< Teot 5 >

1 Mutta eräs mies, nimeltä Ananias, ja hänen vaimonsa Safiira myivät maatilan,
ಅನನೀಯ ಎಂಬ ಹೆಸರಿನ ಒಬ್ಬ ಮನುಷ್ಯನು ತನ್ನ ಹೆಂಡತಿ ಸಪ್ಫೈರಳೊಂದಿಗೆ ತನ್ನ ಆಸ್ತಿಯ ಒಂದು ಭಾಗವನ್ನು ಮಾರಿದನು.
2 ja mies kätki vaimonsa tieten osan hinnasta, ja osan hän toi ja pani apostolien jalkojen eteen.
ತನ್ನ ಹೆಂಡತಿಯ ಪೂರ್ಣ ತಿಳುವಳಿಕೆಯಿಂದ, ಬಂದ ಹಣದಲ್ಲಿ ಒಂದು ಭಾಗವನ್ನು ತನಗಾಗಿ ಇಟ್ಟುಕೊಂಡು, ಉಳಿದ ಹಣವನ್ನು ತಂದು ಅಪೊಸ್ತಲರ ಪಾದಗಳ ಬಳಿಯಲ್ಲಿಟ್ಟನು.
3 Mutta Pietari sanoi: "Ananias, miksi on saatana täyttänyt sinun sydämesi, niin että koetit pettää Pyhää Henkeä ja kätkit osan maatilan hinnasta?
ಆದರೆ ಪೇತ್ರನು, “ಅನನೀಯಾ, ಪವಿತ್ರಾತ್ಮ ದೇವರಿಗೆ ಸುಳ್ಳು ಹೇಳುವಂತೆ ಸೈತಾನನು ನಿನ್ನ ಹೃದಯವನ್ನು ತುಂಬಿಸಿದ್ದು ಏಕೆ? ಆಸ್ತಿಯನ್ನು ಮಾರಿ ಬಂದ ಹಣದಲ್ಲಿ ಒಂದು ಭಾಗವನ್ನು ಇಟ್ಟುಕೊಂಡದ್ದೇಕೆ?
4 Eikö se myymätönnä ollut sinun omasi, ja eikö myynnin jälkeenkin sen hinta ollut sinun? Miksi päätit sydämessäsi tämän tehdä? Et sinä ole valhetellut ihmisille, vaan Jumalalle."
ಮಾರುವುದಕ್ಕಿಂತ ಮೊದಲು ಅದು ನಿನ್ನ ಅಧೀನದಲ್ಲಿತ್ತಲ್ಲವೇ? ಮಾರಿದ ನಂತರವೂ ಆ ಹಣ ನಿನ್ನ ಅಧೀನದಲ್ಲಿಯೇ ಇತ್ತಲ್ಲವೇ? ಇಂಥ ಕಾರ್ಯ ಮಾಡಲು ನಿನ್ನ ಹೃದಯದಲ್ಲಿ ಯೋಚನೆ ಬಂದದ್ದು ಏಕೆ? ನೀನು ಸುಳ್ಳು ಹೇಳಿದ್ದು ಮನುಷ್ಯರಿಗಲ್ಲ, ದೇವರಿಗೇ,” ಎಂದು ನುಡಿದನು.
5 Kun Ananias kuuli nämä sanat, kaatui hän maahan ja heitti henkensä. Ja suuri pelko valtasi kaikki, jotka sen kuulivat.
ಇದನ್ನು ಅನನೀಯನು ಕೇಳಿಸಿಕೊಂಡಾಗ, ಕೆಳಗೆ ಬಿದ್ದು ಸತ್ತುಹೋದನು. ನಡೆದ ಸಂಗತಿಯನ್ನು ಕೇಳಿದವರೆಲ್ಲರಿಗೂ ಮಹಾ ಭಯವು ಉಂಟಾಯಿತು.
6 Ja nuoret miehet nousivat ja korjasivat hänet ja kantoivat hänet pois ja hautasivat.
ಆಗ ಯುವಕರು ಬಂದು ಅವನ ಶವವನ್ನು ಬಟ್ಟೆಯಲ್ಲಿ ಸುತ್ತಿ, ಹೊತ್ತುಕೊಂಡು ಹೋಗಿ ಹೂಣಿಟ್ಟರು.
