< Numbers 11 >

1 Now the people complained about their troubles as Yahweh listened. Yahweh heard the people and became angry. Fire from Yahweh burned among them and consumed some of the camp on its edges.
ಇಸ್ರಾಯೇಲ ಜನರು ತಮಗೆ ದುರಾವಸ್ಥೆ ಉಂಟಾಯಿತೆಂದು ಯೆಹೋವನಿಗೆ ಕೇಳಿಸುವಂತೆ ಗುಣುಗುಟ್ಟುವವರಾದರು. ಅದಕ್ಕೆ ಆತನು ಕೋಪಗೊಂಡು ಅವರ ಮಧ್ಯದಲ್ಲಿ ಬೆಂಕಿಯನ್ನು ಉಂಟುಮಾಡಿದ್ದರಿಂದ ಪಾಳೆಯದ ಕಡೇ ಭಾಗದಲ್ಲಿದ್ದವರು ಸುಟ್ಟುಹೋದರು.
2 Then people called out to Moses, so Moses prayed to Yahweh, and the fire stopped.
ಆಗ ಜನರು ಮೋಶೆಯ ಬಳಿಗೆ ಬಂದು ಮೊರೆಯಿಟ್ಟರು. ಮೋಶೆ ಅವರಿಗೋಸ್ಕರ ಯೆಹೋವನಿಗೆ ಪ್ರಾರ್ಥಿಸಲಾಗಿ ಆ ಬೆಂಕಿ ಆರಿಹೋಯಿತು.
3 That place was named Taberah, because Yahweh's fire burned among them.
ಯೆಹೋವನು ಉಂಟುಮಾಡಿದ ಬೆಂಕಿ ಅವರ ಮಧ್ಯದಲ್ಲಿ ಉರಿದುದರಿಂದ ಆ ಸ್ಥಳಕ್ಕೆ “ತಬೇರ” ಎಂದು ಹೆಸರಾಯಿತು.
4 Some foreign people began to camp with Israel's descendants. They wanted better food to eat. Then the people of Israel began to weep and say, “Who will give us meat to eat?
ಅವರ ಮಧ್ಯದಲ್ಲಿದ್ದ ಇತರ ಜನರು ಮಾಂಸವನ್ನು ಆಶಿಸಿದರು. ಇಸ್ರಾಯೇಲರು ಪುನಃ ಕಣ್ಣೀರಿಡುತ್ತಾ ಅಯ್ಯೋ, “ಮಾಂಸವು ನಮಗೆ ಹೇಗೆ ಸಿಕ್ಕೀತು?
5 We remember the fish that we ate freely in Egypt, the cucumbers, the melons, the leeks, the onions, and the garlic.
ಐಗುಪ್ತ ದೇಶದಲ್ಲಿ ನಾವು ಬಿಟ್ಟಿಯಾಗಿ ತಿನ್ನುತ್ತಿದ್ದ ಮೀನು, ಸೌತೆಕಾಯಿ, ಕರ್ಬೂಜ, ಈರುಳ್ಳಿ ಹಾಗೂ ಬೆಳ್ಳುಳ್ಳಿ ಇವು ನೆನಪಿಗೆ ಬರುತ್ತವೆ.
6 Now our appetite is gone, because all we can see is this manna.”
ಇಲ್ಲಿಯಾದರೋ ನಾವು ಬಲಹೀನರಾಗಿದ್ದೇವೆ. ಈ ಮನ್ನವೇ ಹೊರತು ನಮಗೆ ಇನ್ನೇನೂ ತಿನ್ನುವುದಕ್ಕೆ ಸಿಕ್ಕುವುದಿಲ್ಲ” ಎಂದು ನಿಷ್ಠುರವಾಗಿ ಮಾತನಾಡ ತೊಡಗಿದರು.
7 Manna was like coriander seed. It looked like resin.
ಆ ಮನ್ನವು ಕೊತ್ತುಂಬರಿ ಬೀಜದ ಹಾಗೆ ಇತ್ತು. ಅದು ಗುಗ್ಗುಲದಂತೆ ಕಾಣಿಸುತ್ತಿತ್ತು.
8 The people walked around and gathered it. They ground it in mills, beat it in mortars, boiled it in pots, and made it into cakes. It tasted like fresh olive oil.
