< Ezekiel 46 >
1 Thus saith the Lord God: The gate of the inner court that looketh toward the east, shall be shut the six days, on which work is done; but on the sabbath day it shall be opened, yea and on the day of the new moon it shall be opened.
೧ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ವಾರದೊಳಗೆ ಕೆಲಸ ಮಾಡುವ ಆರು ದಿನಗಳಲ್ಲಿ ಒಳಗಿನ ಅಂಗಳದ ಪೂರ್ವದಿಕ್ಕಿನ ಹೆಬ್ಬಾಗಿಲನ್ನು ಮುಚ್ಚಿರಬೇಕು. ಅದನ್ನು ಸಬ್ಬತ್ ದಿನದಲ್ಲಿಯೂ, ಅಮಾವಾಸ್ಯೆಯಲ್ಲಿಯೂ ತೆರೆದಿರಬೇಕು.
2 And the prince shall enter by the way of the porch of the gate from without, and he shall stand at the threshold of the gate: and the priests shall offer his holocaust, and his peace offerings: and he shall adore upon the threshold of the gate, and shall go out: but the gate shall not be shut till the evening.
೨ರಾಜನು ಹೊರಗಿನ ಕೈಸಾಲೆಯ ಮಾರ್ಗವಾಗಿ ಆ ಹೆಬ್ಬಾಗಿಲನ್ನು ಪ್ರವೇಶಿಸಿ, ಬಾಗಿಲಿನ ಕಂಬದ ಪಕ್ಕದಲ್ಲಿ ನಿಂತುಕೊಂಡು, ತಾನು ಒಪ್ಪಿಸಿದ ಸರ್ವಾಂಗಹೋಮ ಪಶುವನ್ನೂ, ಸಮಾಧಾನ ಯಜ್ಞ ಪಶುಗಳನ್ನೂ ಯಾಜಕರು ಅರ್ಪಿಸುತ್ತಿರುವಾಗ ಬಾಗಿಲಿನ ಹೊಸ್ತಿಲಿನಲ್ಲಿ ಅಡ್ಡಬೀಳಲಿ, ಆ ಮೇಲೆ ಹೊರಟು ಹೋಗಲಿ. ಅ ದಿನ ಸಂಜೆಯ ತನಕ ಬಾಗಿಲನ್ನು ಮುಚ್ಚಬಾರದು.
3 And the people of the land shall adore at the door of that gate before the Lord on the sabbaths, and on the new moons.
೩ಸಬ್ಬತ್ ದಿನಗಳಲ್ಲಿಯೂ, ಅಮಾವಾಸ್ಯೆಗಳಲ್ಲಿಯೂ ದೇಶದ ಜನರು ಆ ಹೆಬ್ಬಾಗಿಲಿನ ದ್ವಾರದ ಮುಂದೆ ಯೆಹೋವನ ಸಮ್ಮುಖವಾಗಿ ಅಡ್ಡಬೀಳಲಿ.
4 And the holocaust that the prince shall offer to the Lord on the sabbath day, shall be six lambs without blemish, and a ram without blemish.
೪ಸಬ್ಬತ್ ದಿನದಲ್ಲಿ ಅರಸನು ಯೆಹೋವನಿಗೆ ಪೂರ್ಣಾಂಗವಾದ ಒಂದು ಟಗರನ್ನೂ ಸರ್ವಾಂಗಹೋಮವಾಗಿ ಅರ್ಪಿಸತಕ್ಕದ್ದು.
5 And the sacrifice of an ephi for a ram: but for the lambs what sacrifice his hand shall allow: and a hin of oil for every ephi.
೫ಟಗರಿನೊಡನೆ ಮೂವತ್ತು ಸೇರು ಗೋದಿಹಿಟ್ಟನ್ನೂ, ಕುರಿಗಳೊಡನೆ ಕೈಯಲಾದಷ್ಟು ಗೋದಿಹಿಟ್ಟನ್ನೂ, ಮೂವತ್ತು ಸೇರು ಗೋದಿಹಿಟ್ಟಿಗೆ ಆರಾರು ಸೇರಿನಂತೆ ಎಣ್ಣೆಯನ್ನೂ ಧಾನ್ಯನೈವೇದ್ಯಕ್ಕಾಗಿ ಕೊಡಲಿ.
