< Nehemian 12 >

1 Nämä olivat ne papit ja leeviläiset, jotka lähtivät Serubbaabelin, Sealtielin pojan, ja Jeesuan kanssa: Seraja, Jeremia, Esra,
ಶೆಯಲ್ತಿಯೇಲನ ಮಗನಾದ ಜೆರುಬ್ಬಾಬೆಲ್ ಮತ್ತು ಯೇಷೂವ ಇವರೊಡನೆ ಯೆಹೂದ ದೇಶಕ್ಕೆ ಬಂದ ಯಾಜಕರು ಮತ್ತು ಲೇವಿಯರು ಯಾರಾರೆಂದರೆ: ಸೆರಾಯ, ಯೆರೆಮೀಯ, ಎಜ್ರ,
2 Amarja, Malluk, Hattus,
ಅಮರ್ಯ, ಮಲ್ಲೂಕ್, ಹಟ್ಟೂಷ್,
3 Sekanja, Rehum, Meremot,
ಶೆಕನ್ಯ, ರೆಹುಮ್, ಮೆರೇಮೋತ್,
4 Iddo, Ginnetoi, Abia,
ಇದ್ದೋ, ಗಿನ್ನೆತೋನ್, ಅಬೀಯ,
5 Miijamin, Maadja, Bilga,
ಮಿಯ್ಯಾಮೀನ್, ಮಾದ್ಯ, ಬಿಲ್ಗ,
6 Semaja, Joojarib, Jedaja,
ಶೆಮಾಯ, ಯೋಯಾರೀಬ್, ಯೆದಾಯ,
7 Sallu, Aamok, Hilkia ja Jedaja. Nämä olivat pappien ja veljiensä päämiehet Jeesuan aikana.
ಸಲ್ಲೂ, ಆಮೋಕ್, ಹಿಲ್ಕೀಯ, ಯೆದಾಯ ಇವರು ಯೇಷೂವನ ಕಾಲದಲ್ಲಿ ಯಾಜಕರ ಮತ್ತು ಅವರ ಬಂಧುಗಳ ಪ್ರಧಾನರು.
8 Ja leeviläiset olivat: Jeesua, Binnui, Kadmiel, Seerebja, Juuda ja Mattanja, joka yhdessä veljiensä kanssa johti kiitosveisua;
ಲೇವಿಯರಲ್ಲಿ: ಯೇಷೂವ, ಬಿನ್ನೂಯ್, ಕದ್ಮೀಯೇಲ್, ಶೇರೇಬ್ಯ, ಯೆಹೂದ ಮತ್ತು ಮತ್ತನ್ಯ ಇವರು. ಮತ್ತನ್ಯನೂ ಅವನ ಸಹೋದರರೂ ಕೃತಜ್ಞತಾಸ್ತುತಿಯ ನಾಯಕರಾಗಿದ್ದರು.
9 ja heidän veljensä Bakbukja ja Unni seisoivat vastapäätä heitä tehtäviään suorittamassa.
ಇವರ ಸಹೋದರರಾದ ಬಕ್ಬುಕ್ಯ, ಉನ್ನೀ ಎಂಬುವವರು ಭಜನಸೇವೆಯಲ್ಲಿ ಇವರೆದುರಾಗಿ ನಿಂತುಕೊಳ್ಳುತ್ತಿದ್ದರು.
10 Jeesualle syntyi Joojakim, Joojakimille syntyi Eljasib, Eljasibille syntyi Joojada,
೧೦ಯೇಷೂವನು, ಯೋಯಾಕೀಮನನ್ನೂ, ಯೋಯಾಕೀಮನ ಎಲ್ಯಾಷೀಬನನ್ನೂ, ಎಲ್ಯಾಷೀಬನು ಯೋಯಾದನನ್ನೂ,
11 Joojadalle syntyi Joonatan ja Joonatanille syntyi Jaddua.
೧೧ಯೋಯಾದನು ಯೋನಾತಾನನನ್ನೂ, ಯೋನಾತಾನನು ಯದ್ದೂವನನ್ನೂ ಪಡೆದರು.
