< Acts 8 >

1 Shaul was consenting to his death. A great persecution arose against the church which was in Urishlim in that day. They were all scattered abroad throughout the regions of Yehuda and Samaria, except for the apostles.
ಸೌಲನು ಸ್ತೆಫನನ ಕೊಲೆಗೆ ಸಮ್ಮತಿಸಿದ್ದನು. ಆ ದಿನವೇ ಯೆರೂಸಲೇಮಿನ ಸಭೆಗೆ ವಿರೋಧವಾಗಿ ಮಹಾಹಿಂಸೆ ಪ್ರಾರಂಭವಾಯಿತು, ಅಪೊಸ್ತಲರನ್ನು ಬಿಟ್ಟು ಉಳಿದವರೆಲ್ಲರೂ ಯೂದಾಯ ಮತ್ತು ಸಮಾರ್ಯ ಪ್ರಾಂತಗಳಿಗೆ ಚದರಿಹೋದರು.
2 Devout men buried Astapanos, and lamented greatly over him.
ದೇವಭಕ್ತರು ಸ್ತೆಫನನ ಶವಸಂಸ್ಕಾರ ಮಾಡಿ, ಅವನಿಗಾಗಿ ಬಹಳ ಗೋಳಾಡಿದರು.
3 But Shaul ravaged the church, entering into every house, and dragged both men and women off to prison.
ಆದರೆ ಸೌಲನು ಸಭೆಯನ್ನು ಹಾಳುಮಾಡಲು ಪ್ರಾರಂಭಿಸಿದನು. ಅವನು ಮನೆಮನೆಗಳಿಗೆ ಹೋಗಿ ಸ್ತ್ರೀಪುರುಷರನ್ನು ಹೊರಗೆಳೆದು ಅವರನ್ನು ಸೆರೆಮನೆಯಲ್ಲಿ ಹಾಕಿಸಿದನು.
4 Therefore those who were scattered abroad went around proclaiming the word.
ಚದರಿಹೋದವರು ತಾವು ಹೋದಲ್ಲೆಲ್ಲಾ ವಾಕ್ಯವನ್ನು ಬೋಧಿಸಿದರು.
5 And Philipus went down to the city of Samaria, and proclaimed to them the Meshikha.
ಫಿಲಿಪ್ಪನು ಸಮಾರ್ಯದ ಒಂದು ಪಟ್ಟಣಕ್ಕೆ ಹೋಗಿ ಅಲ್ಲಿ ಕ್ರಿಸ್ತ ಯೇಸುವಿನ ಸಂದೇಶ ಸಾರಿದನು.
6 The crowds listened with one accord to the things that were spoken by Philipus, when they heard and saw the signs which he did.
ಜನಸಮೂಹವು ಫಿಲಿಪ್ಪನ ಬೋಧನೆ ಕೇಳಿ, ಅವನು ಮಾಡಿದ ಸೂಚಕಕಾರ್ಯಗಳನ್ನು ಕಂಡು, ಅವನು ಹೇಳಿದ್ದಕ್ಕೆಲ್ಲಾ ಮನಸ್ಸು ಕೊಟ್ಟರು.
7 For unclean spirits came out of many of those who had them. They came out, crying with a loud voice. Many who had been paralyzed and lame were healed.
ಅನೇಕರಿಂದ ಅಶುದ್ಧಾತ್ಮಗಳು ಆರ್ಭಟಿಸುತ್ತಾ ಹೊರಗೋಡಿದವು. ಮಾತ್ರವಲ್ಲದೇ ಅನೇಕ ಪಾರ್ಶ್ವವಾಯು ಪೀಡಿತರು, ಅಂಗವಿಕಲರು ಸ್ವಸ್ಥರಾದರು.
8 There was great joy in that city.
ಇದರಿಂದ ಆ ಪಟ್ಟಣದಲ್ಲಿ ಮಹಾ ಸಂತೋಷವಾಯಿತು.