7 Noin kolmen hetken kuluttua hänen vaimonsa tuli sisään eikä tiennyt, mitä oli tapahtunut.
ಏನು ಸಂಭವಿಸಿತೆಂಬುದನ್ನು ತಿಳಿಯದೆ, ಸುಮಾರು ಮೂರು ತಾಸುಗಳ ನಂತರ ಅವನ ಹೆಂಡತಿ ಒಳಗೆ ಪ್ರವೇಶಿಸಿದಳು.
8 Niin Pietari kysyi häneltä: "Sano minulle: siihenkö hintaan te myitte maatilan?" Hän vastasi: "Kyllä, juuri siihen hintaan".
ಆಗ ಪೇತ್ರನು, “ನನಗೆ ಹೇಳು ನೀನು ಮತ್ತು ನಿನ್ನ ಗಂಡ ಅನನೀಯನು ಆಸ್ತಿಯನ್ನು ಮಾರಿದ್ದರಿಂದ ಬಂದ ಹಣ ಇಷ್ಟೆಯೋ?” ಎಂದು ಆಕೆಯನ್ನು ಕೇಳಲು, “ಹೌದು, ಅಷ್ಟೇ ಕ್ರಯ ಬಂದಿತು,” ಎಂದಳು.
9 Mutta Pietari sanoi hänelle: "Miksi olette yksissä neuvoin käyneet kiusaamaan Herran Henkeä? Katso, niiden jalat, jotka hautasivat sinun miehesi, ovat oven takana, ja he kantavat sinutkin pois."
“ನೀವಿಬ್ಬರೂ ಕರ್ತದೇವರ ಆತ್ಮವನ್ನು ಪರೀಕ್ಷಿಸಲು ಒಪ್ಪಿಕೊಂಡದ್ದೇಕೆ? ಇಗೋ! ನಿನ್ನ ಗಂಡನ ಶವವನ್ನು ಹೂಣಿಟ್ಟು ಬಂದವರು ಬಾಗಿಲ ಬಳಿಯಲ್ಲೇ ಇದ್ದಾರೆ. ಅವರು ನಿನ್ನನ್ನೂ ಹೊತ್ತುಕೊಂಡು ಹೋಗುವರು,” ಎಂದು ಆಕೆಗೆ ಪೇತ್ರನು ಹೇಳಿದನು.
10 Niin hän heti kaatui hänen jalkojensa eteen ja heitti henkensä; ja kun nuorukaiset tulivat sisään, tapasivat he hänet kuolleena, kantoivat pois ja hautasivat hänet hänen miehensä viereen.
ಆ ಕ್ಷಣದಲ್ಲಿಯೇ ಆಕೆ ಅವನ ಪಾದಗಳ ಬಳಿಯಲ್ಲಿ ಬಿದ್ದು ಸತ್ತುಹೋದಳು. ಆಗ ಯುವಕರು ಒಳಗೆ ಬಂದು ಆಕೆ ಸತ್ತು ಹೋಗಿರುವುದನ್ನು ಕಂಡು, ಆಕೆಯ ಶವವನ್ನು ಹೊತ್ತುಕೊಂಡು ಹೋಗಿ ಆಕೆಯ ಗಂಡನ ಪಕ್ಕದಲ್ಲಿಯೇ ಸಮಾಧಿಮಾಡಿದರು.
11 Ja suuri pelko valtasi koko seurakunnan ja kaikki ne, jotka tämän kuulivat.
ಇಡೀ ಸಭೆಗೂ ಈ ಘಟನೆಗಳ ಬಗ್ಗೆ ಕೇಳಿದವರಿಗೂ ಮಹಾ ಭಯವು ಉಂಟಾಯಿತು.
12 Ja apostolien kätten kautta tapahtui kansassa monta tunnustekoa ja ihmettä; ja he olivat kaikki yksimielisesti koolla Salomon pylväskäytävässä.
ಜನರ ಮಧ್ಯದಲ್ಲಿ ಅಪೊಸ್ತಲರಿಂದ ಅನೇಕ ಸೂಚಕಕಾರ್ಯಗಳೂ ಅದ್ಭುತಕಾರ್ಯಗಳೂ ನಡೆದವು. ಅವರೆಲ್ಲರೂ ಒಂದೇ ಮನಸ್ಸುಳ್ಳವರಾಗಿ “ಸೊಲೊಮೋನನ ಮಂಟಪ” ಎಂದು ಕರೆಯಲಾಗುತ್ತಿದ್ದ ಸ್ಥಳದಲ್ಲಿ ಸೇರುತ್ತಿದ್ದರು.
