< Acts 1 >
1 The first account I compiled, O Theophilus, was about all that Jesus began to do and teach
ಥೆಯೊಫಿಲನೇ, ನಾನು ನಿನಗೆ ನನ್ನ ಮೊದಲನೆಯ ಗ್ರಂಥದಲ್ಲಿ ಯೇಸು ಮಾಡುವುದಕ್ಕೂ ಬೋಧಿಸುವುದಕ್ಕೂ ಪ್ರಾರಂಭಿಸಿದ್ದೆಲ್ಲವನ್ನೂ ಕುರಿತು ನಿಮಗೆ ಬರೆದಿದ್ದೇನೆ.
2 until the day he was taken up, after he had given commands through the Holy Spirit to the apostles he had chosen.
ಅಂದರೆ, ಯೇಸು ಆರಿಸಿಕೊಂಡ ಅಪೊಸ್ತಲರಿಗೆ ಪವಿತ್ರಾತ್ಮ ದೇವರ ಮುಖಾಂತರ ಆಜ್ಞಾಪಿಸಿದ ದಿನ ಮೊದಲುಗೊಂಡು ಸ್ವರ್ಗಕ್ಕೆ ಏರಿಹೋಗುವ ದಿನದವರೆಗೆ ಮಾಡಿದ್ದೆಲ್ಲವನ್ನೂ ಬರೆದಿದ್ದೇನೆ.
3 He presented himself alive to them, after his suffering, by many convincing proofs, appearing to them over the course of forty days and speaking about the kingdom of God.
ಯೇಸು ಬಾಧೆಪಟ್ಟು ಸತ್ತ ನಂತರ, ಅಪೊಸ್ತಲರಿಗೆ ಪ್ರತ್ಯಕ್ಷರಾಗುತ್ತಾ ತಾವು ಜೀವಂತವಾಗಿರುವುದನ್ನು ಅನೇಕ ನಿಶ್ಚಿತ ರುಜುವಾತುಗಳಿಂದ ತೋರಿಸಿಕೊಟ್ಟರು ಮತ್ತು ನಲವತ್ತು ದಿನಗಳ ಅವಧಿಯಲ್ಲಿ ಯೇಸು ಅವರಿಗೆ ಕಾಣಿಸಿಕೊಂಡು ದೇವರ ರಾಜ್ಯವನ್ನು ಕುರಿತು ತಿಳಿಸಿದರು.
4 While he was with them, he commanded them not to depart from Jerusalem, but to wait for the promise of the Father, “Which,” he said, “you heard about from me.
ಒಮ್ಮೆ ಯೇಸು ಶಿಷ್ಯರೊಂದಿಗೆ ಊಟಮಾಡುತ್ತಿದ್ದಾಗ ಶಿಷ್ಯರಿಗೆ, “ನೀವು ಯೆರೂಸಲೇಮನ್ನು ಬಿಟ್ಟು ಹೋಗಬೇಡಿರಿ, ನಾನು ನಿಮಗೆ ತಿಳಿಸಿದಂತೆ ನನ್ನ ತಂದೆ ವಾಗ್ದಾನ ಮಾಡಿರುವ ವರಕ್ಕಾಗಿ ಕಾದುಕೊಂಡಿರಿ.
5 For John baptized with water, but you will be baptized with the Holy Spirit not many days from now.”
ಏಕೆಂದರೆ ಯೋಹಾನನಾದರೋ ನೀರಿನಿಂದ ದೀಕ್ಷಾಸ್ನಾನ ಕೊಡುತ್ತಿದ್ದನು. ಆದರೆ ಇನ್ನು ಕೆಲವೇ ದಿನಗಳಲ್ಲಿ ಪವಿತ್ರಾತ್ಮ ದೇವರಿಂದ ನೀವು ದೀಕ್ಷಾಸ್ನಾನ ಪಡೆಯುವಿರಿ,” ಎಂದು ಆಜ್ಞಾಪಿಸಿದರು.
6 So when they had come together, they asked him, “Lord, are yoʋ going to restore the kingdom to Israel at this time?”
ಶಿಷ್ಯರು ಯೇಸುವಿನ ಸಂಗಡ ಇದ್ದಾಗ, “ಸ್ವಾಮೀ, ಇಸ್ರಾಯೇಲರ ರಾಜ್ಯವನ್ನು ಈ ಕಾಲದಲ್ಲಿ ಪುನಃ ಸ್ಥಾಪಿಸುವಿಯೋ?” ಎಂದು ಪ್ರಶ್ನೆ ಮಾಡಿದರು.
