< 1 Kings 4 >

1 Thus was king Solomon king over all Israel.
ಸೊಲೊಮೋನ ರಾಜನು ಎಲ್ಲಾ ಇಸ್ರಾಯೇಲಿನ ಮೇಲೆ ಅರಸನಾಗಿದ್ದನು.
2 And these were the princes whom he had: 'Azaryahu the son of Zadok the priest;
ಅವನ ಮುಖ್ಯ ಉದ್ಯೋಗಸ್ಥರು ಯಾರಾರೆಂದರೆ: ಚಾದೋಕನ ಮಗನಾದ ಅಜರ್ಯನು ಯಾಜಕನು.
3 Elichoreph and Achiyah, the sons of Shisha, scribes; Jehoshaphat the son of Achilud, the recorder;
ಶೀಷನ ಮಕ್ಕಳಾದ ಎಲೀಹೋರೇಫ್ ಮತ್ತು ಅಹೀಯಾಹು ಎಂಬುವರು ಲೇಖಕರು. ಅಹೀಲೂದನ ಮಗನಾದ ಯೆಹೋಷಾಫಾಟನು ಅವನ ಮಂತ್ರಿಯು.
4 And Benayahu the son of Yehoyada' over the army; and Zadok and Ebyathar priests;
ಯೆಹೋಯಾದಾವನ ಮಗನಾದ ಬೆನಾಯನು ಸೈನ್ಯಾಧಿಪತಿ. ಚಾದೋಕನೂ ಮತ್ತು ಎಬ್ಯಾತಾರನೂ ಯಾಜಕರು.
5 And Azaryahu the son of Nathan was over the superintendents; and Zabud the son of Nathan was an officer of state and the king's friend;
ನಾತಾನನ ಮಗನಾದ ಅಜರ್ಯನು ದೇಶಾಧಿಪತಿಗಳ ಮುಖ್ಯಸ್ಥನು. ನಾತಾನನ ಮಗನಾದ ಜಾಬೂದನು ಯಾಜಕನೂ ಹಾಗು ಅರಸನ ಮಿತ್ರನೂ ಆಗಿದ್ದನು.
6 And Achishar was over the household; and Adoniram the son of 'Abda was over the tribute.
ಅಹೀಷಾರನು ರಾಜಗೃಹಾಧಿಪತಿಯು. ಅಬ್ದನ ಮಗನಾದ ಅದೋನೀರಾಮನು ಬಿಟ್ಟೀಕೆಲಸ ಮಾಡಿಸುವವರ ಮುಖ್ಯಸ್ಥನು.
7 And Solomon had twelve superintendents over all Israel, who provided for the king and his household: one month in the year had the particular one to procure provisions.
ಸೊಲೊಮೋನನು ಎಲ್ಲಾ ಇಸ್ರಾಯೇಲರ ಮೇಲ್ವಿಚಾರಣೆಗಾಗಿ ಹನ್ನೆರಡು ಕಾರ್ಯನಿರ್ವಾಹಕರನ್ನು ನೇಮಿಸಿದನು. ಅವರಲ್ಲಿ ಪ್ರತಿಯೊಬ್ಬನು ಒಂದೊಂದು ತಿಂಗಳು ಅರಸನಿಗೂ ಮತ್ತು ಅವನ ಮನೆಯವರಿಗೂ ಬೇಕಾದ ಆಹಾರ ಪದಾರ್ಥಗಳನ್ನು ಪ್ರತಿವರ್ಷವೂ ಒದಗಿಸಿಕೊಡಬೇಕಾಗಿತ್ತು.
8 And these are their names: Ben-chur on the mountain of Ephraim;
ಅವರು ಯಾರಾರೆಂದರೆ ಎಫ್ರಾಯೀಮ್ ಪರ್ವತ ಪ್ರದೇಶದಲ್ಲಿದ್ದ ಹೂರನ ಮಗ,
9 Ben-deker, in Makaz, and in Sha'albim, and Beth-shemesh, and Elon-beth-chanan;
ಮಾಕಾಚ್, ಶಾಲ್ಬೀಮ್, ಬೇತ್‌ಷೆಮೆಷ್‌, ಏಲೋನ್ ಬೇತ್ ಹಾನಾನ್‌ ಎಂಬ ಊರುಗಳ ಒಡೆಯನಾದ ದೆಕೆರನ ಮಗನು.
