< Markuksen 13 >
1 Ja kuin hän meni ulos templistä, sanoi yksi hänen opetuslapsistansa: Mestari! katso, minkäkaltaiset kivet ja minkäkaltaiset rakennukset ovat nämät.
೧ಯೇಸು ದೇವಾಲಯದಿಂದ ಹೊರಗೆ ಹೋಗುತ್ತಿದ್ದಾಗ ಆತನ ಶಿಷ್ಯರಲ್ಲಿ ಒಬ್ಬನು ಆತನಿಗೆ, “ಗುರುವೇ, ನೋಡು, ಎಂಥಾ ಅದ್ಭುತವಾದ ಕಲ್ಲುಗಳು! ಎಂಥಾ ಮಹಾಕಟ್ಟಡಗಳು!” ಎಂದು ಹೇಳಿದನು.
2 Ja Jesus vastaten sanoi hänelle: näetkös nämä suuret rakennukset? Ei näistä jätetä kiveä kiven päälle, jota ei maahan jaoteta.
೨ಯೇಸು, “ಈ ದೊಡ್ಡ ಕಟ್ಟಡಗಳನ್ನು ನೋಡುತ್ತೀಯಲ್ಲವೇ? ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯುವುದಿಲ್ಲ; ಎಲ್ಲವೂ ಕೆಡವಲ್ಪಡುವುದು” ಎಂದನು.
3 Ja kuin hän istui Öljymäellä, templin kohdalla, kysyivät häneltä erinänsä Pietari ja Jakob, ja Johannes ja Andreas:
೩ಬಳಿಕ ಆತನು ಎಣ್ಣೆ ಮರಗಳ ಗುಡ್ಡದ ಮೇಲೆ ದೇವಾಲಯಕ್ಕೆ ಎದುರಾಗಿ ಕುಳಿತುಕೊಂಡಿದ್ದಾಗ ಪೇತ್ರ, ಯಾಕೋಬ, ಯೋಹಾನ ಹಾಗೂ ಅಂದ್ರೆಯ,
4 Sano meille, koska nämä tapahtuvat? Ja mikä merkki on, koska nämät kaikki päätetään?
೪ಇವರು ಪ್ರತ್ಯೇಕವಾಗಿ ಆತನಿಗೆ, “ಇವೆಲ್ಲಾ ಯಾವಾಗ ಆಗುವವು? ಇವೆಲ್ಲವು ನೆರವೇರುವುದಕ್ಕೆ ಸೂಚನೆ ಏನು? ನಮಗೆ ಹೇಳು” ಎಂದು ಆತನನ್ನು ಕೇಳಿದರು.
5 Niin Jesus, vastaten heitä, rupesi sanomaan: katsokaat, ettei joku teitä petä.
೫ಯೇಸು ಅವರಿಗೆ ಹೇಳಿದ್ದೇನಂದರೆ, “ಯಾರೂ ನಿಮ್ಮನ್ನು ಮೋಸಗೊಳಿಸದಂತೆ ಎಚ್ಚರಿಕೆಯಾಗಿರಿ.
6 Sillä monta tulevat minun nimeeni, sanoen: minä olen, ja pettävät monta.
೬ಅನೇಕರು ಬಂದು ನನ್ನ ಹೆಸರನ್ನು ಹೇಳಿಕೊಂಡು, ‘ನಾನೇ ಕ್ರಿಸ್ತನು’ ಎಂದು ಹೇಳಿ ಎಷ್ಟೋ ಜನರನ್ನು ಮೋಸಗೊಳಿಸುವರು.
7 Mutta kuin te kuulette sotia ja sotain sanomia, niin älkäät hämmästykö; sillä ne pitää tapahtuman; vaan ei vielä loppu ole.
೭ಇದಲ್ಲದೆ ಯುದ್ಧಗಳಾಗುವುದನ್ನೂ, ಯುದ್ಧವಾಗುವ ಹಾಗಿದೆ ಎಂಬ ಸುದ್ದಿಗಳನ್ನೂ ನೀವು ಕೇಳುವಾಗ ಕಳವಳಪಡಬೇಡಿರಿ. ಹಾಗಾಗುವುದು ಅಗತ್ಯ. ಆದರೂ ಇದು ಇನ್ನೂ ಅಂತ್ಯಕಾಲವಲ್ಲ.
8 Sillä kansa pitää nouseman kansaa vastaan ja valtakunta valtakuntaa vastaan, ja maanjäristykset pitää oleman jokaisessa paikassa, ja tulee nälkä ja metelit.
