< Esra 6 >
1 Da befahl der König Darius, daß man suchen sollte in der Kanzlei, im Schatzhause des Königs, die zu Babel lag.
೧ಅರಸನಾದ ದಾರ್ಯಾವೆಷನು ಬಾಬಿಲೋನಿನ ಗ್ರಂಥಸಂಗ್ರಹವಾಗಿದ್ದ ಬಾಬಿಲೋನಿನ ಭಂಡಾರದಲ್ಲಿ ರಾಜಾಜ್ಞೆಯನ್ನು ಹುಡುಕುವುದಕ್ಕೆ ಆಜ್ಞೆಯನ್ನು ಹೊರಡಿಸಿದನು.
2 Da fand man zu Ahmetha im Schloß, das in Medien liegt, ein Buch, und stund also drinnen eine Geschichte geschrieben:
೨ಅವರು ಹುಡುಕಿದಾಗ ಮೇದ್ಯ ಸಂಸ್ಥಾನದಲ್ಲಿರುವ ಅಹ್ಮೆತಾ ರಾಜಧಾನಿಯಲ್ಲಿ ಒಂದು ಸುರುಳಿ ಸಿಕ್ಕಿತು.
3 Im ersten Jahr des Königs Kores befahl der König Kores, das Haus Gottes zu Jerusalem zu bauen an der Stätte, da man opfert, und den Grund zu legen, zur Höhe sechzig Ellen und zur Weite auch sechzig Ellen,
೩ಅದರಲ್ಲಿ, “ಅರಸನಾದ ಕೋರೆಷನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ ಅರಸನಾದ ಕೋರೆಷನು ಯೆರೂಸಲೇಮಿನ ದೇವಾಲಯದ ವಿಷಯವಾಗಿ ಕೊಟ್ಟ ಅಪ್ಪಣೆ, ‘ಬಲವಾದ ಅಸ್ತಿವಾರವನ್ನು ಹಾಕಿ, ಯಜ್ಞಸಮರ್ಪಣೆಗಾಗಿ ಆಲಯವನ್ನು ಪುನಃ ಕಟ್ಟಬೇಕು. ಅದರ ಎತ್ತರ ಅರುವತ್ತು ಮೊಳವು, ಅಗಲ ಅರುವತ್ತು ಮೊಳವು ಇರಬೇಕು.
4 und drei Wände von allerlei Steinen und eine Wand von Holz; und die Kost soll vom Hause des Königs gegeben werden.
೪ದೊಡ್ಡ ಕಲ್ಲುಗಳ ಮೂರು ಸಾಲುಗಳಾದ ಮೇಲೆ ಹೊಸ ಮರದ ಒಂದು ಸಾಲನ್ನು ಹಾಕಿ ಕಟ್ಟಬೇಕು. ವೆಚ್ಚವೆಲ್ಲಾ ರಾಜಭಂಡಾರದಿಂದ ಕೊಡಲ್ಪಡುವುದು.
5 Dazu die güldenen und silbernen Gefäße des Hauses Gottes, die Nebukadnezar aus dem Tempel zu Jerusalem genommen und gen Babel gebracht hat, soll man wiedergeben, daß sie wiedergebracht werden in den Tempel zu Jerusalem an ihre Statt im Hause Gottes.
೫ಇದಲ್ಲದೆ ನೆಬೂಕದ್ನೆಚ್ಚರನು ಯೆರೂಸಲೇಮಿನ ದೇವಾಲಯದಿಂದ ಬಾಬಿಲೋನಿಗೆ ತೆಗೆದುಕೊಂಡು ಹೋದ ಬೆಳ್ಳಿ, ಬಂಗಾರದ ದೇವಸ್ಥಾನ ಪಾತ್ರೆಗಳನ್ನು ಹಿಂತಿರುಗಿ ಕೊಡಬೇಕು. ಅವುಗಳನ್ನೆಲ್ಲಾ ಮೊದಲಿದ್ದ ಸ್ಥಳಕ್ಕೆ ಅಂದರೆ ಯೆರೂಸಲೇಮಿನ ದೇವಾಲಯಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಡಬೇಕು’ ಎಂಬುದಾಗಿ ಬರೆದಿತ್ತು.
