< 1 Samuel 30 >
1 Daudi kod joge nochopo Ziklag chiengʼ mar adek. Koro jo-Amalek noyudo osemonjo Negev gi Ziklag. Negipeyo Ziklag mi giwangʼe,
೧ದಾವೀದನೂ ಅವನ ಜನರೂ ಮೂರನೆಯ ದಿನ ಚಿಕ್ಲಗ್ ಊರನ್ನು ಮುಟ್ಟಿದರು. ಅಷ್ಟರೊಳಗೆ ಅಮಾಲೇಕ್ಯರು ದಂಡೆತ್ತಿ ದಕ್ಷಿಣ ಪ್ರಾಂತ್ಯಕ್ಕೂ ಚಿಕ್ಲಗ್ ಊರಿಗೂ ಬಂದು ಚಿಕ್ಲಗ್ ಊರನ್ನು ಸುಟ್ಟು ಹಾಳುಮಾಡಿ,
2 kendo gimako mon kod ji duto mane ni kanyo, jomatindo kod jomadongo ma giteroe twech. To ne ok ginego ngʼato kuomgi, to ne gikawogi ma gidhi kodgi.
೨ಆ ಊರಿನಲ್ಲಿದ್ದ ಎಲ್ಲಾ ಹೆಂಗಸರನ್ನೂ ಚಿಕ್ಕವರನ್ನೂ ದೊಡ್ಡವರನ್ನೂ ಸೆರೆಹಿಡಿದುಕೊಂಡು ಹೋಗಿದ್ದರು.
3 Kane Daudi gi joge ochopo Ziklag, negiyudo ka osewangʼe gi mach kendo mondgi, yawuotgi gi nyigi nosemaki oter e twech.
೩ಆದರೆ ಯಾರನ್ನೂ ಕೊಂದಿರಲಿಲ್ಲ. ದಾವೀದನೂ ಅವನ ಜನರೂ ತಮ್ಮ ಊರಿಗೆ ಬಂದಾಗ ಅದು ಸುಡಲ್ಪಟ್ಟಿರುವುದನ್ನೂ, ತಮ್ಮ ಹೆಂಡತಿಯರೂ ಗಂಡುಮಕ್ಕಳೂ ಸೆರೆಯಾಗಿ ಒಯ್ಯಲ್ಪಟ್ಟಿರುವುದನ್ನೂ ಕಂಡು
4 Daudi gi joge noywak matek ma tekregi norumo makoro ok ginyal ywak.
೪ಅವರು ತಮ್ಮಿಂದಾಗುವಷ್ಟು ಕಾಲ ಅತ್ತರು.
5 Mond Daudi ariyo bende ne osemaki ma gin Ahinoam nyar Jezreel gi Abigael ma dhako ma chwore otho mane jaod Nabal ja-Karmel.
೫ದಾವೀದನ ಇಬ್ಬರು ಹೆಂಡತಿಯರಾದ ಇಜ್ರೇಲಿನವಳಾದ ಅಹೀನೋವಮಳೂ, ಕರ್ಮೆಲ್ಯನಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳೂ ಸೆರೆಯಾಗಿ ಹೋಗಿದ್ದರು.
6 Daudi ne chunye ool nikech jogo ne wacho ni mondo ochiele gi kite; ka moro ka moro ne winjo lit nikech yawuote gi nyige. Daudi to noyudo teko moa kuom Jehova Nyasaye ma Nyasache.
೬ಇದಲ್ಲದೆ ಜನರು ತಮ್ಮ ಗಂಡು ಹೆಣ್ಣು ಮಕ್ಕಳಿಗಾಗಿ ಮನಸ್ಸಿನಲ್ಲಿ ಬಹಳವಾಗಿ ನೊಂದುಕೊಂಡು, ದಾವೀದನನ್ನು ಕಲ್ಲೆಸೆದು ಕೊಲ್ಲಬೇಕೆಂದಿದ್ದುದರಿಂದ ಅವನು ಬಲು ಇಕ್ಕಟ್ಟಿನಲ್ಲಿ ಬಿದ್ದನು. ಆದರೂ ಅವನು ತನ್ನ ದೇವರಾದ ಯೆಹೋವನಲ್ಲಿ ತನ್ನನ್ನು ಬಲಪಡಿಸಿಕೊಂಡು
7 Eka Daudi nowachone Abiathar jadolo, ma wuod Ahimelek niya, “Kelna law mayom mar dolo miluongo ni efod.” Abiathar nokelone,
೭ಅಹೀಮೆಲೆಕನ ಮಗನಾದ ಎಬ್ಯಾತಾರನಿಗೆ, “ದಯವಿಟ್ಟು ಏಫೋದನ್ನು ಇಲ್ಲಿಗೆ ತೆಗೆದುಕೊಂಡು ಬಾ” ಎಂದು ಹೇಳಲು ಅವನು ತಂದನು.
