< Nehemia 7 >
1 Na rĩrĩ, rũthingo rwarĩka gwakwo rĩngĩ, na niĩ ngĩkorwo njĩkĩrĩte mĩrango ihingo-inĩ-rĩ, nĩrĩo arangĩri a ihingo, na aini, na Alawii maathuurirwo.
೧ಗೋಡೆಯನ್ನು ಕಟ್ಟಿ ಮುಗಿಸಿದ ನಂತರ ನಾನು ಬಾಗಿಲುಗಳನ್ನು ಇರಿಸಿದೆನು; ದ್ವಾರಪಾಲಕರನ್ನೂ, ಗಾಯಕರನ್ನೂ, ಲೇವಿಯರನ್ನೂ ನೇಮಿಸಲಾಯಿತು.
2 Nĩndatuire Hanani mũrũ wa baba mũrũgamĩrĩri wa Jerusalemu, marĩ na Hanania mũnene wa gĩikaro kĩgitĩre kĩa mũthamaki, tondũ aarĩ mũndũ mwĩhokeku, na agetigĩra Ngai gũkĩra andũ arĩa angĩ.
೨ಆನಂತರ ನನ್ನ ತಮ್ಮನಾದ ಹನಾನಿಗೂ, ಬಹಳ ನಂಬಿಗಸ್ತನೂ ದೇವರಲ್ಲಿ ವಿಶೇಷ ಭಯಭಕ್ತಿಯುಳ್ಳವನೂ, ಕೋಟೆಯ ಅಧಿಕಾರಿಯೂ ಆದ ಹನನ್ಯನಿಗೂ ಯೆರೂಸಲೇಮಿನ ಮೇಲ್ವಿಚಾರಣೆಯನ್ನು ಒಪ್ಪಿಸಿದೆನು.
3 Ngĩmeera atĩrĩ, “Ihingo cia Jerusalemu itikahingũragwo, o nginya rĩrĩa riũa rĩrĩkoragwo rĩarĩte. Ningĩ o na rĩrĩa arangĩri a ihingo marĩ wĩra-inĩ, nĩmaikarage mahingĩte mĩrango ĩyo, na makamĩĩkĩra mĩgĩĩko. Ningĩ mũthuure aikari a Jerusalemu matuĩke arangĩri, amwe marangagĩre harĩa matuĩrĩirwo kũrangĩra, na arĩa angĩ marangagĩre hakuhĩ na nyũmba ciao.”
೩ನಾನು ಅವರಿಗೆ, “ಬಿಸಿಲೇರುವುದಕ್ಕಿಂತ ಮೊದಲು ಯೆರೂಸಲೇಮಿನ ಬಾಗಿಲುಗಳನ್ನು ತೆರೆಯಬಾರದು; ಕಾವಲುಗಾರರು ಇನ್ನೂ ಇರುವಾಗಲೇ ಬಾಗಿಲುಗಳನ್ನು ಮುಚ್ಚಿ ಭದ್ರಪಡಿಸಬೇಕು. ಇದಲ್ಲದೆ ಯೆರೂಸಲೇಮಿನ ನಿವಾಸಿಗಳೊಳಗೆ ಕಾವಲುಗಾರರನ್ನು ಗೊತ್ತುಮಾಡಿರಿ, ಅವರಲ್ಲಿ ಕೆಲವರು ತಮ್ಮ ಕಾವಲಿನ ಸ್ಥಳಗಳಲ್ಲಿಯೂ, ಇನ್ನು ಕೆಲವರನ್ನು ಅವರ ಮನೆಯ ಎದುರಿನಲ್ಲಿಯೂ ಕಾವಲಿರುವಂತೆ ನೇಮಿಸಬೇಕು” ಎಂದು ಆಜ್ಞಾಪಿಸಿದೆನು.
4 Na rĩrĩ, itũũra rĩa Jerusalemu rĩarĩ inene mũno na rĩkaarama, no andũ arĩa maatũũraga kuo maarĩ anini, na nyũmba itiakoretwo ciakĩtwo rĩngĩ.
