< Nehemiah 9 >
1 Now in the twenty and fourth day of this month the children of Israel were assembled with fasting, and with sackcloth, and earth upon them.
೧ಅದೇ ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ಇಸ್ರಾಯೇಲರು ಉಪವಾಸವಾಗಿದ್ದು ಗೋಣೀತಟ್ಟನ್ನು ಕಟ್ಟಿಕೊಂಡು ತಮ್ಮ ಮೇಲೆ ಮಣ್ಣುಹಾಕಿಕೊಂಡು ನೆರೆದು ಬಂದರು.
2 And the seed of Israel separated themselves from all strangers, and stood and confessed their sins, and the iniquities of their fathers.
೨ಇಸ್ರಾಯೇಲ್ ಸಂತಾನದವರು ಎಲ್ಲಾ ಅನ್ಯಕುಲದವರಿಂದ ತಮ್ಮನ್ನು ಬೇರ್ಪಡಿಸಿಕೊಂಡು, ಎದ್ದು ನಿಂತುಕೊಂಡು ತಮ್ಮ ಪಾಪಗಳನ್ನೂ, ತಮ್ಮ ಪೂರ್ವಿಕರ ಪಾಪಗಳನ್ನೂ ಆತನಿಗೆ ಅರಿಕೆಮಾಡಿದರು.
3 And they stood up in their place, and read in the book of the law of the LORD their God a fourth part of the day; and [another] fourth part they confessed, and worshipped the LORD their God.
೩ಅವರು ಮೂರು ತಾಸುಗಳವರೆಗೂ ತಮ್ಮ ತಮ್ಮ ಸ್ಥಳಗಳಲ್ಲಿ ನಿಂತುಕೊಂಡು ತಮ್ಮ ದೇವರಾದ ಯೆಹೋವನ ಧರ್ಮನಿಯಮಗಳ ಗ್ರಂಥವನ್ನು ಪಾರಾಯಣಮಾಡಿದರು. ತರುವಾಯ ಇನ್ನೂ ಮೂರು ತಾಸು ತಮ್ಮ ದೇವರಾದ ಯೆಹೋವನಿಗೆ ಅಡ್ಡ ಬಿದ್ದು ಪಾಪಗಳನ್ನು ಅರಿಕೆಮಾಡಿದರು.
4 Then stood up upon the stairs of the Levites, Jeshua, and Bani, Kadmiel, Shebaniah, Bunni, Sherebiah, Bani, [and] Chenani, and cried with a loud voice unto the LORD their God.
೪ಯೇಷೂವ, ಬಾನೀ ಕದ್ಮೀಯೇಲ್, ಶೆಬನ್ಯ, ಬುನ್ನೀ, ಶೇರೇಬ್ಯ, ಬಾನೀ, ಕೆನಾನೀ ಎಂಬುವವರು ಲೇವಿಯರು ಮೆಟ್ಟಿಲುಗಳ ಮೇಲೆ ನಿಂತು ಮಹಾಶಬ್ದದಿಂದ ತಮ್ಮ ದೇವರಾದ ಯೆಹೋವನಿಗೆ ಮೊರೆಯಿಟ್ಟರು.
5 Then the Levites, Jeshua, and Kadmiel, Bani, Hashabneiah, Sherebiah, Hodiah, Shebaniah, [and] Pethahiah, said, Stand up and bless the LORD your God from everlasting to everlasting: and blessed be thy glorious name, which is exalted above all blessing and praise.
೫ಆನಂತರ ಲೇವಿಯರಾದ ಯೇಷೂವ, ಕದ್ಮೀಯೇಲ್, ಬಾನೀ, ಹಷಬ್ನೆಯ, ಶೇರೇಬ್ಯ, ಹೋದೀಯ, ಶೆಬನ್ಯ, ಪೆತಹ್ಯ ಎಂಬುವವರು, “ಏಳಿರಿ, ನಮ್ಮ ದೇವರಾದ ಯೆಹೋವನಿಗೆ ಯುಗಯುಗಕ್ಕೂ ಸ್ತೋತ್ರವನ್ನು ಸಲ್ಲಿಸಿರಿ. ಯೆಹೋವನೇ, ಸರ್ವಸ್ತುತಿ ಕೀರ್ತನೆಗಳಿಗೂ ಮೀಗಿಲಾಗಿರುವ ನಿನ್ನ ಮಹಾನಾಮಕ್ಕೆ ಮಹಿಮೆಯುಂಟಾಗಲಿ.
