< Revelation 17 >
1 And there cam one of the seven angels which had the seven vialles and talked with me sayinge vnto me: come I will shewe the the iudgment of the grett whore that sytteth apon many waters
೧ಏಳು ಬಟ್ಟಲುಗಳನ್ನು ಹಿಡಿದಿದ್ದ ಏಳು ಮಂದಿ ದೇವದೂತರಲ್ಲಿ ಒಬ್ಬನು ಬಂದು, “ಬಾ, ಬಹಳ ನೀರುಗಳ ಮೇಲೆ ಕುಳಿತ್ತಿರುವ ಮಹಾ ಜಾರಸ್ತ್ರೀಗೆ ಆಗುವ ನ್ಯಾಯತೀರ್ಪನ್ನು ನಿನಗೆ ತೋರಿಸುತ್ತೇನೆ.
2 with whome have commytted fornicacion the kynges of the erth so that the inhabiters of the erth are droken with the wyne of her fornicacion.
೨ಅವಳೊಂದಿಗೆ ಭೂರಾಜರು ಜಾರತ್ವ ಮಾಡಿದರು ಮತ್ತು ಭೂನಿವಾಸಿಗಳು ಆಕೆಯ ಜಾರತ್ವವೆಂಬ ದ್ರಾಕ್ಷಾರಸವನ್ನು ಕುಡಿದು ಮತ್ತರಾದರು” ಎಂದು ನನಗೆ ಹೇಳಿದನು.
3 And he caryed me a waye into the wildernes in the sprete. And I sawe a woman sytt apon a rose colored best full of names of blaphemie which had ten hornes.
೩ಆಗ ಅವನು ದೇವರಾತ್ಮವಶನಾದ ನನ್ನನ್ನು ಎತ್ತಿಕೊಂಡು ಮರುಭೂಮಿಗೆ ಹೋದನು. ಅಲ್ಲಿ ನಾನು ಕಡುಗೆಂಪು ಬಣ್ಣದ ಮೃಗದ ಮೇಲೆ ಕುಳಿತಿದ್ದ ಒಬ್ಬ ಸ್ತ್ರೀಯನ್ನು ಕಂಡೆನು. ಆ ಮೃಗದ ಮೈಮೇಲೆಲ್ಲಾ ದೂಷಣೆಗಳಿಂದ ಕೂಡಿದ್ದ ಹೆಸರುಗಳು ತುಂಬಿದ್ದವು. ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳೂ ಇದ್ದವು.
4 And the woman was arayed in purple and rose color and decked with golde precious stone and pearles and had a cup of golde in her honde full of a hominacions and fylthynes of her fornycacion.
೪ಆ ಸ್ತ್ರೀಯು ಧೂಮ್ರವರ್ಣದ ವಸ್ತ್ರಗಳನ್ನೂ ರಕ್ತಾಂಬರವನ್ನೂ ಧರಿಸಿಕೊಂಡು ಚಿನ್ನ, ರತ್ನ, ಮುತ್ತುಗಳಿಂದ ಅಲಂಕರಿಸಿಕೊಂಡಿದ್ದಳು. ಆಕೆಯು ತನ್ನ ಕೈಯಲ್ಲಿ ಅಸಹ್ಯವಾದವುಗಳಿಂದಲೂ ಮತ್ತು ತನ್ನ ಅಶುದ್ಧ ಜಾರತ್ವಗಳಿಂದಲೂ ತುಂಬಿದ ಚಿನ್ನದ ಬಟ್ಟಲನ್ನು ಹಿಡಿದುಕೊಂಡಿದ್ದಳು.
5 And in her forhed was a name wrytten a mistery gret Babylon the mother of whordome and abominacions of the erth.
೫ಅವಳ ಹಣೆಯ ಮೇಲೆ, “ಮಹತ್ತಾದ ಬಾಬೆಲೆಂಬ ಭೂಮಿಯಲ್ಲಿರುವ ಜಾರಸ್ತ್ರೀಯರ ಅಸಹ್ಯವಾದ ಕಾರ್ಯಗಳ ಮಾತೆ” ಎಂಬ ಹೆಸರನ್ನು ಬರೆಯಲಾಗಿತ್ತು.
6 And I sawe the wyfe dronke with the bloud of saynctes and with the bloud of the witnesses of Iesu. And when I sawe her I wondred with grett mervayle.
೬ಆ ಸ್ತ್ರೀಯು ನೀತಿವಂತರ ರಕ್ತವನ್ನೂ ಯೇಸುವಿಗೋಸ್ಕರ ಸಾಕ್ಷಿನೀಡಿ ಹತರಾದವರ ರಕ್ತವನ್ನು ಕುಡಿದು ಮತ್ತಳಾಗಿರುವುದನ್ನು ಕಂಡೆನು. ನಾನು ಅವಳನ್ನು ನೋಡಿ ಅತ್ಯಾಶ್ಚರ್ಯಪಟ್ಟೆನು.