೪ಪಟ್ಟಣವು ವಿಸ್ತಾರವಾಗಿದ್ದರೂ ಅದರೊಳಗೆ ಬಹಳ ಸ್ವಲ್ಪ ಜನರು ಮಾತ್ರ ಇದ್ದರು. ಮನೆಗಳನ್ನು ಇನ್ನೂ ಕಟ್ಟಿರಲಿಲ್ಲ.
5 Nĩ ũndũ ũcio Ngai wakwa akĩnjĩkĩra wendo ngoro-inĩ yakwa wa gũcookanĩrĩria andũ arĩa maarĩ igweta, na anene, na andũ arĩa angĩ nĩguo meyandĩkithie kũringana na nyũmba ciao. Nĩndonire ibuku rĩa marĩĩtwa ma njiaro cia arĩa maarĩ a mbere gũcooka. Ũũ nĩguo ndonire rĩandĩkĩtwo:
೫ಹೀಗಿರಲಾಗಿ ನಾನು ನನ್ನ ದೇವರ ಪ್ರೇರಣೆಯಿಂದ ಗಣ್ಯರನ್ನು, ಶ್ರೀಮಂತರನ್ನೂ, ಅಧಿಕಾರಿಗಳನ್ನೂ, ಸಾಧಾರಣ ಜನರನ್ನೂ ಜನಗಣತಿಗಾಗಿ ಸಭೆಸೇರಿಸಿದನು. ಆಗ ಯೆರೂಸಲೇಮಿಗೆ ಮೊದಲು ಬಂದವರ ಹೆಸರುಗಳ ಪಟ್ಟಿಯು ನನಗೆ ಸಿಕ್ಕಿತು. ಅದರಲ್ಲಿ ಬರೆದಿದ್ದೇನೆಂದರೆ,
6 Aya nĩo andũ a bũrũri arĩa maacookire kuuma bũrũri ũrĩa maatahĩirwo, arĩa Nebukadinezaru mũthamaki wa Babuloni aatahĩte akamatwara Babuloni bũrũri wa ũkombo (nao magĩcooka Jerusalemu na Juda, o mũndũ itũũra-inĩ rĩake,
೬ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಂದ ಸೆರೆಯಾಗಿ ಒಯ್ಯಲ್ಪಟ್ಟವರು ಹಿಂತಿರುಗಿ ತಮ್ಮ ಸ್ವದೇಶವಾದ ಯೆಹೂದ ಪ್ರಾಂತ್ಯದ ಸ್ವಂತ ಪಟ್ಟಣಗಳಿಗೂ, ಯೆರೂಸಲೇಮಿಗೂ ಹಿಂತಿರುಗಿದರು.
7 marehanĩte na Zerubabeli, na Jeshua, na Nehemia, na Azaria, na Raamia, na Nahamani, na Moridekai, na Bilishani, na Misiperethu, na Bigivai, na Nehumu, na Baana): Mũigana wa andũ a Isiraeli watariĩ ũũ:
೭ಅವರು ಜೆರುಬ್ಬಾಬೆಲ್, ಯೇಷೂವ, ನೆಹೆಮೀಯ. ಅಜರ್ಯ, ರಗಮ್ಯ, ನಹಮಾನೀ, ಮೊರ್ದೆಕೈ, ಬಿಲ್ಷಾನ್, ಮಿಸ್ಪೆರೆತ್, ಬಿಗ್ವೈ, ನೆಹೂಮ್, ಬಾಣ ಎಂಬ ನಾಯಕರೊಡನೆ ತಿರುಗಿ ಬಂದ ಇಸ್ರಾಯೇಲರು ಯಾರೆಂದರೆ:
8 njiaro cia Paroshu ciarĩ 2,172
೮ಪರೋಷಿನವರು - 2,172.