6 And on the day of the new moon a calf of the herd without blemish: and the six lambs, and the rams shall be without blemish.
೬ಅಮಾವಾಸ್ಯೆಯಲ್ಲಿ ಅವನು ಪೂರ್ಣಾಂಗವಾದ ಒಂದು ಹೋರಿಯನ್ನೂ, ಆರು ಕುರಿಗಳನ್ನೂ, ಒಂದು ಟಗರನ್ನೂ ಒಪ್ಪಿಸತಕ್ಕದ್ದು. ಅವು ಪೂರ್ಣಾಂಗವಾಗಿಯೇ ಇರಬೇಕು.
7 And he shall offer in sacrifice an ephi for a calf, an ephi also for a ram: but for the lambs, as his hand shall find: and a hin of oil for every ephi.
೭ಮತ್ತು ಹೋರಿಯೊಡನೆ ಮೂವತ್ತು ಸೇರು, ಟಗರಿನೊಡನೆ ಮೂವತ್ತು ಸೇರು, ಕುರಿಗಳೊಡನೆ ಕೈಲಾದ್ದಷ್ಟು ಸೇರು ಗೋದಿಹಿಟ್ಟನ್ನೂ, ಮೂವತ್ತು ಸೇರಿಗೆ ಆರಾರು ಸೇರಿನಂತೆ ಎಣ್ಣೆಯನ್ನೂ ಧಾನ್ಯನೈವೇದ್ಯಕ್ಕಾಗಿ ಒದಗಿಸಬೇಕು.
8 And when the prince is to go in, let him go in by the way of the porch of the gate, and let him go out the same way.
೮“ಅರಸನು ಪ್ರವೇಶ ಮಾಡುವಾಗ ಹೆಬ್ಬಾಗಿಲಿನ ಕೈಸಾಲೆಯ ಮಾರ್ಗವಾಗಿ ಒಳಗೆ ಬಂದು, ಅದೇ ಮಾರ್ಗವಾಗಿ ಹೊರಗೆ ಹೋಗಬೇಕು.
9 But when the people of the land shall go in before the Lord in the solemn feasts, he that goeth in by the north gate to adore, shall go out by the way of the south gate: and he that; goeth in by the way of the south gate, shall go out by the way of the north gate: he shall not return by the way of the gate whereby he came in, but shall go out at that over against it.
೯ದೇಶದ ಜನರಾದರೋ ಹಬ್ಬಗಳಲ್ಲಿ ಯೆಹೋವನ ಸಮ್ಮುಖದಲ್ಲಿ ಕಾಣಿಸಿಕೊಳ್ಳುವಾಗ ಉತ್ತರ ಬಾಗಿಲಿನಿಂದ ಆರಾಧಿಸುವುದಕ್ಕೆ ಪ್ರವೇಶಿಸಿದವನು ದಕ್ಷಿಣ ಬಾಗಿಲಿಂದ ಹೊರಗೆ ಹೋಗಬೇಕು. ದಕ್ಷಿಣದ ಬಾಗಿಲಿನಿಂದ ಪ್ರವೇಶಿಸಿದವನು ಉತ್ತರ ಬಾಗಿಲಿನಿಂದ ಹೊರಗೆ ಹೋಗಬೇಕು. ತಾನು ಪ್ರವೇಶಿಸಿದ ಬಾಗಿಲಿನಿಂದ ಹಿಂದಿರುಗದೆ ಅದಕ್ಕೆ ಎದುರಾಗಿರುವ ಬಾಗಿಲಿಂದ ಹೊರಗೆ ಹೋಗಬೇಕು.
10 And the prince in the midst of them, shall go in when they go in, and go out when they go out.
೧೦ಜನರು ಪ್ರವೇಶಿಸುವಾಗ ಅರಸನು ಅವರ ಮಧ್ಯದಲ್ಲಿ ಒಳಗೆ ಪ್ರವೇಶಿಸಲಿ. ಅವರು ಹೊರಗೆ ಹೋಗುವಾಗ ಅವರೂ ಹೊರಗೆ ಹೋಗಲಿ.