೮ಜನಾಂಗಕ್ಕೆ ವಿರೋಧವಾಗಿ ಜನಾಂಗವೂ, ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು. ಮತ್ತು ನಾನಾ ಕಡೆಗಳಲ್ಲಿ ಭೂಕಂಪಗಳೂ, ಬರಗಾಲಗಳೂ, ಉಂಟಾಗುವವು. ಆದರೆ ಇವೆಲ್ಲಾ ಪ್ರಸವ ವೇದನೆಯ ಪ್ರಾರಂಭ ಮಾತ್ರ.
9 Nämät ovat murhetten alut. Mutta kavahtakaat itse teitänne; sillä he antavat ylön teidät raastupiin ja synagogiin. Ja te pieksetään ja johdatetaan päämiesten ja kuningasten eteen minun tähteni, heille todistukseksi.
೯“ಆದರೆ ನೀವು ನಿಮ್ಮ ವಿಷಯದಲ್ಲಿ ಎಚ್ಚರಿಕೆಯಾಗಿರಿ. ಜನರು ನಿಮ್ಮನ್ನು ನ್ಯಾಯವಿಚಾರಣೆಯ ಸಭೆಗಳಿಗೆ ಎಳೆದುಕೊಂಡು ಹೋಗುವರು. ಸಭಾಮಂದಿರಗಳಲ್ಲಿ ನಿಮ್ಮನ್ನು ಹೊಡೆಯುವರು, ನನ್ನ ನಿಮಿತ್ತವಾಗಿ ನಿಮ್ಮನ್ನು ಅಧಿಕಾರಿಗಳ ಮತ್ತು ಅರಸುಗಳ ಮುಂದೆ ಅವರಿಗೆ ಸಾಕ್ಷಿಗಳಾಗಿ ನಿಲ್ಲಿಸುವರು,
10 Ja ennen pitää saarnattaman evankeliumi kaikessa kansassa.
೧೦ಆದರೆ ಮೊದಲು ಎಲ್ಲಾ ಜನಾಂಗಗಳಿಗೆ ಸುವಾರ್ತೆಯು ಸಾರಲ್ಪಡಬೇಕು.
11 Kuin he niin teitä vievät ja antavat ylön, niin älkäät edellä murehtiko, mitä teidän puhuman pitää, älkäät myös ennen ajatelko: vaan mitä teille sillä hetkellä annetaan, se puhukaat; sillä ette te ole, jotka puhutte, vaan Pyhä Henki.
೧೧“ನಿಮ್ಮನ್ನು ಹಿಡಿದುಕೊಂಡು ಹೋಗಿ ಒಪ್ಪಿಸುವಾಗ ಏನು ಹೇಳಬೇಕು ಎಂದು ಮುಂಚಿತವಾಗಿಯೇ ಚಿಂತಿಸಬೇಡಿರಿ, ನೀವು ಏನು ಹೇಳಬೇಕೋ ಅದು ನಿಮಗೆ ಆ ಗಳಿಗೆಯಲ್ಲಿ ಕೊಡಲ್ಪಡುವುದು, ಏಕೆಂದರೆ ಮಾತನಾಡುವವರು ನೀವಲ್ಲ, ಆದರೆ ಪವಿತ್ರಾತ್ಮನೇ ನಿಮ್ಮ ಮೂಲಕವಾಗಿ ಮಾತನಾಡುವನು,
12 Niin on veli antava ylön veljensä kuolemaan, ja isä pojan; ja lapset nousevat vanhempia vastaan, ja antavat tappaa heitä.
೧೨ಇದಲ್ಲದೆ ಸಹೋದರನು ಸಹೋದರನನ್ನೂ, ತಂದೆಯು ಮಗನನ್ನೂ ಮರಣಕ್ಕೆ ಒಪ್ಪಿಸುವರು. ಮಕ್ಕಳು ಹೆತ್ತವರಿಗೆ ವಿರೋಧವಾಗಿ ಎದ್ದು ಅವರನ್ನು ಕೊಲ್ಲಿಸುವರು,
13 Ja tulette vihattavaksi kaikilta minun nimeni tähden; vaan joka vahvana pysyy loppuun asti, se tulee autuaaksi.
೧೩ಮತ್ತು ನನ್ನ ಹೆಸರಿನ ನಿಮಿತ್ತವಾಗಿ ಎಲ್ಲರೂ ನಿಮ್ಮನ್ನು ದ್ವೇಷಿಸುವರು, ಆದರೆ ಕೊನೆಯವರೆಗೂ ತಾಳುವವನೇ ರಕ್ಷಣೆ ಹೊಂದುವನು.”