ಜನರು ತಿರುಗಾಡುತ್ತಾ ಅದನ್ನು ಕೂಡಿಸಿಕೊಂಡು ಬೀಸುವ ಕಲ್ಲುಗಳಿಂದ ಬೀಸಿ, ಇಲ್ಲವೆ ಒರಳಿನಲ್ಲಿ ಕುಟ್ಟಿ ಪಾತ್ರೆಗಳಲ್ಲಿ ಬೇಯಿಸಿ ರೊಟ್ಟಿಗಳನ್ನು ಮಾಡಿಕೊಂಡರು. ಅದರ ರುಚಿ ಎಣ್ಣೆ ಬೆರಸಿ ಮಾಡಿದ ಭಕ್ಷ್ಯಗಳಂತಿತ್ತು.
9 When the dew fell on the camp in the night, the manna also fell.
ರಾತ್ರಿ ಕಾಲದಲ್ಲಿ ಮಂಜು ಪಾಳೆಯದಲ್ಲಿ ಬೀಳುತ್ತಿದ್ದಾಗ ಅದರೊಂದಿಗೆ ಮನ್ನವೂ ಬೀಳುತ್ತಿತ್ತು.
10 Moses heard the people weeping in their families, and every man was at the entrance to his tent. Yahweh was very angry, and in Moses' eyes their complaining was wrong.
೧೦ಎಲ್ಲಾ ಕುಟುಂಬದವರೂ ತಮ್ಮ ತಮ್ಮ ಡೇರೆ ಬಾಗಿಲುಗಳಲ್ಲಿ ನಿಂತು ಕಣ್ಣೀರಿಟ್ಟು ಅಳುವ ಆ ಶಬ್ದವು ಮೋಶೆಗೆ ಕೇಳಿಸಿತು. ಆಗ ಯೆಹೋವನು ಬಹಳ ಕೋಪಗೊಂಡನು. ಅವರ ಗುಣುಗುಟ್ಟುವಿಕೆಯಿಂದ ಮೋಶೆಗೆ ಬೇಸರವಾಯಿತು.
11 Moses said to Yahweh, “Why have you treated your servant so badly? Why are you not pleased with me? You make me carry the load of all these people.
೧೧ಆಗ ಮೋಶೆ ಯೆಹೋವನಿಗೆ, “ಈ ಜನರನ್ನು ನಡೆಸಿಕೊಂಡು ಹೋಗುವ ಹೊಣೆಯನ್ನು ನನ್ನ ಮೇಲೆ ಹೊರಿಸಿ ನೀನು ಏಕೆ ನಿನ್ನ ದಾಸನಿಗೆ ತೊಂದರೆಯನ್ನು ತಂದಿದ್ದೀ? ನಿನ್ನ ದಯೆಗೆ ನಾನು ಯಾಕೆ ಅಪಾತ್ರನಾದೆ?
12 Did I conceive all these people? Have I given them birth so that you should say to me, 'Carry them closely to your chest as a father carries a baby?' Should I carry them to the land that you swore to their ancestors to give them?
೧೨ನಾನು ಇವರಿಗೆ ಹೆತ್ತ ತಾಯಿಯೇ? ಇವರನ್ನು ಮಗುವನ್ನು ಎತ್ತಿಕೊಂಡು ಹೋಗುವಂತೆ, ಮಡಿಲಲ್ಲಿ ಇಟ್ಟುಕೊಂಡು ಅವರ ಪೂರ್ವಿಕರಿಗೆ ಪ್ರಮಾಣಮಾಡಿದ ದೇಶಕ್ಕೆ ನಡೆಸಬೇಕು ಎಂದು ಹೇಳುತ್ತೀಯಲ್ಲಾ?
13 Where can I find meat to give to all this people? They are weeping in front of me and are saying, 'Give us meat to eat.'
೧೩ಇವರು ನನ್ನ ಬಳಿಗೆ ಅಳುತ್ತಾ ಬಂದು, ‘ಮಾಂಸವನ್ನು ನಮಗೆ ತಿನ್ನಲಿಕ್ಕೆ ಕೊಡು’ ಎಂದು ಕೇಳುತ್ತಾರಲ್ಲಾ, ಇಷ್ಟು ಜನಕ್ಕೆ ಬೇಕಾದ ಮಾಂಸವು ನನಗೆ ಎಲ್ಲಿಂದ ದೊರಕೀತು?
