< Jérémie 36 >
1 Et la quatrième année de Jéhojakim, fils de Josias, roi de Juda, cette parole fut adressée à Jérémie par l'Éternel, qui dit:
೧ಯೋಷೀಯನ ಮಗನೂ ಯೆಹೂದದ ಅರಸನೂ ಆದ ಯೆಹೋಯಾಕೀಮನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ ಯೆಹೋವನು ಯೆರೆಮೀಯನಿಗೆ,
2 Prends un volume, et y écris toutes les paroles que je t'ai dites touchant Israël et Juda, et touchant tous les peuples, depuis le jour où je te parlai dans le temps de Josias jusques aujourd'hui.
೨“ನೀನು ಗ್ರಂಥ ಬರೆಯತಕ್ಕ ಸುರುಳಿಯನ್ನು ತೆಗೆದುಕೊಂಡು, ನಾನು ಯೋಷೀಯನ ಕಾಲದಲ್ಲಿ ನಿನ್ನ ಸಂಗಡ ಮಾತನಾಡಿದ ದಿನದಿಂದ ಇಂದಿನವರೆಗೂ ಇಸ್ರಾಯೇಲು, ಯೆಹೂದ, ಸಕಲ ಜನಾಂಗಗಳು ಇವುಗಳ ವಿಷಯವಾಗಿ ನಿನಗೆ ನುಡಿಯುತ್ತಾ ಬಂದಿರುವ ಮಾತುಗಳನ್ನೆಲ್ಲಾ ಬರೆ.
3 Peut-être la maison de Juda entendant parler de tout le mal que je pense à leur faire, chacun abandonnera sa voie mauvaise, et je pardonnerai leur iniquité et leur péché.
೩ಒಂದು ವೇಳೆ ಯೆಹೂದ ವಂಶದವರು ನಾನು ಅವರಿಗೆ ಮಾಡಬೇಕೆಂದಿರುವ ಕೇಡನ್ನು ಕೇಳಿ ತಮ್ಮ ತಮ್ಮ ದುರ್ಮಾರ್ಗಗಳಿಂದ ಹಿಂದಿರುಗಬಹುದು; ಹಿಂದಿರುಗಿದರೆ ಅವರ ಪಾಪ ಮತ್ತು ಅಪರಾಧಗಳನ್ನು ಕ್ಷಮಿಸಿಬಿಡುವೆನು” ಎಂಬ ಮಾತನ್ನು ತಿಳಿಸಿದನು.
4 Alors Jérémie fit venir Baruch, fils de Nérija, et Baruch écrivit sous la dictée de Jérémie, dans un volume, toutes les paroles que l'Éternel lui avait dites.
೪ಆಗ ಯೆರೆಮೀಯನು ನೇರೀಯನ ಮಗನಾದ ಬಾರೂಕನನ್ನು ಕರೆಯಿಸಿ ಯೆಹೋವನ ಮಾತುಗಳನ್ನೆಲ್ಲಾ ಹೇಳಲು ಅವನು ಯೆರೆಮೀಯನ ಬಾಯಿಂದ ಬಂದ ಹಾಗೆಯೇ ಅವುಗಳನ್ನು ಗ್ರಂಥದ ಸುರುಳಿಯಲ್ಲಿ ಬರೆದನು.
5 Et Jérémie donna cet ordre à Baruch, et lui dit: Je suis retenu ici, et je ne puis me rendre à la maison de l'Éternel;
೫ಮತ್ತು ಯೆರೆಮೀಯನು ಬಾರೂಕನಿಗೆ, “ಯೆಹೋವನ ಆಲಯದೊಳಗೆ ಪ್ರವೇಶಿಸಲು ನನಗೆ ತಡೆಯಾಗಿದೆ;
6 va donc, et lis dans le volume ce que tu as écrit sous ma dictée, les paroles de l'Éternel, aux oreilles du peuple, dans la maison de l'Éternel, le jour du jeûne, et lis-les aussi aux oreilles de tous les Juifs venus de leurs villes.
