< Ézéchiel 14 >

1 Et vinrent vers moi des hommes des anciens d’Israël, et ils s’assirent devant moi.
ಆಮೇಲೆ ಇಸ್ರಾಯೇಲಿನ ಹಿರಿಯರಲ್ಲಿ ಕೆಲವರು ನನ್ನ ಬಳಿಗೆ ಬಂದು ನನ್ನ ಮುಂದೆ ಕುಳಿತುಕೊಂಡರು.
2 Et la parole du Seigneur me fut adressée, disant:
ಆಗ ಯೆಹೋವ ದೇವರ ವಾಕ್ಯವು ನನಗೆ ಬಂದಿತು:
3 Fils d’un homme, ces hommes ont mis leurs impuretés dans leurs cœurs, et placé le scandale de leur iniquité devant leur face; est-ce que consulté, je leur répondrai?
“ಮನುಷ್ಯಪುತ್ರನೇ, ಈ ಮನುಷ್ಯರು ತಮ್ಮ ವಿಗ್ರಹಗಳನ್ನು ತಮ್ಮ ಹೃದಯಗಳಲ್ಲೇ ಸ್ಥಾಪಿಸಿ, ತಮ್ಮ ಅಕ್ರಮವಾದ ವಿಘ್ನಗಳನ್ನು ತಮ್ಮ ಮುಖದ ಮುಂದೆಯೇ ಇಟ್ಟುಕೊಂಡಿದ್ದಾರೆ. ಇವೆಲ್ಲವುಗಳಿಗಾಗಿ ನಾನು ಅವರನ್ನು ವಿಚಾರಿಸಬೇಕೇ?
4 À cause de cela, parle-leur, et tu leur diras: Voici ce que dit le Seigneur Dieu: Tout homme de la maison d’Israël qui aura mis ses impuretés dans son cœur, et aura placé le scandale de son iniquité devant sa face, et sera venu vers le prophète, m’interrogeant par lui, moi le Seigneur, je lui répondrai selon la multitude de ses impuretés;
ಆದ್ದರಿಂದ ನೀನು ಅವರ ಸಂಗಡ ಮಾತನಾಡಿ ಹೀಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಸ್ರಾಯೇಲಿನ ಮನೆತನದವರ ಪ್ರತಿಯೊಬ್ಬನೂ ತಮ್ಮ ವಿಗ್ರಹಗಳನ್ನು ತಮ್ಮ ಹೃದಯಗಳಲ್ಲಿ ನೆಲೆಗೊಳಿಸಿ, ತಮ್ಮ ಅಕ್ರಮದ ವಿಘ್ನಗಳನ್ನು ತಮ್ಮ ಮುಂದೆ ಇಟ್ಟುಕೊಂಡು ಪ್ರವಾದಿಯ ಬಳಿಗೆ ಬರುವ ಅವನಿಗೆ ಯೆಹೋವ ದೇವರಾದ ನಾನು ಅವರ ವಿಗ್ರಹಗಳ ಸಮೂಹಕ್ಕೆ ತಕ್ಕ ಹಾಗೆ ಉತ್ತರಕೊಡುವೆನು.
5 Afin que la maison d’Israël soit prise dans son cœur, par lequel ils se sont retirés de moi pour s’attacher à toutes leurs idoles.
ತಮ್ಮ ವಿಗ್ರಹಗಳಿಗಾಗಿ ನನ್ನನ್ನು ತೊರೆದ ಇಸ್ರಾಯೇಲ್ ಜನರ ಹೃದಯಗಳನ್ನು ಪುನಃ ವಶಪಡಿಸಿಕೊಳ್ಳಲು ನಾನು ಇದನ್ನು ಮಾಡುತ್ತೇನೆ.’
6 À cause de cela, dis à la maison d’Israël: Voici ce que dit le Seigneur Dieu: Convertissez-vous, retirez-vous de vos idoles, et de toutes vos souillures détournez vos faces.
“ಆದ್ದರಿಂದ ಇಸ್ರಾಯೇಲಿನ ಮನೆತನದವರಿಗೆ ಹೀಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಮಾನಸಾಂತರಪಟ್ಟು ನಿಮ್ಮ ವಿಗ್ರಹಗಳನ್ನು ಬಿಟ್ಟು ನೀವಾಗಿಯೇ ತಿರುಗಿಕೊಳ್ಳಿರಿ. ನಿಮ್ಮ ಅಸಹ್ಯವಾದವುಗಳನ್ನೆಲ್ಲಾ ಬಿಟ್ಟು, ನಿಮ್ಮ ಮುಖಗಳನ್ನು ತಿರುಗಿಸಿರಿ.
