< Nombres 10 >
1 Et l'Éternel parla à Moïse en ces termes:
೧ಯೆಹೋವನು ಮೋಶೆಯ ಸಂಗಡ ಮಾತನಾಡಿ, ಆಜ್ಞಾಪಿಸಿದ್ದೇನೆಂದರೆ,
2 Fais-toi deux trompettes d'argent; tu leur donneras la façon d'ouvrage fait autour; elles te serviront pour convoquer l'Assemblée, et indiquer le décampement.
೨“ನೀನು ಬೆಳ್ಳಿಯ ತಗಡಿನಿಂದ ಎರಡು ತುತ್ತೂರಿಗಳನ್ನು ಮಾಡಿಸಬೇಕು. ಜನಸಮೂಹದವರನ್ನು ಕೂಡಿಸುವುದಕ್ಕೂ ಮತ್ತು ದಂಡುಗಳನ್ನು ಹೊರಡಿಸುವುದಕ್ಕೂ ಅವುಗಳನ್ನು ಉಪಯೋಗಿಸಬೇಕು.
3 Et quand on en sonnera [des deux], toute l'Assemblée se réunira auprès de toi à la porte de la Tente du Rendez-vous.
೩ನೀನು ತುತ್ತೂರಿಗಳನ್ನು ಊದಿಸುವಾಗ ಜನಸಮೂಹದವರೆಲ್ಲರೂ ನಿನ್ನ ಹತ್ತಿರ ದೇವದರ್ಶನದ ಗುಡಾರದ ಬಾಗಿಲಿಗೆ ಕೂಡಿಬರಬೇಕು.
4 Et quand on sonnera d'une seule, les Princes, les chefs des divisions d'Israël se réuniront auprès de toi.
೪ನೀನು ಒಂದನ್ನು ಮಾತ್ರ ಊದಿಸುವಾಗ ಇಸ್ರಾಯೇಲರ ಕುಲಾಧಿಪತಿಗಳಾದ ಪ್ರಧಾನರು ನಿನ್ನ ಬಳಿಗೆ ಕೂಡಿಬರಬೇಕು.
5 Et quand vous sonnerez la charge, ceux-là lèveront le camp, qui campent à l'orient.
೫ನೀನು ಆರ್ಭಟವಾಗಿ ಊದಿಸುವಾಗ ಪೂರ್ವದಿಕ್ಕಿನ ದಂಡುಗಳು ಹೊರಡಬೇಕು.
6 Et quand vous sonnerez la charge pour, la seconde fois, ceux-là lèveront le camp, qui campent au midi; vous sonnerez la charge lors de votre décampement.
೬ಎರಡನೆಯ ಸಾರಿ ಆರ್ಭಟವಾಗಿ ಊದಿಸುವಾಗ ದಕ್ಷಿಣ ದಿಕ್ಕಿನ ದಂಡುಗಳು ಹೊರಡಬೇಕು. ಹೀಗೆ ಪ್ರಯಾಣಕ್ಕೆ ಹೊರಡಬೇಕಾದಾಗ ಆರ್ಭಟವಾಗಿಯೇ ಊದಿಸಬೇಕು.
7 Mais pour convoquer l'Assemblée, vous sonnerez des trompettes, mais non pas la charge.
೭ಜನಸಮೂಹದವರು ಕೂಡಿಬರಬೇಕಾದಾಗ ಸಾಧಾರಣವಾಗಿ ಊದಿಸಬೇಕೇ ಹೊರತು ಆರ್ಭಟವಾಗಿ ಊದಿಸಬಾರದು.
8 Et ce sont les fils d'Aaron, les Prêtres, qui sonneront des trompettes; elles sont instituées à perpétuité chez vous pour vos âges futurs.
೮“ಆರೋನನ ವಂಶಸ್ಥರಾದ ಯಾಜಕರೇ ಆ ತುತ್ತೂರಿಗಳನ್ನು ಊದಬೇಕು. ಇದು ನಿಮಗೂ ನಿಮ್ಮ ಸಂತತಿಯವರಿಗೂ ಶಾಶ್ವತ ನಿಯಮವಾಗಿರಲಿ.
9 Et quand vous vous mettrez en campagne dans votre pays contre vos agresseurs qui vous attaqueront, vous sonnerez la charge avec les trompettes, et votre souvenir sera rappelé devant l'Éternel, votre Dieu, et vous serez délivrés de vos ennemis.
