< 2 Chronicles 19 >
1 Jehoshaphat the king of Judah safely returned to his house in Jerusalem.
೧ಯೆಹೂದದ ಅರಸನಾದ ಯೆಹೋಷಾಫಾಟನು ಸುರಕ್ಷಿತವಾಗಿ ಯೆರೂಸಲೇಮಿಗೆ ಹಿಂದಿರುಗಿದನು.
2 Then Jehu son of Hanani, the seer, went out to meet him and said to King Jehoshaphat, “Should you be helping the wicked? Should you be loving those who hate Yahweh? For this deed, anger from Yahweh is on you.
೨ಯೆಹೋಷಾಫಾಟನು ಯೆರೂಸಲೇಮಿಗೆ ಬಂದಾಗ ಹನಾನೀಯನ ಮಗನಾದ ಯೇಹೂ ಎಂಬ ದರ್ಶಕನು ಅರಸನನ್ನು ಎದುರುಗೊಂಡು ಅವನಿಗೆ, “ನೀನು ದುಷ್ಟರಿಗೆ ಸಹಾಯ ಮಾಡಬಹುದೇ? ಯೆಹೋವನ ಹಗೆಗಾರರನ್ನು ಪ್ರೀತಿಸಬಹುದೇ? ನೀನು ಹೀಗೆ ಮಾಡಿದ್ದರಿಂದ ಯೆಹೋವನ ಕೋಪವು ನಿನ್ನ ಮೇಲಿರುತ್ತದೆ.
3 However, there is some good to be found in you, in that you have taken the Asherah poles out of the land, and you have fixed your heart to seek God.”
೩ಆದರೂ, ನೀನು ದೇಶದೊಳಗಿನಿಂದ ಅಶೇರ ವಿಗ್ರಹಸ್ತಂಭಗಳನ್ನು ತೆಗೆದು ಹಾಕಿ, ಯೆಹೋವನ ಭಕ್ತಿಯಲ್ಲಿ ಮನಸ್ಸಿಟ್ಟಿದ್ದರಿಂದ ನಿನ್ನಲ್ಲಿ ಒಳ್ಳೆಯದು ಉಂಟೆಂದು ತಿಳಿದು ಬಂದಿದೆ” ಎಂಬುದಾಗಿ ಹೇಳಿದನು.
4 Jehoshaphat lived in Jerusalem; and he went out again among the people from Beersheba to the hill country of Ephraim and brought them back to Yahweh, the God of their fathers.
೪ಯೆಹೋಷಾಫಾಟನು ಯೆರೂಸಲೇಮಿನಲ್ಲಿ ವಾಸವಾಗಿದ್ದು, ಮತ್ತೊಮ್ಮೆ ಬೇರ್ಷೆಬದಿಂದ ಎಫ್ರಾಯೀಮ್ ಪರ್ವತದ ವರೆಗೂ ಸಂಚರಿಸಿ, ತನ್ನ ಪ್ರಜೆಗಳನ್ನು ಅವರ ಪೂರ್ವಿಕರ ದೇವರಾದ ಯೆಹೋವನ ಕಡೆಗೆ ತಿರುಗಿಸಿದನು.
5 He placed judges in the land throughout all the fortified cities of Judah, city by city.
೫ಅವನು ಯೆಹೂದ ದೇಶದ ಪ್ರತಿಯೊಂದು ಕೋಟೆಕೊತ್ತಲಗಳುಳ್ಳ ಪಟ್ಟಣದಲ್ಲಿ ನ್ಯಾಯಾಧಿಪತಿಗಳನ್ನು ನೇಮಿಸಿದನು.
6 He said to the judges, “Consider what you should do, because you are not judging for man, but for Yahweh; he is with you in the act of judging.
೬ಅವನು ಅವರಿಗೆ, “ನೀವು ಹೇಗೆ ಕೆಲಸ ನಿರ್ವಹಿಸುತ್ತೀರಿ ಎಂಬುದರ ಬಗ್ಗೆ ಎಚ್ಚರಿಕೆಯಿಂದಿರಿ. ನೀವು ನ್ಯಾಯತೀರಿಸುವುದು ಮನುಷ್ಯರಿಗಾಗಿ ಅಲ್ಲ, ಯೆಹೋವನಿಗಾಗಿ. ನ್ಯಾಯವಿಚಾರಣೆ ಮಾಡುವಾಗ ಆತನು ನಿಮ್ಮ ಮಧ್ಯದಲ್ಲಿ ಇರುತ್ತಾನೆ.
7 Now then, let the fear of Yahweh be upon you. Be careful when you judge, for there is no iniquity with Yahweh our God, nor is there any favoritism or bribe taking.”
೭ಹೀಗಿರುವಲ್ಲಿ, ನಿಮಗೆ ಯೆಹೋವನ ಭಯವಿರಲಿ. ನಿಮ್ಮ ದೇವರಾದ ಯೆಹೋವನಲ್ಲಿ ಅನ್ಯಾಯವೂ, ಮುಖದಾಕ್ಷಿಣ್ಯವೂ ಇಲ್ಲದಿರುವುದರಿಂದ ಜಾಗರೂಕತೆಯಿಂದ ಕಾರ್ಯನಿರ್ವಹಿಸಿರಿ” ಎಂದು ಎಚ್ಚರಿಸಿದನು.
