< Revelation 10 >
1 And I saw another strong angel coming down out of the heaven, clothed with a cloud, and the rainbow upon his head, and his countenance as the sun, and his feet as pillars of fire,
೧ತರುವಾಯ ಬಲಿಷ್ಠನಾದ ಮತ್ತೊಬ್ಬ ದೇವದೂತನು ಪರಲೋಕದಿಂದ ಇಳಿದುಬರುವುದನ್ನು ಕಂಡೆನು. ಅವನು ಮೇಘವನ್ನು ಧರಿಸಿಕೊಂಡಿದ್ದನು. ಅವನ ತಲೆಯ ಮೇಲೆ ಕಾಮನಬಿಲ್ಲು ಇತ್ತು. ಅವನ ಮುಖವು ಸೂರ್ಯನೊಪಾದಿಯಲ್ಲಿತ್ತು. ಅವನ ಪಾದಗಳು ಬೆಂಕಿಯ ಕಂಬಗಳಂತಿದ್ದವು.
2 and having in his hand a little opened book. And he set his right foot on the sea, and the left upon the earth,
೨ಅವನ ಕೈಯಲ್ಲಿ ಬಿಚ್ಚಿದ್ದ ಒಂದು ಚಿಕ್ಕ ಸುರುಳಿ ಇತ್ತು. ಅವನು ಬಲಗಾಲನ್ನು ಸಮುದ್ರದ ಮೇಲೆಯೂ ಎಡಗಾಲನ್ನು ಭೂಮಿಯ ಮೇಲೆಯೂ ಇಟ್ಟು,
3 and cried with a loud voice as a lion roars. And when he cried, the seven thunders uttered their own voices.
೩ಸಿಂಹವು ಘರ್ಜಿಸುವ ಪ್ರಕಾರ ಮಹಾಶಬ್ದದಿಂದ ಕೂಗಿದನು. ಕೂಗಿದಾಗ ಏಳು ಗುಡುಗುಗಳು ಒಂದೊಂದಾಗಿ ಧ್ವನಿಕೊಟ್ಟವು.
4 And when the seven thunders spoke, I was about to write: and I heard a voice out of the heaven saying, Seal the things which the seven thunders have spoken, and write them not.
೪ಆ ಏಳು ಗುಡುಗುಗಳು ನುಡಿದಾಗ ನಾನು ಬರೆಯಬೇಕೆಂದಿದ್ದೆನು. ಆದರೆ, “ಆ ಏಳು ಗುಡುಗುಗಳು ನುಡಿದಿದ್ದನ್ನು ನೀನು ಬರೆಯದೆ ಗುಪ್ತವಾಗಿಡು” ಎಂದು ಹೇಳುವ ದೈವವಾಣಿಯನ್ನು ಕೇಳಿದೆನು.
5 And the angel whom I saw stand on the sea and on the earth lifted up his right hand to the heaven,
೫ಅನಂತರ ಸಮುದ್ರದ ಮೇಲೆಯೂ, ಭೂಮಿಯ ಮೇಲೆಯೂ ನಿಂತಿರುವವನಾಗಿ ನನಗೆ ಕಾಣಿಸಿದ ದೇವದೂತನು ತನ್ನ ಬಲಗೈಯನ್ನು ಪರಲೋಕದ ಕಡೆಗೆ ಎತ್ತಿ,
6 and swore by him that lives to the ages of ages, who created the heaven and the things that are in it, and the earth and the things that are in it, and the sea and the things that are in it, that there should be no longer delay; (aiōn )
೬ಪರಲೋಕವನ್ನೂ ಅದರಲ್ಲಿರುವ ಸಮಸ್ತವನ್ನೂ, ಭೂಮಿಯನ್ನೂ ಅದರಲ್ಲಿರುವ ಸಮಸ್ತವನ್ನೂ, ಸಮುದ್ರವನ್ನೂ ಅದರಲ್ಲಿರುವ ಸಮಸ್ತವನ್ನೂ ಸೃಷ್ಟಿಸಿ, ಯುಗಯುಗಾಂತರಗಳಲ್ಲಿಯೂ ಜೀವಿಸುವಾತನ ಮೇಲೆ ಆಣೆಯಿಟ್ಟು, “ಇನ್ನು ತಡಮಾಡದೆ, (aiōn )
7 but in the days of the voice of the seventh angel, when he is about to sound the trumpet, the mystery of God also shall be completed, as he has made known the glad tidings to his own bondmen the prophets.