೬ನೀನೇ ಹೋಗಿ ನನ್ನ ಬಾಯಿಂದ ಬಂದ ಹಾಗೆ ನೀನು ಬರೆದ ಈ ಸುರುಳಿಯಲ್ಲಿನ ಯೆಹೋವನ ಮಾತುಗಳನ್ನು ಉಪವಾಸದ ದಿನದಲ್ಲಿ ಯೆಹೋವನ ಆಲಯದೊಳಗೆ ಯೆರೂಸಲೇಮಿನ ಜನರಿಗೂ, ತಮ್ಮ ತಮ್ಮ ಊರುಗಳಿಂದ ಬಂದಿರುವ ಎಲ್ಲಾ ಯೆಹೂದ್ಯರಿಗೂ ಕೇಳಿಸುವಂತೆ ಓದು.
7 Peut-être supplieront-ils humblement l'Éternel, et quitteront-ils chacun leur mauvaise voie; car grande est la colère et l'indignation dont l'Éternel menace ce peuple.
೭ಅವರು ಒಂದು ವೇಳೆ ಯೆಹೋವನಿಗೆ ಶರಣಾಗತರಾಗಿ ತಮ್ಮ ದುರ್ಮಾರ್ಗಗಳಿಂದ ಹಿಂದಿರುಗಿಯಾರು; ಯೆಹೋವನು ಈ ಜನರ ಮೇಲೆ ತೀರಿಸಬೇಕೆಂದು ಪ್ರಕಟಿಸಿರುವ ಕೋಪ ಮತ್ತು ರೋಷಗಳು ಅಪಾರವಾಗಿವೆ” ಎಂದು ಅಪ್ಪಣೆಕೊಟ್ಟನು.
8 Et Baruch, fils de Nérija, exécuta dans son entier l'ordre que lui avait donné Jérémie, le prophète, de lire dans le livre les paroles de l'Éternel dans la maison de l'Éternel.
೮ನೇರೀಯನ ಮಗನಾದ ಬಾರೂಕನು ಸುರುಳಿಯಲ್ಲಿನ ಯೆಹೋವನ ಮಾತುಗಳನ್ನು ಯೆಹೋವನ ಆಲಯದೊಳಗೆ ಓದಿ ಪ್ರವಾದಿಯಾದ ಯೆರೆಮೀಯನು ಆಜ್ಞಾಪಿಸಿದಂತೆ ಮಾಡಿದನು.
9 Et la cinquième année de Jéhojakim, fils de Josias, roi de Juda, le neuvième mois, on publia un jeûne devant l'Éternel; tout le peuple de Jérusalem, et tout le peuple vint des villes de Juda à Jérusalem.
೯ಯೋಷೀಯನ ಮಗನೂ ಯೆಹೂದದ ಅರಸನೂ ಆದ ಯೆಹೋಯಾಕೀಮನ ಆಳ್ವಿಕೆಯ ಐದನೆಯ ವರ್ಷದ ಒಂಭತ್ತನೆಯ ತಿಂಗಳಿನಲ್ಲಿ ಯೆರೂಸಲೇಮಿನವರೆಲ್ಲರೂ, ಯೆಹೂದದ ಊರುಗಳಿಂದ ಯೆರೂಸಲೇಮಿಗೆ ಬಂದವರೆಲ್ಲರೂ ಯೆಹೋವನ ಆರಾಧನೆಯ ಉಪವಾಸವನ್ನು ಗೊತ್ತುಮಾಡಿ ಪ್ರಕಟಿಸಿದರು.
10 Alors Baruch lut dans le livre les paroles de Jérémie dans la maison de l'Éternel, dans la chambre de Gémaria, fils de Schaphan, le scribe, dans le vestibule supérieur, à l'entrée de la Porte neuve de la maison de l'Éternel, aux oreilles de tout le peuple.