9 But there was a certain man, Shimon by name, who used to practice sorcery in the city, and amazed the people of Samaria, making himself out to be some great one,
ಆ ಪಟ್ಟಣದಲ್ಲಿ ಕೆಲ ಸಮಯದಿಂದ ಸೀಮೋನ ಎಂಬ ಹೆಸರಿನ ಒಬ್ಬನು ಮಂತ್ರ ವಿದ್ಯೆ ಉಪಯೋಗಿಸಿ ಸಮಾರ್ಯದ ಜನರನ್ನು ಆಶ್ಚರ್ಯಗೊಳಿಸಿದ್ದನು. ತಾನೊಬ್ಬ ಮಹಾವ್ಯಕ್ತಿ ಎಂದು ಕೊಚ್ಚಿಕೊಳ್ಳುತ್ತಿದ್ದನು,
10 to whom they all listened, from the least to the greatest, saying, "This man is that power of God which is called Great."
ಆ ಪಟ್ಟಣದಲ್ಲಿಯ ಹಿರಿಯರು, ಕಿರಿಯರು ಎಲ್ಲರೂ ಅವನನ್ನು ಗೌರವಿಸಿ, “ಈ ಮನುಷ್ಯನು ಮಹಾಶಕ್ತಿ ಎನಿಸಿಕೊಂಡ ದೇವರ ಶಕ್ತಿ” ಎಂದು ಹೇಳುತ್ತಿದ್ದರು.
11 They listened to him, because for a long time he had amazed them with his sorceries.
ಸೀಮೋನನು ತನ್ನ ಮಂತ್ರಶಕ್ತಿಯಿಂದ ಅವರನ್ನು ಆಶ್ಚರ್ಯಗೊಳಿಸಿದ್ದರಿಂದ ಅವರು ಅವನನ್ನು ಹಿಂಬಾಲಿಸುತ್ತಿದ್ದರು.
12 But when they believed Philipus as he preached good news concerning the Kingdom of God and the name of Yeshua Meshikha, they were baptized, both men and women.
ಆದರೆ ಫಿಲಿಪ್ಪನು ದೇವರ ರಾಜ್ಯದ ಶುಭವರ್ತಮಾನವನ್ನೂ ಕ್ರಿಸ್ತ ಯೇಸುವಿನ ಹೆಸರನ್ನೂ ಪ್ರಕಟಿಸಿದಾಗ ಅಲ್ಲಿಯ ಸ್ತ್ರೀ ಪುರುಷರು ಅದನ್ನು ನಂಬಿ ದೀಕ್ಷಾಸ್ನಾನವನ್ನು ಹೊಂದಿದರು.
13 Shimon himself also believed. Being baptized, he continued with Philipus. Seeing signs and great miracles occurring, he was amazed.
ಸೀಮೋನನು ಸಹ ವಿಶ್ವಾಸವಿಟ್ಟು, ದೀಕ್ಷಾಸ್ನಾನ ಹೊಂದಿದನು. ಫಿಲಿಪ್ಪ ಮಾಡಿದ ಮಹಾಸೂಚಕಕಾರ್ಯಗಳನ್ನು ಮತ್ತು ಅದ್ಭುತಗಳನ್ನು ಕಂಡು, ಬೆರಗಾಗಿ ಅವನು ಹೋದಲ್ಲೆಲ್ಲಾ ಅವನನ್ನು ಹಿಂಬಾಲಿಸುತ್ತಿದ್ದನು.
14 Now when the apostles who were at Urishlim heard that Samaria had received the word of God, they sent Kipha and Yukhanan to them,
ಸಮಾರ್ಯದವರು ದೇವರ ವಾಕ್ಯವನ್ನು ಸ್ವೀಕರಿಸಿದರು ಎಂಬ ಸಮಾಚಾರ ಯೆರೂಸಲೇಮಿನಲ್ಲಿದ್ದ ಅಪೊಸ್ತಲರಿಗೆ ತಲುಪಿದ್ದರಿಂದ, ಅವರ ಬಳಿಗೆ ಪೇತ್ರ ಮತ್ತು ಯೋಹಾನರನ್ನು ಕಳುಹಿಸಿದರು.