6 So machet euch nun ferne von ihnen, du, Thathnai, Landpfleger jenseit des Wassers und Sthar-Bosnai, und, ihr Rat von Apharsach, die ihr jenseit des Wassers seid.
೬“ಆಗ ದಾರ್ಯಾವೆಷನು ಬರೆದು ಕಳುಹಿಸಿದ್ದೇನೆಂದರೆ, ಹೊಳೆಯಾಚೆಯ ಪ್ರದೇಶಗಳ ದೇಶಾಧಿಪತಿಯಾದ ತತ್ತೆನೈ, ಶೆತರ್ಬೋಜೆನೈ, ಹೊಳೆಯಾಚೆಯಲ್ಲಿ ಇವರು ಜೊತೆಗಾರರಾದ ಅಪರ್ಸತ್ಕಾಯರು ಇವರಿಗೆ, ನೀವು ಅವರ ಗೊಡವೆಗೆ ಹೋಗಬೇಡಿರಿ.
7 Lasset sie arbeiten am Hause Gottes, daß der Juden Landpfleger und ihre Ältesten das Haus Gottes bauen an seiner Stätte.
೭ಆ ದೇವಾಲಯವನ್ನು ಕಟ್ಟುವ ಕೆಲಸಕ್ಕೆ ಅಡ್ಡಿ ಮಾಡಬೇಡಿರಿ. ಯೆಹೂದ ದೇಶಾಧಿಪತಿಯು, ಯೆಹೂದ್ಯರ ಹಿರಿಯರು ಇವರೇ ಅದನ್ನು ಅದರ ಸ್ಥಳದಲ್ಲಿ ಕಟ್ಟಲಿ.
8 Auch ist von mir befohlen, was man den Ältesten Judas tun soll, zu bauen das Haus Gottes, nämlich, daß man aus des Königs Gütern von den Renten jenseit des Wassers mit Fleiß nehme und gebe es den Leuten, und daß man ihnen nicht wehre.
೮ಆ ದೇವಾಲಯವನ್ನು ಕಟ್ಟುವುದಕ್ಕಾಗಿ ನೀವು ಯೆಹೂದ್ಯರ ಹಿರಿಯರಿಗೆ ರಾಜರ ಸೊತ್ತಿನಿಂದ ಅಂದರೆ ಹೊಳೆಯಾಚೆಯ ಪ್ರಾಂತ್ಯಗಳ ಕಪ್ಪದಿಂದ ತಡಮಾಡದೆ ಎಲ್ಲಾ ವೆಚ್ಚವನ್ನು ಕೊಡಬೇಕು.
9 Und ob sie bedürften Kälber, Lämmer oder Böcke zum Brandopfer dem Gott vom Himmel, Weizen, Salz, Wein und Öl nach der Weise der Priester zu Jerusalem, soll man ihnen geben täglich ihre Gebühr (und daß solches nicht hinlässig geschehe!),
೯ಅವರು ಪರಲೋಕದೇವರ ಸರ್ವಾಂಗಹೋಮಗಳಿಗೋಸ್ಕರ ಬೇಕಾದ ಹೋರಿ, ಟಗರು, ಕುರಿಮರಿಗಳನ್ನೂ, ಗೋದಿ, ಉಪ್ಪು, ದ್ರಾಕ್ಷಾರಸ, ಎಣ್ಣೆ ಇವುಗಳನ್ನೂ ಯೆರೂಸಲೇಮಿನ ಯಾಜಕರು ಹೇಳುವ ಪ್ರಕಾರ ಪ್ರತಿದಿನವೂ ತಪ್ಪದೆ ಒದಗಿಸಿ ಕೊಡಬೇಕು ಎಂಬುದಾಗಿಯೂ ಆಜ್ಞಾಪಿಸುತ್ತೇನೆ.