12 Joojakimin aikana olivat seuraavat papit perhekunta-päämiehinä: Serajalla Meraja, Jeremialla Hananja,
೧೨ಯೋಯಾಕೀಮನ ಕಾಲದಲ್ಲಿ ಯಾಜಕರಾಗಿದ್ದ ಗೋತ್ರಪ್ರಧಾನರು: ಸೆರಾಯನ ಗೋತ್ರದ ಮೆರಾಯ, ಯೆರೆಮೀಯನ ಗೋತ್ರದ ಹನನ್ಯ,
13 Esralla Mesullam, Amarjalla Joohanan,
೧೩ಎಜ್ರನ ಗೋತ್ರದ ಮೆಷುಲ್ಲಾಮ್, ಅಮರ್ಯನ ಗೋತ್ರದ ಯೆಹೋಹಾನಾನ್,
14 Mallukilla Joonatan, Sebanjalla Joosef,
೧೪ಮಲ್ಲೂಕಿಯ ಗೋತ್ರದ ಯೋನಾತಾನ್, ಶೆಬನ್ಯನ ಗೋತ್ರದ ಯೋಸೇಫ್,
15 Haarimilla Adna, Merajotilla Helkai,
೧೫ಹಾರಿಮನ ಗೋತ್ರದ ಅದ್ನ, ಮೆರಾಯೋತನ್ ಗೋತ್ರದ ಹೆಲ್ಕೈ,
16 Iddolla Sakarja, Ginnetonilla Mesullam,
೧೬ಇದ್ದೋವಿನ ಗೋತ್ರದ ಜೆಕರ್ಯ, ಗಿನ್ನೆತೋನನ ಗೋತ್ರದ ಮೆಷುಲ್ಲಾಮ್,
17 Abialla Sikri, Minjaminilla, Mooadjalla Piltai,
೧೭ಅಬೀಯನ ಗೋತ್ರದ ಜಿಕ್ರೀ, ಮಿನ್ಯಾಮೀನನ ಮತ್ತು ಮೋವದ್ಯನ ಗೋತ್ರದ ಪಿಲ್ಟೈ,
18 Bilgalla Sammua, Semajalla Joonatan,
೧೮ಬಿಲ್ಗಾ ಗೋತ್ರದ ಶೆಮ್ಮೂವ, ಶೆಮಾಯನ ಗೋತ್ರದ ಯೆಹೋನಾತಾನ್,
19 Joojaribilla Mattenai, Jedajalla Ussi,
೧೯ಯೋಯಾರೀಬನ ಗೋತ್ರದ ಮತ್ತೆನೈ, ಯೆದಾಯನ ಗೋತ್ರದ ಉಜ್ಜೀ,
20 Sallailla Kallai, Aamokilla Eeber,
೨೦ಸಲ್ಲೈ ಗೋತ್ರದ ಕಲ್ಲೈ, ಆಮೋಕನ ಗೋತ್ರದ ಏಬೆರ್,
21 Hilkialla Hasabja ja Jedajalla Netanel.
೨೧ಹಿಲ್ಕೀಯನ ಗೋತ್ರದ ಹಷಬ್ಯ, ಯೆದಾಯನ ಗೋತ್ರದ ನೆತನೇಲ್ ಇವರು.
22 Leeviläisistä merkittiin Eljasibin, Joojadan, Joohananin ja Jadduan aikana perhekunta-päämiehet muistiin; ja samoin papit persialaisen Daarejaveksen hallitusaikana.
೨೨ಎಲ್ಯಾಷೀಬ್, ಯೋಯಾದ, ಯೋಹಾನಾನ್, ಯದ್ದೂವ ಇವರ ಕಾಲಗಳಲ್ಲಿದ್ದ ಲೇವಿಯರ ಗೋತ್ರ ಪ್ರಧಾನರ ಪಟ್ಟಿಯೂ ಪಾರಸಿಯನಾದ ದಾರ್ಯಾವೆಷ ರಾಜನ ಆಳ್ವಿಕೆಯವರೆಗಿದ್ದ ಯಾಜಕರ ಪಟ್ಟಿಯೂ ಇದ್ದವು.