೧೦ಆಗ ಬಾರೂಕನು ಯೆಹೋವನ ಆಲಯದೊಳಗೆ ಮೇಲಣ ಪ್ರಾಕಾರದಲ್ಲಿ ಹೊಸ ಬಾಗಿಲ ಹತ್ತಿರ ಲೇಖಕನಾದ ಶಾಫಾನನ ಮಗನಾಗಿರುವ ಗೆಮರ್ಯನ ಕೋಣೆಯಲ್ಲಿ ಸುರುಳಿಯಲ್ಲಿನ ಯೆರೆಮೀಯನ ಮಾತುಗಳನ್ನು ಎಲ್ಲಾ ಜನರಿಗೂ ಕೇಳಿಸುವಂತೆ ಓದಿದನು.
11 Et Michée, fils de Gémaria, fils de Schaphan, ayant entendu toutes les paroles de l'Éternel lues dans le livre,
೧೧ಶಾಫಾನನ ಮೊಮ್ಮಗನೂ ಗೆಮರ್ಯನ ಮಗನೂ ಆದ ಮೀಕಾಯನು ಸುರುಳಿಯಲ್ಲಿನ ಯೆಹೋವನ ಮಾತುಗಳನ್ನೆಲ್ಲಾ ಕೇಳಿ, ಅರಮನೆಯಲ್ಲಿ ಲೇಖಕನ ಕೋಣೆಗೆ ಇಳಿದುಹೋದನು.
12 descendit à la maison du roi, dans la chambre du scribe; et voici, tous les princes y étaient assis, Elisama, le scribe, et Délaïa, fils de Sémaïa, et Elnathan, fils de Hachbor, et Gémaria, fils de Schaphan, et Sédécias, fils d'Ananias, et tous les princes.
೧೨ಅಲ್ಲಿ ಲೇಖಕನಾದ ಎಲೀಷಾಮನು, ಶೆಮಾಯನ ಮಗನಾದ ದೆಲಾಯನು, ಅಕ್ಬೋರನ ಮಗನಾದ ಎಲ್ನಾಥಾನನು, ಶಾಫಾನನ ಮಗನಾದ ಗೆಮರ್ಯನು, ಹನನೀಯನ ಮಗನಾದ ಚಿದ್ಕೀಯನು ಅಂತು ಪ್ರಧಾನರೆಲ್ಲರೂ ಕುಳಿತುಕೊಂಡಿದ್ದರು.
13 Et Michée leur rapporta toutes les paroles qu'il avait entendues, quand Baruch lisait dans le livre aux oreilles du peuple.
೧೩ಮೀಕಾಯನು ಜನರ ಮುಂದೆ ಗ್ರಂಥವನ್ನು ಓದುತ್ತಿರುವ ಬಾರೂಕನ ಬಾಯಿಂದ ತಾನು ಕೇಳಿದ್ದ ಮಾತುಗಳನ್ನೆಲ್ಲಾ ಅವರಿಗೆ ತಿಳಿಸಲು,
14 Alors tous les princes députèrent à Baruch Jehoudi, fils de Néthania, fils de Sélémia, fils de Couschi, pour lui dire: Prends en ta main le livre dans lequel tu as lu aux oreilles du peuple, et viens! Et Baruch, fils de Nérija, prit en sa main le livre, et vint auprès d'eux.
೧೪ಸಕಲ ಪ್ರಧಾನರು ಬಾರೂಕನಿಗೆ, “ನೀನು ಜನರ ಮುಂದೆ ಓದಿದ ಸುರುಳಿಯನ್ನು ಕೈಯಲ್ಲಿ ತೆಗೆದುಕೊಂಡು ಬಾ” ಎಂದು ನೆಥನ್ಯನ ಮಗನೂ ಶೆಲೆಮ್ಯನ ಮೊಮ್ಮಗನೂ ಕೂಷಿಯ ಮರಿಮಗನೂ ಆದ ಯೆಹೂದಿಯ ಮೂಲಕ ಹೇಳಿ ಕಳುಹಿಸಿದರು. ಕೂಡಲೆ ನೇರೀಯನ ಮಗನಾದ ಬಾರೂಕನು ಸುರುಳಿಯನ್ನು ಕೈಯಲ್ಲಿ ತೆಗೆದುಕೊಂಡು ಅವರ ಬಳಿಗೆ ಬಂದನು.