13 Eikä muista kukaan uskaltanut heihin liittyä, mutta kansa piti heitä suuressa kunniassa.
ಅವರೆಲ್ಲರೂ ಜನರಿಂದ ಬಹಳ ಗೌರವಕ್ಕೆ ಪಾತ್ರರಾಗಿದ್ದರೂ ಬೇರೆಯವರು ಅವರ ಜೊತೆ ಸೇರಲು ಧೈರ್ಯಗೊಳ್ಳಲಿಲ್ಲ.
14 Ja yhä enemmän karttui niitä, jotka uskoivat Herraan, sekä miehiä että naisia suuret joukot.
ಆದರೂ ಹೆಚ್ಚು ಜನ ಪುರುಷರೂ ಸ್ತ್ರೀಯರೂ ಕರ್ತ ದೇವರಲ್ಲಿ ವಿಶ್ವಾಸವನ್ನಿಟ್ಟು ಅವರ ಜೊತೆ ಸೇರಿಕೊಂಡರು. ಅವರು ವಿಶ್ವಾಸಿಗಳ ಸಂಖ್ಯೆಯಲ್ಲಿ ಸೇರಿದರು.
15 Kannettiinpa sairaita kaduillekin ja pantiin vuoteille ja paareille, että Pietarin kulkiessa edes hänen varjonsa sattuisi johonkuhun heistä.
ಇದರ ಪರಿಣಾಮವಾಗಿ, ಪೇತ್ರನು ಬೀದಿಗಳಲ್ಲಿ ಹಾದುಹೋಗುತ್ತಿದ್ದಾಗ ಅವನ ನೆರಳು ಕೆಲವರ ಮೇಲಾದರೂ ಬೀಳಲೆಂದು ಜನರು ತಮ್ಮಲ್ಲಿ ಅಸ್ವಸ್ಥತೆಯಿದ್ದವರನ್ನು ಹಾಸಿಗೆ ಮತ್ತು ಡೋಲಿಗಳ ಸಮೇತ ತಂದು ಬೀದಿಗಳಲ್ಲಿ ಮಲಗಿಸುತ್ತಿದ್ದರು.
16 Myöskin kaupungeista Jerusalemin ympäriltä tuli paljon kansaa, ja he toivat sairaita ja saastaisten henkien vaivaamia, ja ne kaikki tulivat parannetuiksi.
ಯೆರೂಸಲೇಮಿನ ಸುತ್ತಮುತ್ತಲಿನ ಊರುಗಳಿಂದ ಜನರ ಗುಂಪುಗಳು ತಮ್ಮಲ್ಲಿ ಅಸ್ವಸ್ಥರಾದವರನ್ನೂ ಅಶುದ್ಧಾತ್ಮ ಪೀಡಿತರನ್ನೂ ಕರೆದುಕೊಂಡು ಬರುತ್ತಿದ್ದರು. ಬಂದವರೆಲ್ಲರೂ ಸ್ವಸ್ಥರಾಗುತ್ತಿದ್ದರು.
17 Silloin nousi ylimmäinen pappi ja kaikki, jotka olivat hänen puolellansa, saddukeusten lahko, ja he tulivat kiihkoa täyteen
ಹೀಗಿರಲು ಮಹಾಯಾಜಕನೂ ಅವನ ಬಳಿಯಲ್ಲಿದ್ದ ಸದ್ದುಕಾಯರೆಲ್ಲರೂ ಬಹಳ ಅಸೂಯೆಪಟ್ಟರು.
18 ja kävivät käsiksi apostoleihin ja panivat heidät yleiseen vankihuoneeseen.
ಅವರು ಅಪೊಸ್ತಲರನ್ನು ಬಂಧಿಸಿ ಸಾರ್ವಜನಿಕ ಸೆರೆಮನೆಯಲ್ಲಿ ಹಾಕಿಸಿದರು.
19 Mutta yöllä avasi Herran enkeli vankilan ovet ja vei heidät ulos ja sanoi:
ಆದರೆ ರಾತ್ರಿಯಲ್ಲಿ ಕರ್ತದೇವರ ದೂತನೊಬ್ಬನು ಸೆರೆಮೆನೆಯ ದ್ವಾರಗಳನ್ನು ತೆರೆದು ಅವರನ್ನು ಹೊರಗೆ ನಡೆಸಿಕೊಂಡು ಬಂದು,
20 "Menkää ja astukaa esiin ja puhukaa pyhäkössä kansalle kaikki tämän elämän sanat".