15 who, when they had come down, prayed for them, that they might receive the Rukha d'Qudsha;
ಇವರು ತಲುಪಿದಾಗ, ಅಲ್ಲಿಯವರು ಪವಿತ್ರಾತ್ಮ ದೇವರನ್ನು ಹೊಂದಿಕೊಳ್ಳುವುದಕ್ಕಾಗಿ ಪ್ರಾರ್ಥನೆ ಮಾಡಿದರು.
16 for he had not yet fallen upon any of them. They had only been baptized in the name of the Lord Yeshua.
ಏಕೆಂದರೆ ಅವರಲ್ಲಿ ಯಾರ ಮೇಲೆಯೂ ಪವಿತ್ರಾತ್ಮ ಬಂದಿರಲಿಲ್ಲ, ಅವರು ಕರ್ತ ಯೇಸುವಿನ ನಾಮದಲ್ಲಿ ದೀಕ್ಷಾಸ್ನಾನವನ್ನು ಹೊಂದಿದ್ದರಷ್ಟೇ.
17 Then they laid their hands on them, and they received the Rukha d'Qudsha.
ಆಗ ಪೇತ್ರ ಮತ್ತು ಯೋಹಾನರು ಅವರ ಮೇಲೆ ತಮ್ಮ ಕೈಗಳನ್ನಿಡಲು, ಅವರು ಪವಿತ್ರಾತ್ಮ ವರವನ್ನು ಹೊಂದಿದರು.
18 Now when Shimon saw that the Rukha was given through the laying on of the apostles' hands, he offered them money,
ಅಪೊಸ್ತಲರು ತಮ್ಮ ಕೈಗಳನ್ನಿಡಲು ಪವಿತ್ರಾತ್ಮ ದೊರೆತದ್ದನ್ನು ಕಂಡ ಸೀಮೋನನು, ಅವರಿಗೆ ಹಣವನ್ನು ಕೊಟ್ಟು,
19 saying, "Give me also this power, that whomever I lay my hands on may receive the Rukha d'Qudsha."
“ನಾನು ಯಾರ ಮೇಲೆ ಕೈಗಳನ್ನಿಡುವೆನೋ ಅವರೂ ಪವಿತ್ರಾತ್ಮ ವರವನ್ನು ಪಡೆದುಕೊಳ್ಳುವಂತೆ ಈ ಶಕ್ತಿಯನ್ನು ಕೊಡಬೇಕು,” ಎಂದು ಕೇಳಿದನು.
20 But Kipha said to him, "May your silver perish with you, because you thought you could obtain the gift of God with money.
ಅದಕ್ಕೆ ಪೇತ್ರನು, “ದೇವರ ವರವನ್ನು ಹಣಕೊಟ್ಟು ಕೊಂಡುಕೊಳ್ಳಬಹುದೆಂದು ನೀನು ಭಾವಿಸಿದ್ದರಿಂದ ನೀನು ನಿನ್ನ ಹಣದೊಂದಿಗೆ ನಾಶವಾಗಿಹೋಗು!
21 You have neither part nor lot in this matter, for your heart is not right before God.
ನಿನ್ನ ಹೃದಯವು ದೇವರ ದೃಷ್ಟಿಯಲ್ಲಿ ಸರಿಯಾಗಿಲ್ಲವಾದ್ದರಿಂದ ಈ ಸೇವೆಯಲ್ಲಿ ನಿನಗೆ ಭಾಗವೂ ಇಲ್ಲ, ಪಾಲೂ ಇಲ್ಲ.
22 Repent therefore of this, your wickedness, and ask the Lord if perhaps the thought of your heart may be forgiven you.
ಈ ದುಷ್ಟತನಕ್ಕಾಗಿ ಪಶ್ಚಾತ್ತಾಪಪಟ್ಟು ಕರ್ತ ಯೇಸುವನ್ನು ಬೇಡಿಕೋ, ಒಂದು ವೇಳೆ ಅವರು ನಿನ್ನ ಹೃದಯದಲ್ಲಿದ್ದ ಈ ವಿಚಾರವನ್ನು ಕ್ಷಮಿಸಬಹುದು.