6 Thou art the LORD, even thou alone; thou hast made heaven, the heaven of heavens, with all their host, the earth and all things that are thereon, the seas and all that is in them, and thou preservest them all; and the host of heaven worshippeth thee.
೬ಯೆಹೋವನೇ ನೀನೊಬ್ಬನೇ ದೇವರು; ನೀನು ಉನ್ನತೋನ್ನತವಾದ ಆಕಾಶವನ್ನೂ, ಅದರ ಸೈನ್ಯವನ್ನೂ, ಭೂಮಿಯನ್ನೂ ಅದರ ಮೇಲಿರುವುದನ್ನೂ, ಸಮುದ್ರಗಳನ್ನೂ ಎಲ್ಲಾ ಜಲಚರಗಳನ್ನೂ ಉಂಟುಮಾಡಿ, ಸಮಸ್ತ ಪ್ರಾಣಿಗಳಿಗೂ ಜೀವಕೊಡುವಾತನಾಗಿರುತ್ತೀ. ಆಕಾಶಸೈನ್ಯದವರು ನಿನ್ನನ್ನು ಆರಾಧಿಸುತ್ತಾರೆ.
7 Then art the LORD the God, who didst choose Abram and broughtest him forth out of Ur of the Chaldees, and gavest him the name of Abraham;
೭ಯೆಹೋವನೇ, ಅಬ್ರಾಮನನ್ನು ಆರಿಸಿಕೊಂಡು ಕಸ್ದೀಯರ ಊರ್ ಎಂಬ ಪಟ್ಟಣದಿಂದ ಬರಮಾಡಿ, ಅವನಿಗೆ ಅಬ್ರಹಾಮನೆಂಬ ಹೆಸರನ್ನು ಕೊಟ್ಟ ದೇವರು ನೀನೇ.
8 and foundest his heart faithful before thee, and madest a covenant with him to give the land of the Canaanite, the Hittite, the Amorite, and the Perizzite, and the Jebusite, and the Girgashite, even to give it unto his seed, and hast performed thy words; for thou art righteous.
೮ಅವನು ಯಥಾರ್ಥಚಿತ್ತನೆಂದು ಕಂಡು ಅವನಿಗೆ, ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜ್ಜೀಯರು, ಯೆಬೂಸಿಯರು, ಗಿರ್ಗಾಷಿಯರು ಇವರ ದೇಶವನ್ನು ನಿನ್ನ ಸಂತಾನದವರಿಗೆ ಕೊಡುತ್ತೇನೆಂದು ವಾಗ್ದಾನಮಾಡಿ ಅದನ್ನು ನೆರವೇರಿಸಿದ್ದರಿಂದ ನೀನು ನೀತಿಸ್ವರೂಪನು.
9 And thou sawest the affliction of our fathers in Egypt, and heardest their cry by the Red Sea;
೯ಐಗುಪ್ತ ದೇಶದಲ್ಲಿ ನಮ್ಮ ಪೂರ್ವಿಕರಿಗಿದ್ದ ಕಷ್ಟವನ್ನು ನೋಡಿ, ಕೆಂಪುಸಮುದ್ರದ ಬಳಿಯಲ್ಲಿ ಅವರು ಮೊರೆಯಿಟ್ಟಾಗ ನೀನು ಆಲಿಸಿದಿ.
10 and shewedst signs and wonders upon Pharaoh, and on all his servants, and on all the people of his land; for thou knewest that they dealt proudly against them; and didst get thee a name, as it is this day.
೧೦ಐಗುಪ್ತ್ಯರು ಗರ್ವಿಗಳಾಗಿ ನಮ್ಮ ಪೂರ್ವಿಕರನ್ನು ಕುಗ್ಗಿಸಿದಾಗ, ನೀನು ಫರೋಹನಲ್ಲಿಯೂ, ಅವನ ಸೇವಕರಲ್ಲಿಯು, ಅವನ ದೇಶದ ಜನರಲ್ಲಿಯೂ ಅದ್ಭುತಕಾರ್ಯಗಳನ್ನೂ ಸೂಚಕಕಾರ್ಯಗಳನ್ನು ನಡೆಸಿ ಈಗ ನಿನಗಿರುವ ಕೀರ್ತಿಯನ್ನು ಸ್ಥಾಪಿಸಿಕೊಂಡಿರುವೆ.