7 Car tout homme de la maison d’Israël, et quiconque d’entre les prosélytes est étranger en Israël, s’il s’est détourné de moi et qu’il ait mis ses idoles dans son cœur, et qu’il ait placé le scandale de son iniquité devant sa face, et qu’il soit venu vers le prophète pour me consulter par lui; moi, le Seigneur, je lui répondrai moi-même.
“‘ಏಕೆಂದರೆ ಇಸ್ರಾಯೇಲ್ ವಂಶದವರಲ್ಲಾಗಲಿ ಇಸ್ರಾಯೇಲಿನಲ್ಲಿ ನೆಲೆಸಿರುವ ವಿದೇಶಿಗಳಲ್ಲಾಗಲಿ, ಯಾವನಾದರೂ ನನ್ನಿಂದ ಅಗಲಿ ವಿಗ್ರಹಗಳನ್ನು ಹೃದಯದಲ್ಲಿ ನೆಲೆಗೊಳಿಸಿಕೊಂಡು ಪಾಪಕಾರಿಯಾದ ಆ ವಿಘ್ನವನ್ನು ತನ್ನ ಮುಂದೆಯೇ ಇಟ್ಟುಕೊಂಡು, ಪ್ರವಾದಿಯ ಬಳಿಗೆ ಬಂದು, ಅವನ ಮೂಲಕ ದೈವೋತ್ತರವನ್ನು ಕೇಳಿಕೊಂಡರೆ, ಯೆಹೋವ ದೇವರಾದ ನಾನೇ ಉತ್ತರಕೊಡುವೆನು.
8 Et je tournerai ma face contre cet homme, et je le donnerai en exemple et en proverbe, et je l’exterminerai du milieu de mon peuple; et vous saurez que je suis le Seigneur.
ನಾನು ಅಂಥವನ ಮೇಲೆ ಬಹುಕೋಪಗೊಂಡು, ಅವನನ್ನು ಗುರುತನ್ನಾಗಿಯೂ, ಗಾದೆಯನ್ನಾಗಿಯೂ ಮಾಡಿ, ನನ್ನ ಜನರ ಮಧ್ಯದೊಳಗಿಂದ ತೆಗೆದುಬಿಡುವೆನು. ಹೀಗೆ ನಾನೇ ಯೆಹೋವ ದೇವರು ಎಂದು ನಿಮಗೆ ಗೊತ್ತಾಗುವುದು.
9 Et lorsque le prophète a erré et qu’il a dit une parole, c’est moi, le Seigneur, qui ai trompé ce prophète; et j’étendrai ma main sur lui, et je l’effacerai du milieu de mon peuple d’Israël.
“‘ಪ್ರವಾದಿಯು ಮೋಸಹೋಗಿ ವಾಕ್ಯವನ್ನು ಹೇಳಿದರೆ, ಯೆಹೋವ ದೇವರಾದ ನಾನೇ ಆ ಪ್ರವಾದಿಯನ್ನು ಮೋಸಗೊಳಿಸಿರುತ್ತೇನೆ. ನಾನು ನನ್ನ ಕೈಯನ್ನು ಅವನ ವಿರುದ್ಧವಾಗಿ ಚಾಚಿ, ನನ್ನ ಜನರಾದ ಇಸ್ರಾಯೇಲರ ಮಧ್ಯದೊಳಗಿಂದ ಅವನನ್ನು ನಾಶಪಡಿಸುವೆನು.
10 Et ils porteront leur iniquité; selon l’iniquité de celui qui consulte, ainsi sera l’iniquité du prophète;
ಅವರು ತಮ್ಮ ಅಕ್ರಮದ ದಂಡನೆಯನ್ನು ಹೊರುವರು. ವಿಚಾರಿಸುವವನ ದಂಡನೆಯು ಹೇಗೆಯೋ ಹಾಗೆಯೇ, ಪ್ರವಾದಿಗೆ ದಂಡನೆಯೂ ಇರುವುದು.
11 Afin que la maison d’Israël ne s’égare plus en se retirant de moi, et qu’elle ne se souille point par toutes ses prévarications; mais qu’ils soient mon peuple, et que moi je sois leur Dieu, dit le Seigneur des armées.
ಇಸ್ರಾಯೇಲಿನ ಮನೆತನದವರು ಇನ್ನು ಮೇಲೆ ನನ್ನನ್ನು ಬಿಟ್ಟು ತಿರುಗದೇ, ತಮ್ಮ ಎಲ್ಲಾ ದ್ರೋಹಗಳಿಂದ ಅಶುದ್ಧರಾಗದೆ ಇರುವುದರಿಂದ ಅವರು ನನ್ನ ಜನರಾಗಿರುವರು, ಅವರಿಗೆ ನಾನು ದೇವರಾಗಿರುವೆನು, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’”
12 Et la parole du Seigneur me fut adressée, disant:
ಯೆಹೋವ ದೇವರ ವಾಕ್ಯವು ನನಗೆ ಬಂದಿತು:
13 Fils d’un homme, quant à une terre, lorsqu’elle aura péché contre moi en multipliant ses prévarications, j’étendrai ma main sur elle, et je briserai la verge de son pain, et j’enverrai sur elle la famine, et j’en tuerai les hommes et les bêtes.