15 Et ils lui dirent: Assieds-toi, et lis-le à nos oreilles. Et Baruch lut à leurs oreilles.
೧೫ಅವರು ಅವನಿಗೆ, “ದಯಮಾಡಿ ಕುಳಿತುಕೊಂಡು ನಮ್ಮ ಮುಂದೆ ಓದು” ಎಂದು ಹೇಳಲು ಬಾರೂಕನು ಅದನ್ನು ಅವರ ಮುಂದೆ ಓದಿದನು.
16 Et à l'ouïe de toutes ces paroles, effrayés ils s'entre-regardèrent, et dirent à Baruch: Nous rapporterons au roi toutes ces paroles.
೧೬ಅವರು ಆ ಮಾತುಗಳನ್ನೆಲ್ಲಾ ಕೇಳಿ ಬೆಚ್ಚಿಬಿದ್ದು ಒಬ್ಬರನ್ನೊಬ್ಬರು ನೋಡುತ್ತಾ, “ನಾವು ಈ ಮಾತುಗಳನ್ನೆಲ್ಲಾ ಅರಸನಿಗೆ ತಿಳಿಸಲೇಬೇಕು” ಎಂದು ಬಾರೂಕನಿಗೆ ಹೇಳಿದರು.
17 Et ils interrogèrent Baruch, et dirent: Dis-nous donc comment tu as écrit toutes ces paroles sous sa dictée!
೧೭ಮತ್ತು, “ನೀನು ಈ ಮಾತುಗಳನ್ನೆಲ್ಲಾ ಹೇಗೆ ಬರೆದಿ? ಅವನ ಬಾಯಿಂದ ಬಂದ ಹಾಗೆತಾನೇ? ದಯಮಾಡಿ ನಮಗೆ ತಿಳಿಸು” ಎಂದು ಅವನನ್ನು ಕೇಳಿದರು.
18 Et Baruch leur dit: De sa bouche il me dictait toutes ces paroles, et je les écrivais dans ce livre avec de l'encre.
೧೮ಬಾರೂಕನು ಅವರಿಗೆ, “ಅವನು ಈ ಮಾತುಗಳನ್ನೆಲ್ಲಾ ತನ್ನ ಬಾಯಿಂದಲೇ ನನಗೆ ನುಡಿದನು, ನಾನು ಅವುಗಳನ್ನು ಮಸಿಯಿಂದ ಈ ಪುಸ್ತಕದಲ್ಲಿ ಬರೆದೆನು” ಎಂದು ಉತ್ತರಕೊಟ್ಟನು.
19 Alors les princes dirent à Baruch: Va, et te cache, ainsi que Jérémie, et que personne ne sache où vous êtes!
೧೯ಆಗ ಪ್ರಧಾನರು ಬಾರೂಕನಿಗೆ, “ಹೊರಡು, ನೀನೂ ಮತ್ತು ಯೆರೆಮೀಯನೂ ಅಡಗಿಕೊಳ್ಳಿರಿ, ನೀವೆಲ್ಲಿದ್ದೀರೆಂಬುದು ಯಾರಿಗೂ ಗೊತ್ತಾಗಬಾರದು” ಎಂದು ಹೇಳಿದನು.
20 Puis ils se rendirent auprès du roi dans la cour, et ils déposèrent le livre dans la chambre d'Elisama, le scribe, et ils exposèrent toutes ces choses aux oreilles du roi.
