< Lévitique 1 >

1 YAHWEH appela Moïse, et lui parla de la tente de réunion, en disant:
ಯೆಹೋವ ದೇವರು ಮೋಶೆಯನ್ನು ಕರೆದು, ದೇವದರ್ಶನದ ಗುಡಾರದೊಳಗಿಂದ ಅವನೊಂದಿಗೆ ಮಾತನಾಡಿ,
2 « Parle aux enfants d’Israël et dis-leur: Lorsque quelqu’un d’entre vous fera à Yahweh une offrande, ce sera du bétail que vous offrirez, du gros ou du menu bétail.
ನೀನು ಇಸ್ರಾಯೇಲರಿಗೆ ಆಜ್ಞಾಪಿಸಬೇಕಾದದ್ದೇನಂದರೆ: “‘ನಿಮ್ಮಲ್ಲಿ ಯಾರಾದರೂ ಯೆಹೋವ ದೇವರಿಗೆ ಒಂದು ಪ್ರಾಣಿಯನ್ನು ಕಾಣಿಕೆಯಾಗಿ ಸಮರ್ಪಿಸಲು ಆಶಿಸಿದರೆ, ಅದನ್ನು ದನಕರುಗಳಿಂದಾಗಲಿ, ಆಡು ಕುರಿಗಳಿಂದಾಗಲಿ ಆಯ್ದುಕೊಂಡು ಸಮರ್ಪಿಸಲಿ.
3 Si son offrande est un holocauste de gros bétail, il offrira un mâle sans défaut; il l’offrira à l’entrée de la tente de réunion, pour être agréé devant Yahweh.
“‘ಅಂಥವನು ದನಕರುಗಳನ್ನು ದಹನಬಲಿಯನ್ನಾಗಿ ಸಮರ್ಪಿಸುವುದಾದರೆ, ಆ ಪ್ರಾಣಿ ಕಳಂಕರಹಿತವಾದ ಗಂಡಾಗಿರಬೇಕು. ಯೆಹೋವ ದೇವರಿಗೆ ಒಪ್ಪಿಗೆಯಾಗುವಂತೆ ಅದನ್ನು ದೇವದರ್ಶನದ ಗುಡಾರದ ಬಳಿಗೆ ತರಬೇಕು.
4 Il posera sa main sur la tête de l’holocauste, et il sera accepté en sa faveur pour faire expiation pour lui.
ದಹನಬಲಿ ಅರ್ಪಿಸುವವನು ತನ್ನ ಕೈಯನ್ನು ಆ ಪ್ರಾಣಿಯ ತಲೆಯ ಮೇಲೆ ಇಡಬೇಕು. ಹೀಗೆ ಅದು ಅವನಿಗೋಸ್ಕರ ಅವನ ಪ್ರಾಯಶ್ಚಿತ್ತಕ್ಕಾಗಿ ಅಂಗೀಕಾರವಾಗುವುದು.
5 Il égorgera le jeune taureau devant Yahweh, et les prêtres, fils d’Aaron, offriront le sang et le répandront tout autour sur l’autel qui est à l’entrée de la tente de réunion.
ಅವನು ಆ ಹೋರಿಯನ್ನು ಯೆಹೋವ ದೇವರ ಮುಂದೆ ವಧಿಸಬೇಕು. ಆಗ ಯಾಜಕರಾದ ಆರೋನನ ಪುತ್ರರು ರಕ್ತವನ್ನು ತಂದು, ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿರುವ ಬಲಿಪೀಠದ ಸುತ್ತಲೂ ಚಿಮುಕಿಸಬೇಕು.
6 On dépouillera l’holocauste et on le découpera en ses morceaux.
ಅವನು ಆ ದಹನಬಲಿಯ ಚರ್ಮವನ್ನು ಸುಲಿದು, ಅದರ ದೇಹವನ್ನು ಕಡಿದು, ತುಂಡುತುಂಡಾಗಿ ಮಾಡಬೇಕು.
