< Hebrews 7 >

1 For this Melchisedec, king of Salem, priest of the most high God, who met Abraham returning from the slaughter of the kings, and blessed him,
ಈ ಮೆಲ್ಕಿಜೆದೇಕನು ಸಾಲೇಮಿನ ಅರಸನೂ ಮಹೋನ್ನತರಾದ ದೇವರ ಯಾಜಕನೂ ಆಗಿದ್ದನು. ರಾಜರನ್ನು ಸೋಲಿಸಿ, ಹಿಂದಿರುಗಿ ಬರುತ್ತಿದ್ದ ಅಬ್ರಹಾಮನನ್ನು ಸಂಧಿಸಿ ಅವನನ್ನು ಆಶೀರ್ವದಿಸಿದನು.
2 to whom also Abraham gave a tenth of all, being, first, by interpretation, King of righteousness, and then, also, King of Salem, which means King of peace,
ಅಬ್ರಹಾಮನು ಎಲ್ಲವುಗಳಲ್ಲಿ ಅವನಿಗೆ ಹತ್ತರಲ್ಲಿ ಒಂದು ಭಾಗವನ್ನು ಕೊಟ್ಟನು. ಅವನ ಹೆಸರಿಗೆ ಮೊದಲನೆಯದಾಗಿ, “ನೀತಿರಾಜನು” ಎಂದೂ ತರುವಾಯ “ಸಾಲೇಮಿನ ರಾಜ,” ಅಂದರೆ, “ಸಮಾಧಾನದ ಅರಸನು” ಎಂದರ್ಥ.
3 without father, without mother, without genealogy, having neither beginning of days, nor end of life, but being made to resemble the Son of God, remains a priest forever.
ಈ ಮೆಲ್ಕಿಜೆದೇಕನಿಗೆ ತಂದೆಯೂ, ತಾಯಿಯೂ, ವಂಶಾವಳಿಯೂ ಇಲ್ಲ. ಅವನ ಜನ್ಮಕ್ಕೆ ಆದಿಯಾಗಲಿ, ಜೀವನಕ್ಕೆ ಅಂತ್ಯವಾಗಲಿ ಇಲ್ಲ. ಅವನು ದೇವರ ಪುತ್ರ ಆಗಿರುವವರಿಗೆ ಹೋಲಿಕೆಯಾಗಿರುವ ನಿತ್ಯ ಯಾಜಕನಾಗಿ ಉಳಿಯುತ್ತಾನೆ.
4 Now consider how great this man was, to whom even the patriarch Abraham gave a tenth of the spoils.
ಮೆಲ್ಕಿಜೆದೇಕನು ಎಷ್ಟು ದೊಡ್ಡವನಾಗಿದ್ದನೆಂದು ಆಲೋಚಿಸಿರಿ. ಮೂಲ ಪಿತೃವಾದ ಅಬ್ರಹಾಮನು ಗೆದ್ದು ತಂದವುಗಳಲ್ಲಿ ಹತ್ತರಲ್ಲಿ ಒಂದು ಭಾಗವನ್ನು ಇವನಿಗೇ ಕೊಟ್ಟನಲ್ಲಾ.
5 And those of the sons of Levi, who receive the office of priesthood, have a commandment to take tithes of the people according to the law, that is, of their brethren, though they come out of the loins of Abraham:
ನಿಜವಾಗಿಯೂ ಲೇವಿಯ ಮಕ್ಕಳಲ್ಲಿ ಯಾಜಕೋದ್ಯೋಗವನ್ನು ಹೊಂದುವವರು, ಜನರಿಂದ ಅಂದರೆ ಅಬ್ರಹಾಮನ ವಂಶಸ್ಥರಾಗಿರುವ ತಮ್ಮ ಸಹೋದರರಿಂದಲೇ ದಶಮಭಾಗಗಳನ್ನು ತೆಗೆದುಕೊಳ್ಳುವುದಕ್ಕೆ ಮೋಶೆಯ ನಿಯಮದಲ್ಲಿ ಅಪ್ಪಣೆಯಿದೆ.
6 but he who does not count his genealogy from them, received tithes from Abraham, and blessed him that had the promises.
ಆದರೆ ವಂಶಾವಳಿಯಲ್ಲಿ ಸೇರದೆ ಇರುವ ಮೆಲ್ಕಿಜೆದೇಕನು ಅಬ್ರಹಾಮನಿಂದ ದಶಮಭಾಗವನ್ನು ತೆಗೆದುಕೊಂಡದ್ದಲ್ಲದೆ, ವಾಗ್ದಾನಗಳನ್ನು ಪಡೆದಿದ್ದ ಅಬ್ರಹಾಮನನ್ನು ಆಶೀರ್ವದಿಸಿದನು.