೨೦ಅನಂತರ ಅವರು ಸುರುಳಿಯನ್ನು ಲೇಖಕನಾದ ಎಲೀಷಾಮನ ಕೋಣೆಯಲ್ಲಿ ಇಟ್ಟುಬಿಟ್ಟು ಪ್ರಾಕಾರದಲ್ಲಿನ ಅರಸನ ಬಳಿಗೆ ಹೋಗಿ ಆ ಮಾತುಗಳನ್ನೆಲ್ಲಾ ಅವನಿಗೆ ಅರಿಕೆ ಮಾಡಿದರು.
21 Alors le roi envoya Jehoudi pour prendre le volume; et il le prit dans la chambre d'Elisama, le scribe; et Jehoudi le lut aux oreilles du roi, et aux oreilles de tous les princes qui entouraient le roi.
೨೧ಕೂಡಲೆ ಅರಸನು ಸುರುಳಿಯನ್ನು ತರುವುದಕ್ಕೆ ಯೆಹೂದಿಯನ್ನು ಕಳುಹಿಸಿದನು; ಅವನು ಲೇಖಕನಾದ ಎಲೀಷಾಮನ ಕೋಣೆಯೊಳಗಿಂದ ಅದನ್ನು ತೆಗೆದುಕೊಂಡು ಬಂದು ಅರಸನ ಮತ್ತು ಅವನ ಪಕ್ಕದಲ್ಲಿ ನಿಂತಿದ್ದ ಸಕಲ ಪ್ರಧಾನರ ಮುಂದೆ ಓದಿದನು.
22 Or le roi habitait la maison d'hiver au neuvième mois, et le brasier brûlait devant lui.
೨೨ಆಗ ಪುಷ್ಯಮಾಸ; ಅರಸನು ಚಳಿಗಾಲದ ಮನೆಯಲ್ಲಿ ಕುಳಿತಿದ್ದನು; ಅವನ ಮುಂದೆ ಅಗ್ಗಿಷ್ಟಿಕೆಯು ಉರಿಯುತ್ತಿತ್ತು.
23 Et lorsque Jehoudi en eut lu trois ou quatre colonnes, le roi le coupa avec un canif de scribe, et le jeta dans le feu du brasier, jusqu'à ce que le volume fût consumé en entier par le feu dans le brasier.
೨೩ಯೆಹೂದಿಯು ಬರವಣಿಗೆಯ ಮೂರು ನಾಲ್ಕು ಪುಟಗಳನ್ನು ಓದಿದ ಹಾಗೆಲ್ಲಾ ಅರಸನು ಆಯಾ ಭಾಗಗಳನ್ನು ಕತ್ತರಿಯಿಂದ ಕತ್ತರಿಸಿ ಸುರುಳಿಯು ಸಂಪೂರ್ಣವಾಗಿ ಸುಟ್ಟುಹೋಗುವ ತನಕ ಅದನ್ನು ಅಗ್ಗಿಷ್ಟಿಕೆಯ ಬೆಂಕಿಯಲ್ಲಿ ಹಾಕುತ್ತಾ ಬಂದನು.
24 Et ils ne furent point effrayés, et ne déchirèrent point leurs habits, ni le roi, ni aucun de ses serviteurs, à l'ouïe de toutes ces paroles.
೨೪ಅರಸನಾಗಲಿ ಅಥವಾ ಸುರುಳಿಯ ಮಾತುಗಳನ್ನೆಲ್ಲಾ ಕೇಳಿದ ಅವನ ಸೇವಕರಲ್ಲಿ ಯಾರೇ ಆಗಲಿ ಭಯಪಡಲಿಲ್ಲ, ಬಟ್ಟೆಗಳನ್ನು ಹರಿದುಕೊಳ್ಳಲಿಲ್ಲ.
25 Bien plus, Elnathan, et Délaïa, et Gémaria intercédèrent auprès du roi, pour qu'il ne brûlât pas le volume; mais il ne les écouta point.
