< Fiawo 2 6 >
1 Gbe ɖeka la, nyagblɔɖilawo ƒe nusrɔ̃lawo ƒe ha gblɔ na Elisa be, “Kpɔ ɖa, teƒe si míewɔa takpekpe kpli wò le la le sue na mí akpa.
ಪ್ರವಾದಿಗಳ ಮಂಡಳಿಯು ಎಲೀಷನಿಗೆ, “ಇಗೋ, ಈಗ ನಾವು ನಿನ್ನ ಸಂಗಡ ವಾಸವಾಗಿರುವ ಸ್ಥಳವು ನಮಗೆ ಇಕ್ಕಟ್ಟಾಗಿದೆ. ಅಪ್ಪಣೆಕೊಡು,
2 Na míayi Yɔdan tɔsisi la to, ale be mía dometɔ ɖe sia ɖe natso ati eye míatsɔe atso teƒe aɖe si míanɔ.” Elisa gblɔ na wo be, “Miyi! Enyo, miate ŋu atu xɔ la faa.”
ನಾವು ಯೊರ್ದನಿನವರೆಗೂ ಹೋಗಿ, ಪ್ರತಿ ಮನುಷ್ಯನು ಅಲ್ಲಿಂದ ಒಂದೊಂದು ತೊಲೆಯನ್ನು ತೆಗೆದುಕೊಂಡು ಬಂದು, ವಾಸವಾಗಿರುವುದಕ್ಕೆ ನಮಗೋಸ್ಕರ ಒಂದು ಸ್ಥಳವನ್ನು ಅಲ್ಲಿ ಮಾಡುವೆವು,” ಎಂದರು. ಅವನು, “ಹೋಗಿರಿ,” ಎಂದನು.
3 Nusrɔ̃lawo dometɔ ɖeka gblɔ be, “Míeɖe kuku kplɔ mí yi teƒea.” Elisa lɔ̃ hegblɔ be, “Mayi!”
ಆಗ ಅವರಲ್ಲಿ ಒಬ್ಬನು ಎಲೀಷನಿಗೆ, “ನೀವು ದಯಮಾಡಿ ನಿಮ್ಮ ಸೇವಕರ ಸಂಗಡ ಬರುವಿರಾ?” ಎಂದನು. ಅದಕ್ಕವನು, “ನಾನು ಬರುತ್ತೇನೆ,” ಎಂದನು.
4 Ke eyi kpli wo. Woɖo Yɔdan tɔsisi la to eye wode asi atiawo tsotso me.
ಹಾಗೆಯೇ ಅವನು ಅವರ ಸಂಗಡ ಹೋದನು. ಅವರು ಯೊರ್ದನ್ ನದಿಯ ಕಡೆಗೆ ಬಂದು ಅಲ್ಲಿ ಮರಗಳನ್ನು ಕಡಿದರು.
5 Esi nusrɔ̃lawo dometɔ ɖeka nɔ ati aɖe tsom la, eƒe fia do le fiati la me eye wòge ɖe tɔsisi la me. Nusrɔ̃la la do ɣli enumake be, “Oo, nye aƒetɔ, ɖe meɣe fia la hafi!”
ಆದರೆ ಒಬ್ಬನು ಮರವನ್ನು ಬೀಳಿಸುವಾಗ ಕೊಡಲಿಯು ನೀರಿನೊಳಕ್ಕೆ ಬಿತ್ತು. ಆಗ ಅವನು, “ಅಯ್ಯೋ! ಯಜಮಾನನೇ, ನಾನು ಅದನ್ನು ಸಾಲವಾಗಿ ತೆಗೆದುಕೊಂಡದ್ದು,” ಎಂದು ಕೂಗಿ ಹೇಳಿದನು.
6 Nyagblɔɖila la biae be, “Afi ka fia la ge ɖo?” Nusrɔ̃la la fia teƒe lae. Elisa lã ati aɖe da ɖe teƒea le tsia me eye fia la ho ɖe tsi la ŋgɔ enumake!