೯ನೀವು ಸ್ವದೇಶವನ್ನು ಸೇರಿದ ಮೇಲೆ ನಿಮ್ಮನ್ನು ಉಪದ್ರವಪಡಿಸುವ ಶತ್ರುಗಳನ್ನು ಎದುರಿಸುವುದಕ್ಕಾಗಿ ಯುದ್ಧಕ್ಕೆ ಹೊರಡುವಾಗ ಆ ತುತ್ತೂರಿಗಳನ್ನು ಆರ್ಭಟವಾಗಿ ಊದಿಸಬೇಕು. ಆಗ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಜ್ಞಾಪಕಕ್ಕೆ ತಂದುಕೊಂಡು ಶತ್ರುಗಳ ಕೈಯಿಂದ ರಕ್ಷಿಸುವನು.
10 Et dans vos jours de réjouissance, et dans vos solennités et à vos Nouvelles Lunes vous sonnerez des trompettes en offrant vos holocaustes et vos sacrifices pacifiques, afin qu'elles rappellent votre souvenir devant votre Dieu. Je suis l'Éternel, votre Dieu.
೧೦ಇದಲ್ಲದೆ ನೀವು ಉತ್ಸವ ಕಾಲಗಳಲ್ಲಿಯು, ಹಬ್ಬಗಳಲ್ಲಿಯು, ಅಮಾವಾಸ್ಯೆಗಳಲ್ಲಿಯು ಸರ್ವಾಂಗಹೋಮಗಳನ್ನೂ, ಸಮಾಧಾನಯಜ್ಞಗಳನ್ನೂ ಸಮರ್ಪಿಸುವಾಗ ಆ ತುತ್ತೂರಿಗಳನ್ನು ಊದಿಸಬೇಕು. ಆ ತುತ್ತೂರಿಯ ಧ್ವನಿಯು ನಿಮ್ಮನ್ನು ನಿಮ್ಮ ದೇವರ ಜ್ಞಾಪಕಕ್ಕೆ ತರುವುದು, ನಾನೇ ನಿಮ್ಮ ದೇವರಾದ ಯೆಹೋವನು.”
11 Et la seconde année, au second mois, le vingtième jour du mois, la nuée s'éleva de dessus la Résidence du Témoignage.
೧೧ಎರಡನೆಯ ವರ್ಷದ ಎರಡನೆಯ ತಿಂಗಳಿನ ಇಪ್ಪತ್ತನೆಯ ದಿನದಲ್ಲಿ ದೇವದರ್ಶನದ ಗುಡಾರದ ಮೇಲಿದ್ದ ಮೇಘವು ಮೇಲಕ್ಕೆ ಎದ್ದಿತು.
12 Et les enfants d'Israël partirent, selon l'ordre de leurs départs, du désert de Sinaï, et la nuée s'arrêta dans le désert de Paran.
೧೨ಆದುದರಿಂದ ಇಸ್ರಾಯೇಲರು ಸೀನಾಯಿ ಅರಣ್ಯವನ್ನು ಬಿಟ್ಟು ಮುಂದೆ ಮುಂದೆ ಪ್ರಯಾಣಮಾಡಿದರು. ತರುವಾಯ ಆ ಮೇಘವು ಪಾರಾನ್ ಅರಣ್ಯದಲ್ಲಿ ನಿಂತಿತು.
13 Ils firent ce premier décampement sur l'ordre de l'Éternel transmis par Moïse,
೧೩ಯೆಹೋವನು ಮೋಶೆಯ ಮೂಲಕ ಆಜ್ಞಾಪಿಸಿದ ರೀತಿಯಲ್ಲಿ ಅವರು ಪ್ರಯಾಣಮಾಡಿದ್ದು ಇದೇ ಮೊದಲನೆಯ ಸಾರಿ.
14 et d'abord partit la bannière du camp des fils de Juda rangés par divisions, et leur corps d'armée était sous Nahesson, fils de Amminadab,
೧೪ಮುಂಭಾಗದಲ್ಲಿ ಯೆಹೂದ ಕುಲದ ದಂಡಿಗೆ ಸೇರಿದವರು ಸೈನ್ಯಸೈನ್ಯವಾಗಿ ಹೊರಟರು. ಅವರಿಗೆ ಸೇನಾನಾಯಕನಾಗಿ ಇದ್ದವನು ಅಮ್ಮೀನಾದಾಬನ ಮಗನಾದ ನಹಶೋನನು.
