< 2 Samuel 21 >
1 In the days of David they were short of food for three years, year after year; and David went before the Lord for directions. And the Lord said, On Saul and on his family there is blood, because he put the Gibeonites to death.
೧ದಾವೀದನ ಕಾಲದಲ್ಲಿ ಮೂರು ವರ್ಷಗಳ ವರೆಗೂ ಎಡಬಿಡದೆ ಬರವಿತ್ತು. ದಾವೀದನು ಯೆಹೋವನನ್ನು ವಿಚಾರಿಸಲು ಆತನು, “ಸೌಲನು ಗಿಬ್ಯೋನ್ಯರನ್ನು ಕೊಲ್ಲಿಸಿದ್ದರಿಂದ ಅವನ ಮೇಲೆಯೂ, ಅವನ ಮನೆಯವರ ಮೇಲೆಯೂ ರಕ್ತಾಪರಾಧವಿದೆ” ಎಂದು ಉತ್ತರ ಕೊಟ್ಟನು.
2 Then the king sent for the Gibeonites; (now the Gibeonites were not of the children of Israel, but were the last of the Amorites, to whom the children of Israel had given an oath; but Saul, in his passion for the children of Israel and Judah, had made an attempt on their lives: )
೨ಗಿಬ್ಯೋನ್ಯರು ಇಸ್ರಾಯೇಲ್ಯರ ಕುಲಕ್ಕೆ ಸೇರಿದವರಲ್ಲ. ಸಂಹೃತರಾಗದೆ ಉಳಿದ ಅಮೋರಿಯರಷ್ಟೆ. ಇಸ್ರಾಯೇಲ್ಯರು ತಾವು ಇವರನ್ನು ಕೊಲ್ಲುವುದಿಲ್ಲವೆಂದು ಪ್ರಮಾಣಮಾಡಿದ್ದರು. ಆದರೂ ಸೌಲನು ಇಸ್ರಾಯೇಲ್ ಮತ್ತು ಯೆಹೂದ ಕುಲಗಳ ಮೇಲೆ ತನಗಿದ್ದ ಅಭಿಮಾನದ ನಿಮಿತ್ತ ಇವರನ್ನು ನಿರ್ನಾಮಗೊಳಿಸಬೇಕೆಂದಿದ್ದನು.
3 So David said to the Gibeonites, What may I do for you? how am I to make up to you for your wrongs, so that you may give a blessing to the heritage of the Lord?
೩ಆಗ ಅರಸನಾದ ದಾವೀದನು ಗಿಬ್ಯೋನ್ಯರನ್ನು ಕರೆದು, “ನಾನು ನಿಮಗೋಸ್ಕರ ಏನು ಮಾಡಬೇಕೆನ್ನುತ್ತೀರಿ? ನಿಮಗೆ ಪ್ರಾಯಶ್ಚಿತ್ತವಾಗಿ ಯಾವುದನ್ನು ಮಾಡಿದರೆ ನೀವು ಯೆಹೋವನ ಸ್ವತ್ತನ್ನು ಆಶೀರ್ವದಿಸುವಿರಿ?” ಎಂದು ಕೇಳಿದನು.
4 And the Gibeonites said to him, It is not a question of silver and gold between us and Saul or his family; and it is not in our power to put to death any man in Israel. And he said, Say, then, what am I to do for you?
೪ಅದಕ್ಕೆ ಅವರು, “ಸೌಲನ ಸಂತಾನದವರಿಗೂ ನಮಗೂ ಇರುವ ವ್ಯಾಜ್ಯವು ಬೆಳ್ಳಿ ಬಂಗಾರದಿಂದ ಮುಗಿಯಲಾರದು. ಇಸ್ರಾಯೇಲ್ಯರನ್ನು ಕೊಲ್ಲುವ ಅಧಿಕಾರವು ನಮಗಿಲ್ಲ” ಎಂದು ಉತ್ತರ ಕೊಟ್ಟರು. ಆಗ ಅರಸನು ಅವರಿಗೆ, “ಏನು ಮಾಡಬೇಕು ಹೇಳಿರಿ ಮಾಡುತ್ತೇನೆ” ಅಂದನು.
