ್ಮನ ಮೂಲಕ ಜ್ಞಾನವಾಕ್ಯವು ಮತ್ತೊಬ್ಬನಿಗೆ ಆ ಆತ್ಮನಿಂದಲೇ ತಿಳಿವಳಿಕೆಯ ವಾಕ್ಯವು
9 ετερω δε πιστισ εν τω αυτω πνευματι αλλω δε χαρισματα ιαματων εν τω αυτω πνευματι
೯ಒಬ್ಬನಿಗೆ ಆ ಆತ್ಮನಿಂದಲೇ ನಂಬಿಕೆಯು ಮತ್ತೊಬ್ಬನಿಗೆ ಆ ಒಬ್ಬ ಆತ್ಮನಿಂದಲೇ ನಾನಾ ರೋಗಗಳನ್ನು ವಾಸಿಮಾಡುವ ವರವು,
10 αλλω δε ενεργηματα δυναμεων αλλω δε προφητεια αλλω δε διακρισεισ πνευματων ετερω δε γενη γλωσσων αλλω δε ερμηνεια γλωσσων
೧೦ಮತ್ತೊಬ್ಬನಿಗೆ ಮಹತ್ಕಾರ್ಯಗಳನ್ನು ಮಾಡುವ ವರವು, ಇನ್ನೊಬ್ಬನಿಗೆ ಪ್ರವಾದನೆಯ ವರವು, ಒಬ್ಬನಿಗೆ ಆತ್ಮವನ್ನು ವಿವೇಚಿಸುವ ವರವು, ಮತ್ತೊಬ್ಬನಿಗೆ ವಿವಿಧ ಭಾಷೆಗಳನ್ನಾಡುವ ವರವು, ಒಬ್ಬನಿಗೆ ಭಾಷೆಗಳ ಅರ್ಥವನ್ನು ಬಿಡಿಸಿ ಹೇಳುವ ವರವು ಕೊಡಲ್ಪಡುತ್ತದೆ.
11 παντα δε ταυτα ενεργει το εν και το αυτο πνευμα διαιρουν ιδια εκαστω καθωσ βουλεται
೧೧ಆದರೆ ಈ ಎಲ್ಲವುಗಳಲ್ಲಿ ಕಾರ್ಯ ಮಾಡುವ ಆ ಒಬ್ಬ ಆತ್ಮನೇ ವರಗಳನ್ನೆಲ್ಲಾ ತನ್ನ ಚಿತ್ತಾನುಸಾರವಾಗಿ ಒಬ್ಬೊಬ್ಬನಿಗೆ ಹಂಚಿಕೊಡುವವನಾಗಿದ್ದಾನೆ.
12 καθαπερ γαρ το σωμα εν εστιν και μελη εχει πολλα παντα δε τα μελη του σωματοσ του ενοσ πολλα οντα εν εστιν σωμα ουτωσ και ο χριστοσ
೧೨ಹೇಗೆ ದೇಹವು ಒಂದಾಗಿದ್ದರೂ ಅದಕ್ಕಿರುವ ಅಂಗಗಳು ಅನೇಕವಾಗಿವೆಯೋ, ಹೇಗೆ ದೇಹದ ಅಂಗಗಳೆಲ್ಲವೂ ಅನೇಕವಾಗಿದ್ದು ಒಂದೇ ದೇಹವಾಗಿದೆಯೋ, ಹಾಗೆಯೇ ಕ್ರಿಸ್ತನು ಇದ್ದಾನೆ.
13 και γαρ εν ενι πνευματι ημεισ παντεσ εισ εν σωμα εβαπτισθημεν ειτε ιουδαιοι ειτε ελληνεσ ειτε δουλοι ειτε ελευθεροι και παντεσ εισ εν πνευμα εποτισθημεν
೧೩ಯೆಹೂದ್ಯರಾಗಲಿ, ಗ್ರೀಕರಾಗಲಿ, ದಾಸರಾಗಲಿ, ಸ್ವತಂತ್ರರಾಗಲಿ ನಾವೆಲ್ಲರೂ ಒಂದೇ ದೇಹವಾಗುವುದಕ್ಕಾಗಿ ಒಂದೇ ಆತ್ಮನಲ್ಲಿ ದೀಕ್ಷಾಸ್ನಾನಮಾಡಿಸಿಕೊಂಡೆವು. ಒಂದೇ ಆತ್ಮವು ನಮ್ಮೆಲ್ಲರಿಗೆ ಪಾನವಾಗಿ ಕೊಡಲ್ಪಟ್ಟಿತು.
14 και γαρ το σωμα ουκ εστιν εν μελοσ αλλα πολλα
೧೪ದೇಹವು ಒಂದೇ ಅಂಗವಲ್ಲ. ಅನೇಕ ಅಂಗಗಳುಳ್ಳದ್ದಾಗಿದೆ.