23 Leevin jälkeläisistä ovat perhekunta-päämiehet merkittyinä aikakirjaan Joohananin, Eljasibin pojan, aikaan asti.
೨೩ಎಲ್ಯಾಷೀಬನ ಮೊಮ್ಮಗನಾದ ಯೋಹಾನಾನನ ಕಾಲದ ವರೆಗಿದ್ದ ಲೇವಿಯ ಗೋತ್ರಪ್ರಧಾನರ ಪಟ್ಟಿಯು ಪೂರ್ವಕಾಲ ವೃತ್ತಾಂತವೆಂಬ ಗ್ರಂಥದಲ್ಲಿ ಬರೆದಿರುತ್ತದೆ.
24 Ja leeviläisten päämiehet olivat Hasabja, Seerebja ja Jeesua, Kadmielin poika, sekä heidän veljensä, jotka seisoivat heitä vastapäätä ylistämässä ja kiittämässä, niinkuin Jumalan mies Daavid oli käskenyt, osasto osaston vieressä;
೨೪ಈ ಲೇವಿಯರ ಗೋತ್ರಪ್ರಧಾನರಲ್ಲಿ ಯೇಷೂವನ ಮಗನೂ ಯೋಚಾದಾಕನ ಮೊಮ್ಮಗನೂ ಅದ ಯೋಯಾಕೀಮ್, ದೇಶಾಧಿಪತಿಯಾದ ನೆಹೆಮೀಯ, ಯಾಜಕನೂ ಧರ್ಮೋಪದೇಶಕನಾದ ಎಜ್ರ ಇವರ ಕಾಲದಲ್ಲಿದ್ದವರು:
25 ja Mattanja, Bakbukja, Obadja, Mesullam, Talmon ja Akkub, ovenvartijat, jotka vartioivat porttien varastohuoneita.
೨೫ಹಷಬ್ಯ, ಶೇರೇಬ್ಯ, ಯೇಷೂವ, ಬಿನ್ನೂಯ್, ಕದ್ಮೀಯೇಲ್ ಇವರು. ದೇವರ ಮನುಷ್ಯನಾದ ದಾವೀದನ ಅಪ್ಪಣೆಯ ಮೇರೆಗೆ ಇವರೂ ಇವರ ಸಹೋದರರೂ ಸರದಿಗೆ ಎರಡೆರಡು ವರ್ಗಗಳಾಗಿ ಪರಸ್ಪರ ಹಾಡುತ್ತಾ, ಕೀರ್ತನೆಯನ್ನೂ ಕೃತಜ್ಞತಾಸ್ತುತಿಯನ್ನೂ ಮಾಡುತ್ತಿದ್ದರು.
26 Nämä olivat Joojakimin, Jeesuan pojan, Joosadakin pojanpojan, aikalaisia ja käskynhaltija Nehemian ja pappi Esran, kirjanoppineen, aikalaisia.
೨೬ಇವರಲ್ಲದೆ ಬಾಗಿಲುಗಳ ಬಳಿಯಲ್ಲಿದ್ದ ಉಗ್ರಾಣಗಳನ್ನು ಕಾಯತ್ತಿದ್ದ ದ್ವಾರಪಾಲಕರು: ಮತ್ತನ್ಯ, ಬಕ್ಬುಕ್ಯ, ಓಬದ್ಯ, ಮೆಷುಲ್ಲಾಮ್, ಟಲ್ಮೋನ್, ಅಕ್ಕೂಬ್ ಎಂಬುವವರು.
27 Kun Jerusalemin muuri oli vihittävä, haettiin leeviläiset kaikista heidän asuinpaikoistansa ja tuotiin Jerusalemiin viettämään vihkimäjuhlaa iloiten, kiitosvirsiä ja lauluja laulaen, kymbaaleja, harppuja ja kanteleita soittaen.