5 And they said to the king, As for the man by whom we were wasted, and who made designs against us to have us completely cut off from the land of Israel,
೫ಆಗ ಅವರು, “ನಮ್ಮನ್ನು ಇಸ್ರಾಯೇಲರ ಪ್ರಾಂತ್ಯಗಳಿಂದ ಹೊರಡಿಸುವುದಕ್ಕೂ, ನಿರ್ನಾಮಗೊಳಿಸುವುದಕ್ಕೂ ಪ್ರಯತ್ನಿಸಿದ ಆ ಮನುಷ್ಯನ ಮಕ್ಕಳಲ್ಲಿ ಏಳು ಮಂದಿಯನ್ನು ನಮಗೆ ಒಪ್ಪಿಸು.
6 Let seven men of his family be given up to us and we will put an end to them by hanging them before the Lord in Gibeon, on the hill of the Lord. And the king said, I will give them.
೬ಯೆಹೋವನಿಂದ ಆರಿಸಲ್ಪಟ್ಟ ಸೌಲನು ವಾಸವಾಗಿದ್ದ ಗಿಬೆಯದಲ್ಲಿ ನಾವು ಅವರನ್ನು ಕೊಂದು, ಯೆಹೋವನ ಸನ್ನಿಧಿಯಲ್ಲಿ ಅವರನ್ನು ನೇತು ಹಾಕುವೆವು” ಎಂದರು. ಅದಕ್ಕೆ ಅರಸನು, “ಆಗಲಿ ಅವರನ್ನು ನಿಮಗೆ ಒಪ್ಪಿಸುತ್ತೇನೆ” ಅಂದನು.
7 But the king did not give up Mephibosheth, the son of Saul's son Jonathan, because of the Lord's oath made between David and Jonathan, the son of Saul.
೭ದಾವೀದನು ತಾನು ಸೌಲನ ಮಗನಾದ ಯೋನಾತಾನನಿಗೆ ಯೆಹೋವನ ಹೆಸರಿನಲ್ಲಿ ಮಾಡಿದ ಪ್ರಮಾಣವನ್ನು ನೆನಪುಮಾಡಿಕೊಂಡು ಸೌಲನ ಮೊಮ್ಮಗನೂ ಯೋನಾತಾನನ ಮಗನೂ ಆದ ಮೆಫೀಬೋಶೆತನನ್ನು ಉಳಿಸಿದನು.
8 But the king took Armoni and Mephibosheth, the two sons of Saul to whom Rizpah, the daughter of Aiah, had given birth; and the five sons of Saul's daughter Merab, whose father was Adriel, the son of Barzillai the Meholathite:
೮ಆದರೆ ಸೌಲನಿಗೆ ಅಯ್ಯಾಹನ ಮಗಳಾದ ರಿಚ್ಪಳಲ್ಲಿ ಹುಟ್ಟಿದ ಅರ್ಮೋನೀ ಮತ್ತು ಮೆಫೀಬೋಶೆತ್ ಎಂಬ ಇಬ್ಬರು ಮಕ್ಕಳನ್ನೂ, ಮೆಹೋಲದ ಬರ್ಜಿಲ್ಲೈಯ ಮಗನಾದ ಅದ್ರಿಯೇಲನಿಗೆ ಸೌಲನ ಮಗಳಾದ ಮೀಕಲಳಲ್ಲಿ ಹುಟ್ಟಿದ ಐದು ಮಂದಿ ಮಕ್ಕಳನ್ನೂ ಕರೆದುಕೊಂಡು ಅವರನ್ನು ಗಿಬ್ಯೋನ್ಯರಿಗೆ ಒಪ್ಪಿಸಿದರು.
