< 1 Chronicles 10 >

1 Now the Philistines fought against Israel. Every man of Israel fled from before the Philistines and fell down dead on Mount Gilboa.
ಫಿಲಿಷ್ಟಿಯರು ಇಸ್ರಾಯೇಲರ ವಿರುದ್ಧ ಯುದ್ಧಮಾಡಿದರು. ಆಗ ಇಸ್ರಾಯೇಲರು ಫಿಲಿಷ್ಟಿಯರಿಂದ ಸೋತು ಓಡಿಹೋಗಿ, ಗಿಲ್ಬೋವ ಬೆಟ್ಟದಲ್ಲಿ ಹತರಾದರು.
2 The Philistines closely pursued Saul and his son. The Philistines killed Jonathan, Abinadab, and Malki-Shua, his sons.
ಫಿಲಿಷ್ಟಿಯರು ಸೌಲನನ್ನೂ, ಅವನ ಪುತ್ರರನ್ನೂ ಬಿಡದೆ ಬೆನ್ನಟ್ಟಿ, ಸೌಲನ ಪುತ್ರರಾದ ಯೋನಾತಾನನನ್ನೂ ಅಬೀನಾದಾಬನನ್ನೂ, ಮಲ್ಕೀಷೂವನನ್ನೂ ಕೊಂದುಬಿಟ್ಟರು.
3 The battle went heavily against Saul, and the archers overtook him, and they wounded him.
ಯುದ್ಧವು ಸೌಲನಿದ್ದ ಕಡೆಯಲ್ಲಿ ಬಹುಘೋರವಾಗಿತ್ತು; ಬಿಲ್ಲುಗಾರರು ಅವನನ್ನು ಬಾಣಗಳಿಂದ ಹೊಡೆದಾಗ ಅವನು ತೀವ್ರವಾಗಿ ಗಾಯಗೊಂಡನು.
4 Then said Saul to his armor bearer, “Draw your sword and thrust me through with it. Otherwise, these uncircumcised will come and abuse me.” But his armor bearer would not, for he was very afraid. So Saul took his own sword and fell on it.
ಆಗ ಸೌಲನು ತನ್ನ ಆಯುಧಗಳನ್ನು ಹೊರುವವನಿಗೆ, “ಈ ಸುನ್ನತಿ ಇಲ್ಲದವರು ಬಂದು ನನ್ನನ್ನು ಅವಮಾನ ಮಾಡದ ಹಾಗೆ, ನೀನು ನಿನ್ನ ಖಡ್ಗವನ್ನು ಹಿರಿದು ನನ್ನನ್ನು ತಿವಿ,” ಎಂದನು. ಆದರೆ ಅವನ ಆಯುಧ ಹೊರುವವನು ಬಹು ಭಯಪಟ್ಟದ್ದರಿಂದ ಹಾಗೆ ಮಾಡದೆ ಹೋದನು. ಆಗ ಸೌಲನು ತನ್ನ ಖಡ್ಗವನ್ನು ತೆಗೆದುಕೊಂಡು ಅದರ ಮೇಲೆ ಬಿದ್ದನು.
5 When his armor bearer saw that Saul was dead, he likewise fell on his sword and died.
ಸೌಲನು ಸತ್ತು ಹೋದದ್ದನ್ನು ಅವನ ಆಯುಧ ಹೊರುವವನು ಕಂಡಾಗ, ಅವನೂ ತನ್ನ ಖಡ್ಗದ ಮೇಲೆ ಬಿದ್ದು, ಅವನ ಸಂಗಡ ಸತ್ತನು.
6 So Saul died, and his three sons, so all his household members died together.
ಸೌಲನೂ, ಅವನ ಮೂರು ಮಂದಿ ಪುತ್ರರೂ, ಅವನ ಮನೆಯವರೆಲ್ಲರೂ ಒಟ್ಟಾಗಿ ಅದೇ ದಿನ ಸತ್ತರು.
7 When every man of Israel in the valley saw that they had fled, and that Saul and his sons were dead, they abandoned their cities and fled. Then the Philistines came and lived in them.
ಇಸ್ರಾಯೇಲರ ಸೈನಿಕರು ಸೋತು ಹೋದರೆಂದೂ, ಸೌಲನೂ, ಅವನ ಪುತ್ರರೂ ಸತ್ತರೆಂದೂ ತಗ್ಗಿನಲ್ಲಿ ವಾಸವಾಗಿದ್ದ ಇಸ್ರಾಯೇಲರೆಲ್ಲರು ಕಂಡಾಗ, ಅವರು ತಮ್ಮ ಪಟ್ಟಣಗಳನ್ನು ಬಿಟ್ಟು ಓಡಿಹೋದರು. ಆಗ ಫಿಲಿಷ್ಟಿಯರು ಬಂದು ಅವುಗಳಲ್ಲಿ ವಾಸಿಸಿದರು.
