< 2 Samuelin 13 >
1 Sen jälkeen tapahtui tämä. Daavidin pojalla Absalomilla oli kaunis sisar nimeltä Taamar, ja Daavidin poika Amnon rakastui häneen.
೧ದಾವೀದನ ಮಗನಾದ ಅಬ್ಷಾಲೋಮನಿಗೆ ತಾಮಾರಳೆಂಬ ಬಹು ಸುಂದರಿಯಾದ ಒಬ್ಬಳು ತಂಗಿಯಿದ್ದಳು. ದಾವೀದನ ಮಗ ಅಮ್ನೋನನು ಆಕೆಯನ್ನು ಮೋಹಿಸಿದನು.
2 Ja Amnon tuli aivan sairaaksi tuskasta sisarensa Taamarin tähden; sillä kun tämä oli neitsyt, näytti Amnonista mahdottomalta tehdä hänelle mitään.
೨ಅವನು ಆಕೆಯ ಮೇಲಿನ ಮೋಹದಿಂದ ಪೀಡಿತನಾಗಿ ಅಸ್ವಸ್ಥನಾದನು. ತಾಮಾರಳು ಕನ್ಯೆಯಾಗಿದ್ದರಿಂದ ಆಕೆಗೆ ಏನು ಮಾಡಲು ಸಾಧ್ಯವಿಲ್ಲವೆಂದು ಅಮ್ನೋನನು ತಿಳಿದನು.
3 Mutta Amnonilla oli ystävä, nimeltä Joonadab, Daavidin veljen Simean poika; ja Joonadab oli hyvin ovela mies.
೩ಅವನಿಗೆ ಯೋನಾದಾಬನೆಂಬ ಒಬ್ಬ ಗೆಳೆಯನಿದ್ದನು. ಇವನು ದಾವೀದನ ಅಣ್ಣನಾದ ಶಿಮ್ಮನ ಮಗನು.
4 Tämä sanoi hänelle: "Miksi sinä kuihdut noin päivä päivältä, kuninkaan poika? Etkö ilmaise minulle sitä?" Amnon vastasi hänelle: "Minä olen rakastunut veljeni Absalomin sisareen Taamariin".
೪ಬಹು ಯುಕ್ತಿವಂತನಾದ ಇವನು ಒಂದು ದಿನ ಅಮ್ನೋನನನ್ನು, “ರಾಜಪುತ್ರನೇ ನೀನು ದಿನೇ ದಿನೇ ಕ್ಷೀಣನಾಗುತ್ತಾ ಬರುವುದೇಕೆ? ನನಗೆ ತಿಳಿಸುವುದಿಲ್ಲವೋ” ಎಂದು ಕೇಳಲು ಅವನು, “ನನ್ನ ತಮ್ಮನಾದ ಅಬ್ಷಾಲೋಮನ ತಂಗಿ ತಾಮಾರಳ ಮೇಲೆ ನನಗೆ ಮೋಹ ಉಂಟಾಗಿದೆ” ಎಂದು ಉತ್ತರ ಕೊಟ್ಟನು.
5 Joonadab sanoi hänelle: "Paneudu vuoteeseesi ja tekeydy sairaaksi. Ja kun isäsi tulee katsomaan sinua, niin sano hänelle: 'Salli minun sisareni Taamarin tulla antamaan minulle jotakin syötävää; jos hän valmistaisi ruuan minun silmieni edessä, että minä näkisin sen, niin minä söisin hänen kädestään'."
