3 And Mardochaeus was viceroy to king Artaxerxes, and was a great man in the kingdom, and honoured by the Jews, and passed his life beloved of all his nation.
೩ಯೆಹೂದ್ಯನಾದ ಮೊರ್ದೆಕೈಯಾದರೋ ರಾಜ್ಯದಲ್ಲಿ ಅರಸನಾದ ಅಹಷ್ವೇರೋಷನ ದ್ವಿತೀಯ ಸ್ಥಾನದವನೂ, ಯೆಹೂದ್ಯರಲ್ಲಿ ಸನ್ಮಾನಿತನೂ, ತನ್ನ ಬಂಧುಬಳಗಕ್ಕೆ ಪ್ರೀತಿಪಾತ್ರನೂ, ಸ್ವಜನರ ಹಿತಚಿಂತಕನೂ ಮತ್ತು ಸ್ವಕುಲದವರೆಲ್ಲರಿಗೂ ಶಾಂತಿದೂತನೂ, ಪ್ರಾರ್ಥನಾಪರನೂ ಆಗಿದ್ದನು.