7 And, without any contradiction, the less is blessed by the better.
ಆಶೀರ್ವಾದ ಹೊಂದುವವನಿಗಿಂತ ಆಶೀರ್ವದಿಸುವವನೇ ದೊಡ್ಡವನು ಎಂಬುದರಲ್ಲಿ ವಿವಾದವಿಲ್ಲ.
8 And in the one instance, men that die receive tithes; but in the other, he receives them who has the testimony that he lives.
ಇಲ್ಲಿ ದಶಮಭಾಗಗಳನ್ನು ತೆಗೆದುಕೊಳ್ಳುತ್ತಿರುವ ಲೇವಿಯರು ಕೇವಲ ಮರ್ತ್ಯ ಮಾನವರು. ಆದರೆ ಅಲ್ಲಿ ತೆಗೆದುಕೊಳ್ಳುವ ಮೆಲ್ಕಿಜೆದೇಕನು ಜೀವಿಸುತ್ತಿದ್ದಾನೆಂದು ಸಾಕ್ಷಿ ಹೊಂದಿರುವವನು.
9 And so to speak, even Levi, who receives tithes, paid tithes through Abraham;
ಇದು ಮಾತ್ರವಲ್ಲದೆ ದಶಮಭಾಗಗಳನ್ನು ತೆಗೆದುಕೊಳ್ಳುವ ಲೇವಿಯೂ ಅಬ್ರಹಾಮನ ಮೂಲಕ ದಶಮಭಾಗಗಳನ್ನು ಕೊಟ್ಟ ಹಾಗಾಯಿತು.
10 for he was yet in the loins of his father, when Melchisedec met him.
ಹೇಗೆಂದರೆ, ಮೆಲ್ಕಿಜೆದೇಕನು ಅಬ್ರಹಾಮನನ್ನು ಸಂಧಿಸಿದಾಗ, ಲೇವಿಯು ತನ್ನ ಪಿತೃ ಆದ ಅಬ್ರಹಾಮನ ದೇಹದಲ್ಲಿ ಇದ್ದನು ಎಂದು ಪರಿಗಣಿಸಬಹುದು.
11 If, then, there had been a perfect expiation by means of the Levitical priesthood, (for with reference to it, the people received the law, ) what further need was there that another priest should be raised up after the order of Melchisedec, and not be called after the order of Aaron?
ಲೇವಿಯರ ಯಾಜಕತ್ವದ ಆಧಾರದ ಮೇಲೆ ಜನರು ನಿಯಮವನ್ನು ಪಡೆದಿದ್ದರು. ಈ ಯಾಜಕತ್ವದ ಮೂಲಕವೇ ಪರಿಪೂರ್ಣತೆಯು ಉಂಟಾಗಿದ್ದರೆ, ಆರೋನನ ಕ್ರಮಾನುಸಾರವಾಗಿರದೆ ಮೆಲ್ಕಿಜೆದೇಕನ ಕ್ರಮದ ಪ್ರಕಾರ ಬೇರೊಬ್ಬ ಯಾಜಕನು ಎದ್ದೇಳುವ ಅವಶ್ಯವೇನಿತ್ತು?
12 It is evident that, when the priest hood is changed, there is of necessity a change also of the law.
ಯಾಜಕತ್ವವು ಬದಲಾದಾಗ ನಿಯಮವು ಸಹ ಬದಲಾಗುವುದು ಅಗತ್ಯ.
13 For he of whom these things are said, belongs to another tribe, from which no one attended upon the altar.
ಇವು ಯಾರ ವಿಷಯದಲ್ಲಿ ಹೇಳಿದೆಯೋ ಆ ವ್ಯಕ್ತಿ ಬೇರೊಂದು ಗೋತ್ರಕ್ಕೆ ಸೇರಿದವನು. ಆ ಗೋತ್ರದಿಂದ ಎಂದೂ ಯಾರೂ ಬಲಿಪೀಠದ ಬಳಿ ಸೇವೆ ಮಾಡಿದವರಲ್ಲ.