೨೫ಎಲ್ನಾಥಾನನೂ, ದೆಲಾಯನೂ ಮತ್ತು ಗೆಮರ್ಯನೂ, “ದಯಮಾಡಿ ಸುರುಳಿಯನ್ನು ಸುಡಬಾರದು” ಎಂದು ಅರಸನಿಗೆ ವಿಜ್ಞಾಪನೆಮಾಡಿದರೂ ಅವನು ಅವರ ಮಾತನ್ನು ಕೇಳಲಿಲ್ಲ.
26 Et le roi ordonna à Jéraméel, fils de Hammélech, et à Séraïa, fils d'Asriel, et à Sélémia, fils d'Abdiel, de saisir Baruch le scribe, et Jérémie le prophète; mais l'Éternel les cacha.
೨೬ಮತ್ತು ಅರಸನು ರಾಜವಂಶೀಯನಾದ ಎರಖ್ಮೆಯೇಲ, ಅಜ್ರಿಯೇಲನ ಮಗನಾದ ಸೆರಾಯ, ಅಬ್ದೆಯೇಲನ ಮಗನಾದ ಶಲೆಮ್ಯ ಇವರಿಗೆ ಲೇಖಕನಾದ ಬಾರೂಕನನ್ನೂ ಮತ್ತು ಪ್ರವಾದಿಯಾದ ಯೆರೆಮೀಯನನ್ನೂ ಹಿಡಿಯಬೇಕೆಂದು ಅಪ್ಪಣೆಕೊಟ್ಟನು; ಆದರೆ ಯೆಹೋವನು ಅವರನ್ನು ಮರೆಯಲ್ಲಿಟ್ಟನು.
27 Et la parole de l'Éternel fut adressée à Jérémie, après que le roi eut brûlé le volume et les paroles que Baruch avait écrites sous la dictée de Jérémie, et Il dit:
೨೭ಯೆರೆಮೀಯನ ಬಾಯಿಂದ ಬಂದ ಹಾಗೆ ಬಾರೂಕನು ಬರೆದಿದ್ದ ಮಾತುಗಳ ಸುರುಳಿಯನ್ನು ಅರಸನು ಸುಟ್ಟುಬಿಟ್ಟ ಮೇಲೆ ಯೆಹೋವನು ಯೆರೆಮೀಯನಿಗೆ,
28 Prends encore un autre volume, et y écris toutes les premières paroles qui étaient dans le premier volume qu'a brûlé Jéhojakim, roi de Juda.
೨೮“ನೀನು ಇನ್ನೊಂದು ಸುರುಳಿಯನ್ನು ತೆಗೆದುಕೊಂಡು ಯೆಹೂದದ ಅರಸನಾದ ಯೆಹೋಯಾಕೀಮನು ಸುಟ್ಟ ಮೊದಲನೆಯ ಸುರುಳಿಯಲ್ಲಿದ್ದ ಹಿಂದಿನ ಆ ಮಾತುಗಳನ್ನೆಲ್ಲಾ ಪುನಃ ಬರೆಯಿಸು.
29 Et quant à Jéhojakim, roi de Juda, tu lui diras: Ainsi parle l'Éternel: Tu as brûlé ce volume en disant: Pourquoi y as-tu écrit ces paroles: Le roi de Babel viendra détruire ce pays et en exterminer les hommes et les bestiaux?
೨೯ಅಲ್ಲದೆ ಯೆಹೂದದ ಅರಸನಾದ ಯೆಹೋಯಾಕೀಮನ ವಿಷಯದಲ್ಲಿ ಹೀಗೆ ಬರೆಯಿಸು, ‘ಯೆಹೋವನು ಇಂತೆನ್ನುತ್ತಾನೆ, ಬಾಬೆಲಿನ ಅರಸನು ಬಂದು ಈ ದೇಶವನ್ನು ಜನ, ಪಶುಗಳಿಲ್ಲದಂತೆ ಹಾಳುಮಾಡುವುದು ಖಂಡಿತ ಎಂದು ಸುರುಳಿಯನ್ನು ಬರೆಯಿಸಿದ್ದೇಕೆ ಎಂಬುದಾಗಿ ನೀನು ಆಕ್ಷೇಪಿಸಿ ಅದನ್ನು ಸುಟ್ಟುಬಿಟ್ಟಿಯಲ್ಲ.