೫ಆಗ ಯೋನಾದಾಬನು ಅವನಿಗೆ, “ನೀನು ಅಸ್ವಸ್ಥನಾದವನಂತೆ ಹಾಸಿಗೆಯ ಮೇಲೆ ಮಲಗಿಕೋ. ನಿನ್ನ ತಂದೆಯು ನಿನ್ನನ್ನು ನೋಡುವುದಕ್ಕೆ ಬಂದಾಗ ಅವನಿಗೆ, ‘ದಯವಿಟ್ಟು ನನ್ನ ತಂಗಿಯಾದ ತಾಮಾರಳನ್ನು ನನಗಾಗಿ ಆಹಾರ ಸಿದ್ಧಮಾಡುವುದಕ್ಕೆ ಕಳುಹಿಸು. ಆಕೆ ನನ್ನೆದುರಿನಲ್ಲಿಯೆ ಸಿದ್ಧಮಾಡಿ, ತನ್ನ ಕೈಯಿಂದಲೇ ಊಟಮಾಡಿಸಲಿ’ ಎಂದು ಹೇಳು” ಎಂದನು.
6 Niin Amnon paneutui maata ja tekeytyi sairaaksi. Kun kuningas tuli katsomaan häntä, sanoi Amnon kuninkaalle: "Salli minun sisareni Taamarin tulla tekemään kaksi kakkua minun silmieni edessä, niin minä syön hänen kädestään".
೬ಅಮ್ನೋನನು ಅಸ್ವಸ್ಥನಾದವನಂತೆ ಮಲಗಿಕೊಂಡನು. ಅರಸನು ಅವನನ್ನು ನೋಡುವುದಕ್ಕೆ ಬಂದಾಗ ಅವನು ಅರಸನಿಗೆ, “ದಯವಿಟ್ಟು ನನ್ನ ತಂಗಿಯಾದ ತಾಮಾರಳನ್ನು ನನ್ನ ಬಳಿಗೆ ಕಳುಹಿಸು. ಆಕೆ ನನಗೋಸ್ಕರ ನನ್ನ ಕಣ್ಣ ಮುಂದೆಯೇ ಆಹಾರವನ್ನು ಸಿದ್ಧಮಾಡಿಕೊಡುವುದಾದರೆ ಊಟಮಾಡುವೆನು” ಎಂದು ಹೇಳಿದನು.
7 Silloin Daavid lähetti sanan Taamarille linnaan ja käski sanoa hänelle: "Mene veljesi Amnonin taloon ja valmista hänelle ruokaa".
೭ಆಗ ದಾವೀದನು ಅರಮನೆಗೆ ಆಳುಗಳನ್ನು ಕಳುಹಿಸಿ ಆಕೆಗೆ, “ನೀನು ನಿನ್ನ ಅಣ್ಣನಾದ ಅಮ್ನೋನನ ಮನೆಗೆ ಹೋಗಿ ಅವನಿಗೋಸ್ಕರ ಆಹಾರವನ್ನು ಸಿದ್ಧಮಾಡು” ಎಂದು ಹೇಳಿದನು.
8 Niin Taamar meni veljensä Amnonin taloon, jossa tämä makasi. Ja hän otti taikinaa, sotki ja teki kakkuja hänen silmiensä edessä ja paistoi kakut,
೮ಕೂಡಲೆ ಆಕೆಯು ತನ್ನ ಅಣ್ಣನಾದ ಅಮ್ನೋನನ ಮನೆಗೆ ಹೋದಳು. ಅವನು ಮಲಗಿದ್ದನು. ಆಕೆಯು ಹೋಗಿ ಹಿಟ್ಟು ತೆಗೆದುಕೊಂಡು ನಾದಿ, ಅವನ ಕಣ್ಣ ಮುಂದೆಯೇ ರೊಟ್ಟಿಗಳನ್ನು ಮಾಡಿದಳು.
9 otti pannun ja kaatoi hänen eteensä; mutta tämä ei tahtonut syödä. Ja Amnon sanoi: "Toimittakaa kaikki minun luotani ulos". Niin menivät kaikki hänen luotaan ulos.
೯ಅನಂತರ ಆಕೆಯು ಅವುಗಳನ್ನು ಪಾತ್ರೆಯಿಂದ ತೆಗೆದು, ಅವನ ಮುಂದೆ ಇಟ್ಟಳು. ಅವನು ಊಟಮಾಡದೆ ಎಲ್ಲಾ ಜನರನ್ನು ತನ್ನ ಬಳಿಯಿಂದ ಹೊರಡಿಸಬೇಕೆಂದು ಅಪ್ಪಣೆ ಮಾಡಿದನು.