7 Les fils du prêtre Aaron mettront du feu sur l’autel et disposeront du bois sur le feu;
ಯಾಜಕನಾದ ಆರೋನನ ಪುತ್ರರು ಬಲಿಪೀಠದ ಮೇಲೆ ಕ್ರಮವಾಗಿ ಕಟ್ಟಿಗೆಯನ್ನು ಇಡಬೇಕು.
8 puis les prêtres, fils d’Aaron, arrangeront les morceaux, avec la tête et la fressure, sur le bois placé sur le feu de l’autel.
ಆಗ ಯಾಜಕರಾದ ಆರೋನನ ಪುತ್ರರು ಅದರ ಭಾಗಗಳನ್ನು ಅಂದರೆ, ತಲೆಯನ್ನೂ ಮತ್ತು ಕೊಬ್ಬನ್ನೂ ಬಲಿಪೀಠದ ಮೇಲೆ ಬೆಂಕಿಯ ಮೇಲಿರುವ ಕಟ್ಟಿಗೆಯ ಮೇಲೆ ಕ್ರಮವಾಗಿ ಇಡಬೇಕು.
9 On lavera avec de l’eau les entrailles et les jambes, et le prêtre fera fumer le tout sur l’autel. C’est un holocauste, un sacrifice par le feu, d’une agréable odeur à Yahweh.
ಅದರ ಕರುಳುಗಳನ್ನೂ, ಕಾಲುಗಳನ್ನೂ ಅವರು ನೀರಿನಲ್ಲಿ ತೊಳೆಯಬೇಕು. ಯಾಜಕನು ಎಲ್ಲವನ್ನೂ ಬಲಿಪೀಠದ ಮೇಲೆ ಬೆಂಕಿಯಿಂದ ಸಮರ್ಪಿಸುವ ದಹನಬಲಿಯಂತೆಯೂ, ಯೆಹೋವ ದೇವರಿಗೆ ಸುವಾಸನೆಯಾಗುವಂತೆಯೂ ಸುಡಬೇಕು.
10 Si son offrande est de menu bétail, un holocauste d’agneaux ou de chèvres, il offrira un mâle sans défaut.
“‘ದಹನಬಲಿಗೋಸ್ಕರ ತನ್ನ ಕಾಣಿಕೆಯು ಮಂದೆಯಿಂದ ತರುವುದಾದರೆ ಅವನು ಕುರಿಗಳಲ್ಲಾಗಲಿ, ಮೇಕೆಗಳಲ್ಲಾಗಲಿ, ಕಳಂಕರಹಿತ ಒಂದು ಗಂಡನ್ನು ತರಬೇಕು.
11 Il l’égorgera au côté septentrional de l’autel, devant Yahweh; et les prêtres, fils d’Aaron, en répandront le sang tout autour sur l’autel.
ಅವನು ಅದನ್ನು ಬಲಿಪೀಠದ ಉತ್ತರದ ಕಡೆಯಲ್ಲಿ ಯೆಹೋವ ದೇವರ ಮುಂದೆ ವಧಿಸಬೇಕು. ಇದಲ್ಲದೆ ಯಾಜಕರಾದ ಆರೋನನ ಪುತ್ರರು ಅದರ ರಕ್ತವನ್ನು ಬಲಿಪೀಠದ ಸುತ್ತಲೂ ಚಿಮುಕಿಸಬೇಕು.
12 On le découpera en ses morceaux, avec sa tête et sa fressure; puis le prêtre les arrangera sur le bois placé sur le feu de l’autel.
ಅರ್ಪಿಸುವವನು ಆ ಪ್ರಾಣಿಯ ದೇಹವನ್ನು ತುಂಡುತುಂಡಾಗಿ ಕಡಿದ ಮೇಲೆ, ಯಾಜಕನು ಆ ತುಂಡುಗಳನ್ನೂ, ತಲೆಯನ್ನೂ, ಕೊಬ್ಬನ್ನೂ ಬಲಿಪೀಠದ ಮೇಲಿನ ಬೆಂಕಿಯಲ್ಲಿ ಕಟ್ಟಿಗೆಯ ಮೇಲೆ ಕ್ರಮವಾಗಿ ಇಡಬೇಕು.