10 Ben-chessed, in Arubboth; to him pertained Sochoh and all the land of Chepher;
೧೦ಅರುಬ್ಬೋತಿನಲ್ಲಿ ವಾಸವಾಗಿದ್ದ ಹೆಸೆದನ ಮಗ, ಅವನು ಸೋಕೋ ಮತ್ತು ಹೇಫೆರ್ ಎಂಬ ಪ್ರದೇಶಗಳಿಗೆ ಅಧಿಪತಿಯಾಗಿದ್ದನು.
11 Ben-abinadab, in all the district of Dor; he had Taphath the daughter of Solomon for wife;
೧೧ದೋರ್ ಗುಡ್ಡದ ಪ್ರದೇಶದಲ್ಲಿದ್ದ ಅಬೀನಾದಾಬನ ಮಗ, ಸೊಲೊಮೋನನ ಮಗಳಾದ ಟಾಫತಳು ಅವನ ಹೆಂಡತಿಯಾಗಿದ್ದಳು.
12 Ba'ana the son of Achilud in Tha'anach and Megiddo, and all Beth-shean, which is by Zarethanah beneath Yizre'el, from Beth-shean to Abel-mecholah, as far as beyond Yokme'am;
೧೨ತಾಣಕ್ ಮತ್ತು ಮೆಗಿದ್ದೋ, ಚಾರೆತಾನಿನ ಬಳಿಯಲ್ಲಿಯೂ ಇಜ್ರೇಲಿನ ಕೆಳಗಣಭಾಗಗಳೂ, ಬೇತ್ ಷೆಯಾನಿನಿಂದ ಆಬೇಲ್ ಮೆಹೋಲದವರೆಗೂ ಇರುವಂಥ ಯೊಕ್ಮೆಯಾನಿನ ಆಚೆಗೆ ವಿಸ್ತರಿಸಿಕೊಂಡಿರುವಂಥ ಬೇತ್ ಷೆಯಾನಿನ ಎಲ್ಲಾ ಪ್ರದೇಶ ಇವುಗಳಿಗೆ ಅಹೀಲೂದನ ಮಗನಾದ ಬಾಣಾ ಅಧಿಪತಿಯಾಗಿದ್ದನು.
13 Ben-geber, in Ramoth-gil'ad; to him pertained the villages of Ya'ir the son of Menasseh, which are in Gil'ad; to him also pertained the region of Argob, which is in Bashan, sixty great cities with walls and brazen bars;
೧೩ರಾಮೋತ್ ಗಿಲ್ಯಾದಿನಲ್ಲಿದ್ದ ಗೆಬೇರನ ಮಗ, ಅವನು ಗಿಲ್ಯಾದಿನಲ್ಲಿ ಮನಸ್ಸೆಯ ಮಗನಾದ ಯಾಯೀರನ ಗ್ರಾಮಗಳಿಗೂ, ಬಾಷಾನಿನಲ್ಲಿ ಪೌಳಿಗೋಡೆಗಳಿಂದಲೂ, ಕಬ್ಬಿಣದ ಅಗುಳಿಗಳಿಂದಲೂ ಭದ್ರಮಾಡಲ್ಪಟ್ಟ ಅರವತ್ತು ಪಟ್ಟಣಗಳಲ್ಲಿದ್ದ ಅರ್ಗೋಬ್ ಪ್ರದೇಶಕ್ಕೂ ಅಧಿಪತಿಯಾಗಿದ್ದನು.
14 Achinadab the son of 'Iddo in Machanayim;
೧೪ಮಹನಯಿಮಿನಲ್ಲಿದ್ದ ಇದ್ದೋವಿನ ಮಗನಾದ ಅಹೀನಾದಾಬನು.
15 Achima'az in Naphtali; he also took Bahsemath the daughter of Solomon for wife;
೧೫ನಫ್ತಾಲಿ ಪ್ರದೇಶದಲ್ಲಿದ್ದ ಅಹೀಮಾಚನು, ಅವನು ಸೊಲೊಮೋನನ ಮಗಳಾದ ಬಾಸೆಮತಳನ್ನು ಮದುವೆಮಾಡಿಕೊಂಡಿದ್ದನು.