14 I cannot bear all these people alone. They are too much for me.
೧೪ಇಷ್ಟು ಜನರ ಹೊಣೆಯನ್ನು ನಾನೊಬ್ಬನೇ ಹೊರುವುದು ಅಸಾಧ್ಯ; ಅದು ನನ್ನ ಶಕ್ತಿಗೆ ಮೀರಿದ ಕೆಲಸ.
15 Since you are treating me this way, kill me now—if I find favor in your eyes—do not let me see my misery.”
೧೫ನೀನು ಹೀಗೆ ಮಾಡುವುದಕ್ಕಿಂತ ನನ್ನನ್ನು ಈಗಲೇ ಕೊಂದುಹಾಕಿಬಿಟ್ಟರೆ ಉಪಕಾರವಾಗುತ್ತದೆ; ನನಗಾಗುತ್ತಿರುವ ದುರಾವಸ್ಥೆಯನ್ನು ನಾನು ಸಹಿಸಲಾರೆ” ಎಂದನು.
16 Yahweh said to Moses, “Bring to me seventy of Israel's elders. Be sure that they are elders and officers of the people. Bring them to the tent of meeting to stand there with you.
೧೬ಆಗ ಯೆಹೋವನು ಮೋಶೆಗೆ ಹೇಳಿದ್ದೇನೇಂದರೆ, “ಇಸ್ರಾಯೇಲರಲ್ಲಿ ಹಿರಿಯರೆಂದೂ ಮತ್ತು ಅಧಿಪತಿಗಳೆಂದೂ ನೀನು ತಿಳಿದುಕೊಂಡಿರುವ ಎಪ್ಪತ್ತು ಮಂದಿಯನ್ನು ದೇವದರ್ಶನದ ಗುಡಾರದ ಬಾಗಿಲಿಗೆ ಕರೆದು ಅಲ್ಲಿ ನಿನ್ನೊಡನೆ ನಿಲ್ಲಿಸಿಕೋ.
17 I will come down and talk with you there. I will take some of the Spirit that is on you and put it on them. They will bear the burden of the people with you. You will not have to bear it alone.
೧೭ನಾನು ಅಲ್ಲಿಗೆ ಇಳಿದು ಬಂದು ನಿನ್ನ ಸಂಗಡ ಮಾತನಾಡುವೆನು. ಅದಲ್ಲದೆ ನಾನು ನಿನಗೆ ಅನುಗ್ರಹಿಸಿರುವ ಆತ್ಮದಲ್ಲಿ ಸ್ವಲ್ಪವನ್ನು ಅವರಿಗೂ ಪಾಲುಕೊಡುವೆನು. ಆಗ ನೀನೊಬ್ಬನೇ ಈ ಜನರ ಹೊಣೆಯನ್ನು ವಹಿಸಬೇಕಾಗಿರುವುದಿಲ್ಲ; ನಿನ್ನ ಜೊತೆಯಲ್ಲಿ ಇವರೂ ಜವಾಬ್ದಾರಿ ವಹಿಸುವರು.”
18 Say to the people, 'Consecrate yourselves, for tomorrow and you will indeed eat meat, for you have wept and Yahweh has heard. You said, “Who will give us meat to eat? It was good for us in Egypt.” Therefore Yahweh will give you meat, and you will eat it.
೧೮ಇದಲ್ಲದೆ ಇಸ್ರಾಯೇಲರಿಗೆ ಹೀಗೆ ಹೇಳು, “ನಾಳೆಗೆ ನಿಮ್ಮನ್ನು ಶುದ್ಧಪಡಿಸಿಕೊಳ್ಳಿರಿ; ನಾಳೆ ನಿಮಗೆ ಮಾಂಸವು ದೊರೆಯುವುದು. ನೀವು ಯೆಹೋವನಿಗೆ ಕೇಳಿಸುವಂತೆ, ‘ನಮಗೆ ಮಾಂಸವನ್ನು ಕೊಡುವವರೇ ಇಲ್ಲ; ಐಗುಪ್ತ ದೇಶದಲ್ಲಿ ಎಷ್ಟೋ ಸುಖವಾಗಿದ್ದೇವಲ್ಲಾ’ ಎಂದು ಅಳುತ್ತಾ ಹೇಳಿದ್ದರಿಂದ ಯೆಹೋವನೇ ನಿಮಗೆ ಮಾಂಸವನ್ನು ತಿನ್ನಲಿಕ್ಕೆ ಕೊಡುವನು.