8 Moreover, in Jerusalem Jehoshaphat appointed some of the Levites and the priests, and some of the heads of the ancestral houses of Israel, for carrying out judgment for Yahweh, and for the sake of disputes. They lived in Jerusalem.
೮ಇದಲ್ಲದೆ, ಯೆಹೋಷಾಫಾಟನು ತನ್ನ ಪರಿವಾರದವರೊಡನೆ ಯೆರೂಸಲೇಮಿಗೆ ಹಿಂತಿರುಗಿ ಬಂದು ಲೇವಿಯರಿಂದಲೂ, ಯಾಜಕರಿಂದಲೂ, ಇಸ್ರಾಯೇಲ್ ಗೋತ್ರ ಪ್ರಧಾನರಿಂದಲೂ, ಕೆಲವರನ್ನು ಆರಿಸಿ ಯೆಹೋವನ ಧರ್ಮಶಾಸ್ತ್ರಕ್ಕೆ ಸಂಬಂಧಪಟ್ಟ, ಕಲಹಗಳನ್ನೂ ಬೇರೆ ವ್ಯಾಜ್ಯಗಳನ್ನೂ ವಿಚಾರಿಸಿ ತೀರಿಸುವುದಕ್ಕಾಗಿ ಅವರನ್ನು ಯೆರೂಸಲೇಮಿನಲ್ಲೇ ಇರಿಸಿದನು.
9 He instructed them, saying, “You must serve in reverence for Yahweh, faithfully, and with your whole heart.
೯ಅವರಿಗೆ, “ನೀವು ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿ ನಂಬಿಕೆಯಿಂದಲೂ ಯಥಾರ್ಥಮನಸ್ಸಿನಿಂದಲೂ ಮಾಡತಕ್ಕ ಕೆಲಸಗಳು ಯಾವುದೆಂದರೆ,
10 Whenever any dispute comes to you from your brothers who live in their cities, whether concerning bloodshed, whether about laws and commands, statutes or decrees, you must warn them, so they do not become guilty before Yahweh, or anger will come toward you and toward your brothers. You shall do this and you will not be guilty.
೧೦ಯೆಹೂದ ಪಟ್ಟಣಗಳಲ್ಲಿ ವಾಸಿಸುವ ನಿಮ್ಮ ಸಹೋದರರೊಳಗೆ ಜೀವಹತ್ಯ ಸಂಬಂಧದಲ್ಲಿಯಾಗಲಿ, ಧರ್ಮಶಾಸ್ತ್ರದ ಆಯಾ ಆಜ್ಞಾವಿಧಿ ನ್ಯಾಯಗಳ ಸಂಬಂಧದಲ್ಲಿಯಾಗಲಿ ವ್ಯಾಜ್ಯವುಂಟಾಗಿ, ಅದು ನಿಮ್ಮ ಮುಂದೆ ವಿಚಾರಣೆಗೆ ಬಂದರೆ, ನಿಮ್ಮ ಸಹೋದರರು ಯೆಹೋವನ ದೃಷ್ಟಿಯಲ್ಲಿ ಅಪರಾಧಿಗಳಾಗದಂತೆ ನೀವು ಅವರೊಂದಿಗೆ ದೇವರ ಕೋಪಕ್ಕೆ ಗುರಿಯಾಗದಂತೆ ಅವರನ್ನು ಎಚ್ಚರಿಸಿರಿ. ಹೀಗೆ ಮಾಡುವುದಾದರೆ ನೀವು ನಿರ್ದೋಷಿಗಳಾಗಿರುವಿರಿ.
11 See, Amariah the chief priest is over you in all the matters of Yahweh. Zebadiah son of Ishmael, the leader of the house of Judah, is in charge of all the matters of the king. Also, the Levites will be officers serving you. Be strong and obey your instructions, and may Yahweh be with those who are good.”
೧೧ಇಗೋ, ಯೆಹೋವನ ಆಜ್ಞಾಸಂಬಂಧವಾದ ಎಲ್ಲಾ ವಿಚಾರಣೆಗಳಲ್ಲಿಯೂ ಮಹಾಯಾಜಕನಾದ ಅಮರ್ಯನು ನಿಮ್ಮ ನಾಯಕನು; ರಾಜಕೀಯ ಕಾರ್ಯಸಂಬಂಧವಾದ ಎಲ್ಲಾ ವಿಚಾರಣೆಗಳಲ್ಲಿಯೂ ಇಷ್ಮಾಯೇಲನ ಮಗನೂ ಯೆಹೂದ ಕುಲದ ಪ್ರಮುಖನೂ ಆದ ಜೆಬದ್ಯನು ಅಧ್ಯಕ್ಷನು; ಲೇವಿಯರು ನ್ಯಾಯಸ್ಥಾನದ ಉದ್ಯೋಗಸ್ಥರಾಗಿ ನಿಮ್ಮೊಂದಿಗಿದ್ದಾರೆ; ಧ್ಯೆರ್ಯದಿಂದ ಕಾರ್ಯಪ್ರವೃತ್ತರಾಗಿರಿ, ಯೆಹೋವನು ಸಜ್ಜನರ ಸಹಾಯಕನು” ಎಂದು ಹೇಳಿದನು.