“ಮನುಷ್ಯಪುತ್ರನೇ, ದೇಶವು ದೊಡ್ಡ ಅಪರಾಧದಿಂದ ನನಗೆ ವಿರುದ್ಧವಾಗಿ ಪಾಪಮಾಡಿದೆ, ನಾನು ಅದರ ಮೇಲೆ ನನ್ನ ಕೈಚಾಚಿ, ಅದರ ಜೀವನಾಧಾರವನ್ನು ತೆಗೆದುಹಾಕಿ, ಕ್ಷಾಮವು ಬರುವ ಹಾಗೆ ಮಾಡುವೆನು. ಮನುಷ್ಯರನ್ನೂ ಮೃಗಗಳನ್ನೂ ಅದರೊಳಗಿಂದ ಕಡಿದುಬಿಡುವೆನು.
14 Et si ces trois hommes justes, Noé, Daniel et Job, sont au milieu d’elle, eux-mêmes, par leur justice, délivreront leurs âmes, dit le Seigneur des armées.
ನೋಹನೂ ದಾನಿಯೇಲನೂ ಯೋಬನೂ ಎಂಬ ಈ ಮೂವರು ಅದರಲ್ಲಿದ್ದರೂ ತಮ್ಮ ನೀತಿಯಿಂದ ತಮ್ಮ ಪ್ರಾಣಗಳನ್ನು ಮಾತ್ರವೇ ಉಳಿಸಿಕೊಳ್ಳುತ್ತಿದ್ದರು,” ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
15 Que si j’amène sur cette terre des bêtes cruelles, afin que je la dévaste, et qu’elle devienne inaccessible, pour qu’il n’y ait personne qui y passe à cause des bêtes;
“ನಾನು ದುಷ್ಟಮೃಗಗಳನ್ನು ದೇಶದಲ್ಲಿ ಹಾದುಹೋಗುವಂತೆ ಮಾಡಿ, ಅದನ್ನು ನಿರ್ಜನಪಡಿಸಿ, ಹಾಳು ಮಾಡಿ, ಯಾರೂ ಮೃಗಗಳ ನಿಮಿತ್ತ ಹಾದುಹೋಗದಂತೆ ಮಾಡಿದರೆ,
16 Si ces trois hommes y sont, je vis, moi, dit le Seigneur Dieu, ils ne délivreront ni leurs fils, ni leurs filles; mais eux seuls seront délivrés, et la terre sera désolée.
ಈ ಮೂರು ಮನುಷ್ಯರಲ್ಲಿ ಅದರಲ್ಲಿ ಇದ್ದರೂ, ನನ್ನ ಜೀವದಾಣೆ ಅವರು ಪುತ್ರರನ್ನಾಗಲಿ, ಪುತ್ರಿಯರನ್ನಾಗಲಿ ಬಿಡಿಸಲು ಆಗುತ್ತಿರಲಿಲ್ಲ, ತಾವು ಮಾತ್ರ ತಪ್ಪಿಸಿಕೊಳ್ಳುವರು. ಆದರೆ ದೇಶವು ಹಾಳಾಗುವುದು,” ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
17 Ou si j’amène le glaive sur cette terre, et que je dise au glaive: Passe par cette terre, et que j’en tue les hommes et les bêtes;
“ಇಲ್ಲವೆ ನಾನು ಆ ದೇಶದ ಮೇಲೆ ಖಡ್ಗವನ್ನು ತರಿಸಿ, ‘ಖಡ್ಗವೇ, ಆ ದೇಶದಲ್ಲಿ ಹಾದುಹೋಗು,’ ಎಂದು ಹೇಳಿ, ಅದು ಮನುಷ್ಯರನ್ನೂ, ಮೃಗಗಳನ್ನೂ ಅದರೊಳಗಿಂದ ಕಡಿದುಬಿಟ್ಟಾಗ,
18 Et que ces trois hommes soient au milieu d’elle; je vis, moi, dit le Seigneur Dieu, ils ne délivreront ni leurs fils, ni leurs filles; mais eux seuls seront délivrés.