೨೭ಯೆರೂಸಲೇಮಿನ ಪೌಳಿಗೋಡೆಯನ್ನು ಪ್ರತಿಷ್ಠಿಸುವ ಸಮಯ ಬಂದಾಗ ಆಯಾ ಸ್ಥಳಗಳಲ್ಲಿದ್ದ ಲೇವಿಯರನ್ನು, ಕೀರ್ತನೆ ಗಾಯನಗಳಿಂದಲೂ ತಾಳ, ಸ್ವರಮಂಡಲ ಹಾಗು ಕಿನ್ನರಿ ಇವುಗಳಿಂದಲೂ ಪ್ರತಿಷ್ಠೆಯ ಉತ್ಸವವನ್ನು ಆಚರಿಸುವುದಕ್ಕಾಗಿ ಯೆರೂಸಲೇಮಿಗೆ ಕರೆಸಿಕೊಂಡರು.
28 Niin kokoontuivat veisaajain pojat Lakeudelta, Jerusalemin ympäristöstä, netofalaisten kylistä,
೨೮ಆಗ ಯೆರೂಸಲೇಮಿನ ಸುತ್ತಣ ಪ್ರಾಂತ್ಯಗಳಲ್ಲಿ ತಮಗೋಸ್ಕರ ಹಳ್ಳಿಗಳನ್ನು ಕಟ್ಟಿಕೊಂಡಿದ್ದ ಗಾಯಕ ಮಂಡಳಿಯವರು ಯೊರ್ದನ್ ಹೊಳೆಯ ತಗ್ಗು, ಯೆರೂಸಲೇಮಿನ ಸುತ್ತಣಪ್ರದೇಶ, ನೆಟೋಫಾತ್ಯರ ಗ್ರಾಮ,
29 Beet-Gilgalista ja Geban ja Asmavetin peltomailta, sillä veisaajat olivat rakentaneet itselleen kyliä Jerusalemin ympäristöön.
೨೯ಬೆತ್ ಗಿಲ್ಗಾಲ್, ಗೆಬ ಮತ್ತು ಅಜ್ಮಾವೇತ್, ಊರುಗಳಿಗೆ ಸೇರಿರುವ ಹಳ್ಳಿಗಳು ಇವುಗಳಿಂದ ಸೇರಿ ಬಂದರು.
30 Papit ja leeviläiset puhdistautuivat ja puhdistivat kansan sekä portit ja muurin.
೩೦ಯಾಜಕರೂ ಲೇವಿಯರೂ ತಮ್ಮನ್ನು ಶುದ್ಧಿಪಡಿಸಿಕೊಂಡ ಮೇಲೆ ಜನರನ್ನೂ, ಊರುಬಾಗಿಲುಗಳನ್ನೂ, ಗೋಡೆಯನ್ನು ಶುದ್ಧಪಡಿಸಿದರು.
31 Sitten minä vein Juudan päämiehet rinteelle, muurin yläpuolelle, ja järjestin kaksi suurta laulukuntaa ja juhlakulkuetta muurin yläpuolelle, oikealle kädelle, Lantaportille päin.
೩೧ಆನಂತರ ನಾನು ಯೆಹೂದ ಪ್ರಮುಖರನ್ನು ಗೋಡೆಯ ಮೇಲೆ ಕರೆದುಕೊಂಡು ಬಂದು, ಆರಾಧನೆ ಮಂಡಳಿಯವರಿಗೆ ಎರಡು ದೊಡ್ಡ ಗುಂಪುಗಳಾಗಿ ಆಲ್ಲಿ ನಿಲ್ಲಬೇಕೆಂದು ಅಪ್ಪಣೆಮಾಡಿದನು. ಒಂದು ಗುಂಪಿನವರು ಮೆರವಣಿಗೆಯಿಂದ ಗೋಡೆಯ ಮೇಲೆ ತಿಪ್ಪೆಬಾಗಿಲಿನಿಂದ ಬಲಗಡೆಗೆ ಹೋದರು.