11 And thou didst divide the sea before them, so that they went through the midst of the sea on the dry land; and their pursuers thou didst cast into the depths, as a stone into the mighty waters.
೧೧ನಮ್ಮ ಪೂರ್ವಿಕರು ಸಮುದ್ರದ ಮಧ್ಯದಲ್ಲಿ ಒಣನೆಲದಲ್ಲೇ ಹಾದುಹೋಗುವಂತೆ ಅವರ ಮುಂದೆ ಸಮುದ್ರವನ್ನು ಭೇದಿಸಿದ್ದೀ. ಅವರನ್ನು ಹಿಂದಟ್ಟಿದವರನ್ನು ಕಲ್ಲಿನಂತೆ ಮಹಾಜಲರಾಶಿಯ ತಳದಲ್ಲಿ ಮುಳುಗಿಸಿಬಿಟ್ಟೆ.
12 Moreover thou leddest them in a pillar of cloud by day; and in a pillar of fire by night, to give them light in the way wherein they should go.
೧೨ಹಗಲಿನಲ್ಲಿ ಮೇಘಸ್ತಂಭವಾಗಿಯೂ, ರಾತ್ರಿ ವೇಳೆಯಲ್ಲಿ ಅವರು ನಡೆಯತಕ್ಕ ದಾರಿಯಲ್ಲಿ ಬೆಳಕುಕೊಡುವುದಕ್ಕೆ ಅಗ್ನಿಸ್ತಂಭವಾಗಿಯೂ ಅವರ ಮುಂದೆ ನೀನು ನಡೆದೆ.
13 Thou camest down also upon mount Sinai, and spakest with them from heaven, and gavest them right judgments and true laws, good statutes and commandments:
೧೩ಸೀನಾಯಿ ಬೆಟ್ಟದ ಮೇಲೆ ಇಳಿದು ಬಂದು ಆಕಾಶದ ಕಡೆಯಿಂದ ಅವರೊಡನೆ ಮಾತನಾಡಿ, ಅವರಿಗೆ ನೀತಿನಿಯಮಗಳನ್ನೂ, ಯಥಾರ್ಥ ಧರ್ಮೋಪದೇಶವನ್ನೂ, ಶ್ರೇಷ್ಠವಾದ ಆಜ್ಞಾವಿಧಿಗಳನ್ನೂ ಅನುಗ್ರಹಿಸಿದೆ.
14 and madest known unto them thy holy sabbath, and commandedst them commandments, and statutes, and a law, by the hand of Moses thy servant:
೧೪ನಿನ್ನ ಸೇವಕನಾದ ಮೋಶೆಯ ಮುಖಾಂತರ ನಿನಗೆ ಮೀಸಲಾದ ಸಬ್ಬತೆಂಬ ವಿಶ್ರಾಂತಿ ದಿನವನ್ನು ಅವರಿಗೆ ಪ್ರಕಟಿಸಿ, ಆಜ್ಞಾವಿಧಿನಿಯಮಗಳನ್ನೂ ಅವರಿಗೆ ಕಲಿಸಿದೆ.
15 and gavest them bread from heaven for their hunger, and broughtest forth water for them out of the rock for their thirst, and commandedst them that they should go in to possess the land which thou hadst lifted up thine hand to give them.
೧೫ಅವರಿಗೆ ಹಸಿವಾದಾಗ ಪರಲೋಕದಿಂದ ಆಹಾರವನ್ನು ಕೊಟ್ಟು, ಬಾಯಾರಿದಾಗ ಬಂಡೆಯೊಳಗಿಂದ ನೀರನ್ನು ಬರಮಾಡಿ, ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದ ದೇಶದಲ್ಲಿ ನೀವು ಸೇರಿ ಅದನ್ನು ಸ್ವಾಧೀನಮಾಡಿಕೊಳ್ಳಿರಿ ಎಂದು ಅವರಿಗೆ ಆಜ್ಞಾಪಿಸಿದೆ.
16 But they and our fathers dealt proudly, and hardened their neck, and hearkened not to thy commandments,
೧೬ಆದರೂ ನಮ್ಮ ಪೂರ್ವಿಕರು ಗರ್ವಿಗಳಾಗಿ ಹಠಹಿಡಿದು, ನಿನ್ನ ಆಜ್ಞೆಗಳಿಗೆ ಅವಿಧೇಯರಾದರು.
