< Nehemiah 13 >

1 On that day, a portion, was read in the book of Moses, in the ears of the people, —and it was found written therein, that the Ammonite and the Moabite should not enter into the convocation of God, unto times age-abiding;
ಅದೇ ದಿವಸದಲ್ಲಿ ಜನರು ಕೇಳುವಂತೆ ಮೋಶೆಯ ನಿಯಮ ಗ್ರಂಥವನ್ನು ಗಟ್ಟಿಯಾಗಿ ಓದುವಾಗ, “ಅಮ್ಮೋನಿಯರೂ, ಮೋವಾಬ್ಯರೂ ಎಂದಿಗೂ ದೇವರ ಸಭೆಗೆ ಬರಕೂಡದು,” ಎಂದು ಅದರಲ್ಲಿ ಬರೆದದ್ದು ಸಿಕ್ಕಿತು.
2 because they met not the sons of Israel, with bread and with water, —but hired against them Balaam, to curse them, although our God turned the curse into a blessing.
ಏಕೆಂದರೆ ಅವರು ಅನ್ನಪಾನಗಳೊಡನೆ ಇಸ್ರಾಯೇಲರನ್ನು ಎದುರುಗೊಳ್ಳಲಿಲ್ಲ. ಅವರು ಇಸ್ರಾಯೇಲರನ್ನು ಶಪಿಸುವುದಕ್ಕಾಗಿ ಬಿಳಾಮನಿಗೆ ಹಣಕೊಟ್ಟು ಕರೆಸಿದ್ದರು. ಆದರೆ ನಮ್ಮ ದೇವರು ಆ ಶಾಪವನ್ನು ಆಶೀರ್ವಾದವಾಗಿ ಮಾಡಿದರು.
3 So it came to pass, when they had heard the law, —that they separated all the mixed multitude from Israel.
ಆಗ ಜನರು ದೇವರ ನಿಯಮವನ್ನು ಕೇಳಿದಾಗ, ಇಸ್ರಾಯೇಲರೊಳಗಿಂದ ವಿದೇಶಿ ಜನರನ್ನು ಪ್ರತ್ಯೇಕಿಸಿದರು.
4 Now, before this, Eliashib the priest, who was set over a chamber of the house of God, was allied unto Tobiah;
ಇದಕ್ಕೆ ಮುಂಚೆ ನಮ್ಮ ದೇವರ ಆಲಯದ ಉಗ್ರಾಣದ ಮೇಲೆ ವಿಚಾರಕನಾಗಿದ್ದ ಎಲ್ಯಾಷೀಬನೆಂಬ ಯಾಜಕನು ಟೋಬೀಯನ ಸಮೀಪ ಬಂಧುವಾಗಿದ್ದನು.
5 so he prepared him a large chamber, where aforetime they used to lay the meal-offering, the frankincense, and the utensils, and the tithe of the corn, the new wine and the oil, in charge of the Levites, and the singers, and the doorkeepers, —and the heave-offerings for the priests.
ಲೇವಿಯರಿಗೂ, ಹಾಡುಗಾರರಿಗೂ, ದ್ವಾರಪಾಲಕರಿಗೂ ನೇಮಕವಾದ ಕಾಣಿಕೆಗಳನ್ನೂ, ಧೂಪವನ್ನೂ, ಸಾಮಗ್ರಿಗಳನ್ನೂ, ಧಾನ್ಯದ ಹತ್ತನೆಯ ಪಾಲುಗಳನ್ನೂ, ದ್ರಾಕ್ಷಾರಸವನ್ನೂ, ಎಣ್ಣೆಯನ್ನೂ, ಯಾಜಕರ ಕಾಣಿಕೆಗಳನ್ನೂ ಪೂರ್ವಕಾಲದಲ್ಲಿ ಇಡುತ್ತಿದ್ದ ದೊಡ್ಡ ಕೊಠಡಿಯನ್ನು ಎಲ್ಯಾಷೀಬನು ಟೋಬೀಯನಿಗೋಸ್ಕರ ಸಿದ್ಧ ಮಾಡಿಕೊಟ್ಟಿದ್ದನು.