ದೇವರ ಮನುಷ್ಯನು, “ಅದು ಎಲ್ಲಿ ಬಿತ್ತು?” ಎಂದನು. ಅವನು ಎಲೀಷನಿಗೆ ಸ್ಥಳವನ್ನು ತೋರಿಸಿದ ತರುವಾಯ, ಎಲೀಷನು ಒಂದು ಕಟ್ಟಿಗೆಯನ್ನು ಕಡಿದು ಅಲ್ಲಿ ಹಾಕಿದ್ದರಿಂದ ಆ ಕಬ್ಬಿಣವು ತೇಲಿತು.
7 Elisa gblɔ nɛ be wòalée eye wòlée.
ಪ್ರವಾದಿಯು, “ನೀನು ತೆಗೆದುಕೋ,” ಎಂದನು. ಹಾಗೆಯೇ ಅವನು ತನ್ನ ಕೈಯನ್ನು ಚಾಚಿ ಅದನ್ನು ತೆಗೆದುಕೊಂಡನು.
8 Gbe ɖeka esime Siria nɔ aʋa wɔm kple Israel la, Siria fia gblɔ na eƒe aʋakplɔlawo be, “Míaƒu asaɖa anyi ɖe teƒe aɖe.” Eyɔ teƒe la ŋkɔ na wo.
ಅರಾಮ್ಯರ ಅರಸನು ಇಸ್ರಾಯೇಲಿನ ಮೇಲೆ ಯುದ್ಧ ಮಾಡುತ್ತಿದ್ದನು. ಇಂಥಿಂಥ ಸ್ಥಳದಲ್ಲಿ ತನ್ನ ದಂಡು ಇಳಿಯಬೇಕೆಂದು ತನ್ನ ಸೇವಕರ ಸಂಗಡ ಯೋಚನೆ ಮಾಡಿಕೊಂಡನು.
9 Elisa gblɔ na Israel fia enumake be, “Mègate ɖe teƒe sia ŋu o, elabena Siriatɔwo ɖo be yewoaƒu asaɖa anyi ɖe afi ma!”
ಆಗ ದೇವರ ಮನುಷ್ಯನು ಇಸ್ರಾಯೇಲಿನ ಅರಸನಿಗೆ, “ಅಂಥಾ ಸ್ಥಳವನ್ನು ಹಾದುಹೋಗದೆ ಜಾಗ್ರತೆಯಾಗಿ ಇರು. ಏಕೆಂದರೆ ಅರಾಮ್ಯರು ಅಲ್ಲಿಗೆ ಇಳಿದು ಬಂದಿದ್ದಾರೆ,” ಎಂದು ಹೇಳಿ ಕಳುಹಿಸಿದನು.
10 Ale Israel fia la dɔ amewo ɖa be woayi aɖakpɔ teƒe si Mawu ƒe ame la fia. Elisa xlɔ̃ nu Israel fia enuenu tso nu siawo ƒomevi ŋuti ale wònɔa ŋudzɔ ɖe teƒe mawo ŋuti.
ಹೀಗೆಯೇ ದೇವರ ಮನುಷ್ಯನು ತನ್ನನ್ನು ಎಚ್ಚರಿಸಿ, ತನಗೆ ಹೇಳಿದ ಸ್ಥಳಕ್ಕೆ ಇಸ್ರಾಯೇಲಿನ ಅರಸನು ಹೇಳಿ ಕಳುಹಿಸಿ, ತನ್ನ ಸೈನ್ಯವನ್ನು ಕರೆಯಿಸಿಕೊಂಡನು. ಹೀಗೆ ಅವನು ಹಲವು ಸಾರಿ ತಪ್ಪಿಸಿಕೊಂಡನು.
11 Nu sia wɔ nuku na Siria fia la. Eyɔ eƒe aʋafiawo ƒo ƒu eye wòbia wo be, “Mia dometɔ kae nye ameyomemɔfiala sia? Mia dometɔ kae le nye ɖoɖowo gblɔm na Israel Fia la?”
ಆದ್ದರಿಂದ ಅರಾಮ್ಯರ ಅರಸನ ಹೃದಯವು ಇದರ ನಿಮಿತ್ತ ಕಳವಳಗೊಂಡು, ಅವನು ತನ್ನ ಸೇವಕರನ್ನು ಕರೆದು ಅವರಿಗೆ, “ನಮ್ಮಲ್ಲಿ ಇಸ್ರಾಯೇಲಿನ ಅರಸನ ಕಡೆಯವನು ಯಾರು? ನೀವು ನನಗೆ ತಿಳಿಸುವುದಿಲ್ಲವೋ?” ಎಂದನು.