13 Il lavera dans l’eau les entrailles et les jambes, et le prêtre offrira le tout et le fera fumer sur l’autel. C’est un holocauste, un sacrifice par le feu, d’une agréable odeur à Yahweh.
ಕರುಳುಗಳನ್ನೂ ಕಾಲುಗಳನ್ನೂ ನೀರಿನಿಂದ ತೊಳೆಯಬೇಕು. ಆಗ ಯಾಜಕನು ಅವೆಲ್ಲವುಗಳನ್ನೂ ತಂದು ಬಲಿಪೀಠದ ಮೇಲೆ ಸುಡಬೇಕು. ಬೆಂಕಿಯಿಂದ ಸಮರ್ಪಿಸುವ ದಹನಬಲಿ ಯೆಹೋವ ದೇವರಿಗೆ ಸುವಾಸನೆಯಾಗುವಂತೆಯೂ ಸುಡಬೇಕು.
14 Si son offrande à Yahweh est un holocauste d’oiseaux, il offrira des tourterelles ou de jeunes pigeons.
“‘ಯೆಹೋವ ದೇವರಿಗೆ ದಹನಬಲಿಯಾಗಿ ಸಮರ್ಪಿಸುವಂಥದ್ದು ಪಕ್ಷಿಗಳಾಗಿದ್ದರೆ, ಅವನು ತನ್ನ ಯಜ್ಞಕ್ಕಾಗಿ ಬೆಳವಕ್ಕಿಯನ್ನಾಗಲಿ ಇಲ್ಲವೆ ಪಾರಿವಾಳದ ಮರಿಯನ್ನಾಗಲಿ ತರಬೇಕು.
15 Le prêtre apportera l’oiseau à l’autel; il lui brisera la tête avec l’ongle et la fera fumer sur l’autel, et son sang sera exprimé contre la paroi de l’autel.
ಆಗ ಯಾಜಕನು ಅದನ್ನೂ ಬಲಿಪೀಠದ ಬಳಿಗೆ ತಂದು ಅದರ ತಲೆಯನ್ನು ಮುರಿದು, ಬಲಿಪೀಠದ ಮೇಲೆ ಸುಡಬೇಕು. ಅದರ ರಕ್ತವನ್ನು ಬಲಿಪೀಠದ ಹೊರಬದಿಯಲ್ಲಿ ಹಿಂಡಬೇಕು.
16 Il ôtera le jabot avec ses impuretés et le jettera près de l’autel, vers l’Orient, au lieu où l’on met les cendres.
ಇದಲ್ಲದೆ ಅವನು ಅದರ ರೆಕ್ಕೆ ಪುಕ್ಕಗಳೊಂದಿಗೆ ಕರುಳುಗಳನ್ನೂ ಕಿತ್ತು, ಬಲಿಪೀಠದ ಬಳಿ ಪೂರ್ವ ಭಾಗದಲ್ಲಿ ಬೂದಿಯಿರುವ ಸ್ಥಳದಲ್ಲಿ ಬಿಸಾಡಬೇಕು.
17 Puis il fendra l’oiseau aux ailes, sans les séparer, et le prêtre le fera fumer sur l’autel, sur le bois placé sur le feu. C’est un holocauste, un sacrifice par le feu, d’une agréable odeur à Yahweh.
ಅವನು ಅದನ್ನು ರೆಕ್ಕೆಗಳೊಂದಿಗೆ ಹರಿಯಬೇಕು. ಆದರೆ ಬೇರೆಬೇರೆಯಾಗಿ ವಿಭಾಗಿಸಬಾರದು. ಆಗ ಯಾಜಕನು ಅದನ್ನು ಬಲಿಪೀಠದ ಬೆಂಕಿಯ ಮೇಲಿರುವ ಕಟ್ಟಿಗೆಯ ಮೇಲೆ ಸಮರ್ಪಿಸುವ ದಹನಬಲಿ ಯೆಹೋವ ದೇವರಿಗೆ ಸುವಾಸನೆಯಾಗುವಂತೆ ಸುಡಬೇಕು.

< Lévitique 1 >