10 Sitten Amnon sanoi Taamarille: "Tuo ruoka tänne sisähuoneeseen, syödäkseni sinun kädestäsi". Niin Taamar otti tekemänsä kakut ja toi ne sisähuoneeseen veljellensä Amnonille.
೧೦ಎಲ್ಲರೂ ಹೋದ ಮೇಲೆ ಅವನು ತಾಮಾರಳಿಗೆ, “ಆಹಾರವನ್ನು ಈ ಕೋಣೆಗೆ ತೆಗೆದುಕೊಂಡು ಬಾ; ನೀನಾಗಿ ತಂದುಕೊಟ್ಟರೆ ಊಟಮಾಡುತ್ತೇನೆ” ಎಂದು ಹೇಳಿದನು. ಆಗ ತಾಮಾರಳು ತಾನು ಮಾಡಿದ ಆಹಾರವನ್ನು ಅಣ್ಣನಾದ ಅಮ್ನೋನನಿದ್ದ ಕೋಣೆಗೆ ತೆಗೆದುಕೊಂಡು ಹೋಗಿ ಅವನ ಮುಂದಿಟ್ಟಳು.
11 Mutta kun hän tarjosi niitä tälle syödä, tarttui tämä häneen ja sanoi hänelle: "Tule, makaa minun kanssani, sisareni!"
೧೧ಕೂಡಲೆ ಅವನು ಆಕೆಯನ್ನು ಹಿಡಿದು “ನನ್ನ ತಂಗಿಯೇ ಬಂದು ನನ್ನ ಸಂಗಡ ಮಲಗಿಕೋ” ಎಂದನು.
12 Mutta hän sanoi: "Pois se, veljeni, älä tee minulle väkivaltaa; sillä semmoista ei saa tehdä Israelissa. Älä tee sellaista häpeällistä tekoa.
೧೨ಆಕೆಯು; “ಅಣ್ಣನೇ, ಬೇಡ, ನನ್ನನ್ನು ಅಪಮಾನಪಡಿಸಬೇಡ, ಇಸ್ರಾಯೇಲರಲ್ಲಿ ಇಂಥ ನೀಚಕಾರ್ಯವು ನಡೆಯಬಾರದು. ಇಂಥ ಅವಮಾನಕರವಾದ ಕೆಲಸವನ್ನು ಮಾಡಬೇಡ.
13 Mihin minä joutuisin häpeäni kanssa? Ja sinua pidettäisiin Israelissa houkkana. Puhu nyt kuninkaan kanssa; hän ei minua sinulta kiellä."
೧೩ಈ ಅಪಮಾನವನ್ನು ನಾನು ಮರೆಮಾಡುವುದಾದರೂ ಹೇಗೆ? ನಿನಗಂತೂ ಇಸ್ರಾಯೇಲರಲ್ಲಿ ನೀಚನೆಂಬ ಹೆಸರು ತಪ್ಪದು. ಆದುದರಿಂದ ದಯವಿಟ್ಟು ಅರಸನ ಸಂಗಡ ಮಾತನಾಡು. ಅವನು ನನ್ನನ್ನು ನಿನಗೆ ಕೊಡದಿರಲಾರನು” ಎಂದಳು.
14 Mutta tämä ei tahtonut kuulla häntä, vaan voitti hänet, teki hänelle väkivaltaa ja makasi hänet.
೧೪ಆದರೆ ಅವನು ಆಕೆಗಿಂತಲೂ ಬಲಶಾಲಿಯಾಗಿದ್ದರಿಂದ ಆಕೆಯ ಮಾತನ್ನು ಕೇಳದೆ ಬಲಾತ್ಕಾರದಿಂದ ಆಕೆಯನ್ನು ಕೆಡಿಸಿದನು.