14 Mutta kuin te saatte nähdä hävityksen kauhistuksen, josta Daniel prophetan kautta sanottu on, seisovan kussa ei pitäisi: (joka sen lukee, hän ymmärtäköön; ) silloin, jotka Juudeassa ovat, ne paetkaan vuorille.
೧೪“ಇದಲ್ಲದೆವಿನಾಶಕಾರಕ ಅಸಹ್ಯ ಮೂರ್ತಿಯು ನಿಲ್ಲಬಾರದ ಸ್ಥಳದಲ್ಲಿ ನಿಂತಿರುವುದನ್ನು ನೀವು ನೋಡುವಾಗ (ಇದನ್ನು ಓದುವವನು ತಿಳಿದುಕೊಳ್ಳಲಿ). ಯೂದಾಯದಲ್ಲಿ ಇರುವವರು ಬೆಟ್ಟಗಳಿಗೆ ಓಡಿಹೋಗಲಿ.
15 Ja joka katon päällä on, älköön astuko alas huoneeseen, ja älköön menkö sisälle jotakin ottamaan huoneestansa.
೧೫ಮಾಳಿಗೆಯ ಮೇಲಿದ್ದವನು ಕೆಳಗೆ ಇಳಿದು ಮನೆಯೊಳಕ್ಕೆ ಹೋಗದಿರಲಿ; ಮನೆಯೊಳಗಿಂದ ಏನನ್ನೂ ತೆಗೆದುಕೊಳ್ಳದಿರಲಿ.
16 Ja joka pellolla on, älköön palatko takaisin ottamaan vaatettansa.
೧೬ಹೊಲದಲ್ಲಿರುವವನು ತನ್ನ ಹೊದಿಕೆಯನ್ನು ತೆಗೆದುಕೊಳ್ಳುವುದಕ್ಕೆ ಹಿಂದಿರುಗಿ ಹೋಗದಿರಲಿ.
17 Voi raskaita vaimoja ja imettäväisiä niinä päivinä!
೧೭“ಆದರೆ ಆ ದಿನಗಳಲ್ಲಿ ಗರ್ಭಿಣಿಯರಿಗೂ, ಹಾಲು ಕುಡಿಸುವ ತಾಯಂದಿರಿಗೂ ಆಗುವ ಕಷ್ಟ ಎಷ್ಟೆಂದು ಹೇಳಲಿ!
18 Mutta rukoilkaat, ettei pakonne tapahtuisi talvella.
೧೮ಆ ದಿನಗಳುಸಂಕಟದ ದಿನಗಳಾಗಿರುವುದರಿಂದ ಇದೆಲ್ಲಾ ಚಳಿಗಾಲದಲ್ಲಿ ಆಗಬಾರದೆಂದು ಪ್ರಾರ್ಥನೆ ಮಾಡಿರಿ.
19 Sillä niinä aikoina pitää oleman senkaltainen vaiva, jonka kaltaista ei ole ollut luomisen alusta, kuin Jumala luonut on, niin tähän asti, eikä tuleman pidä.
೧೯ಅಂಥ ಸಂಕಟವು ದೇವರು ಜಗತ್ತನ್ನು ಸೃಷ್ಟಿಸಿದ ದಿನದಿಂದ ಮೊದಲುಗೊಂಡು ಈ ದಿನದವರೆಗೂ ಆಗಲಿಲ್ಲ; ಇನ್ನು ಮುಂದೆ ಆಗುವುದೂ ಇಲ್ಲ.
20 Ja ellei Herra olisi lyhentänyt niitä päiviä, niin ei yksikään liha tulisi autuaaksi; mutta valittujen tähden, jotka hän on valinnut, lyhensi hän ne päivät.
೨೦ಕರ್ತನು ಆ ದಿನಗಳನ್ನು ಕಡಿಮೆ ಮಾಡದಿದ್ದರೆ ಒಂದು ನರಪ್ರಾಣಿಯಾದರೂ ಉಳಿಯುವುದಿಲ್ಲ. ಆದರೆ ತಾನು ಆರಿಸಿಕೊಂಡವರಿಗಾಗಿ ಆ ದಿನಗಳನ್ನು ಕಡಿಮೆ ಮಾಡಿದ್ದಾನೆ.
21 Ja silloin, jos joku sanoo teille: katso, tässä on Kristus, taikka: katso, siellä; niin älkäät uskoko.
೨೧“ಆಗ ಯಾರಾದರೂ ನಿಮಗೆ, ಇಗೋ, ಕ್ರಿಸ್ತನು ಇಲ್ಲಿದ್ದಾನೆ! ಅಗೋ, ಆತನು ಅಲ್ಲಿದ್ದಾನೆ! ಎಂದು ಹೇಳಿದರೆ ನಂಬಬೇಡಿರಿ.