16 Ba'anah the son of Chushai in Asher and in Be'aloth;
೧೬ಅಶೇರಿಗೂ ಮತ್ತು ಆಲೋತಿಗೂ ಒಡೆಯನಾದ ಹೂಷೈಯ ಮಗನಾದ ಬಾಣನು,
17 Jehoshaphat the son of Paruach, in Issachar;
೧೭ಇಸ್ಸಾಕಾರ್ ಪ್ರಾಂತ್ಯದಲ್ಲಿದ್ದ ಫಾರೂಹನ ಮಗನಾದ ಯೆಹೋಷಾಫಾಟನು,
18 Shim'i the son of Ela, in Benjamin;
೧೮ಬೆನ್ಯಾಮೀನಿನಲ್ಲಿದ್ದ ಏಲನ ಮಗನಾದ ಶಿಮ್ಮೀ,
19 Geber the son of Uri in the country of Gil'ad, the country of Sichon the king of the Emorites, and of 'Og the king of Bashan; besides the one superintendent who was in the land.
೧೯ಅಮೋರಿಯರ ಅರಸನಾದ ಸೀಹೋನ್, ಬಾಷಾನಿನ ಅರಸನಾದ ಓಗ್ ಇವರ ರಾಜ್ಯವಾಗಿದ್ದ ಗಿಲ್ಯಾದ್ ಪ್ರದೇಶಕ್ಕೆಲ್ಲಾ ಒಬ್ಬನೇ ಅಧಿಪತಿಯಾಗಿದ್ದನು ಅವನು ಊರಿಯನ ಮಗನಾದ ಗೆಬೆರ್ ಎಂಬುವವನು.
20 Judah and Israel were numerous, as the sand which is by the sea in multitude; and they ate and drank, and made merry.
೨೦ಇಸ್ರಾಯೇಲರು ಮತ್ತು ಯೆಹೂದ್ಯರು ಸಮುದ್ರ ತೀರದ ಮರಳಿನಷ್ಟು ಅಸಂಖ್ಯರಾಗಿ ಅಭಿವೃದ್ಧಿಯಾದರು. ಅವರು ಅನ್ನಪಾನಗಳನ್ನು ಮಾಡುತ್ತಾ ತೃಪ್ತರಾಗಿ ಸಂತೋಷದಿಂದಿದ್ದರು.
21 And Solomon was ruling over all the kingdoms from the river unto the land of the Philistines, and as far as the boundary of Egypt, which brought presents, and served Solomon all the days of his life.
೨೧ಸೊಲೊಮೋನನು ಯೂಫ್ರೆಟಿಸ್ ನದಿ ಮೊದಲುಗೊಂಡು ಫಿಲಿಷ್ಟಿಯರ ಮತ್ತು ಐಗುಪ್ತ್ಯರ ದೇಶಗಳವರೆಗೂ ಇರುವ ಎಲ್ಲಾ ರಾಜ್ಯಗಳವರನ್ನು ಆಳುತ್ತಿದ್ದನು. ಅವರು ಅವನ ಜೀವಮಾನದಲ್ಲೆಲ್ಲಾ ಅವನಿಗೆ ಅಧೀನರಾಗಿ ಕಪ್ಪಕಾಣಿಕೆಗಳನ್ನು ಸಲ್ಲಿಸುತ್ತಿದ್ದರು.
22 And Solomon's provision for one day was thirty kors of fine flour, and sixty kors of meal,
೨೨ಸೊಲೊಮೋನನ ಅರಮನೆಗೆ ಪ್ರತಿದಿನ ಬೇಕಾಗುವ ಆಹಾರಪದಾರ್ಥಗಳು, ಮೂವತ್ತು ಕೋರ್ ಗೋದಿಯ ಹಿಟ್ಟು, ಅರುವತ್ತು ಕೋರ್ ಜವೆಗೋದಿಯ ಹಿಟ್ಟು,
23 Ten fatted oxen, and twenty pasture oxen, and a hundred sheep, besides harts, and roebucks, and fallow-deer, and fatted fowl.