15 et le corps d'armée de la Tribu des fils d'Issaschar, sous Nethanéel, fils de Tsuhar,
೧೫ಇಸ್ಸಾಕಾರ್ ಕುಲದವರಿಗೆ ಸೇನಾನಾಯಕನಾಗಿ ಇದ್ದವನು ಚೂವಾರನ ಮಗನಾದ ನೆತನೇಲನು.
16 et le corps d'armée de la Tribu des fils de Zabulon, sous Eliab, fils de Hélon.
೧೬ಜೆಬುಲೂನ್ ಕುಲದವರಿಗೆ ಸೇನಾನಾಯಕನಾಗಿ ಇದ್ದವನು ಹೇಲೋನನ ಮಗನಾದ ಎಲೀಯಾಬನು.
17 Puis la Résidence fut démontée, et partirent les fils de Gerson, et les fils de Merari, portant la Résidence.
೧೭ತರುವಾಯ ದೇವದರ್ಶನದ ಗುಡಾರವನ್ನು ಇಳಿಸಿದಾಗ ಗೇರ್ಷೋನ್ಯರು ಮತ್ತು ಮೆರಾರೀಯರೂ ಅದನ್ನು ಹೊತ್ತುಕೊಂಡು ಹೊರಟರು.
18 Alors partit la bannière du camp de Ruben rangé par divisions, et son corps d'armée était sous Elitsur, fils de Sedéur,
೧೮ಆಮೇಲೆ ರೂಬೇನ್ ಕುಲದ ದಂಡಿಗೆ ಸೇರಿದವರು ಸೈನ್ಯಸೈನ್ಯವಾಗಿ ಹೊರಟರು. ಅವರಿಗೆ ಸೇನಾನಾಯಕನಾಗಿ ಇದ್ದವನು ಶೆದೇಯೂರನ ಮಗನಾದ ಎಲೀಚೂರನು.
19 et le corps d'armée de la Tribu des fils de Siméon, sous Selumiel, fils de Tsurisaddaï,
೧೯ಸಿಮೆಯೋನ್ ಕುಲದವರಿಗೆ ಸೇನಾನಾಯಕನಾಗಿ ಇದ್ದವನು ಚೂರೀಷದ್ದೈಯ ಮಗನಾದ ಶೆಲುಮೀಯೇಲನು.
20 et le corps d'armée de la Tribu des fils de Gad, sous Eliasaph, fils de Deguel.
೨೦ಗಾದ್ ಕುಲದವರಿಗೆ ಸೇನಾನಾಯಕನಾಗಿ ಇದ್ದವನು ದೆಗೂವೇಲನ ಮಗನಾದ ಎಲ್ಯಾಸಾಫನು.
21 Puis partirent les Kahathites portant le Sanctuaire; et [les premiers] dressaient la Résidence en attendant leur arrivée.
೨೧ಅವರ ಹಿಂದೆ ಕೆಹಾತ್ಯರು ದೇವಾಲಯದ ಸಾಮಾನುಗಳನ್ನು ಹೊತ್ತುಕೊಂಡು ಹೊರಟರು. ಅವರು ಬರುವಷ್ಟರೊಳಗೆ ಉಳಿದ ಲೇವಿಯರು ದೇವದರ್ಶನದ ಗುಡಾರವನ್ನು ನಿಲ್ಲಿಸಿದರು.
22 Alors partit la bannière du camp des fils d'Ephraïm rangés par divisions, et leur corps d'armée était sous Elisamah, fils de Ammihud,
೨೨ಆ ಮೇಲೆ ಎಫ್ರಾಯೀಮ್ ಕುಲದ ದಂಡಿಗೆ ಸೇರಿದವರು ಸೈನ್ಯಸೈನ್ಯವಾಗಿ ಹೊರಟರು. ಅವರಿಗೆ ಸೇನಾನಾಯಕನಾಗಿ ಇದ್ದವನು ಅಮ್ಮೀಹೂದನ ಮಗನಾದ ಎಲೀಷಾಮನು.