19 You will not eat meat for only one day, two days, five days, ten days, or twenty days,
೧೯ನೀವು ತಿನ್ನುವುದು ಒಂದು ದಿನವಲ್ಲ, ಎರಡು ದಿನವಲ್ಲ, ಐದು ದಿನವಲ್ಲ, ಹತ್ತು ದಿನವಲ್ಲ, ಇಪ್ಪತ್ತು ದಿನವೂ ಅಲ್ಲ.
20 but you will eat meat for a whole month until it comes out of your nostrils. It will disgust you because you have rejected Yahweh, who is among you. You have wept before him. You said, “Why did we leave Egypt?”'”
೨೦ಆದರೆ ನೀವು ಪೂರ್ತಿಯಾಗಿ ಒಂದು ತಿಂಗಳು ಮಾಂಸವನ್ನು ಊಟಮಾಡುವಿರಿ. ಅದು ವಾಕರಿಕೆಯಾಗಿ ನಿಮ್ಮ ಮೂಗಿನಲ್ಲಿ ಹೊರಟು ನಿಮಗೆ ಅಸಹ್ಯವಾಗುವ ತನಕ ಅದನ್ನು ಊಟಮಾಡುವಿರಿ. ನಿಮ್ಮ ಮಧ್ಯದಲ್ಲಿರುವ ಯೆಹೋವನನ್ನು ನೀವು ಅಲಕ್ಷ್ಯಮಾಡಿ ಆತನ ಎದುರಿನಲ್ಲಿ ಅತ್ತು, ‘ನಾವು ಏಕೆ ಐಗುಪ್ತ ದೇಶವನ್ನು ಬಿಟ್ಟುಬಂದೆವು ಎಂದು ಹೇಳುತ್ತೀರಲ್ಲಾ’ ಎಂದು ಹೇಳು” ಎಂದನು.
21 Then Moses said, “I am with 600,000 people, and you have said, 'I will give them meat to eat for a whole month.'
೨೧ಅದಕ್ಕೆ ಮೋಶೆ, “ನನ್ನ ಸಂಗಡ ಇರುವ ಜನರು ಆರು ಲಕ್ಷ ಕಾಲಾಳುಗಳು, ಆದರೂ ನೀನು, ‘ಇವರಿಗೆ ಒಂದು ತಿಂಗಳು ಪೂರ್ತಿಯಾಗಿ ಮಾಂಸವನ್ನು ತಿನ್ನಲು ಕೊಡುತ್ತೇನೆ’ ಎಂದು ಹೇಳಿದ್ದೀ.
22 Should we kill flocks and herds to satisfy them? Should we catch all the fish in the sea to satisfy them?”
೨೨ಅವರಿಗೆ ಬೇಕಾದಷ್ಟು ಸಿಕ್ಕುವಂತೆ ನಾವು ಹಿಂಡಿನಿಂದ ಆಡು, ಕುರಿ, ದನಗಳನ್ನೂ ಕೊಯ್ಯಬೇಕನ್ನುತ್ತಿಯೋ? ಇಲ್ಲವೆ ಸಮುದ್ರದಲ್ಲಿರುವ ಎಲ್ಲಾ ಮೀನುಗಳನ್ನೂ ಹಿಡಿದುಕೊಳ್ಳಬೇಕೋ?” ಎಂದು ಕೇಳಿದನು.
23 Yahweh said to Moses, “Is my hand short? Now you will see whether or not my word is true.”
೨೩ಯೆಹೋವನು ಮೋಶೆಗೆ, “ನನ್ನ ಕೈ ಮೋಟುಗೈಯೋ? ನನ್ನ ಮಾತು ನೆರವೇರುತ್ತದೋ, ಇಲ್ಲವೋ ಈಗ ನೀನು ನೋಡುವಿ” ಎಂದು ಹೇಳಿದನು.
24 Moses went out and told the people Yahweh's words. He gathered seventy of the people's elders and positioned them around the tent.
