< Jeremiah 22 >

1 Thus said the LORD: Go down to the house of the king of Judah, and speak there this word,
ಯೆಹೋವನು ನನಗೆ ಹೀಗೆ ಅಪ್ಪಣೆಕೊಟ್ಟನು, “ನೀನು ಯೆಹೂದದ ಅರಸನ ಮನೆಗೆ ಇಳಿದು ಹೋಗಿ ಈ ಮಾತನ್ನು ಅಲ್ಲಿ ಹೇಳು,
2 and say: Hear the word of the LORD, O king of Judah, that sittest upon the throne of David, thou, and thy servants, and thy people that enter in by these gates.
ದಾವೀದನ ಸಿಂಹಾಸನರೂಢನಾದ ಯೆಹೂದದ ಅರಸನೇ, ಯೆಹೋವನ ಮಾತನ್ನು ಕೇಳು; ನಿನ್ನ ಸೇವಕರೂ ಮತ್ತು ಈ ಬಾಗಿಲುಗಳಲ್ಲಿ ಸೇರುವ ನಿನ್ನ ಪ್ರಜೆಗಳೂ ಕೇಳಲಿ.
3 Thus saith the LORD: Execute ye justice and righteousness, and deliver the spoiled out of the hand of the oppressor; and do no wrong, do no violence, to the stranger, the fatherless, nor the widow, neither shed innocent blood in this place.
ಯೆಹೋವನು, ನೀತಿ, ನ್ಯಾಯಗಳನ್ನು ಆಚರಿಸಿರಿ, ಸುಲಿಗೆಯಾದವನನ್ನು ದೋಚಿಕೊಂಡವನ ಕೈಯಿಂದ ಬಿಡಿಸಿರಿ. ವಿದೇಶಿ, ಅನಾಥ, ವಿಧವೆ ಇವರಿಗೆ ಯಾವ ಅನ್ಯಾಯವನ್ನೂ ಮತ್ತು ಹಿಂಸೆಯನ್ನೂ ಮಾಡಬೇಡಿರಿ; ನಿರ್ದೋಷಿಯ ರಕ್ತವನ್ನು ಈ ಸ್ಥಳದಲ್ಲಿ ಸುರಿಸಬೇಡಿರಿ” ಎಂದು ಹೇಳುತ್ತಾನೆ.
4 For if ye do this thing indeed, then shall there enter in by the gates of this house kings sitting upon the throne of David, riding in chariots and on horses, he, and his servants, and his people.
“ನೀವು ಈ ಆಜ್ಞೆಗಳನ್ನು ಮನಃಪೂರ್ವಕವಾಗಿ ಕೈಗೊಂಡರೆ ದಾವೀದನ ಸಿಂಹಾಸನಾರೂಢರಾದ ಅರಸರು ರಥಾಶ್ವಗಳನ್ನೇರಿದವರಾಗಿ ತಮ್ಮ ಸೇವಕರೊಡನೆಯೂ, ಪ್ರಜೆಗಳೊಡನೆಯೂ ಈ ಅರಮನೆಯ ಬಾಗಿಲುಗಳಲ್ಲಿ ಪ್ರವೇಶಿಸುವರು.
5 But if ye will not hear these words, I swear by Myself, saith the LORD, that this house shall become a desolation.
ನೀವು ಈ ಮಾತುಗಳನ್ನು ಕೇಳದಿದ್ದರೆ ಈ ಅರಮನೆಯು ಹಾಳುಬೀಳುವುದು ಎಂದು ನನ್ನ ಮೇಲೆ ಆಣೆಯಿಡುತ್ತೇನೆ ಇದು ಯೆಹೋವನ ನುಡಿ” ಎಂಬುದೇ.
6 For thus saith the LORD concerning the house of the king of Judah: Thou art Gilead unto Me, the head of Lebanon; yet surely I will make thee a wilderness, cities which are not inhabited.
ಯೆಹೋವನು ಯೆಹೂದದ ಅರಸನ ಮನೆತನವನ್ನು ಕುರಿತು ಹೀಗೆನ್ನುತ್ತಾನೆ, “ನೀನು ನನ್ನ ದೃಷ್ಟಿಯಲ್ಲಿ ಗಿಲ್ಯಾದಿನಂತೆಯೂ, ಲೆಬನೋನಿನ ಶಿಖರದ ಹಾಗೂ ಇದ್ದಿ, ಆದರೂ ನಾನು ನಿನ್ನನ್ನು ಮರುಭೂಮಿಯನ್ನಾಗಿಯೂ ಮತ್ತು ನಿರ್ಜನ ಪಟ್ಟಣವನ್ನಾಗಿಯೂ ಮಾಡುವುದು ಖಂಡಿತ.