8 mi Daudi nopenjo Jehova Nyasaye wach ni, “Bende dalaw joma osepeyowagi. Bende dajukgi?” Nodwoke niya, “Lawgi. Chutho inijukgi mi inires jogi duto.”
೮ಆಗ ದಾವೀದನು ಯೆಹೋವನನ್ನು, “ನಾನು ಆ ಗುಂಪನ್ನು ಹಿಂದಟ್ಟಬಹುದೋ, ಅದು ನನಗೆ ಸಿಕ್ಕುವುದೋ?” ಎಂದು ಕೇಳಲು ಆತನು, “ಹಿಂದಟ್ಟು, ಅದು ನಿನಗೆ ಸಿಕ್ಕುವುದು, ನೀನು ಎಲ್ಲರನ್ನೂ ಬಿಡಿಸಿಕೊಂಡು ಬರುವಿ” ಎಂದು ಉತ್ತರಕೊಟ್ಟನು.
9 Daudi gi joge mia auchiel nochopo e Holo mar Besor, joge moko nodongʼ kanyo,
೯ದಾವೀದನೂ ಅವನ ಸಂಗಡ ಇದ್ದ ಆರುನೂರು ಮಂದಿ ಸೈನಿಕರೂ ಹೊರಟು ಬೆಸೋರ್ ಹಳ್ಳಕ್ಕೆ ಬಂದ ಮೇಲೆ ಆ ಹಳ್ಳದಿಂದ ಮೇಲೆ ಹತ್ತಲಾರದಷ್ಟು
10 nimar ji mia ariyo nool ahinya mane ok ginyal ngʼado holono. To Daudi gi ji mia angʼwen nodhi nyime gi lepo.
೧೦ಆಯಾಸಗೊಂಡ ಇನ್ನೂರು ಜನರು ಅಲ್ಲೇ ನಿಂತುಬಿಟ್ಟದ್ದರಿಂದ, ದಾವೀದನು ಉಳಿದ ನಾನೂರು ಜನರನ್ನೇ ಕರೆದುಕೊಂಡು ಮುಂದೆ ನಡೆದನು.
11 Negiyudo ja-Misri moro e pap mi gikele ir Daudi. Negimiye pi mondo omodhi gi chiemo mondo ocham
೧೧ಅವನ ಜನರು ಅಡವಿಯಲ್ಲಿ ಒಬ್ಬ ಐಗುಪ್ತನು ಬಿದ್ದಿರುವುದನ್ನು ಕಂಡು, ಅವನನ್ನು ದಾವೀದನ ಬಳಿಗೆ ತಂದು, ಅವನಿಗೆ ರೊಟ್ಟಿ ತಿನ್ನಿಸಿ, ನೀರು ಕುಡಿಸಿ,
12 nus mar kek molos gi olemb ngʼowu to gi kek molos gi resin. Nochiemo ma chunye noduogo nikech noyudo pok ochiemo kata modho pi kuom odiechienge adek gi otieno bende.
೧೨ಅಂಜೂರ ಹಣ್ಣಿನ ಉಂಡೆಯನ್ನೂ ಎರಡು ದ್ರಾಕ್ಷಿ ಗೊಂಚಲುಗಳನ್ನು ಕೊಟ್ಟರು. ಮೂರು ದಿನ ಹಗಲಿರುಳು ಅನ್ನಪಾನವಿಲ್ಲದೆ ಬಹಳವಾಗಿ ಬಳಲಿಹೋಗಿದ್ದ ಇವನು ಅವುಗಳನ್ನು ತಿನ್ನುತ್ತಲೇ ಚೇತರಿಸಿಕೊಂಡನು.
13 Daudi nopenje niya, “In ngʼat ngʼa? To in jakanye?” Nowacho niya, “An ja-Misri ma misumba ja-Amalek. Ruodha nojwangʼa moweya, ka tuo nogoya ndalo adek mokadho.