22 Sillä väärät Kristukset ja väärät prophetat nousevat, ja merkkejä ja ihmeitä tekevät, pettääksensä, jos mahdollinen olis, valituitakin.
೨೨ಏಕೆಂದರೆ ಸುಳ್ಳು ಕ್ರಿಸ್ತರೂ, ಸುಳ್ಳುಪ್ರವಾದಿಗಳೂ ಎದ್ದು ಸಾಧ್ಯವಾದರೆ ದೇವರು ಆರಿಸಿಕೊಂಡವರನ್ನು ಮೋಸಗೊಳಿಸುವುದಕ್ಕೋಸ್ಕರ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿ ತೋರಿಸುವರು.
23 Mutta te kavahtakaat: katso, minä olen teille kaikki ennen sanonut.
೨೩ನೀವಂತೂ ಜಾಗರೂಕರಾಗಿರಿ. ನಾನು ನಿಮಗೆ ಎಲ್ಲವುಗಳನ್ನು ಮುಂದಾಗಿಯೇ” ಹೇಳಿದ್ದೇನೆ.
24 Mutta niinä päivinä, sen vaivan jälkeen, pitää auringon pimenemän ja kuu ei anna valoansa.
೨೪ಇದಲ್ಲದೆ ಆ ದಿನಗಳ ಸಂಕಟವು ತೀರಿದ ನಂತರ; “‘ಸೂರ್ಯನು ಕತ್ತಲಾಗಿ ಹೋಗುವನು.
25 Ja taivaan tähdet pitää putooman, ja taivasten voimat pitää liikutettaman.
೨೫ಚಂದ್ರನು ತನ್ನ ಬೆಳಕು ಕೊಡದೆ ಇರುವನು. ನಕ್ಷತ್ರಗಳು ಆಕಾಶದಿಂದ ಬೀಳುವವು. ಮತ್ತು ಪರಲೋಕದಲ್ಲಿ ಶಕ್ತಿಗಳು ಕದಲುವವು.’
26 Ja silloin heidän pitää näkemän Ihmisen Pojan tulevan pilvissä suurella voimalla ja kunnialla.
೨೬ಆಗಮನುಷ್ಯಕುಮಾರನು ಮಹಾಬಲದಿಂದಲೂ ಮಹಿಮೆಯಿಂದಲೂ ಮೇಘಗಳಲ್ಲಿ ಬರುವುದನ್ನು ಅವರು ನೋಡುವರು.
27 Ja silloin hän lähettää enkelinsä, ja kokoo valittunsa neljästä tuulesta, hamasta maan äärestä niin taivaan ääreen asti.
೨೭ಮತ್ತು ಆತನು ತನ್ನ ದೂತರನ್ನು ಕಳುಹಿಸಿ ಭೂಮಿಯ ಕಟ್ಟಕಡೆಯಿಂದ ಆಕಾಶದ ಕಟ್ಟಕಡೆಯವರೆಗೆ ತಾನು ಆರಿಸಿಕೊಂಡವರನ್ನು ನಾಲ್ಕುದಿಕ್ಕುಗಳಿಂದ ಒಟ್ಟುಗೂಡಿಸುವನು.”
28 Mutta fikunapuusta oppikaat vertaus: kuin sen oksa on tuores ja lehdet puhkeavat, niin te tiedätte, että suvi on läsnä.
೨೮“ಅಂಜೂರ ಮರವನ್ನು ನೋಡಿ ಒಂದು ಪಾಠವನ್ನು ಕಲಿತುಕೊಳ್ಳಿ. ಅದರ ಕೊಂಬೆಗಳಲ್ಲಿ ಇನ್ನೂ ಎಳೆದಾಗಿ ಎಲೆಗಳು ಚಿಗುರುವಾಗ ಬೇಸಿಗೆಯು ಸಮೀಪಿಸಿತು ಎಂದು ಅರಿತುಕೊಳ್ಳುತ್ತಿರಲ್ಲಾ.
29 Niin myös te, kuin te nämät näette tapahtuvan, niin tietäkäät, että se on läsnä oven edessä.
೨೯ಹಾಗೆಯೇ ಇವೆಲ್ಲವೂ ಆಗುವುದನ್ನು ನೀವು ನೋಡುವಾಗ ಬಾಗಿಲ ಹತ್ತಿರದಲ್ಲಿಯೇ ಇದ್ದೆ ಎಂದು ತಿಳಿದುಕೊಳ್ಳಿರಿ.
