< Ezekiel 20 >
1 Tarik apar dwe mar abich e higa mar abiriyo, jodong Israel moko nobiro ira mondo openj wach kuom Jehova Nyasaye mine girito mondo giwinj tiend wachno.
ಏಳನೆಯ ವರ್ಷದ, ಐದನೆಯ ತಿಂಗಳಿನ, ಹತ್ತನೆಯ ದಿನದಲ್ಲಿ ಇಸ್ರಾಯೇಲಿನ ಹಿರಿಯರಲ್ಲಿ ಕೆಲವರು ಯೆಹೋವ ದೇವರ ಬಳಿಗೆ ವಿಚಾರಣೆಗಾಗಿ ಬಂದು ನನ್ನ ಮುಂದೆ ಕುಳಿತುಕೊಂಡರು.
2 Eka wach Jehova Nyasaye nobirona kama:
ಆಗ ಯೆಹೋವ ದೇವರ ವಾಕ್ಯವು ನನಗೆ ಬಂದಿತು,
3 Wuod dhano, wuo gi jodong Israel kendo iwachnegi ni ma e gima Jehova Nyasaye Manyalo Gik Moko Duto wacho, Bende unyalo biro ira adier mondo upenja wach? Akwongʼora gi nyinga awuon ni ok abi yienu upenja wach, Jehova Nyasaye Manyalo Gik Moko Duto osewacho.
“ಮನುಷ್ಯಪುತ್ರನೇ, ನೀನು ಇಸ್ರಾಯೇಲಿನ ಹಿರಿಯರ ಸಂಗಡ ಮಾತನಾಡಿ ಅವರಿಗೆ ಹೇಳಬೇಕಾದದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನ್ನನ್ನು ಪ್ರಶ್ನೆಕೇಳುವುದಕ್ಕೆ ಬಂದಿರೋ? ನನ್ನ ಜೀವದಾಣೆ, ನಾನು ನಿಮಗೆ ಉತ್ತರ ಕೊಡುವುದೇ ಇಲ್ಲ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’
4 Donge ibiro ngʼadonegi bura? Donge ibiro ngʼadonegi bura, wuod dhano? Ka en kamano, to mi gingʼe timbe mamono mag kweregi
“ನೀನು ಅವರಿಗೆ ನ್ಯಾಯತೀರಿಸುವೆಯೋ? ಮನುಷ್ಯಪುತ್ರನೇ, ನೀನು ಅವರಿಗೆ ನ್ಯಾಯತೀರಿಸುವೆಯೋ? ಹಾಗಾದರೆ ಅವರ ಪಿತೃಗಳ ಅಸಹ್ಯವಾದವುಗಳನ್ನು ಅವರಿಗೆ ತಿಳಿಸು.
5 kendo iwachnegi ni ma e gima Jehova Nyasaye Manyalo Gik Moko Duto wacho: E odiechiengʼ mane ayieroe Israel, ne asingora ni dhood joka Jakobo kendo ne afwenyoranegi e piny Misri. Ne asingoranegi ka awachonegi niya, “An e Jehova Nyasaye ma Nyasachu.”
ಅವರಿಗೆ ಹೇಳಬೇಕಾದದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಇಸ್ರಾಯೇಲನ್ನು ಆಯ್ದುಕೊಂಡ ದಿವಸದಲ್ಲಿ ಯಾಕೋಬನ ವಂಶದವರಿಗೆ ನನ್ನ ಕೈಯೆತ್ತಿ, “ನಿಮ್ಮ ಸಾರ್ವಭೌಮ ಯೆಹೋವ ದೇವರು ನಾನೇ” ಎಂದು ಈಜಿಪ್ಟ್ ದೇಶದಲ್ಲಿ ಅವರಿಗೆ ಹೇಳಿದೆನು.
6 Chiengʼno ne asingoranegi ni anagolgi e piny Misri mi atergi e piny mane asemanyo mi ayudonegi, ma en piny mopongʼ gi chak kod mor kich kendo piny maber moloyo pinje duto.
ನಾನು ಅವರಿಗೆ ಪ್ರಮಾಣಮಾಡಿ ಈಜಿಪ್ಟ್ ದೇಶದಿಂದ ಹೊರಗೆ ತಂದು, ಅವರಿಗೋಸ್ಕರ ನಾನೇ ನೋಡಿಕೊಂಡಂಥ ಹಾಲೂ ಜೇನೂ ಹರಿಯುವ ಕೀರ್ತಿಯುಳ್ಳ ದೇಶಕ್ಕೆ ಅವರನ್ನು ಆ ದಿವಸದಲ್ಲಿ ಕರೆತಂದೆನು.
7 Kendo ne awachonegi niya, “Neuru ni ngʼato ka ngʼato kuomu owito kido manono ma usechomo wengeu kuomgi kendo kik udok mogak kuom lamo nyiseche manono mag Misri. An e Jehova Nyasaye ma Nyasachu.”
ಆಮೇಲೆ ನಾನು ಅವರಿಗೆ, “ನಿಮ್ಮಲ್ಲಿ ಒಬ್ಬೊಬ್ಬನು ತಮ್ಮ ತಮ್ಮ ಕಣ್ಣುಗಳ ಮುಂದೆ ಅಸಹ್ಯವಾದವುಗಳನ್ನು ಬಿಸಾಡಿ ಬಿಡಿರಿ. ಈಜಿಪ್ಟಿನ ವಿಗ್ರಹಗಳಿಂದ ನಿಮ್ಮನ್ನು ಅಶುದ್ಧಪಡಿಸಿಕೊಳ್ಳಬೇಡಿರಿ. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನಾಗಿರುವೆನು.”
8 To ne gingʼanyona kendo negitamore winja; ne ok giwito kido manono mane gisechomo wengegi kuome kagilamo, bende ne ok giweyo nyiseche manono mag jo-Misri. Omiyo ne awacho ni abiro olo mirimba mager kuomgi ka aketo mirimba kuomgi e piny Misri.
“‘ಆದರೆ ಅವರು ನನಗೆ ವಿರುದ್ಧವಾಗಿ ತಿರುಗಿಬಿದ್ದರು. ನನಗೆ ಕಿವಿಗೊಡಲಿಲ್ಲ. ಅವರು ತಮ್ಮ ಕಣ್ಣಿಗೆ ಅಸಹ್ಯವಾದವುಗಳನ್ನು ಬಿಸಾಡಲಿಲ್ಲ. ಅವರು ಈಜಿಪ್ಟಿನ ವಿಗ್ರಹಗಳನ್ನು ಬಿಡಲಿಲ್ಲ. ಆಗ ನಾನು ಅವರ ಮೇಲೆ ನನ್ನ ರೋಷವನ್ನು ಸುರಿಸಿ, ಈಜಿಪ್ಟ್ ದೇಶದಲ್ಲಿ ಅವರ ಮೇಲೆ ನನ್ನ ಕೋಪವನ್ನು ತೀರಿಸುವೆನೆಂದು ಹೇಳಿದೆನು.
9 To nikech nyinga, ne atimo gima ne nyalo miyo kik yanye e nyim ogendini mane gidak e diergi, kendo mane ongʼeyo ni ne asefwenyora ni jo-Israel kane agologi e piny Misri.
ಆದರೆ ಅವರು ಯಾರ ಮಧ್ಯದಲ್ಲಿದ್ದರೋ, ನಾನು ಯಾರ ಮುಂದೆ ಅವರನ್ನು ಈಜಿಪ್ಟ್ ದೇಶದಿಂದ ಹೊರಗೆ ತಂದು ನನ್ನನ್ನು ತಿಳಿಯಪಡಿಸಿದೆನೋ ಆ ಜನಾಂಗಗಳ ಕಣ್ಣುಗಳ ಮುಂದೆ ನನ್ನ ಹೆಸರು ಅಪವಿತ್ರವಾಗದ ಹಾಗೆ ನನ್ನ ಹೆಸರಿಗೋಸ್ಕರವೇ ಈ ಕೆಲಸವನ್ನು ಮಾಡಿದೆನು.
10 Kuom mano ne agologi e piny Misri mi akelogi e piny motimo ongoro.
ಆದ್ದರಿಂದ ನಾನು ಅವರನ್ನು ಈಜಿಪ್ಟ್ ದೇಶದಿಂದ ಹೊರಗೆ ಕರೆತಂದು, ಮರುಭೂಮಿಯೊಳಗೆ ಅವರನ್ನು ಬರಮಾಡಿದೆನು.
11 Ne amiyogi buchena kendo ne amiyo gingʼeyo chikena, nikech ngʼat marito buchena gi chikena ema biro bedo mangima.
ಯಾವ ಸಂಗತಿಗಳನ್ನು ಮಾಡಿದರೆ ಮನುಷ್ಯನು ಬದುಕುವನೋ? ಆ ನನ್ನ ನಿಯಮಗಳನ್ನು ಅವರಿಗೆ ಕೊಟ್ಟು, ನನ್ನ ನ್ಯಾಯಗಳನ್ನು ಅವರಿಗೆ ತಿಳಿಸಿದೆನು.
12 Bende ne amiyogi Sabato maga kaka ranyisi e kinda kodgi, mondo omi gingʼe ni an Jehova Nyasaye ema ne amiyo gibedo maler.
ಇದಲ್ಲದೆ ಅವರನ್ನು ಪರಿಶುದ್ಧ ಮಾಡುವ ಯೆಹೋವ ದೇವರು ನಾನೇ ಎಂದು ಅವರು ತಿಳಿಯುವ ಹಾಗೆ ನನಗೂ, ಅವರಿಗೂ ಗುರುತಾಗಿರುವುದಕ್ಕೆ ನನ್ನ ಸಬ್ಬತ್ ದಿನಗಳನ್ನು ನಾನು ಅವರಿಗೆ ಕೊಟ್ಟೆನು.
13 Kata kamano, jo-Israel nongʼanyona e thim. Ne ok giluwo buchena, kendo ne gidagi rito chikena. Ne ok girito chikena kata obedo ni chikego miyo gibedo mangima ok girito Sabato maga. Omiyo ne awacho ni abiro olo mirimba kuomgi kendo abiro tiekogi e thim.