15 εαν ειπη ο πουσ οτι ουκ ειμι χειρ ουκ ειμι εκ του σωματοσ ου παρα τουτο ουκ εστιν εκ του σωματοσ
೧೫ಕಾಲು “ನಾನು ಕೈಯಲ್ಲದ ಕಾರಣ ದೇಹಕ್ಕೆ ಸೇರಿಲ್ಲವೆಂದು” ಹೇಳಿದರೂ ಅದು ದೇಹಕ್ಕೆ ಸೇರದೆ ಇರುವುದೋ?
16 και εαν ειπη το ουσ οτι ουκ ειμι οφθαλμοσ ουκ ειμι εκ του σωματοσ ου παρα τουτο ουκ εστιν εκ του σωματοσ
೧೬ಕಿವಿ “ನಾನು ಕಣ್ಣಲ್ಲದ ಕಾರಣ ನಾನು ದೇಹಕ್ಕೆ ಸೇರಿಲ್ಲವೆಂದು” ಹೇಳಿದರೂ ಅದು ದೇಹಕ್ಕೆ ಸೇರದೆ ಇರುವುದೋ?
17 ει ολον το σωμα οφθαλμοσ που η ακοη ει ολον ακοη που η οσφρησισ
೧೭ದೇಹವೆಲ್ಲಾ ಕಣ್ಣಾದರೆ ನೀವು ಏನೂ ಕೇಳಲಾಗುತ್ತಿರಲಿಲ್ಲ. ದೇಹವೆಲ್ಲಾ ಕಿವಿಯಾದರೆ ನೀವು ಯಾವ ವಾಸನೆಯನ್ನು ಮೂಸಲಾಗುತ್ತಿರಲಿಲ್ಲ.
18 νυνι δε ο θεοσ εθετο τα μελη εν εκαστον αυτων εν τω σωματι καθωσ ηθελησεν
೧೮ಆದರೆ ದೇವರು ಆ ಅಂಗಗಳಲ್ಲಿ ಪ್ರತಿಯೊಂದನ್ನು ತನಗೆ ಸರಿಯಾಗಿ ತೋಚಿದ ಪ್ರಕಾರ ದೇಹದೊಳಗೆ ಇಟ್ಟಿದ್ದಾನೆ.
19 ει δε ην τα παντα εν μελοσ που το σωμα
೧೯ಅವೆಲ್ಲವೂ ಒಂದೇ ಅಂಗವಾಗಿದ್ದರೆ ದೇಹವೆಲ್ಲಿರುವುದು?
20 νυν δε πολλα μεν μελη εν δε σωμα
೨೦ಆದರೆ ಅಂಗಗಳು ಅನೇಕವಾಗಿದೆ ಆದರೆ ದೇಹವು ಒಂದೇ.
21 ου δυναται δε ο οφθαλμοσ ειπειν τη χειρι χρειαν σου ουκ εχω η παλιν η κεφαλη τοισ ποσιν χρειαν υμων ουκ εχω
೨೧ಕಣ್ಣು ಕೈಗೆ, “ನೀನು ನನಗೆ ಅವಶ್ಯವಿಲ್ಲವೆಂದೂ,” ತಲೆಯು “ಪಾದಗಳಿಗೆ ನೀವು ನನಗೆ ಅವಶ್ಯವಿಲ್ಲವೆಂದೂ” ಹೇಳುವುದಕ್ಕಾಗುವುದಿಲ್ಲ.
22 αλλα πολλω μαλλον τα δοκουντα μελη του σωματοσ ασθενεστερα υπαρχειν αναγκαια εστιν
೨೨ದೇಹದಲ್ಲಿ ಅಲ್ಪಮಾನವುಳ್ಳವುಗಳು ಎಂದೆಣಿಸಿ ಕಾಣುವ ಅಂಗಗಳನ್ನು ಅತ್ಯವಶ್ಯವೆಂದು ತಿಳಿಯಬೇಕಲ್ಲವೋ?
23 και α δοκουμεν ατιμοτερα ειναι του σωματοσ τουτοισ τιμην περισσοτεραν περιτιθεμεν και τα ασχημονα ημων ευσχημοσυνην περισσοτεραν εχει
೨೩ಮತ್ತು ನಾವು ದೇಹದಲ್ಲಿ ಅಲ್ಪಮಾನವುಳ್ಳವುಗಳು ಎಂದೆಣಿಸುವ ಭಾಗಗಳಿಗೆ ಉಡಿಗೆಯಿಂದ ಹೆಚ್ಚಾದ ಮಾನವನ್ನು ಕೊಡುವುದುಂಟಲ್ಲಾ. ಹೀಗೆ ಮಾನವಿಲ್ಲದ ಅಂಗಗಳಿಗೆ ಹೆಚ್ಚಾದ ಮಾನವುಂಟಾಗುತ್ತದೆ.
24 τα δε ευσχημονα ημων ου χρειαν εχει αλλ ο θεοσ συνεκερασεν το σωμα τω υστερουντι περισσοτεραν δουσ τιμην
೨೪ಮಾನವುಳ್ಳ ಅಂಗಗಳಿಗೆ ಏನೂ ಅವಶ್ಯವಿಲ್ಲ. ದೇಹದಲ್ಲಿ ಭೇದವೇನೂ ಇರದೇ ಅಂಗಗಳು ಒಂದಕ್ಕೊಂದರ ಹಿತವನ್ನು ಚಿಂತಿಸುವ ಹಾಗೆ ದೇವರು ಕೊರತೆಯುಳ್ಳದ್ದಕ್ಕೆ ಹೆಚ್ಚಾದ ಮಾನವನ್ನು ಕೊಟ್ಟು ದೇಹವನ್ನು ಹದವಾಗಿ ಜೋಡಿಸಿದ್ದಾನೆ.