9 na cia Shafatia ciarĩ 372
೯ಶೆಫಟ್ಯನ ಸಂತಾನದವರು - 372.
11 na cia Pahathu-Moabi (iria cioimĩte harĩ Jeshua na Joabu) ciarĩ 2,818
೧೧ಪಹತ್ ಮೋವಾಬಿನವರಾದ ಯೇಷೂವ ಮತ್ತು ಯೋವಾಬನ ಸಂತಾನದವರು - 2,818.
12 na cia Elamu ciarĩ 1,254
೧೨ಏಲಾಮಿನ ಸಂತಾನದವರು - 1,254.
೧೩ಜತ್ತೂವಿನ ಸಂತಾನದವರು - 845.
14 na cia Zakai ciarĩ 760
೧೪ಜಕ್ಕೈಯನ ಸಂತಾನದವರು - 760.
15 na cia Binui ciarĩ 648
೧೫ಬಿನ್ನೂಯನ ಸಂತಾನದವರು - 648.
16 na cia Bebai ciarĩ 628
೧೬ಬೇಬೈಯನ ಸಂತಾನದವರು - 628.
17 na cia Azigadi ciarĩ 2,322
೧೭ಅಜ್ಗಾದಿನ ಸಂತಾನದವರು - 2,322.
18 na njiaro cia Adonikamu ciarĩ 667
೧೮ಅದೋನೀಕಾಮಿನ ಸಂತಾನದವರು - 667.
19 na njiaro cia Bigivai ciarĩ 2,067
೧೯ಬಿಗ್ವೈಯನ ಸಂತಾನದವರು - 2,067.
20 na cia Adini ciarĩ 655
೨೦ಆದೀನನ ಸಂತಾನದವರು - 655.
21 na cia Ateri (iria cioimĩte harĩ Hezekia) ciarĩ 98
೨೧ಆಟೇರಿನವರಾದ ಹಿಜ್ಕೀಯನ ಸಂತಾನದವರು - 98.
22 na cia Hashumu ciarĩ 328
೨೨ಹಾಷುಮಿನ ಸಂತಾನದವರು - 328.
23 na cia Bezai ciarĩ 324
೨೩ಬೇಚೈಯನ ಸಂತಾನದವರು - 324.
24 na cia Harifu ciarĩ 112
೨೪ಹಾರಿಫಿನ ಸಂತಾನದವರು - 112.
25 na cia Gibeoni ciarĩ 95.
೨೫ಗಿಬ್ಯೋನಿನ ಸಂತಾನದವರು - 95.
26 nao andũ a Bethilehemu na Netofa maarĩ 188
೨೬ಬೇತ್ಲೆಹೇಮ್ ಮತ್ತು ನೆಟೋಫ ಊರಿನವರು - 188.
27 na andũ a Anathothu maarĩ 128
೨೭ಅನಾತೋತ್ ಊರಿನವರು - 128.
28 na andũ a Bethi-Azimavethu maarĩ 42
೨೮ಬೇತಜ್ಮಾವೇತಿನ ಊರಿನವರು - 42.
29 na andũ a Kiriathu-Jearimu, na Kefira, na Beerothu maarĩ 743
೨೯ಕಿರ್ಯತ್ಯಾರೀಮ್, ಕೆಫೀರಾ ಮತ್ತು ಬೇರೋತ್ ಊರಿನವರು - 743.
30 na andũ a Rama na Geba maarĩ 621
೩೦ರಾಮಾ ಮತ್ತು ಗೆಬ ಊರಿನವರು - 621.
31 na andũ a Mikimashi maarĩ 122
೩೧ಮಿಕ್ಮಾಸಿನವರು - 122.
32 na andũ a Betheli na Ai maarĩ 123
೩೨ಬೇತೇಲ್ ಮತ್ತು ಆಯಿ ಎಂಬ ಊರಿನವರು - 123.
