< Genèse 14 >
1 Et il arriva dans le temps de Amraphel, roi de Sinear, de Arioch, roi d'Elassar, de Kedorlahomer, roi d'Elam, et de Thideal, roi des Gentils,
೧ಆ ದಿನಗಳಲ್ಲಿ ಶಿನಾರಿನ ಅರಸನಾದ ಅಮ್ರಾಫೆಲನು, ಎಲ್ಲಜಾರಿನ ಅರಸನಾದ ಅರಿಯೋಕನು, ಏಲಾಮಿನ ಅರಸನಾದ ಕೆದೊರ್ಲಗೋಮರನು, ಗೋಯಿಮದ ಅರಸನಾದ ತಿದ್ಗಾಲನು ಈ ನಾಲ್ವರು ಈಗಿನ ಲವಣಸಮುದ್ರ ಎನ್ನಿಸಿಕೊಳ್ಳುವ ಸಿದ್ದೀಮ್,
2 qu'ils firent la guerre à Berah, roi de Sodome, et à Birsah, roi de Gomorrhe, à Sineab, roi d'Adamah, et à Seméber, roi de Tseboïm, et au roi de Béla, c'est-à-dire de Tsohar.
೨ತಗ್ಗು ಪ್ರದೇಶದಲ್ಲಿ ಒಟ್ಟಾಗಿ ಕೂಡಿದ್ದ ಸೊದೋಮಿನ ಅರಸನಾದ ಬೆರಗನು, ಗೊಮೋರದ ಅರಸನಾದ ಬಿರ್ಶಗನು, ಅದ್ಮಾಹದ ಅರಸನಾದ ಶಿನಾಬನು, ಚೆಬೋಯಿಮನ ಅರಸನಾದ ಶೆಮೇಬರನ, ಬೇಲಗ (ಅಂದರೆ ಚೋಗರದ) ಎಂಬ ಐದು ಅರಸರ ವಿರುದ್ಧವಾಗಿ ಯುದ್ಧ ಮಾಡಿದರು.
3 Tous ils se réunirent dans la vallée de Siddim (qui est la mer Salée).
೩ಈ ಐದು ಅರಸರು ಈಗಿನ ಲವಣಸಮುದ್ರ ಎನ್ನಿಸಿಕೊಳ್ಳುವ ಸಿದ್ದೀಮ್, ತಗ್ಗಿನ ಪ್ರದೇಶದಲ್ಲಿ ಒಟ್ಟಾಗಿ ಕೂಡಿದ್ದರು.
4 Douze ans ils avaient été asservis à Kedorlahomer, et la treizième année ils se révoltèrent.
೪ಬೆರಗ ಮೊದಲಾದ ಈ ಐದು ಅರಸರು ಹನ್ನೆರಡು ವರ್ಷ ಕೆದೊರ್ಲಗೋಮರನಿಗೆ ಅಧೀನರಾಗಿದ್ದು ಹದಿಮೂರನೆಯ ವರ್ಷದಲ್ಲಿ ತಿರುಗಿ ಬಿದ್ದರು.
5 Et la quatorzième année Kedorlahomer et les rois ses alliés vinrent et défirent les Rephaïms à Astaroth-Karnaïm et les Zuzites à Ham et les Emim à Save-Kiriathaïm
೫ಹದಿನಾಲ್ಕನೆಯ ವರ್ಷದಲ್ಲಿ ಕೆದೊರ್ಲಗೋಮರನೂ ಅವನಿಗೆ ಸೇರಿದ್ದ ರಾಜರೂ ಬಂದು ಅಷ್ಟರೋತ್ ಕರ್ನಯಿಮಿನಲ್ಲಿ ರೆಫಾಯರನ್ನೂ ಹಾಮಿನಲ್ಲಿ ಜೂಜ್ಯರನ್ನೂ ಶಾವೆಕಿರ್ಯಾತಯಿಮಿನಲ್ಲಿ ಏಮಿಯರನ್ನೂ ಸೋಲಿಸಿದರು.
6 et les Horites sur leur montagne de Seïr jusqu'au chêne de Paran qui confine au désert.
೬ಇದಲ್ಲದೆ ಸೇಯೀರೆಂಬ ಬೆಟ್ಟದ ಸೀಮೆಯಲ್ಲಿ ವಾಸವಾಗಿದ್ದ ಹೋರಿಯರನ್ನು, ಅಲ್ಲೇ ಸೋಲಿಸಿ ಮರಳುಗಾಡಿನ ಹತ್ತಿರವಿರುವ ಎಲ್ಪಾರಾನಿನ ವರೆಗೂ ಹಿಂದಟ್ಟಿದನು.