೧೩ಆಗ ದಾವೀದನು ಅವನನ್ನು, “ನೀನು ಯಾರ ಕಡೆಯವನು, ಎಲ್ಲಿಯವನು?” ಎಂದು ಕೇಳಿದನು. ಅವನು “ನಾನು ಐಗುಪ್ತನು, ಒಬ್ಬ ಅಮಾಲೇಕ್ಯನ ದಾಸನು. ನಾನು ಮೂರು ದಿನಗಳ ಹಿಂದೆ ಅಸ್ವಸ್ಥನಾಗಿ ಮಲಗಿಕೊಂಡಿದ್ದರಿಂದ ನನ್ನ ಯಜಮಾನನು ನನ್ನನ್ನು ಬಿಟ್ಟುಹೋದನು.
14 Ne wapeyo Negev mar jo-Kereth kod gwengʼ Juda to gi Negev ma piny Kaleb mine wawangʼo Ziklag.”
೧೪ನಾವು ಕೆರೇತ್ಯರೂ ಯೆಹೂದ್ಯರೂ ಕಾಲೇಬ್ಯರೂ ಇರುವ ದಕ್ಷಿಣ ಪ್ರಾಂತ್ಯವನ್ನು ಸೂರೆಮಾಡಿ ಚಿಕ್ಲಗ್ ಊರನ್ನು ಸುಟ್ಟುಬಿಟ್ಟು ಬಂದೆವು” ಎಂದು ಉತ್ತರ ಕೊಟ್ಟನು.
15 Daudi nopenje niya, “Bende inyalo tera ir jopechogi?” Nodwoke niya, “Kwongʼrina e nyim Nyasaye ni ok ninega kata dwoka e lwet ruodha, to abiro teri irgi.”
೧೫ಅನಂತರ ದಾವೀದನು, “ನೀನು ನನ್ನನ್ನು ಆ ಗುಂಪು ಇರುವ ಸ್ಥಳಕ್ಕೆ ಕರೆದುಕೊಂಡು ಹೋಗುವಿಯೋ?” ಎಂದು ಕೇಳಿದ್ದಕ್ಕೆ ಅವನು, “ನೀನು ನನ್ನನ್ನು ಕೊಲ್ಲುವುದಿಲ್ಲವೆಂದೂ ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದರೆ ನಿನ್ನನ್ನು ಆ ಗುಂಪಿನವರ ಬಳಿಗೆ ಕರಕೊಂಡು ಹೋಗುವೆನು” ಅಂದನು.
16 Notelo ni Daudi ka gilor mwalo, kendo ne giyudogi ka gike e pap, ka gichiemo kendo metho ka gin gimor maduongʼ nikech gik mane gipeyo e piny jo-Filistia gi piny Juda ne thoth ahinya.
೧೬ಅವರು ಅಲ್ಲಿಗೆ ಹೋದಾಗ ಆ ಗುಂಪಿನವರು ತಮಗೆ ಫಿಲಿಷ್ಟಿಯ ಮತ್ತು ಯೆಹೂದ ಪ್ರಾಂತ್ಯಗಳಲ್ಲಿ ದೊರಕಿದ ದೊಡ್ಡ ಕೊಳ್ಳೆಯ ನಿಮಿತ್ತವಾಗಿ ಸಂತೋಷಿಸಿ, ಉಂಡು ಕುಡಿದು, ಕುಣಿದಾಡುತ್ತಾ ಅಲ್ಲಿನ ಬೈಲಿನಲ್ಲಿ ವ್ಯಾಪಿಸಿಕೊಂಡಿದ್ದರು.
17 Daudi nokedo kodgi chakre yuso piny nyaka kinyne godhiambo. Kendo ne onge ngʼat mane otony modhi makmana yawuowi mia angʼwen mane oidho ngamia kende ema noringo otony.
೧೭ದಾವೀದನು ಮರುದಿನ ಹೊತ್ತಾರೆಯಿಂದ ಸೂರ್ಯಸ್ತಮಾನದವರೆಗೂ ಅವರನ್ನು ಸಂಹರಿಸಿದನು. ಒಂಟೆಗಳನ್ನು ಹತ್ತಿ ಓಡಿಹೋದ ನಾನೂರು ಮಂದಿ ಪ್ರಾಯಸ್ಥರ ಹೊರತು ಬೇರೆ ಯಾರೂ ತಪ್ಪಿಸಿಕೊಳ್ಳಲಿಲ್ಲ.