15 Mutta sitten valtasi Amnonin ylen suuri vastenmielisyys häntä kohtaan: vastenmielisyys häntä kohtaan oli suurempi kuin rakkaus, jolla hän oli häntä rakastanut. Ja Amnon sanoi hänelle: "Nouse, mene tiehesi".
೧೫ಇದಾದ ಮೇಲೆ ಅವನಿಗೆ ಆಕೆಯ ಮೇಲೆ ದ್ವೇಷಹುಟ್ಟಿತು. ಅವಳ ಬಗ್ಗೆ ಇದ್ದ ಪ್ರೀತಿಗಿಂತ ಆಕೆಯ ಮೇಲಿನ ದ್ವೇಷವೇ ಹೆಚ್ಚಾಯಿತು.
16 Silloin hän sanoi hänelle: "Eikö tämä rikos, että ajat minut pois, ole vielä suurempi kuin se toinen, jonka olet minulle tehnyt?" Mutta hän ei tahtonut kuulla häntä,
೧೬ಅಮ್ನೋನನು ಆಕೆಗೆ, “ಎದ್ದು ಹೋಗು” ಎಂದು ಹೇಳಿದಾಗ ಆಕೆಯು, “ಹಾಗೆ ಮಾಡಬೇಡ, ನನ್ನನ್ನು ಹೊರಡಿಸಿಬಿಡುವುದು ನೀನು ಮಾಡಿದ ಮೊದಲನೆಯ ಅನ್ಯಾಯಕ್ಕಿಂತ ಹೆಚ್ಚಿನ ಅನ್ಯಾಯವಾಗಿದೆ” ಅಂದಳು.
17 vaan huusi nuoren miehen, joka häntä palveli, ja sanoi: "Ajakaa ulos minun luotani tämä, ja lukitse ovi hänen jälkeensä".
೧೭ಆದರೆ ಅವನು ಆಕೆಯ ಮಾತನ್ನು ಕೇಳದೆ, ಯಾವಾಗಲೂ ತನ್ನೊಂದಿಗೆ ಇರುತ್ತಿದ್ದ ಆಳನ್ನು ಕರೆದು ಅವನಿಗೆ, “ಇವಳನ್ನು ಹೊರಗೆ ತಳ್ಳಿ ಕದವನ್ನು ಮುಚ್ಚು” ಎಂದು ಆಜ್ಞಾಪಿಸಿದನು.
18 Ja tytöllä oli yllään pitkäliepeinen, hihallinen ihokas; sillä sellaisiin viittoihin olivat kuninkaan tyttäret puetut neitsyenä ollessaan. Ja kun palvelija oli vienyt hänet ulos ja lukinnut oven hänen jälkeensä,
೧೮ಆಕೆಯು ನಾನಾ ವರ್ಣವುಳ್ಳ ಒಂದು ನಿಲುವಂಗಿಯನ್ನು ಧರಿಸಿಕೊಂಡಿದ್ದಳು. ಕನ್ಯೆಯರಾದ ರಾಜಪುತ್ರಿಯರು ಇದೇ ತರಹದ ವಸ್ತ್ರಗಳನ್ನು ಹಾಕಿಕೊಳ್ಳುತ್ತಿದ್ದರು. ಆತನ ಸೇವಕರು ಆಕೆಯನ್ನು ಹೊರಗೆ ಕಳುಹಿಸಿ ಕದವನ್ನು ಮುಚ್ಚಿದನು.
19 sirotteli Taamar tuhkaa päähänsä ja repäisi pitkäliepeisen, hihallisen ihokkaan, joka hänellä oli yllänsä, pani kätensä päänsä päälle ja meni huutaen lakkaamatta.
೧೯ತಾಮಾರಳು ತಲೆಯ ಮೇಲೆ ಬೂದಿ ಹಾಕಿಕೊಂಡು ನಿಲುವಂಗಿಯನ್ನು ಹರಿದುಕೊಂಡು ಕೈಗಳನ್ನು ತಲೆಯ ಮೇಲಿಟ್ಟು ಗೋಳಾಡುತ್ತಾ ಹೋದಳು.