30 C'est pourquoi, ainsi prononce l'Éternel sur Jéhojakim, roi de Juda: Il n'aura point de fils assis sur le trône de David, et son cadavre sera jeté pour être exposé à l'ardeur du jour et au froid de la nuit;
೩೦ಆದಕಾರಣ ಯೆಹೂದದ ಅರಸನಾದ ಯೆಹೋಯಾಕೀಮನ ವಿಷಯದಲ್ಲಿ ಯೆಹೋವನು ಇಂತೆನ್ನುತ್ತಾನೆ, ಇವನ ಸಂತಾನದಲ್ಲಿ ಯಾರೂ ದಾವೀದನ ಸಿಂಹಾಸನಾರೂಢನಾಗನು; ಇವನ ಹೆಣವು ಬಿಸಾಡಲ್ಪಟ್ಟು ಹಗಲಿನ ತಾಪಕ್ಕೂ, ರಾತ್ರಿಯ ಚಳಿಗೂ ಈಡಾಗುವುದು.
31 et je punirai sur lui, et sur sa race, et sur ses serviteurs leur crime, et je ferai venir sur eux, et sur les habitants de Jérusalem, et sur les hommes de Juda, tous les maux dont je les ai menacés, sans qu'ils aient écouté. –
೩೧ಇವನೂ, ಇವನ ಸಂತತಿಯವರೂ ಮತ್ತು ಸೇವಕರೂ ನಡೆಸಿದ ಅಧರ್ಮಕ್ಕಾಗಿ ಇವರನ್ನು ದಂಡಿಸುವೆನು. ನಾನು ಇವರನ್ನೂ, ಯೆರೂಸಲೇಮಿನವರನ್ನೂ ಮತ್ತು ಯೆಹೂದ್ಯರನ್ನೂ ನಿಮಗೆ ಬಹು ಕೇಡಾಗುವುದೆಂದು ಎಚ್ಚರಿಸಿದರೂ ಇವರುಗಳು ಕೇಳಲಿಲ್ಲವಾದುದರಿಂದ ಆ ಕೇಡನ್ನೆಲ್ಲಾ ಇವರೆಲ್ಲರ ಮೇಲೆ ಬರಮಾಡುವೆನು’” ಎಂದು ಹೇಳಿದನು.
32 Et Jérémie prit un autre volume et le donna à Baruch, fils de Nérija, le scribe, lequel y écrivit sous la dictée de Jérémie toutes les paroles du livre qu'avait brûlé au feu Jéhojakim, roi de Juda; et il fut ajouté beaucoup d'autres paroles semblables à celles-là.
೩೨ಆಗ ಯೆರೆಮೀಯನು ಇನ್ನೊಂದು ಸುರುಳಿಯನ್ನು ತೆಗೆದುಕೊಂಡು ನೇರೀಯನ ಮಗನಾಗಿರುವ ಲೇಖಕನಾದ ಬಾರೂಕನಿಗೆ ಕೊಡಲು ಅವನು ಅದರಲ್ಲಿ ಯೆಹೂದದ ಅರಸನಾದ ಯೆಹೋಯಾಕೀಮನು ಬೆಂಕಿಯಲ್ಲಿ ಸುಟ್ಟ ಗ್ರಂಥದ ಎಲ್ಲಾ ಮಾತುಗಳನ್ನಲ್ಲದೆ ಇನ್ನು ಇಂತಹ ಅನೇಕ ಮಾತುಗಳನ್ನು ಯೆರೆಮೀಯನ ಬಾಯಿಂದ ಬಂದ ಹಾಗೆ ಬರೆದನು.