“‘ಆದರೆ ಇಸ್ರಾಯೇಲ್ ಜನರು ಮರುಭೂಮಿಯಲ್ಲಿಯೂ ನನಗೆ ವಿರುದ್ಧವಾಗಿ ತಿರುಗಿಬಿದ್ದರು. ಅವರು ನನ್ನ ಆಜ್ಞೆಗಳನ್ನು ಅನುಸರಿಸಲಿಲ್ಲ, ನನ್ನ ಅಪ್ಪಣೆಗಳನ್ನು ತಿರಸ್ಕರಿಸಿದರು. ಅವುಗಳಿಗೆ ವಿಧೇಯನಾಗುವವನು ಅವುಗಳಿಂದ ಜೀವಿಸುವನು. ನನ್ನ ಸಬ್ಬತ್ ದಿನಗಳನ್ನು ಅಪವಿತ್ರಗೊಳಿಸಿದರು. ಆಗ ನಾನು ಅವರ ಮೇಲೆ ನನ್ನ ರೋಷವನ್ನು ಸುರಿದು, ಅವರನ್ನು ಮರುಭೂಮಿಯಲ್ಲಿ ನಾಶಮಾಡುವೆನೆಂದು ಹೇಳಿದೆನು.
14 To nikech nyinga, ne atimo gimane nyalo miyo kik yanye e nyim ogendini mane oneno ka agologi e diergi.
ಆದರೆ ನಾನು ಅವರನ್ನು ಯಾರ ಕಣ್ಣುಗಳ ಮುಂದೆ ಬರಮಾಡಿದೆನೋ, ಆ ಜನಾಂಗಗಳ ದೃಷ್ಟಿಯಲ್ಲಿ ಅಪವಿತ್ರವಾಗದ ಹಾಗೆ ನನ್ನ ಹೆಸರಿಗಾಗಿಯೇ ಕೆಲಸ ಮಾಡಿದೆನು.
15 Bende ne asingoranegi e thim nine ok abi kelogi nyaka e piny mane asemiyogi, ma en piny mopongʼ gi chak kod mor kich, kendo en piny maber moloyo pinje duto
ಆದರೂ ಹಾಲೂ ಜೇನೂ ಹರಿಯುವಂಥ ದೇಶಗಳಿಗೆ ಕೀರ್ತಿಯಾಗಿರುವಂಥ ಆ ದೇಶದಲ್ಲಿ ಅವರನ್ನು ಸೇರಿಸುವುದಿಲ್ಲವೆಂದು ಮರುಭೂಮಿಯಲ್ಲಿ ಅವರಿಗೆ ನನ್ನ ಕೈಯೆತ್ತಿ ಪ್ರಮಾಣಮಾಡಿದೆನು.
16 nikech ne gidagi luwo chikena gi buchena kendo ne ok girito Sabato maga. Ne ok atimo kamano nikech chunjegi ne otwere kuom nyisechegi manono.
ಅವರ ಹೃದಯವು ತಮ್ಮ ವಿಗ್ರಹಗಳಲ್ಲಿ ಆಸಕ್ತವಾಗಿ, ನನ್ನ ನಿಯಮಗಳನ್ನು ಅನುಸರಿಸದೆ ನಿರಾಕರಿಸಿ, ನಾನು ನೇಮಿಸಿದ ವಿಶ್ರಾಂತಿಯ ದಿನಗಳನ್ನು ಅಪವಿತ್ರ ಮಾಡಿದ್ದರು.
17 To kata kamano ne akechogi kendo ne ok anegogi kata tiekogi chuth e thim.
ಆದರೂ ಅವರನ್ನು ನಾನು ನಾಶಮಾಡದ ಹಾಗೆ ನನ್ನ ಕಣ್ಣು ಕನಿಕರಿಸಿತು. ನಾನು ಅವರನ್ನು ಮರುಭೂಮಿಯಲ್ಲಿ ಅಂತ್ಯಗೊಳಿಸಲಿಲ್ಲ.
18 Ne awachone nyithindgi e thim niya, “Weuru luwo puonj mane wuoneu oketo kata rito chike mag-gi, kendo kik udwanyru gi nyisechegi manono.
ಮರುಭೂಮಿಯಲ್ಲಿ ನಾನು ಅವರ ಮಕ್ಕಳಿಗೆ ಹೇಳಿದ್ದೇನೆಂದರೆ, “ನೀವು ನಿಮ್ಮ ತಂದೆಗಳ ನಿಯಮಗಳನ್ನು ಅನುಸರಿಸಬೇಡಿರಿ, ಅವರ ನ್ಯಾಯಗಳನ್ನು ಕೈಕೊಳ್ಳಬೇಡಿರಿ, ಅವರ ವಿಗ್ರಹಗಳಿಂದ ನಿಮ್ಮನ್ನು ಅಪವಿತ್ರಮಾಡಿಕೊಳ್ಳಬೇಡಿರಿ.
19 An Jehova Nyasaye ma Nyasachu; luwuru buchena kendo rituru chikena maber.
ನಾನೇ ಯೆಹೋವ ದೇವರೂ ನಿಮ್ಮ ದೇವರೂ ಆಗಿದ್ದೇನೆ. ನನ್ನ ನಿಯಮಗಳಲ್ಲೇ ನಡೆಯಿರಿ ಮತ್ತು ನನ್ನ ನ್ಯಾಯಗಳನ್ನು ಜಾಗರೂಕತೆಯಿಂದ ಕೈಗೊಂಡು ಅವುಗಳನ್ನೇ ಮಾಡಿರಿ.