“ಹೋಗಿರಿ, ದೇವಾಲಯದ ಅಂಗಳದಲ್ಲಿ ನಿಂತುಕೊಂಡು, ಈ ಜೀವವಾಕ್ಯಗಳನ್ನೆಲ್ಲಾ ಜನರಿಗೆ ಬೋಧಿಸಿರಿ,” ಎಂದು ಹೇಳಿದನು.
21 Sen kuultuansa he menivät päivän koittaessa pyhäkköön ja opettivat. Niin saapui ylimmäinen pappi ja ne, jotka olivat hänen puolellansa, ja he kutsuivat koolle neuvoston ja israelilaisten vanhinten kokouksen; ja he lähettivät noutamaan heitä vankilasta.
ಪ್ರಾತಃಕಾಲದಲ್ಲಿ ಅವರು ತಮಗೆ ಹೇಳಿದಂತೆಯೇ ದೇವಾಲಯವನ್ನು ಪ್ರವೇಶಿಸಿ ಜನರಿಗೆ ಬೋಧಿಸಲು ಪ್ರಾರಂಭಿಸಿದರು. ಮಹಾಯಾಜಕನು ಮತ್ತು ಅವನೊಂದಿಗಿದ್ದವರು ಕೂಡಿಬಂದಾಗ, ನ್ಯಾಯಸಭೆಯನ್ನೂ ಇಸ್ರಾಯೇಲರ ಹಿರಿಯರ ಪೂರ್ಣಮಂಡಳಿಯನ್ನೂ ಕೂಡಿಸಿ, ಸೆರೆಮನೆಯಿಂದ ಅಪೊಸ್ತಲರನ್ನು ಕರೆಕಳುಹಿಸಿದರು.
22 Mutta kun oikeudenpalvelijat tulivat vankilaan, eivät he löytäneet heitä sieltä, vaan palasivat takaisin ja kertoivat,
ಆದರೆ ಅಧಿಕಾರಿಗಳು ಸೆರೆಮನೆಗೆ ಬಂದಾಗ, ಅಪೊಸ್ತಲರು ಸೆರೆಮನೆಯಲ್ಲಿ ಇರಲಿಲ್ಲ. ಇವರು ಹಿಂತಿರುಗಿ ಹೋಗಿ,
23 sanoen: "Vankilan me kyllä huomasimme hyvin tarkasti suljetuksi ja vartijat seisomassa ovien edessä; mutta kun avasimme, emme sisältä ketään löytäneet".
“ಸೆರೆಮನೆಯ ಬಾಗಿಲುಗಳು ಭದ್ರಪಡಿಸಿರುವುದನ್ನೂ ದ್ವಾರಗಳ ಬಳಿ ಕಾವಲುಗಾರರು ನಿಂತಿರುವುದನ್ನೂ ಕಂಡೆವು. ಆದರೆ ದ್ವಾರಗಳನ್ನು ನಾವು ತೆರೆದಾಗ ಒಳಗೆ ಯಾರೂ ಇರಲಿಲ್ಲ,” ಎಂದು ವರದಿಮಾಡಿದರು.
24 Kun pyhäkön vartioston päällikkö ja ylipapit kuulivat nämä sanat, eivät he tienneet, mitä heistä ajatella ja mitä tästä tulisi.
ಈ ವರದಿಯನ್ನು ಕೇಳಿದಾಗ, ದೇವಾಲಯದ ಕಾವಲುಗಾರರ ದಳಪತಿಯೂ ಮುಖ್ಯಯಾಜಕರೂ ಇದರಿಂದ ಏನಾಗುವುದೋ ಎಂದು ಕಳವಳಪಟ್ಟರು.
25 Niin tuli joku ja kertoi heille: "Katso, ne miehet, jotka te panitte vankilaan, seisovat pyhäkössä ja opettavat kansaa".
ಆಗ ಯಾರೋ ಒಬ್ಬನು ಬಂದು, “ನೋಡಿರಿ! ನೀವು ಸೆರೆಮನೆಯಲ್ಲಿ ಬಂಧಿಸಿಟ್ಟಿದ್ದ ಆ ಪುರುಷರು ದೇವಾಲಯದ ಅಂಗಳದಲ್ಲಿ ನಿಂತುಕೊಂಡು ಜನರಿಗೆ ಬೋಧಿಸುತ್ತಿದ್ದಾರೆ,” ಎಂದು ವರದಿ ಮಾಡಿದನು.