30 Totisesti sanon minä teille: ei suinkaan tämän sukukunnan pidä hukkuman ennen kuin kaikki nämät tapahtuvat.
೩೦ಇದೆಲ್ಲವೂ ನೆರವೇರುವವರೆಗೂ ಈ ಸಂತತಿಯು ಅಳಿದು ಹೋಗುವುದೇ ಇಲ್ಲವೆಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ.
31 Taivas ja maa pitää hukkuman; mutta minun sanani ei pidä suinkaan hukkuman.
೩೧ಆಕಾಶವೂ, ಭೂಮಿಯೂ ಅಳಿದು ಹೋಗುವವು; ಆದರೆ ನನ್ನ ವಾಕ್ಯವು ಅಳಿದು ಹೋಗುವುದೇ ಇಲ್ಲ.”
32 Mutta siitä päivästä ja hetkestä ei tiedä kenkään, ei enkelitkään, jotka ovat taivaassa, ei Poikakaan, vaan Isä.
೩೨“ಇದಲ್ಲದೆ ಆ ದಿನದ ಮತ್ತು ಆ ಗಳಿಗೆಯ ವಿಷಯವಾಗಿ ನನ್ನ ತಂದೆಗೆ ಹೊರತು ಮತ್ತಾರಿಗೂ ತಿಳಿಯದು, ಪರಲೋಕದಲ್ಲಿರುವ ದೂತರಿಗಾಗಲಿ, ಮಗನಿಗಾಗಲಿ ತಿಳಿಯದು.
33 Kavahtakaat, valvokaat ja rukoilkaat, sillä ette tiedä, koska se aika tulee.
೩೩ಆ ಕಾಲವು ಯಾವಾಗ ಬರುವುದು ಎಂದು ನಿಮಗೆ ತಿಳಿಯದೆ ಇರುವುದರಿಂದ ನೀವುಎಚ್ಚರವಾಗಿರಿ, ಜಾಗರೂಕರಾಗಿರಿ.
34 Niinkuin ihminen, joka muille maille vaelsi, jätti huoneensa ja antoi palveliainsa haltuun, ja kullekin hänen askareensa, ja käski ovenvartiain valvoa;
೩೪ಅದುಒಬ್ಬ ಮನುಷ್ಯನು ತನ್ನ ಮನೆಯನ್ನು ಬಿಟ್ಟು ದೂರಪ್ರಯಾಣಕ್ಕೆ ಹೋಗುವಾಗ ತನ್ನ ಸೇವಕರಿಗೆ ಮನೇ ಅಧಿಕಾರವನ್ನು ಒಪ್ಪಿಸಿಕೊಟ್ಟು ಪ್ರತಿಯೊಬ್ಬನಿಗೆ ಅವನವನ ಕೆಲಸಗಳನ್ನು ಕೊಟ್ಟು ಬಾಗಿಲು ಕಾಯುವವನಿಗೆ, ನೀನು ಜಾಗರೂಕನಾಗಿರಬೇಕೆಂದು ಆಜ್ಞಾಪಿಸಿದವನ ಹಾಗೆ ಇರುತ್ತದೆ” ಎಂದು ನಾನು ನಿಮಗೆ ಹೇಳುತ್ತಿದ್ದೇನೆ.
35 Niin valvokaat siis: (sillä ette tiedä, koska huoneen Herra tuleva on, ehtoona, taikka puoliyönä, eli kukon laulaissa, eli aamulla: )
೩೫“ಮನೆ ಯಜಮಾನನು ಸಂಜೆಯಲ್ಲಿಯೋ, ಮಧ್ಯರಾತ್ರಿಯಲ್ಲಿಯೋ, ಕೋಳಿ ಕೂಗುವಾಗಲೋ ಬೆಳಕಾಗುವಾಗಲೋ ಯಾವಾಗ ಬರುತ್ತಾನೋ ನಿಮಗೆ ಗೊತ್ತಿಲ್ಲದ ಕಾರಣ ಎಚ್ಚರವಾಗಿರಿ!
36 Ettei hän äkisti tullessansa löytäisi teitä makaamasta.
೩೬ಆತನು ಫಕ್ಕನೆ ಬಂದು ನೀವು ನಿದ್ರೆ ಮಾಡುತ್ತಿರುವುದನ್ನು ಕಂಡಾನು.
37 Mutta mitä minä teille sanoin, sen minä kaikille sanon: valvokaat!
೩೭ನಾನು ನಿಮಗೆ ಹೇಳುತ್ತಿರುವುದನ್ನು ಎಲ್ಲರಿಗೂ ಹೇಳುತ್ತಿದ್ದೇನೆ; ಎಚ್ಚರವಾಗಿರಿ!” ಎಂದನು.