20 Rituru Sabato maga e yo maler, mondo gibedi ranyisi e kinda kodu. Eka unungʼe ni An e Jehova Nyasaye ma Nyasachu.”
ನನ್ನ ಸಬ್ಬತ್ ದಿನಗಳನ್ನು ಪರಿಶುದ್ಧ ಮಾಡಿರಿ, ನಾನೇ ನಿಮ್ಮ ದೇವರಾದ ಯೆಹೋವ ದೇವರು ಎಂದು ಅವು ನಿಮಗೂ ನನಗೂ, ನೀವು ತಿಳಿಯುವ ಹಾಗೆ ಗುರುತುಗಳಾಗಿರುವುವು.”
21 To nyithindogo nongʼanyona kama: Ne ok giluwo buchena, ne ok girito chikena, kata obedo ni ngʼat moritogi bedo mangima, kendo ne ok girito Sabato maga. Omiyo ne awacho ni ne abiro olo mirimba kuomgi kendo tiekogi e thim.
“‘ಆದರೆ ಮಕ್ಕಳು ನನಗೆ ವಿರೋಧವಾಗಿ ತಿರುಗಿಬಿದ್ದರು. ಯಾವವುಗಳನ್ನು ಮನುಷ್ಯನು ಮಾಡಿದರೆ ಬದುಕುವನೋ, ಆ ನನ್ನ ನಿಯಮಗಳಲ್ಲಿ ನಡೆಯಲಿಲ್ಲ ಮತ್ತು ನನ್ನ ನ್ಯಾಯಗಳನ್ನು ಜಾಗರೂಕತೆಯಿಂದ ಪಾಲಿಸಿ ನಡೆಯಲಿಲ್ಲ. ನನ್ನ ಸಬ್ಬತ್ ದಿನಗಳನ್ನು ಅಪವಿತ್ರಪಡಿಸಿದಿರಿ. ಆಗ ಅವರ ಮೇಲೆ ನನ್ನ ರೋಷವನ್ನು ಸುರಿದುಬಿಡುವೆನೆಂದೂ, ನನ್ನ ಕೋಪವನ್ನು ಮರುಭೂಮಿಯಲ್ಲಿ ಅವರ ಮೇಲೆ ತೀರಿಸಿ ಬಿಡುವೆನೆಂದೂ ಹೇಳಿದೆನು.
22 To ne angʼwononegi ma ok atimo kamano mondo nyinga kik kethre e kind ogendini mane oneno kagolo jo-Israel e piny Misri.
ಆದರೂ ನಾನು ನನ್ನ ಕೈಯನ್ನು ಹಿಂತೆಗೆದು, ನಾನು ಅವರನ್ನು ಯಾರ ಕಣ್ಣುಗಳ ಮುಂದೆ ಹೊರಗೆ ಬರಮಾಡಿದೆನೋ, ಆ ಜನಾಂಗಗಳ ದೃಷ್ಟಿಯಲ್ಲಿ ನನ್ನ ಹೆಸರು ಅಪವಿತ್ರವಾಗದ ಹಾಗೆ, ನನ್ನ ಹೆಸರಿಗೋಸ್ಕರವೇ ಕೆಲಸ ಮಾಡಿದೆನು.
23 Ne asingoranegi e thim kakwongʼora ni abiro keyogi e dier ogendini e piny ngima,
ನಾನು ಅವರನ್ನು ಇತರ ಜನಾಂಗಗಳಲ್ಲಿ ಚದರಿಸುತ್ತೇನೆಂದೂ, ದೇಶಗಳಲ್ಲಿ ಹರಡಿಸುತ್ತೇನೆಂದೂ ಮರುಭೂಮಿಯಲ್ಲಿ ಅವರ ಮೇಲೆ ಕೈಯೆತ್ತಿ ಪ್ರಮಾಣಮಾಡಿದೆನು.
24 nikech ne ok girito chikena gi buchena kendo ne ok girito Sabato maga, ka chunygi osiko kagombo nyiseche manono mag kweregi.
ಏಕೆಂದರೆ ಅವರು ನನ್ನ ನ್ಯಾಯಗಳಲ್ಲಿ ನಡೆಯದೆ, ನನ್ನ ನಿಯಮಗಳನ್ನು ಅಲಕ್ಷಿಸಿ, ನನ್ನ ಸಬ್ಬತ್ ದಿನಗಳನ್ನು ಅಪವಿತ್ರಪಡಿಸಿದರು. ತಮ್ಮ ಪಿತೃಗಳ ವಿಗ್ರಹಗಳ ಕಡೆಗೆ ಕಣ್ಣಿಟ್ಟಿದ್ದರು.
25 Ne aweyogi bende mondo oritgi gi buche maricho kendo e bwo chike mane ok nyal rito ngimagi.
ನಾನೇ ಯೆಹೋವ ದೇವರು ಎಂದು ಅವರು ತಿಳಿದುಕೊಳ್ಳುವಂತೆ ನಾನು ಅವರಿಗೆ ಅಹಿತವಾದ ನಿಯಮಗಳನ್ನೂ, ಅವರು ಬದುಕಬಾರದ ನ್ಯಾಯಗಳನ್ನೂ ಕೊಟ್ಟೆನು.
26 Ne aweyogi thuolo mondo chiwo mane gigolo omi gidok mogak; ma en misango mar nyithindgi duto makayo, mondo omi kihondko omakgi eka gingʼe ni An e Jehova Nyasaye!