12 Aʋakplɔlawo dometɔ ɖeka ɖo eŋu be, “Nye aƒetɔ fia bubutɔ, menye míawoe o, Elisa, nyagblɔɖila la gblɔa nya si nègblɔ le bebeme le wò xɔ gã me la na Israel fia la!”
ಅವನ ಸೇವಕರಲ್ಲಿ ಒಬ್ಬನು, “ನನ್ನ ಒಡೆಯನೇ, ಅರಸನೇ, ಯಾವನೂ ಇಲ್ಲ. ಆದರೆ ಇಸ್ರಾಯೇಲಿನಲ್ಲಿರುವ ಪ್ರವಾದಿಯಾದ ಎಲೀಷನು ನಿನ್ನ ಮಲಗುವ ಕೋಣೆಯಲ್ಲಿ ನೀನು ಹೇಳುವ ಮಾತುಗಳನ್ನು ಸಹ ಇಸ್ರಾಯೇಲಿನ ಅರಸನಿಗೆ ಹೇಳುತ್ತಾನೆ,” ಎಂದನು.
13 Fia la ɖe gbe be, “Miyi miakpɔ afi si wòle ekema míaɖo asrafowo ɖa woayi aɖalée.” Woyi gbɔ va gblɔ na fia la be, “Elisa le Dotan!”
ಆಗ ಅರಾಮ್ಯರ ಅರಸನು, “ನಾನು ಅವನನ್ನು ಹಿಡಿಯುವ ಹಾಗೆ ನೀವು ಹೋಗಿ ಅವನು ಎಲ್ಲಿದ್ದಾನೋ ನೋಡಿರಿ,” ಎಂದನು. ಅವನು ದೋತಾನಿನಲ್ಲಿದ್ದಾನೆಂದು ಅವನಿಗೆ ತಿಳಿಸಿದರು.
14 Ale le zã aɖe me la, Siria fia ɖo aʋakɔ gã aɖe kple tasiaɖamwo kple sɔ geɖewo ɖa be woaɖe to ɖe du la.
ಆದ್ದರಿಂದ ಅರಾಮ್ಯರ ಅರಸನು ಅಲ್ಲಿಗೆ ಕುದುರೆಗಳನ್ನೂ ರಥಗಳನ್ನೂ ಮಹಾಸೈನ್ಯವನ್ನೂ ಕಳುಹಿಸಿದನು. ಅವರು ರಾತ್ರಿಯಲ್ಲಿ ಬಂದು ಪಟ್ಟಣವನ್ನು ಸುತ್ತಿಕೊಂಡರು.
15 Esi nyagblɔɖila la ƒe subɔla fɔ ŋdi kanya eye wòdo ɖe xexe ko la, ekpɔ aʋawɔlawo, tasiaɖamwo kple sɔwo le afi sia afi. Edo ɣli bia Elisa be, “Aléle! Nye aƒetɔ, nu ka míawɔ fifia?”
ದೇವರ ಮನುಷ್ಯನ ಸೇವಕನು ಉದಯದಲ್ಲಿ ಎದ್ದು ಹೊರಗೆ ಹೊರಟಾಗ, ಕುದುರೆಗಳೂ ರಥಗಳೂ ಉಳ್ಳ ಸೈನ್ಯ ಪಟ್ಟಣವನ್ನು ಸುತ್ತಿಕೊಂಡಿರುವುದನ್ನು ಕಂಡು ಎಲೀಷನಿಗೆ, “ಅಯ್ಯೋ! ನನ್ನ ಯಜಮಾನನೇ, ನಾವು ಏನು ಮಾಡುವುದು?” ಎಂದನು.
16 Elisa gblɔ nɛ be, “Mègavɔ̃ o! Elabena míaƒe aʋakɔ sɔ gbɔ, eye wòtri akɔ wu wo tɔ!”
ಆದರೆ ಪ್ರವಾದಿಯು, “ಭಯಪಡಬೇಡ. ಅವರ ಸಂಗಡ ಇರುವವರಿಗಿಂತ ನಮ್ಮ ಕಡೆ ಇರುವವರು ಹೆಚ್ಚಾಗಿದ್ದಾರೆ,” ಎಂದನು.