23 et le corps d'armée de la Tribu des fils de Manassé, sous Gamliel, fils de Pedahtsur,
೨೩ಮನಸ್ಸೆ ಕುಲದವರಿಗೆ ಸೇನಾನಾಯಕನಾಗಿ ಇದ್ದವನು ಪೆದಾಚೂರನ ಮಗನಾದ ಗಮ್ಲೀಯೇಲನು.
24 et le corps d'armée de la Tribu des fils de Benjamin, sous Abidan, fils de Gidéoni.
೨೪ಬೆನ್ಯಾಮೀನ್ ಕುಲದವರಿಗೆ ಸೇನಾನಾಯಕನಾಗಿ ಇದ್ದವನು ಗಿದ್ಯೋನಿಯ ಮಗನಾದ ಅಬೀದಾನನು.
25 Ensuite partit la bannière du camp des fils de Dan fermant la marche de tous les campements et rangés par divisions, et leur corps d'armée était sous Ahiézer, fils de Aramisaëdaï,
೨೫ಆ ಮೇಲೆ ಎಲ್ಲಾ ದಂಡುಗಳ ಹಿಂಭಾಗದಲ್ಲಿ ದಾನ್ ಕುಲದ ದಂಡಿಗೆ ಸೇರಿದವರು ಸೈನ್ಯಸೈನ್ಯವಾಗಿ ಹೊರಟರು. ಅವರ ಸೇನಾನಾಯಕನಾಗಿ ಇದ್ದವನು ಅಮ್ಮೀಷದ್ದೈಯ ಮಗನಾದ ಅಹೀಗೆಜೆರನು.
26 et le corps d'armée de la Tribu des fils d'Asser, sous Paghiel, fils de Hochram,
೨೬ಆಶೇರ್ ಕುಲದವರಿಗೆ ಸೇನಾನಾಯಕನಾಗಿ ಇದ್ದವನು ಒಕ್ರಾನನ ಮಗನಾದ ಪಗೀಯೇಲನು.
27 et le corps d'armée de la Tribu des fils de Néphthali, sous Ahira, fils de Einan.
೨೭ನಫ್ತಾಲಿ ಕುಲದವರಿಗೆ ಸೇನಾನಾಯಕನಾಗಿ ಇದ್ದವನು ಏನಾನನ ಮಗನಾದ ಅಹೀರನು.
28 Tel fut l'ordre du décampement des enfants d'Israël selon leurs divisions, c'est ainsi qu'ils se mirent en marche.
೨೮ಈ ರೀತಿಯಲ್ಲಿ ಇಸ್ರಾಯೇಲರು ಸೈನ್ಯಸೈನ್ಯವಾಗಿ ಹೊರಟು ಪ್ರಯಾಣಮಾಡಿದರು.
29 Alors Moïse dit à Hobab, fils de Reguel, le Madianite, beau-père de Moïse: Nous marchons vers le lieu dont l'Éternel a dit: Je veux vous le donner; viens avec nous, et nous te ferons du bien; car l'Éternel a promis de faire du bien à Israël.
೨೯ಮೋಶೆಯು ತನ್ನ ಮಾವನಾಗಿದ್ದ ಮಿದ್ಯಾನ್ಯನಾದ ರೆಗೂವೇಲನ ಮಗನಾದ ಹೋಬಾಬನಿಗೆ, “ಯೆಹೋವನು ನಮಗೆ ಕೊಡುತ್ತೇನೆಂದು ವಾಗ್ದಾನ ಮಾಡಿದ ದೇಶಕ್ಕೆ ನಾವು ಪ್ರಯಾಣಮಾಡುತ್ತಾ ಇದ್ದೇವೆ. ಇಸ್ರಾಯೇಲರಿಗೆ ಒಳಿತನ್ನು ಉಂಟುಮಾಡುತ್ತೇನೆಂದು ಯೆಹೋವನು ತಾನೇ ಹೇಳಿದ್ದಾನೆ. ಆದುದರಿಂದ ನೀನೂ ನಮ್ಮ ಜೊತೆಯಲ್ಲಿ ಬಾ; ನಮ್ಮಿಂದ ನಿನಗೂ ಒಳ್ಳೆಯದಾಗುವುದು” ಎಂದು ಹೇಳಿದನು.
30 Et il lui répondit: Je n'irai point; mais je veux regagner mon pays et ma patrie.
೩೦ಆದರೆ ಹೋಬಾಬನು ಮೋಶೆಗೆ, “ನಾನು ಬರುವುದಿಲ್ಲ; ನನ್ನ ಸ್ವದೇಶಕ್ಕೆ, ನನ್ನ ಸ್ವಜನರ ಬಳಿಗೆ ಹೋಗುತ್ತೇನೆ” ಎಂದು ಹೇಳಿದನು.