17 and refused to obey, neither were mindful of thy wonders that thou didst among them; but hardened their neck, and in their rebellion appointed a captain to return to their bondage: but thou art a God ready to pardon, gracious and full of compassion, slow to anger, and plenteous in mercy, and forsookest them not.
೧೭ನೀನು ಅವರ ಮಧ್ಯದಲ್ಲಿ ಮಾಡಿದ ಮಹತ್ಕಾರ್ಯಗಳನ್ನು ಅವರು ಬೇಗನೆ ಮರೆತು, ನಿನ್ನ ಮಾತಿಗೆ ಕಿವಿಗೊಡದೆ ಹಠಹಿಡಿದು, ತಮಗೊಬ್ಬ ನಾಯಕನನ್ನು ನೇಮಿಸಿಕೊಂಡು, ಮೊದಲಿನಂತೆ ದಾಸರಾಗಿರುವುದಕ್ಕಾಗಿ ಐಗುಪ್ತಕ್ಕೆ ಹಿಂದಿರುಗಬೇಕೆಂದಿದ್ದರು. ಆದರೆ ನೀನಾದರೋ ಪಾಪಗಳನ್ನು ಕ್ಷಮಿಸುವವನೂ, ಕನಿಕರ ದಯೆಗಳುಳ್ಳವನೂ, ದೀರ್ಘಶಾಂತನೂ, ಕೃಪಾಳುವೂ ಆಗಿರುವ ದೇವರಾಗಿರುವುದರಿಂದ ನೀನು ಅವರ ಕೈಬಿಡಲಿಲ್ಲ.
18 Yea, when they had made them a molten calf, and said, This is thy God that brought thee up out of Egypt, and had wrought great provocations;
೧೮ಅವರು ತಮಗೆ ಎರಕದ ಬಸವನನ್ನು ಮಾಡಿಕೊಂಡು, ‘ಇಸ್ರಾಯೇಲರೇ, ನಿಮ್ಮನ್ನು ಐಗುಪ್ತದಿಂದ ಕರೆದುಕೊಂಡು ಬಂದ ದೇವರು ಇದೇ’ ಎಂದು ಹೇಳಿ ನಿನ್ನನ್ನು ಅಸಡ್ಡೆಮಾಡಿದಾಗಲೂ,
19 yet thou in thy manifold mercies forsookest them not in the wilderness: the pillar of cloud departed not from over them by day, to lead them in the way; neither the pillar of fire by night, to shew them light, and the way wherein they should go.
೧೯ಕರುಣಾನಿಧಿಯಾದ ನೀನು ಅವರನ್ನು ಅರಣ್ಯದಲ್ಲಿ ಕೈಬಿಡಲಿಲ್ಲ, ಹಗಲಿನಲ್ಲಿ ಅವರಿಗೆ ದಾರಿ ತೋರಿಸುತ್ತಿದ್ದ ಮೇಘಸ್ತಂಭವೂ, ರಾತ್ರಿವೇಳೆಯಲ್ಲಿ ಅವರು ನಡೆಯತಕ್ಕ ದಾರಿಯಲ್ಲಿ ಬೆಳಕುಕೊಡುತ್ತಿದ್ದ ಅಗ್ನಿಸ್ತಂಭವೂ, ಅವರನ್ನು ಬಿಟ್ಟುಹೋಗದಂತೆ ಮಾಡಿದೆ.
20 Thou gavest also thy good spirit to instruct them, and withheldest not thy manna from their mouth, and gavest them water for their thirst.
೨೦ಅವರನ್ನು ಉಪದೇಶಿಸಲು ನೀನು ನಿನ್ನ ಒಳ್ಳೆಯ ಆತ್ಮನನ್ನು ಕೊಟ್ಟೆ. ಅವರ ಬಾಯಿಂದ ಮನ್ನವನ್ನು ಹಿಂದೆಗೆಯಲಿಲ್ಲ. ಬಾಯಾರಿದಾಗ ಅವರಿಗೆ ನೀರನ್ನು ಕೊಟ್ಟೆ.
21 Yea, forty years didst thou sustain them in the wilderness, [and] they lacked nothing; their clothes waxed not old, and their feet swelled not.
೨೧ನಲ್ವತ್ತು ವರ್ಷ ಅವರನ್ನು ಅರಣ್ಯದಲ್ಲಿ ಸಾಕುತ್ತಾ ಇದ್ದೆ. ಅವರಿಗೆ ಯಾವ ಕೊರತೆಯೂ ಆಗಲಿಲ್ಲ. ಅವರ ಬಟ್ಟೆಗಳು ಹರಿದುಹೋಗಲಿಲ್ಲ, ಅವರ ಕಾಲುಗಳು ನೋವಿನಿಂದ ಊದಿಕೊಳ್ಳಲಿಲ್ಲ.