ಅವರು ತಮ್ಮ ಚೊಚ್ಚಲು ಮಕ್ಕಳನ್ನು ಆಹುತಿಕೊಟ್ಟು ಅರ್ಪಿಸುತ್ತಿದ್ದ ಬಲಿಗಳಿಂದಲೇ ಅವರನ್ನು ಹೊಲೆಗೆಡಿಸಿ, ಕೇವಲ ದುರವಸ್ಥೆಗೆ ತಂದೆನು. ಆಗ ನಾನೇ ಯೆಹೋವ ದೇವರೆಂದು ಅವರು ತಿಳಿದುಕೊಳ್ಳುವರು.’
27 “Kuom mano, wuod dhano, wuo gi Israel kendo iwachnegi ni, ‘Ma e gima Jehova Nyasaye Manyalo Gik Moko Duto wacho: Ma e yo machielo ma kwereu noweyago kayanya:
“ಆದ್ದರಿಂದ ಮನುಷ್ಯಪುತ್ರನೇ, ನೀನು ಇಸ್ರಾಯೇಲಿನ ಮನೆತನದವರ ಸಂಗಡ ಮಾತನಾಡಿ ಅವರಿಗೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನಗೆ ವಿರುದ್ಧವಾಗಿ ಬಹಳ ಅಪರಾಧಮಾಡಿದ್ದರಲ್ಲಿಯೂ ನಿಮ್ಮ ಪಿತೃಗಳು ನನ್ನನ್ನು ದೂಷಿಸಿದರು.
28 Kane akelogi e piny mane asingora ni anamigi, to kane gineno wi thur moro amora gi yien moloth to negitimo misenginigi kanyo, kendo negigolo chiwo mag-gi mane ochiewo mirimba, kendo ne giwangʼo ubani madungʼ tik mangʼwe ngʼar kendo gipuko misangogi miolo piny.
ನಾನು ಪ್ರಮಾಣಪೂರ್ವಕವಾಗಿ ಅವರಿಗೆ ವಾಗ್ದಾನಮಾಡಿದ ದೇಶದಲ್ಲಿ ನಾನು ಅವರನ್ನು ಬರಮಾಡಿದ ಮೇಲೆ ಅವರು ಎತ್ತರವಾದ ಎಲ್ಲಾ ಗುಡ್ಡಗಳನ್ನೂ, ಸೊಂಪಾಗಿ ಬೆಳೆದಿರುವ ಮರಗಳನ್ನೂ ನೋಡಿ, ಅಲ್ಲಿ ತಮ್ಮ ಬಲಿಗಳನ್ನರ್ಪಿಸಿ ಸುವಾಸನೆಗಳನ್ನಿಟ್ಟು ಪಾನದ್ರವ್ಯವನ್ನು ಸುರಿದರು.
29 Eka nawacho nigi ni: Withur musiko kudhiye ni to nangʼo?’” Kanyo pod iluongo ni Bama nyaka chil kawuono.
ಆಗ ನಾನು ಅವರಿಗೆ ಹೇಳಿದ್ದೇನೆಂದರೆ: ನೀವು ಹೋಗುವ ಈ ಎತ್ತರವಾದ ಸ್ಥಳವು ಏನು? ಅದಕ್ಕೆ ಈ ದಿನದವರೆಗೂ ಬಾಮಾ ಎಂದು ಕರೆಯುವರು.’”
30 Kuom mano, wachne dhood Israel kama: Ma e gima Jehova Nyasaye Manyalo Gik Moko Duto wacho: Un bende ubiro dwanyoru kaka kwereu notimo ka gilamo nyisechegi manono?
“ಆದ್ದರಿಂದ ನೀನು ಇಸ್ರಾಯೇಲಿನ ಮನೆತನದವರಿಗೆ ಹೇಳಬೇಕಾದದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಿಮ್ಮ ಪಿತೃಗಳ ಹಾಗೆ ನಿಮ್ಮನ್ನು ಅಪವಿತ್ರಪಡಿಸಿಕೊಳ್ಳುತ್ತೀರೋ? ಅವರ ಅಸಹ್ಯವಾದ ವಿಗ್ರಹಗಳ ಹಿಂದೆ ಹೋಗುತ್ತೀರೋ?
31 Ka uchiwo mich kendo uchiwo yawuotu kaka misango miwangʼo e mach, to mano nyiso ni pod udwanyoru mana gi nyisecheu manono nyaka kawuono. Bende dayienu mondo upenja wach adier, yaye dhood Israel? Akwongʼora gi nyinga awuon, an Jehova Nyasaye Manyalo Gik Moko Duto ni ok abi yienu upenja wach.
