< Johanneksen 6 >
1 Sen jälkeen Jeesus meni Galileaan, se on Tiberiaan, järven tuolle puolelle.
ಇವುಗಳಾದ ಮೇಲೆ ಯೇಸು ತಿಬೇರಿಯದ ಗಲಿಲಾಯ ಸರೋವರದ ಆಚೆಗೆ ಹೋದರು.
2 Ja häntä seurasi paljon kansaa, koska he näkivät ne tunnusteot, joita hän teki sairaille.
ಯೇಸು ರೋಗಿಗಳಲ್ಲಿ ನಡೆಸಿದ ಸೂಚಕಕಾರ್ಯಗಳನ್ನು ನೋಡಿದ್ದರಿಂದ ಜನರ ದೊಡ್ಡ ಗುಂಪು ಯೇಸುವನ್ನು ಹಿಂಬಾಲಿಸಿತು.
3 Ja Jeesus nousi vuorelle ja istui sinne opetuslapsinensa.
ಯೇಸು ಬೆಟ್ಟವನ್ನೇರಿ ಅಲ್ಲಿ ತಮ್ಮ ಶಿಷ್ಯರೊಂದಿಗೆ ಕುಳಿತುಕೊಂಡರು.
4 Ja pääsiäinen, juutalaisten juhla, oli lähellä.
ಆಗ ಯೆಹೂದ್ಯರ ಪಸ್ಕಹಬ್ಬವು ಹತ್ತಿರವಾಗಿತ್ತು.
5 Kun Jeesus nosti silmänsä ja näki paljon kansaa tulevan tykönsä, sanoi hän Filippukselle: "Mistä ostamme leipää näiden syödä?"
ಯೇಸು ಕಣ್ಣೆತ್ತಿ ನೋಡಿ ಮತ್ತು ಜನರ ದೊಡ್ಡ ಗುಂಪು ಅವರ ಕಡೆಗೆ ಬರುವುದನ್ನು ಕಂಡು ಫಿಲಿಪ್ಪನಿಗೆ, “ಇವರು ಊಟ ಮಾಡಲು ನಾವು ರೊಟ್ಟಿಯನ್ನು ಎಲ್ಲಿಂದ ಕೊಂಡುಕೊಳ್ಳೋಣ?” ಎಂದರು.
6 Mutta sen hän sanoi koetellakseen häntä, sillä itse hän tiesi, mitä aikoi tehdä.
ಅವನನ್ನು ಪರೀಕ್ಷಿಸುವುದಕ್ಕಾಗಿ ಯೇಸು ಇದನ್ನು ಹೇಳಿದರು. ಏಕೆಂದರೆ ತಾನು ಮಾಡಲಿರುವುದು ಏನೆಂದು ಯೇಸುವಿಗೆ ತಿಳಿದಿತ್ತು.
7 Filippus vastasi hänelle: "Eivät kahdensadan denarin leivät heille riittäisi, niin että kukin saisi edes vähän".
ಫಿಲಿಪ್ಪನು ಯೇಸುವಿಗೆ, “ಇವರಲ್ಲಿ ಪ್ರತಿಯೊಬ್ಬನು ಸ್ವಲ್ಪ ಸ್ವಲ್ಪ ತಿಂದರೂ ಆರು ತಿಂಗಳ ಕೂಲಿಯಷ್ಟು ರೊಟ್ಟಿಗಳೂ ಅವರಿಗೆ ಸಾಲುವುದಿಲ್ಲ,” ಎಂದನು.
8 Niin toinen hänen opetuslapsistansa, Andreas, Simon Pietarin veli, sanoi hänelle:
ಆಗ ಯೇಸುವಿನ ಶಿಷ್ಯರಲ್ಲಿ ಒಬ್ಬನಾಗಿರುವ ಸೀಮೋನ್ ಪೇತ್ರನ ಸಹೋದರನಾದ ಅಂದ್ರೆಯನು
9 "Täällä on poikanen, jolla on viisi ohraleipää ja kaksi kalaa, mutta mitä ne ovat näin monelle?"
ಯೇಸುವಿಗೆ, “ಇಲ್ಲಿ ಒಬ್ಬ ಹುಡುಗನ ಬಳಿ ಐದು ಜವೆಗೋಧಿಯ ರೊಟ್ಟಿಗಳೂ ಎರಡು ಮೀನುಗಳೂ ಇವೆ. ಆದರೆ ಅಷ್ಟೊಂದು ಜನರಿಗೆ ಇವು ಹೇಗೆ ಸಾಕಾಗುತ್ತವೆ?” ಎಂದನು.
10 Jeesus sanoi: "Asettakaa kansa aterioimaan". Ja siinä paikassa oli paljon ruohoa. Niin miehet, luvultaan noin viisituhatta, laskeutuivat maahan.