7 He said to them, “It is not for you to know the times or seasons that the Father has set by his own authority,
ಅದಕ್ಕೆ ಯೇಸು: “ತಂದೆ ತಮ್ಮ ಸ್ವಂತ ಅಧಿಕಾರದಿಂದ ನೇಮಿಸಿದ ಸಮಯವನ್ನಾಗಲಿ, ಕಾಲವನ್ನಾಗಲಿ, ತಿಳಿಯುವುದು ನಿಮ್ಮ ಕೆಲಸವಲ್ಲ.
8 but you will receive power when the Holy Spirit comes upon you, and you will be witnesses to me in Jerusalem, in all Judea and Samaria, and to the ends of the earth.”
ಆದರೆ ಪವಿತ್ರಾತ್ಮ ದೇವರು ನಿಮ್ಮ ಮೇಲೆ ಬಂದಾಗ ನೀವು ಶಕ್ತಿಯನ್ನು ಪಡೆಯುವಿರಿ. ಆಗ ನೀವು ಯೆರೂಸಲೇಮಿನಲ್ಲಿ, ಯೂದಾಯ ಪ್ರಾಂತ ಮತ್ತು ಸಮಾರ್ಯ ಪ್ರಾಂತದ ಎಲ್ಲಾ ಕಡೆಗಳಲ್ಲಿಯೂ ಹಾಗೂ ಭೂಲೋಕದ ಕೊನೆಯ ಮೇರೆಗಳವರೆಗೂ ನನಗೆ ಸಾಕ್ಷಿಗಳಾಗುವಿರಿ,” ಎಂದರು.
9 After he said this, he was lifted up as they looked on, and a cloud took him out of their sight.
ಇದನ್ನು ಹೇಳಿದ ತರುವಾಯ, ಯೇಸು ಅವರ ಕಣ್ಣೆದುರಿನಲ್ಲಿಯೇ ಸ್ವರ್ಗಕ್ಕೆ ಏರಿಹೋದರು. ಮೋಡವು ಯೇಸುವನ್ನು ಅವರ ಕಣ್ಣಿಗೆ ಮರೆಮಾಡಿತು.
10 As he went, they were gazing up into the sky, when behold, two men in white clothing stood beside them.
ಯೇಸು ಮೇಲಕ್ಕೆ ಹೋಗುತ್ತಿರಲು ಶಿಷ್ಯರು ಆಕಾಶದ ಕಡೆಗೆ ದೃಷ್ಟಿಸಿ ನೋಡುತ್ತಿರುವಾಗ, ಬಿಳಿವಸ್ತ್ರ ಧರಿಸಿದ್ದ ಇಬ್ಬರು ಪುರುಷರು ಅವರ ಪಕ್ಕದಲ್ಲಿ ನಿಂತುಕೊಂಡು,
11 They said, “Men of Galilee, why are you standing here staring into the sky? This Jesus who was taken up from you into heaven will come back in the same way you have seen him go into heaven.”
“ಗಲಿಲಾಯದವರೇ, ಆಕಾಶವನ್ನೇ ನೋಡುತ್ತಾ ಇಲ್ಲಿ ಏಕೆ ನಿಂತಿರುವಿರಿ? ನಿಮ್ಮ ಬಳಿಯಿಂದ ಪರಲೋಕಕ್ಕೆ ಏರಿಹೋದ ಈ ಯೇಸುವು ಪರಲೋಕಕ್ಕೆ ಹೋಗುವುದನ್ನು ನೀವು ನೋಡಿದ ರೀತಿಯಲ್ಲಿಯೇ ಹಿಂದಿರುಗಿ ಬರುವರು,” ಎಂದು ಹೇಳಿದರು.
12 Then they returned to Jerusalem from the mount called Olivet, which is near Jerusalem, a Sabbath day's journey away.
ಅನಂತರ ಅಪೊಸ್ತಲರು ಯೆರೂಸಲೇಮಿಗೆ ಸಮೀಪದಲ್ಲಿದ್ದ ಓಲಿವ್ ಗುಡ್ಡದಿಂದ ಇಳಿದು ಯೆರೂಸಲೇಮಿಗೆ ಹಿಂದಿರುಗಿ ಹೋದರು. ಅದು ಸಬ್ಬತ್ ದಿನದಲ್ಲಿ ಪ್ರಯಾಣ ಮಾಡುವಷ್ಟು ದೂರದಲ್ಲಿತ್ತು.
13 After entering the city, they went up to the upper room where they were staying. Those present were Peter, James, John, Andrew, Philip, Thomas, Bartholomew, Matthew, James the son of Alphaeus, Simon the Zealot, and Judas the son of James.
