< 2 Samuel 4 >
1 And when Saul's son Ish-bosheth had news that Abner was dead in Hebron, his hands became feeble, and all the Israelites were troubled.
೧ಅಬ್ನೇರನು ಹೆಬ್ರೋನಿನಲ್ಲಿ ಸತ್ತನೆಂಬ ವರ್ತಮಾನವು ಸೌಲನ ಮಗನಾದ ಈಷ್ಬೋಶೆತನಿಗೆ ಮುಟ್ಟಿದಾಗ ಅವನ ಕೈಗಳು ಜೋಲುಬಿದ್ದವು. ಇಸ್ರಾಯೇಲರೆಲ್ಲರು ಕಳವಳಗೊಂಡರು.
2 And Saul's son had two men, captains of bands, one named Baanah and the other Rechab, sons of Rimmon the Beerothite, of the tribe of Benjamin; (for Beeroth was at one time taken to be part of Benjamin:
೨ಸೌಲನ ಮಗನಿಗೆ ಬಾಣ, ರೇಕಾಬ ಎಂಬ ಇಬ್ಬರು ಸೇನಾಧಿಪತಿಗಳಿದ್ದರು. ಅವರು ಬೆನ್ಯಾಮೀನ್ ಕುಲದ ಬೇರೋತಿನವನಾದ ರಿಮ್ಮೋನನ ಮಕ್ಕಳು. ಬೇರೋತ ಎಂಬುದು ಬೆನ್ಯಾಮೀನ್ಯರಿಗೆ ಸೇರಿದ ಗ್ರಾಮ.
3 But the people of Beeroth had gone in flight to Gittaim, where they have been living to this day.)
೩ಆದರೆ ಬೇರೋತ್ಯರು ಗಿತ್ತಯಿಮಿಗೆ ಓಡಿಹೋಗಿ, ಇಂದಿನ ವರೆಗೂ ಅಲ್ಲೇ ಪ್ರವಾಸಿಗಳಾಗಿದ್ದಾರೆ.
4 Now Jonathan, Saul's son, had a son whose feet were damaged. He was five years old when news of the death of Saul and Jonathan came from Jezreel, and the woman who took care of him took him up and went in flight: and while she was getting him away as quickly as she was able, he had a fall and his feet were damaged. His name was Mephibosheth.
೪ಸೌಲನ ಮಗನಾದ ಯೋನಾತಾನನಿಗೆ ಮೆಫೀಬೋಶೆತನೆಂಬ ಒಬ್ಬ ಕುಂಟ ಮಗನಿದ್ದನು. ಅವನು ಕುಂಟನಾಗಿದ್ದು ಹೇಗೆಂದರೆ, ಸೌಲಯೋನಾತಾನರು ಸತ್ತರೆಂಬ ವರ್ತಮಾನವು ಇಜ್ರೇಲಿನಿಂದ ಬಂದಾಗ, ಐದು ವರ್ಷದವನಾಗಿದ್ದ ಅವನನ್ನು ಅವನ ದಾದಿಯು ತೆಗೆದುಕೊಂಡು ಅವಸರದಿಂದ ಓಡಿಹೋಗುವಾಗ ಅವನು ಬಿದ್ದು ಕುಂಟನಾದನು.
5 And Rechab and Baanah, the sons of Rimmon the Beerothite, went out and came to the house of Ish-bosheth in the heat of the day, when he was resting in the middle of the day. Now the woman who kept the door was cleaning grain, and sleep overcame her.
೫ಈಷ್ಬೋಶೆತನು ಮಧ್ಯಾಹ್ನದ ಬಿಸಿಲು ಹೊತ್ತಿನಲ್ಲಿ ಮನೆಯೊಳಗೆ ಮಲಗಿರುವಾಗ ಬೇರೋತಿನ ರಿಮ್ಮೋನನ ಮಕ್ಕಳಾದ ರೇಕಾಬ್, ಬಾಣ ಎಂಬುವರು ಅವನ ಮನೆಯ ಬಳಿಗೆ ಬಂದರು.
6 And Rechab and his brother Baanah got in without being seen.
೬ಆಗ ಬಾಗಿಲು ಕಾಯುವವಳು ಗೋದಿ ಕೇರುತ್ತಿದ್ದು ಹಾಗೆಯೇ ತೂಕಡಿಸಿ ನಿದ್ದೆಮಾಡುತ್ತಿರುವುದನ್ನು ಬಾಣ ಮತ್ತು ರೇಕಾಬರು ಕಂಡು ರಹಸ್ಯವಾಗಿ ಒಳಗೆ ಜಾರಿಕೊಂಡರು.
7 And when they came into the house, Ish-bosheth was stretched on his bed in his bedroom; and they made an attack on him and put him to death, and, cutting off his head, they took it with them and went by the road through the Arabah all night.