17 Tete Elisa do gbe ɖa be, “Yehowa, ʋu nye subɔla ƒe ŋkuwo ne wòakpɔ nu!” Yehowa ʋu ɖekakpui la ƒe ŋkuwo eye wòte ŋu kpɔ dzosɔwo kple dzotasiaɖamwo le afi sia afi, le toa dzi.
ಆಗ ಎಲೀಷನು, “ಯೆಹೋವ ದೇವರೇ, ನೀವು ದಯಮಾಡಿ ಇವನು ಕಾಣುವ ಹಾಗೆ ಇವನ ಕಣ್ಣುಗಳನ್ನು ತೆರೆಯಿರಿ,” ಎಂದು ಪ್ರಾರ್ಥಿಸಿದನು. ಯೆಹೋವ ದೇವರು ಆ ಯುವ ಸೇವಕನ ಕಣ್ಣುಗಳನ್ನು ತೆರೆದಾಗ, ಎಲೀಷನ ಸುತ್ತಲೂ ಬೆಟ್ಟದಲ್ಲಿ ಬೆಂಕಿಯ ರಥಗಳೂ, ಕುದುರೆಗಳೂ ತುಂಬಿರುವುದನ್ನು ಅವನು ಕಂಡನು.
18 Esi Siriatɔwo ƒe aʋakɔ la lũ ɖe wo dzi la, Elisa do gbe ɖa be, “Yehowa, na woƒe ŋkuwo dzi natsyɔ.” Eye wòva eme nenema.
ಶತ್ರುಗಳು ಸಮೀಪಕ್ಕೆ ಬಂದಾಗ ಎಲೀಷನು, “ಯೆಹೋವ ದೇವರೇ, ನೀವು ದಯಮಾಡಿ ಈ ಜನರನ್ನು ಕುರುಡರನ್ನಾಗಿ ಮಾಡಿರಿ,” ಎಂದು ಪ್ರಾರ್ಥಿಸಿದನು. ಎಲೀಷನ ಮಾತಿನ ಹಾಗೆಯೇ ದೇವರು ಅವರನ್ನು ಕುರುಡರನ್ನಾಗಿ ಮಾಡಿದರು.
19 Elisa yi ɖagblɔ na wo be, “Menye du si me yim miele hafi lae nye esia o. Du bubu mee mieva ɖo! Midze yonyeme eye makplɔ mi ayi ame si dim miele la gbɔ.” Ale Elisa kplɔ Siriatɔwo ƒe aʋakɔ blibo la yi Samaria!
ಆಗ ಎಲೀಷನು ಅವರಿಗೆ, “ಇದು ಆ ಮಾರ್ಗವಲ್ಲ, ಇದು ಆ ಪಟ್ಟಣವಲ್ಲ, ನನ್ನ ಹಿಂದೆ ಬನ್ನಿರಿ. ನೀವು ಹುಡುಕುವ ಮನುಷ್ಯರ ಬಳಿಗೆ ನಿಮ್ಮನ್ನು ಬರಮಾಡುವೆನು,” ಎಂದು ಹೇಳಿ ಅವರನ್ನು ಸಮಾರ್ಯಕ್ಕೆ ನಡೆಸಿದನು.
20 Esi woɖo Samaria la, Elisa do gbe ɖa be, “Yehowa, ʋu woƒe ŋkuwo azɔ ale be woakpɔ nu.” Yehowa wɔ nu si Elisa bia eye Siria ƒe aʋawɔlawo dze sii be yewole Samaria, le Israel ƒe fiadu la me!
ಅವರು ಸಮಾರ್ಯಕ್ಕೆ ಬಂದಾಗ, ಎಲೀಷನು, “ಯೆಹೋವ ದೇವರೇ, ಇವರು ಕಾಣುವಂತೆ ಇವರ ಕಣ್ಣುಗಳನ್ನು ತೆರೆಯಿರಿ,” ಎಂದನು. ಆಗ ಯೆಹೋವ ದೇವರು ಅವರ ಕಣ್ಣುಗಳನ್ನು ತೆರೆದರು. ಅವರು ನೋಡಿದಾಗ ಸಮಾರ್ಯದ ಮಧ್ಯದಲ್ಲಿದ್ದರು.