26 Silloin päällikkö meni oikeudenpalvelijain kanssa ja nouti heidät; ei kuitenkaan väkisin, sillä he pelkäsivät, että kansa heidät kivittäisi.
ಆಗ ದಳಪತಿಯು ತನ್ನ ಅಧಿಕಾರಿಗಳೊಂದಿಗೆ ಹೋಗಿ ಅಪೊಸ್ತಲರನ್ನು ಕರೆದುಕೊಂಡು ಬಂದನು. ಜನರು ತಮಗೆ ಕಲ್ಲೆಸೆದಾರೆಂಬ ಭಯ ಅವರಿಗಿದ್ದುದರಿಂದ ಅಪೊಸ್ತಲರನ್ನು ಬಲವಂತಮಾಡದೆ ಕರೆದುಕೊಂಡು ಬಂದನು.
27 Ja he toivat heidät ja asettivat neuvoston eteen. Ja ylimmäinen pappi kuulusteli heitä
ಅಪೊಸ್ತಲರನ್ನು ಕರೆತಂದು, ಮಹಾಯಾಜಕನು ಪ್ರಶ್ನಿಸಲೆಂದು ಅವರನ್ನು ನ್ಯಾಯಸಭೆಯ ಎದುರಿನಲ್ಲಿ ನಿಲ್ಲಿಸಿದರು.
28 ja sanoi: "Me olemme kieltämällä kieltäneet teitä opettamasta tähän nimeen; ja katso, te olette täyttäneet Jerusalemin opetuksellanne ja tahdotte saattaa meidän päällemme tuon miehen veren".
ಅವನು, “ಈ ಹೆಸರಿನಲ್ಲಿ ಉಪದೇಶ ಮಾಡಬಾರದೆಂದು ನಾವು ನಿಮಗೆ ಕಟ್ಟುನಿಟ್ಟಾಗಿ ಅಪ್ಪಣೆಕೊಟ್ಟೆವು. ಇಗೋ ನೀವಾದರೋ ನಿಮ್ಮ ಬೋಧನೆಯಿಂದ ಇಡೀ ಯೆರೂಸಲೇಮನ್ನು ತುಂಬಿಸಿರುವಿರಿ. ಅಲ್ಲದೆ ಈ ಮನುಷ್ಯನನ್ನು ಕೊಂದು ರಕ್ತ ಸುರಿಸಿದ ಅಪರಾಧಕ್ಕೆ ನಮ್ಮನ್ನು ನೀವು ಹೊಣೆಮಾಡಲು ಉದ್ದೇಶಿಸಿದ್ದೀರಿ,” ಎಂದು ಹೇಳಿದನು.
29 Mutta Pietari ja muut apostolit vastasivat ja sanoivat: "Enemmän tulee totella Jumalaa kuin ihmisiä.
ಪೇತ್ರ ಮತ್ತು ಇತರ ಅಪೊಸ್ತಲರು ಉತ್ತರವಾಗಿ, “ನಾವು ಮನುಷ್ಯರಿಗೆ ವಿಧೇಯರಾಗಿರುವುದಕ್ಕಿಂತ ದೇವರಿಗೆ ವಿಧೇಯರಾಗಿರಬೇಕಲ್ಲ!
30 Meidän isiemme Jumala on herättänyt Jeesuksen, jonka te ripustitte puuhun ja surmasitte.
ನೀವು ಮರಕ್ಕೆ ತೂಗುಹಾಕಿ ಕೊಂದ ಯೇಸುವನ್ನು ನಮ್ಮ ಪಿತೃಗಳ ದೇವರು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ್ದಾರೆ.
31 Hänet on Jumala oikealla kädellänsä korottanut Päämieheksi ja Vapahtajaksi, antamaan Israelille parannusta ja syntien anteeksiantamusta.
ಯೇಸು ಇಸ್ರಾಯೇಲಿಗೆ ಪಶ್ಚಾತ್ತಾಪವನ್ನೂ ಪಾಪಗಳ ಕ್ಷಮಾಪಣೆಯನ್ನೂ ಕೊಡಲು ಸಾಧ್ಯವಾಗುವಂತೆ ದೇವರು ಯೇಸುವನ್ನು ತಮ್ಮ ಬಲಗಡೆಯಲ್ಲಿ ಅಧಿಪತಿಯನ್ನಾಗಿಯೂ ರಕ್ಷಕನನ್ನಾಗಿಯೂ ಉನ್ನತಿಗೇರಿಸಿದ್ದಾರೆ.