6 But, throughout all this [time], was I not in Jerusalem, —for, in the thirty-second year of Artaxerxes king of Babylon, I came unto the king, and, at the end of certain days, obtained I leave of the king;
ಆದರೆ ಇವೆಲ್ಲಾ ಸಂಭವಿಸುವಾಗ ನಾನು ಯೆರೂಸಲೇಮಿನಲ್ಲಿ ಇರಲಿಲ್ಲ. ಬಾಬಿಲೋನಿನ ಅರಸನಾದ ಅರ್ತಷಸ್ತನ ಮೂವತ್ತೆರಡನೆಯ ವರ್ಷದಲ್ಲಿ ನಾನು ಅರಸನ ಬಳಿಗೆ ಹೋಗಿದ್ದೆ. ತರುವಾಯ ನಾನು ಅರಸನಿಂದ ಅಪ್ಪಣೆ ಪಡೆದುಕೊಂಡು,
7 and came to Jerusalem, —and had intelligence of the wickedness which Eliashib had committed for Tobiah, in preparing for him a chamber, in the courts of the house of God;
ನಾನು ಯೆರೂಸಲೇಮಿಗೆ ಬಂದು ಎಲ್ಯಾಷೀಬನು ಟೋಬೀಯನಿಗೋಸ್ಕರ ದೇವರ ಆಲಯದ ಅಂಗಳಗಳಲ್ಲಿ ಒಂದು ಕೊಠಡಿಯನ್ನು ಸಿದ್ಧಮಾಡಿಕೊಟ್ಟಿದ್ದನ್ನು ನಾನು ಕಂಡಾಗ, ಅದು ನನಗೆ ಬಹಳ ವ್ಯಸನಕರವಾಯಿತು.
8 and it grieved me exceedingly, —and I cast forth all the household utensils of Tobiah, outside of the chamber.
ಆ ಕೊಠಡಿಯೊಳಗಿಂದ ಟೋಬೀಯನ ವಸ್ತುಗಳನ್ನೆಲ್ಲಾ ಹೊರಗೆ ಹಾಕಿಸಿದೆನು.
9 Then commanded I, and they purified the chambers, —and I put back there, the utensils of the house of God, the meal-offering and the frankincense.
ಆಗ ನಾನು ಹೇಳಿದ್ದರಿಂದ ಅವರು ಕೊಠಡಿಗಳನ್ನು ಶುದ್ಧ ಮಾಡಿದರು. ತರುವಾಯ ದೇವರ ಆಲಯದ ಪಾತ್ರೆಗಳನ್ನೂ ಧಾನ್ಯ ಸಮರ್ಪಣೆಗಳನ್ನೂ, ಧೂಪವನ್ನೂ ತಿರುಗಿ ಅಲ್ಲಿ ತಂದು ಇಡಿಸಿದೆನು.
10 Then came I to know, that, the portions of the Levites, had not been given [them], —so that the Levites and the singers, who had been doing the work, had fled every one to his field.
ಲೇವಿಯರ ಪಾಲನ್ನು ಅವರಿಗೆ ಕೊಡಲಿಲ್ಲವೆಂದು ನನಗೆ ತಿಳಿಯಿತು. ಸೇವೆಯನ್ನು ಮಾಡುವ ಲೇವಿಯರೂ, ಹಾಡುಗಾರರೂ ತಮ್ಮ ತಮ್ಮ ಹೊಲಕ್ಕೆ ಓಡಿ ಹೋಗುತ್ತಿದ್ದರು.
11 Therefore contended I with the deputies, and said, Wherefore is the house of God, forsaken? So I gathered them together, and set them in their place.
ಆಗ ನಾನು ಅಧಿಕಾರಿಗಳನ್ನು ಗದರಿಸಿ ಅವರಿಗೆ, “ದೇವರ ಮಂದಿರವನ್ನು ಅಲಕ್ಷ್ಯಮಾಡಿದ್ದೇಕೆ?” ಎಂದು ವಾದಿಸಿದೆನು. ಬಿಟ್ಟುಹೋದವರನ್ನು ತಿರಿಗಿ ಕರೆಯಿಸಿ, ಅವರನ್ನು ಅವರವರ ಉದ್ಯೋಗಗಳಲ್ಲಿ ಇರಿಸಿದೆನು.
12 Then, all Judah, brought in the tithe of corn, and new wine, and oil, unto the treasuries;
ಆಗ ಯೆಹೂದದವರೆಲ್ಲರು ಧಾನ್ಯ, ಹೊಸ ದ್ರಾಕ್ಷಾರಸ ಎಣ್ಣೆ ಇವುಗಳಲ್ಲಿ ಹತ್ತರಲ್ಲೊಂದು ಪಾಲನ್ನು ಕೊಠಡಿಗಳಲ್ಲಿ ತಂದರು.