ಅವರು ಹಿಂದಿರುಗಿದಾಗ, ತಾವು ವಾಸಿಸುತ್ತಿದ್ದ ಮಾಳಿಗೆ ಮೇಲಿನ ಕೋಣೆಯೊಳಗೆ ಹೋದರು. ಅವರು ಯಾರಾರೆಂದರೆ: ಪೇತ್ರ, ಯೋಹಾನ, ಯಾಕೋಬ, ಅಂದ್ರೆಯ; ಫಿಲಿಪ್ಪ, ತೋಮ; ಬಾರ್ತೊಲೊಮಾಯ ಮತ್ತಾಯ; ಅಲ್ಫಾಯನ ಮಗ ಯಾಕೋಬ, ದೇಶಾಭಿಮಾನಿ ಸೀಮೋನ ಮತ್ತು ಯಾಕೋಬನ ಮಗ ಯೂದ.
14 With one accord they were all devoting themselves to prayer and supplication, along with Jesus' brothers and several women, including Mary the mother of Jesus.
ಅಲ್ಲಿ ಕೆಲವು ಮಹಿಳೆಯರು, ಯೇಸುವಿನ ತಾಯಿ ಮರಿಯಳು, ಯೇಸುವಿನ ಸಹೋದರರು, ಇವರೆಲ್ಲರು ನಿತ್ಯವೂ ಏಕಮನಸ್ಸಿನಿಂದ ಪ್ರಾರ್ಥನೆಯಲ್ಲಿ ನಿರತರಾಗಿ ಸೇರುತ್ತಿದ್ದರು.
15 In those days Peter stood up among the disciples (a crowd of about one hundred twenty people who were gathered together). He said,
ಆ ದಿನಗಳಲ್ಲಿ ಸುಮಾರು ನೂರಿಪ್ಪತ್ತು ಮಂದಿ ವಿಶ್ವಾಸಿಗಳು ಸೇರಿದ್ದರು. ಅವರ ನಡುವೆ ಪೇತ್ರನು ಎದ್ದು ನಿಂತು, ಹೀಗೆಂದನು:
16 “Brothers, it was necessary for this Scripture to be fulfilled, which the Holy Spirit foretold by the mouth of David concerning Judas, who became a guide to those who arrested Jesus.
“ಸಹೋದರ ಸಹೋದರಿಯರೇ, ಬಹಳ ದಿನಗಳ ಹಿಂದೆ ದಾವೀದನ ಮುಖಾಂತರ ಪವಿತ್ರಾತ್ಮರು ಮುಂತಿಳಿಸಿದ ದೇವರ ವಾಕ್ಯ ಯೂದನ ವಿಷಯವಾಗಿ ನೆರವೇರಬೇಕಾಗಿತ್ತು. ಯೂದನು ಯೇಸುವನ್ನು ಬಂಧಿಸಿದವರಿಗೆ ಮಾರ್ಗದರ್ಶಕನಾಗಿದ್ದನು.
17 For he was numbered with us and received his share in this ministry.”
ಈ ಯೂದನು ನಮ್ಮಲ್ಲಿ ಒಬ್ಬನಾಗಿದ್ದು ಈ ಸೇವೆಯಲ್ಲಿ ಪಾಲುಗಾರನಾಗಿದ್ದನು.”
18 (Now this man Judas had acquired a field with the wages of unrighteousness, and falling headfirst, his body burst open, and all his intestines gushed out.
ಯೂದನು, ದ್ರೋಹ ಕೃತ್ಯದಿಂದ ಪಡೆದ ಹಣದಿಂದ ಒಂದು ಹೊಲವನ್ನು ಕೊಂಡುಕೊಂಡನು; ಅಲ್ಲಿಯೇ ಅವನು ತಲೆಕೆಳಗಾಗಿ ಬಿದ್ದು, ಹೊಟ್ಟೆ ಬಿರಿದು, ಕರುಳೆಲ್ಲಾ ಹೊರಬಂದು ಸತ್ತನು.
19 This became known to all who were dwelling in Jerusalem, so that in their language the field was called Akeldama, that is, Field of Blood.)
ಯೆರೂಸಲೇಮಿನಲ್ಲಿದ್ದ ಪ್ರತಿಯೊಬ್ಬರಿಗೂ ಈ ವಿಷಯ ತಿಳಿಯಿತು, ಹೀಗೆ ಆ ಹೊಲವನ್ನು ಅವರು ತಮ್ಮ ಭಾಷೆಯಲ್ಲಿ “ಅಕೆಲ್ದಮಾ” ಎಂದು ಕರೆದರು. “ರಕ್ತದ ಹೊಲ” ಎಂದು ಅದರ ಅರ್ಥ.
20 Peter continued, “For it is written in the Book of Psalms: ‘May his homestead become desolate; let there be no one to dwell in it,’ and, ‘May another take his position as overseer.’