20 Hänen veljensä Absalom sanoi hänelle: "Onko veljesi Amnon ollut sinun kanssasi? Vaikene nyt, sisareni, onhan hän veljesi. Älä pane tätä asiaa niin sydämellesi." Niin Taamar jäi hyljättynä veljensä Absalomin taloon.
೨೦ಆಕೆಯ ಸಹೋದರನಾದ ಅಬ್ಷಾಲೋಮನು ಆಕೆಯನ್ನು ಕಂಡು, “ನಿನ್ನ ಅಣ್ಣನಾದ ಅಮ್ನೋನನು ನಿನ್ನನ್ನು ಸಂಗಮಿಸಿದನೋ? ತಂಗಿ, ಈಗ ಸುಮ್ಮನಿರು. ಅವನು ನಿನ್ನ ಅಣ್ಣನಲ್ಲವೋ? ಈ ಸಂಗತಿಯನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡ” ಎಂದು ಹೇಳಿದನು. ತಾಮಾರಳು ಒಂಟಿಯಾಗಿ ತನ್ನ ಅಣ್ಣನಾದ ಅಬ್ಷಾಲೋಮನ ಮನೆಯಲ್ಲೇ ವಾಸಮಾಡಿದಳು.
21 Kun kuningas Daavid kuuli kaiken tämän, vihastui hän kovin.
೨೧ಅರಸನಾದ ದಾವೀದನು ಈ ಸಂಗತಿಯನ್ನು ಕೇಳಿ ಬಹಳವಾಗಿ ಕೋಪಗೊಂಡನು.
22 Mutta Absalom ei puhunut Amnonille sanaakaan, ei pahaa eikä hyvää, sillä Absalom vihasi Amnonia, sentähden että tämä oli tehnyt väkivaltaa hänen sisarellensa Taamarille.
೨೨ಅಬ್ಷಾಲೋಮನು ಅಮ್ನೋನನ ಸಂಗಡ ಒಳ್ಳೆಯ ಮಾತುಗಳನ್ನಾಗಲಿ ಕೆಟ್ಟ ಮಾತುಗಳನ್ನಾಗಲಿ ಆಡಲಿಲ್ಲ. ತನ್ನ ತಂಗಿಯಾದ ತಾಮಾರಳನ್ನು ಕೆಡಿಸಿದ್ದಕ್ಕಾಗಿ ಅವನು ಅಮ್ನೋನನನ್ನು ದ್ವೇಷಿಸಿದನು.
23 Kahden vuoden kuluttua tapahtui, että Absalomilla oli lammasten keritsiäiset Baal-Haasorissa, joka on Efraimin luona. Ja Absalom kutsui sinne kaikki kuninkaan pojat.
೨೩ಎರಡು ವರ್ಷಗಳಾದ ನಂತರ ಅಬ್ಷಾಲೋಮನು ಒಂದು ದಿನ ಎಫ್ರಾಯೀಮಿನ ಬಳಿಯಲ್ಲಿರುವ ಬಾಳ್ ಹಾಚೋರಿನಲ್ಲಿ ಕುರಿಗಳ ಉಣ್ಣೆಯನ್ನು ಕತ್ತರಿಸುವಾಗ ಎಲ್ಲಾ ರಾಜಪುತ್ರರನ್ನು ಔತಣಕ್ಕೆ ಕರೆದನು.
24 Ja Absalom tuli kuninkaan tykö ja sanoi: "Katso, palvelijallasi on lammasten keritsiäiset; jospa kuningaskin palvelijoineen tulisi palvelijansa luo".
೨೪ಅವನು ಅರಸನ ಬಳಿಗೆ ಹೋಗಿ ಅವನನ್ನು, “ಸ್ವಾಮೀ, ನಿನ್ನ ಸೇವಕನು ಕುರಿಗಳ ಉಣ್ಣೆ ಕತ್ತರಿಸುವವರನ್ನು ಕರೆಸಿದ್ದಾನೆ. ಅರಸನು ತನ್ನ ಸೇವಕರೊಡನೆ ಅವನ ಬಳಿಗೆ ಬರಲಿ” ಎಂದು ಬೇಡಿಕೊಂಡನು.