32 Ja heidän jäljessään kulkivat Hoosaja ja toinen puoli Juudan päämiehiä
೩೨ಅವರ ಹಿಂದೆ ಯೆಹೂದ ಪ್ರಭುಗಳ ಅರ್ಧ ಜನರೊಡನೆ ಹೋಷಾಯನೂ,
33 sekä Asarja, Esra, Mesullam,
೩೩ತುತ್ತೂರಿ ಹಿಡಿದಿರುವ ಯಾಜಕರೊಡನೆ ಅಜರ್ಯ, ಎಜ್ರ, ಮೆಷುಲ್ಲಾಮ್,
34 Juuda, Benjamin, Semaja ja Jeremia
೩೪ಯೆಹೂದ, ಬೆನ್ಯಾಮೀನ್, ಶೆಮಾಯ, ಯೆರೆಮೀಯ ಎಂಬುವರೂ
35 sekä pappien poikia torvineen, ja Sakarja, Joonatanin poika, joka oli Semajan poika, joka Mattanjan poika, joka Miikajan poika, joka Sakkurin poika, joka Aasafin poika,
೩೫ಆಸಾಫ್ ಸಂತಾನದ ಜಕ್ಕೂರನಿಗೆ ಹುಟ್ಟಿದ ಮೀಕಾಯನ ವಂಶದವನೂ, ಮತ್ತನ್ಯನ ಮರಿಮಗನೂ ಶೆಮಾಯನ ಮೊಮ್ಮಗನೂ ಯೋನಾತಾನನ ಮಗನೂ, ಆದ ಜೆಕರ್ಯನೂ
36 sekä hänen veljensä Semaja, Asarel, Milalai, Gilalai, Maai, Netanel, Juuda ja Hanani Daavidin, Jumalan miehen, soittimia kantaen; ja Esra, kirjanoppinut, kulki heidän edellään.
೩೬ದೇವರ ಮನುಷ್ಯನಾದ ದಾವೀದನ ವಾದ್ಯಗಳನ್ನು ಹಿಡಿದಿರುವ ಇವನ ಬಂಧುಗಳಾದ ಶೆಮಾಯ, ಅಜರೇಲ್, ಮಿಲಲೈ, ಗಿಲಲೈ, ಮಾಯೈ, ನೆತನೇಲ್, ಯೆಹೂದ, ಹಾನಾನೀ ಎಂಬುವರೂ ಹೋದರು, ಧರ್ಮೋಪದೇಶಕನಾದ ಎಜ್ರನು ಇವರ ಮುಂದಾಳಾಗಿ ಹೊರಟನು.
37 He menivät Lähdeportin ohi ja nousivat suoraan Daavidin kaupungin portaita sinne, mistä noustaan muurille, Daavidin palatsin yläpuolelle, aina Vesiportille asti idässä.
೩೭ಇವರು ಬುಗ್ಗೆ ಬಾಗಿಲನ್ನು ಹಾದು ನೆಟ್ಟಗೆ ದಾವೀದನಗರದ ಸೋಪಾನಗಳ ಮಾರ್ಗವಾಗಿ ಗೋಡೆಯನ್ನು ಅನುಸರಿಸಿ ಅರಮನೆಯ ಮೇಲಣ ದಿನ್ನೆಯನ್ನು ಹತ್ತಿ ಪೂರ್ವದಿಕ್ಕಿನಲ್ಲಿರುವ ನೀರು ಬಾಗಿಲಿನವರೆಗೆ ಹೋದರು.
38 Toinen laulukunta kulki vastakkaiseen suuntaan, ja sen jäljessä minä ja toinen puoli kansaa, muurin yläpuolitse, Uunitornin yläpuolitse, aina Leveälle muurille asti,
೩೮ಅವರನ್ನು ಎದುರುಗೊಳ್ಳುವ ಹಾಗೆ ಆರಾಧನೆ ಮಂಡಳಿಯ ಎರಡನೆಯ ಗುಂಪಿನವರೂ, ನಾನೂ, ಉಳಿದ ಅರ್ಧಜನರೂ ಗೋಡೆಯ ಮೇಲೆ ಒಲೆಬುರುಜಿನಿಂದ ಅಗಲವಾದ ಗೋಡೆಯವರೆಗೂ
39 ja Efraimin-portin yläpuolitse ja Vanhanportin, Kalaportin, Hananelin-tornin ja Hammea-tornin ohitse aina Lammasportille saakka; ja he asettuivat Vankilaportin luokse.