10 daß sie opfern, zum süßen Geruch dem Gott vom Himmel und bitten für des Königs Leben und seiner Kinder.
೧೦ಅವರಾದರೋ ಪರಲೋಕದೇವರಿಗೆ ಸುಗಂಧಹೋಮಗಳನ್ನು ಸಮರ್ಪಿಸಿ, ರಾಜನ ಮತ್ತು ರಾಜಪುತ್ರರ ದೀರ್ಘಾಯಷ್ಯಕ್ಕಾಗಿ ಪ್ರಾರ್ಥನೆಮಾಡಲಿ.
11 Von mir ist solcher Befehl geschehen. Und welcher Mensch diese Worte verändert, von des Hause soll man einen Balken nehmen und aufrichten und ihn dran hängen, und sein Haus soll dem Gericht verfallen sein um der Tat willen.
೧೧ಈ ನನ್ನ ಆಜ್ಞೆಯನ್ನು ಯಾವನಾದರೂ ಬದಲಾಯಿಸುವುದಾದರೆ ಅವನ ಮನೆಯಿಂದಲೇ ಒಂದು ತೊಲೆಯನ್ನು ತೆಗೆದು, ಅದನ್ನು ಶೂಲವನ್ನಾಗಿ ಮಾಡಿ, ಅದರ ಮೇಲೆ ಅವನನ್ನು ಏರಿಸಬೇಕು ಮತ್ತು ಅ ಮನೆಯನ್ನು ತಿಪ್ಪೆಯನ್ನಾಗಿ ಮಾಡಿಬಿಡಬೇಕೆಂದು ಆಜ್ಞಾಪಿಸಿದ್ದೇನೆ.
12 Der Gott aber, der im Himmel wohnet, bringe um alle Könige und Volk, das seine Hand ausrecket, zu ändern und zu brechen das Haus Gottes zu Jerusalem! Ich, Darius, habe dies befohlen, daß es mit Fleiß getan werde.
೧೨ಮತ್ತು ತನ್ನ ಹೆಸರನ್ನು ಸ್ಥಾಪಿಸುವುದಕ್ಕೋಸ್ಕರ ಆ ಸ್ಥಳವನ್ನು ಆರಿಸಿಕೊಂಡ ದೇವರು ಈ ಆಜ್ಞೆಯನ್ನು ಬದಲಿಸುವುದಕ್ಕೂ, ಯೆರೂಸಲೇಮಿನ ದೇವಾಲಯವನ್ನು ನಾಶಮಾಡುವುದಕ್ಕೂ ಕೈಯೆತ್ತುವ ಪ್ರತಿಯೊಬ್ಬ ರಾಜನನ್ನೂ ಮತ್ತು ಪ್ರತಿಯೊಂದು ಜನಾಂಗವನ್ನೂ ಕೆಡವಿ ಹಾಕಲಿ. ದಾರ್ಯಾವೆಷನಾದ ನಾನು ಆಜ್ಞೆಯನ್ನು ಕೊಟ್ಟಿದ್ದೇನೆ, ಅದನ್ನು ಉದಾಸೀನತೆಯಿಂದ ಅಲಕ್ಷಿಸದೆ ಕೈಕೊಳ್ಳಬೇಕು” ಎಂದು ತಿಳಿಸಿದನು.
13 Das taten mit Fleiß Thathnai, der Landpfleger jenseit des Wassers, und Sthar-Bosnai mit ihrem Rat, zu welchen der König Darius gesandt hatte.
