< Amos 6 >

1 Woe to those who are at ease in Zion, and to those who are secure on the mountain of Samaria, the notable men of the chief of the nations, to whom the house of Israel come!
ಅಯ್ಯೋ! ಚೀಯೋನಿನಲ್ಲಿ ನೆಮ್ಮದಿಯಾಗಿರುವವರ ಗತಿಯನ್ನು ಏನೆಂದು ಹೇಳಲಿ, ಪ್ರಮುಖ ಜನಾಂಗದಲ್ಲಿ ಹೆಸರುಗೊಂಡು ಇಸ್ರಾಯೇಲರ ನ್ಯಾಯವಿಚಾರಕರಾಗಿ, ಸಮಾರ್ಯದ ಬೆಟ್ಟದಲ್ಲಿ ನಿಶ್ಚಿಂತರಾಗಿರುವವರ, ಗತಿಯನ್ನು ಏನೆಂದು ಹೇಳಲಿ!
2 Go to Calneh, and see. From there go to Hamath the great. Then go down to Gath of the Philistines. Are they better than these kingdoms? Is their border greater than your border?
ನಿಮ್ಮ ಪ್ರಮುಖರು, “ಕಲ್ನೆಗೆ ಹೋಗಿ ನೋಡಲಿ; ಅಲ್ಲಿಂದ ಮಹಾ ಪಟ್ಟಣವಾದ ಹಮಾತಿಗೆ ತೆರಳಿರಿ; ಆ ಮೇಲೆ ಫಿಲಿಷ್ಟಿಯರ ಗತ್ ಊರಿಗೆ ಇಳಿಯಿರಿ. ಅವು ಈ ರಾಜ್ಯಗಳಿಗಿಂತ ಶ್ರೇಷ್ಠವೋ? ಅವುಗಳ ಪ್ರಾಂತ್ಯವು ನಿಮ್ಮ ಪ್ರಾಂತ್ಯಗಳಿಗಿಂತ ದೊಡ್ಡದೋ?”
3 Alas for you who put far away the evil day, and cause the seat of violence to come near,
ಆಹಾ! ಆ ಪ್ರಮುಖರು ಆಪತ್ತಿನ ದಿನದ ಯೋಚನೆಯನ್ನು ದೂರಕ್ಕೆ ತಳ್ಳುತ್ತಾರೆ ಮತ್ತು ಅನ್ಯಾಯದ ಪೀಠಗಳನ್ನು ಹತ್ತಿರಕ್ಕೆ ತಂದುಕೊಳ್ಳುತ್ತಾರೆ.
4 who lie on beds of ivory, and stretch themselves on their couches, and eat the lambs out of the flock, and the calves out of the middle of the stall,
ದಂತದ ಮಂಚಗಳ ಮೇಲೆ ಮಲಗುತ್ತಾರೆ ಮತ್ತು ತಮ್ಮ ಗದ್ದುಗೆಗಳಲ್ಲಿ ಹಾಯಾಗಿ ಒರಗಿಕೊಳ್ಳುತ್ತಾರೆ. ಹಿಂಡಿನ ಕುರಿಮರಿಗಳನ್ನು, ಕೊಟ್ಟಿಗೆಯ ಕರುಗಳನ್ನು ತಿನ್ನುತ್ತಾರೆ.
5 who strum on the strings of a harp, who invent for themselves instruments of music, like David;
ವೀಣೆಯ ಮೇಲೆ ಮನಸ್ಸು ಬಂದಂತೆ ಹಾಡುತ್ತಾರೆ; ದಾವೀದನ ಹಾಗೆ ಗಾನವಾದ್ಯಗಳನ್ನು ಕಲ್ಪಿಸಿಕೊಳ್ಳುತ್ತಾರೆ.
6 who drink wine in bowls, and anoint themselves with the best oils, but they are not grieved for the affliction of Joseph.
ದ್ರಾಕ್ಷಾರಸವನ್ನು ಬೋಗುಣಿಯಲ್ಲಿ ಕುಡಿಯುತ್ತಾರೆ ಮತ್ತು ಉತ್ತಮ ಅಭಿಷೇಕ ತೈಲಗಳನ್ನು ಹಚ್ಚಿಕೊಳ್ಳುತ್ತಾರೆ, ಆದರೆ ಯೋಸೇಫನ ನಷ್ಟಕ್ಕೆ ವ್ಯಸನಪಡುವುದಿಲ್ಲ.
7 Therefore they will now go captive with the first who go captive. The feasting and lounging will end.
ಆದುದರಿಂದ ಸೆರೆಗೆ ಒಯ್ಯುವವರ ಮುಂದುಗಡೆಯೇ, ಅವರು ಸೆರೆಗೆ ಹೋಗುವರು, ಮತ್ತು ಭೋಗಮಾಡುವವರ ಹರ್ಷಧ್ವನಿಯು ನಿಂತುಹೋಗುವುದು.
8 “The Lord GOD has sworn by himself,” says the LORD, the God of Hosts: “I abhor the pride of Jacob, and detest his fortresses. Therefore I will deliver up the city with all that is in it.