7 And I will prepare destroyers against thee, every one with his weapons; and they shall cut down thy choice cedars, and cast them into the fire.
ಆಯುಧ ಸನ್ನದ್ಧರಾದ ಸಂಹಾರಕರನ್ನು ನಿನ್ನ ವಿರುದ್ಧವಾಗಿ ಸಿದ್ಧಪಡಿಸುವೆನು; ಅವರು ನಿನ್ನ ಶ್ರೇಷ್ಠ ದೇವದಾರುಗಳನ್ನು ಕಡಿದು ಬೆಂಕಿಯಲ್ಲಿ ಹಾಕುವರು.
8 And many nations shall pass by this city, and they shall say every man to his neighbour: 'Wherefore hath the LORD done thus unto this great city?'
ಅನೇಕ ಜನಾಂಗಗಳವರು ಈ ಪಟ್ಟಣದ ಮಾರ್ಗವಾಗಿ ಹೋಗುತ್ತಾ, ‘ಯೆಹೋವನು ಈ ಮಹಾ ಪಟ್ಟಣಕ್ಕೆ ಏಕೆ ಹೀಗೆ ಮಾಡಿದನು?’ ಎಂದು ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಾ,
9 Then they shall answer: 'Because they forsook the covenant of the LORD their God, and worshipped other gods, and served them.'
‘ಈ ಪಟ್ಟಣದವರು ತಮ್ಮ ದೇವರಾದ ಯೆಹೋವನ ಒಡಂಬಡಿಕೆಯನ್ನು ನಿರಾಕರಿಸಿ, ಅನ್ಯದೇವತೆಗಳನ್ನು ಪೂಜಿಸಿ ಸೇವಿಸಿದ್ದರಿಂದಲೇ ಇದಕ್ಕೆ ಈ ಗತಿಯಾಯಿತು’ ಎಂದು ಅಂದುಕೊಳ್ಳುವರು.”
10 Weep ye not for the dead, neither bemoan him; but weep sore for him that goeth away, for he shall return no more, nor see his native country.
೧೦ಸತ್ತವನಿಗಾಗಿ ಅಳಬೇಡಿರಿ, ಗೋಳಾಡಬೇಡಿರಿ; ಸೆರೆಯಾದವನಿಗಾಗಿ ಬಿಕ್ಕಿಬಿಕ್ಕಿ ಅಳಿರಿ; ಅವನು ಇನ್ನು ಹಿಂದಿರುಗನು, ಜನ್ಮಭೂಮಿಯನ್ನು ನೋಡನು.
11 For thus saith the LORD touching Shallum the son of Josiah, king of Judah, who reigned instead of Josiah his father, and who went forth out of this place: He shall not return thither any more;
೧೧ಯೆಹೂದದ ಅರಸನಾದ ಯೋಷೀಯನ ತರುವಾಯ ಪಟ್ಟಕ್ಕೆ ಬಂದವನೂ ಇಲ್ಲಿಂದ ಸೆರೆಯಾಗಿ ಹೋದವನೂ ಆದ ಶಲ್ಲೂಮನ ವಿಷಯವಾಗಿ ಯೆಹೋವನು ಹೇಳುವುದೇನೆಂದರೆ, “ಅವನು ಇಲ್ಲಿಗೆ ಇನ್ನು ಹಿಂದಿರುಗಿ ಬಾರನು.
12 but in the place whither they have led him captive, there shall he die, and he shall see this land no more.
೧೨ಅವನನ್ನು ಎಲ್ಲಿಗೆ ಸೆರೆಯೊಯ್ದರೋ ಅಲ್ಲೇ ಸಾಯುವನು, ಈ ದೇಶವನ್ನು ಇನ್ನು ಕಾಣನು” ಎಂಬುದೇ.