9 And he gave them up to the Gibeonites, and they put them to death, hanging them on the mountain before the Lord; all seven came to their end together in the first days of the grain-cutting, at the start of the cutting of the barley.
೯ಅವರು ಇವರನ್ನು ಕೊಂದು, ಗುಡ್ಡದ ಮೇಲೆ ಯೆಹೋವನ ಸನ್ನಿಧಿಯಲ್ಲಿ ನೇತುಹಾಕಿದರು. ಈ ಏಳು ಮಂದಿಯೂ ಏಕ ಕಾಲದಲ್ಲಿ ಸತ್ತುಹೋದರು. ಇವರನ್ನು ಕೊಂದಾಗ ಜವೆಗೋದಿಯ ಸುಗ್ಗಿ ಆರಂಭವಾಗಿತ್ತು
10 And Rizpah, the daughter of Aiah, took haircloth, placing it on the rock as a bed for herself, from the start of the grain-cutting till rain came down on them from heaven; and she did not let the birds of the air come near them by day, or the beasts of the field by night.
೧೦ಆಗ ಅಯ್ಯಾಹನ ಮಗಳಾದ ರಿಚ್ಪಳು ಒಂದು ಗೋಣಿತಟ್ಟನ್ನು ತೆಗೆದುಕೊಂಡು, ಅದನ್ನು ಬಂಡೆಯ ಮೇಲೆ ಹಾಸಿ, ಸುಗ್ಗಿಯ ಆರಂಭದಿಂದ ಶವಗಳ ಮೇಲೆ ಮಳೆ ಬೀಳುವ ತನಕ ಅದರ ಮೇಲೆ ಕುಳಿತುಕೊಂಡು, ಹಗಲಿನಲ್ಲಿ ಆಕಾಶದ ಪಕ್ಷಿಗಳೂ, ರಾತ್ರಿಯಲ್ಲಿ ಕಾಡು ಮೃಗಗಳೂ ಅವುಗಳನ್ನು ತಿನ್ನದಂತೆ ಕಾಯುತ್ತಿದ್ದಳು.
11 And news was given to David of what Rizpah, the daughter of Aiah, one of Saul's wives, had done.
೧೧ಅಯ್ಯಾಹನ ಮಗಳೂ, ಸೌಲನ ಉಪಪತ್ನಿಯೂ ಆದ ರಿಚ್ಪಳು ಮಾಡಿದ ಈ ಕಾರ್ಯವು ದಾವೀದನಿಗೆ ಗೊತ್ತಾಯಿತು.
12 And David went and took the bones of Saul and his son Jonathan from the men of Jabesh-gilead, who had taken them away secretly from the public place of Beth-shan, where the Philistines had put them, hanging up the bodies there on the day when they put Saul to death in Gilboa:
೧೨ಆಗ ಅವನು ಸೌಲನ ಮತ್ತು ಅವನ ಮಗನಾದ ಯೋನಾತಾನನ ಎಲುಬುಗಳನ್ನು ತರುವುದಕ್ಕೋಸ್ಕರ ಯಾಬೇಷ್ ಗಿಲ್ಯಾದಿಗೆ ಹೋದನು. ಫಿಲಿಷ್ಟಿಯರು ಸೌಲನನ್ನು ಗಿಲ್ಬೋವದಲ್ಲಿ ಸೋಲಿಸಿದ ನಂತರ ಅವನ ಮತ್ತು ಯೋನಾತಾನನ ಶವಗಳನ್ನು ಬೇತ್ ಷೆಯಾನಿನ ಬೀದಿಗಳಲ್ಲಿ ನೇತುಹಾಕಿದ್ದರು. ಯಾಬೇಷ್ ಗಿಲ್ಯಾದಿನವರು ಅಲ್ಲಿಂದ ಅವುಗಳನ್ನು ಕದ್ದುಕೊಂಡು ಹೋಗಿದ್ದರು.