18 Daudi noreso gik moko duto mane jo-Amalek osepeyo kaachiel gi monde ariyo.
೧೮ದಾವೀದನು ತನ್ನ ಇಬ್ಬರು ಹೆಂಡತಿಯರನ್ನೂ ಅಮಾಲೇಕ್ಯರು ಒಯ್ದಿದ್ದ ಎಲ್ಲಾ ಕೊಳ್ಳೆಯನ್ನೂ ಬಿಡಿಸಿಕೊಂಡನು.
19 Onge gimoro amora mane olal bed ni en ngʼama tin kata ngʼama duongʼ, wuowi kata nyako, gik mane ope kata gik mane gikawo, Daudi nodwoko gik moko duto.
೧೯ಅಮಾಲೇಕ್ಯರು ಒಯ್ದಿದ್ದ ಚಿಕ್ಕ ದೊಡ್ಡ ಒಡವೆಗಳಾಗಲಿ, ಗಂಡು ಹೆಣ್ಣು ಮಕ್ಕಳಾಗಲಿ ಒಂದನ್ನೂ ಬಿಡದೆ ಎಲ್ಲವನ್ನೂ ತಿರುಗಿ ತೆಗೆದುಕೊಂಡು ಬಂದನು.
20 Nokawo kweth mag jamni kod mag dhok mi joge nosembogi e nyim kweth mag jamni mamoko kowacho niya, “Magi gin gik ma Daudi opeyo.”
೨೦ಇದಲ್ಲದೆ ದಾವೀದನು ಶತ್ರುಗಳ ದನಕುರಿಗಳನ್ನೂ ತೆಗೆದುಕೊಂಡನು. ಅವನ ಜನರು, “ಇವು ದಾವೀದನ ಕೊಳ್ಳೆ” ಎಂದು ಹೇಳಿ ಅವುಗಳನ್ನು ತಮ್ಮ ದನಗಳ ಮುಂದಾಗಿ ಹೊಡೆದುಕೊಂಡು ಬಂದರು.
21 Eka Daudi noduogo e Holo mar Besor kama ji mia ariyo mane ool mane ok nyal dhi kode nodongʼie. Negibiro mondo girom ni Daudi gi ji mane ni kode. Ka Daudi gi joge nosudo machiegni nomosogi.
೨೧ಅನಂತರ ದಾವೀದನು ಆಯಾಸದಿಂದ ತನ್ನ ಹಿಂದೆ ಬರಲಾರದೆ ಬೆಸೋರ್ ಹಳ್ಳದ ಹತ್ತಿರ ಉಳಿದಿದ್ದ ಇನ್ನೂರು ಜನರ ಬಳಿಗೆ ಹೋಗುತ್ತಿರುವಾಗ, ಅವರು ಅವನನ್ನೂ ಅವನೊಂದಿಗಿದ್ದ ಜನರನ್ನೂ ಸಂಧಿಸಿ, ಅವರ ಕ್ಷೇಮಸಮಾಚಾರವನ್ನು ವಿಚಾರಿಸಿದರು.
22 To joricho duto gi joma acheje mane ni ei joma luwo Daudi nowacho niya, “Nikech ne ok gidhi kodwa, ok wabi pogo kodgi gik mope ma wadwoko. To kata kamano ngʼato ka ngʼato okaw chiege gi nyithinde mondo odhigo.”
೨೨ಆಗ ದಾವೀದನ ಜೊತೆಯಲ್ಲಿ ಹೋಗಿದ್ದ ಜನರಲ್ಲಿ ದುಷ್ಟರೂ ಮೂರ್ಖರೂ ಆದ ಕೆಲವು ಮಂದಿ, “ಇವರು ನಮ್ಮ ಸಂಗಡ ಬಾರದ್ದರಿಂದ, ನಾವು ತೆಗೆದುಕೊಂಡು ಬಂದಿರುವ ಕೊಳ್ಳೆಯಲ್ಲಿ ಇವರಿಗೆ ಏನೂ ಸಿಕ್ಕುವುದಿಲ್ಲ. ತಮ್ಮ ತಮ್ಮ ಹೆಂಡತಿ ಮಕ್ಕಳನ್ನು ಕರೆದುಕೊಂಡು ಹೋಗಿಬಿಡಲಿ” ಎಂದರು.
23 Daudi nodwoko niya, “Ooyo owetena, ok onego utim kamano gi gik ma Jehova Nyasaye osemiyowa. Oseritowa mi ochiwonwa joma nomonjowa.