13 Woe unto him that buildeth his house by unrighteousness, and his chambers by injustice; that useth his neighbour's service without wages, and giveth him not his hire;
೧೩ತನ್ನ ಅರಮನೆಯನ್ನು ದುರ್ನೀತಿಯಿಂದಲೂ, ಮಹಡಿಗಳನ್ನು ಅನ್ಯಾಯದಿಂದಲೂ ಕಟ್ಟಿಸಿಕೊಳ್ಳುವವನ ಗತಿಯನ್ನು ಏನು ಹೇಳಲಿ! ಕೂಲಿಕೊಡದೆ ನೆರೆಯವನಿಂದ ಬಿಟ್ಟಿಕೆಲಸವನ್ನು ಮಾಡಿಸಿ,
14 That saith: 'I will build me a wide house and spacious chambers', and cutteth him out windows, and it is ceiled with cedar, and painted with vermilion.
೧೪ಆಹಾ, “ನಾನು ವಿಸ್ತಾರವಾದ ಅರಮನೆಯನ್ನೂ ವಿಶಾಲವಾದ ಮಹಡಿಗಳನ್ನೂ ಕಟ್ಟಿಸಿಕೊಳ್ಳುವೆನು” ಎಂದು ಹೇಳಿ, ಅಗಲಗಲವಾದ ಕಿಟಕಿಗಳನ್ನಿಡಿಸಿ, ಒಳಗೆ ಗೋಡೆಗೆಲ್ಲಾ ದೇವದಾರಿನ ಹಲಗೆಗಳನ್ನು ಹೊದಿಸಿ, ಕಿರಿಮಂಜಿಯ ಬಣ್ಣವನ್ನು ಬಳಿಸಿಕೊಳ್ಳುವವನ ಪಾಡನ್ನು ಏನು ಹೇಳಲಿ!
15 Shalt thou reign, because thou strivest to excel in cedar? Did not thy father eat and drink, and do justice and righteousness? Then it was well with him.
೧೫ನೀನು ದೇವದಾರುವಿನ ಕೆಲಸದಲ್ಲಿ ಸ್ಪರ್ಧಿಸುವುದರಿಂದಲೇ ಆಳತಕ್ಕವನಾಗಿದ್ದೀಯೋ? ನಿನ್ನ ತಂದೆಯು ಎಷ್ಟೇ ಉಂಡು ಕುಡಿದರೂ ನೀತಿ ನ್ಯಾಯಗಳನ್ನಂತು ಕೈಕೊಳ್ಳುತ್ತಿದ್ದನು; ಆಗ ಅವನಿಗೆ ನೆಮ್ಮದಿಯಾಗಿತ್ತು.
16 He judged the cause of the poor and needy; then it was well. Is not this to know Me? saith the LORD.
೧೬ದೀನದರಿದ್ರರ ವ್ಯಾಜ್ಯವನ್ನು ತೀರಿಸುತ್ತಿದ್ದನು; ಆಗ ಸುಖವಾಗಿತ್ತು. ನನ್ನನ್ನು ಅರಿಯುವುದೆಂದರೆ ಇದೇ ಎಂಬುದು ಯೆಹೋವನ ನುಡಿ.
17 But thine eyes and thy heart are not but for thy covetousness, and for shedding innocent blood, and for oppression, and for violence, to do it.
೧೭ಆದರೆ ನಿರ್ದೋಷಿಗಳ ರಕ್ತವನ್ನು ಸುರಿಸುವುದು, ದೋಚಿಕೊಳ್ಳುವುದು, ಹಿಂಸಿಸುವುದು, ಜಜ್ಜುವುದು, ಇವುಗಳನ್ನು ಮಾಡುವುದರಲ್ಲಿಯೇ ನಿನ್ನ ದೃಷ್ಟಿಯೂ, ನಿನ್ನ ಮನಸ್ಸೂ ನೆಲೆಗೊಂಡಿವೆ.
18 Therefore thus saith the LORD concerning Jehoiakim the son of Josiah, king of Judah: They shall not lament for him: 'Ah my brother!' or: 'Ah sister!' They shall not lament for him: 'Ah lord!' or: 'Ah his glory!'