7 Puis faisant volte-face ils se portèrent sur la Fontaine-du-Jugement qui est Kadès et mirent en déroute toute la contrée des Amalécites, et aussi les Amoréens établis à Hatsatson-Thamar.
೭ಆ ಮೇಲೆ ಅವರು ಹಿಂದಿರುಗಿಕೊಂಡು ಕಾದೇಶ್ ಎನ್ನುವ ಎನ್ಮಿಷ್ಟಾಟಿಗೆ ಬಂದು ಅಮಾಲೇಕ್ಯರ ಸಮಸ್ತ ನಾಡನ್ನೂ ಹಚಚೋನ್ ತಾಮರಿನಲ್ಲಿ ವಾಸವಾಗಿದ್ದ ಅಮೋರಿಯರನ್ನೂ ಗೆದ್ದರು.
8 Alors se mirent en campagne le roi de Sodome et le roi de Gomorrhe et le roi d'Adamah et le roi de Tseboïm et le roi de Béla (c'est-à-dire de Tsohar) et ils se rangèrent en bataille contre eux dans la vallée de Siddim,
೮ಆಗ ಸೊದೋಮ್, ಗೊಮೋರ, ಅದ್ಮಾಹ, ಚೆಬೋಯಿಮ್ ಹಾಗೂ ಚೋಗರೆಂಬ ಬೇಲಗದ ರಾಜರು ಹೊರಟು ಅವರಿಗೆದುರಾಗಿ,
9 contre Kedorlahomer, roi d'Elam, et Thideal, roi des Gentils, et Amraphel, roi de Sinear, et Arioch, roi d'Elassar, quatre rois contre cinq.
೯ಅಂದರೆ ಏಲಾಮಿನ ರಾಜನಾದ ಕೆದೊರ್ಲಗೋಮರ್, ಗೋಯಿಮದ ರಾಜನಾದ ತಿದ್ಗಾಲ, ಶಿನಾರ್ ಅರಸನಾದ ಅಮ್ರಾಫೆಲ್, ಎಲ್ಲಸಾರಿನ ರಾಜನಾದ ಅರಿಯೋಕ ಇವರಿಗೆ ವಿರೋಧವಾಗಿ ಸಿದ್ದೀಮ್ ಎಂಬ ತಗ್ಗಿನಲ್ಲಿ ತಮ್ಮ ದಂಡನ್ನು ನಿಲ್ಲಿಸಿದರು. ಹೀಗೆ ನಾಲ್ಕು ಮಂದಿ ರಾಜರು ಐದು ಮಂದಿ ರಾಜರನ್ನು ಎದುರಿಸಿದರು.
10 Or dans la vallée de Siddim il y avait force puits de bitume; et le roi de Sodome et celui de Gomorrhe prirent la fuite et y tombèrent, et les survivants s'enfuirent dans la montagne.
೧೦ಆದರೆ ಸಿದ್ದೀಮ್ ತಗ್ಗು ಪ್ರದೇಶ ಕಲ್ಲರಗಿನ ಕೆಸರುಗುಣಿಗಳಿಂದ ತುಂಬಿತ್ತು. ಸೊದೋಮ್ ಗೊಮೋರಗಳ ರಾಜರ ಕಡೆಯವರು ಓಡಿಹೋಗುವಾಗ ಆ ಗುಣಿಗಳಲ್ಲಿ ಬಿದ್ದು ಸತ್ತರು; ಉಳಿದವರು ಬೆಟ್ಟಗಳಿಗೆ ಓಡಿಹೋದರು.
11 Alors ils prirent toute la richesse de Sodome et de Gomorrhe et toutes leurs provisions de bouche et partirent.
೧೧ಗೆದ್ದ ಆ ನಾಲ್ಕು ಅರಸರು ಸೊದೋಮ್ ಗೊಮೋರ ಪಟ್ಟಣಗಳನ್ನು ಸೂರೆಮಾಡಿ ಅವುಗಳಲ್ಲಿದ್ದ ಎಲ್ಲಾ ಸಂಪತ್ತನ್ನೂ ದವಸವನ್ನೂ ತೆಗೆದುಕೊಂಡು ಹೋದರು.
12 Et ils prirent Lot et sa richesse, le fils du frère d'Abram, et partirent; or il habitait Sodome.
೧೨ಸೊದೋಮಿನಲ್ಲಿ ವಾಸವಾಗಿದ್ದ ಅಬ್ರಾಮನ ತಮ್ಮನ ಮಗನಾದ ಲೋಟನನ್ನೂ ಅವನ ಆಸ್ತಿ ಸಹಿತ ಹಿಡಿದುಕೊಂಡು ಹೋದರು.
13 Alors arriva un fugitif qui informa Abram l'hébreu; or il habitait sous les chênes de Mamré, l'Amoréen, frère d'Eskol et de Aner, qui étaient les alliés d'Abram.