ಯೇಸು, “ಜನರನ್ನು ಊಟಕ್ಕೆ ಕುಳಿತುಕೊಳ್ಳಲು ಹೇಳಿರಿ,” ಎಂದರು. ಆ ಸ್ಥಳದಲ್ಲಿ ಬಹಳ ಹುಲ್ಲು ಇದ್ದುದರಿಂದ ಜನರೆಲ್ಲರೂ ಕುಳಿತುಕೊಂಡರು, ಗಂಡಸರೇ ಐದು ಸಾವಿರ ಮಂದಿ ಇದ್ದರು.
11 Ja Jeesus otti leivät ja kiitti ja jakeli istuville; samoin kaloistakin, niin paljon kuin he tahtoivat.
ಆಮೇಲೆ ಯೇಸು ರೊಟ್ಟಿಗಳನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿ, ಕುಳಿತಿದ್ದವರಿಗೆ ಬೇಕಾದಷ್ಟು ಹಂಚಿದರು. ಅದೇ ರೀತಿಯಲ್ಲಿ ಮೀನುಗಳನ್ನು ಅವರಿಗೆ ಹಂಚಿದರು.
12 Mutta kun he olivat ravitut, sanoi hän opetuslapsillensa: "Kootkaa tähteeksi jääneet palaset, ettei mitään joutuisi hukkaan".
ಅವರೆಲ್ಲರೂ ತಿಂದು ತೃಪ್ತಿಯಾದ ಮೇಲೆ ಯೇಸು ತಮ್ಮ ಶಿಷ್ಯರಿಗೆ, “ಏನೂ ನಷ್ಟವಾಗದಂತೆ ಉಳಿದ ತುಂಡುಗಳನ್ನು ಕೂಡಿಸಿರಿ,” ಎಂದರು.
13 Niin he kokosivat ne ja täyttivät kaksitoista vakkaa palasilla, mitkä olivat viidestä ohraleivästä jääneet tähteeksi niiltä, jotka olivat aterioineet.
ಅದರಂತೆ ಅವರು ಐದು ಜವೆಗೋಧಿಯ ರೊಟ್ಟಿಗಳಲ್ಲಿ ತಿಂದವರಿಂದ ಉಳಿದ ತುಂಡುಗಳನ್ನು ಕೂಡಿಸಿ, ಹನ್ನೆರಡು ಬುಟ್ಟಿಗಳಲ್ಲಿ ತುಂಬಿದರು.
14 Kun nyt ihmiset näkivät sen tunnusteon, jonka Jeesus oli tehnyt, sanoivat he: "Tämä on totisesti se profeetta, joka oli maailmaan tuleva".
ಆ ಜನರು ಯೇಸು ಮಾಡಿದ ಸೂಚಕಕಾರ್ಯವನ್ನು ಕಂಡು, “ಸತ್ಯವಾಗಿಯೂ ಲೋಕಕ್ಕೆ ಬರಬೇಕಾಗಿದ್ದ ಪ್ರವಾದಿಯು ಇವರೇ,” ಎಂದರು.
15 Kun nyt Jeesus huomasi, että he aikoivat tulla ja väkisin ottaa hänet, tehdäkseen hänet kuninkaaksi, väistyi hän taas pois vuorelle, hän yksinänsä.
ಅವರು ಬಂದು ತನ್ನನ್ನು ಹಿಡಿದುಕೊಂಡುಹೋಗಿ ಅರಸನನ್ನಾಗಿ ಮಾಡಬೇಕೆಂದಿದ್ದಾರೆಂದು ಯೇಸು ತಿಳಿದು ತಾವೊಬ್ಬರೇ ಪುನಃ ಬೆಟ್ಟದ ಕಡೆಗೆ ಹೋದರು.
16 Mutta kun ilta tuli, menivät hänen opetuslapsensa alas järven rantaan,
ಸಂಜೆಯಾದಾಗ ಯೇಸುವಿನ ಶಿಷ್ಯರು ಸರೋವರಕ್ಕೆ ಹೋಗಿ,
17 astuivat venheeseen ja lähtivät menemään järven toiselle puolelle, Kapernaumiin. Ja oli jo tullut pimeä, eikä Jeesus ollut vielä saapunut heidän luokseen;
ದೋಣಿಯನ್ನು ಹತ್ತಿ ಸರೋವರ ಮಾರ್ಗವಾಗಿ ಕಪೆರ್ನೌಮಿಗೆ ಸಾಗಿದರು. ಆಗಲೇ ಕತ್ತಲಾಗಿತ್ತು. ಯೇಸು ಅವರ ಬಳಿಗೆ ಇನ್ನೂ ಬಂದಿರಲಿಲ್ಲ.
18 ja järvi aaltoili ankarasti kovan tuulen puhaltaessa.
ಆಗ ರಭಸವಾದ ಗಾಳಿಯು ಬೀಸಿದ್ದರಿಂದ ಸರೋವರವು ಅಲ್ಲೋಲಕಲ್ಲೋಲವಾಯಿತು.
19 Kun he olivat soutaneet noin viisikolmatta tai kolmekymmentä vakomittaa, näkivät he Jeesuksen kävelevän järven päällä ja tulevan lähelle venhettä; ja he peljästyivät.