22 Moreover thou gavest them kingdoms and peoples, which thou didst allot after their portions: so they possessed the land of Sihon, even the land of the king of Heshbon, and the land of Og king of Bashan.
೨೨ರಾಜ್ಯಗಳನ್ನೂ, ಜನಾಂಗಗಳನ್ನು ಅವರಿಗೆ ವಶಪಡಿಸಿ, ಆ ರಾಜ್ಯಗಳನ್ನು ಅವರಿಗೆ ಸ್ವತ್ತಾಗಿ ಹಂಚಿಕೊಟ್ಟೆ. ಹೀಗೆ ಅವರು ಹೆಷ್ಬೋನಿನ ಅರಸನಾದ ಸೀಹೋನ್, ಬಾಷಾನಿನ ಅರಸನಾದ ಓಗ್ ಇವರ ಪ್ರಾಂತ್ಯಗಳನ್ನು ಸ್ವಾಧೀನಪಡಿಸಿಕೊಂಡರು.
23 Their children also multipliedst thou as the stars of heaven, and broughtest them into the land, concerning which thou didst say to their fathers, that they should go in to possess it.
೨೩ಅವರ ಮಕ್ಕಳನ್ನು ಆಕಾಶದ ನಕ್ಷತ್ರಗಳಂತೆ ಹೆಚ್ಚಿಸಿ, ನೀವು ಈ ದೇಶದೊಳಕ್ಕೆ ಪ್ರವೇಶಿಸಿ ಅದನ್ನು ಸ್ವಾಧೀನಮಾಡಿಕೊಳ್ಳುವಿರಿ ಎಂದು ಅವರ ಪೂರ್ವಿಕರಿಗೆ ವಾಗ್ದಾನಮಾಡಿದ್ದ ದೇಶಕ್ಕೆ ಅವರನ್ನು ಬರಮಾಡಿದೆ.
24 So the children went in and possessed the land, and thou subduedst before them the inhabitants of the land, the Canaanites, and gavest them into their hands, with their kings, and the peoples of the land, that they might do with them as they would.
೨೪ಅವರು ಆ ದೇಶದಲ್ಲಿ ಹೋಗಿ ಸೇರಿಕೊಂಡು ಅದನ್ನು ಸ್ವಾಧೀನಮಾಡಿಕೊಂಡರು. ನೀನು ಅವರ ಮುಂದೆ ದೇಶನಿವಾಸಿಗಳಾಗಿದ್ದ ಕಾನಾನ್ಯರನ್ನು ಕುಗ್ಗಿಸಿ ಮನಸ್ಸಿಗೆ ಬಂದಂತೆ ನಡಿಸುವ ಹಾಗೆ ಆ ದೇಶದ ರಾಜರನ್ನೂ ಪ್ರಜೆಗಳನ್ನೂ ಅವರ ಕೈಗೆ ಒಪ್ಪಿಸಿದೆ.
25 And they took fenced cities, and a fat land and possessed houses full of good things, cisterns hewn out, vineyards, and oliveyards, and fruit trees in abundance: so they did eat, and were filled, and became fat, and delighted themselves in thy great goodness.
೨೫ಅವರು ಕೋಟೆಕೊತ್ತಲುಗಳುಳ್ಳ ಪಟ್ಟಣಗಳನ್ನೂ, ಸಾರವುಳ್ಳ ಭೂಮಿಯನ್ನೂ, ಸಮಸ್ತ ವಿಧವಾದ ಉತ್ತಮ ವಸ್ತುಗಳಿಂದ ತುಂಬಿದ ಮನೆಗಳನ್ನೂ, ತೋಡಿದ ಬಾವಿಗಳನ್ನೂ, ದ್ರಾಕ್ಷಿತೋಟಗಳನ್ನೂ, ಎಣ್ಣೇಮರಗಳ ತೋಪುಗಳನ್ನೂ, ಹೆಚ್ಚಾದ ಹಣ್ಣಿನ ಮರ ಇವುಗಳನ್ನೂ ವಶಮಾಡಿಕೊಂಡು ಚೆನ್ನಾಗಿ ತಿಂದು, ಕುಡಿದು ತೃಪ್ತರಾಗಿ ಕೊಬ್ಬಿ, ನೀನು ಕೊಟ್ಟ ಸಮೃದ್ಧಿಯಲ್ಲಿ ಆನಂದಿಸುತ್ತಿದ್ದರು.