32 Ja me olemme kaiken tämän todistajat, niin myös Pyhä Henki, jonka Jumala on antanut niille, jotka häntä tottelevat."
ಈ ಸಂಗತಿಗಳಿಗೆ ನಾವೇ ಸಾಕ್ಷಿಗಳು; ತನಗೆ ವಿಧೇಯರಾಗಿರುವವರಿಗೆ ದೇವರು ದಯಪಾಲಿಸಿದ ಪವಿತ್ರಾತ್ಮ ದೇವರು ಸಾಕ್ಷಿ,” ಎಂದರು.
33 Kun he sen kuulivat, viilsi se heidän sydäntänsä, ja he tahtoivat tappaa heidät.
ಅವರು ಇದನ್ನು ಕೇಳಿದಾಗ ಬಹುಕೋಪಗೊಂಡು ಅವರನ್ನು ಕೊಲ್ಲಬೇಕೆಂದಿದ್ದರು.
34 Mutta neuvostossa nousi eräs fariseus, nimeltä Gamaliel, lainopettaja, jota koko kansa piti arvossa, ja hän käski viedä miehet vähäksi aikaa ulos.
ಆದರೆ ಗಮಲಿಯೇಲ್ ಎಂಬ ಹೆಸರಿನ ಒಬ್ಬ ಫರಿಸಾಯನಿದ್ದನು. ಅವನು ನಿಯಮ ಬೋಧಕನೂ ಎಲ್ಲಾ ಜನರ ಗೌರವಕ್ಕೆ ಪಾತ್ರನೂ ಆಗಿದ್ದನು. ಅವನು ನ್ಯಾಯಸಭೆಯಲ್ಲಿ ಎದ್ದು ನಿಂತುಕೊಂಡು, ಸ್ವಲ್ಪ ಸಮಯ ಅಪೊಸ್ತಲರನ್ನು ಹೊರಗೆ ಕಳುಹಿಸಬೇಕೆಂದು ಆಜ್ಞಾಪಿಸಿದನು.
35 Sitten hän sanoi neuvostolle: "Israelin miehet, kavahtakaa, mitä aiotte tehdä näille miehille.
ಗಮಲಿಯೇಲನು ಸಭೆಯನ್ನುದ್ದೇಶಿಸಿ, “ಇಸ್ರಾಯೇಲರೇ, ಈ ಜನರ ವಿರುದ್ಧ ಮಾಡಬೇಕೆಂದಿರುವುದರ ಬಗ್ಗೆ ಎಚ್ಚರಿಕೆಯುಳ್ಳವರಾಗಿರಿ.
36 Sillä ennen näitä päiviä nousi Teudas, sanoen jokin olevansa, ja häneen liittyi noin neljäsataa miestä; hänet tapettiin, ja kaikki, jotka olivat häneen suostuneet, hajotettiin, ja he joutuivat häviöön.
ಕೆಲವು ದಿನಗಳ ಹಿಂದೆ ಥೈದನೆಂಬವನು ಕಾಣಿಸಿಕೊಂಡು, ತಾನು ಒಬ್ಬ ಗಣ್ಯವ್ಯಕ್ತಿಯೆಂದು ಹೇಳಿಕೊಳ್ಳುತ್ತಾ ಬಂದನು. ಸುಮಾರು ನಾಲ್ಕುನೂರು ಜನರು ಅವನ ಹಿಂಬಾಲಕರಾದರು. ಅವನು ಕೊಲೆಗೀಡಾದನು. ಅವನಿಗೆ ವಿಧೇಯರಾದವರೆಲ್ಲರೂ ಚದರಿಹೋಗಿ ಇಲ್ಲದಂತಾದರು.
37 Hänen jälkeensä nousi Juudas, galilealainen, verollepanon päivinä ja vietteli kansaa luopumaan puolellensa; hänkin hukkui, ja kaikki, jotka olivat suostuneet häneen, hajotettiin.