14 For it is very clear that our Lord sprung from Judah, of which tribe Moses spoke nothing concerning priesthood.
ಹೀಗೆ ನಮ್ಮ ಕರ್ತ ಯೇಸು ಯೂದಾ ಗೋತ್ರಕ್ಕೆ ಸೇರಿದವರೆಂದು ತಿಳಿದ ಸಂಗತಿಯಾಗಿದೆ. ಈ ಗೋತ್ರವನ್ನು ಸಂಬಂಧಿಸಿ ಮೋಶೆಯು ಯಾಜಕರ ವಿಷಯವಾಗಿ ಏನನ್ನೂ ಹೇಳಲಿಲ್ಲ.
15 And it is yet far more evident, if, after the likeness of Melchisedec, there arises another priest,
ಮೆಲ್ಕಿಜೆದೇಕನಂತೆ ಇನ್ನೊಬ್ಬ ಯಾಜಕನು ಏಳುತ್ತಾನೆಂಬುದು ಇನ್ನೂ ಎಷ್ಟೋ ಹೆಚ್ಚಾಗಿ ಸ್ಪಷ್ಟವಾಗಿದೆ.
16 who is made, not according to the law of a fleshly commandment, but according to the power of an endless life; for he testifies,
ಕ್ರಿಸ್ತ ಯೇಸು ಯಾಜಕರಾದುದು ಅಳಿವಿಲ್ಲದ ಜೀವದ ಶಕ್ತಿಗೆ ಅನುಸಾರವಾಗಿದೆಯೇ ಹೊರತು ನಿಯಮಾನುಸಾರವಾದ ದೈಹಿಕ ಹುಟ್ಟಿನಿಂದಲ್ಲ.
17 Thou art a priest forever after the order of Melchisedec. (aiōn g165)
ಕರ್ತ ಯೇಸುವಿನ ವಿಷಯದಲ್ಲಿ, “ನೀನು ಸದಾಕಾಲವೂ, ಮೆಲ್ಕಿಜೆದೇಕನ ಕ್ರಮದ ಯಾಜಕನಾಗಿದ್ದೀ,” ಎಂಬ ಸಾಕ್ಷಿಯಿದೆ. (aiōn g165)
18 For, indeed, there is a setting aside of the preceding commandment, because it was weak and unprofitable,
ಏಕೆಂದರೆ ಮೊದಲಿದ್ದ ಆಜ್ಞೆಯು ನಿರ್ಬಲವೂ ನಿಷ್ಪ್ರಯೋಜಕವೂ ಆಗಿರುವ ಕಾರಣದಿಂದ ಅದು ರದ್ದಾಯಿತು.
19 (for the law made no perfect expiation), and the introduction of a better hope, by which we draw near to God.
ಮೋಶೆಯ ನಿಯಮವು ಯಾವುದನ್ನೂ ಪರಿಪೂರ್ಣ ಮಾಡುವುದಿಲ್ಲ. ಅದಕ್ಕೆ ಬದಲಾಗಿ ದೇವರ ಸಮೀಪಕ್ಕೆ ಒಯ್ಯುವಂತೆ ಹೊಸ ಉತ್ತಮ ನಿರೀಕ್ಷೆಗೆ ನಡಿಸುತ್ತದೆ.
20 And inasmuch as he was made a priest, not without an oath,
ಇದಂತೂ ಆಣೆಯಿಲ್ಲದೆ ಆಗಿರುವಂಥದ್ದಲ್ಲ! ಲೇವಿಯರು ಆಣೆಯಿಲ್ಲದೆಯೇ ಯಾಜಕರಾದರು,
21 (for those priests were made such without an oath, but this one with an oath, by him that said to him, The Lord swore, and will not repent, Thou art a priest forever after the order of Melchisedec; ) (aiōn g165)
ಆದರೆ ಯೇಸು ದೇವರ ಆಣೆಯಿಂದಲೇ ಯಾಜಕರಾದರು. ಹೀಗೆ ದೇವರು ಹೇಳಿದ್ದೇನೆಂದರೆ: “ಕರ್ತ ಆಗಿರುವ ನಾನು ಆಣೆಯಿಟ್ಟು ಹೇಳಿದ್ದೇನೆ. ನಾನು ಎಂದಿಗೂ ಮನಸ್ಸನ್ನು ಬದಲಾಯಿಸುವುದಿಲ್ಲ. ‘ನೀನು ಸದಾಕಾಲವೂ ಯಾಜಕನಾಗಿದ್ದೀ.’” (aiōn g165)
22 in so much has Jesus become the surety of a better covenant.