ಅವರು ದೋಣಿಯನ್ನು ನಡೆಸುತ್ತಾ ಸುಮಾರು ಐದಾರು ಕಿಲೋಮೀಟರಿನಷ್ಟು ದೂರ ಹೋದ ಮೇಲೆ ಯೇಸು ಸರೋವರದ ಮೇಲೆ ನಡೆದು ದೋಣಿಯ ಕಡೆಗೆ ಸಮೀಪಿಸುತ್ತಿರುವುದನ್ನು ಅವರು ಕಂಡು, ಭಯಪಟ್ಟರು.
20 Mutta hän sanoi heille: "Minä se olen; älkää peljätkö".
ಆದರೆ ಯೇಸು ಅವರಿಗೆ, “ನಾನೇ, ಭಯಪಡಬೇಡಿರಿ,” ಎಂದರು.
21 Niin he tahtoivat ottaa hänet venheeseen, ja kohta venhe saapui sen maan rantaan, jonne he olivat matkalla.
ಆಗ ಶಿಷ್ಯರು ಯೇಸುವನ್ನು ದೋಣಿಯಲ್ಲಿ ಸೇರಿಸಿಕೊಳ್ಳಬೇಕೆಂದಿದ್ದರು. ಅಷ್ಟರಲ್ಲಿ ದೋಣಿಯು ಅವರು ಹೋಗಬೇಕಾಗಿದ್ದ ದಡಕ್ಕೆ ಸೇರಿತು.
22 Seuraavana päivänä kansa yhä vielä oli järven toisella puolella, sillä he olivat nähneet, ettei siellä ollut muuta venhettä kuin se yksi ja ettei Jeesus mennyt opetuslastensa kanssa venheeseen, vaan että hänen opetuslapsensa lähtivät yksinään pois.
ಮರುದಿನ ಅಲ್ಲಿ ಒಂದೇ ದೋಣಿಯ ಹೊರತು ಬೇರೆ ಇರಲಿಲ್ಲವೆಂದೂ ಯೇಸುವಿನ ಶಿಷ್ಯರು ಮಾತ್ರ ಆ ದೋಣಿಯಲ್ಲಿ ಹೋದರೆಂದೂ ಯೇಸು ತಮ್ಮ ಶಿಷ್ಯರ ಸಂಗಡ ದೋಣಿಯಲ್ಲಿ ಹೋಗಲಿಲ್ಲವೆಂದೂ ಸರೋವರದ ಆಚೆಯಲ್ಲಿ ನಿಂತಿದ್ದ ಜನರು ಅರಿತುಕೊಂಡರು.
23 Kuitenkin oli muita venheitä tullut Tiberiaasta lähelle sitä paikkaa, jossa he olivat syöneet leipää, sittenkuin Herra oli lausunut kiitoksen.
ಬೇರೆ ದೋಣಿಗಳು ತಿಬೇರಿಯದಿಂದ ಹೊರಟು, ಕರ್ತ ಯೇಸು ಕೃತಜ್ಞತೆ ಸಲ್ಲಿಸಿ ಜನರಿಗೆ ರೊಟ್ಟಿಯನ್ನು ಊಟಮಾಡಿಸಿದ ಸ್ಥಳದ ಸಮೀಪಕ್ಕೆ ಬಂದವು.
24 Kun siis kansa näki, ettei Jeesus ollut siellä eivätkä hänen opetuslapsensa, astuivat hekin venheisiin ja menivät Kapernaumiin ja etsivät Jeesusta.
ಆಗ ಯೇಸು ಮತ್ತು ಅವರ ಶಿಷ್ಯರು ಅಲ್ಲಿ ಇಲ್ಲದಿರುವುದನ್ನು ಜನರು ನೋಡಿ, ದೋಣಿಗಳಲ್ಲಿ ಹತ್ತಿ ಯೇಸುವನ್ನು ಹುಡುಕುತ್ತಾ ಕಪೆರ್ನೌಮಿಗೆ ಬಂದರು.
25 Ja kun he löysivät hänet järven toiselta puolelta, sanoivat he hänelle: "Rabbi, milloin tulit tänne?"
ಜನರು ಯೇಸುವನ್ನು ಸರೋವರದ ಆಚೆ ಕಡೆಯಲ್ಲಿ ಕಂಡು ಅವರಿಗೆ, “ಗುರುವೇ, ನೀವು ಇಲ್ಲಿಗೆ ಬಂದದ್ದು ಯಾವಾಗ?” ಎಂದರು.
26 Jeesus vastasi heille ja sanoi: "Totisesti, totisesti minä sanon teille: ette te minua sentähden etsi, että olette nähneet tunnustekoja, vaan sentähden, että saitte syödä niitä leipiä ja tulitte ravituiksi.
ಯೇಸು ಅವರಿಗೆ, “ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನೀವು ನನ್ನನ್ನು ಹುಡುಕುವುದು ಸೂಚಕಕಾರ್ಯಗಳನ್ನು ನೋಡಿದ್ದರಿಂದಲ್ಲ, ರೊಟ್ಟಿಗಳನ್ನು ತಿಂದು ತೃಪ್ತಿ ಹೊಂದಿದ್ದರಿಂದಲೇ.