26 Nevertheless they were disobedient, and rebelled against thee, and cast thy law behind their back, and slew thy prophets which testified against them to turn them again unto thee, and they wrought great provocations.
೨೬ಆಗ ಅವರು ನಿನಗೆ ಅವಿಧೇಯರಾಗಿ ತಿರುಗಿ ಬಿದ್ದು ನಿನ್ನ ಧರ್ಮೋಪದೇಶವನ್ನು ಉಲ್ಲಂಘಿಸಿ ತಮ್ಮನ್ನು ಎಚ್ಚರಿಸುವುದಕ್ಕೂ ನಿನ್ನ ಕಡೆಗೆ ತಿರುಗಿಸುವುದಕ್ಕೂ ಪ್ರಯತ್ನಿಸುತ್ತಿದ್ದ ನಿನ್ನ ಪ್ರವಾದಿಗಳನ್ನು ಕೊಂದು ಹಾಕಿ ನಿನ್ನನ್ನು ಅಸಡ್ಡೆಮಾಡಿದರು.
27 Therefore thou deliveredst them into the hand of their adversaries, who distressed them: and in the time of their trouble, when they cried unto thee, thou heardest from heaven; and according to thy manifold mercies thou gavest them saviours who saved them out of the hand of their adversaries.
೨೭ಆದ್ದರಿಂದ ನೀನು ಅವರನ್ನು ದಂಡಿಸುವ ವಿರೋಧಿಗಳ ಕೈಗೆ ಒಪ್ಪಿಸಿದೆ. ಅವರು ತಮ್ಮ ಕಷ್ಟಕಾಲದಲ್ಲಿ ನಿನಗೆ ಮೊರೆಯಿಡಲು ಪರಲೋಕದಿಂದ ನೀನು ಅವರಿಗೆ ಕಿವಿಗೊಟ್ಟು ನಿನ್ನ ಕರುಣಾತಿಶಯದಿಂದ ರಕ್ಷಕರನ್ನು ಕಳುಹಿಸಿ ವಿರೋಧಿಗಳ ಕೈಯಿಂದ ಅವರನ್ನು ಪಾರುಮಾಡಿದೆ.
28 But after they had rest, they did evil again before thee: therefore leftest thou them in the hand of their enemies, so that they had the dominion over them: yet when they returned, and cried unto thee, thou heardest from heaven; and many times didst thou deliver them according to thy mercies;
೨೮ಉಪಶಮನವನ್ನು ಪಡೆದ ಮೇಲೆ ಅವರು ತಿರುಗಿ ದ್ರೋಹಿಗಳಾಗಿ ನಡೆಯುತ್ತಿರುವುದನ್ನು ನೀನು ಕಂಡು ಅವರ ಮೇಲೆ ದೊರೆತನ ನಡೆಸತಕ್ಕ ವೈರಿಗಳ ಕೈಗೆ ಅವರನ್ನು ಒಪ್ಪಿಸಿದೆ. ಆಗ ಅವರು ಪಶ್ಚಾತ್ತಾಪಪಟ್ಟು ಕೂಗಿಕೊಳ್ಳಲು ಪುನಃ ಪರಲೋಕದಿಂದ ನೀನು ಕೇಳಿ ನಿನ್ನ ಕರುಣಾತಿಶಯದಿಂದ ಅವರನ್ನು ಅನೇಕಾವರ್ತಿ ರಕ್ಷಿಸಿದೆ.
29 and testifiedst against them, that thou mightest bring them again unto thy law: yet they dealt proudly, and hearkened not unto thy commandments, but sinned against thy judgments, (which if a man do, he shall live in them, ) and withdrew the shoulder, and hardened their neck, and would not hear.