೧೩ತಪ್ಪಿಸಿಕೊಂಡವನೊಬ್ಬನು, ಇಬ್ರಿಯನಾದ ಅಬ್ರಾಮನ ಬಳಿಗೆ ಬಂದು ಈ ಸಂಗತಿಯನ್ನು ತಿಳಿಸಿದನು. ಅಬ್ರಾಮನು ಅಮೋರಿಯನಾದ ಮಮ್ರೆಯನ ಮೋರೆ ತೋಪಿನ ಬಳಿಯಲ್ಲಿ ವಾಸವಾಗಿದ್ದನು. ಮಮ್ರೆಯನಿಗೆ ಎಷ್ಕೋಲ ಮತ್ತು ಆನೇರ ಎಂಬ ಸಹೋದರರಿದ್ದರು; ಇವರಿಬ್ಬರಿಗೂ ಅಬ್ರಾಮನಿಗೂ ಒಡಂಬಡಿಕೆಯಿತ್ತು.
14 Et Abram apprenant que son frère avait été emmené captif, mit en campagne ses gens éprouvés, serfs nés dans sa maison, au nombre de trois cent-dix-huit, et il poussa la poursuite jusqu'à Dan.
೧೪ಅಬ್ರಾಮನು ತನ್ನ ತಮ್ಮನ ಮಗನು ಸೆರೆಗೆ ಸಿಕ್ಕಿದ್ದನ್ನು ಕೇಳಿ ತನ್ನ ಮನೆಯಲ್ಲೇ ಹುಟ್ಟಿ ಬೆಳೆದ ಶಿಕ್ಷಿತರಾದ ಮುನ್ನೂರ ಹದಿನೆಂಟು ಮಂದಿ ಆಳುಗಳನ್ನು ಯುದ್ಧಕ್ಕೆ ಸಿದ್ಧಮಾಡಿಕೊಂಡು ಹೊರಟು ಆ ರಾಜರನ್ನು ದಾನೂರಿನವರೆಗೂ ಹಿಂದಟ್ಟಿದನು.
15 Et ayant formé ses divisions, il les attaqua de nuit, lui et ses serviteurs, et les défit et les poursuivit jusqu'à Chobah, située à gauche de Damas.
೧೫ಅವನು ರಾತ್ರಿ ವೇಳೆಯಲ್ಲಿ ತನ್ನ ದಂಡನ್ನು ಎರಡು ಭಾಗಮಾಡಿ ತನ್ನ ಭಟರೊಡನೆ ಅವರ ಮೇಲೆ ಬಿದ್ದು, ಹೊಡೆದು, ದಮಸ್ಕ ಪಟ್ಟಣದ ಉತ್ತರಕಡೆಯಲ್ಲಿರುವ ಹೋಬಾ ಊರಿನ ತನಕ ಅವರನ್ನು ಹಿಂದಟ್ಟಿದ್ದನು.
16 Et il ramena toute la richesse, et aussi Lot, son frère, et sa richesse, et aussi les femmes et le peuple.
೧೬ರಾಜರು ಅಪಹರಿಸಿದ್ದ ಎಲ್ಲಾ ವಸ್ತುಗಳನ್ನು ಅವನು ತಿರುಗಿ ಪಡೆದುಕೊಂಡನು. ತನ್ನ ತಮ್ಮನ ಮಗನಾದ ಲೋಟನನ್ನೂ ಅವನ ಆಸ್ತಿಯನ್ನೂ ಬಿಡಿಸಿಕೊಂಡದ್ದಲ್ಲದೆ, ಸೆರೆಯಲ್ಲಿದ್ದ ಸ್ತ್ರೀಯರನ್ನೂ, ಉಳಿದಿದ್ದ ಜನರನ್ನು ಕರೆದುಕೊಂಡು ಬಂದನು.
17 Alors le roi de Sodome sortit à sa rencontre, quand après avoir défait Kedorlahomer et les rois ses auxiliaires il fut de retour dans la vallée de Save, qui est la vallée royale.
೧೭ಅವನು ಕೆದೊರ್ಲಗೋಮರನ್ನೂ ಅವನೊಂದಿಗೆ ಇದ್ದ ರಾಜರನ್ನೂ ಸೋಲಿಸಿ ಬಂದ ಮೇಲೆ ಸೊದೋಮಿನ ಅರಸನು ಅವನನ್ನು ಅರಸನ ತಗ್ಗು ಎನ್ನಿಸಿಕೊಳ್ಳುವ ಶಾವೆ ತಗ್ಗಿನಲ್ಲಿ ಅಬ್ರಾಮನನ್ನು ಎದುರುಗೊಂಡನು.