33 na andũ a Nebo ĩrĩa ĩngĩ maarĩ 52
೩೩ಎರಡನೆಯ ನೆಬೋವಿನವರು - 52.
34 na andũ a Elamu ĩrĩa ĩngĩ maarĩ 1,254
೩೪ಎರಡನೆಯ ಏಲಾಮಿನವರು - 1,254.
35 na andũ a Harimu maarĩ 320
೩೫ಹಾರಿಮನವರು - 320.
36 na andũ a Jeriko maarĩ 345
೩೬ಯೆರಿಕೋವಿನವರು - 347.
37 na andũ a Lodi, na Hadidi, na Ono maarĩ 721
೩೭ಲೋದ್, ಹಾದೀದ್, ಮತ್ತು ಓನೋ ಊರಿನವರು - 721.
38 na andũ a Senaa maarĩ 3,930.
೩೮ಸೆನಾಹನವರು - 3,930.
39 Nao athĩnjĩri-Ngai maarĩ: njiaro cia Jedaia (iria cioimĩte harĩ nyũmba ya Jeshua) ciarĩ 973
೩೯ಯಾಜಕರಲ್ಲಿ - ಯೆದಾಯನ ಸಂತಾನದವರಾದ ಯೇಷೂವನ ಮನೆಯವರು - 973.
40 na cia Imeri ciarĩ 1,052
೪೦ಇಮ್ಮೇರನ ಸಂತಾನದವರು - 1,052.
41 na cia Pashuri ciarĩ 1,247
೪೧ಪಷ್ಹೂರನ ಸಂತಾನದವರು - 1,247.
42 na cia Harimu ciarĩ 1,017.
೪೨ಹಾರಿಮನ ಸಂತಾನದವರು - 1,017
43 Nao Alawii maarĩ: a njiaro cia Jeshua (iria cioimĩte harĩ Kadimieli, rũciaro-inĩ rwa Hodavia) ciarĩ 74.
೪೩ಲೇವಿಯರಲ್ಲಿ - ಹೋದವ್ಯನ ಸಂತಾನದವರಾದ ಯೇಷೂವ, ಕದ್ಮೀಯೇಲ್ ಸಂತಾನದವರು - 74.
44 Nao aini maarĩ: njiaro cia Asafu ciarĩ 148.
೪೪ಗಾಯಕರಲ್ಲಿ; ಆಸಾಫನ ಸಂತಾನದರು - 148.
45 Nao aikaria a ihingo maarĩ: njiaro cia Shalumu, na Ateri, na Talimoni, na Akubu, na Hatita, na Shobai ciarĩ 138.
೪೫ದ್ವಾರಪಾಲಕರಲ್ಲಿ; ಶಲ್ಲೂಮ್, ಆಟೇರ್, ಟಲ್ಮೋನ್, ಅಕ್ಕೂಬ್, ಹಟೀಟಾ, ಶೋಬೈ ಇವರ ಸಂತಾನದವರು ಒಟ್ಟು - 138.