೨೯ನಿನ್ನ ಧರ್ಮೋಪದೇಶಕ್ಕೆ ಪುನಃ ಮನಗೊಟ್ಟು ಬನ್ನಿರಿ ಎಂದು ಎಷ್ಟೋ ಖಂಡಿತವಾಗಿ ಅವರನ್ನು ಎಚ್ಚರಿಸಿದೆ. ಆದರೂ ಅವರು ಲಾಲಿಸದೆ ಗರ್ವಿಗಳೂ, ನಿನ್ನ ಆಜ್ಞೆಗಳಿಗೆ ಅವಿಧೇಯರೂ ಆದರು. ಕೈಕೊಳ್ಳುವ ಮನುಷ್ಯನಿಗೆ ಜೀವಾಧಾರವಾಗಿರುವ ನಿನ್ನ ವಿಧಿನ್ಯಾಯಗಳನ್ನು ಮೀರಿ ಪಾಪಮಾಡಿ ಮೊಂಡು ಬಿದ್ದು ನಿನ್ನ ಮಾತುಗಳನ್ನು ಕೇಳದೆ ಹೋದರು.
30 Yet many years didst thou bear with them, and testifiedst against them by thy spirit through thy prophets: yet would they not give ear: therefore gavest thou them into the hand of the peoples of the lands.
೩೦ನೀನು ಅನೇಕ ವರ್ಷಗಳ ತನಕ ಅವರ ವಿಷಯದಲ್ಲಿ ತಾಳ್ಮೆಯುಳ್ಳವನಾಗಿ ಪ್ರವಾದಿಗಳ ಮುಖಾಂತರ ಮಾತನಾಡುತ್ತಿದ್ದ ನಿನ್ನ ಆತ್ಮನಿಂದ ಅವರನ್ನು ಎಷ್ಟು ಎಚ್ಚರಿಸುತ್ತಿದ್ದರೂ ಅವರು ಕಿವಿಗೊಡದೆ ಹೋದ ಮೇಲೆ ನೀನು ಅವರನ್ನು ಅನ್ಯದೇಶಗಳವರ ಕೈಗೆ ಒಪ್ಪಿಸಿಬಿಟ್ಟೆ.
31 Nevertheless in thy manifold mercies thou didst not make a full end of them, nor forsake them; for thou art a gracious and merciful God.
೩೧ಆದರೆ ನೀನು ದಯೆಯೂ ಕನಿಕರವೂ ಉಳ್ಳ ದೇವರಾಗಿರುವುರಿಂದ ನಿನ್ನ ಮಹಾಕೃಪಾನುಸಾರವಾಗಿ ಅವರನ್ನು ನಾಶಮಾಡಲಿಲ್ಲ, ಕೈಬಿಡಲೂ ಇಲ್ಲ.
32 Now therefore, our God, the great, the mighty, and the terrible God, who keepest covenant and mercy, let not all the travail seem little before thee, that hath come upon us, on our kings, on our princes, and on our priests, and on our prophets, and on our fathers; and on all thy people, since the time of the kings of Assyria unto this day.
೩೨ನಮ್ಮ ದೇವರೇ, ಮಹೋನ್ನತನೂ, ಪರಾಕ್ರಮಿಯೂ, ಭಯಂಕರನೂ ಆಗಿರುವಾತನೇ, ಕೃಪಾವಾಗ್ದಾನಗಳನ್ನು ನೆರವೇರಿಸುವ ದೇವರೇ, ಅಶ್ಶೂರದ ರಾಜರ ಕಾಲದಿಂದ ಇಂದಿನವರೆಗೂ ನಮ್ಮ ಅರಸರಿಗೂ, ಪ್ರಭುಗಳಿಗೂ, ಯಾಜಕರಿಗೂ, ಪ್ರವಾದಿಗಳಿಗೂ, ಪೂರ್ವಿಕರಿಗೂ ನಿನ್ನ ಎಲ್ಲಾ ಪ್ರಜೆಗಳಿಗೂ ಪ್ರಾಪ್ತವಾದ ಕಷ್ಟವು ಅಲ್ಪವು ಎಂದು ಎಣಿಸಬೇಡ.
33 Howbeit thou art just in all that is come upon us; for thou hast dealt truly, but we have done wickedly:
೩೩ನೀನು ನಮ್ಮ ಮೇಲೆ ಎಷ್ಟು ಕೇಡನ್ನು ಬರಮಾಡಿದರೂ ನೀನು ನೀತಿಸ್ವರೂಪನೇ. ನೀನು ಸತ್ಯವನ್ನೇ ನಡಿಸಿದೆ. ನಾವಾದರೋ ದುಷ್ಟರು.
34 neither have our kings, our princes, our priests, nor our fathers, kept thy law, nor hearkened unto thy commandments and thy testimonies, wherewith thou didst testify against them.