11 And in the fairs, and in the solemnities there shall be the sacrifice of an ephi to a calf, and an ephi to a ram: and to the lambs, the sacrifice shall be as his hand shall find: and a hin of oil to every ephi.
೧೧ಅರಸನು ಉತ್ಸವಗಳಲ್ಲಿಯೂ, ಹಬ್ಬಗಳಲ್ಲಿಯೂ ಹೋರಿಯೊಡನೆ ಮೂವತ್ತು ಸೇರು, ಟಗರಿನೊಡನೆ ಮೂವತ್ತು ಸೇರು, ಕುರಿಗಳೊಡನೆ ಕೈಲಾದ್ದಷ್ಟು ಸೇರು ಗೋದಿಹಿಟ್ಟನ್ನೂ, ಮೂವತ್ತು ಸೇರಿಗೆ ಆರಾರು ಸೇರಿನಂತೆ ಎಣ್ಣೆಯನ್ನೂ, ಧಾನ್ಯನೈವೇದ್ಯಕ್ಕಾಗಿ ಒದಗಿಸಬೇಕು.
12 But when the prince shall offer a voluntary holocaust, or voluntary peace offerings to the Lord: the gate that looketh towards the east shall be opened to him, and he shall offer his holocaust, and his peace offerings, as it is wont to be done on the sabbath day: and he shall go out, and the gate shall be shut after he is gone forth.
೧೨ಅರಸನು ಸ್ವಂತ ಇಚ್ಛೆಯಿಂದ ಕಾಣಿಕೆಯನ್ನಾಗಲಿ, ಸರ್ವಾಂಗಹೋಮವನ್ನಾಗಲಿ, ಸಮಾಧಾನ ಯಜ್ಞಗಳನ್ನಾಗಲಿ ಯೆಹೋವನಿಗೆ ಸಮರ್ಪಿಸುವಾಗ ಅವನಿಗಾಗಿ ಪೂರ್ವದಿಕ್ಕಿನ ಹೆಬ್ಬಾಗಿಲನ್ನು ತೆರೆಯಬೇಕು. ಅವನು ಸಬ್ಬತ್ ದಿನದಲ್ಲಿ ಸಮರ್ಪಿಸುವಂತೆ ಸರ್ವಾಂಗಹೋಮ ಪಶುವನ್ನೂ, ಸಮಾಧಾನ ಯಜ್ಞಪಶುಗಳನ್ನೂ ಸಮರ್ಪಿಸಿ ಹೊರಡಲಿ. ಹೊರಟ ಮೇಲೆ ಬಾಗಿಲನ್ನು ಮುಚ್ಚಬೇಕು.
13 And he shall offer every day for a holocaust to the Lord, a lamb of the same year without blemish: he shall offer it always in the morning.
೧೩“ನೀನು ಪೂರ್ಣಾಂಗವಾದ ವರ್ಷದ ಕುರಿಯನ್ನು ಯೆಹೋವನಿಗೆ ಸರ್ವಾಂಗಹೋಮವಾಗಿ ಪ್ರತಿ ದಿನ ಅರ್ಪಿಸಬೇಕು. ಪ್ರತಿ ದಿನ ಬೆಳಿಗ್ಗೆ ಅದನ್ನು ಅರ್ಪಿಸತಕ್ಕದ್ದು.
14 And he shall offer the sacrifice for it morning by morning, the sixth part of ephi: and the third part of a bin of oil be mingled with the fine hour: a to the Lord by ordinance continual and everlasting.
೧೪ಅದರೊಂದಿಗೆ ಪ್ರತಿ ದಿನ ಬೆಳಗ್ಗೆ ಧಾನ್ಯ ನೈವೇದ್ಯವಾಗಿ ಐದು ಸೇರು ಗೋದಿಹಿಟ್ಟನ್ನೂ, ಅದನ್ನು ಕಲಸುವುದಕ್ಕೆ ಎರಡು ಸೇರು ಎಣ್ಣೆಯನ್ನೂ ನೀನು ಸಮರ್ಪಿಸಬೇಕು. ಇವುಗಳನ್ನು ಪ್ರತಿನಿತ್ಯವೂ ಯೆಹೋವನಿಗೆ ಧಾನ್ಯನೈವೇದ್ಯವಾಗಿ ಅರ್ಪಿಸತಕ್ಕದ್ದು. ಇದು ಶಾಶ್ವತ ನಿಯಮವಾಗಿದೆ.