13 and I made treasurers over the treasuries—Shelemiah the priest, and Zadok the scribe, and Pedaiah from among the Levites, and, next unto them, Hanan son of Zaccur, son of Mattaniah, —for faithful were they accounted, and it was [laid] upon them to distribute unto their brethren.
ಆಗ ನಾನು ಯಾಜಕನಾದ ಶೆಲೆಮ್ಯನನ್ನೂ, ಲೇಖಕನಾದ ಚಾದೋಕನನ್ನೂ, ಲೇವಿಯರಲ್ಲಿರುವ ಪೆದಾಯನನ್ನೂ ಅವರಿಗೆ ಸಹಾಯವಾಗಿ ಮತ್ತನ್ಯನ ಮಗನಾದ ಜಕ್ಕೂರನ ಮಗ ಹಾನಾನನನ್ನೂ ಬೊಕ್ಕಸಗಳ ಮೇಲೆ ನೇಮಿಸಿದೆನು. ಅವರು ನಂಬಿಗಸ್ತರೆಂದು ಹೆಸರುಗೊಂಡವರು. ತಮ್ಮ ಸಹೋದರರಿಗೆ ಹಂಚಿ ಕೊಡುವುದು ಅವರ ಕೆಲಸವಾಗಿತ್ತು.
14 Remember me, O my God, concerning this, —and do not wipe out my lovingkindnesses, which I have done for the house of my God, and for those keeping charge thereof.
ನನ್ನ ದೇವರೇ, ಇದಕ್ಕಾಗಿ ನನ್ನನ್ನು ಜ್ಞಾಪಕಮಾಡಿಕೊಳ್ಳಿರಿ. ನಾನು ನನ್ನ ದೇವರ ಆಲಯಕ್ಕೋಸ್ಕರವೂ, ಅದರ ಸೇವೆಗೋಸ್ಕರವೂ ನಂಬಿಗಸ್ತಿಕೆಯಿಂದ ಮಾಡಿದ ಭಕ್ತಿಕಾರ್ಯಗಳನ್ನು ಅಳಿಸಿಬಿಡಬೇಡಿರಿ.
15 In those days, saw I in Judah—some treading winepresses on the sabbath, and bringing in sheaves and lading asses, moreover also wine, grapes, and figs, and every kind of burden, which they were bringing into Jerusalem on the sabbath day, —so I protested against it, as a day for them to sell provisions.
ಆ ದಿನಗಳಲ್ಲಿ ನಾನು ಯೆಹೂದದೊಳಗೆ ಸಬ್ಬತ್ ದಿನಗಳಲ್ಲಿ ಕೆಲವರು ದ್ರಾಕ್ಷಿಯ ಆಲೆಗಳಲ್ಲಿ ಕೆಲಸಮಾಡುವುದನ್ನೂ, ಸಿವುಡುಗಳನ್ನು ತರುವುದನ್ನೂ, ಕತ್ತೆಗಳ ಮೇಲೆ ಹೇರಿಕೊಂಡು ಬರುವುದನ್ನೂ ಮತ್ತು ಸಬ್ಬತ್ ದಿನಗಳಲ್ಲಿ ಯೆರೂಸಲೇಮಿಗೆ ದ್ರಾಕ್ಷಾರಸವನ್ನೂ, ದ್ರಾಕ್ಷಿಹಣ್ಣುಗಳನ್ನೂ, ಅಂಜೂರದ ಹಣ್ಣುಗಳನ್ನೂ, ಎಲ್ಲಾ ಹೊರೆಗಳನ್ನೂ ತರುವುದನ್ನು ನಾನು ಕಂಡೆನು. ಆದ್ದರಿಂದ, ವಿಶ್ರಾಂತಿಯ ದಿನದಲ್ಲಿ ಮಾರುವುದರ ವಿರೋಧವಾಗಿ ನಾನು ಎಚ್ಚರಿಸಿದೆನು.