೭ಅವರು ಒಳಕೋಣೆಯಲ್ಲಿ ಮಂಚದ ಮೇಲೆ ಮಲಗಿದ್ದ ಅರಸನನ್ನು ಹೊಡೆದು, ಕೊಂದುಹಾಕಿ, ತಲೆಯನ್ನು ಕತ್ತರಿಸಿ, ಅದನ್ನು ತೆಗೆದುಕೊಂಡು, ರಾತ್ರಿಯೆಲ್ಲಾ ಅರಾಬಾ ತಗ್ಗಿನಲ್ಲಿ ಪ್ರಯಾಣಮಾಡಿ,
8 And they took the head of Ish-bosheth to David in Hebron, and said to the king, Here is the head of Ish-bosheth, the son of Saul your hater, who would have taken your life; the Lord has taken payment for the wrongs of my lord the king from Saul and his seed today.
೮ಹೆಬ್ರೋನಿನಲ್ಲಿದ್ದ ಅರಸನಾದ ದಾವೀದನ ಬಳಿಗೆ ಬಂದು, ಆ ತಲೆಯನ್ನು ಅವನಿಗೆ ತೋರಿಸಿ, “ಇಗೋ ನಿನ್ನ ಜೀವತೆಗೆಯಬೇಕೆಂದಿದ್ದ ನಿನ್ನ ಶತ್ರುವಾದ ಸೌಲನ ಮಗ ಈಷ್ಬೋಶೆತನ ತಲೆ. ಅರಸನಾದ ನಮ್ಮ ಒಡೆಯನಿಗಾಗಿ ಸೌಲನಿಗೂ ಅವನ ಸಂತಾನಕ್ಕೂ ಯೆಹೋವನು ಈ ಹೊತ್ತು ಮುಯ್ಯಿ ತೀರಿಸಿದ್ದಾನೆ” ಅಂದನು.
9 And David made answer to Rechab and his brother Baanah, the sons of Rimmon the Beerothite, and said to them, By the living Lord, who has kept me safe from all my trouble,
೯ದಾವೀದನು ಬೇರೋತಿನ ರಿಮ್ಮೋನನ ಮಕ್ಕಳಾದ ರೇಕಾಬ್, ಬಾಣರಿಗೆ,
10 When one came to me with the news of Saul's death, in the belief that it would be good news, I took him and put him to death in Ziklag, which was the reward I gave him for his news:
೧೦“ಸೌಲನ ಮರಣವಾರ್ತೆಯನ್ನು ತಿಳಿಸುವುದು ಶುಭಕರವೆಂದು ಭಾವಿಸಿ ಬಂದು, ನನಗೆ ಹೇಳಿದವನನ್ನು ಹಿಡಿದು ಅವನಿಗೆ ಚಿಕ್ಲಗಿನಲ್ಲಿ ಮರಣದಂಡನೆಯೆಂಬ ಬಹುಮಾನವನ್ನು ಸಲ್ಲಿಸಿದೆನಲ್ಲವೋ?
11 How much more, when evil men have put an upright person to death, in his house, sleeping on his bed, will I take payment from you for his blood, and have you cut off from the earth?
೧೧ಮಹಾ ದುಷ್ಟರಾದ ನೀವು ನೀತಿವಂತನ ಮನೆಯೊಳಗೆ ನುಗ್ಗಿ, ಅವನನ್ನು ಅವನ ಮಂಚದ ಮೇಲೆಯೇ ಕೊಂದು ಹಾಕಿದ ಮೇಲೆ, ಆ ರಕ್ತಾಪರಾಧಕ್ಕಾಗಿ ನಿಮಗೆ ಮುಯ್ಯಿ ತೀರಿಸುವುದು ಎಷ್ಟೋ ಅಗತ್ಯವಾಗಿದೆ. ನನ್ನ ಪ್ರಾಣವನ್ನು ಎಲ್ಲಾ ಇಕ್ಕಟ್ಟುಗಳಿಂದ ಬಿಡಿಸಿದ ಯೆಹೋವನಾಣೆ, ನಿಮ್ಮನ್ನು ಭೂಲೋಕದಿಂದ ತೆಗೆದು ಬಿಡುವೆನು” ಎಂದು ಹೇಳಿ,
12 And David gave orders to his young men and they put them to death, cutting off their hands and their feet and hanging them up by the side of the pool in Hebron. But they took the head of Ish-bosheth and put it in its last resting-place with Abner's body in Hebron.
೧೨ತನ್ನ ಆಳುಗಳಿಗೆ ಆಜ್ಞಾಪಿಸಲು ಅವರು ಇವರನ್ನು ಕೊಂದು, ಕೈಕಾಲುಗಳನ್ನು ಕತ್ತರಿಸಿ, ಶವಗಳನ್ನು ಹೆಬ್ರೋನಿನ ಕೆರೆಯ ಬಳಿಯಲ್ಲಿ ನೇತುಹಾಕಿದರು. ಈಷ್ಬೋಶೆತನ ತಲೆಯನ್ನು ಹೆಬ್ರೋನಿನಲ್ಲಿದ್ದ ಅಬ್ನೇರನ ಸಮಾಧಿಯಲ್ಲಿ ಹೂಳಿಟ್ಟರು.