27 Älkää hankkiko sitä ruokaa, joka katoaa, vaan sitä ruokaa, joka pysyy hamaan iankaikkiseen elämään ja jonka Ihmisen Poika on teille antava; sillä häneen on Isä, Jumala itse, sinettinsä painanut." (aiōnios )
ನಾಶವಾಗುವ ಆಹಾರಕ್ಕಾಗಿ ದುಡಿಯಬೇಡಿರಿ, ನೀವು ನಿತ್ಯಜೀವಕ್ಕೆ ಉಳಿಯುವ ಆಹಾರಕ್ಕಾಗಿಯೇ ದುಡಿಯಿರಿ. ಅದನ್ನು ಮನುಷ್ಯಪುತ್ರನಾದ ನಾನು ನಿಮಗೆ ಕೊಡುವೆನು. ಇದಕ್ಕಾಗಿ ತಂದೆ ದೇವರು ಮೆಚ್ಚುಗೆಯ ಮುದ್ರೆಯನ್ನು ನನ್ನ ಮೇಲೆ ಹಾಕಿದ್ದಾರೆ,” ಎಂದರು. (aiōnios )
28 Niin he sanoivat hänelle: "Mitä meidän pitää tekemän, että me Jumalan tekoja tekisimme?"
ಆಗ ಅವರು ಯೇಸುವಿಗೆ, “ನಾವು ದೇವರ ಕಾರ್ಯವನ್ನು ಮಾಡಬೇಕಾದರೆ ಏನು ಮಾಡಬೇಕು?” ಎಂದು ಕೇಳಿದ್ದಕ್ಕೆ,
29 Jeesus vastasi ja sanoi heille: "Se on Jumalan teko, että te uskotte häneen, jonka Jumala on lähettänyt".
ಯೇಸು ಅವರಿಗೆ, “ದೇವರು ಕಳುಹಿಸಿದ ನನ್ನನ್ನು ನೀವು ನಂಬುವುದೇ ದೇವರು ಮೆಚ್ಚುವ ಕಾರ್ಯ,” ಎಂದರು.
30 He sanoivat hänelle: "Minkä tunnusteon sinä sitten teet, että me näkisimme sen ja uskoisimme sinua? Minkä teon sinä teet?
ಅದಕ್ಕೆ ಅವರು ಯೇಸುವಿಗೆ, “ಹಾಗಾದರೆ ನಾವು ನೋಡಿ ನಿಮ್ಮನ್ನು ನಂಬುವಂತೆ ಯಾವ ಸೂಚಕಕಾರ್ಯವನ್ನು ಮಾಡುತ್ತೀರಿ?
31 Meidän isämme söivät mannaa erämaassa, niinkuin kirjoitettu on: 'Hän antoi leipää taivaasta heille syötäväksi'."
‘ಅವರಿಗೆ ಪರಲೋಕದಿಂದ ರೊಟ್ಟಿ ಕೊಡಲಾಯಿತು’ ಎಂದು ಪವಿತ್ರ ವೇದದಲ್ಲಿ ಬರೆದಿರುವ ಪ್ರಕಾರ ನಮ್ಮ ಪಿತೃಗಳು ಅರಣ್ಯದಲ್ಲಿ ಮನ್ನಾ ಎಂಬ ಆಹಾರವನ್ನು ತಿಂದರು,” ಎಂದು ಕೇಳಿದರು.
32 Niin Jeesus sanoi heille: "Totisesti, totisesti minä sanon teille: ei Mooses antanut teille sitä leipää taivaasta, vaan minun Isäni antaa teille taivaasta totisen leivän.
ಯೇಸು ಅವರಿಗೆ, “ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನಿಮಗೆ ಪರಲೋಕದಿಂದ ರೊಟ್ಟಿಯನ್ನು ಮೋಶೆ ಕೊಡಲಿಲ್ಲ. ನನ್ನ ತಂದೆಯೇ ನಿಮಗೆ ನಿಜವಾದ ರೊಟ್ಟಿಯನ್ನು ಪರಲೋಕದಿಂದಲೇ ಕೊಡುತ್ತಾರೆ.
33 Sillä Jumalan leipä on se, joka tulee alas taivaasta ja antaa maailmalle elämän."
ಪರಲೋಕದಿಂದ ಇಳಿದುಬಂದು ಲೋಕಕ್ಕೆ ಜೀವವನ್ನು ಕೊಡುವ ದೇವರ ರೊಟ್ಟಿಯು ನಾನೇ,” ಎಂದರು.
34 Niin he sanoivat hänelle: "Herra, anna meille aina sitä leipää".
ಅದಕ್ಕವರು ಯೇಸುವಿಗೆ, “ಸ್ವಾಮೀ, ಈ ರೊಟ್ಟಿಯನ್ನೇ ನಮಗೆ ಯಾವಾಗಲೂ ಕೊಡು,” ಎಂದರು.
35 Jeesus sanoi heille: "Minä olen elämän leipä; joka tulee minun tyköni, se ei koskaan isoa, ja joka uskoo minuun, se ei koskaan janoa.