16 And, men of Tyre, dwelt therein, who were bringing in fish—and every kind of ware for sale, —and were selling, on the sabbath, to the sons of Judah, and in Jerusalem;
ಇದಲ್ಲದೆ ಮೀನುಗಳನ್ನೂ, ಎಲ್ಲಾ ಸರಕುಗಳನ್ನೂ ತೆಗೆದುಕೊಂಡು ಬಂದು ಸಬ್ಬತ್ ದಿನದಲ್ಲಿ ಯೆಹೂದದ ಮಕ್ಕಳಿಗೆ ಮಾರುವ ಟೈರಿನವರು ಯೆರೂಸಲೇಮಿನಲ್ಲಿ ವಾಸವಾಗಿದ್ದರು.
17 so I contended with the nobles of Judah, —and said unto them, What is this wicked thing which, ye, are doing, and profaning the sabbath day?
ಆಗ ನಾನು ಯೆಹೂದದ ಶ್ರೇಷ್ಠರನ್ನು ಗದರಿಸಿ ಅವರಿಗೆ, “ಸಬ್ಬತ್ ದಿನವನ್ನು ನೀವು ಅಪವಿತ್ರ ಮಾಡುವ ಈ ಕೆಟ್ಟ ಕಾರ್ಯವೇನು?
18 Was it not, thus, your fathers did, and our God brought upon us all this calamity, and upon this city?—and, ye, would add indignation against Israel, by profaning the sabbath!
ನಿಮ್ಮ ತಂದೆಗಳು ಈ ಪ್ರಕಾರ ಮಾಡಿದ್ದರಿಂದ, ನಮ್ಮ ದೇವರು ನಮ್ಮ ಮೇಲೆಯೂ, ಪಟ್ಟಣದ ಮೇಲೆಯೂ ಈ ಕೇಡನ್ನೆಲ್ಲಾ ಬರಮಾಡಲಿಲ್ಲವೋ? ಆದರೆ ನೀವು ಸಬ್ಬತ್ ದಿನವನ್ನು ಅಪವಿತ್ರ ಮಾಡುವುದರಿಂದ ಇಸ್ರಾಯೇಲಿನ ಮೇಲೆ ಇನ್ನೂ ದೇವರ ಕೋಪವನ್ನು ಬರಮಾಡುವಿರಿ.”
19 And it came to pass, when the gates of Jerusalem made a shadow before the sabbath, then gave I word, and they shut the doors, and I gave word, that they should not open them, until after the sabbath, —and, some of my young men, set I near the gates, so that no burden should be brought in, on the sabbath day.
ಸಬ್ಬತ್ ದಿನಕ್ಕೆ ಮುಂಚೆ ಯೆರೂಸಲೇಮಿನ ಬಾಗಿಲುಗಳಲ್ಲಿ ಕತ್ತಲಾಗಲಾರಂಭಿಸಿದಾಗ ಬಾಗಿಲುಗಳನ್ನು ಹಾಕುವ ಹಾಗೆಯೂ, ಸಬ್ಬತ್ ದಿನವು ತೀರುವವರೆಗೆ ಅವುಗಳನ್ನು ತೆರೆಯದೆ ಇರುವ ಹಾಗೆಯೂ ನಾನು ಅವರಿಗೆ ಹೇಳಿದೆನು. ಸಬ್ಬತ್ ದಿನದಲ್ಲಿ ಹೊರೆ ಏನಾದರೂ ಒಳಗೆ ತರದ ಹಾಗೆ ನನ್ನ ಸೇವಕರಲ್ಲಿ ಕೆಲವರನ್ನು ಬಾಗಿಲುಗಳ ಬಳಿಯಲ್ಲಿ ಇಟ್ಟೆನು.
20 But the traders and sellers of all kinds of wares lodged outside Jerusalem once or twice.
ಆಗ ವರ್ತಕರೂ, ಎಲ್ಲಾ ಸರಕುಗಳನ್ನು ಮಾರುವವರೂ ಒಂದೆರಡು ಸಾರಿ ಯೆರೂಸಲೇಮಿನ ಹೊರಗೆ ರಾತ್ರಿಯನ್ನು ಕಳೆದರು.
21 Therefore I testified against them, and said unto them, Wherefore are ye lodging against the wall? if ye do it again, a hand, will I thrust upon you, —From that time, they came not on the sabbath.