ಈ ಮೂವರು ಅದರಲ್ಲಿದ್ದರೂ, ನನ್ನ ಜೀವದಾಣೆ, ತಾವು ಉಳಿದುಕೊಳ್ಳುತ್ತಿದ್ದರೇ ಹೊರತು ತಮ್ಮ ಪುತ್ರಪುತ್ರಿಯರನ್ನು ಉಳಿಸಿಕೊಳ್ಳುತ್ತಿರಲಿಲ್ಲ, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
19 Mais si j’envoie la peste sur cette terre et que je répande mon indignation sur elle par le sang, afin que j’en enlève les hommes et les bêtes;
“ನಾನು ಆ ದೇಶದ ಮೇಲೆ ವ್ಯಾಧಿಯನ್ನು ಕಳುಹಿಸಿ, ಮರಣದಂಡನೆಯಾಗಿ ಅದರ ಮೇಲೆ ನನ್ನ ರೋಷವನ್ನು ಸುರಿದು, ಮನುಷ್ಯರನ್ನೂ ಮೃಗಗಳನ್ನೂ ಅದರೊಳಗಿಂದ ತೆಗೆದುಹಾಕುವಾಗ,
20 Et que Noé, Daniel et Job soient au milieu d’elle, je vis, moi, dit le Seigneur Dieu, ils ne délivreront ni fils, ni fille; mais par leur justice ils délivreront leurs propres âmes.
ನೋಹನೂ, ದಾನಿಯೇಲನೂ, ಯೋಬನೂ ಅದರಲ್ಲಿದ್ದರೂ ನನ್ನ ಜೀವದಾಣೆ, ಅವರು ತಮ್ಮ ನೀತಿಯಿಂದ ತಮ್ಮ ಪ್ರಾಣಗಳನ್ನು ಮಾತ್ರ ಉಳಿಸಿಕೊಳ್ಳುತ್ತಿದ್ದರೇ ಹೊರತು ತಮ್ಮ ಪುತ್ರಪುತ್ರಿಯರನ್ನು ಉಳಿಸಿಕೊಳ್ಳುತ್ತಿರಲಿಲ್ಲ,” ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
21 Parce que voici ce que dit le Seigneur Dieu: Que si j’envoie à Jérusalem mes quatre jugements cruels, le glaive, la famine, les bêtes mauvaises, et la peste, afin que j’en tue homme et bétail,
“ನಾನು ಖಡ್ಗ, ಬರಗಾಲ ಕ್ಷಾಮ, ದುಷ್ಟಮೃಗ ವ್ಯಾಧಿಗಳೆಂಬ ನನ್ನ ನಾಲ್ಕು ಕಠಿಣವಾದ ನ್ಯಾಯತೀರ್ಪುಗಳನ್ನು ಯೆರೂಸಲೇಮಿನ ಮೇಲೆ ಕಳುಹಿಸಿ ಮನುಷ್ಯರನ್ನೂ, ಮೃಗಗಳನ್ನೂ ಕಡಿದು ಬಿಟ್ಟ ಮೇಲೆ ಮತ್ತೆ ಏನಾಗುವುದು?
22 Cependant il y sera laissé des hommes qui se sauveront, et feront sortir leurs fils et leurs filles; voilà qu’eux-mêmes viendront vers vous, et que vous verrez leur voie et leurs inventions, et que vous serez consolés du mal que j’aurai amené sur Jérusalem, et de tous les fléaux dont je l’aurai accablée.
ಆದರೂ ಅದರಲ್ಲಿ ಪುತ್ರಪುತ್ರಿಯರಲ್ಲಿ ಕೆಲವರು ಹೇಗೂ ತಪ್ಪಿಸಿಕೊಂಡು ಅಲ್ಲಿಂದ ಉಳಿದು ಒಯ್ಯಲಾಗುವರು. ಅವರು ನಿಮ್ಮ ಬಳಿಗೆ ಬಂದಾಗ, ನೀವು ಅವರ ದುರ್ಮಾರ್ಗ ದುಷ್ಕೃತ್ಯಗಳನ್ನು ಕಂಡು ನಾನು ಯೆರೂಸಲೇಮಿನ ಮೇಲೆ ತಂದ ಕೇಡಿನ ವಿಷಯವಾಗಿಯೂ ಸಮಾಧಾನ ಹೊಂದುವಿರಿ.
23 Et ils vous consoleront, lorsque vous verrez leur voie et leurs inventions; et vous reconnaîtrez que ce n’est pas sans raison que j’aurai fait à Jérusalem tout ce que j’y aurai lait, dit le Seigneur Dieu.
ನೀವು ಅವರ ದುರ್ಮಾರ್ಗಗಳನ್ನೂ ದುಷ್ಕೃತ್ಯಗಳನ್ನೂ ನೋಡುವಾಗ ಅದರಿಂದಲೇ ನಿಮಗೆ ಸಮಾಧಾನವಾಗುವುದು; ನಾನು ಅದರೊಳಗೆ ಮಾಡಿದ್ದೆಲ್ಲಾ ಕಾರಣವಿಲ್ಲದೆ ಮಾಡಲಿಲ್ಲವೆಂದು ತಿಳಿದುಕೊಳ್ಳುವಿರಿ, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.”

< Ézéchiel 14 >