ಸೇನಾಧೀಶ್ವರ ದೇವರಾದ ಯೆಹೋವನ ನುಡಿಯನ್ನು ಕೇಳಿರಿ ಕರ್ತನಾದ ಯೆಹೋವನು ತನ್ನ ಮೇಲೆ ಆಣೆಯಿಟ್ಟು ಹೀಗೆಂದಿದ್ದಾನೆ, “ನಾನು ಯಾಕೋಬಿನ ಅಟ್ಟಹಾಸಕ್ಕೆ ಅಸಹ್ಯಪಟ್ಟು; ಅದರ ಕೋಟೆಗಳನ್ನು ಹಗೆಮಾಡುತ್ತೇನೆ. ಆದುದರಿಂದ ನಾನು ರಾಜಧಾನಿಯನ್ನೂ, ಅದರ ಸಕಲ ಸಮೃದ್ಧಿಯನ್ನೂ ಆಪತ್ತಿಗೆ ಗುರಿಮಾಡುವೆನು”
9 It will happen that if ten men remain in one house, they will die.
ಒಂದು ಮನೆಯಲ್ಲಿ ಹತ್ತು ಜನ ಉಳಿದರೂ ಅವರೆಲ್ಲರೂ ಸಾಯುವರು.
10 “When a man’s relative carries him, even he who burns him, to bring bodies out of the house, and asks him who is in the innermost parts of the house, ‘Is there yet any with you?’ And he says, ‘No;’ then he will say, ‘Hush! Indeed we must not mention the LORD’s name.’
೧೦ಶವವನ್ನು ಸುಡಲು ಬಂದ ಸಂಬಂಧಿಕರು, ಹೆಣವನ್ನು ಮನೆಯೊಳಗಿಂದ ತೆಗೆದುಕೊಂಡು ಹೋದಾಗ, “ನಿಮ್ಮ ಹತ್ತಿರ ಇನ್ನೂ ಯಾರಾದರೂ ಇದ್ದಾರೋ?” ಎಂದು ಮನೆಯಲ್ಲಿರುವವರನ್ನು ಕೇಳುವಾಗ ಅವನು, “ಇಲ್ಲ” ಎನ್ನುವನು. ಆಗ ಸಂಬಂಧಿಕನು, “ಸುಮ್ಮನಿರು, ನಾವು ಯೆಹೋವನ ಹೆಸರನ್ನು ನೆನಪುಮಾಡಿಕೊಳ್ಳಬಾರದು.”
11 “For, behold, the LORD commands, and the great house will be smashed to pieces, and the little house into bits.
೧೧ಇಗೋ, ನೋಡಿರಿ, ಯೆಹೋವನು ಆಜ್ಞಾಪಿಸಲು, ದೊಡ್ಡ ಮನೆಯು ಕೆಡವಲ್ಪಟ್ಟು ಚೂರುಚೂರಾಯಿತು, ಚಿಕ್ಕ ಮನೆಯೂ ಮುರಿದುಹೋಗುವುದು.
12 Do horses run on the rocky crags? Does one plow there with oxen? But you have turned justice into poison, and the fruit of righteousness into bitterness,
೧೨ಕುದುರೆಗಳು ಬಂಡೆಯ ಮೇಲೆ ಓಡಾಡುವುವೋ? ಅದನ್ನು ಎತ್ತುಗಳಿಂದ ಉಳುವರೋ? ಆದರೆ ನೀವು ನ್ಯಾಯವನ್ನು ವಿಷವನ್ನಾಗಿ ಮಾಡಿ, ಧರ್ಮದ ಸುಫಲವನ್ನು ಕಹಿಯಾಗಿಸಿದಿರಿ.
13 you who rejoice in a thing of nothing, who say, ‘Haven’t we taken for ourselves horns by our own strength?’
೧೩ನೀವು ಲೋ ದೆಬಾರ್ ಪಟ್ಟಣದಲ್ಲಿ ಉಲ್ಲಾಸಪಡುವವರೇ, ಸ್ವಬಲದಿಂದ ಕರ್ನಾಯಿಮ್ ಪಟ್ಟಣವನ್ನು ಪಡೆದುಕೊಂಡಿಲ್ಲವೇ ಎಂದುಕೊಳ್ಳುವವರೇ.
14 For, behold, I will raise up against you a nation, house of Israel,” says the LORD, the God of Hosts; “and they will afflict you from the entrance of Hamath to the brook of the Arabah.”
೧೪ಸೇನಾಧೀಶ್ವರ ದೇವರಾದ ಯೆಹೋವನು ಇಂತೆನ್ನುತ್ತಾನೆ, “ಇಸ್ರಾಯೇಲರ ವಂಶದವರೇ, ಇಗೋ, ನಾನು ನಿಮಗೆ ವಿರುದ್ಧವಾಗಿ ಒಂದು ಜನಾಂಗವನ್ನು ಎಬ್ಬಿಸುವೆನು; ಅವರು ಹಮಾತಿನ ದಾರಿಯಿಂದ ಅರಾಬಾ ತಗ್ಗಿನ ಹೊಳೆಯ ತನಕ, ನಿಮ್ಮನ್ನು ಹಿಂಸಿಸುವರು.”

< Amos 6 >