23 For I see that you are in the gall of bitterness and in the bondage of iniquity."
ನೀನು ಕಹಿತನದಿಂದ ತುಂಬಿರುವೆ; ಪಾಪ ಬಂಧನದಲ್ಲಿರುವೆ ಎಂದು ಕಾಣುತ್ತಿದ್ದೇನೆ,” ಎಂದನು.
24 Shimon answered, "Pray for me to the Lord, that none of the things which you have spoken happen to me."
ಆಗ ಸೀಮೋನನು, “ನೀವು ಹೇಳಿದ ಯಾವುದೂ ನನಗೆ ಸಂಭವಿಸದಂತೆ ನನಗೋಸ್ಕರ ಕರ್ತ ಯೇಸುವಿನಲ್ಲಿ ಪ್ರಾರ್ಥಿಸಿರಿ,” ಎಂದು ಬೇಡಿಕೊಂಡನು.
25 They therefore, when they had testified and spoken the word of the Lord, returned to Urishlim, and preached the Good News to many villages of the Samaritans.
ಪೇತ್ರ ಯೋಹಾನರು ಕರ್ತದೇವರ ವಾಕ್ಯದ ಸಾಕ್ಷಿ ಹೇಳಿ ಬೋಧನೆ ಮಾಡಿದ ತರುವಾಯ ಸಮಾರ್ಯದ ಅನೇಕ ಗ್ರಾಮಗಳಲ್ಲಿ ಸುವಾರ್ತೆ ಸಾರಿ, ಯೆರೂಸಲೇಮಿಗೆ ಹಿಂದಿರುಗಿದರು.
26 But an angel of the Lord spoke to Philipus, saying, "Arise, and go toward the south to the way that goes down from Urishlim to Gahza. This is a desert."
ದೇವದೂತನೊಬ್ಬನು ಫಿಲಿಪ್ಪನಿಗೆ, “ದಕ್ಷಿಣ ದಿಕ್ಕಿಗೆ ಹೋಗುವ ಮಾರ್ಗದಲ್ಲಿ ಹೋಗು, ಅದು ಯೆರೂಸಲೇಮಿನಿಂದ ಗಾಜಕ್ಕೆ ಹೋಗುವ ಅರಣ್ಯ ಮಾರ್ಗ,” ಎಂದು ಹೇಳಿದನು.
27 And he arose and went. And look, there was a man from Ethiopia, a eunuch of great authority under Kandake, the queen of the Ethiopians, who was in charge over all her treasure. He had come to Urishlim to worship,
ಅದರಂತೆ ಅವನು ಹೋಗುತ್ತಿದ್ದಾಗ, ಮಾರ್ಗದಲ್ಲಿ ಐಥಿಯೋಪ್ಯದ ರಾಣಿ ಕಂದಾಕೆಯ ಹಣಕಾಸಿನ ಮುಖ್ಯ ಅಧಿಕಾರಿಯಾಗಿದ್ದ ಕಂಚುಕಿಯನ್ನು ಭೇಟಿಯಾದನು. ಈ ಮನುಷ್ಯನು ಆರಾಧನೆಗಾಗಿ ಯೆರೂಸಲೇಮಿಗೆ ಹೋಗಿದ್ದನು.
28 and he was returning. And sitting in his chariot, he was reading the prophet Eshaya.
ಈಗ ತನ್ನ ಮನೆಗೆ ಹಿಂತಿರುಗುತ್ತಿದ್ದಾಗ ರಥದಲ್ಲಿ ಕುಳಿತುಕೊಂಡು ಪ್ರವಾದಿ ಯೆಶಾಯನ ಗ್ರಂಥವನ್ನು ಓದುತ್ತಿದ್ದನು.