ನಿಮ್ಮ ದಾನಗಳನ್ನು ತರುವಾಗಲೂ, ಬೆಂಕಿಯಲ್ಲಿ ನಿಮ್ಮ ಮಕ್ಕಳನ್ನು ಯಜ್ಞವಾಗಿ ಅರ್ಪಿಸುವಾಗಲೂ, ನೀವು ಇಂದಿನವರೆಗೂ ನಿಮ್ಮ ಎಲ್ಲಾ ವಿಗ್ರಹಗಳಿಂದ ನಿಮ್ಮನ್ನು ಅಪವಿತ್ರಪಡಿಸಿಕೊಳ್ಳುತ್ತಿದ್ದೀರಿ. ಹೀಗಿರುವಾಗ ಇಸ್ರಾಯೇಲ್ ವಂಶದವರೇ, ನೀವು ನನ್ನನ್ನು ವಿಚಾರಿಸಲು ಅನುಮತಿಸಬೇಕೆ? ನನ್ನ ಜೀವದಾಣೆ ನಾನು ನಿಮ್ಮನ್ನು ವಿಚಾರಿಸಲು ಅನುಮತಿಸುವುದಿಲ್ಲ, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
32 Ka uparo ni udwaro chalo gi ogendini mamoko, kata ka dhoudi moa e pinje mamoko malamo gik mopa ma gin bao kod kidi, to mano ok bi timore.
“‘“ನಾವು ಇತರ ಜನಾಂಗಗಳ ಹಾಗೆ ಮತ್ತು ಇತರ ದೇಶಗಳವರ ಹಾಗೆ ಇದ್ದು ಮರಕ್ಕೂ ಕಲ್ಲಿಗೂ ಸೇವೆ ಮಾಡುತ್ತೇವೆಂದು ನಿಮ್ಮ ಮನಸ್ಸಿನಲ್ಲಿ ಹುಟ್ಟುವ ಯೋಚನೆಯು ಎಷ್ಟು ಮಾತ್ರಕ್ಕೂ ನೆರವೇರದು.”
33 Akwongʼora gi nyinga awuon, an Jehova Nyasaye Manyalo Gik Moko Duto ni abiro tiyou gi tekona duto gi mirimba mager.
ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ, ನನ್ನ ಜೀವದಾಣೆ, ನಿಶ್ಚಯವಾಗಿ ಬಲವಾದ ಕೈಯಿಂದಲೂ, ಚಾಚಿದ ತೋಳಿನಿಂದಲೂ, ಸುರಿಸಿದ ರೋಷದಿಂದಲೂ ನಾನು ನಿಮ್ಮ ಮೇಲೆ ಅಧಿಕಾರ ನಡೆಸುತ್ತೇನೆ.
34 Abiro golou gi tekona duto gi mirimba mager e dier ogendini ka ua e pinje duto mosekeue.
ಬಲವಾದ ಕೈಯಿಂದಲೂ, ಚಾಚಿದ ತೋಳಿನಿಂದಲೂ, ಸುರಿಸಿದ ರೋಷದಿಂದಲೂ, ನಿಮ್ಮನ್ನು ಜನರೊಳಗಿಂದ ಹೊರತಂದು ನೀವು ಚದರಿಹೋಗಿರುವ ದೇಶಗಳೊಳಗಿಂದ ನಿಮ್ಮನ್ನು ಒಂದಾಗಿ ಕೂಡಿಸುವೆನು.
35 Abiro terou e thim mag ogendini kendo kuno ema anangʼadnue bura e wangʼu kuneno.
ನಿಮ್ಮನ್ನು ಜನರಿರುವ ಮರುಭೂಮಿಯೊಳಗೆ ತಂದು, ನಿಮ್ಮೊಂದಿಗೆ ಅಲ್ಲಿ ಮುಖಾಮುಖಿಯಾಗಿ ನ್ಯಾಯತೀರ್ಪು ಮಾಡುವೆನು.
36 Kaka ne ayalo kwereu e thim mar piny Misri, e kaka abiro yalou, Jehova Nyasaye Manyalo Gik Moko Duto osewacho.
ಅದೇ ರೀತಿ ನಾನು ನಿಮ್ಮ ಪಿತೃಗಳ ಸಂಗಡ ಈಜಿಪ್ಟ್ ದೇಶದ ಮರುಭೂಮಿಯಲ್ಲಿ ನ್ಯಾಯತೀರ್ಪು ಮಾಡಿದೆನು. ಈಗಲೂ ನಿಮ್ಮ ಸಂಗಡ ನ್ಯಾಯತೀರ್ಪು ಮಾಡುವೆನು, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
37 Abiro kwanou achiel achiel ka un e bwo lochna, kendo abiro miyo ubed joma orito singruokna.
ನೀವು ನನ್ನ ಕೋಲಿನ ಕೆಳಗೆ ನಡೆಯುವಾಗ, ನನ್ನ ಗಮನವು ನಿಮ್ಮ ಮೇಲೆ ಇರುತ್ತದೆ ಮತ್ತು ನಾನು ನಿಮ್ಮನ್ನು ಒಡಂಬಡಿಕೆಗೆ ತರುತ್ತೇನೆ.
38 Abiro pogou gi joma osiko kedo koda kendo ngʼanyona, kata obedo ni abiro gologi oko e piny ma gidake sani, to ok ginidonj e piny Israel. Eka unungʼe ni An e Jehova Nyasaye.
ತಿರುಗಿಬಿದ್ದವರನ್ನೂ ನನಗೆ ವಿರೋಧವಾಗಿ ಅಪರಾಧ ಮಾಡಿದವರನ್ನೂ ನಿಮ್ಮೊಂದಿಗೆ ಶುದ್ಧಮಾಡುತ್ತೇನೆ. ಅವರು ಪ್ರವಾಸಿಗಳಾಗಿದ್ದ ದೇಶದೊಳಗಿಂದ ಅವರನ್ನು ಹೊರಗೆ ತರುತ್ತೇನೆ. ಆದರೆ ಅವರು ಇಸ್ರಾಯೇಲ್ ದೇಶದೊಳಗೆ ಹೋಗದ ಹಾಗೆ ಮಾಡಿ, ನಾನೇ ಯೆಹೋವ ದೇವರೆಂಬುದನ್ನು ಅವರಿಗೆ ತಿಳಿಸುತ್ತೇನೆ.