ಯೇಸು ಅವರಿಗೆ, “ನಾನೇ ಜೀವದ ರೊಟ್ಟಿ. ನನ್ನ ಬಳಿಗೆ ಬರುವವರಿಗೆ ಎಂದಿಗೂ ಹಸಿವೆಯಾಗುವುದಿಲ್ಲ; ನನ್ನನ್ನು ನಂಬುವವರಿಗೆ ಎಂದಿಗೂ ದಾಹವಾಗುವುದಿಲ್ಲ.
36 Mutta minä olen sanonut teille, että te olette nähneet minut, ettekä kuitenkaan usko.
ಆದರೆ, ‘ನೀವು ನನ್ನನ್ನು ಕಂಡಿದ್ದರೂ ನಂಬಲಿಲ್ಲ,’ ಎಂದು ನಾನು ನಿಮಗೆ ಹೇಳಿದೆನು.
37 Kaikki, minkä Isä antaa minulle, tulee minun tyköni; ja sitä, joka minun tyköni tulee, minä en heitä ulos.
ತಂದೆಯು ನನಗೆಂದು ಕೊಟ್ಟಿರುವ ಪ್ರತಿಯೊಬ್ಬರೂ ನನ್ನ ಬಳಿಗೆ ಬರುವರು. ನನ್ನ ಬಳಿಗೆ ಬರುವವರನ್ನು ನಾನು ಎಂದಿಗೂ ತಳ್ಳಿಬಿಡುವುದೇ ಇಲ್ಲ.
38 Sillä minä olen tullut taivaasta, en tekemään omaa tahtoani, vaan hänen tahtonsa, joka on minut lähettänyt.
ನಾನು ನನ್ನ ಚಿತ್ತವನ್ನು ಮಾಡುವುದಕ್ಕಲ್ಲ. ನನ್ನನ್ನು ಕಳುಹಿಸಿದ ತಂದೆಯ ಚಿತ್ತವನ್ನೇ ಮಾಡುವುದಕ್ಕೆ ಪರಲೋಕದಿಂದ ಬಂದೆನು.
39 Ja minun lähettäjäni tahto on se, että minä kaikista niistä, jotka hän on minulle antanut, en kadota yhtäkään, vaan herätän heidät viimeisenä päivänä.
ನನ್ನನ್ನು ಕಳುಹಿಸಿಕೊಟ್ಟ ತಂದೆಯ ಚಿತ್ತವೇನೆಂದರೆ: ಅವರು ನನಗೆ ಕೊಟ್ಟವರಲ್ಲಿ ನಾನು ಯಾರನ್ನೂ ಕಳೆದುಕೊಳ್ಳದೆ ಕಡೆಯ ದಿನದಲ್ಲಿ ಅವರನ್ನು ಎಬ್ಬಿಸುವುದೇ.
40 Sillä minun Isäni tahto on se, että jokaisella, joka näkee Pojan ja uskoo häneen, on iankaikkinen elämä; ja minä herätän hänet viimeisenä päivänä." (aiōnios )
ನನ್ನ ತಂದೆಯ ಚಿತ್ತವೇನೆಂದರೆ ನನ್ನನ್ನು ನೋಡಿ ನನ್ನಲ್ಲಿ ವಿಶ್ವಾಸವಿಡುವ ಪ್ರತಿಯೊಬ್ಬರೂ ನಿತ್ಯಜೀವವನ್ನು ಪಡೆಯುವುದೇ; ನಾನು ಅವರನ್ನು ಕಡೆಯ ದಿನದಲ್ಲಿ ಎಬ್ಬಿಸುವೆನು,” ಎಂದು ಹೇಳಿದರು. (aiōnios )
41 Niin juutalaiset nurisivat häntä vastaan, koska hän sanoi: "Minä olen se leipä, joka on tullut alas taivaasta";
“ಪರಲೋಕದಿಂದ ಇಳಿದು ಬಂದ ರೊಟ್ಟಿ ನಾನೇ,” ಎಂದು ಯೇಸು ಹೇಳಿದ್ದಕ್ಕೆ ಯೆಹೂದ್ಯರು ಯೇಸುವಿನ ವಿಷಯವಾಗಿ ಗೊಣಗುಟ್ಟಿ,
42 ja he sanoivat: "Eikö tämä ole Jeesus, Joosefin poika, jonka isän ja äidin me tunnemme? Kuinka hän sitten sanoo: 'Minä olen tullut alas taivaasta'?"
“ಈತನು ಯೋಸೇಫನ ಪುತ್ರ ಯೇಸು ಅಲ್ಲವೇ? ಈತನ ತಂದೆತಾಯಿ ನಮಗೆ ಗೊತ್ತಿಲ್ಲವೇ? ಹಾಗಾದರೆ, ‘ನಾನು ಪರಲೋಕದಿಂದ ಬಂದೆನು,’ ಎಂದು ಈತನು ಹೇಳುವುದು ಹೇಗೆ?” ಎಂದರು.