25 Mutta kuningas vastasi Absalomille: "Ei niin, poikani, älkäämme tulko kaikki, ettemme olisi sinulle vaivaksi". Ja vaikka hän pyytämällä pyysi häntä, ei hän kuitenkaan tahtonut mennä, vaan hyvästeli hänet.
೨೫ಅರಸನು ಅವನಿಗೆ, “ಮಗನೇ ಬೇಡ ನಾವೆಲ್ಲರೂ ಬಂದರೆ ನಿನಗೆ ಭಾರವಾದೀತು” ಅನ್ನಲು ಅಬ್ಷಾಲೋಮನು ಅವನನ್ನು ಬಹಳವಾಗಿ ಒತ್ತಾಯಪಡಿಸಿದನು. ಆದರೂ ಅರಸನು ಹೋಗಲಿಲ್ಲ. ಅವನನ್ನು ಆಶೀರ್ವದಿಸಿದನು ಅಷ್ಟೇ.
26 Silloin Absalom sanoi: "Jollet itse tulekaan, salli kuitenkin veljeni Amnonin tulla meidän kanssamme". Kuningas sanoi hänelle: "Miksi juuri hänen olisi mentävä sinun kanssasi?"
೨೬ಆಗ ಅಬ್ಷಾಲೋಮನು, “ನೀನು ಬಾರದಿದ್ದರೆ ನನ್ನ ಅಣ್ಣನಾದ ಅಮ್ನೋನನನ್ನು ಕಳುಹಿಸು” ಅಂದನು. ಅದಕ್ಕೆ ಅರಸನು, “ಅವನೇಕೆ ನಿನ್ನ ಸಂಗಡ ಬರಬೇಕು?” ಎಂದು ಕೇಳಿದನು.
27 Mutta kun Absalom pyytämällä pyysi häntä, päästi hän Amnonin ja kaikki muut kuninkaan pojat menemään hänen kanssansa.
೨೭ಆದರೆ ಅಬ್ಷಾಲೋಮನು ಬಹಳವಾಗಿ ಒತ್ತಾಯಪಡಿಸಿದ್ದರಿಂದ ಅರಸನು ಅಮ್ನೋನನನ್ನೂ ತನ್ನ ಬೇರೆ ಎಲ್ಲಾ ಮಕ್ಕಳನ್ನು ಕಳುಹಿಸಿದನು.
28 Ja Absalom käski palvelijoitaan ja sanoi: "Pitäkää silmällä, milloin Amnonin sydän tulee iloiseksi viinistä, ja kun minä sanon teille: 'Surmatkaa Amnon', niin tappakaa hänet älkääkä peljätkö; sillä minähän olen teitä käskenyt. Olkaa lujat ja urhoolliset."
೨೮ಇದಕ್ಕೆ ಮೊದಲೇ ಅಬ್ಷಾಲೋಮನು ತನ್ನ ಆಳುಗಳಿಗೆ, “ಕೇಳಿರಿ, ಅಮ್ನೋನನು ದ್ರಾಕ್ಷಾರಸ ಕುಡಿದು ಮತ್ತನಾಗಿರುವಾಗ ನಾನು ಹೊಡೆಯಬೇಕೆಂದು ಹೇಳಿದ ಕೂಡಲೆ ಅವನನ್ನು ಹೊಡೆದು ಕೊಂದುಹಾಕಿರಿ. ಹೆದರಬೇಡಿರಿ, ನಿಮಗೆ ಆಜ್ಞಾಪಿಸಿದವನು ನಾನಲ್ಲವೇ? ಧೈರ್ಯದಿಂದಿರಿ ಮತ್ತು ಶೂರರಾಗಿರಿ” ಎಂದು ಹೇಳಿದನು.