೩೪ನಮ್ಮ ಅರಸರೂ, ಪ್ರಭುಗಳೂ, ಯಾಜಕರೂ, ಹಿರಿಯರೂ ನಿನ್ನ ಧರ್ಮೋಪದೇಶವನ್ನು ಅನುಸರಿಸಲಿಲ್ಲ, ನಿನ್ನ ಆಜ್ಞೆಗಳಿಗೆ ಕಿವಿಗೊಡಲಿಲ್ಲ. ನೀನು ಎಚ್ಚರಿಸಿ ಹೇಳಿದ ಮಾತುಗಳನ್ನು ಗಮನಿಸಲಿಲ್ಲ.
35 For they have not served thee in their kingdom, and in thy great goodness that thou gavest them, and in the large and fat land which thou gavest before them, neither turned they from their wicked works.
೩೫ಅವರು ಸ್ವರಾಜ್ಯದಲ್ಲಿದ್ದುಕೊಂಡು ನೀನು ದಯಪಾಲಿಸಿದ ಸಮೃದ್ಧಿಯನ್ನು ಅನುಭವಿಸುತ್ತಾ ನಿನ್ನ ಅನುಗ್ರಹದಿಂದ ದೊರಕಿದ ಫಲವತ್ತಾದ ವಿಶಾಲವಾದ ದೇಶದಲ್ಲಿ ವಾಸಿಸುತ್ತಾ ಇರುವಾಗ ನಿನ್ನನ್ನು ಆರಾಧಿಸದೆಯೂ ತಮ್ಮ ದುಷ್ಕೃತ್ಯಗಳನ್ನು ಬಿಡದೆಯೂ ಇದ್ದುದರಿಂದಲೇ ನಾವು ಈಗ ದಾಸರಾಗಿದ್ದೇವೆ.
36 Behold, we are servants this day, and as for the land that thou gavest unto our fathers to eat the fruit thereof and the good thereof, behold, we are servants in it.
೩೬ನೀನು ನಮ್ಮ ಪೂರ್ವಿಕರಿಗೆ, ಇದರ ಉತ್ಪನ್ನವನ್ನೂ, ಸಮೃದ್ಧಿಯನ್ನೂ ಅನುಭವಿಸಿರಿ ಎಂದು ಹೇಳಿ ಕೊಟ್ಟ ದೇಶದಲ್ಲೇ ನಾವು ದಾಸರಾಗಿರಬೇಕಾಗಿ ಬಂದಿದೆ.
37 And it yieldeth much increase unto the kings whom thou hast set over us because of our sins: also they have power over our bodies, and over our cattle, at their pleasure, and we are in great distress.
೩೭ನಮ್ಮ ಪಾಪಗಳ ನಿಮಿತ್ತವಾಗಿ ನಿನ್ನಿಂದ ನಮ್ಮ ಮೇಲೆ ನೇಮಿಸಲ್ಪಟ್ಟ ರಾಜರಿಗೆ ಈ ದೇಶದ ಹೇರಳವಾದ ಹುಟ್ಟುವಳಿಯು ಹೋಗುತ್ತಾ ಇದೆ. ದೈಹಿಕವಾಗಿ ನಮ್ಮ ಮೇಲೆ ಹಾಗೂ ನಮ್ಮ ಪಶುಗಳ ಮೇಲೆ ಅವರು ಮನಸ್ಸಿಗೆ ಬಂದಂತೆ ಅಧಿಕಾರ ನಡಿಸುತ್ತಿದ್ದಾರೆ. ನಾವು ಮಹಾಸಂಕಟದಲ್ಲಿದ್ದೇವೆ” ಎಂದು ಪ್ರಾರ್ಥಿಸಿದರು.
38 And yet for all this we make a sure covenant, and write it; and our princes, our Levites, [and] our priests, seal unto it.
೩೮ಈ ಎಲ್ಲಾ ಕಾರಣಗಳನ್ನು ನಾವು ನೆನಪುಮಾಡಿಕೊಂಡು ಲೇಖನ ರೂಪವಾದ ಪ್ರತಿಜ್ಞೆಯನ್ನು ಸ್ಥಿರಮಾಡಿಕೊಂಡಿದ್ದೇವೆ. ಅದಕ್ಕೆ ನಮ್ಮ ಪ್ರಭುಗಳೂ, ಲೇವಿಯರೂ, ಯಾಜಕರೂ ಸಹಿಮಾಡಿ ಮುದ್ರೆ ಹಾಕಿರುವರು.