೧೮ಆದಕಾರಣ ಯೋಷೀಯನ ಮಗನೂ ಯೆಹೂದದ ಅರಸನೂ ಆದ ಯೆಹೋಯಾಕೀಮನ ವಿಷಯವಾಗಿ ಯೆಹೋವನು. “ಅಯ್ಯೋ ಅಣ್ಣಾ, ಅಯ್ಯೋ ಅಕ್ಕಾ ಎಂದು ಗೋಳಾಡುವಂತೆ ಇವನಿಗಾಗಿ ಯಾರೂ ಗೋಳಾಡುವುದಿಲ್ಲ; ಅಯ್ಯೋ ನಮ್ಮೊಡೆಯಾ, ಅಯ್ಯೋ, ದೊರೆಯ ಮಹಿಮೆಯೇ ಎಂದು ಇವನಿಗಾಗಿ ಯಾರೂ ಪ್ರಲಾಪಿಸರು.
19 He shall be buried with the burial of an ass, drawn and cast forth beyond the gates of Jerusalem.
೧೯ಇವನನ್ನು ಯೆರೂಸಲೇಮಿನ ಬಾಗಿಲುಗಳ ಹೊರಗೆ ಕತ್ತೆಯಂತೆ ಎಳೆದು ಬಿಸಾಡಿ ಮಣ್ಣುಪಾಲು ಮಾಡುವರು” ಎನ್ನುತ್ತಾನೆ.
20 Go up to Lebanon, and cry, and lift up thy voice in Bashan; and cry from Abarim, for all thy lovers are destroyed.
೨೦ಚೀಯೋನ್ ಯುವತಿಯೇ, ಲೆಬನೋನ್ ಪರ್ವತವನ್ನು ಹತ್ತಿ ಕೂಗಿಕೋ! ಬಾಷಾನಿನಲ್ಲಿ ಮೊರೆಯಿಡು, ಅಬಾರೀಮಿನಲ್ಲಿ ಅರಚಿಕೋ! ನಿನ್ನೊಂದಿಗೆ ವ್ಯಭಿಚಾರ ಮಾಡಿದವರೆಲ್ಲಾ ಹಾಳಾಗಿ ಹೋದರಲ್ಲಾ.
21 I spoke unto thee in thy prosperity, but thou saidst: 'I will not hear.' This hath been thy manner from thy youth, that thou hearkenedst not to My voice.
೨೧ನಾನು ನೆಮ್ಮದಿಯಲ್ಲಿ ನಿನ್ನೊಡನೆ ಮಾತನಾಡಿದಾಗ “ನಾನು ಕೇಳುವುದಿಲ್ಲ” ಎಂದು ನೀನು ಹೇಳಿದಿ. ನನ್ನ ಮಾತನ್ನು ಕೇಳದಿರುವುದು ನಿನಗೆ ಬಾಲ್ಯದಿಂದಲೇ ಅಭ್ಯಾಸ.
22 The wind shall feed upon all thy shepherds, and thy lovers shall go into captivity; surely then shalt thou be ashamed and confounded for all thy wickedness.
೨೨ನಿನ್ನನ್ನು ಅಟ್ಟಿಕೊಂಡು ಹೋಗುವ ಕುರುಬರನ್ನು ಗಾಳಿಯು ಅಟ್ಟಿಬಿಡುವುದು. ನಿನ್ನೊಂದಿಗೆ ವ್ಯಭಿಚಾರ ಮಾಡಿದವರು ಸೆರೆಹೋಗುವರು; ಆಗ ನಿನ್ನ ಸಕಲ ದುಷ್ಕೃತ್ಯಗಳ ನಿಮಿತ್ತ ನೀನು ಆಶಾಭಂಗಪಟ್ಟು ಅವಮಾನಕ್ಕೀಡಾಗುವುದು ಖಂಡಿತ.
23 O inhabitant of Lebanon, that art nestled in the cedars, how gracious shalt thou be when pangs come upon thee, the pain as of a woman in travail!
೨೩ಲೆಬನೋನಿನಲ್ಲಿ ವಾಸಿಸುವವಳೇ, ದೇವದಾರುಗಳಲ್ಲಿ ಗೂಡು ಮಾಡಿಕೊಂಡಿರುವವಳೇ, ಪ್ರಸವವೇದನೆಯಂತಿರುವ ಸಂಕಟವು ನಿನಗೆ ಸಂಭವಿಸುವಾಗ ನಿನ್ನ ಸ್ಥಿತಿಯು ಎಷ್ಟೋ ದುಃಖಕರವಾಗಿರುವುದು!