ಕೀರ್ತನೆಗಳ ಗ್ರಂಥದಲ್ಲಿ ಹೀಗೆ ಬರೆಯಲಾಗಿದೆ: “‘ಅವನ ವಾಸಸ್ಥಾನವು ಹಾಳಾಗಲಿ, ಅದರಲ್ಲಿ ಯಾರೂ ವಾಸಿಸದಿರಲಿ,’ ಮತ್ತು, “‘ಅವನ ಹುದ್ದೆಯನ್ನು ಇನ್ನೊಬ್ಬನು ತೆಗೆದುಕೊಳ್ಳಲಿ,’
21 Therefore, one of the men who have accompanied us during the entire time that the Lord Jesus went in and out among us,
ಆದ್ದರಿಂದ, ಕರ್ತ ಆಗಿರುವ ಯೇಸು ನಮ್ಮೊಂದಿಗೆ ಇದ್ದ ಕಾಲವೆಲ್ಲಾ ನಮ್ಮ ಜೊತೆಯಲ್ಲಿರುವ ಒಬ್ಬನನ್ನು ನಾವು ಆರಿಸಬೇಕಾಗಿದೆ. ಅಂಥವನು ಯೇಸುವಿನ ಎಲ್ಲಾ ಸೇವಾ ಸಂಚಾರದಲ್ಲಿಯೂ ನಮ್ಮೊಂದಿಗೆ ಇದ್ದವನಾಗಿರಬೇಕು,
22 beginning from the baptism of John up to the day when Jesus was taken up from us, must become a witness with us of his resurrection.”
ಅಂದರೆ, ಯೋಹಾನನಿಂದ ದೀಕ್ಷಾಸ್ನಾನ ಪಡೆದ ದಿನದಿಂದ, ಯೇಸು ಸ್ವರ್ಗಕ್ಕೆ ಏರಿಹೋದ ಕಾಲದವರೆಗೆ ನಮ್ಮ ಸಂಗಡ ಇದ್ದವನಾಗಿರಬೇಕು.” ಅವನು ಯೇಸುವಿನ ಪುನರುತ್ಥಾನಕ್ಕೆ ನಮ್ಮೊಂದಿಗೆ ಸಾಕ್ಷಿಯಾಗಿರಬೇಕು.
23 So they put forward two men, Joseph called Barsabas (who was given the name Justus), and Matthias.
ಆಗ ಅವರು ಇಬ್ಬರು ಪುರುಷರ ಹೆಸರುಗಳನ್ನು ಸೂಚಿಸಿದರು: ಬಾರ್ಸಬ ಎಂಬ ಹೆಸರಿನ ಯೋಸೇಫ, ಇವನನ್ನು ಯೂಸ್ತ ಎಂಬುದಾಗಿಯೂ ಕರೆಯುತ್ತಿದ್ದರು ಮತ್ತು ಇನ್ನೊಬ್ಬನು ಮತ್ತೀಯ ಎಂಬುವನು.
24 Then they prayed, “Lord, yoʋ know the hearts of all; show us which of these two men yoʋ have chosen
ಆಮೇಲೆ ಅವರು, “ಕರ್ತ ಯೇಸುವೇ, ಪ್ರತಿಯೊಬ್ಬರ ಹೃದಯವನ್ನು ನೀವು ತಿಳಿದವರು. ಈ ಸೇವೆಯಿಂದ ಯೂದನು ಭ್ರಷ್ಟನಾಗಿ ತನಗೆ ತಕ್ಕ ಸ್ಥಳಕ್ಕೆ ಹೋಗಿರುವುದರಿಂದ,
25 to receive the share of this ministry and apostleship from which Judas turned away to go to his own place.”
ಈ ಅಪೊಸ್ತಲರ ಸೇವೆಯನ್ನು ವಹಿಸಿಕೊಳ್ಳುವುದಕ್ಕಾಗಿ, ನೀವು ಈ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಿಕೊಂಡಿರುವಿರಿ ಎಂಬುದನ್ನು ನಮಗೆ ತೋರಿಸಿರಿ,” ಎಂದು ಪ್ರಾರ್ಥನೆ ಮಾಡಿದರು.
26 Then they cast lots for them, and the lot fell to Matthias, so he was added to the eleven apostles.
ಅನಂತರ ಅವರು ಚೀಟು ಹಾಕಲು, ಅದು ಮತ್ತೀಯನ ಪಾಲಿಗೆ ಬಂದಿತು; ಆದ್ದರಿಂದ ಅವನು ಹನ್ನೊಂದು ಜನ ಅಪೊಸ್ತಲರೊಂದಿಗೆ ಸೇರಿದನು.