43 Jeesus vastasi ja sanoi heille: "Älkää nurisko keskenänne.
ಯೇಸು ಅವರಿಗೆ, “ನಿಮ್ಮನಿಮ್ಮೊಳಗೆ ಗೊಣಗುಟ್ಟಬೇಡಿರಿ.
44 Ei kukaan voi tulla minun tyköni, ellei Isä, joka on minut lähettänyt, häntä vedä; ja minä herätän hänet viimeisenä päivänä.
ನನ್ನನ್ನು ಕಳುಹಿಸಿದ ತಂದೆ ಸೆಳೆಯದ ಹೊರತು, ಯಾರೂ ನನ್ನ ಬಳಿಗೆ ಬರಲಾರರು. ನಾನು ಅವರನ್ನು ಕಡೆಯ ದಿನದಲ್ಲಿ ಎಬ್ಬಿಸುವೆನು.
45 Profeetoissa on kirjoitettuna: 'Ja he tulevat kaikki Jumalan opettamiksi'. Jokainen, joka on Isältä kuullut ja oppinut, tulee minun tyköni.
‘ಅವರೆಲ್ಲರೂ ದೇವರಿಂದಲೇ ಬೋಧನೆ ಪಡೆಯುವರು,’ ಎಂದು ಪ್ರವಾದಿಗಳ ಗ್ರಂಥದಲ್ಲಿ ಬರೆದಿದೆ. ತಂದೆಯಿಂದ ಕೇಳಿ ಕಲಿತ ಪ್ರತಿಯೊಬ್ಬರೂ ನನ್ನ ಬಳಿಗೆ ಬರುತ್ತಾರೆ.
46 Ei niin, että kukaan olisi Isää nähnyt; ainoastaan hän, joka on Jumalasta, on nähnyt Isän.
ದೇವರಿಂದ ಬಂದಿರುವ ನಾನೇ ತಂದೆಯನ್ನು ನೋಡಿದ್ದೇನೆ, ಬೇರೆ ಯಾರೂ ತಂದೆಯನ್ನು ನೋಡಲಿಲ್ಲ.
47 Totisesti, totisesti minä sanon teille: joka uskoo, sillä on iankaikkinen elämä. (aiōnios )
ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನನ್ನು ನಂಬುವವರು ನಿತ್ಯಜೀವವನ್ನು ಹೊಂದಿದ್ದಾರೆ. (aiōnios )
48 Minä olen elämän leipä.
ನಾನೇ ಜೀವದ ರೊಟ್ಟಿ.
49 Teidän isänne söivät mannaa erämaassa, ja he kuolivat.
ನಿಮ್ಮ ಪಿತೃಗಳು ಅರಣ್ಯದಲ್ಲಿ ‘ಮನ್ನಾ’ ತಿಂದರೂ ಸತ್ತುಹೋದರು.
50 Mutta tämä on se leipä, joka tulee alas taivaasta, että se, joka sitä syö, ei kuolisi.
ಯಾರು ತಿಂದರೂ ಸಾಯದೇ ಇರುವಂತೆ ಪರಲೋಕದಿಂದ ಇಳಿದು ಬಂದ ಜೀವದ ರೊಟ್ಟಿ ಇದೇ.
51 Minä olen se elävä leipä, joka on tullut alas taivaasta. Jos joku syö tätä leipää, hän elää iankaikkisesti. Ja se leipä, jonka minä annan, on minun lihani, maailman elämän puolesta." (aiōn )
ನಾನೇ ಪರಲೋಕದಿಂದ ಬಂದ ಜೀವದ ರೊಟ್ಟಿ. ಈ ರೊಟ್ಟಿಯನ್ನು ಯಾರು ತಿನ್ನುವರೋ ಅವರು ಸದಾಕಾಲವೂ ಬದುಕುವರು. ಲೋಕದ ಜೀವಕ್ಕಾಗಿ ನಾನು ಕೊಡುವ ರೊಟ್ಟಿಯು ನನ್ನ ಮಾಂಸವೇ,” ಎಂದರು. (aiōn )
52 Silloin juutalaiset riitelivät keskenään sanoen: "Kuinka tämä voi antaa lihansa meille syötäväksi?"
ಆದ್ದರಿಂದ ಯೆಹೂದ್ಯರು ಒಬ್ಬರಿಗೊಬ್ಬರು ಚರ್ಚೆಮಾಡುತ್ತಾ, “ಈ ಮನುಷ್ಯನು ತನ್ನ ಮಾಂಸವನ್ನು ತಿನ್ನುವುದಕ್ಕೆ ನಮಗೆ ಹೇಗೆ ಕೊಡುತ್ತಾನೆ?” ಎಂದರು.
53 Niin Jeesus sanoi heille: "Totisesti, totisesti minä sanon teille: ellette syö Ihmisen Pojan lihaa ja juo hänen vertansa, ei teillä ole elämää itsessänne.
ಯೇಸು ಅವರಿಗೆ, “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನೀವು ಮನುಷ್ಯಪುತ್ರನಾದ ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯದೆ ಹೋದರೆ, ನಿಮ್ಮಲ್ಲಿ ಜೀವವಿರುವುದಿಲ್ಲ.