13 And he took the bones of Saul and his son Jonathan from that place; and they got together the bones of those who had been put to death by hanging.
೧೩ದಾವೀದನು ಯಾಬೇಷಿನಲ್ಲಿದ್ದ ಸೌಲ ಮತ್ತು ಯೋನಾತಾನರ ಎಲುಬುಗಳನ್ನು ಗಿಬ್ಯೋನಿನಲ್ಲಿ ಹತರಾದವರ ಎಲುಬುಗಳನ್ನೂ ತೆಗೆದುಕೊಂಡರು.
14 And they put them with the bones of Saul and his son Jonathan in the resting-place of Kish, his father, in Zela in the country of Benjamin; they did all the king had given them orders to do. And after that, God gave ear to their prayers for the land.
೧೪ಅವರು ಅ ಎಲಬುಗಳನ್ನೆಲ್ಲಾ ಬೆನ್ಯಾಮೀನ್ ದೇಶದ ಚೇಲಾ ಊರಿನಲ್ಲಿ ಸೌಲನ ತಂದೆಯಾದ ಕೀಷನ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿಸಿದನು. ಅರಸನ ಅಪ್ಪಣೆಯಂತೆ ಇದೆಲ್ಲಾ ಆದ ನಂತರ ದೇಶದ ಮೇಲೆ ದೇವರಿಗಿದ್ದ ಕೋಪವು ಶಾಂತವಾಗಿ, ಅವನು ಅವರ ಪ್ರಾರ್ಥನೆಗಳಿಗೆ ಉತ್ತರಕೊಟ್ಟನು.
15 And the Philistines went to war again with Israel; and David went down with his people, and while they were at Gob they had a fight with the Philistines:
೧೫ಫಿಲಿಷ್ಟಿಯರಿಗೂ ಇಸ್ರಾಯೇಲರಿಗೂ ಪುನಃ ಯುದ್ಧವಾಯಿತು. ದಾವೀದನು ತನ್ನ ಸೇವಕರನ್ನು ಕರೆದುಕೊಂಡು ಫಿಲಿಷ್ಟಿಯರಿಗೆ ವಿರೋಧವಾಗಿ ಯುದ್ಧಕ್ಕೆ ಹೋದಾಗ ಬಹಳವಾಗಿ ದಣಿದಿದ್ದನು.
16 And there came against David one of the offspring of the Rephaim, whose spear was three hundred shekels of brass in weight, and having a new sword, he made an attempt to put David to death.
೧೬ಆಗ ರೆಫಾಯರಲ್ಲೊಬ್ಬನಾದ ಇಷ್ಬಿಬೆನೋಬ್ ಎಂಬುವನು ದಾವೀದನನ್ನು ಕೊಲ್ಲುಬೇಕೆಂದಿದ್ದನು. ಅವನ ತಾಮ್ರದ ಬರ್ಜಿಯು ಮುನ್ನೂರು ಶೆಕಲ್ (ಬೆಳ್ಳಿನಾಣ್ಯ) ತೂಕದ್ದು. ಅವನು ಸೊಂಟಕ್ಕೆ ಹೊಸ ಕತ್ತಿಯನ್ನು ಕಟ್ಟಿಕೊಂಡಿದ್ದನು.
17 But Abishai, the son of Zeruiah, came to his help, and, turning on the Philistine, gave him his death-blow. Then David's men took an oath, and said, Never again are you to go out with us to the fight, so that you may not put out the light of Israel.
೧೭ಆದರೆ ಚೆರೂಯಳ ಮಗನಾದ ಅಬೀಷೈಯು ದಾವೀದನ ಸಹಾಯಕ್ಕೆ ಬಂದು, ಆ ಫಿಲಿಷ್ಟಿಯನನ್ನು ಕೊಂದು ಹಾಕಿದನು. ಆಗ ಜನರು ದಾವೀದನಿಗೆ, “ಇಸ್ರಾಯೇಲರ ದೀಪವು ಆರಿಹೋಗದಂತೆ ನೀನು ಇನ್ನು ಮುಂದೆ ನಮ್ಮ ಜೊತೆಯಲ್ಲಿ ಯುದ್ಧಕ್ಕೆ ಬರಬಾರದು” ಎಂದು ಖಂಡಿತವಾಗಿ ಹೇಳಿದನು.