29 Absalomin palvelijat tekivät Amnonille, niinkuin Absalom oli käskenyt. Silloin kaikki kuninkaan pojat nousivat, istuivat kukin muulinsa selkään ja pakenivat.
೨೯ಅಬ್ಷಾಲೋಮನ ಆಳುಗಳು ಅವನ ಆಜ್ಞೆಯಂತೆ ಅಮ್ನೋನನನ್ನು ಕೊಂದರು. ರಾಜಪುತ್ರರೆಲ್ಲರೂ ತಮ್ಮ ತಮ್ಮ ಹೇಸರಗತ್ತೆಗಳನ್ನು ಹತ್ತಿ ಓಡಿಹೋದರು.
30 Heidän vielä ollessaan matkalla tuli Daavidille sanoma: "Absalom on surmannut kaikki kuninkaan pojat, niin ettei heistä ole jäänyt jäljelle ainoatakaan".
೩೦ಅವರು ಇನ್ನೂ ಮಾರ್ಗದಲ್ಲಿರುವಾಗಲೇ ದಾವೀದನಿಗೆ, “ಅಬ್ಷಾಲೋಮನು ರಾಜಪುತ್ರರೆಲ್ಲರನ್ನು ಕೊಂದು ಹಾಕಿದನು ಒಬ್ಬನನ್ನೂ ಉಳಿಸಲಿಲ್ಲ” ಎಂಬ ಸುದ್ದಿ ಮುಟ್ಟಿತು.
31 Silloin kuningas nousi, repäisi vaatteensa ja paneutui maahan maata; ja kaikki hänen palvelijansa seisoivat siinä reväistyin vaattein.
೩೧ಆಗ ಅರಸನು ಎದ್ದು ತನ್ನ ಬಟ್ಟೆಗಳನ್ನು ಹರಿದುಕೊಂಡು ನೆಲದ ಮೇಲೆ ಬಿದ್ದನು. ಅವನ ಸೇವಕರೆಲ್ಲರೂ ತಮ್ಮ ತಮ್ಮ ಬಟ್ಟೆಗಳನ್ನು ಹರಿದುಕೊಂಡು ಅವನ ಹತ್ತಿರ ನಿಂತರು.
32 Niin Joonadab, Daavidin veljen Simean poika, puhkesi puhumaan ja sanoi: "Älköön herrani luulko, että kaikki nuoret miehet, kuninkaan pojat, ovat tapetut; ainoastaan Amnon on kuollut. Sillä ilme Absalomin kasvoilla on tiennyt pahaa siitä päivästä lähtien, jona Amnon teki väkivaltaa hänen sisarellensa Taamarille.
೩೨ಆಗ ದಾವೀದನ ಅಣ್ಣನಾದ ಶಿಮ್ಮನ ಮಗ ಯೋನಾದಾಬನು ದಾವೀದನಿಗೆ, “ರಾಜಪುತ್ರರೆಲ್ಲರನ್ನೂ ಕೊಂದು ಹಾಕಿದ್ದಾರೆಂದು ನನ್ನ ಒಡೆಯನು ನೆನಸದಿರಲಿ. ಅಮ್ನೋನನೊಬ್ಬನೇ ಸತ್ತಿರಬೇಕು. ಅವನು ಅಬ್ಷಾಲೋಮನ ತಂಗಿಯಾದ ತಾಮಾರಳನ್ನು ಕೆಡಿಸಿದ್ದಾಗಿನಿಂದ ಹೀಗಾಗುವುದೆಂದು ಅಬ್ಷಾಲೋಮನ ಮುಖದಿಂದಲೇ ತೋರುತ್ತಿತ್ತು.
33 Älköön siis herrani, kuningas, panko sydämelleen sitä puhetta, että muka kaikki kuninkaan pojat olisivat kuolleet; sillä ainoastaan Amnon on kuollut."