46 Nacio ndungata cia hekarũ ciarĩ: njiaro cia Ziha, na Hasufa, na Tabaothu,
೪೬ದೇವಾಲಯದ ಸೇವಕರಲ್ಲಿ; ಜೀಹ, ಹಸೂಫ, ಟಬ್ಬಾವೋತ್ ಸಂತಾನದರು,
47 na Keroso, na Sia, na Padoni,
೪೭ಕೇರೋಸ್, ಸೀಯ, ಪಾದೋನ್ ಸಂತಾನದರು,
48 na Lebana, na Hagaba, na Shalimai,
೪೮ಲೆಬಾನ, ಹಗಾಬ, ಸಲ್ಮೈ ಸಂತಾನದರು,
49 na Hanani, na Gideli, na Gaharu,
೪೯ಹಾನಾನ್, ಗಿದ್ದೇಲ್, ಗಹರ್ ಸಂತಾನದರು,
50 na Reaia, na Rezini, na Nekoda,
೫೦ರೆವಾಯ, ರೆಚೀನ್, ನೆಕೋದ ಸಂತಾನದರು,
51 na Gazamu, na Uza, na Pasea,
೫೧ಗಜ್ಜಾಮ್, ಉಜ್ಜ, ಪಾಸೇಹ ಸಂತಾನದವರು,
52 na Besai, na Meunimu, na Nefisimu,
೫೨ಬೇಸೈ, ಮೆಯನೀಮ್, ನೆಫೀಷೆಸೀಮ್ ಸಂತಾನದವರು,
53 na Bakabuku, na Hakufa, na Harihuru,
೫೩ಬಕ್ಬೂಕ್, ಹಕ್ಕೂಫ, ಹರ್ಹೂರ್ ಸಂತಾನದವರು,
54 na Baziluthu, na Mehida, na Harasha,
೫೪ಬಚ್ಲೂತ್, ಮೆಹೀದ, ಹರ್ಷ ಸಂತಾನದವರು
55 na Barikosi, na Sisera, na Tema,
೫೫ಬರ್ಕೋಸ್, ಸೀಸೆರ, ತೆಮಹ ಸಂತಾನದವರು,
57 Nacio njiaro cia ndungata cia Solomoni ciarĩ: njiaro cia Sotai, na Soferethu, na Perida,
೫೭ಸೊಲೊಮೋನನ ಸೇವಕರಲ್ಲಿ - ಸೋಟೈ, ಸೋಫೆರೆತ್, ಪೆರೀದನ ಸಂತಾನದವರು,
58 na Jaala, na Darikoni, na Gideli,
೫೮ಯಾಲ, ದರ್ಕೋನ್, ಗಿದ್ದೇಲ್ ಸಂತಾನದವರು,
59 na Shefatia, na Hatili, na Pokerethu-Hazebaimu, na Amoni.
೫೯ಶೆಫಟ್ಯ, ಹಟ್ಟೀಲ್, ಪೋಕೆರೆತ್ ಹಚ್ಚೆಬಾಯೀಮ್, ಆಮೋನ್ ಸಂತಾನದವರು.
60 Ndungata cia hekarũ hamwe na njiaro cia ndungata cia Solomoni maarĩ andũ 392.
೬೦ಎಲ್ಲಾ ದೇವಾಲಯದ ಸೇವಕರೂ ಸೊಲೊಮೋನನ ಸೇವಕರು ಒಟ್ಟು 392 ಮಂದಿ.
61 Nao aya nĩo maambatire kuuma matũũra ma Teli-Mela, na Teli-Harasha, na Kerubu, na Adoni, na Imeri, no matingĩonanirie atĩ nyũmba ciao ciarĩ cia njiaro cia Isiraeli:
೬೧ತೇಲ್ಮೆಲಹ, ತೇಲ್ಹರ್ಷ, ಕೆರೂಬ್, ಆದ್ದೋನ್ ಮತ್ತು ಇಮ್ಮೇರ್, ಎಂಬ ಊರುಗಳಿಂದ ಬಂದವರಾಗಿ ತಮ್ಮ ಗೋತ್ರಗಳ ವಂಶಾವಳಿಗಳನ್ನು ತೋರಿಸಿ ತಾವು ಇಸ್ರಾಯೇಲರೆಂಬುದನ್ನು ಸ್ಥಾಪಿಸಲಾರದವರಾದ,
62 njiaro cia Delaia, na Tobia, na Nekoda ciarĩ 642.
೬೨ದೆಲಾಯ, ಟೋಬೀಯ, ನೆಕೋದ ಇವರ ಸಂತಾನದವರು - 642.
63 Na kuuma kũrĩ athĩnjĩri-Ngai: njiaro cia Hobaia, na Hakozu, na Barizilai (mũndũ ũrĩa wahikĩtie mwarĩ wa Barizilai ũrĩa Mũgileadi, na eetanagio na rĩĩtwa rĩu).