೩೯ಅಲ್ಲಿಂದ ಎಫ್ರಾಯೀಮ್ ಬಾಗಿಲು, ಯೆಷಾನಾ ಬಾಗಿಲು, ಮೀನು ಬಾಗಿಲು, ಹನನೇಲ್ ಗೋಪುರ, ಹಮ್ಮೇಯಾ ಬುರುಜು ಇವುಗಳ ಮಾರ್ಗವಾಗಿ ಕುರಿ ಬಾಗಿಲಿನವರೆಗೂ ಹೋಗಿ ಸೆರೆಮನೆಯ ಬಾಗಿಲಿನ ಬಳಿಯಲ್ಲಿ ನಿಂತೆವು.
40 Sitten molemmat laulukunnat asettuivat Jumalan temppeliin, ja samoin minä ja toinen puoli esimiehiä minun kanssani,
೪೦ದೇವಾಲಯದ ಎರಡು ಆರಾಧನಾ ಮಂಡಳಿಯ ಗುಂಪಿನವರೂ, ನಾನೂ, ನನ್ನ ಜೊತೆಯಲ್ಲಿದ್ದ ಅರ್ಧ ಮಂದಿ ಅಧಿಕಾರಿಗಳೂ
41 sekä papit Eljakim, Maaseja, Minjamin, Miikaja, Eljoenai, Sakarja ja Hananja torvineen,
೪೧ತುತ್ತೂರಿ ಹಿಡಿದಿರುವ ಯಾಜಕರಾದ ಎಲ್ಯಾಕೀಮ್, ಮಾಸೇಯ, ಮಿನ್ಯಾಮೀನ್, ಮೀಕಾಯ, ಎಲ್ಯೋವೇನೈ, ಜೆಕರ್ಯ, ಹನನ್ಯ ಇವರೂ
42 ja Maaseja, Semaja, Eleasar, Ussi, Joohanan, Malkia, Eelam ja Eser. Veisaajat kaiuttivat virsiään, ja Jisrahja oli johtajana.
೪೨ಮಾಸೇಯ, ಶೆಮಾಯ, ಎಲ್ಲಾಜಾರ್, ಉಜ್ಜೀ, ಯೆಹೋಹಾನಾನ್, ಮಲ್ಕೀಯ, ಏಲಾಮ್, ಎಜೆರ್, ಎಂಬುವರು ದೇವಾಲಯದ ಬಳಿಯಲ್ಲಿ ನಿಂತಿರಲು ಗಾಯಕರು ಹಾಡತೊಡಗಿದರು. ಇಜ್ರಹ್ಯನು ಇವರ ನಾಯಕನು.
43 Ja he uhrasivat sinä päivänä suuria uhreja ja iloitsivat, sillä Jumala oli suuresti ilahuttanut heitä; myöskin vaimot ja lapset iloitsivat. Ja ilo kuului Jerusalemista kauas.
೪೩ದೇವರು ತಮಗೆ ವಿಶೇಷ ಆನಂದವನ್ನು ಉಂಟುಮಾಡಿದ್ದರಿಂದ, ಜನರು ಆ ದಿನದಲ್ಲಿ ಅನೇಕ ಯಜ್ಞಗಳನ್ನು ಸಮರ್ಪಿಸಿ ತಮ್ಮ ಹೆಂಡತಿ ಮಕ್ಕಳೊಡನೆ ಮಹೋತ್ಸವಮಾಡಿದರು. ಯೆರೂಸಲೇಮಿನ ಉತ್ಸವದ ಹರ್ಷಧ್ವನಿಯು ಬಹಳ ದೂರದವರೆಗೂ ಕೇಳಿಸಿತು.
44 Sinä päivänä asetettiin miehiä valvomaan varastokammioita, joissa antimet, uutiset ja kymmenykset säilytettiin. Niihin oli koottava kaupunkien peltomailta papeille ja leeviläisille lain mukaan tulevat osuudet. Sillä Juuda iloitsi palvelusta toimittavista papeista ja leeviläisistä.