೩೩ಆದುದರಿಂದ ರಾಜಪುತ್ರರೆಲ್ಲರೂ ಸತ್ತರೆಂಬ ಸುದ್ದಿಗೆ ಅರಸನು ಲಕ್ಷ್ಯಕೊಡದಿರಲಿ. ಅಮ್ನೋನನೊಬ್ಬನೇ ಸತ್ತಿದ್ದಾನಷ್ಟೆ” ಎಂದು ಹೇಳಿ ಸಂತೈಸಿದನು.
34 Mutta Absalom pakeni. Kun palvelija, joka oli tähystäjänä, nosti silmänsä ja katseli, niin katso, paljon väkeä tuli tietä, joka oli hänen takanansa, vuoren kuvetta.
೩೪ಅಬ್ಷಾಲೋಮನು ತಪ್ಪಿಸಿಕೊಂಡು ಓಡಿಹೋದನು. ಅಷ್ಟರಲ್ಲಿ ದಾರಿನೋಡುತ್ತಿದ್ದ ಕಾವಲುಗಾರನು, ಒಂದು ದೊಡ್ಡ ಗುಂಪು ಹೋರೋನಿನ ಮಾರ್ಗವಾಗಿ ಗುಡ್ಡ ಇಳಿದು ಬರುವುದನ್ನು ಕಂಡನು.
35 Silloin Joonadab sanoi kuninkaalle: "Katso, kuninkaan pojat tulevat. On tapahtunut, niinkuin palvelijasi sanoi."
೩೫ಯೋನಾದಾಬನು ಅರಸನಿಗೆ, “ಇಗೋ ರಾಜಕುಮಾರರು ಬರುತ್ತಿದ್ದಾರೆ. ನಿನ್ನ ಸೇವಕನ ಮಾತಿನಂತೆಯೆ ಆಯಿತಲ್ಲವೋ?” ಎಂದು ಹೇಳಿ ಮುಗಿಸುವಷ್ಟರಲ್ಲಿ,
36 Juuri kun hän oli saanut sen sanotuksi, niin katso, kuninkaan pojat tulivat; ja he korottivat äänensä ja itkivät. Myöskin kuningas ja kaikki hänen palvelijansa itkivät hyvin katkerasti.
೩೬ರಾಜಕುಮಾರರು ಬಂದು ಗಟ್ಟಿಯಾಗಿ ಅತ್ತರು. ಅರಸನೂ ಅವನ ಸೇವಕರೂ ಬಹಳವಾಗಿ ಗೋಳಾಡಿದರು.
37 Mutta Absalom oli paennut ja mennyt Gesurin kuninkaan Talmain, Ammihudin pojan, luo. Ja Daavid suri poikaansa kaiken aikaa.
೩೭ದಾವೀದನು ತನ್ನ ಮಗನಿಗೋಸ್ಕರ ಪ್ರತಿದಿನವೂ ದುಃಖಪಡುತ್ತಿದ್ದನು.
38 Kun Absalom oli paennut ja tullut Gesuriin, jäi hän sinne kolmeksi vuodeksi.
೩೮ಅಬ್ಷಾಲೋಮನು ತಪ್ಪಿಸಿಕೊಂಡು ಗೆಷೂರಿಗೆ ಓಡಿಹೋಗಿ ಅಲ್ಲಿನ ಅರಸನೂ ಅಮ್ಮೀಹೂದನ ಮಗನೂ ಆದ ತಲ್ಮೈಯ ಬಳಿಯಲ್ಲಿ ಮೂರು ವರ್ಷ ಇದ್ದನು.
39 Ja kuningas Daavid ikävöi päästä Absalomin luo, sillä hän oli lohduttautunut Amnonin kuolemasta.
೩೯ಅರಸನಾದ ದಾವೀದನು ಅಮ್ನೋನನ ಮರಣದ ವಿಷಯವಾಗಿ ಆದರಣೆಹೊಂದಿ ತನ್ನ ಮಗನಾದ ಅಬ್ಷಾಲೋಮನನ್ನು ನೋಡುವುದಕ್ಕಾಗಿ ಬಹಳ ಆಸೆಪಟ್ಟನು.