21 Esi Israel fia kpɔ wo la, edo ɣli bia Elisa be, “Fofonye, ɖe mawu woa? Mawu woa?”
ಇಸ್ರಾಯೇಲಿನ ಅರಸನು ಅವರನ್ನು ಕಂಡಾಗ ಎಲೀಷನಿಗೆ, “ನನ್ನ ತಂದೆಯೇ, ನಾನು ಸಂಹರಿಸಲೋ, ಸಂಹರಿಸಲೋ?” ಎಂದನು.
22 Elisa ɖo eŋu be, “Kura o! Ɖe míewua ame siwo míelé le aʋa mea? Na nuɖuɖu kple nunono wo eye nàtrɔ wo ɖo ɖe wo de le woƒe amegã gbɔ.”
ಅದಕ್ಕವನು, “ಸಂಹರಿಸಬೇಡ. ನೀನು ನಿನ್ನ ಖಡ್ಗದಿಂದಲೂ ನಿನ್ನ ಬಿಲ್ಲಿನಿಂದಲೂ ಸೆರೆಯಾಗಿ ತೆಗೆದುಕೊಳ್ಳದವರನ್ನು ಹೊಡೆಯುತ್ತೀಯೋ? ರೊಟ್ಟಿಯನ್ನೂ, ನೀರನ್ನೂ ಇವರ ಮುಂದೆ ಇಡು. ಅವರು ತಿಂದು ಕುಡಿದು ತಮ್ಮ ಯಜಮಾನನ ಬಳಿಗೆ ಹೋಗಲಿ,” ಎಂದನು.
23 Ale Israel fia la ɖo kplɔ̃ gã aɖe na Siriatɔwo ƒe aʋakɔ la eye esi woɖu nu, no nu vɔ la, eɖo wo ɖe aƒe eye wotrɔ yi ɖe woƒe amegã gbɔ. Tso gbe ma gbe dzi la, Siria ƒe adzohawo megadoa ta ɖe Israelnyigba dzi o.
ಆಗ ಅವರಿಗೋಸ್ಕರ ದೊಡ್ಡ ಔತಣ ಮಾಡಿಸಿದನು. ಅವರು ತಿಂದು ಕುಡಿದ ತರುವಾಯ ಅವರನ್ನು ಕಳುಹಿಸಿಬಿಟ್ಟನು. ಅವರು ತಮ್ಮ ಯಜಮಾನನ ಬಳಿಗೆ ಹೋದರು. ಅರಾಮ್ಯರ ದಂಡುಗಳು ಇಸ್ರಾಯೇಲ್ ದೇಶದ ಮೇಲೆ ಮತ್ತೆ ದಾಳಿಮಾಡಲಿಲ್ಲ.
24 Ke emegbe la, Siria fia Ben Hadad ƒo eƒe aʋakɔ blibo la nu ƒu eye wòɖe to ɖe Samaria.
ಸ್ವಲ್ಪ ಸಮಯದ ನಂತರ, ಅರಾಮಿನ ಅರಸ ಬೆನ್ಹದದನು ತನ್ನ ಸಮಸ್ತ ಸೈನ್ಯವನ್ನು ಕೂಡಿಸಿಕೊಂಡು ಹೊರಟುಹೋಗಿ, ಸಮಾರ್ಯವನ್ನು ಮುತ್ತಿಗೆಹಾಕಿದನು.
25 Nu sia na dɔ to le Samaria du la me. Esi dɔwuame sia nɔ anyi ɣeyiɣi didi aɖe ta la, tedzi ƒe ta xɔ klosaloga blaenyi eye sabala kpo ɖeka gɔ̃ hã xɔ klosaloga atɔ̃.
ಆಗ ಸಮಾರ್ಯದಲ್ಲಿ ದೊಡ್ಡ ಬರವಿತ್ತು. ಒಂದು ಕತ್ತೆಯ ತಲೆಯು ಎಂಬತ್ತು ಶೆಕೆಲ್ ಬೆಳ್ಳಿಗೆ, ಸುಮಾರು ನೂರು ಗ್ರಾಂ ಪಾರಿವಾಳದ ಗೊಬ್ಬರವನ್ನು ಐದು ಶೆಕೆಲ್ ಬೆಳ್ಳಿಗೆ ಮಾರಲಾಗುವವರೆಗೂ ಅದನ್ನು ಮುತ್ತಿಗೆಹಾಕಿದನು.