ಆಗ ನಾನು ಅವರನ್ನು ಗದರಿಸಿ ಅವರಿಗೆ, “ನೀವು ಕೋಟೆಯ ಗೋಡೆಯ ಹೊರಗೆ ಏಕೆ ಇಳುಕೊಂಡಿದ್ದೀರಿ? ನೀವು ಇನ್ನು ಮೇಲೆ ಹಾಗೆ ಮಾಡಿದರೆ ನಿಮ್ಮನ್ನು ಸೆರೆಗೆ ಹಾಕುವೆನು,” ಎಂದೆನು. ಆ ದಿನದಿಂದ ಅವರು ಸಬ್ಬತ್ ದಿನದಲ್ಲಿ ಬರಲೇ ಇಲ್ಲ.
22 And I gave word to the Levites, that they should be purifying themselves and coming in, as keepers of the gates, to hallow the sabbath day. This also, remember to me, O my God, and have pity upon me, according to the abundance of thy lovingkindness.
ಆಗ ಲೇವಿಯರು ತಮ್ಮನ್ನು ಶುಚಿ ಮಾಡಿಕೊಂಡು ಬಂದು ಸಬ್ಬತ್ ದಿನವನ್ನು ಪರಿಶುದ್ಧವಾಗಿ ಆಚರಿಸಬೇಕೆಂದೂ, ಬಾಗಿಲುಗಳನ್ನು ಕಾಯಬೇಕೆಂದೂ ಅವರಿಗೆ ಹೇಳಿದೆನು. ನನ್ನ ದೇವರೇ, ಇದಕ್ಕಾಗಿ ಸಹ ನೀವು ನನ್ನನ್ನು ನೆನಸಿ, ನಿಮ್ಮ ಮಹಾ ಪ್ರೀತಿಯ ಪ್ರಕಾರ ನನ್ನನ್ನು ಕರುಣಿಸಿರಿ.
23 Moreover, in these days, saw I the Jews who had married women of Ashdod, of Ammon, of Moab;
ಆ ದಿನಗಳಲ್ಲಿ ಅಮ್ಮೋನ್, ಮೋವಾಬ್, ಅಷ್ಡೋದ್ ಎಂಬ ದೇಶಗಳ ಸ್ತ್ರೀಯರನ್ನು ಮದುವೆಮಾಡಿಕೊಂಡ ಯೆಹೂದ್ಯರನ್ನು ಕಂಡೆನು.
24 and, their children, were one-half speaking the language of Ashdod, and understood not how to speak the language of the Jews, —but after the tongue of both people.
ಇವರ ಮಕ್ಕಳು ಅರ್ಧಮಂದಿ ಯೆಹೂದ್ಯರ ಭಾಷೆಯಲ್ಲಿ ಮಾತಾಡಲು ತಿಳಿಯದೆ, ಅಷ್ಡೋದ್ಯರ ಮತ್ತು ಬೇರೆ ಭಾಷೆಯನ್ನಾಡುತ್ತಾರೆ ಎಂದು ತಿಳಿಯಿತು.
25 So I contended with them, and laid a curse upon them, and I smote, from among them, certain men, and pulled out their hair, —and I put them on oath by God, Ye shall not give your daughters unto their sons, nor take of their daughters, for your sons nor for yourselves.
ಆಗ ನಾನು ಅವರನ್ನು ಗದರಿಸಿ, ಶಪಿಸಿ, ಅವರಲ್ಲಿ ಕೆಲವರನ್ನು ಹೊಡೆದು, ಅವರ ಕೂದಲನ್ನು ಕಿತ್ತು, “ನೀವು ನಿಮ್ಮ ಪುತ್ರಿಯರನ್ನು ಅವರ ಪುತ್ರರಿಗೂ, ಅವರ ಪುತ್ರಿಯರನ್ನು ನಿಮ್ಮ ಪುತ್ರರಿಗೂ, ಮದುವೆಮಾಡಿಕೊಡಬೇಡಿರಿ, ಎಂದು ದೇವರ ಹೆಸರಿನಲ್ಲಿ ಅವರಿಂದ ಪ್ರಮಾಣಮಾಡಿಸಿದೆನು.
26 Was it not, over these things, that Solomon king of Israel sinned—though, among many nations, there was no king such as he, and he was, beloved by his God, and so God gave him to be king over all Israel, —even him, did foreign women, cause to sin.