೨೪ಮೋಶೆ ಹೊರಟುಹೋಗಿ ಯೆಹೋವನ ಮಾತುಗಳನ್ನು ಜನರಿಗೆ ತಿಳಿಸಿದನು ಮತ್ತು ಅವನು ಜನರ ಹಿರಿಯರಲ್ಲಿ ಎಪ್ಪತ್ತು ಮಂದಿಯನ್ನು ಕೂಡಿಸಿ ದೇವದರ್ಶನದ ಗುಡಾರದ ಸುತ್ತಲೂ ನಿಲ್ಲಿಸಿದನು.
25 Yahweh came down in the cloud and spoke to Moses. Yahweh took some of the Spirit that was on Moses and put it on the seventy elders. When the Spirit rested on them, they prophesied, but only on that occasion and not again.
೨೫ಯೆಹೋವನು ಆ ಮೇಘದಲ್ಲಿ ಇಳಿದು ಬಂದು ಅವನ ಸಂಗಡ ಮಾತನಾಡಿದನು. ಮೋಶೆಯ ಮೇಲಿರುವ ಆತ್ಮದಲ್ಲಿ ಸ್ವಲ್ಪವನ್ನು ಆ ಎಪ್ಪತ್ತು ಮಂದಿ ಹಿರಿಯರಿಗೂ ಪಾಲುಕೊಟ್ಟನು. ಆ ಆತ್ಮವು ಅವರಿಗೆ ದೊರಕಿದಾಗ ಅವರು ಪರವಶರಾಗಿ ಆ ಸಂದರ್ಭದಲ್ಲಿ ಮಾತ್ರ ಪ್ರವಾದಿಸಿದರು. ಆ ಮೇಲೆ ಅವರು ಎಂದಿಗೂ ಪ್ರವಾದಿಸಲೇ ಇಲ್ಲ.
26 Two men remained in the camp, named Eldad and Medad. The Spirit also rested on them. Their names were written on the list, but they had not gone out to the tent. Nevertheless, they prophesied in the camp.
೨೬ಆದರೆ ಎಲ್ದಾದ್, ಮೇದಾದ್ ಎಂಬ ಇಬ್ಬರು ಪಾಳೆಯದೊಳಗೆ ನಿಂತಿದ್ದರು. ಅವರ ಹೆಸರುಗಳು ಬರೆಯಲ್ಪಟ್ಟಿದ್ದಾಗ್ಯೂ ಅವರು ದೇವದರ್ಶನದ ಗುಡಾರಕ್ಕೆ ಹೋಗಲಿಲ್ಲ. ಆ ಆತ್ಮವು ಅವರ ಮೇಲೆ ಇಳಿದುಬಂದುದರಿಂದ ಅವರು ಪಾಳೆಯದೊಳಗೆ ಪರವಶರಾಗಿ ಪ್ರವಾದಿಸಿದರು.
27 A young man in the camp ran and told Moses, “Eldad and Medad are prophesying in the camp.”
೨೭ಪಾಳೆಯದಿಂದ ಒಬ್ಬ ಹುಡುಗನು ಮೋಶೆಯ ಬಳಿಗೆ ಓಡಿ ಬಂದು, “ಎಲ್ದಾದ್ ಮತ್ತು ಮೇದಾದರು ಪಾಳೆಯದಲ್ಲಿ ಪರವಶರಾಗಿ ಪ್ರವಾದಿಸುತ್ತಿದ್ದಾರೆ” ಎಂದು ತಿಳಿಸಿದನು.
28 Joshua son of Nun, Moses' assistant, one of his chosen men, said to Moses, “My master Moses, stop them.”
೨೮ಮೋಶೆಯ ಶಿಷ್ಯನಾದ ನೂನನ ಮಗನಾದ ಯೆಹೋಶುವನು ಮೋಶೆಗೆ, “ಗುರುವೇ, ಅವರು ಪ್ರವಾದಿಸುವುದನ್ನು ನಿಲ್ಲಿಸಬೇಕು” ಎಂದು ಹೇಳಿದನು.
29 Moses said to him, “Are you jealous for my sake? I wish that all of Yahweh's people were prophets and that he would put his Spirit on them all!”