26 Gbe ɖeka esime Israel fia nɔ tsa ɖim to dua ƒe gli dzi la, nyɔnu aɖe yɔe, gblɔ nɛ be, “Kpe ɖe ŋunye, nye aƒetɔ kple nye fia!”
ಇಸ್ರಾಯೇಲಿನ ಅರಸನು ಗೋಡೆಯ ಮೇಲೆ ಹಾದು ಹೋಗುತ್ತಿರುವಾಗ, ಒಬ್ಬ ಸ್ತ್ರೀಯು ಅವನನ್ನು ಕೂಗಿ, “ನನ್ನ ಯಜಮಾನನೇ, ಅರಸನೇ, ಸಹಾಯ ಮಾಡಿ,” ಎಂದಳು.
27 Fia la gblɔ nɛ be, “Ne Yehowa mekpe ɖe ŋuwò o ɖe, nu ka nye, amegbetɔ mate ŋu awɔ? Nuɖuɖu alo wain mele asinye mana wò o.
ಅದಕ್ಕವನು, “ಯೆಹೋವ ದೇವರು ನಿನಗೆ ಸಹಾಯ ಮಾಡದೆ ಹೋದರೆ, ನಾನು ಎಲ್ಲಿಂದ ನಿನಗೆ ಸಹಾಯ ಮಾಡಲಿ? ಕಣದಿಂದಲೋ, ದ್ರಾಕ್ಷಿ ಆಲೆಯಿಂದಲೋ?” ಎಂದನು.
28 Gbã la, nya kae dzɔ?” Nyɔnu la ɖo eŋu be, “Nyɔnu sia gblɔ nam be míaɖa vinye ŋutsuvi aɖu eye le ŋkeke bubu dzi la, míaɖa ye hã ƒe viŋutsuvi aɖu.
ಅರಸನು ಅವಳಿಗೆ, “ನಿನ್ನ ದುಃಖವೇನು?” ಎಂದನು. ಅದಕ್ಕವಳು, “ಈ ಸ್ತ್ರೀಯು ನನಗೆ ಹೇಳಿದ್ದೇನೆಂದರೆ, ‘ಈ ಹೊತ್ತು ನಾವು ನಿನ್ನ ಮಗನನ್ನು ತಿನ್ನುವಂತೆ ಅವನನ್ನು ಕೊಡು, ನಾಳೆ ನನ್ನ ಮಗನನ್ನು ತಿನ್ನೋಣ,’ ಎಂದಳು.
29 Ale míeɖa vinye ɖu, ke esi ŋu ke megblɔ nɛ be ‘Wò hã, wu viwò míaɖa ɖu egbe’ la, etsɔ via ɣla!”
ಹಾಗೆಯೇ ನಾವು ನನ್ನ ಮಗನನ್ನು ಬೇಯಿಸಿ ಅವನನ್ನು ತಿಂದೆವು. ಮಾರನೆಯ ದಿವಸದಲ್ಲಿ ನಾನು ಅವಳಿಗೆ, ‘ನಾವು ನಿನ್ನ ಮಗನನ್ನು ತಿನ್ನುವಂತೆ ಅವನನ್ನು ಕೊಡು,’ ಎಂದೆನು. ಆದರೆ ಅವಳು ತನ್ನ ಮಗನನ್ನು ಬಚ್ಚಿಟ್ಟಿದ್ದಾಳೆ,” ಎಂದಳು.
30 Esi fia la se nya sia la, edze eƒe awuwo. Amewo de dzesii to afi si eƒe awuwo dze le la be edo akpanyawu ɖe awu si wòdze la te.
ಅರಸನು ಆ ಸ್ತ್ರೀಯು ಹೇಳಿದ ಮಾತುಗಳನ್ನು ಕೇಳಿದಾಗ, ತನ್ನ ವಸ್ತ್ರಗಳನ್ನು ಹರಿದುಕೊಂಡು ಗೋಡೆಯ ಮೇಲೆ ಹಾದುಹೋದನು. ಜನರು ಕಂಡಾಗ ಅವನ ಮೈಮೇಲೆ ಗೋಣಿತಟ್ಟು ಇತ್ತು.