31 Et Moïse reprit: Ne nous quitte donc pas, puisque en effet tu connais les lieux propres à nos campements dans le désert: sois donc notre œil.
೩೧ಅದಕ್ಕೆ ಮೋಶೆಯು ಉತ್ತರವಾಗಿ, “ನಮ್ಮನ್ನು ಬಿಟ್ಟು ಹೋಗಬೇಡವೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ. ಈ ಮರುಭೂಮಿಯಲ್ಲಿ ಡೇರೆಗಳನ್ನು ಹಾಕುವ ಸ್ಥಳಗಳು ನಿನಗೆ ಮಾತ್ರ ಗೊತ್ತಿದೆ. ಆದುದರಿಂದ ನೀನು ನಮಗೆ ಕಣ್ಣಾಗಿರಬೇಕು.
32 Et si tu viens avec nous, et quand sera arrivé ce bien que l'Éternel veut nous faire, nous te ferons du bien.
೩೨ನೀನು ನಮ್ಮ ಸಂಗಡ ಬಂದರೆ ಯೆಹೋವನು ನಮಗೆ ಮಾಡುವ ಒಳ್ಳೆಯದನ್ನೆಲ್ಲಾ ನಾವು ನಿನಗೂ ಉಂಟಾಗುವಂತೆ ಮಾಡುವೆವು” ಎಂದು ಹೇಳಿದನು.
33 Ils partirent ainsi de la montagne de l'Éternel, et firent trois journées de marche, et l'Arche de l'alliance de l'Éternel avait sur eux l'avance de trois journées de marche pour leur découvrir une station.
೩೩ಅವರು ಯೆಹೋವನ ಬೆಟ್ಟವನ್ನು ಬಿಟ್ಟು ಮೂರು ದಿನದ ಪ್ರಯಾಣದಷ್ಟು ದೂರ ಹೋದರು. ಇಳಿದುಕೊಳ್ಳಲು ಸೂಕ್ತವಾದ ಸ್ಥಳವನ್ನು ನೋಡುವುದಕ್ಕಾಗಿ ಯೆಹೋವನ ಒಡಂಬಡಿಕೆಯ ಮಂಜೂಷವು ಆ ಮೂರು ದಿನಗಳು ಅವರ ಮುಂದಾಗಿ ಹೋಗುತ್ತಿತ್ತು.
34 Et la nuée de l'Éternel était au-dessus d'eux pendant le jour, lorsqu'ils partaient de leur campement.
೩೪ಅವರು ಪಾಳೆಯದಿಂದ ಹೊರಡುವಾಗ ಹಗಲು ಹೊತ್ತಿನಲ್ಲಿ ಯೆಹೋವನ ಮೇಘವು ಅವರ ಮೇಲೆ ಇರುತ್ತಿತ್ತು.
35 Et au départ de l'Arche Moïse disait: Lève-toi, Éternel! et que tes ennemis soient dissipés, et ceux qui te haïssent, mis en fuite devant toi.
೩೫ಯೆಹೋವನ ಮಂಜೂಷ ಪೆಟ್ಟಿಗೆಯು ಹೊರಡುವಾಗ ಮೋಶೆ, “ಯೆಹೋವನೇ, ಎದ್ದು ಹೊರಡೋಣವಾಗಲಿ; ನಿನ್ನ ವೈರಿಗಳು ಚದರಿಹೋಗಲಿ; ನಿನ್ನ ಶತ್ರುಗಳು ಬೆನ್ನು ತೋರಿಸಿ ಓಡಿಹೋಗಲಿ” ಎಂದು ಹೇಳುವನು.
36 Et quand elle s'arrêtait, il disait: Ramène, Éternel, les myriades des divisions d'Israël.
೩೬ಅದು ನಿಂತಾಗ ಅವನು, “ಯೆಹೋವನೇ, ಇಸ್ರಾಯೇಲರ ಲಕ್ಷಾಂತರ ಕುಟುಂಬಗಳ ಮಧ್ಯದಲ್ಲಿ ಮರಳಿ ಆಗಮಿಸು” ಎಂದು ಹೇಳುವನು.