೧೩ಅರಸನಾದ ದಾರ್ಯಾವೆಷನು ಆಜ್ಞೆಯನ್ನು ಕೊಟ್ಟಿದ್ದರಿಂದ ಹೊಳೆಯ ಈಚೆಯ ದೇಶಾಧಿಪತಿಯಾದ ತತ್ತೆನೈಯೂ ಶೆತರ್ಬೋಜೆನೈಯೂ ಮತ್ತು ಅವರ ಜೊತೆಗಾರರೂ ಜಾಗರೂಕರಾಗಿ ಅದನ್ನು ಅನುಸರಿಸಿದರು.
14 Und die Ältesten der Juden baueten; und es ging vonstatten durch die Weissagung der Propheten Haggai und Sacharja, des Sohns Iddos; und baueten und richteten auf nach dem Befehl des Gottes Israels und nach dem Befehl Kores, Darii und Arthahsasthas, der Könige in Persien;
೧೪ಯೆಹೂದ್ಯರ ಹಿರಿಯರು, ಪ್ರವಾದಿಯಾದ ಹಗ್ಗೈ, ಇದ್ದೋವಿನ ಮಗನಾದ ಜೆಕರೀಯ ಇವರ ಪ್ರವಾದನೆಯಿಂದ ಪ್ರೇರಿತರಾಗಿ ಕಟ್ಟುವ ಕೆಲಸವನ್ನು ಮುಂದುವರಿಸಿದರು. ಇಸ್ರಾಯೇಲ್ ದೇವರ ಆಜ್ಞಾನುಸಾರವಾಗಿಯೂ ಪರ್ಷಿಯ ರಾಜರಾದ ಕೋರೆಷ್, ದಾರ್ಯಾವೆಷ್, ಅರ್ತಷಸ್ತ ಇವರ ಅಪ್ಪಣೆಯ ಆಧಾರದಿಂದಲೂ ಕಟ್ಟಡವನ್ನು ಮುಗಿಸಿದರು.
15 und vollbrachten das Haus bis an den dritten Tag des Monden Adar, das war das sechste Jahr des Königreichs des Königs Darii.
೧೫ಅರಸನಾದ ದಾರ್ಯಾವೆಷನ ಆಳ್ವಿಕೆಯ ಆರನೆಯ ವರ್ಷದ ಫಾಲ್ಗುಣ ಮಾಸದ ಮೂರನೆಯ ದಿನದಲ್ಲಿ ಆಲಯವನ್ನು ಕಟ್ಟಿ ಪೂರೈಸಿದರು.
16 Und die Kinder Israel, die Priester, die Leviten und die andern Kinder des Gefängnisses hielten Einweihung des Hauses Gottes mit Freuden.
೧೬ಯಾಜಕರೂ, ಲೇವಿಯರೂ ಮತ್ತು ಸೆರೆಯಿಂದ ಹಿಂತಿರುಗಿ ಬಂದ ಬೇರೆ ಇಸ್ರಾಯೇಲರೂ ಸಂತೋಷದಿಂದ ಆ ದೇವಾಲಯದ ಪ್ರತಿಷ್ಠೆಯನ್ನು ಆಚರಿಸಿದರು.
17 Und opferten auf die Einweihung des Hauses Gottes hundert Kälber, zweihundert Lämmer, vierhundert Böcke und zum Sündopfer für das ganze Israel zwölf Ziegenböcke, nach der Zahl der Stämme Israels.
೧೭ಅವರು ಆ ದೇವಾಲಯದ ಪ್ರತಿಷ್ಠೆಗೋಸ್ಕರ ನೂರು ಹೋರಿ, ಇನ್ನೂರು ಟಗರು, ನಾನೂರು ಕುರಿಮರಿ ಇವುಗಳನ್ನೂ, ಇಸ್ರಾಯೇಲರ ದೋಷಪರಿಹಾರಾರ್ಥವಾಗಿ ಅವರ ಕುಲಗಳ ಸಂಖ್ಯಾನುಸಾರ ಹನ್ನೆರಡು ಹೋತಗಳನ್ನೂ ಸಮರ್ಪಿಸಿದರು.