7 And the angell sayde vnto me: wherfore mervayllyst thou? I wyll shewe the ye mistery of the woman and of the best that berith her which hath seven heddes and ten hornes.
೭ಆದರೆ ಆ ದೇವದೂತನು ನನ್ನನ್ನು ಕುರಿತು ಹೇಳಿದ್ದೇನಂದರೆ “ನೀನು ಆಶ್ಚರ್ಯ ಪಡುತ್ತಿರುವುದೇತಕ್ಕೆ? ಆ ಸ್ತ್ರೀಯ ವಿಷಯವಾಗಿಯೂ, ಅವಳ ವಾಹನವಾಗಿದ್ದ ಮೃಗದ ವಿಷಯವಾಗಿಯೂ, ಏಳು ತಲೆಗಳೂ ಹತ್ತು ಕೊಂಬುಗಳುಳ್ಳ ಮೃಗ ಇರುವ ಗೂಢಾರ್ಥವನ್ನು ನಾನು ನಿನಗೆ ವಿವರಿಸುತ್ತೇನೆ.
8 The best that thou seest was and is not and shall ascende out of the bottomlesse pytt and shall goo into perdicion and they that dwell on the erth shall wondre (whose names are not wrytten in the boke of lyfe from ye begynnynge of the worlde) when they beholde the best that was and ys nott. (Abyssos )
೮ನೀನು ಕಂಡ ಆ ಮೃಗವು ಮೊದಲು ಇದದ್ದೂ, ಈಗ ಇಲ್ಲದ್ದೂ, ಮತ್ತು ಅಧೋಲೋಕದೊಳಗಿನಿಂದ ಏರಿ ಬಂದು ವಿನಾಶಕ್ಕೆ ಹೋಗುವುದಕ್ಕಾಗಿರುವುದೂ ಆಗಿದೆ. ಈ ಲೋಕವು ಸೃಷ್ಟಿಯಾದಂದಿನಿಂದ ಯಾರ ಹೆಸರುಗಳು ಜೀವಬಾಧ್ಯರ ಪುಸ್ತಕದಲ್ಲಿ ಬರೆದಿರುವುದಿಲ್ಲವೋ, ಅವರು ಈ ಮೃಗವನ್ನು ನೋಡಿ ಇದು ಮೊದಲು ಇದ್ದಿತ್ತು, ಈಗ ಇಲ್ಲ, ಆದರೆ ಇನ್ನು ಮುಂದೆ ಬರಲಿದೆ ಎಂದು ಆಶ್ಚರ್ಯಪಡುವರು. (Abyssos )
9 And here ys a mynde that hath wisdome. The seven heddes are seven mountaynes on which the woman sytteth:
೯“ಇದನ್ನು ಗ್ರಹಿಸಿಕೊಳ್ಳಲು ಜ್ಞಾನವೂ, ವಿವೇಕವೂ ಬೇಕು. ಆ ಏಳು ತಲೆಗಳು ಆ ಹೆಂಗಸು ಕುಳಿತುಕೊಂಡಿರುವ ಏಳು ಬೆಟ್ಟಗಳಾಗಿವೆ.
10 they are also seven kynges. Fyve are fallen and on ys and onother is not yet come. Whe he cometh he muste contynew a space.
೧೦ಇದಲ್ಲದೆ ಅವು ಏಳು ರಾಜರುಗಳೂ ಆಗಿದ್ದಾರೆ. ಅವರಲ್ಲಿ ಐದು ರಾಜರು ಬಿದ್ದಿದ್ದಾರೆ. ಒಬ್ಬನು ಇದ್ದಾನೆ. ಮತ್ತೊಬ್ಬನು ಇನ್ನು ಬಂದಿಲ್ಲ. ಅವನು ಬಂದಾಗ ಸ್ವಲ್ಪ ಕಾಲ ಇರಬೇಕಾಗುತ್ತದೆ.
11 And the beste that was and ys not is even the ayght and ys one of the seven and shall goo into destruccion.
೧೧ಇದಲ್ಲದೆ ಮೊದಲಿದ್ದು ಈಗ ಇಲ್ಲದಿರುವ ಆ ಮೃಗವು ತಾನೇ ಎಂಟನೆಯ ಅರಸನು. ಆದರೆ ಅವನು ಆ ಏಳು ರಾಜರುಗಳಲ್ಲಿ ಒಬ್ಬನಾಗಿದ್ದಾನೆ, ಅವನು ನಾಶಕ್ಕೆ ಹೋಗುವನು.
12 And the ten hornes which thou seist are ten kynges which have receaved no kyngdome but shall receave power as kynges at one houre with the beest.
೧೨“ನೀನು ನೋಡಿದ ಆ ಹತ್ತು ಕೊಂಬುಗಳು ಇನ್ನೂ ರಾಜ್ಯವನ್ನು ಹೊಂದದಿರುವ ಹತ್ತು ರಾಜರುಗಳಾಗಿದ್ದಾರೆ. ಆದರೆ ಅವು ರಾಜರಂತೆ ಒಂದು ಗಳಿಗೆಯವರೆಗೆ ಆಳುವ ಅಧಿಕಾರವನ್ನು ಮೃಗದೊಂದಿಗೆ ಹೊಂದುವರು.