೨೯ಅದಕ್ಕೆ ಮೋಶೆ, “ನನ್ನ ನಿಮಿತ್ತವಾಗಿ ನೀನು ಹೊಟ್ಟೆಕಿಚ್ಚುಪಡುತ್ತೀಯೋ? ಯೆಹೋವನ ಅನುಗ್ರಹದಿಂದ ಆತನ ಜನರೆಲ್ಲರೂ ಆತ್ಮವನ್ನು ಹೊಂದಿದವರೂ, ಪ್ರವಾದಿಸುವವರೂ ಆದರೆ ಎಷ್ಟೋ ಒಳ್ಳೆಯದು” ಎಂದನು.
30 Then Moses and the elders of Israel went back to the camp.
೩೦ತರುವಾಯ ಮೋಶೆಯೂ ಮತ್ತು ಇಸ್ರಾಯೇಲರ ಹಿರಿಯರೂ ಪಾಳೆಯದೊಳಗೆ ಬಂದು ಸೇರಿದರು.
31 Then a wind came from Yahweh and brought quail from the sea. They fell near the camp, about a day's journey on one side and a day's journey on the other side. The quail surrounded the camp about two cubits above the ground.
೩೧ಆಗ ಯೆಹೋವನ ಬಳಿಯಿಂದ ಗಾಳಿ ಹೊರಟು ಸಮುದ್ರದಿಂದ ಲಾವಕ್ಕಿಗಳನ್ನು ಹೊಡೆದುಕೊಂಡು ಪಾಳೆಯದ ಸುತ್ತಲೂ ಒಂದು ದಿನದ ಪ್ರಯಾಣದಷ್ಟು ದೂರದವರೆಗೆ ಭೂಮಿಗಿಂತ ಎರಡು ಮೊಳ ಎತ್ತರದಲ್ಲಿ ಹಾರುತ್ತಾ ಬರುವಂತೆಮಾಡಿತು.
32 The people were busy gathering quail all that day, all the night, and all the next day. No one gathered less than ten homers of quail. They shared the quail all through the camp.
೩೨ಇಸ್ರಾಯೇಲರು ಆ ದಿನವೆಲ್ಲಾ, ರಾತ್ರಿಯೆಲ್ಲಾ, ಮರುದಿನವೆಲ್ಲಾ ಲಾವಕ್ಕಿಗಳನ್ನು ಕೂಡಿಸಿದರು. ಯಾರು ಹತ್ತು ಹೋಮೆರಿಗಿಂತ ಕಡಿಮೆ ಕೂಡಿಸಿಕೊಳ್ಳಲಿಲ್ಲ. ಅವರು ಪಾಳೆಯದ ಸುತ್ತಲೂ ಅವುಗಳನ್ನು ಹರಡಿಕೊಂಡರು.
33 While the meat was still between their teeth, while they were chewing it, Yahweh became angry at them. He attacked the people with a very great disease.
೩೩ಆದರೆ ಮಾಂಸವು ಇನ್ನೂ ಅವರ ಹಲ್ಲುಗಳ ನಡುವೆ ಇದ್ದಾಗ ಅದನ್ನು ಅಗೆಯುವುದಕ್ಕಿಂತ ಮುಂಚೆ ಜನರ ಮೇಲೆ ಯೆಹೋವನ ಕೂಪವು ಉರಿದದ್ದರಿಂದ ಆತನು ಜನರನ್ನು ಘೋರವ್ಯಾಧಿಯಿಂದ ಸಾಯಿಸಿದನು.
34 That place was named Kibroth Hattaavah, because there they buried the people who had craved meat.
೩೪ಆಶೆಪಟ್ಟವರನ್ನು ಅಲ್ಲಿ ಹೂಳಿಟ್ಟಿದ್ದರಿಂದ ಆ ಸ್ಥಳಕ್ಕೆ “ಕಿಬ್ರೋತ್ ಹತಾವಾ” ಎಂದು ಹೆಸರಾಯಿತು.
35 From Kibroth Hattaavah the people traveled to Hazeroth, where they stayed.
೩೫ತರುವಾಯ ಜನರು ಕಿಬ್ರೋತ್ ಹತಾವದಿಂದ ಪ್ರಯಾಣಮಾಡಿ ಹಚೇರೋತಿಗೆ ಬಂದು ಅಲ್ಲಿ ಇಳಿದುಕೊಂಡರು.

< Numbers 11 >