18 Und stelleten die Priester in ihre Ordnung und die Leviten in ihre Hut, zu dienen Gott, der in Israel ist, wie es geschrieben stehet im Buch Mose.
೧೮ಆ ಮೇಲೆ ಯಾಜಕರ ಮತ್ತು ಲೇವಿಯರ ಆಯಾ ಮಾರ್ಗಗಳನ್ನು ಮೋಶೆಯ ಧರ್ಮಶಾಸ್ತ್ರ ನಿಯಮದ ಪ್ರಕಾರ ಯೆರೂಸಲೇಮಿನ ದೇವರ ಸೇವೆಗೆ ನೇಮಿಸಿದರು.
19 Und die Kinder des Gefängnisses hielten Passah am vierzehnten Tage des ersten Monden.
೧೯ಸೆರೆಯಿಂದ ಬಂದವರು ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದಲ್ಲಿ ಪಸ್ಕವನ್ನು ಆಚರಿಸಿದರು.
20 Denn die Priester und Leviten hatten sich gereiniget, daß sie alle rein waren wie ein Mann; und schlachteten das Passah für alle Kinder des Gefängnisses und für ihre Brüder, die Priester, und für sich.
೨೦ಯಾಜಕರೂ ಮತ್ತು ಲೇವಿಯರೂ ತಮ್ಮನ್ನು ಶುದ್ಧಿಪಡಿಸಿಕೊಂಡರು. ಎಲ್ಲರೂ ಶುದ್ಧವಾದನಂತರ ಲೇವಿಯರು ದೇಶಾಂತರದಿಂದ ಹಿಂದಿರುಗಿ ಬಂದವರಿಗೋಸ್ಕರವೂ, ತಮಗೋಸ್ಕರವೂ ಪಸ್ಕದ ಕುರಿಮರಿಗಳನ್ನು ವಧಿಸಿದರು.
21 Und die Kinder Israel, die aus dem Gefängnis waren wiederkommen, und alle, die sich zu ihnen abgesondert hatten von der Unreinigkeit der Heiden im Lande, zu suchen den HERRN, den Gott Israels, aßen
೨೧ದೇಶಾಂತರದಿಂದ ಬಂದ ಇಸ್ರಾಯೇಲರೂ ಇಸ್ರಾಯೇಲ್ ದೇವರಾದ ಯೆಹೋವನನ್ನು ಹುಡುಕುವುದಕ್ಕಾಗಿ ದೇಶನಿವಾಸಿಗಳ ಅಶುದ್ಧತ್ವವನ್ನು ತೊರೆದುಬಿಟ್ಟು, ಇವರೊಡನೆ ಕೂಡಿಕೊಂಡವರೆಲ್ಲರೂ ಪಸ್ಕಭೋಜನಮಾಡಿದರು.
22 und hielten das Fest der ungesäuerten Brote sieben Tage mit Freuden; denn der HERR hatte sie fröhlich gemacht und das Herz des Königs zu Assur zu ihnen gewandt, daß sie gestärkt würden im Werk am Hause Gottes, der Gott Israels ist.
೨೨ಇದಲ್ಲದೆ ಇಸ್ರಾಯೇಲ್ ದೇವರ ಆಲಯವನ್ನು ಕಟ್ಟುವುದರಲ್ಲಿ ಅಶ್ಶೂರದ ಅರಸನು ತಮಗೆ ಸಹಾಯಮಾಡುವಂತೆ ಯೆಹೋವನು ಅವನ ಮನಸ್ಸನ್ನು ತಿರುಗಿಸಿ ತಮಗೆ ಸಂತೋಷವನ್ನು ಉಂಟುಮಾಡಿದ್ದಾನೆ ಎಂದು ಹರ್ಷಿಸುತ್ತಾ ಏಳು ದಿನಗಳ ವರೆಗೂ ಹುಳಿಯಿಲ್ಲದ ರೊಟ್ಟಿಗಳ ಜಾತ್ರೆಯನ್ನು ಆಚರಿಸಿದರು.