ಅವನ ನಂತರ ಗಲಿಲಾಯದ ಯೂದ ಎಂಬುವವನು ಜನಗಣತಿಯ ದಿನಗಳಲ್ಲಿ ಕಾಣಿಸಿಕೊಂಡು, ಜನರ ಗುಂಪನ್ನು ತಿರುಗಿಬೀಳಲು ನಡೆಸಿದನು. ಅವನು ಸಹ ನಾಶವಾದನು. ಅವನನ್ನು ಹಿಂಬಾಲಿಸಿದವರೆಲ್ಲರೂ ಚದರಿಹೋದರು.
38 Ja nyt minä sanon teille: pysykää erillänne näistä miehistä ja antakaa heidän olla; sillä jos tämä hanke eli tämä teko on ihmisistä, niin se tyhjään raukeaa;
ಆದ್ದರಿಂದ, ಈಗ ನಾನು ನಿಮಗೆ ಹೇಳುವುದೇನೆಂದರೆ, ಈ ಜನರಿಂದ ದೂರವಾಗಿರಿ! ಅವರನ್ನು ಬಿಟ್ಟುಬಿಡಿರಿ! ಏಕೆಂದರೆ ಅವರ ಉದ್ದೇಶ ಅಥವಾ ಕಾರ್ಯವು ಮನುಷ್ಯರಿಂದ ಬಂದದ್ದಾಗಿದ್ದರೆ, ಅದೇ ವ್ಯರ್ಥವಾಗುವುದು.
39 mutta jos se on Jumalasta, niin te ette voi heitä kukistaa. Varokaa, ettei teitä ehkä havaittaisi sotiviksi itse Jumalaa vastaan."
ಒಂದು ವೇಳೆ ಇದು ದೇವರಿಂದ ಬಂದದ್ದಾಗಿದ್ದರೆ, ಅವರನ್ನು ನಿಲ್ಲಿಸಲು ನಿಮ್ಮಿಂದಾಗದು. ಹಾಗೆ ಮಾಡಲು ಪ್ರಯತ್ನಿಸಿದರೆ ನೀವು ದೇವರಿಗೆ ವಿರೋಧವಾಗಿ ಹೋರಾಡುವವರಾಗಿ ಕಂಡು ಬರುವಿರಿ,” ಎಂದು ಹೇಳಿದನು.
40 Niin he noudattivat hänen neuvoansa. Ja he kutsuivat apostolit sisään ja pieksättivät heitä ja kielsivät heitä puhumasta Jeesuksen nimeen ja päästivät heidät menemään.
ಅವರು ಗಮಲಿಯೇಲನ ಸಲಹೆಯನ್ನು ಒಪ್ಪಿದರು. ಅವರು ಅಪೊಸ್ತಲರನ್ನು ಕರೆಯಿರಿ ಅವರನ್ನು ಛಡಿಗಳಿಂದ ಹೊಡೆಸಿ, ಯೇಸುವಿನ ಹೆಸರಿನಲ್ಲಿ ಮಾತನಾಡಬಾರದೆಂದು ಆಜ್ಞಾಪಿಸಿ ಬಿಡುಗಡೆ ಮಾಡಿದರು.
41 Niin he lähtivät pois neuvostosta iloissaan siitä, että olivat katsotut arvollisiksi kärsimään häväistystä Jeesuksen nimen tähden.
ಆದ್ದರಿಂದ ಯೇಸುವಿನ ನಾಮದ ನಿಮಿತ್ತ ಅವಮಾನಪಡಲು ತಾವು ಯೋಗ್ಯರಾದೆವಲ್ಲಾ ಎಂದು ಅಪೊಸ್ತಲರು ಸಂತೋಷಪಡುತ್ತಾ ನ್ಯಾಯಸಭೆಯಿಂದ ಹೊರಗೆ ಹೋದರು.
42 Eivätkä he lakanneet, vaan opettivat joka päivä pyhäkössä ja kodeissa ja julistivat evankeliumia Kristuksesta Jeesuksesta.
ದಿನದಿನವೂ ಅವರು ದೇವಾಲಯಗಳಲ್ಲಿ ಮತ್ತು ಮನೆಯಿಂದ ಮನೆಗೆ ಹೋಗಿ ಕ್ರಿಸ್ತ ಯೇಸುವಿನ ಸುವಾರ್ತೆಯನ್ನು ಸಾರುವುದನ್ನೂ ಬೋಧಿಸುವುದನ್ನೂ ನಿಲ್ಲಿಸಲೇ ಇಲ್ಲ.

< Teot 5 >