< Psalms 83 >
1 A Song, a Psalm of Asaph. O God, keep not Thou silence; hold not Thy peace, and be not still, O God.
೧ಆಸಾಫನ ಕೀರ್ತನೆ; ಗೀತೆ. ದೇವರೇ, ಸುಮ್ಮನಿರಬೇಡ! ನಿಶ್ಚಿಂತನಾಗಿ ಮೌನದಿಂದಿರಬೇಡ ಸ್ವಾಮೀ.
2 For, lo, Thine enemies are in an uproar; and they that hate Thee have lifted up the head.
೨ನೋಡು, ನಿನ್ನ ಶತ್ರುಗಳು ಘೋಷಿಸುತ್ತಿದ್ದಾರೆ; ನಿನ್ನ ದ್ವೇಷಿಗಳು ತಲೆಯೆತ್ತಿದ್ದಾರೆ.
3 They hold crafty converse against Thy people, and take counsel against Thy treasured ones.
೩ಅವರು ನಿನ್ನ ಪ್ರಜೆಗಳಿಗೆ ವಿರುದ್ಧವಾಗಿ ಒಳಸಂಚುಮಾಡಿ, ನಿನ್ನ ಮರೆಹೊಕ್ಕವರನ್ನು ಕೆಡಿಸಬೇಕೆಂದು ಆಲೋಚಿಸಿ,
4 They have said: 'Come, and let us cut them off from being a nation; that the name of Israel may be no more in remembrance.'
೪“ಬನ್ನಿರಿ; ಅವರು ಜನಾಂಗವಾಗಿ ಉಳಿಯದಂತೆಯೂ, ಇಸ್ರಾಯೇಲೆಂಬ ಹೆಸರು ಅಳಿದುಹೋಗುವಂತೆ, ಅವರನ್ನು ಸಂಹರಿಸೋಣ” ಅಂದುಕೊಳ್ಳುತ್ತಾರೆ.
5 For they have consulted together with one consent; against Thee do they make a covenant;
೫ಎದೋಮ್ಯರ ಮತ್ತು ಇಷ್ಮಾಯೇಲರ ಪಾಳೆಯಗಳವರು, ಮೋವಾಬ್ಯರು, ಹಗ್ರೀಯರು,
6 The tents of Edom and the Ishmaelites; Moab, and the Hagrites;
೬ಗೆಬಾಲ್ಯರು, ಅಮ್ಮೋನಿಯರು, ಅಮಾಲೇಕ್ಯರು, ಫಿಲಿಷ್ಟಿಯರು, ತೂರ್ ಸಂಸ್ಥಾನದವರು,
7 Gebal, and Ammon, and Amalek; Philistia with the inhabitants of Tyre;
೭ಇವರೆಲ್ಲಾ ಏಕಮನಸ್ಸಿನಿಂದ ಕೂಡಿ, ನಿನಗೆ ವಿರುದ್ಧವಾಗಿ ಒಳಸಂಚು ಮಾಡುತ್ತಾರಲ್ಲಾ;
8 Assyria also is joined with them; they have been an arm to the children of Lot. (Selah)
೮ಅಶ್ಯೂರ್ಯರೂ ಇವರೊಡನೆ ಕೂಡಿಕೊಂಡು, ಲೋಟನ ವಂಶದವರಿಗೆ ಭುಜಬಲವಾಗಿದ್ದಾರೆ. (ಸೆಲಾ)
9 Do Thou unto them as unto Midian; as to Sisera, as to Jabin, at the brook Kishon;
೯ನೀನು ಮಿದ್ಯಾನ್ಯರನ್ನು ಸಂಹರಿಸಿದಂತೆ ಇವರನ್ನೂ ಸಂಹರಿಸು. ಕೀಷೋನ್ ಹಳ್ಳದ ಬಳಿಯಲ್ಲಿ ಸೀಸೆರ್, ಯಾಬೀನ್ ಎಂಬುವವರಿಗೆ ಮಾಡಿದಂತೆ, ಇವರಿಗೂ ಮಾಡು.
10 Who were destroyed at En-dor; they became as dung for the earth.
೧೦ಅವರು ಎಂದೋರಿನಲ್ಲಿ ವಧಿಸಲ್ಪಟ್ಟು, ಹೊಲದ ಗೊಬ್ಬರವಾಗಿ ಹೋದರಲ್ಲಾ.
11 Make their nobles like Oreb and Zeeb, and like Zebah and Zalmunna all their princes;
೧೧ಓರೇಬ್ ಮತ್ತು ಜೇಬ್ ಎಂಬವರ ಗತಿಯು, ಇವರ ಶ್ರೀಮಂತರಿಗೂ ಸಂಭವಿಸಲಿ; ಜೇಬಹ ಮತ್ತು ಚಲ್ಮುನ್ನ ಎಂಬವರ ಹಾಗೆ ಇವರ ಪ್ರಭುಗಳಿಗೂ ಆಗಲಿ.
12 Who said: 'Let us take to ourselves in possession the habitations of God.'
೧೨ಅವರು “ದೇವರು ಅವರಿಗೆ ಕೊಟ್ಟ ದೇಶವನ್ನು ಸ್ವಾಧೀನಮಾಡಿಕೊಳ್ಳುತ್ತೇವೆ” ಅಂದುಕೊಳ್ಳುತ್ತಾರಲ್ಲಾ.
13 O my God, make them like the whirling dust; as stubble before the wind.
೧೩ನನ್ನ ದೇವರೇ, ಅವರನ್ನು ಸುಂಟರ ಗಾಳಿಯಲ್ಲಿ ಸುತ್ತಾಡುವ ಧೂಳಿನಂತೆಯೂ, ಹಾರಿಹೋಗುವ ಹೊಟ್ಟಿನಂತೆಯೂ ಮಾಡು.
14 As the fire that burneth the forest, and as the flame that setteth the mountains ablaze;
೧೪ನೀನು ಕಾಡನ್ನು ಸುಟ್ಟುಬಿಡುವ ಬೆಂಕಿಯಂತೆಯೂ, ಪರ್ವತಗಳನ್ನು ದಹಿಸಿಬಿಡುವ ಜ್ವಾಲೆಯಂತೆಯೂ ಇದ್ದು,
15 So pursue them with Thy tempest, and affright them with Thy storm.
೧೫ನಿನ್ನ ಸುಂಟರಗಾಳಿಯಿಂದ ಅವರನ್ನು ಬೆನ್ನಟ್ಟು; ತುಫಾನಿನಿಂದ ಅವರನ್ನು ಕಳವಳಗೊಳಿಸು.
16 Fill their faces with shame; that they may seek Thy name, O LORD.
೧೬ನಾಚಿಕೆಯು ಅವರ ಮುಖವನ್ನು ಕವಿಯಲಿ. ಯೆಹೋವನೇ, ಆಗ ಅವರು ನಿನ್ನ ಹೆಸರನ್ನು ಕೇಳಿಕೊಂಡು ಬಂದಾರು.
17 Let them be ashamed and affrighted for ever; yea, let them be abashed and perish;
೧೭ಅವರು ನಿರಂತರವೂ ಆಶಾಭಂಗದಿಂದ ಕಳವಳಗೊಳ್ಳಲಿ; ಅಪಮಾನದಿಂದ ನಾಶವಾಗಲಿ.
18 That they may know that it is Thou alone whose name is the LORD, the Most High over all the earth.
೧೮ಆಗ ಯೆಹೋವನ ನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು ಗ್ರಹಿಸುವರು.