೬೩ಯಾಜಕರಲ್ಲಿ: ಹೋಬಾಯ, ಹಕ್ಕೋಚ್, ಬರ್ಜಿಲ್ಲೈ ಇವರ ಸಂತಾನದವರು ತಮ್ಮ ವಂಶಾವಳಿಯ ದಾಖಲೆ ತೋರಿಸಲಾರದೆ ಹೋದರು. ಬರ್ಜಿಲ್ಲೈ ಎಂಬುವನು ಗಿಲ್ಯಾದ್ಯನಾದ ಬರ್ಜಿಲ್ಲೈಯ ಹೆಣ್ಣುಮಕ್ಕಳಲ್ಲಿ ಒಬ್ಬಾಕೆಯನ್ನು ಮದುವೆ ಮಾಡಿಕೊಂಡು ಅವನ ಹೆಸರನ್ನು ಇಟ್ಟುಕೊಂಡಿದ್ದನು.
64 Andũ acio nĩmacaririe maandĩko ma nyũmba ciao, no matiigana kũmona, nĩ ũndũ ũcio makĩeherio thiritũ-inĩ ya athĩnjĩri-Ngai, magĩtuuo ta andũ maarĩ na thaahu.
೬೪ಇವರು ತಮ್ಮ ವಂಶಾವಳಿ ಪತ್ರಗಳನ್ನು ಹುಡುಕಿದರೂ ಅವು ಸಿಕ್ಕದ ಕಾರಣ ಅವರನ್ನು ಅಶುದ್ಧರೆಂದು ಯಾಜಕೋದ್ಯೋಗದಿಂದ ತಳ್ಳಲ್ಪಟ್ಟರು.
65 Nake barũthi wa kũu akĩmaatha matikarĩe irio iria therie mũno, o nginya gũkaagĩa mũthĩnjĩri-Ngai ũratungata na Urimu na Thumimu.
೬೫ಊರೀಮ್ ಮತ್ತು ತುಮ್ಮೀಮುಗಳ ಮೂಲಕ ದೈವನಿರ್ಣಯವನ್ನು ತಿಳಿಸಬಲ್ಲವನಾದ ಯಾಜಕನು ಬರುವ ತನಕ ಇವರು ಮಹಾಪರಿಶುದ್ಧ ಪದಾರ್ಥಗಳನ್ನು ಭೋಜನ ಮಾಡಬಾರದೆಂಬುದಾಗಿ ದೇಶಾಧಿಪತಿಯು ಆಜ್ಞಾಪಿಸಿದನು.
66 Andũ acio othe marĩ hamwe maarĩ 42,360,
೬೬ಸರ್ವಸಮೂಹದವರ ಒಟ್ಟು ಸಂಖ್ಯೆಯು ನಲ್ವತ್ತೆರಡು ಸಾವಿರದ ಮುನ್ನೂರ ಅರವತ್ತಾಗಿತ್ತು.
67 gũtatarĩtwo ndungata ciao cia arũme na cia andũ-a-nja 7, 337; ningĩ nĩ maarĩ na aini arũme na andũ-a-nja 245.
೬೭ಈ ಸಂಖ್ಯೆಯಲ್ಲಿ ಲೆಕ್ಕಿಸಲ್ಪಡದ ಅವರ ಸೇವಕ ಸೇವಕಿಯರು ಏಳು ಸಾವಿರದ ಮುನ್ನೂರ ಮೂವತ್ತೇಳು ಮಂದಿ. ಅವರ ಗಾಯಕರೂ ಗಾಯಕಿಯರೂ ಇನ್ನೂರ ನಲ್ವತ್ತೈದು ಮಂದಿ.
68 Maarĩ na mbarathi 736, na nyũmbũ 245,
೬೮ಅವರಿಗೆ ಏಳು ನೂರ ಮೂವತ್ತಾರು ಕುದುರೆಗಳೂ, ಇನ್ನೂರ ನಲ್ವತ್ತೈದು ಹೇಸರಗತ್ತೆಗಳೂ,
69 na ngamĩĩra 435, na ndigiri 6,720.