8 It came about on the next day, when the Philistines came to strip the dead, that they found Saul and his sons fallen on Mount Gilboa.
ಮಾರನೆಯ ದಿವಸದಲ್ಲಿ ಫಿಲಿಷ್ಟಿಯರು ಸತ್ತವರ ಒಡವೆಗಳನ್ನು ಸುಲಿದುಕೊಳ್ಳಲು ಬಂದಾಗ, ಗಿಲ್ಬೋವ ಬೆಟ್ಟದಲ್ಲಿ ಸತ್ತುಬಿದ್ದಿರುವ ಸೌಲನನ್ನೂ, ಅವನ ಪುತ್ರರನ್ನೂ ಕಂಡರು.
9 They stripped him and took his head and his armor. They sent messengers throughout Philistia to carry the news to their idols and to the people.
ಅವರು ಅವನನ್ನು ಸುಲಿದುಕೊಂಡು ಅವನ ತಲೆಯನ್ನೂ, ಅವನ ಆಯುಧಗಳನ್ನೂ ತೆಗೆದುಕೊಂಡು, ತಮ್ಮ ವಿಗ್ರಹಗಳ ಮಂದಿರಗಳಿಗೂ, ಜನರಿಗೂ ಜಯವಾರ್ತೆಯನ್ನು ಸಾರುವ ಹಾಗೆ ಫಿಲಿಷ್ಟಿಯರ ದೇಶದ ಸುತ್ತಲೂ ಕಳುಹಿಸಿದರು.
10 They put his armor in the temple of their gods, and fastened his head to the temple of Dagon.
ಸೌಲನ ಆಯುಧಗಳನ್ನು ತಮ್ಮ ದೇವರುಗಳ ಮಂದಿರದಲ್ಲಿ ಇಟ್ಟು, ಅವನ ತಲೆಯನ್ನು ದಾಗೋನನ ಆಲಯದಲ್ಲಿ ನೇತುಹಾಕಿದರು.
11 When all Jabesh Gilead heard of all that the Philistines had done to Saul,
ಫಿಲಿಷ್ಟಿಯರು ಸೌಲನಿಗೆ ಮಾಡಿದ್ದನ್ನೆಲ್ಲಾ ಯಾಬೇಷ್ ಗಿಲ್ಯಾದಿನವರೆಲ್ಲರು ಕೇಳಿದಾಗ,
12 all the fighting men went and took away the body of Saul and those of his sons, and brought them to Jabesh. They buried their bones under the oak in Jabesh and fasted seven days.
ಅವರಲ್ಲಿರುವ ಸಮಸ್ತ ಪರಾಕ್ರಮಶಾಲಿಗಳು ಎದ್ದು ಸೌಲನ ಶವವನ್ನೂ, ಅವನ ಪುತ್ರರ ಶವಗಳನ್ನೂ ತೆಗೆದುಕೊಂಡು ಯಾಬೇಷಿಗೆ ಬಂದು, ಅವರ ಎಲುಬುಗಳನ್ನು ತೆಗೆದುಕೊಂಡು, ಅವುಗಳನ್ನು ಯಾಬೇಷಿನಲ್ಲಿರುವ ಒಂದು ಏಲಾ ಮರದ ಕೆಳಗೆ ಸಮಾಧಿಮಾಡಿ, ಏಳು ದಿವಸ ಉಪವಾಸ ಮಾಡಿದರು.
13 So Saul died because he was unfaithful to Yahweh. He did not obey Yahweh's instructions, but asked for advice from someone who talked with the dead.
ಹೀಗೆಯೇ ಸೌಲನು ಯೆಹೋವ ದೇವರಿಗೆ ವಿರೋಧವಾಗಿ ಮಾಡಿದ ತನ್ನ ಅಪರಾಧದ ನಿಮಿತ್ತ ಸತ್ತುಹೋದನು. ಅವನು ಯೆಹೋವ ದೇವರ ವಾಕ್ಯವನ್ನು ಕೈಗೊಳ್ಳದೆ, ಅದಕ್ಕೆ ವಿರೋಧವಾಗಿ ನಡೆದು, ಯೆಹೋವ ದೇವರನ್ನು ವಿಚಾರಿಸದೆ, ಯಕ್ಷಿಣಿಗಾರರನ್ನು ವಿಚಾರಿಸಿದ್ದರಿಂದ,
14 He did not seek guidance from Yahweh, so Yahweh killed him and turned over the kingdom to David son of Jesse.
ಯೆಹೋವ ದೇವರು ಅವನನ್ನು ಕೊಂದುಹಾಕಿ, ರಾಜ್ಯವನ್ನು ಇಷಯನ ಮಗನಾದ ದಾವೀದನ ಕಡೆಗೆ ತಿರುಗಿಸಿದರು.

< 1 Chronicles 10 >