ಇಸ್ರಾಯೇಲಿನ ಅರಸನಾದ ಸೊಲೊಮೋನನು ಇಂತಹ ಮದುವೆಗಳಿಂದ ಪಾಪ ಮಾಡಿದನಲ್ಲವೇ? ಅನೇಕ ಜನಾಂಗಗಳಲ್ಲಿ ಅವನಿಗೆ ಸಮಾನನಾದ ಅರಸನು ಇರಲಿಲ್ಲ, ಅವನು ತನ್ನ ದೇವರಿಗೆ ವಿಶೇಷಪ್ರಿಯನಾಗಿದ್ದನು, ಆದ್ದರಿಂದಲೇ ದೇವರು ಅವನನ್ನು ಎಲ್ಲ ಇಸ್ರಾಯೇಲರ ಮೇಲೆ ಅರಸನನ್ನಾಗಿ ನೇಮಿಸಿದರು. ಆದರೂ ವಿದೇಶಿ ಸ್ತ್ರೀಯರು ಅವನನ್ನು ಕೂಡ ಪಾಪಮಾಡುವ ಹಾಗೆ ಮಾಡಿದರು.
27 Unto you, then, shall we hearken, to do all this great wickedness, to act unfaithfully with our God, —by marrying foreign wives?
ನೀವು ವಿದೇಶಿ ಸ್ತ್ರೀಯರನ್ನು ಮದುವೆಮಾಡಿಕೊಂಡು, ನಮ್ಮ ದೇವರಿಗೆ ಅಪರಾಧಮಾಡಿ, ಅದೇ ಘೋರವಾದ ದುಷ್ಕೃತ್ಯವನ್ನು ಮಾಡಲು ನಾವು ಒಪ್ಪಿಕೊಳ್ಳುವುದಿಲ್ಲ ನಿಮ್ಮ ಮಾತು ಕೇಳಬಹುದೋ?” ಎಂದು ಗದರಿಸಿದೆನು.
28 And, one of the sons of Joiada, son of Eliashib the high priest, was son-in-law to Sanballat the Horonite, —therefore I chased him from me.
ಮಹಾಯಾಜಕನಾದ ಎಲ್ಯಾಷೀಬನ ಮಗ ಯೋಯಾದನ ಮಕ್ಕಳಲ್ಲಿ ಒಬ್ಬನು ಹೋರೋನಿನವನಾದ ಸನ್ಬಲ್ಲಟನಿಗೆ ಅಳಿಯನಾದ ಕಾರಣ ನಾನು ಅವನನ್ನು ನನ್ನ ಬಳಿಯಿಂದ ಓಡಿಸಿಬಿಟ್ಟೆನು.
29 Remember them, O my God, —on account of the Defilings of the Priesthood, and the Covenant of the Priesthood, and of the Levites.
ನನ್ನ ದೇವರೇ, ಅವರು ಯಾಜಕತ್ವವನ್ನೂ, ಯಾಜಕರ ಮತ್ತು ಲೇವಿಯರ ಒಡಂಬಡಿಕೆಯನ್ನೂ, ಅಶುದ್ಧ ಮಾಡಿದ್ದಾರೆ; ಇದನ್ನು ನೆನಪುಮಾಡಿಕೊಳ್ಳಿರಿ.
30 So I purified them from everything foreign, —and appointed charges unto the priests and unto the Levites, every one in his work;
ಹೀಗೆಯೇ ನಾನು ಅವರನ್ನು ಇತರ ಜನರಿಂದ ಬಿಡಿಸಿ, ಶುದ್ಧಪಡಿಸಿದೆ. ಯಾಜಕರಿಗೂ, ಲೇವಿಯರಿಗೂ, ಅವರವರ ಕೆಲಸದ ಪ್ರಕಾರ,
31 also for the offering of wood, at times appointed, and for the firstfruits. Remember me, O my God, for good!
ನೇಮಿತ ಕಾಲದಲ್ಲಿ ಸಲ್ಲತಕ್ಕ ಅರ್ಪಣೆಯ ಕಟ್ಟಿಗೆಗಳನ್ನೂ, ಪ್ರಥಮ ಫಲದ ವಿಷಯವಾಗಿ ಕ್ರಮಗಳನ್ನು ಏರ್ಪಡಿಸಿದೆನು. ನನ್ನ ದೇವರೇ, ಇದನ್ನು ಸಹ ನನ್ನ ಮೇಲಿನ ನಿಮ್ಮ ದಯೆಯೊಂದಿಗೆ ನನ್ನನ್ನು ನೆನಪುಮಾಡಿಕೊಳ್ಳಿರಿ.

< Nehemiah 13 >