15 He shall offer the lamb, and the sacrifice, and the oil morning by morning: an everlasting holocaust.
೧೫ಯಾಜಕರು ಕುರಿಯನ್ನೂ, ಧಾನ್ಯನೈವೇದ್ಯವನ್ನೂ, ಎಣ್ಣೆಯನ್ನೂ ನಿತ್ಯ ಸರ್ವಾಂಗಹೋಮವಾಗಿ ಪ್ರತಿ ದಿನ ಬೆಳಗ್ಗೆ ಸಮರ್ಪಿಸಬೇಕು.”
16 Thus saith the Lord God: If the prince give a gift to any of his sons: the inheritance of it shall go to his children, they shall possess it by inheritance.
೧೬ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಅರಸನು ತನ್ನ ಮಕ್ಕಳಲ್ಲಿ ಒಬ್ಬನಿಗೆ ದಾನ ಕೊಟ್ಟರೆ, ಅದು ತಂದೆಯ ಸ್ವಾಸ್ತ್ಯವಾದ ಕಾರಣ, ಮಕ್ಕಳಿಗೆ ಹಕ್ಕು ಬರುವುದು, ಅದು ಬಾಧ್ಯವಾಗಿ ಸಿಕ್ಕಿದ ಸ್ವಾಸ್ತ್ಯವೇ.
17 But if he give a legacy out of his inheritance to one of his servants, it shall be his until the year of release, and it shall return to the prince: but his inheritance shall go to his sons.
೧೭ಆದರೆ ಅರಸನು ತನ್ನ ಭೂಮಿಯ ಒಂದು ಭಾಗವನ್ನು ತನ್ನ ಸೇವಕರಲ್ಲಿ ಒಬ್ಬನಿಗೆ ದಾನ ಮಾಡಿದರೆ, ಬಿಡುಗಡೆಯ ವರ್ಷದವರೆಗೆ ಅದು ಅವನ ಅಧೀನವಾಗಿರುವುದು; ಆ ಮೇಲೆ ಅದು ಪುನಃ ಅರಸನ ವಶವಾಗುವುದು; ಆದರೆ ಅರಸನು ತನ್ನ ಮಕ್ಕಳಿಗೆ ಕೊಟ್ಟ ಸ್ವತ್ತು ಅವರಿಗೇ ಸೇರುವುದು.
18 And the prince shall not take of the people’s inheritance by violence, nor of their possession: but out of his own possession he shall give an inheritance to his sons: that my people be not dispersed every man from his possession.
೧೮ಇದಲ್ಲದೆ ಅರಸನು ಪ್ರಜೆಗಳ ಪಿತ್ರಾರ್ಜಿತ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ಅವರ ಬಾಧ್ಯತೆಯನ್ನು ತಪ್ಪಿಸಬಾರದು. ಸ್ವಂತ ಭೂಮಿಯನ್ನೇ ವಿಭಾಗಿಸಿ ತನ್ನ ಮಕ್ಕಳಿಗೆ ಪಾಲುಕೊಡಲಿ. ಇಲ್ಲವಾದರೆ ನನ್ನ ಪ್ರಜೆಯಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಭೂಸ್ಥಿತಿಯನ್ನು ಕಳೆದುಕೊಂಡು ದಿಕ್ಕಾಪಾಲಾಗಿ ಹೋಗುವನು.
19 And he brought me in by the entry that was at the side of the gate, into the chambers of the sanctuary that were for the priests, which looked toward the north. And there was a place bending to the west.