೬೯ನಾನೂರ ಮೂವತ್ತೈದು ಒಂಟೆಗಳೂ ಆರು ಸಾವಿರದ ಏಳುನೂರಿಪ್ಪತ್ತು ಕತ್ತೆಗಳೂ ಇದ್ದವು.
70 Atongoria amwe a nyũmba nĩmarutire indo ciao nĩ ũndũ wa wĩra ũcio. Barũthi wa kũu nĩaheanire durakima 1,000 cia thahabu, na mbakũri 50, na nguo cia athĩnjĩri-Ngai 530, nacio ikĩigwo kĩgĩĩna-inĩ.
೭೦ಗೋತ್ರಪ್ರಧಾನರಲ್ಲಿ ಕೆಲವರು ಕೆಲಸಕಾರ್ಯಗಳಿಗಾಗಿ ಧನ ಸಹಾಯ ಮಾಡಿದರು. ತಿರ್ಷಾತಾ ಅನ್ನಿಸಿಕೊಳ್ಳುವ ದೇಶಾಧಿಪತಿಯು ಭಂಡಾರಕ್ಕೆ ಕೊಟ್ಟದ್ದು ಸಾವಿರ ಬಂಗಾರದ ನಾಣ್ಯಗಳು, ಐವತ್ತು ಬೋಗುಣಿಗಳು, ಐನೂರಮೂವತ್ತು ಯಾಜಕವಸ್ತ್ರಗಳು.
71 Nao atongoria amwe a nyũmba nĩmaheanire indo nĩ ũndũ wa wĩra ũcio, durakima 20,000 cia thahabu, na ratiri 2,200 cia betha, nacio ikĩigwo kĩgĩĩna-inĩ.
೭೧ಬೇರೆ ಕೆಲವು ಮಂದಿ ಗೋತ್ರಪ್ರಧಾನರು ಕಟ್ಟಡದ ಭಂಡಾರಕ್ಕೆ ಕೊಟ್ಟದ್ದು - ಇಪ್ಪತ್ತು ಸಾವಿರ ಬಂಗಾರದ ನಾಣ್ಯಗಳು, ಒಂದು ಲಕ್ಷದ ಹತ್ತು ಸಾವಿರ ತೊಲಾ ಬೆಳ್ಳಿ;
72 Mũigana wa kĩrĩa kĩaheanirwo nĩ andũ arĩa angĩ warĩ durakima 20,000 cia thahabu, na ratiri 2,000 cia betha, na nguo 67 cia athĩnjĩri-Ngai.
೭೨ಉಳಿದ ಜನರು ಕೊಟ್ಟದ್ದು ಇಪ್ಪತ್ತು ಸಾವಿರ ಬಂಗಾರದ ನಾಣ್ಯಗಳು, ಒಂದು ಲಕ್ಷ ತೊಲಾ ಬೆಳ್ಳಿ, ಅರುವತ್ತೇಳು ಯಾಜಕವಸ್ತ್ರಗಳನ್ನು ನೀಡಿದರು.
73 Athĩnjĩri-Ngai, na Alawii, na aikaria a ihingo, na aini na ndungata cia hekarũ, marĩ hamwe na andũ amwe ao, na andũ arĩa angĩ a Isiraeli magĩaka na magĩtũũra matũũra-inĩ mao.
೭೩ಹೀಗೆ ಯಾಜಕರು, ಲೇವಿಯರು, ದ್ವಾರಪಾಲಕರು, ಗಾಯಕರು, ಸಾಧಾರಣ ಜನರು ಸೇರಿದವರು, ದೇವಾಲಯದ ಸೇವಕರು ಅಂತೂ ಇಸ್ರಾಯೇಲರೆಲ್ಲರೂ ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸ ಮಾಡತೊಡಗಿದರು.