54 Joka syö minun lihani ja juo minun vereni, sillä on iankaikkinen elämä, ja minä herätän hänet viimeisenä päivänä. (aiōnios )
ಯಾರು ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುತ್ತಾರೋ ಅವರು ನಿತ್ಯಜೀವವನ್ನು ಹೊಂದಿದ್ದಾರೆ, ನಾನು ಅವರನ್ನು ಕಡೆಯ ದಿನದಲ್ಲಿ ಎಬ್ಬಿಸುವೆನು. (aiōnios )
55 Sillä minun lihani on totinen ruoka, ja minun vereni on totinen juoma.
ನನ್ನ ಮಾಂಸವು ನಿಜವಾದ ಆಹಾರವೂ ನನ್ನ ರಕ್ತವು ನಿಜವಾದ ಪಾನವೂ ಆಗಿದೆ.
56 Joka syö minun lihani ja juo minun vereni, se pysyy minussa, ja minä hänessä.
ಯಾರು ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುತ್ತಾರೋ ಅವರು ನನ್ನಲ್ಲಿ ನೆಲೆಸಿರುತ್ತಾರೆ. ನಾನು ಅವರಲ್ಲಿ ನೆಲೆಸಿರುತ್ತೇನೆ.
57 Niinkuin Isä, joka elää, on minut lähettänyt, ja minä elän Isän kautta, niin myös se, joka minua syö, elää minun kauttani.
ಜೀವವುಳ್ಳ ತಂದೆಯು ನನ್ನನ್ನು ಕಳುಹಿಸಿದ್ದಾರೆ. ನಾನು ತಂದೆಯ ನಿಮಿತ್ತವಾಗಿ ಜೀವಿಸುವಂತೆಯೇ ನನ್ನನ್ನು ತಿನ್ನುವವರು ನನ್ನ ನಿಮಿತ್ತವಾಗಿಯೇ ಜೀವಿಸುವರು.
58 Tämä on se leipä, joka tuli alas taivaasta. Ei ole, niinkuin oli teidän isienne: he söivät ja kuolivat; joka tätä leipää syö, se elää iankaikkisesti." (aiōn )
ಪರಲೋಕದಿಂದ ಬಂದ ರೊಟ್ಟಿಯು ಇದೇ. ನಿಮ್ಮ ಪಿತೃಗಳು ‘ಮನ್ನಾ’ ತಿಂದರೂ ಸತ್ತರು. ಇದು ಹಾಗಲ್ಲ, ಈ ರೊಟ್ಟಿಯನ್ನು ತಿನ್ನುವವರು ಸದಾಕಾಲಕ್ಕೂ ಜೀವಿಸುವರು,” ಎಂದರು. (aiōn )
59 Tämän hän puhui synagoogassa opettaessaan Kapernaumissa.
ಕಪೆರ್ನೌಮಿನ ಸಭಾಮಂದಿರದಲ್ಲಿ ಬೋಧಿಸುತ್ತಿರುವಾಗ ಯೇಸು ಈ ಮಾತುಗಳನ್ನು ಹೇಳಿದರು.
60 Niin monet hänen opetuslapsistansa, sen kuultuaan, sanoivat: "Tämä on kova puhe, kuka voi sitä kuulla?"
ಯೇಸುವಿನ ಶಿಷ್ಯರಲ್ಲಿ ಅನೇಕರು ಈ ಮಾತುಗಳನ್ನು ಕೇಳಿ, “ಇದು ಕಠಿಣವಾದ ಮಾತು. ಇದನ್ನು ಯಾರು ಪಾಲಿಸುವರು?” ಎಂದರು.
61 Mutta kun Jeesus sydämessään tiesi, että hänen opetuslapsensa siitä nurisivat, sanoi hän heille: "Loukkaako tämä teitä?
ತಮ್ಮ ಶಿಷ್ಯರು ಇದನ್ನು ಕುರಿತು ಗೊಣಗುಟ್ಟುತ್ತಾರೆಂದು ಯೇಸು ತಮ್ಮಲ್ಲಿ ತಿಳಿದುಕೊಂಡು ಅವರಿಗೆ, “ಇದು ನಿಮಗೆ ಬೇಸರವಾಯಿತೋ?
62 Mitä sitten, jos saatte nähdä Ihmisen Pojan nousevan sinne, missä hän oli ennen!
ಹಾಗಾದರೆ ಮನುಷ್ಯಪುತ್ರನಾದ ನಾನು ಮೊದಲಿದ್ದ ಕಡೆಗೆ ಏರಿ ಹೋಗುವುದನ್ನು ನೀವು ನೋಡುವುದಾದರೆ ಏನನ್ನುವಿರಿ?
63 Henki on se, joka eläväksi tekee; ei liha mitään hyödytä. Ne sanat, jotka minä olen teille puhunut, ovat henki ja ovat elämä.