೨೩ಆಗ ದಾವೀದನು ಅವರಿಗೆ, “ಸಹೋದರರೇ, ಯೆಹೋವನು ನಮ್ಮನ್ನು ಕಾಪಾಡಿ ನಮಗೆ ವಿರೋಧವಾಗಿ ಬಂದಿದ್ದ ಶತ್ರುಗಳ ಗುಂಪನ್ನು ನಮ್ಮ ಕೈಗೆ ಒಪ್ಪಿಸಿ ನಮಗೆ ಇಷ್ಟನ್ನೆಲ್ಲಾ ಕೊಟ್ಟ ಮೇಲೆ ನೀವು ಹೀಗೆ ಮಾಡಬಾರದು.
24 Ngʼama biro winjo wachu? Pok mar joma nodongʼ karito gigewa biro bedo marom gi pok ngʼat mane odhi e lweny. Ji duto biro yudo maromre.”
೨೪ಈ ವಿಷಯದಲ್ಲಿ ನಿಮ್ಮ ಮಾತನ್ನು ಯಾರು ಕೇಳುವರು? ಯುದ್ಧಮಾಡಿದವನಿಗೆ ಸಿಕ್ಕುವಷ್ಟು ಪಾಲು ಸಾಮಾನು ಕಾಯುವವನಿಗೂ ಸಿಕ್ಕಬೇಕು. ಉಭಯರಿಗೂ ಸಮಭಾಗವಾಗಬೇಕು” ಎಂದು ಉತ್ತರಕೊಟ್ಟನು.
25 Daudi noketo ma obedo chik e Israel chakre chiengʼno nyaka chil kawuono.
೨೫ದಾವೀದನು ಇಸ್ರಾಯೇಲರಲ್ಲಿ ಇದನ್ನು ಕಟ್ಟಳೆಯಾಗಿ ನೇಮಿಸಿದ್ದರಿಂದ ಇಂದಿನವರೆಗೂ ಹಾಗೆಯೇ ನಡೆಯುತ್ತಾ ಬಂದಿದೆ.
26 Ka Daudi nochopo Ziklag nooro joote gi gik mope ne jodong Juda mosiepene, kowacho niya, “Ero aoronu mich kuom gik mope mag jowasik Jehova Nyasaye.”
೨೬ದಾವೀದನು ಚಿಕ್ಲಗ್ ಊರಿಗೆ ಬಂದನಂತರ ತನ್ನ ಸ್ನೇಹಿತರಾದ ಯೆಹೂದದ ಹಿರಿಯರಿಗೆ ಕೊಳ್ಳೆಯ ಒಂದು ಭಾಗವನ್ನು ಕಳುಹಿಸಿ, “ಇಗೋ ಯೆಹೋವನ ಶತ್ರುಗಳನ್ನು ಸೂರೆಮಾಡಿ ತಂದವುಗಳಲ್ಲಿ ಇದು ನಿಮಗೆ ಬಹುಮಾನವಾಗಿರಲಿ” ಎಂದು ಹೇಳಿದನು.
27 Noorgi ni joma ne ni Bethel, Ramoth Negev gi Jatir,
೨೭ಬಹುಮಾನ ಹೊಂದಿದವರು ಯಾರೆಂದರೆ: ಬೇತೇಲಿನವರು, ದಕ್ಷಿಣ ಪ್ರಾಂತ್ಯದ ರಾಮೋತಿನವರು, ಯತ್ತೀರಿನವರು,
28 gi joma ni Aroer, Sifmoth gi Eshtemoa,
೨೮ಅರೋಯೇರಿನವರು ಸಿಪ್ಮೋತಿನವರು ಎಷ್ಟೆಮೋವದವರು,
29 gi Rakal; gi jogo mane ni e mier matindo mag jo-Jeramel gi jo-Keni,
೨೯ರಾಕಾಲಿನವರು, ಎರಹ್ಮೇಲ್ಯರು, ಕೇನ್ಯರು,
30 to gi joma ni Horma, Bor Ashan gi Athak
೩೦ಹೊರ್ಮದವರು, ಬೋರಾಷಾನಿನವರು, ಅತಾಕಿನವರು,
31 kod Hebron; to mago man e kuonde duto ma Daudi gi joge nosebedo kadhiye.
೩೧ಹೆಬ್ರೋನಿನವರು ಮತ್ತು ದಾವೀದನೂ ಅವನ ಜನರೂ ಸಂಚರಿಸುತ್ತಿದ್ದ ಇತರ ಎಲ್ಲಾ ಸ್ಥಳಗಳವರು ಇವರೇ.