13 These have one mynde and shall geve their power and strenghte vnto ye beste.
೧೩ಅವರು ಏಕ ಮನಸ್ಸುಳ್ಳವರಾಗಿ ತಮ್ಮ ಬಲವನ್ನೂ ಅಧಿಕಾರವನ್ನೂ ಮೃಗಕ್ಕೆ ಕೊಡುವರು.
14 These shall fyght with the lambe and the lambe shall overcome them: For he is lorde of lordes and kynge of kynges: and they that are on hys syde are called and chosen and faythfull.
೧೪ಅವರು ಯಜ್ಞದ ಕುರಿಮರಿಯಾದಾತನಿಗೆ ವಿರುದ್ಧವಾಗಿ ಯುದ್ಧ ಮಾಡುವರು. ಆದರೆ ಆತನು ಕರ್ತರ ಕರ್ತನೂ ರಾಜಾಧಿರಾಜನೂ ಆಗಿರುವುದರಿಂದ ಕುರಿಮರಿಯು ಅವರನ್ನು ಜಯಿಸುವನು ಮತ್ತು ದೇವರು ಕರೆದವರೂ, ದೇವರು ಆದುಕೊಂಡವರೂ, ನಂಬಿಗಸ್ತರೂ ಆಗಿರುವ ಆತನವರು ಕುರಿಮರಿಯೊಂದಿಗೆ ಜಯದಲ್ಲಿ ಪಾಲುಗಾರರಾಗುವರು.”
15 And he sayde vnto me: the waters which thou sawest where the whore syttith are people and folke and nacions and tonges.
೧೫ಇನ್ನೂ ಆ ದೇವದೂತನು ನನಗೆ ಹೇಳಿದ್ದೇನಂದರೆ, “ಆ ಜಾರಸ್ತ್ರೀ ಕುಳಿತ್ತಿದ್ದ ನೀರನ್ನು ನೀನು ನೋಡಿದೆಯಲ್ಲ, ಅವು ಜನಾಂಗಳನ್ನು, ಜನ ಸಮೂಹಗಳನ್ನು, ರಾಷ್ಟ್ರಗಳನ್ನು, ಭಾಷೆಗಳನ್ನು ಸೂಚಿಸುತ್ತದೆ ಎಂದನು.
16 And the ten hornes which thou sawest apon the best are they that shall hate the whore and shall make her desolate and naked and shall eate their flesshe and burne her with fyre.
೧೬ಇದಲ್ಲದೆ ನೀನು ನೋಡಿದ ಹತ್ತು ಕೊಂಬುಗಳು ಮತ್ತು ಮೃಗವನ್ನು ಕಂಡೆಯಲ್ಲ? ಅವುಗಳು ಜಾರಸ್ತ್ರೀಯನ್ನು ದ್ವೇಷಿಸಿ, ಅವಳನ್ನು ಗತಿಯಿಲ್ಲದವಳನ್ನಾಗಿಯೂ ಬಟ್ಟೆ ಇಲ್ಲದವಳನ್ನಾಗಿಯೂ ಮಾಡಿ ಅವಳ ಮಾಂಸವನ್ನು ತಿಂದು, ಅವಳನ್ನು ಬೆಂಕಿಯಲ್ಲಿ ಸುಟ್ಟುಬಿಡುವರು.
17 For God hathe put in their hertes to fulfyll hys wyll and to do with one consent for to geve hir kyngdom vnto the beast vntill the wordes of God be fulfylled.
೧೭ಏಕೆಂದರೆ ದೇವರು ತನ್ನ ವಾಕ್ಯವನ್ನು ನೆರವೇರಿಸುವುದಕ್ಕಾಗಿಯೂ, ನೆರವೇರಿಸುವಂತೆಯೂ ತನ್ನ ಚಿತ್ತವನ್ನು ಅವರು ಒಂದೇ ಅಭಿಪ್ರಾಯವುಳ್ಳವರಾಗಿ ತಮ್ಮ ಅಧಿಕಾರವನ್ನು ಮೃಗಕ್ಕೆ ಕೊಡುವುದಕ್ಕೂ ಇದನ್ನು ಅವುಗಳ ಹೃದಯಗಳಲ್ಲಿ ಇರಿಸಿದ್ದನು.
18 And the woman which thou sawest ys that gret cyte which raigneth over the kynges of the erth.
೧೮ನೀನು ಕಂಡ ಆ ಸ್ತ್ರೀಯು ಭೂರಾಜರ ಮೇಲೆ ಆಳುವ ಅಧಿಕಾರ ಹೊಂದಿದ ಮಹಾನಗರಿಯೇ ಆಗಿದೆ.”