29 And the Rukha said to Philip, "Go and join up with that chariot."
ಆಗ, “ನೀನು ಹೋಗಿ ಆ ರಥದ ಜೊತೆಯಲ್ಲಿಯೇ ನಡೆ,” ಎಂದು ಪವಿತ್ರಾತ್ಮರು ಫಿಲಿಪ್ಪನಿಗೆ ಹೇಳಿದರು.
30 And running near, Philip heard him reading the prophet Isaiah, and said, "Do you understand what you are reading?"
ಫಿಲಿಪ್ಪನು ರಥದ ಹತ್ತಿರಕ್ಕೆ ಓಡಿದನು. ಆ ಮನುಷ್ಯನು ಪ್ರವಾದಿ ಯೆಶಾಯನ ಗ್ರಂಥ ಓದುತ್ತಿರುವುದನ್ನು ಕೇಳಿಸಿಕೊಂಡು, “ನೀವು ಓದುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ?” ಎಂದು ಫಿಲಿಪ್ಪನು ಪ್ರಶ್ನಿಸಿದನು.
31 He said, "How can I, unless someone explains it to me?" So he invited Philipus to come up and sit with him.
ಅವನು, “ಯಾರಾದರೊಬ್ಬರು ಅದನ್ನು ವಿವರಿಸದಿದ್ದರೆ ನನಗೆ ಅರ್ಥವಾಗುವುದು ಹೇಗೆ?” ಎಂದು ಹೇಳಿ, ರಥವನ್ನು ಹತ್ತಿ ತನ್ನೊಂದಿಗೆ ಕುಳಿತುಕೊಳ್ಳುವಂತೆ ಫಿಲಿಪ್ಪನನ್ನು ಆಮಂತ್ರಿಸಿದನು.
32 Now the passage of the Scripture which he was reading was this, "He was led like a sheep to the slaughter, and like a lamb before its shearer is silent, so he does not open his mouth.
ಕಂಚುಕಿ ಈ ವಾಕ್ಯಭಾಗವನ್ನು ಓದುತ್ತಿದ್ದನು: “ವಧಿಸಲಿಕ್ಕೆ ಒಯ್ದ ಕುರಿಯಂತೆ ಅವರನ್ನು ಕರೆದುಕೊಂಡು ಹೋದರು. ಉಣ್ಣೆ ಕತ್ತರಿಸುವವರ ಮುಂದೆ ಇರುವ ಕುರಿಮರಿಯಂತೆ ಅವರು ಮೌನವಾಗಿದ್ದರು. ಇನ್ನು ಅವರು ತಮ್ಮ ಬಾಯಿ ತೆರೆಯಲೇ ಇಲ್ಲ.
33 In his humiliation his justice was taken away. Who will declare his generation? For his life is taken from the earth."
ಅವರ ಅವಮಾನದಲ್ಲಿ ನ್ಯಾಯವು ಅವರಿಂದ ತೆಗೆಯಲಾಯಿತು. ಭೂಮಿಯಿಂದ ಆತನ ಜೀವವನ್ನು ತೆಗೆದೇಬಿಟ್ಟರಲ್ಲವೇ, ಆತನ ಸಂತತಿಯವರ ಬಗ್ಗೆ ಮಾತನಾಡಬಲ್ಲವರು ಯಾರು?”
34 The eunuch answered Philipus, "Who is the prophet talking about? About himself, or about someone else?"
ನಂತರ ಕಂಚುಕಿಯು, “ಪ್ರವಾದಿ ಇಲ್ಲಿ ಯಾರ ಬಗ್ಗೆ ಮಾತನಾಡುತ್ತಿದ್ದಾನೆ, ತನ್ನನ್ನು ಕುರಿತೋ ಅಥವಾ ಬೇರೆಯವರನ್ನು ಕುರಿತೋ? ನನಗೆ ಹೇಳು,” ಎಂದು ಫಿಲಿಪ್ಪನನ್ನು ಕೇಳಿದನು.