18 Et Melchisédek, roi de Salem, apporta du pain et du vin; (or il était prêtre de Dieu le Très-Haut; )
೧೮ಸಾಲೇಮಿನ ಅರಸನಾದ ಮೆಲ್ಕೀಚೆದೆಕನು ಸಹ ಬಂದು ರೊಟ್ಟಿಯನ್ನೂ ದ್ರಾಕ್ಷಾರಸವನ್ನೂ ಕೊಟ್ಟನು. ಇವನು ಪರಾತ್ಪರನಾದ ದೇವರ ಯಾಜಕನಾಗಿದ್ದನು.
19 et il le bénit et dit: Qu'Abram soit béni de Dieu le Très-Haut, maître des cieux et de la terre!
೧೯ಇವನು ಅಬ್ರಾಮನನ್ನು ಆಶೀರ್ವದಿಸಿ, “ಭೂಮ್ಯಾಕಾಶವನ್ನು ನಿರ್ಮಾಣಮಾಡಿದ ಪರಾತ್ಪರನಾದ ದೇವರ ಆಶೀರ್ವಾದವು ಅಬ್ರಾಮನಿಗೆ ದೊರೆಯಲಿ;
20 Et béni soit Dieu le Très-Haut qui a mis tes ennemis entre tes mains! Et il lui donna la dîme de tout.
೨೦ಪರಾತ್ಪರನಾದ ದೇವರು ನಿನ್ನ ಶತ್ರುಗಳನ್ನು ನಿನ್ನ ಕೈಗೆ ಒಪ್ಪಿಸಿದ್ದಕ್ಕಾಗಿ ಆತನಿಗೆ ಸ್ತೋತ್ರ” ಎಂದು ಹೇಳಿದನು. ಅಬ್ರಾಮನು ತಾನು ಗೆದ್ದು ತಂದಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಯಾಜಕನಿಗೆ ಕೊಟ್ಟನು.
21 Et le roi de Sodome dit à Abram: Donne-moi les personnes et prends pour toi les richesses.
೨೧ಸೊದೋಮಿನ ಅರಸನು, ಅಬ್ರಾಮನಿಗೆ, “ನೀನು ಬಿಡಿಸಿ ತಂದ ಜನರನ್ನು ನನಗೆ ಒಪ್ಪಿಸು; ಆಸ್ತಿಯನ್ನು ನೀನೇ ತೆಗೆದುಕೋ” ಎಂದು ಹೇಳಿದನು.
22 Mais Abram répondit au roi de Sodome: La main levée vers l'Éternel, Dieu très-haut, Maître des cieux et de la terre!
೨೨ಅಬ್ರಾಮನು, ಸೊದೋಮಿನ ಅರಸನಿಗೆ,
23 non, du brin de fil à la courroie de la chaussure, je n'accepterai rien de ce qui t'appartient, afin que tu ne dises pas: J'ai enrichi Abram;
೨೩“ಒಂದು ದಾರವನ್ನಾಗಲಿ, ಕೆರದ ಬಾರನ್ನಾಗಲಿ ನಿನ್ನದರಲ್ಲಿ ಯಾವುದನ್ನೂ ನಾನು ತೆಗೆದುಕೊಳ್ಳುವುದಿಲ್ಲವೆಂದು ಭೂಮ್ಯಾಕಾಶಗಳನ್ನು ನಿರ್ಮಾಣಮಾಡಿದ ಪರಾತ್ಪರನಾದ ದೇವರಾಗಿರುವ ಯೆಹೋವನ ಕಡೆಗೆ ಕೈ ಎತ್ತಿ ಪ್ರಮಾಣಮಾಡುತ್ತೇನೆ. ‘ನನ್ನಿಂದ ಅಬ್ರಾಮನು ಐಶ್ವರ್ಯವಂತನಾದನೆಂದು ಹೇಳಿಕೊಳ್ಳುವುದಕ್ಕೆ ನಿನಗೆ ಆಸ್ಪದವಾಗಬಾರದು, ನನಗೆ ಏನೂ ಬೇಡ.’
24 j'excepte uniquement ce qu'ont mangé mes gens, la portion des hommes qui ont marché avec moi, d'Aner, d'Eskol et de Mamré: pour eux, qu'ils prennent leur part!
೨೪ಆಳುಗಳು ತಿಂದದ್ದು ಹೊರತು ನನ್ನ ಜೊತೆಯವರಾದ ಆನೇರ ಎಷ್ಕೋಲ ಮಮ್ರೆಯರಿಗೆ ಬರತಕ್ಕ ಪಾಲು ಮಾತ್ರ ಅವರಿಗೆ ಇರಲಿ” ಎಂದು ಹೇಳಿದನು.