೧೯“ಬಳಿಕ ಆ ಪುರುಷನು ನನ್ನನ್ನು ಹೆಬ್ಬಾಗಿಲ ಪಕ್ಕದಲ್ಲಿನ ಪ್ರವೇಶದ ಮಾರ್ಗವಾಗಿ ಉತ್ತರಕ್ಕೆ ಅಭಿಮುಖವಾಗಿಯೂ, ಯಾಜಕರಿಗೆ ನೇಮಕವಾಗಿಯೂ ಇರುವ ಪರಿಶುದ್ಧವಾದ ಕೋಣೆಗಳಿಗೆ ಬರಮಾಡಿದನು. ಇಗೋ, ಅವುಗಳ ಹಿಂದೆ ಪಶ್ಚಿಮದ ಕಡೆಗೆ ಒಂದು ಸ್ಥಳವಿತ್ತು.”
20 And he said to me: This is the place where the priests shall boil the sin offering, and the trespass offering: where they shall dress the sacrifice, that they may not bring it out into the outward court, and the people be sanctified.
೨೦ಆಗ ಅವನು ನನಗೆ, “ಯಾಜಕರು ಅಪರಾಧ ಬಲಿಯನ್ನೂ, ಪ್ರಾಯಶ್ಚಿತ್ತಯಜ್ಞ ಬಲಿಯನ್ನೂ, ಬೇಯಿಸಿದ ಧಾನ್ಯನೈವೇದ್ಯವನ್ನು ಸುಡುವುದಕ್ಕೆ ಏರ್ಪಡಿಸಿರುವ ಪರಿಶುದ್ಧ ಸ್ಥಳವು ಇದೆ” ಎಂದು ಹೇಳಿದನು.
21 And he brought me into the outward court, and he led me about by the four corners of the court: and behold there was a little court in the corner of the court, to every corner of the court there was a little court.
೨೧ತರುವಾಯ ಅವನು ನನ್ನನ್ನು ಹೊರಗಿನ ಅಂಗಳಕ್ಕೆ ಬರಮಾಡಿ, ಅಲ್ಲಿನ ನಾಲ್ಕು ಮೂಲೆಗಳ ಮಾರ್ಗವಾಗಿ ಕರೆದುಕೊಂಡು ಹೋದನು. ಇಗೋ, ಅಂಗಳದ ಒಂದೊಂದು ಮೂಲೆಯಲ್ಲಿ ಒಂದೊಂದು ಒಳ ಅಂಗಳವು ಕಾಣಿಸಿತು.
22 In the four corners of the court were little courts disposed, forty cubits long, and thirty broad, all the four were of one measure.
೨೨ಹೌದು, ಅಂಗಳದ ನಾಲ್ಕು ಮೂಲೆಗಳಲ್ಲಿಯೂ ನಲ್ವತ್ತು ಮೊಳ ಉದ್ದದ, ಮೂವತ್ತು ಮೊಳ ಅಗಲದ ಪ್ರತ್ಯೇಕವಾದ ಅಂಗಳಗಳು ಇದ್ದವು; ಮೂಲೆಗಳಲ್ಲಿನ ಆ ನಾಲ್ಕು ಅಂಗಳಗಳು ಒಂದೇ ಅಳತೆಯಾಗಿದ್ದವು.
23 And there was a wall round about compassing the four little courts, and there were kitchens built under the rows round about.
೨೩ಅವುಗಳೊಳಗೆ ಸುತ್ತಲು, ಅಂದರೆ ಆ ನಾಲ್ಕು ಅಂಗಳಗಳ ಸುತ್ತು ಮುತ್ತಲು ಕಲ್ಲಿನ ಸಾಲುಗಳು ಚಾಚಿಕೊಂಡಿತು. ಆ ಸಾಲುಗಳ ಕೆಳಗೆ ಒಲೆಗಳು ಸುತ್ತಲೂ ಇದ್ದವು.
24 And he said to me: This is the house of the kitchens wherein the ministers of the house of the Lord shall boil the victims of the people.
೨೪ಆಗ ಅವನು ನನಗೆ, “ಇವು ದೇವಾಲಯದ ಸೇವಕರು. ಯಜ್ಞಪಶುಗಳನ್ನು ತಂದ ಜನರಿಗೋಸ್ಕರ ಅವುಗಳ ಮಾಂಸವನ್ನು ಬೇಯಿಸಿದ ಪಾಕಶಾಲೆಗಳು” ಎಂದು ಹೇಳಿದನು.