35 Philipus opened his mouth, and beginning from this Scripture, preached to him Yeshua.
ಪವಿತ್ರ ವೇದದ ಆ ಭಾಗದಿಂದಲೇ ಪ್ರಾರಂಭಿಸಿ ಫಿಲಿಪ್ಪನು ಅವನಿಗೆ ಯೇಸುವಿನ ಕುರಿತಾದ ಶುಭವಾರ್ತೆಯನ್ನು ತಿಳಿಸಿದನು.
36 And as they went on the way, they came to some water, and the eunuch said, "Look, here is water. What is keeping me from being baptized?"
ಮಾರ್ಗದಲ್ಲಿ ಅವರು ಮುಂದೆ ಪ್ರಯಾಣ ಮಾಡುತ್ತಿದ್ದಾಗ, ನೀರಿದ್ದ ಸ್ಥಳಕ್ಕೆ ಬಂದರು. ಆಗ ಕಂಚುಕಿ, “ಇಗೋ ಇಲ್ಲಿ ನೀರಿದೆ. ನನಗೆ ಏಕೆ ದೀಕ್ಷಾಸ್ನಾನ ಕೊಡಬಾರದು?” ಎಂದನು.
37 And he said to him, "If you believe with all your heart, you may." And he answered and said, "I believe that Yeshua Meshikha is the Son of God."
“ನೀನು ಪೂರ್ಣಹೃದಯದಿಂದ ನಂಬಿದರೆ ನಿನಗೆ ದೀಕ್ಷಾಸ್ನಾನವಾಗಬಹುದು,” ಎಂದು ಫಿಲಿಪ್ಪನು ಹೇಳಿದನು. “ಕ್ರಿಸ್ತ ಯೇಸುವೇ ದೇವಪುತ್ರರು ಎಂದು ನಾನು ನಂಬುತ್ತೇನೆ,” ಎಂದು ಕಂಚುಕಿಯು ಪ್ರಕಟಿಸಿದನು.
38 He commanded the chariot to stand still, and they both went down into the water, both Philipus and the eunuch, and he baptized him.
ರಥವನ್ನು ನಿಲ್ಲಿಸಲು ಅಪ್ಪಣೆಕೊಟ್ಟ ನಂತರ ಫಿಲಿಪ್ಪನು ಮತ್ತು ಕಂಚುಕಿ ಇಬ್ಬರೂ ನೀರೊಳಗೆ ಹೋದರು. ಫಿಲಿಪ್ಪನು ಅವನಿಗೆ ದೀಕ್ಷಾಸ್ನಾನ ಮಾಡಿಸಿದನು.
39 When they came up out of the water, the Rukha of the Lord caught Philipus away, and the eunuch did not see him any more, for he went on his way rejoicing.
ಅವರು ನೀರಿನಿಂದ ಹೊರಗೆ ಬಂದಾಗ, ತಕ್ಷಣವೇ ಕರ್ತದೇವರ ಆತ್ಮರು ಫಿಲಿಪ್ಪನನ್ನು ತೆಗೆದುಕೊಂಡು ಹೋದರು. ಆಮೇಲೆ ಕಂಚುಕಿಯು ಫಿಲಿಪ್ಪನನ್ನು ಪುನಃ ಕಾಣಲಿಲ್ಲ. ಕಂಚುಕಿಯು ಸಂತೋಷಪಡುತ್ತಾ ತನ್ನ ಮಾರ್ಗದಲ್ಲಿ ಹೊರಟುಹೋದನು.
40 But Philipus was found at Azotus. Passing through, he preached the Good News to all the cities, until he came to Qesarya.
ಫಿಲಿಪ್ಪನು, ಅಜೋತಿನಲ್ಲಿ ಕಾಣಿಸಿಕೊಂಡು, ಕೈಸರೈಯ ತಲುಪುವ ತನಕ ಎಲ್ಲಾ ಪಟ್ಟಣಗಳಲ್ಲಿ ಸುವಾರ್ತೆಯನ್ನು ಸಾರುತ್ತಾ ಪ್ರಯಾಣಮಾಡಿದನು.

< Acts 8 >