ಇದರಿಂದಲೇ ಯೇಸು ಎಷ್ಟೋ ಉತ್ತಮವಾದ ಒಡಂಬಡಿಕೆಗೆ ಹೊಣೆಗಾರರಾದರು.
23 And those priests, indeed, have been many, because they were prevented by death from continuing in office.
ಒಂದು ಕಡೆ ಆ ಯಾಜಕರು ಮುಂದುವರಿಯದಂತೆ ಮರಣವು ಅಡ್ಡಿಯಾದದ್ದರಿಂದ ಅನೇಕರು ಯಾಜಕರಾಗಬೇಕಾಗುತ್ತಿತ್ತು.
24 But this man, because he continues forever, has an unchangeable priesthood. (aiōn g165)
ಇನ್ನೊಂದು ಕಡೆ ಯೇಸುವಾದರೋ ಸದಾಕಾಲ ಇರುವುದರಿಂದ ನಿರಂತರವಾಗಿ ತಮ್ಮ ಯಾಜಕತ್ವವನ್ನು ಹೊಂದಿದವರಾಗಿದ್ದಾರೆ. (aiōn g165)
25 Wherefore, he is able also to save through all time those who come to God by him, since he always lives to make intercession for them.
ಇದಲ್ಲದೆ ಯೇಸು ತಮ್ಮ ಮೂಲಕ ದೇವರ ಕಡೆ ಬರುವವರನ್ನು ಪರಿಪೂರ್ಣವಾಗಿ ರಕ್ಷಿಸುವುದಕ್ಕೆ ಶಕ್ತರಾಗಿದ್ದಾರೆ. ಏಕೆಂದರೆ ಅವರಿಗೋಸ್ಕರ ಯೇಸು ವಿಜ್ಞಾಪನೆ ಮಾಡುವುದಕ್ಕಾಗಿ ಯಾವಾಗಲೂ ಬದುಕುವವರಾಗಿದ್ದಾರೆ.
26 For such a high priest is suited to us, who is holy, harmless, undefiled, separate from sinners, and exalted above the heavens;
ಪರಿಶುದ್ಧರು, ನಿರ್ದೋಷಿ, ನಿಷ್ಕಳಂಕರು, ಪಾಪಿಗಳಿಂದ ಪ್ರತ್ಯೇಕಿಸಲಾದವರೂ ಗಗನ ಮಂಡಲಗಳಿಗಿಂತ ಉನ್ನತಕ್ಕೇರಿದಾತರೂ ಆಗಿರುವ ಇಂಥಾ ಮಹಾಯಾಜಕ ನಮಗಿದ್ದಾರೆ.
27 who needs not daily, as those high priests, to offer up sacrifices, first for his own sins, and then for the sins of the people: for this he did once, when he offered up himself.
ಮೊದಲು ತನ್ನ ಸ್ವಂತ ಪಾಪಗಳಿಗಾಗಿಯೂ ಯಜ್ಞಾರ್ಪಣೆ ಮಾಡುವ ಆ ಮಹಾಯಾಜಕರಂತೆ ಯೇಸು ಪ್ರತಿದಿನವೂ ಬಲಿ ಸಮರ್ಪಿಸಬೇಕಾದ ಅವಶ್ಯವಿಲ್ಲ. ಏಕೆಂದರೆ ಇವರು ತಮ್ಮನ್ನೇ ಬಲಿಯಾಗಿ ಸಮರ್ಪಿಸಿಕೊಂಡಾಗ ಅದನ್ನು ಒಂದೇ ಸಾರಿ ಮಾಡಿ ಮುಗಿಸಿದರು.
28 For the law makes men high priests, who have infirmity; but the word of the oath, which was after the law, makes the Son, who is perfected forever. (aiōn g165)
ಏಕೆಂದರೆ ಮೋಶೆಯ ನಿಯಮವು ಬಲಹೀನರಾದ ಮನುಷ್ಯರನ್ನು ಮಹಾಯಾಜಕರನ್ನಾಗಿ ನೇಮಿಸುತ್ತದೆ. ಆದರೆ ಮೋಶೆಯ ನಿಯಮದ ತರುವಾಯ ದೇವರ ಆಣೆಯೊಡನೆ ಬಂದ ವಾಕ್ಯವು ನಿತ್ಯವಾಗಿ ಪರಿಪೂರ್ಣರಾದ ಪುತ್ರನನ್ನೇ ಪ್ರಧಾನಯಾಜಕರನ್ನಾಗಿ ನೇಮಿಸುತ್ತದೆ. (aiōn g165)

< Hebrews 7 >