39 “To in, yaye dhood Israel, ma e gima Jehova Nyasaye Manyalo Gik Moko Duto wacho: Dhiuru uti ne nyisecheu, un duto ngʼato gi ngʼato! To gikone ni ubiro luora kendo ok unumi nyinga maler kethre kuom chiwo mich ni nyisecheu manono.
“‘ನಿಮ್ಮ ವಿಷಯವಾಗಿ, ಓ ಇಸ್ರಾಯೇಲಿನ ಮನೆತನದವರೇ, ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಹೋಗಿರಿ, ನಿಮ್ಮ ನಿಮ್ಮ ವಿಗ್ರಹಗಳನ್ನು ಸೇವಿಸಿರಿ. ಆದರೆ ನಂತರ ನೀವು ಖಂಡಿತವಾಗಿಯೂ ನನ್ನ ಮಾತನ್ನು ಕೇಳುತ್ತೀರಿ ಮತ್ತು ನಿಮ್ಮ ದಾನಗಳಿಂದಲೂ, ನಿಮ್ಮ ವಿಗ್ರಹಗಳಿಂದಲೂ ಇನ್ನು ಮೇಲೆ ನನ್ನ ಪರಿಶುದ್ಧ ಹೆಸರನ್ನು ಅಪವಿತ್ರಪಡಿಸಬೇಡಿರಿ.
40 Jehova Nyasaye Manyalo Gik Moko Duto wacho niya: Ewi goda maler, ma en got mabor mar Israel, kendo e piny nogono, dhood Israel duto kar rombgi biro tiyonae, kendo kanyo ema anarwakgie. Kanyo ema anadwarie chiwo mau kod mich mau mabeyo moloyo, kaachiel gi misengni mau duto maler.
ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, ನನ್ನ ಪರಿಶುದ್ಧ ಪರ್ವತದಲ್ಲಿಯೇ, ಇಸ್ರಾಯೇಲಿನ ಉನ್ನತ ಪರ್ವತದಲ್ಲಿಯೇ ಇಸ್ರಾಯೇಲಿನ ಮನೆತನದವರೆಲ್ಲರೂ, ದೇಶದಲ್ಲಿರುವವರೆಲ್ಲರೂ ನನ್ನನ್ನು ಸೇವಿಸುವರು. ನಾನು ಅಲ್ಲಿ ಅವರಿಗೆ ಮೆಚ್ಚಿ, ನಿಮ್ಮ ಉತ್ತಮ ಅರ್ಪಣೆಗಳನ್ನೂ, ನಿಮ್ಮ ಕಾಣಿಕೆಗಳ ಪ್ರಥಮ ಫಲವನ್ನೂ, ನಿಮ್ಮ ಎಲ್ಲಾ ಪರಿಶುದ್ಧ ಸಂಗತಿಗಳನ್ನೂ ಅಂಗೀಕರಿಸುವೆನು.
41 Abiro rwakou kaka ubani madungʼ tik mangʼwe ngʼar ka anagolu ua e dier ogendini kendo ka anachoku ua e pinje ma osekeue, kendo ananyisranu kaka ngʼama ler e dieru ka ogendini neno gi wengegi.
ನಾನು ನಿಮ್ಮನ್ನು ಇತರ ಜನಾಂಗಗಳೊಳಗಿಂದ ಹೊರತಂದು, ನೀವು ಚದರಿಸುವ ದೇಶದೊಳಗಿಂದ ಕೂಡಿಸುವಾಗ, ನಿಮ್ಮನ್ನು ಸುವಾಸನೆಯಂತೆ ಅಂಗೀಕರಿಸುವೆನು. ಇತರ ಜನಾಂಗಗಳ ಮುಂದೆ ನನ್ನನ್ನು ಪರಿಶುದ್ಧನೆಂದು ತೋರಿಸುವೆನು.
42 Eka unungʼe ni An e Jehova Nyasaye, ka anaduogu e piny Israel, piny mane asingora kakwongʼora ni anami kwereu.
ನಾನು ನಿಮ್ಮ ಮೇಲೆ ಇಸ್ರಾಯೇಲ್ ದೇಶದಲ್ಲಿ ನನ್ನ ಕೈಯೆತ್ತಿ ನಿಮ್ಮ ಪಿತೃಗಳಿಗೆ ಕೊಟ್ಟ ದೇಶದಿಂದ ನಿಮ್ಮನ್ನು ಕರೆದುಕೊಂಡು ಬರುವಾಗ, ನಾನೇ ಯೆಹೋವ ದೇವರೆಂದು ತಿಳಿದುಕೊಳ್ಳುವಿರಿ.