ಬದುಕಿಸುವುದು ದೇವರ ಆತ್ಮವೇ, ನರಮಾಂಸವಾದರೋ ಯಾವುದಕ್ಕೂ ಪ್ರಯೋಜನವಾಗುವುದಿಲ್ಲ. ನಾನು ನಿಮಗೆ ನುಡಿದ ಮಾತುಗಳೇ ದೇವರಾತ್ಮವೂ ಜೀವವೂ ಆಗಿರುತ್ತವೆ.
64 Mutta teissä on muutamia, jotka eivät usko." Sillä Jeesus tiesi alusta asti, ketkä ne olivat, jotka eivät uskoneet, ja kuka se oli, joka oli kavaltava hänet.
ಆದರೆ ನಂಬದ ಕೆಲವರು ನಿಮ್ಮಲ್ಲಿ ಇದ್ದಾರೆ,” ಎಂದರು. ನಂಬದವರು ಯಾರೆಂದೂ ತನ್ನನ್ನು ಹಿಡಿದುಕೊಡುವವನು ಯಾರೆಂದೂ ಯೇಸು ಮೊದಲಿನಿಂದಲೂ ತಿಳಿದಿದ್ದರು.
65 Ja hän sanoi: "Sentähden minä olen sanonut teille, ettei kukaan voi tulla minun tyköni, ellei minun Isäni sitä hänelle anna".
ಯೇಸು ಮುಂದುವರಿಸಿ ಹೇಳಿದ್ದೇನೆಂದರೆ, “ಯಾರನ್ನಾದರೂ ನನ್ನ ತಂದೆಯು ನನಗೆ ಕೊಟ್ಟರಷ್ಟೇ ಅವರು ನನ್ನ ಬಳಿಗೆ ಬರಲು ಸಾಧ್ಯ, ಎಂದು ನಾನು ನಿಮಗೆ ಹೇಳಿದ್ದು ಇದಕ್ಕಾಗಿಯೇ.”
66 Tämän tähden monet hänen opetuslapsistaan vetäytyivät pois eivätkä enää vaeltaneet hänen kanssansa.
ಅಂದಿನಿಂದ ಯೇಸುವಿನ ಶಿಷ್ಯರಲ್ಲಿ ಅನೇಕರು ಹಿಂದಕ್ಕೆ ಹೊರಟು ಹೋದರು ಮತ್ತು ಯೇಸುವಿನ ಸಂಗಡ ಸಂಚಾರ ಮಾಡಲಿಲ್ಲ.
67 Niin Jeesus sanoi niille kahdelletoista: "Tahdotteko tekin mennä pois?"
ಆದಕಾರಣ ಯೇಸು ಹನ್ನೆರಡು ಮಂದಿ ಶಿಷ್ಯರಿಗೆ, “ನೀವು ಸಹ ಹೋಗಬೇಕೆಂದು ಇದ್ದೀರಾ?” ಎಂದು ಕೇಳಲು,
68 Simon Pietari vastasi hänelle: "Herra, kenen tykö me menisimme? Sinulla on iankaikkisen elämän sanat; (aiōnios )
ಸೀಮೋನ್ ಪೇತ್ರನು ಯೇಸುವಿಗೆ, “ಸ್ವಾಮೀ, ನಾವು ಯಾರ ಬಳಿಗೆ ಹೋಗೋಣ? ನಿಮ್ಮಲ್ಲಿಯೇ ನಿತ್ಯಜೀವದ ವಾಕ್ಯಗಳಿವೆ. (aiōnios )
69 ja me uskomme ja ymmärrämme, että sinä olet Jumalan Pyhä."
ನೀವು ದೇವರ ಪರಿಶುದ್ಧರು ಎಂದು ನಾವು ನಂಬಿ ತಿಳಿದಿದ್ದೇವೆ,” ಎಂದನು.
70 Jeesus vastasi heille: "Enkö minä ole valinnut teitä, te kaksitoista? Ja yksi teistä on perkele."
ಅದಕ್ಕೆ ಯೇಸು ಅವರಿಗೆ, “ಹನ್ನೆರಡು ಮಂದಿಯಾದ ನಿಮ್ಮನ್ನು ನಾನು ಆರಿಸಿಕೊಂಡೆನಲ್ಲವೇ? ಆದರೆ ನಿಮ್ಮಲ್ಲಿಯೂ ಒಬ್ಬನು ಪಿಶಾಚನಾಗಿದ್ದಾನೆ,” ಎಂದರು.
71 Mutta sen hän sanoi Juudaasta, Simon Iskariotin pojasta; sillä tämä oli hänet kavaltava ja oli yksi niistä kahdestatoista.
ಸೀಮೋನನ ಮಗ ಇಸ್ಕರಿಯೋತ ಯೂದನ ವಿಷಯವಾಗಿ ಯೇಸು ಹೀಗೆ ಹೇಳಿದರು. ಏಕೆಂದರೆ ಹನ್ನೆರಡು ಮಂದಿಯಲ್ಲಿ ಒಬ್ಬನಾಗಿದ್ದ ಇವನೇ ಯೇಸುವನ್ನು ಹಿಡಿದು ಕೊಡುವುದಕ್ಕಿದ್ದನು.