18 Now after this there was war with the Philistines again at Gob, and Sibbecai the Hushathite put to death Saph, one of the offspring of the Rephaim.
೧೮ಅನಂತರ ಫಿಲಿಷ್ಟಿಯರ ಸಂಗಡ ಗೋಬಿನಲ್ಲಿ ಯುದ್ಧ ನಡೆಯಿತು. ಆಗ ಹುಷಾ ಊರಿನವನಾದ ಸಿಬ್ಬೆಕೈ ಎಂಬುವನು ರೆಫಾಯನಾದ ಸೆಫ ಎಂಬುವನನ್ನು ಕೊಂದನು.
19 And again there was war with the Philistines at Gob, and Elhanan, the son of Jair the Beth-lehemite, put to death Goliath the Gittite, the stem of whose spear was like a cloth-worker's rod.
೧೯ಗೋಬಿನಲ್ಲಿ ಫಿಲಿಷ್ಟಿಯರೊಡನೆ ಇನ್ನೊಮ್ಮೆ ಯುದ್ಧ ನಡೆದಾಗ ಬೇತ್ಲೆಹೇಮಿನವನಾದ ಯಾರೇಯೋರೆಗೀಮ್ ಎಂಬುವವನ ಮಗನಾದ ಎಲ್ಹಾನಾನನು ಗಿತ್ತೀಯನಾದ ಗೊಲ್ಯಾತನನ್ನು ಕೊಂದನು. ಗೊಲ್ಯಾತನ ಬರ್ಜಿಯ ಹಿಡಿಕೆಯು ನೇಕಾರರ ಕುಂಟೆಯಷ್ಟು ಗಾತ್ರವಿತ್ತು.
20 And again there was war at Gath, where there was a very tall man, who had twenty-four fingers and toes, six fingers on his hands and six toes on his feet; he was one of the offspring of the Rephaim.
೨೦ಮತ್ತೊಂದು ಸಾರಿ ಗತ್ ಊರಿನಲ್ಲಿ ಯುದ್ಧ ನಡೆಯಿತು. ಅಲ್ಲಿ ಒಬ್ಬ ಎತ್ತರವಾದ ಪುರುಷನಿದ್ದನು. ಅವನ ಕೈಕಾಲುಗಳಿಗೆ ಆರಾರು ಬೆರಳುಗಳಂತೆ ಒಟ್ಟಿಗೆ ಇಪ್ಪತ್ತನಾಲ್ಕು ಬೆರಳುಗಳಿದ್ದವು ಅವನು ರೆಫಾಯನಿಗೆ ಹುಟ್ಟಿದವನಾಗಿದ್ದನು.
21 And when he was purposing to put shame on Israel, Jonathan, the son of Shimei, David's brother, put him to death.
೨೧ಅವನು ಇಸ್ರಾಯೇಲರನ್ನು ನಿಂದಿಸಿದಾಗ ದಾವೀದನ ಅಣ್ಣನಾದ ಶಿಮಿಯಾನನ ಮಗ ಯೋನಾತಾನನು ಅವನನ್ನು ಕೊಂದು ಹಾಕಿದನು.
22 These four were of the offspring of the Rephaim in Gath; and they came to their end by the hands of David and his servants.
೨೨ಗತ್ ಊರಿನವರಾದ ಈ ನಾಲ್ಕು ಮಂದಿ ರೆಫಾಯರೂ ದಾವೀದನಿಂದಲೂ ಅವನ ಸೇವಕರಿಂದಲೂ ಹತರಾದರು.