24 As I live, saith the LORD, though Coniah the son of Jehoiakim king of Judah were the signet upon My right hand, yet would I pluck thee thence;
೨೪ಯೆಹೋವನು ಹೀಗೆನ್ನುತ್ತಾನೆ, “ನನ್ನ ಜೀವದಾಣೆ, ಯೆಹೋಯಾಕೀಮನ ಮಗನೂ ಯೆಹೂದದ ಅರಸನೂ ಆದ ಕೊನ್ಯನೆಂಬ ನೀನು ನನ್ನ ಬಲಗೈಯ ಮುದ್ರೆಯುಂಗರವಾಗಿದ್ದರೂ ನಾನು ನಿನ್ನನ್ನು ಅಲ್ಲಿಂದ ಕಿತ್ತುಹಾಕುತ್ತಿದ್ದೆನು!
25 and I will give thee into the hand of them that seek thy life, and into the hand of them of whom thou art afraid, even into the hand of Nebuchadrezzar king of Babylon, and into the hand of the Chaldeans.
೨೫ನಿನ್ನ ಪ್ರಾಣವನ್ನು ಹುಡುಕಿ ನಿನ್ನಲ್ಲಿ ಭಯವನ್ನು ಹುಟ್ಟಿಸುವವರ ಕೈಗೆ ಅಂದರೆ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಮತ್ತು ಕಸ್ದೀಯರ ಕೈಗೆ ಕೊಟ್ಟುಬಿಡುವೆನು.
26 And I will cast thee out, and thy mother that bore thee, into another country, where ye were not born; and there shall ye die.
೨೬ನಿನ್ನನ್ನೂ ಮತ್ತು ನಿನ್ನ ಹೆತ್ತ ತಾಯಿಯನ್ನೂ ಜನ್ಮಭೂಮಿಯಲ್ಲದ ಅನ್ಯದೇಶಕ್ಕೆ ಎಸೆದುಬಿಡುವೆನು; ಅಲ್ಲೇ ಸಾಯುವಿರಿ.
27 But to the land whereunto they long to return, thither shall they not return.
೨೭ಹಿಂದಿರುಗಬೇಕೆಂದು ಹಂಬಲಿಸುವ ದೇಶಕ್ಕೆ ಅವರು ಹಿಂದಿರುಗುವುದೇ ಇಲ್ಲ” ಎಂಬುದೇ.
28 Is this man Coniah a despised, broken image? Is he a vessel wherein is no pleasure? Wherefore are they cast out, he and his seed, and are cast into the land which they know not?
೨೮ಕೊನ್ಯನೆಂಬ ಈ ಮನುಷ್ಯನು ಬಿಸಾಡಿದ ಒಡಕು ಕುಡಿಕೆಯೋ? ಯಾರಿಗೂ ಇಷ್ಟವಿಲ್ಲದ ಮಣ್ಣಿನ ಮಡಿಕೆಯೋ? ಎಂಬಂತೆ, ಅವನೂ ಅವನ ಸಂತತಿಯವರೂ ಏಕೆ ಬಿಸಾಡಲ್ಪಟ್ಟಿದ್ದಾರೆ? ನೋಡದ ದೇಶಕ್ಕೆ ಏಕೆ ಎಸೆಯಲ್ಪಟ್ಟಿದ್ದಾರೆ?
29 O land, land, land, hear the word of the LORD.
೨೯ದೇಶವೇ, ದೇಶವೇ, ದೇಶವೇ ಯೆಹೋವನ ಮಾತನ್ನು ಕೇಳು!
30 Thus saith the LORD: Write ye this man childless, a man that shall not prosper in his days; for no man of his seed shall prosper, sitting upon the throne of David, and ruling any more in Judah.
೩೦ಯೆಹೋವನು, “ಇವನನ್ನು ಮಕ್ಕಳಿಲ್ಲದವನು, ವ್ಯರ್ಥಜನ್ಮದವನು ಎಂದು ಪಟ್ಟಿಯಲ್ಲಿ ಬರೆಯಿರಿ; ಇವನ ಸಂತಾನದಲ್ಲಿ ಇನ್ನು ಮೇಲೆ ಯಾರೂ ದಾವೀದನ ಸಿಂಹಾಸನದಲ್ಲಿ ಕುಳಿತು ಯೆಹೂದವನ್ನು ಆಳಿ ಬಾಳನು” ಎಂದು ಹೇಳುತ್ತಾನೆ.

< Jeremiah 22 >