೨೩ಹತ್ತು ಕೊಬ್ಬಿದ ಎತ್ತುಗಳು, ಇಪ್ಪತ್ತು ಹುಲ್ಲುಗಾವಲಿನಲ್ಲಿರುವ ಎತ್ತುಗಳು, ನೂರು ಕುರಿಗಳು ಇವುಗಳಲ್ಲದೆ ಕಡವೆ, ಜಿಂಕೆ, ಸಾರಂಗ, ಕೊಬ್ಬಿದ ಕೋಳಿಗಳು ಇವುಗಳೇ.
24 For he had dominion over all the region on this side the river, from Thiphsach even to Gazzah, over all the kings on this side the river: and he had peace on all sides round about him.
೨೪ಅವನು ಯೂಫ್ರೆಟಿಸ್ ನದಿಯ ಈಚೆಯಲ್ಲಿ ತಿಪ್ಸಹು ಮೊದಲುಗೊಂಡು ಗಾಜದವರೆಗಿರುವ ಈಚೆಯ ಎಲ್ಲಾ ಅರಸರಿಗೂ ದೊರೆಯಾಗಿದ್ದನು. ಅವನು ಸುತ್ತಣ ರಾಜರೊಡನೆ ಸಮಾಧಾನದಿಂದಿದ್ದನು.
25 And Judah and Israel dwelt in safety, every man under his vine and under his fig-tree, from Dan even to Beer-sheba', all the days of Solomon.
೨೫ಸೊಲೊಮೋನನ ಆಳ್ವಿಕೆಯಲ್ಲೆಲ್ಲಾ ದಾನ್ ಪಟ್ಟಣ ಮೊದಲುಗೊಂಡು ಬೇರ್ಷೆಬದವರೆಗಿರುವ ಸಮಸ್ತ ಇಸ್ರಾಯೇಲರೂ ಮತ್ತು ಯೆಹೂದ್ಯರೂ ತಮ್ಮ ತಮ್ಮ ದ್ರಾಕ್ಷಾಲತೆ, ಅಂಜೂರದ ಗಿಡ ಇವುಗಳ ನೆರಳಿನಲ್ಲಿ ವಾಸಮಾಡುತ್ತಾ ಸುರಕ್ಷಿತರಾಗಿದ್ದರು.
26 And Solomon had forty thousand stalls for the horses for his chariots, and twelve thousand horsemen.
೨೬ಸೊಲೊಮೋನನ ಲಾಯಗಳಲ್ಲಿ ನಲ್ವತ್ತು ಸಾವಿರ ರಥಾಶ್ವಗಳಿಗೆ ಸ್ಥಳವಿತ್ತು. ಅವನಿಗೆ ಹನ್ನೆರಡು ಸಾವಿರ ಕುದುರೆಸವಾರರಿದ್ದರು.
27 And those superintendents provided for king Solomon, and for all that came near unto king Solomon's table, every man in his month: they let nothing be wanting.
೨೭ಮೇಲೆ ಕಾಣಿಸಿರುವ ಕಾರ್ಯನಿರ್ವಾಹಕರು ತಮಗೆ ನೇಮಕವಾದ ತಿಂಗಳಲ್ಲಿ ಅರಸನಾದ ಸೊಲೊಮೋನನಿಗೂ, ಅವನ ಪಂಕ್ತಿಯಲ್ಲಿ ಊಟಕ್ಕೆ ಕುಳಿತುಕೊಳ್ಳುವವರೆಲ್ಲರಿಗೂ ಬೇಕಾಗುವ ಆಹಾರ ಪದಾರ್ಥಗಳನ್ನು ಯಾವ ಕೊರತೆಯೂ ಇಲ್ಲದೆ ಒದಗಿಸಿಕೊಡುತ್ತಿದ್ದರು.
28 The barley also and the straw for the horses and the runners did they bring unto the place where he might be, every man according to his prescription.
೨೮ಇದಲ್ಲದೆ ಅವರು ರಥಾಶ್ವಗಳಿಗಾಗಿಯೂ ಮತ್ತು ಸವಾರಿಕುದುರೆಗಳಿಗಾಗಿಯೂ ನೇಮಕವಾದಷ್ಟು ಜವೆಗೋದಿಯನ್ನು, ಹುಲ್ಲನ್ನೂ ಕುದುರೆಗಳಿದ್ದ ಸ್ಥಳಕ್ಕೇ ತಂದೊಪ್ಪಿಸುತ್ತಿದ್ದರು.