31 Fia la ka atam be, “Mawu nefiam, wòagafiam ɖe edzi vevie ne Elisa, Safat ƒe viŋutsu la, ƒe ta aganɔ eƒe kɔ nu egbe.”
ಆಗ ಅವನು, “ಶಾಫಾಟನ ಮಗ ಎಲೀಷನ ತಲೆಯನ್ನು ಹಾರಿಸದಿದ್ದರೆ, ದೇವರು ನನಗೆ ಇದರಂತೆಯೂ ಇನ್ನೂ ಹೆಚ್ಚಾಗಿಯೂ ಮಾಡಲಿ,” ಎಂದನು.
32 Elisa nɔ takpekpe me kple Israel ƒe ametsitsiwo le eƒe aƒe me. Fia la ɖo ame ɖa be woakplɔe vɛ. Ke hafi ame dɔdɔ la nava ɖo la, Elisa gblɔ na ametsitsiawo be, “Amewula sia ɖo ame aɖe ɖa be wòawum. Ne ame dɔdɔ la va ɖo la, mitu ʋɔa ɖe enu wòatsi ʋɔa godo elabena eƒe aƒetɔ akplɔe ɖo enumake.”
ಎಲೀಷನು ಊರಿನ ಹಿರಿಯರೊಡನೆ ತನ್ನ ಮನೆಯಲ್ಲಿ ಕುಳಿತುಕೊಂಡಿದ್ದನು. ಅರಸನು ತನ್ನ ಹತ್ತಿರ ಇದ್ದ ಒಬ್ಬ ದೂತನನ್ನು ಕಳುಹಿಸಿದನು. ಅವನು ಇನ್ನೂ ಸ್ವಲ್ಪ ದೂರದಲ್ಲಿರುವಾಗಲೇ ಎಲೀಷನು ಹಿರಿಯರಿಗೆ, “ನೋಡಿರಿ, ಆ ಕೊಲೆಗಾರನ ಮಗನು ನನ್ನ ತಲೆಯನ್ನು ಹಾರಿಸುವುದಕ್ಕೆ ದೂತನನ್ನು ಕಳುಹಿಸಿದ್ದಾನೆ. ದೂತನು ಇಲ್ಲಿಗೆ ಬಂದ ಕೂಡಲೇ ನೀವು ಬಾಗಿಲನ್ನು ಮುಚ್ಚಿ, ಅವನು ಒಳಗೆ ಬಾರದಂತೆ ಅದನ್ನು ಒತ್ತಿಹಿಡಿಯಿರಿ. ಅವನ ಹಿಂದೆಯೇ ಬರುತ್ತಿರುವ ಅವನೊಡೆಯನ ಕಾಲಿನ ಸಪ್ಪಳ ಕೇಳಿಸುತ್ತಿದೆಯಲ್ಲವೇ?” ಎಂದು ಹೇಳಿದನು.
33 Elisa mekpɔ ɖe nu le nya sia me hafi ame dɔdɔ la va do o. Fia la hã va do! Fia la gblɔ be, “Yehowae he dzɔgbevɔ̃e siawo katã vɛ. Nu ka ta makpɔ mɔ na kpekpeɖeŋu aɖe tso egbɔ?”
ಎಲೀಷನು ಅವರೊಡನೆ ಮಾತನಾಡುತ್ತಿರುವಾಗಲೇ ಆ ದೂತನೂ ಅವನ ಹಿಂದಿನಿಂದ ಅರಸನೂ ಅಲ್ಲಿಗೆ ಬಂದರು. ಅರಸನು ಎಲೀಷನಿಗೆ, “ನೋಡು, ಈ ಆಪತ್ತು ಯೆಹೋವ ದೇವರಿಂದಲೇ ಬಂದದ್ದು. ಇನ್ನು ಮುಂದೆ ನಾನೇಕೆ ಅವರನ್ನು ನಂಬಿ ನಿರೀಕ್ಷಿಸಿಕೊಂಡಿರಬೇಕು?” ಎಂದನು.