೭ಏಳನೆಯ ದೇವದೂತನು ಶಬ್ದಮಾಡುವ ದಿನಗಳಲ್ಲಿ ಅಂದರೆ ಅವನು ತುತ್ತೂರಿಯನ್ನು ಊದುವುದಕ್ಕಿರುವ ಸಮಯದಲ್ಲಿ ದೇವರು ಇದುವರೆಗೆ ಗುಪ್ತವಾಗಿಟ್ಟಿದ್ದ ದೇವರ ಮರ್ಮವನ್ನು ತನ್ನ ದಾಸರಾದ ಪ್ರವಾದಿಗಳಿಗೆ ತಿಳಿಸಿದ್ದ ಪ್ರಕಾರ ನೆರವೇರುವುದು” ಎಂದು ಹೇಳಿದನು.
8 And the voice which I heard out of the heaven [was] again speaking with me, and saying, Go, take the little book which is opened in the hand of the angel who is standing on the sea and on the earth.
೮ಅನಂತರ ಪರಲೋಕದಿಂದ ನನಗೆ ಕೇಳಿಸಿದ್ದ ಶಬ್ದವು ಮತ್ತೊಮ್ಮೆ ನನ್ನೊಂದಿಗೆ ಮಾತನಾಡಿ, “ನೀನು ಹೋಗಿ ಸಮುದ್ರದ ಮೇಲೆಯೂ ಭೂಮಿಯ ಮೇಲೆಯೂ ನಿಂತುಕೊಂಡಿರುವ ದೂತನ ಕೈಯಲ್ಲಿರುವ ಆ ಬಿಚ್ಚಿದ ಸುರುಳಿಯನ್ನು ತೆಗೆದುಕೊ” ಎಂದು ಹೇಳಿತು.
9 And I went to the angel, saying to him to give me the little book. And he says to me, Take and eat it up: and it shall make thy belly bitter, but in thy mouth it shall be sweet as honey.
೯ನಾನು ಆ ದೂತನ ಬಳಿಗೆ ಹೋಗಿ, “ಆ ಚಿಕ್ಕ ಸುರುಳಿಯನ್ನು ನನಗೆ ಕೊಡು ಎಂದು ಕೇಳಲು ಅವನು ನನಗೆ, ನೀನು ಅದನ್ನು ತೆಗೆದುಕೊಂಡು ತಿಂದು ಬಿಡು, ಅದು ನಿನ್ನ ಹೊಟ್ಟೆಯನ್ನು ಕಹಿಯಾಗುವಂತೆ ಮಾಡುವುದು, ಆದರೆ ನಿನ್ನ ಬಾಯಿ ಜೇನಿನಂತೆ ಸಿಹಿಯಾಗಿರುವುದು” ಎಂದು ಹೇಳಿದನು.
10 And I took the little book out of the hand of the angel, and ate it up; and it was in my mouth as honey, sweet; and when I had eaten it my belly was made bitter.
೧೦ಆಗ ನಾನು ಆ ಚಿಕ್ಕ ಸುರುಳಿಯನ್ನು ಆ ದೂತನ ಕೈಯಿಂದ ತೆಗೆದುಕೊಂಡು ತಿಂದುಬಿಟ್ಟೆನು. ಅದು ನನ್ನ ಬಾಯಲ್ಲಿ ಜೇನಿನಂತೆ ಸಿಹಿಯಾಗಿತ್ತು, ಅದನ್ನು ತಿಂದ ನಂತರ ನನ್ನ ಹೊಟ್ಟೆಯು ಕಹಿಯಾಯಿತು.
11 And it was said to me, Thou must prophesy again as to peoples and nations and tongues and many kings.
೧೧ಅನಂತರ ಆ ದೂತನು ನನಗೆ, “ನೀನು ಇನ್ನೂ ಅನೇಕ ಪ್ರಜೆ, ಜನ, ಭಾಷೆಗಳನ್ನೂ, ಅರಸರನ್ನೂ ಕುರಿತು ಪ್ರವಾದನೆ ಹೇಳಬೇಕು” ಎಂದು ಆಜ್ಞಾಪಿಸಿದನು.