29 And God gave unto Solomon wisdom and understanding exceedingly much, and largeness of heart, even as the sand that is on the sea-shore.
೨೯ದೇವರು ಸೊಲೊಮೋನನಿಗೆ ವಿಶೇಷವಾದ ಜ್ಞಾನ, ವಿವೇಕಗಳನ್ನೂ, ಸಮುದ್ರ ತೀರದ ಮರಳಿನಷ್ಟು ಅಪರಿಮಿತವಾದ ಮನೋವಿಶಾಲತೆಯನ್ನೂ ಅನುಗ್ರಹಿಸಿದನು.
30 And Solomon's wisdom excelled the wisdom of all the children of the east country, and all the wisdom of Egypt.
೩೦ಅವನ ಜ್ಞಾನವು ಮೂಡಣದೇಶದವರೆಲ್ಲರ ಜ್ಞಾನಕ್ಕಿಂತಲೂ ಐಗುಪ್ತ್ಯರ ಜ್ಞಾನಕ್ಕಿಂತಲೂ ಮಿಗಿಲಾದುದಾಗಿತ್ತು.
31 And he was wiser than all men; than Ethan the Ezrachite, and Heman, and Kalkol, and Darda', the sons of Machol: and his name was [spread] among all the nations round about.
೩೧ಅವನು‍ ಜೆರಹನ ಮಗನಾದ ಏತಾನ್, ಮಾಹೋಲನ ಮಕ್ಕಳಾದ ಹೇಮಾನ್, ಕಲ್ಕೋಲ್, ದರ್ದ ಮೊದಲಾದ ಎಲ್ಲರಿಗಿಂತಲೂ ಜ್ಞಾನಿಯಾಗಿದ್ದನು. ಸುತ್ತಣ ಎಲ್ಲಾ ಜನಾಂಗಗಳಲ್ಲಿ ಅವನ ಹೆಸರು ಸುಪ್ರಸಿದ್ಧವಾಯಿತು.
32 And he spoke three thousand proverbs; and his songs were a thousand and five.
೩೨ಅವನ ಜ್ಞಾನೋಕ್ತಿಗಳು ಮೂರು ಸಾವಿರ ಮತ್ತು ಗೀತೆಗಳು ಸಾವಿರದ ಐದು.
33 And he spoke concerning the trees, from the cedar-tree that is on the Lebanon even unto the hyssop that springeth out of the wall; he spoke also concerning the beasts, and concerning the fowl, and concerning the creeping things, and concerning the fishes.
೩೩ಅವನು ಲೆಬನೋನಿನ ದೇವದಾರು ವೃಕ್ಷ ಮೊದಲುಗೊಂಡು ಗೋಡೆಯಲ್ಲಿ ಬೆಳೆಯುವ ಹಿಸ್ಸೋಪ್ ಗಿಡದವರೆಗಿರುವ ಎಲ್ಲಾ ವನಸ್ಪತಿಗಳನ್ನೂ, ಎಲ್ಲಾ ಪಶುಪಕ್ಷಿ, ಜಲಚರಗಳು, ಕ್ರಿಮಿಕೀಟಗಳನ್ನೂ ಕುರಿತು ಪ್ರಸ್ತಾಪಿಸ ಬಲ್ಲವನಾಗಿದ್ದನು.
34 And men came from all the people to hear the wisdom of Solomon, from all the kings of the earth, who had heard of his wisdom.
೩೪ಎಲ್ಲಾ ಜನಾಂಗಗಳಲ್ಲಿಯೂ ಸೊಲೊಮೋನನ ಜ್ಞಾನದ ವಿಶೇಷತೆಯನ್ನು ಕುರಿತು ಕೇಳಿದ ಅನೇಕ ರಾಜರೂ ಮತ್ತು ವಿದ್ವಾಂಸರು ಅವನ ಜ್ಞಾನವಾಕ್ಯಗಳನ್ನು ಕೇಳುವುದಕ್ಕೋಸ್ಕರ ಬರುತ್ತಿದ್ದರು.

< 1 Kings 4 >