೪೪ಸೇವೆಮಾಡುತ್ತಿದ್ದ ಯಾಜಕರ ಮತ್ತು ಲೇವಿಯರ ವಿಷಯದಲ್ಲಿ ಯೆಹೂದ್ಯರಿಗೆ ಬಹು ಸಂತೋಷವುಂಟಾಗಿದ್ದರಿಂದ ಆ ದಿನದಲ್ಲಿ ಅವರು ಧರ್ಮವಿಧಿಯ ಪ್ರಕಾರ ಆಯಾ ಊರುಗಳ ಭೂಮಿಯಿಂದ ಯಾಜಕರಿಗೂ ಲೇವಿಯರಿಗೂ ಸಿಕ್ಕತಕ್ಕ ಭಾಗಗಳನ್ನು ಅಂದರೆ ದೇವರಿಗಾಗಿ ಪ್ರತ್ಯೇಕಿಸತಕ್ಕ ವಸ್ತುಗಳು, ಪ್ರಥಮಫಲ, ದಶಮಾಂಶ ಇವುಗಳನ್ನು ಸಂಗ್ರಹಮಾಡತಕ್ಕ ಕೊಠಡಿಗಳ ಮೇಲೆ ಪಾರುಪತ್ಯಗಾರರನ್ನು ನೇಮಿಸಿದರು.
45 Ja nämä toimittivat tehtävänsä Jumalaansa palvellen ja puhdistuksia suorittaen, samoin veisaajat ja ovenvartijat, niinkuin Daavid ja hänen poikansa Salomo olivat käskeneet.
೪೫ಆ ಯಾಜಕರೂ ಲೇವಿಯರೂ ತಮ್ಮ ದೇವರ ಸೇವೆಯ ಸಂಬಧದಲ್ಲಿಯೂ ಶುದ್ಧೀಕರಣ ಸಂಬಂಧದಲ್ಲಿಯೂ ತಮ್ಮ ಕರ್ತವ್ಯವನ್ನು ಜಾಗರೂಕತೆಯಿಂದ ನೆರವೇರಿಸುತ್ತಿದ್ದರು. ಅವರಂತೆ ಗಾಯಕರೂ ದ್ವಾರಪಾಲಕರೂ ಸಹ ದಾವೀದನಿಂದಲೂ ಅವನ ಮಗನಾದ ಸೊಲೊಮೋನನಿಂದಲೂ ಸ್ಥಾಪಿತವಾದ ಕ್ರಮಾನುಸಾರವಾಗಿ ನಡೆಯುತ್ತಿದ್ದರು.
46 Sillä jo muinoin, Daavidin ja Aasafin aikana, oli veisaajain päämiehiä, ja veisattiin ylistys-ja kiitosvirsiä Jumalalle.
೪೬ಪೂರ್ವಕಾಲದಲ್ಲಿ ಅಂದರೆ ದಾವೀದನ ಮತ್ತು ಆಸಾಫನ ಕಾಲದಲ್ಲಿ ಗಾಯನಮಂಡಳಿಯ ನಾಯಕರು, ದೇವರಿಗೆ ಕೃತಜ್ಞತಾಸ್ತುತಿ ಸಲ್ಲಿಸುವ ಕೀರ್ತನೆಗಳು ಇದ್ದವು.
47 Ja koko Israel antoi Serubbaabelin ja Nehemian aikana veisaajille ja ovenvartijoille heidän osuutensa, heidän jokapäiväiset tarpeensa; he pyhittivät lahjoja myöskin leeviläisille, ja leeviläiset pyhittivät lahjoja Aaronin pojille.
೪೭ಜೆರುಬ್ಬಾಬೆಲ್ ಮತ್ತು ನೆಹೆಮೀಯ ಇವರ ಕಾಲಗಳಲ್ಲಿ ಎಲ್ಲಾ ಇಸ್ರಾಯೇಲರು ಗಾಯಕರಿಗೂ ದ್ವಾರಪಾಲಕರಿಗೂ ಪ್ರತಿದಿನ ಜೀವನಾಂಶವನ್ನು ಕೊಡುತ್ತಿದ್ದರು. ಇವರು ಅವುಗಳಲ್ಲಿ ದಶಮಾಂಶವನ್ನು ಲೇವಿಯರಿಗೂ ಮತ್ತು ಲೇವಿಯರು ತಮ್ಮದರಲ್ಲಿಯ ದಶಮಾಂಶವನ್ನು ಆರೋನನ ಮಕ್ಕಳಿಗೂ ಕೊಡುತ್ತಿದ್ದರು.

< Nehemian 12 >