43 Kanyo ema unuparie timbeu kod yoreu duto ma usedwanyorugo, kendo ok unubed mamor gi timbe mamono duto musetimo.
ಅಲ್ಲಿ ನೀವು ನಿಮ್ಮ ಮಾರ್ಗಗಳನ್ನು ಬಿಟ್ಟು, ನೀವು ಯಾವ ಸಂಗತಿಗಳಿಂದ ಅಶುದ್ಧವಾಗಿದ್ದೀರೋ, ಆ ನಿಮ್ಮ ಕ್ರಿಯೆಗಳನ್ನೆಲ್ಲಾ ಜ್ಞಾಪಕ ಮಾಡಿಕೊಳ್ಳುವಿರಿ. ನೀವು ಮಾಡಿದ ನಿಮ್ಮ ಎಲ್ಲಾ ಕೆಟ್ಟತನದ ನಿಮಿತ್ತವಾಗಿ ನಿಮ್ಮ ಸ್ವಂತ ದೃಷ್ಟಿಯಲ್ಲಿಯೇ ನೀವು ಅಸಹ್ಯರಾಗುವಿರಿ.
44 Unungʼe ni An e Jehova Nyasaye, ka anati e dieru nikech nyinga, to ok nikech yoreu maricho kod timbeu mobam, yaye dhood Israel, Jehova Nyasaye Manyalo Gik Moko Duto osewacho.”
ಇಸ್ರಾಯೇಲಿನ ಮನೆತನದವರೇ, ನಿಮ್ಮ ದುರ್ಮಾರ್ಗಗಳ ಪ್ರಕಾರವಲ್ಲ, ನಿಮ್ಮ ದುಷ್ಕೃತ್ಯಗಳ ಪ್ರಕಾರವಲ್ಲ, ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಸಹಿಸಿಕೊಂಡಿರುವಾಗ, ನಾನೇ ಯೆಹೋವ ದೇವರೆಂದು ತಿಳಿದುಕೊಳ್ಳುವಿರಿ, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’”
45 Wach Jehova Nyasaye nobirona kama:
ಯೆಹೋವ ದೇವರ ವಾಕ್ಯವು ನನಗೆ ಬಂದಿತು:
46 Wuod dhano, chom wangʼi yo milambo; yal wach kuom jo-milambo kendo ikor wach kuom bungu manie piny milambo.
“ಮನುಷ್ಯಪುತ್ರನೇ, ದಕ್ಷಿಣದ ಕಡೆಗೆ ಮುಖಮಾಡಿ, ದಕ್ಷಿಣದ ಕಡೆಗೆ ಮಾತನಾಡು. ದಕ್ಷಿಣ ಬಯಲು ಮರುಭೂಮಿಗೆ ವಿರೋಧವಾಗಿ ಪ್ರವಾದಿಸು.
47 Wach ni bungu man yo milambo kama: Winj wach Jehova Nyasaye. Ma e gima Jehova Nyasaye Manyalo Gik Moko Duto wacho: Achiegni moko mach kuomi, kendo obiro tieko yiendegi duto, manumu kaachiel gi motwo. Mach mabebni ok nonegi, kendo ji duto kochakore milambo nyaka nyandwat, majni norew wengegi.
ದಕ್ಷಿಣದ ಮರುಭೂಮಿಗೆ ಹೇಳಬೇಕಾದದ್ದೇನೆಂದರೆ: ‘ಯೆಹೋವ ದೇವರ ವಾಕ್ಯವನ್ನು ಕೇಳು. ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ನಾನು ನಿನ್ನಲ್ಲಿ ಬೆಂಕಿ ಹಚ್ಚುತ್ತೇನೆ. ಅದು ನಿನ್ನಲ್ಲಿರುವ ಎಲ್ಲಾ ಹಸಿಮರಗಳನ್ನು ಮತ್ತು ಎಲ್ಲಾ ಒಣ ಮರಗಳನ್ನು ತಿಂದುಬಿಡುವುದು. ಉರಿಯುವ ಜ್ವಾಲೆ ಆರಿಹೋಗುವುದಿಲ್ಲ. ದಕ್ಷಿಣ ಮೊದಲುಗೊಂಡು ಉತ್ತರದವರೆಗೂ ಎಲ್ಲಾ ಮುಖಗಳು ಅದರಲ್ಲಿ ಸುಟ್ಟುಹೋಗುವುವು.
48 Ji duto none ni an Jehova Nyasaye ema asemoko majno, kendo ok notho.
ಯೆಹೋವ ದೇವರಾದ ನಾನೇ ಅದನ್ನು ಹಚ್ಚಿದೆನೆಂದು ಪ್ರತಿಯೊಬ್ಬರೂ ತಿಳಿದುಕೊಳ್ಳುವರು, ಅದು ಆರಿಹೋಗುವುದಿಲ್ಲ.’”
49 Eka nawacho niya, “Yaye Jehova Nyasaye Manyalo Gik Moko Duto, giwuoyo kuoma kagiwacho ni, ‘Donge owuoyonwa mana gi ngeche?’”
ಆಗ ನಾನು, “ಅಯ್ಯೋ, ಸಾರ್ವಭೌಮ ಯೆಹೋವ ದೇವರೇ, ‘ಅವನು ಸಾಮ್ಯಗಳನ್ನು ಹೇಳುವುದಿಲ್ಲವೇ?’ ಎಂದು ನನ್ನ ವಿಷಯದಲ್ಲಿ ಅವರು ಹೇಳುತ್ತಾರೆ,” ಎಂದೆನು.