25 ινα μη η σχισματα εν τω σωματι αλλα το αυτο υπερ αλληλων μεριμνωσιν τα μελη
೨೫
26 και ειτε πασχει εν μελοσ συμπασχει παντα τα μελη ειτε δοξαζεται εν μελοσ συγχαιρει παντα τα μελη
೨೬ಒಂದು ಅಂಗಕ್ಕೆ ನೋವಾದರೆ ಎಲ್ಲಾ ಅಂಗಗಳಿಗೂ ನೋವಾಗುತ್ತದೆ. ಒಂದು ಅಂಗ ಗೌರವಿಸಲ್ಪಟ್ಟರೆ ಎಲ್ಲಾ ಅಂಗಗಳಿಗೂ ಸಂತೋಷವಾಗುತ್ತದೆ.
27 υμεισ δε εστε σωμα χριστου και μελη εκ μερουσ
೨೭ನೀವು ಕ್ರಿಸ್ತನ ದೇಹವು ಮತ್ತು ಒಬ್ಬೊಬ್ಬರಾಗಿ ಅದಕ್ಕೆ ಅಂಗಗಳಾಗಿದ್ದೀರಿ.
28 και ουσ μεν εθετο ο θεοσ εν τη εκκλησια πρωτον αποστολουσ δευτερον προφητασ τριτον διδασκαλουσ επειτα δυναμεισ ειτα χαρισματα ιαματων αντιληψεισ κυβερνησεισ γενη γλωσσων
೨೮ದೇವರು ತನ್ನ ಸಭೆಯಲ್ಲಿ ಮೊದಲನೆಯದಾಗಿ ಅಪೊಸ್ತಲರನ್ನು, ಎರಡನೆಯದಾಗಿ ಪ್ರವಾದಿಗಳನ್ನು, ಮೂರನೆಯದಾಗಿ ಬೋಧಕರನ್ನು ಇಟ್ಟಿದ್ದಾನೆ. ಆ ಮೇಲೆ ಮಹತ್ಕಾರ್ಯ ಮಾಡುವ ಶಕ್ತಿಯನ್ನು, ನಾನಾ ರೋಗಗಳನ್ನು ವಾಸಿಮಾಡುವ ವರವನ್ನೂ, ಪರಸಹಾಯ ಮಾಡುವ ಗುಣವನ್ನೂ, ಕಾರ್ಯಗಳನ್ನು ನಿರ್ವಹಿಸುವ ಜ್ಞಾನವನ್ನು ಮತ್ತು ವಿವಿಧ ಭಾಷೆಗಳನ್ನಾಡುವ ವರವನ್ನೂ ಅವರವರಿಗೆ ಬೇರೆ ಬೇರೆಯಾಗಿ ಕೊಟ್ಟಿದ್ದಾನೆ.
29 μη παντεσ αποστολοι μη παντεσ προφηται μη παντεσ διδασκαλοι μη παντεσ δυναμεισ
೨೯ಎಲ್ಲರು ಅಪೊಸ್ತಲರೋ? ಎಲ್ಲರು ಪ್ರವಾದಿಗಳೋ? ಎಲ್ಲರೂ ಬೋಧಕರೋ? ಎಲ್ಲರೂ ಮಹತ್ಕಾರ್ಯಗಳನ್ನು ಮಾಡುವವರೋ?
30 μη παντεσ χαρισματα εχουσιν ιαματων μη παντεσ γλωσσαισ λαλουσιν μη παντεσ διερμηνευουσιν
೩೦ರೋಗ ವಾಸಿಮಾಡುವ ವರಗಳು ಎಲ್ಲರಿಗೂ ಉಂಟೋ? ಎಲ್ಲರೂ ಅನ್ಯಭಾಷೆಗಳನ್ನಾಡುವರೋ? ಅನ್ಯಭಾಷೆಗಳ ಅರ್ಥವನ್ನು ಹೇಳುವುದಕ್ಕೆ ಎಲ್ಲರಿಗೂ ಶಕ್ತಿಯುಂಟೋ?
31 ζηλουτε δε τα χαρισματα τα κρειττονα και ετι καθ υπερβολην οδον υμιν δεικνυμι
೩೧ಇವುಗಳಲ್ಲಿ ಶ್ರೇಷ್ಠ ವರಗಳನ್ನು ಆಸಕ್ತಿಯಿಂದ ಅಪೇಕ್ಷಿಸಿರಿ. ಇನ್ನೂ ಸರ್ವೋತ್ತಮವಾದ ಮಾರ್ಗವೊಂದನ್ನು ನಿಮಗೆ ತೋರಿಸುತ್ತೇನೆ.